Tag: ರಾಜಾಸೀಟ್

  • ರಾಜಾಸೀಟ್ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ‌‌‌ ಆರೋಪ – ಖುದ್ದು ಫೀಲ್ಡಿಗಿಳಿದ ಲೋಕಾಯುಕ್ತ

    ರಾಜಾಸೀಟ್ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ‌‌‌ ಆರೋಪ – ಖುದ್ದು ಫೀಲ್ಡಿಗಿಳಿದ ಲೋಕಾಯುಕ್ತ

    ಮಡಿಕೇರಿ: ಕರ್ನಾಟಕದ ಕಾಶ್ಮೀರ ಅಂದರೆ ಯಾರಿಗೆ ತನ್ನೆ ಇಷ್ಟ ಅಗೋಲ್ಲ ಹೇಳಿ ಅದರಲ್ಲೂ ಮಂಜಿನ ನಗರಿ ಮಡಿಕೇರಿ ರಾಜಾಸೀಟ್ (Rajaseat) ಅಂದ್ರೆ ಎಲ್ಲರಿಗೂ ಫೇವರೆಟ್‌. ದಿನನಿತ್ಯ ಸಾವಿರಾರು ಪ್ರವಾಸಿಗರು ರಾಜಾಸೀಟ್‌ಗೆ ಭೇಟಿ ನೀಡುತ್ತಾರೆ. ಇಂತಹ ಪ್ರವಾಸಿತಾಣದ ಅಭಿವೃದ್ಧಿ ಮಾಡುವ ನೆಪದಲ್ಲಿ ಕೋಟಿ ಕೋಟಿ ಅವವ್ಯಹಾರ ನಡೆದಿದೆಯಂತೆ ಖುದ್ದು ಲೋಕಾಯುಕ್ತ ಅಧಿಕಾರಿಗಳೇ ತನಿಖೆ ಮಾಡಲು ಲೋಕಾಯುಕ್ತ ಫೀಲ್ಡಿಗಿಳಿದಿದೆ.

    ಮಂಜಿನ ನಗರಿಯ ರಾಜಾಸೀಟ್ ಭೂಲೋಕದ ಸ್ವರ್ಗ. ಹೀಗಾಗಿ ಈ ಪ್ರೇಕ್ಷಣೀಯ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಬೇಕು ಎಂದು ಈ ಹಿಂದಿನ ಬಿಜೆಪಿ ಸರ್ಕಾರದ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು. ಅದ್ರೆ ರಾಜಾಸೀಟ್ ಅಭಿವೃದ್ಧಿ ಹೆಸರಿನಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ಅಧಿಕಾರಿಗಳಿಗೆ ಶಾಕ್ ನೀಡಲು ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರವಾಸಿತಾಣ ಗ್ರೇಟರ್ ರಾಜಾಸೀಟ್ ಹೆಸರಿನಲ್ಲಿ ಅಭಿವೃದ್ಧಿ ಪಡಿಸಲು ಈ ಹಿಂದಿನ ಬಿಜೆಪಿ ಸರ್ಕಾರ 2020ರಲ್ಲಿ ಪಣತೋಟ್ಟಿತ್ತು. ಪ್ರವಾಸೋದ್ಯಮ ಇಲಾಖೆಯ ಮೂಲಕ 4.55 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತು.

    ತೋಟಗಾರಿಕೆ ಇಲಾಖೆಗೆ ಸೇರಿದ 3 ಎಕರೆ ಜಾಗದಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 3 ಎಕರೆ ಜಾಗದಲ್ಲಿ ಕಾಮಗಾರಿ ಆರಂಭಿಸಿತ್ತು. ಆದ್ರೆ ಕಾಮಗಾರಿ ಮುಗಿಯುವ ಮೊದಲೇ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ರು. ಆದರೆ ಈ ಕಾಮಗಾರಿಯಲ್ಲಿ ಅವ್ಯವಹಾರದ ವಾಸನೆ ಸಿಕ್ಕಿದ ಹಿನ್ನೆಲೆಯಲ್ಲಿ ಮಡಿಕೇರಿ ನಿವಾಸಿ ತೆನ್ನಿರ ಮೈನಾ ಎಂಬುವವರು ಲೋಕಯುಕ್ತಕ್ಕೆ ದೂರು ನೀಡಿದ್ರು. ಇದೀಗ ಲೋಕಾಯುಕ್ತ ಅಧಿಕಾರಿಗಳು ರಾಜಾಸೀಟ್‌ಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

    ಇನ್ನೂ ಉದ್ಘಾಟನೆಯಾಗಿ ವರ್ಷವಾದ್ರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆ ಹಸ್ತಾಂತರ ಮಾಡಿಕೊಳ್ಳಲು ಒಪ್ಪುತ್ತಿಲ್ಲ. ಇದರ ಜೊತೆಗೆ ಕಾಮಗಾರಿ ಮಾಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಕಲಿ ಬಿಲ್‌ ಮಾಡಿ ಸರ್ಕಾರದ ಹಣಕ್ಕೆ ದ್ರೋಹ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿ ಬರುತ್ತಿದೆ.

    ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಅವರನ್ನು ಕೇಳಿದ್ರೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಈ ಪ್ರಾಜೆಕ್ಟ್ ಹಸ್ತಾಂತರ ಆಗಿಲ್ಲ. ಟೆಂಡರ್ ಪ್ರಕಾರ ಸಾಕಷ್ಟು ಕೆಲಸಗಳು ವಿದ್ಯುತ್ ಕೆಲಸಗಳು ಬಾಕಿ ಇದೆ ಎಂದು ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ನೀಡಿದ್ದಾರೆ. ಅಲ್ಲದೇ ಕಾಮಗಾರಿ ಪೂರ್ಣಗೊಂಡಿಲ್ಲ ಹೀಗಾಗಿ ಬೀಲ್ ಗಳು ಬಾಕಿ ಇದೆ. ಈ ಎಲ್ಲಾ ಕೆಲಸ ಪೂರ್ಣಗೊಂಡ ಬಳಿಕ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ರಾಜ್ಯದ ಪ್ರವಾಸಿ ತಾಣಗಳಲ್ಲಿ ಜನಸಾಗರ – ಕೊರೊನಾ ಲೆಕ್ಕಿಸದೆ ಜನರ ಮೋಜು ಮಸ್ತಿ

    ರಾಜ್ಯದ ಪ್ರವಾಸಿ ತಾಣಗಳಲ್ಲಿ ಜನಸಾಗರ – ಕೊರೊನಾ ಲೆಕ್ಕಿಸದೆ ಜನರ ಮೋಜು ಮಸ್ತಿ

    – ಮಡಿಕೇರಿಯ ರಾಜಾಸೀಟ್‍ನಲ್ಲಿ ಗಿಜಿಗಿಜಿ

    ಬೆಂಗಳೂರು/ಮಡಿಕೇರಿ: ಲಾಕ್‍ಡೌನ್ ಬಳಿಕ ಆಮೆ ನಡಿಗೆಯಲ್ಲಿ ಸಾಗುತ್ತಿದ್ದ ಪ್ರವಾಸೋದ್ಯಮ ವರ್ಷಾಂತ್ಯಕ್ಕೆ ಚೇತರಿಸಿಕೊಳ್ಳುತ್ತಿದೆ. ಕ್ರಿಸ್‍ಮಸ್ ಸೇರಿದಂತೆ ಸಾಲು ಸಾಲು ರಜೆಗಳಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳೆಲ್ಲ ಭರ್ತಿಯಾಗಿವೆ.

    ಬೀಚ್‍ಗಳು, ನದಿಗಳು, ದೇವಸ್ಥಾನಗಳಲ್ಲಿ ಪ್ರವಾಸಿಗರು ತುಂಬಿ ತುಳುಕಿದ್ದಾರೆ. ಉಡುಪಿಯ ಮಲ್ಪೆ ಬೀಚ್, ಮಂಗಳೂರಿನ ಪಣಂಬೂರು ಬೀಚ್, ಶ್ರೀರಂಗಪಟ್ಟಣದ ಕಾವೇರಿ ತಟ, ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಜನ ಜಂಗುಳಿ ಇತ್ತು. ಯಾರೊಬ್ಬರೂ ಕೊರೋನಾ ರೂಲ್ಸ್ ಫಾಲೋ ಮಾಡಿಲ್ಲ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಕೊರೊನಾ ರೂಪಾಂತರಿ ಅಲೆಯ ಮಧ್ಯೆ ಸಾಮಾಜಿಕ ಅಂತರವನ್ನು ಪ್ರವಾಸಿಗರು ಮರೆತಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕವನ್ನು ಮೂಡಿಸಿದೆ. ಕೈ ತುಂಬಾ ಹಣ, ಒಂದೆರಡು ದಿನಗಳ ಪ್ರವಾಸ ಅಂದುಕೊಂಡು ಆಲೋಚಿಸುವವರಿಗೆ ಮಲೆನಾಡು ಜಿಲ್ಲೆಗಳು ಅದರಲ್ಲೂ ಮಂಜಿನ ನಗರಿ ಕೊಡಗು ನೆನಪಾಗುತ್ತೆ. ಇಲ್ಲಿನ ಪ್ರವಾಸಿ ತಾಣಗಳು ಹಾಗೂ ಪರಿಸರ ಎಲ್ಲರನ್ನೂ ಆಕರ್ಷಿಸುವುದು ಸಹಜ.

    ಕೊರೊನಾ ಆತಂಕದಿಂದ ಲಾಕ್‍ಡೌನ್ ಘೋಷಿಸಿದರಿಂದ ಕಳೆದ 8 ತಿಂಗಳಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕುಂಟುತ್ತಾ ಸಾಗಿತ್ತು. ಪ್ರವಾಸೋದ್ಯಮದ ಉತ್ತೇಜನಕ್ಕೆ ಇಲಾಖೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಅಷ್ಟು ಪರಿಣಾಮಕಾರಿ ಆಗಿರಲಿಲ್ಲ. ಆದರೆ ಹೊಸ ವರ್ಷದ ಆಚರಣೆಗೆ ಕೆಲವೇ ದಿನಗಳಿರುವುದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟ್, ಅಬ್ಬಿಫಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ, ಭಾಗಮಂಡಲ, ತಲಕಾವೇರಿ ಹೀಗೆ ಎಲ್ಲೆಡೆ ಪ್ರವಾಸಿಗರು ದಿಢೀರನೆ ಕಿಕ್ಕಿರಿದು ಸೇರುತ್ತಿದ್ದಾರೆ.

    ಒಟ್ಟಿನಲ್ಲಿ ಕೊರೊನಾ ಎರಡನೆ ಅಲೆಯಾಗಿ ರೂಪಾಂತರದ ಅರಿವು ಇದ್ದರೂ ಸಾಮಾಜಿಕ ಅಂತರ ಪಾಲಿಸದೆ ಹಾಗೂ ಮಾಸ್ಕ್ ಧರಿಸದೆ ಅಸಡ್ಡೆ ತೋರುತ್ತಿದ್ದಾರೆ.

  • ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಂಜಿನ ನಗರಿಯ ರಾಜಾಸೀಟ್‍ನಲ್ಲಿ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯತ್ನ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಇಲ್ಲಿನ ಸೂರ್ಯಾಸ್ಥದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.

    ತೋಟಗಾರಿಕೆ ಇಲಾಖೆಯವರು ಪ್ರತಿ ತಿಂಗಳ 2ನೇ ಶನಿವಾರ, ರಾಜ್ಯದ ವಿವಿಧ ಭಾಷೆಯನ್ನು ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಸದ್ಯ ತೋಟಗಾರಿಕೆ ಇಲಾಖೆಯ ವಿನೂತನ ಪ್ರಯತ್ನದಿಂದ ಕೊಡಗು ಹಾಗೂ ರಾಜ್ಯದ ಸಂಸ್ಕೃತಿಗಳನ್ನು ತಿಳಿಯಲು ಪ್ರವಾಸಿಗರಿಗೆ ನೆರವಾಗಿದೆ.

    ಮೊದಲ ಬಾರಿಗೆ ರಾಜಾಸೀಟ್‍ನಲ್ಲಿ ತೋಟಗಾರಿಗೆ ಇಲಾಖೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಾರಿ ಇಲಾಖೆ ಡೋಲು ಕುಣಿತ, ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ. ಕನ್ನಡ ಚಿತ್ರರಂಗ, ಹಿಂದಿ, ಕೊಡವ ಹಾಡು, ವಾದ್ಯ ಸೇರಿದಂತೆ ರಾಜ್ಯದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಾ ಪ್ರವಾಸಿಗರಿಂದ ತುಂಬಿತುಳುಕುವ ರಾಜಾಸೀಟ್‍ಗೆ ಬಂದ ಪ್ರವಾಸಿಗರಿಗೆ ನಾಡಿನ ಸಂಸ್ಕೃತಿ ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಕಾರ್ಯಕ್ರಮ ಮುದ ನೀಡಿದೆ.

  • ಮೈ ಕೊರೆಯೋ ಚಳಿಯ ವಾತಾವರಣದಲ್ಲಿ ಎಂಜಾಯ್ ಮಾಡ್ತಿರುವ ಪ್ರವಾಸಿಗರು

    ಮೈ ಕೊರೆಯೋ ಚಳಿಯ ವಾತಾವರಣದಲ್ಲಿ ಎಂಜಾಯ್ ಮಾಡ್ತಿರುವ ಪ್ರವಾಸಿಗರು

    ಮಡಿಕೇರಿ: ಮೈ ಕೊರೆಯುವ ಚಳಿಗಾಲ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿಯಲ್ಲಿ ಜನ ಜಾತ್ರೆಯೇ ಸೇರುತ್ತೆ, ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಸರ್ಗದ ಮಡಿಲಲ್ಲಿ ಮೈ ಮರೆಯುತ್ತಾ ಕಳೆದು ಹೋಗುತ್ತಾರೆ. ಚಳಿಯ ವಾತಾವರಣಕ್ಕೆ ಇದೀಗ ಕಾಫಿನಾಡು ರಂಗೇರಿದ್ದು ಪ್ರವಾಸಿಗರು ಕೊಡಗಿಗೆ ಲಗ್ಗೆಯಿಟ್ಟು ಎಂಜಾಯ್ ಮಾಡ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದ್ದು, ಚಳಿಯ ಆಹ್ಲಾದಕಾರ ವಾತಾವರಣವನ್ನು ಸವಿಯಲು ಇದೀಗ ಪ್ರವಾಸಿಗರು ಕೊಡಗಿನತ್ತ ಲಗ್ಗೆ ಹಾಕುತ್ತಿದ್ದಾರೆ. ದೇಶದ ವಿವಿಧೆಡೆಗಳಿಂದ ಆಗಮಿಸಿರುವ ಪ್ರಕೃತಿ ಪ್ರಿಯರು ಕೊಡಗಿನ ಹಿತಕರ ವಾತಾವರಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಸಂಜೆ ಆಗುತ್ತಲೆ ಮಡಿಕೇರಿಯ ರಾಜಾಸೀಟ್ ಜನರಿಂದ ತುಂಬಿ ತುಳುಕುತ್ತೆ. ಪ್ರಕೃತಿ ಸೌಂದರ್ಯ ಸವಿಯುತ್ತಲೆ ಸಂಜೆಯ ಹಿತಕರ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಕರಗುವ ಕೆಂಪು ಸೂರ್ಯನನ್ನು ಕಣ್ಣು ತುಂಬಿಕೊಂಡು ಮೈ ಮರೆಯುತ್ತಿದ್ದಾರೆ.

    ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ನಲ್ಲಿ ಮಡಿಕೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚೆ ಭಾರೀ ಸಂಖ್ಯೆಯ ಜನರು ಕೊಡಗಿನತ್ತ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ವಿಶೇಷವಾಗಿ ರಾಜಾಸೀಟ್ ತುಂಬೆಲ್ಲಾ ಜನ ಸಾಗರವೇ ತುಂಬಿಕೊಂಡಂತೆ ನೆರೆದಿದ್ದ ಜನಸ್ಥೋಮ ರಾಜಾಸೀಟ್‍ನ ಸೂರ್ಯಾಸ್ಥದ ಸವಿಯನ್ನು ಸವಿಯುತ್ತಾ ತಮ್ಮ ಪ್ರವಾಸದ ಕ್ಷಣಗಳನ್ನು ಎಂಜಾಯ್ ಮಾಡಿದರು.

    ನಿಸರ್ಗದ ಸೌಂದರ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ನಿತ್ಯದ ಕಾಯಕ ಮುಗಿಸಿ ಬೆಟ್ಟಗುಡ್ಡಗಳ ಮಡಿಲಲ್ಲಿ ವಿರಮಿಸುವ ನೇಸರನ ಕಂಡು ಜನರು ಖುಷಿಪಟ್ಟರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಚಳಿಯ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ.

  • ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

    ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಸಂಜೆ ಆಗುತ್ತಲೇ ಸೂರ್ಯಾಸ್ತದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಕಳೆ ತರುವುದ್ದಕ್ಕೆ ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ರಾಜ್ಯದ ವಿವಿಧ ಭಾಷೆಯ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಬಂದ ಪ್ರವಾಸಿಗರು ಸಾಂಸ್ಕೃತಿಕ ಕಾರ್ಯಕ್ರಮ ಕಂಡು ಖುಷಿಪಟ್ಟರು.

    ರಾಜಾಸೀಟ್ ವೀಕೆಂಡ್ ಎಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ಹೋಗುತ್ತೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ಮಡಿಕೇರಿಯ ರಾಜಾಸೀಟ್ ಬೆಳಗ್ಗೆಯಿಂದ ಜಗತ್ತನ್ನು ಬೆಳಗಿ ಸಂಜೆ ಆಗುತ್ತಲೇ ಇಲ್ಲಿನ ಬೆಟ್ಟಗುಡ್ಡಗಳ ನಡುವೆ ಮುಳುಗುವ ಸೂರ್ಯನನ್ನು ನೋಡುವುದೇ ಒಂದು ವಿಸ್ಮಯ. ಆದರೆ ಮಳೆಗಾಲ ಬಂದರೆ ನಿರಂತರ ಸುರಿಯುವ ಮಳೆ ಮುಂಜು ಮುಸುಕಿನ ವಾತಾವರಣದಿಂದಾಗಿ ಸೂರ್ಯಾಸ್ತವನ್ನು ನೋಡಲು ಸಾಧ್ಯವಾಗಲ್ಲ. ಈ ನಿಟ್ಟಿನಲ್ಲಿ ಇಂದು ಪ್ರವಾಸೋದ್ಯಮ ಇಲಾಖೆಯಿಂದ ಕೊಡವ ಸಂಸ್ಕೃತಿ ದೇಶದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮ ಆಯೋಜಿಲಾಗಿತ್ತು.

    ಸಾಂಪ್ರದಾಯಿಕ ಉಡುಗೆ ತೊಟ್ಟು ಯುವಕರು ನಲಿದಾಡಿದ್ದಾರೆ, ಯುವತಿಯರು ಬಣ್ಣ ಬಣ್ಣದ ಸೀರೆಯುಟ್ಟು ಲಯಬದ್ದ ನಾದಕ್ಕೆ ಹಾಡಿ ಕುಣಿದಿದ್ದಾರೆ. ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಕೊಡಗಿನ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಡಗಿನ ಮಡಿಕೇರಿ ಹಾಗೂ ವಿರಾಜಪೇಟೆ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಸಂಸ್ಕೃತಿ ಬಿಂಬಿಸುವ ಉಮ್ಮತಾಟ್ ಕೋಲಾಟ್, ಜಾನಪದ ಕಲೆ ಹಾಗೂ ವಿವಿಧ ಭಾಷೆಗಳ ನೃತ್ಯಗಳನ್ನು ಪ್ರದರ್ಶಿಸಲಾಯಿತ್ತು. ಕೊಡಗಿನ ಸಂಸ್ಕ್ರತಿ ಯಾವ ದೇಶಕ್ಕೂ ಕಡಿಮೆಯಿಲ್ಲ ಎನ್ನುವಂತೆ ಕುಣಿದು ನಲಿದ ವಿದ್ಯಾರ್ಥಿಗಳು ಪ್ರವಾಸಿಗರ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲದೇ ಕೊಡವ ವಾಲಗಕ್ಕೆ ಪ್ರವಾಸಿಗರು ಹೆಜ್ಜೆ ಹಾಕಿದು ವಿಶೇಷವಾಗಿತ್ತು.

  • ಮಡಿಕೇರಿ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವ!

    ಮಡಿಕೇರಿ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವ!

    ಮಡಿಕೇರಿ: ಆಧುನಿಕತೆ ಬೆಳೆದ ಹಾಗೆಲ್ಲಾ ಪರಿಸರದ ಮೇಲೆ ತುಂಬಾ ಹಾನಿಯುಂಟಾಗುತ್ತಿದೆ. ಮಾನವ ತನ್ನ ಸ್ವಹಿತಾಸಕ್ತಿಗಾಗಿ ಜೀವ ಸಂಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದಾನೆ. ತನ್ನ ಹಿತಾಸಕ್ತಿಗಾಗಿ ಎಲ್ಲೆಡೆ ಮೊಬೈಲ್ ಟವರ್‍ಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಗುಬ್ಬಚ್ಚಿ ಸಂತತಿಯು ಕ್ಷೀಣಿಸುತ್ತಿದೆ.

    ಕೊಡಗುಜಿಲ್ಲೆ ಬೆಟ್ಟಗುಡ್ಡಗಳ ಪ್ರದೇಶ. ಆದ್ರೆ ಇಲ್ಲಿ ಗುಬ್ಬಚ್ಚಿಗಳನ್ನು ಕೆಲವು ಕಡೆ ಮಾತ್ರ ನಾವು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಗಲ್ಲಿಗಲ್ಲಿಗೊಂದು ಮೊಬೈಲ್ ಟವರ್‍ಗಳು ತಲೆ ಎತ್ತಿ ನಿಂತಿವೆ. ಇವುಗಳ ರೇಡಿಯೇಷನ್‍ನ ತೊಂದರೆಯಂದಾಗಿ ಪಕ್ಷಿ ಸಂಕುಲ ಕ್ಷೀಣಿಸುತ್ತಿದೆ. ಪಕ್ಷಿ ಸಂಕುಲದಲ್ಲಿ ಪ್ರಮುಖವಾಗಿ ಗುಬ್ಬಚ್ಚಿಯ ಸಂತತಿ ಕ್ಷೀಣಿಸುತ್ತಿದ್ದು ಇವು ವಿನಾಶದ ಅಂಚಿನಲ್ಲಿದೆ. ದರೆ ಮಡಿಕೇರಿಯ ಪ್ರವಾಸಿಗರ ಹಾಟ್ ಸ್ಪಾಟ್ ಆದ ಪ್ರಸಿದ್ಧ ಇತಿಹಾಸವುಳ್ಳ ರಾಜಾಸೀಟ್‍ನಲ್ಲಿ ಗುಬ್ಬಚ್ಚಿಗಳ ಕಲರವವನ್ನು ಕಾಣಬಹುದು.

    ರಾಜಾಸೀಟ್ ನೋಡಿ ಎಂಜಾಯ್ ಮಾಡಲು ಹೇಗೆ ಪ್ರೇಮಿಗಳು ಬರುತ್ತಾರೋ ಹಾಗೆಯೇ ಗುಬ್ಬಚ್ಚಿಗಳನ್ನು ಇಲ್ಲಿಗೆ ಆಗಮಿಸುತ್ತಿವೆ. ಇವುಗಳ ಚಿಲಿಪಿಲಿ ಕಲರವ ಕಿವಿಗೆ ತಂಪೆರೆಯುತ್ತದೆ. ಪ್ರವಾಸಿಗರು ತಾವು ತಿಂದು ಬಿಟ್ಟ ಆಹಾರ ಪದಾರ್ಥಗಳನ್ನು ತಿಂದು ಅಲ್ಲಿಲ್ಲಿ ಗುಂಡಿಗಳಲ್ಲಿನ ನೀರು ಕುಡಿದು ಸ್ವಚ್ಚಂದವಾಗಿ ಹಾರಾಟಮಾಡುತ್ತವೆ.

    ಮಡಿಕೇರಿಯ ಪ್ರೆಸ್ ಕ್ಲಬ್‍ನ ಕೆಳ ಮಹಡಿಯಲ್ಲಿ ಈ ಗುಬ್ಬಚ್ಚಿಗಳಿಗಾಗಿ ಗೂಡು ನಿರ್ಮಿಸಿ ಇಲ್ಲಿ ಕಾಳುಗಳನ್ನು ಹಾಕುತ್ತಿದ್ದಾರೆ. ಇನ್ನು ಕಾಡನ್ನು ನಾಶಮಾಡಿ ಮರಗಿಡಗಳನ್ನು ಕಡಿಯುವುದ್ರಿಂದಲೂ ಸಹ ಈ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗಿತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

    ಪರಿಸರಕ್ಕೆ ಪೂರಕವಾದಂತಹ ಜೀವಸಂಕುಲಗಳನ್ನು ರಕ್ಷಿಸಬೇಕಾದದ್ದು ಮಾನವ ಧರ್ಮ. ಹಾಗಾಗಿ ಸ್ವ ಹಿತಾಸಕ್ತಿಗಾಗಿ ಅನ್ಯ ಜೀವಿಗಳನ್ನು ಬಲಿಕೊಡವುದು ಸರಿಯಲ್ಲ. ಈಗಾಗಲೇ ಇವುಗಳ ಸಂತತಿ ಕ್ಷೀಣಿಸುತ್ತಿದ್ದು, ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಪುಸ್ತಕಗಳಲ್ಲಿ ನಾವು ಗುಬ್ಬಚ್ಚಿಯನ್ನು ಕಾಣಬಹುದು. ಆ ಹಂತಕ್ಕೆ ತಲುಪುವದ್ರಲ್ಲಿ ಸಂಶಯವಿಲ್ಲ.