Tag: ರಾಜಾ ಅಮರೇಶ್ವರ ನಾಯಕ್

  • ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಒಲಿದ ರಾಯಚೂರು ಲೋಕಸಭಾ ಬಿಜೆಪಿ ಟಿಕೆಟ್

    ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಒಲಿದ ರಾಯಚೂರು ಲೋಕಸಭಾ ಬಿಜೆಪಿ ಟಿಕೆಟ್

    ರಾಯಚೂರು: ತೀವ್ರ ಪೈಪೋಟಿ ನಡುವೆ ರಾಯಚೂರು (Raichur) ಲೋಕಸಭಾ ಬಿಜೆಪಿ (BJP) ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ (Raja Amareshwara Naik) ಒಲಿದಿದೆ.

    ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಬಿ.ವಿ.ನಾಯಕ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ರಾಜಾ ಅಮರೇಶ್ವರ ನಾಯಕ್ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಬಿಜೆಪಿ ಹೈಕಮಾಂಡ್ ಕೊನೆಗೆ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಟಿಕೆಟ್ ಘೋಷಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಶೆಟ್ಟರ್‌, ಚಿಕ್ಕಬಳ್ಳಾಪುರ ಸುಧಾಕರ್‌, ಉತ್ತರ ಕನ್ನಡದಲ್ಲಿ ಕಾಗೇರಿ ಸ್ಪರ್ಧೆ- BJP 5ನೇ ಪಟ್ಟಿ ರಿಲೀಸ್‌

    ಲಿಂಗಸುಗೂರಿನ ಗುಂತಗೋಳ ಸಂಸ್ಥಾನದ ರಾಜ ಮನೆತನದವರಾದ ರಾಜಾ ಅಮರೇಶ್ವರ ನಾಯಕ್ BA, LLB ಪದವೀಧರರಾಗಿದ್ದಾರೆ. ಎರಡು ಬಾರಿ ಶಾಸಕರಾಗಿದ್ದು, ಎರಡು ಬಾರಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.  ಇದನ್ನೂ ಓದಿ: ಕೈಗಾರಿಕೋದ್ಯಮಿ, ಕಾಂಗ್ರೆಸ್‌ ಮಾಜಿ ಸಂಸದ ನವೀನ್‌ ಜಿಂದಾಲ್‌ ಬಿಜೆಪಿಗೆ ಸೇರ್ಪಡೆ

    1989ರಲ್ಲಿ ಬಂಗಾರಪ್ಪ ಸಿಎಂ ಆಗಿದ್ದ ವೇಳೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ಧಾರ್ಮಿಕ ದತ್ತಿ ಸಚಿವರಾಗಿದ್ದರು. 1999 ರಲ್ಲಿ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಲ್ಮಲಾ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿಖಾನೆ ರಾಜ್ಯ ಸಚಿವರಾಗಿದ್ದರು. 2019ರಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿವಿ ನಾಯಕ್ ವಿರುದ್ಧ ಜಯಗಳಿಸಿದ್ದರು. 1993ರಲ್ಲಿ ರಾಜ್ಯ ವಿಧಾನಸಭೆಯ ಎಸ್‌ಸಿ, ಎಸ್‌ಟಿ ಶಾಸಕಾಂಗ ಸಮಿತಿ ಅಧ್ಯಕ್ಷರಾಗಿದ್ದರು. 1999ರಲ್ಲಿ ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿ ಅಮರೇಶ್ವರ ನಾಯಕ್ ಕಾರ್ಯನಿರ್ವಹಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನ ಆಗುತ್ತೆ: ರಾಜನಾಥ್‌ ಸಿಂಗ್‌ ಭರವಸೆ

  • ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಡಿಯಲ್ಲಿ ರಾಯಚೂರಿನ 4 ಮಕ್ಕಳಿಗೆ ಸೌಲಭ್ಯ

    ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಡಿಯಲ್ಲಿ ರಾಯಚೂರಿನ 4 ಮಕ್ಕಳಿಗೆ ಸೌಲಭ್ಯ

    ರಾಯಚೂರು: ಪ್ರಧಾನಿ ಮೋದಿ ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ 4 ಮಕ್ಕಳಿಗೆ ಸೌಲಭ್ಯ ನೀಡಲಾಗುತ್ತಿದೆ. ಈ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಕಾರ್ಯಕ್ರಮದ ವಿವರಣೆ ನೀಡಿದರು.

    ನಗರದ ಜಿಲ್ಲಾ ಪಂಚಾಯತಿ ಕಚೇರಿ ವಿಸಿ ಹಾಲ್‍ನಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಹಾಗೂ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು. ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡಿರುವ ಜಿಲ್ಲೆಯ ನಾಲ್ಕು ಮಕ್ಕಳಿಗೆ ಪಿಎಂ ಕೇರ್ ಮೂಲಕ ಸಹಾಯ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

    ಈ ಯೋಜನೆ ಮೂಲಕ ಕೇಂದ್ರ ಸರ್ಕಾರದಿಂದ ಮಕ್ಕಳು 23ನೇ ವರ್ಷಕ್ಕೆ ಬಂದಾಗ 10 ಲಕ್ಷ ರೂ. ಸಹಾಯ ಧನ ನೇರವಾಗಿ ಆಯಾ ಫಲಾನುಭವಿ ಅಕೌಂಟ್‍ಗೆ ಜಮೆ ಆಗಲಿದೆ. ಮಕ್ಕಳ ಪೋಷಕರಿಗೆ ಪ್ರತಿ ತಿಂಗಳು 4 ಸಾವಿರ ನೀಡಲಾಗುತ್ತದೆ. ಕೇಂದ್ರೀಯ ವಿದ್ಯಾಲಯ ಸೇರಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ರಾಯಚೂರಿನ ನಾಲ್ಕು ಮಕ್ಕಳಿಗೆ ಈ ಸೌಲಭ್ಯ ನೀಡಲಾಗುತ್ತದೆ ಎಂದು ಸಂಸದ ಅಮರೇಶ್ವರ ನಾಯಕ್ ಪಿಎಂ ವಿಡಿಯೋ ಕಾನ್ಫರೆನ್ಸ್ ಬಳಿಕ ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?

  • ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

    ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

    ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್‍ಗೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು ಭರ್ಜರಿ ಜಯ ಗಳಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ರಾಜಾ ಅಮರೇಶ್ವರ ನಾಯಕ್ 4,83,552 ಮತಗಳನ್ನು ಗಳಿಸಿದ್ದರೆ, ಬಿ.ವಿ ನಾಯಕ್ 3,97,138 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಕಂಡಿದ್ದಾರೆ.

    ಬಿಜೆಪಿ ಗೆಲ್ಲಲು ಕಾರಣವೇನು?
    ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಹಿಂದಿಕ್ಕಲು ಜಿಲ್ಲೆಯಲ್ಲಿರುವ ಮೋದಿ ಹವಾನೇ ಮುಖ್ಯ ಕಾರಣವಾಗಿದೆ. ಸಂಭಾವಿತ ರಾಜಕಾರಣಿ ಅನ್ನೋ ಹೆಗ್ಗಳಿಕೆ, ಎರಡು ಬಾರಿ ಸಚಿವರಾಗಿ ಆಯ್ಕೆಯಾಗಿದ್ದ ಅನುಭವ, ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿರುವುದು ಹಾಗೂ ಯಾವುದೇ ವಿವಾದಗಳಲ್ಲಿ ಸಿಕ್ಕಾಕಿಕೊಳ್ಳದೇ ಇರುವ ಪರಿಣಾಮವೇ ಜನರು ರಾಜಾ ಅಮರೇಶ್ವರ ನಾಯಕ್ ಅವರನ್ನು ಗೆಲುವಿನ ಗದ್ದುಗೆಗೆ ಏರಿಸಿದ್ದಾರೆ.

    ಆದರೆ ಹಾಲಿ ಸಂಸದರಾದರೂ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸ ಮಾಡದಿದ್ದಕ್ಕೆ ಈ ಬಾರಿ ಬಿ.ವಿ ನಾಯಕ್ ಸೋಲು ಕಂಡಿದ್ದಾರೆ. ಕ್ಷೇತ್ರದ ಜನರ ಸಂಪರ್ಕದಿಂದ ಬಹು ದೂರ ಉಳಿದುಕೊಂಡು ಮತಗಳನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ. ಹಾಗೆಯೇ ಜೆಡಿಎಸ್ ಜೊತೆಗಿನ ಮೈತ್ರಿ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿಲ್ಲ. ಕೇಂದ್ರದ ಯೋಜನೆಗಳನ್ನ ಕ್ಷೇತ್ರದ ಜನರಿಗೆ ಮುಟ್ಟಿಸುವಲ್ಲಿ ಬಿ.ವಿ ನಾಯಕ್ ವಿಫಲವಾಗಿದ್ದಾರೆ. ಅಲ್ಲದೆ ಯಾದಗಿರಿ, ಸುರಪುರ, ಶಹಪುರ ಕ್ಷೇತ್ರಗಳ ಜೊತೆ ಸಂಪರ್ಕ ಅತ್ಯಂತ ಕಡಿಮೆ ಇರುವುದೇ ಅವರನ್ನು ಗೆಲುವಿನಿಂದ ದೂರಮಾಡಿದೆ.