Tag: ರಾಜಹಂಸ

  • ನಿರ್ದೇಶನದತ್ತ ರಂಜನಿ ರಾಘವನ್- ಕನ್ನಡತಿಯ ಚಿತ್ರಕ್ಕೆ ಇಳಯರಾಜ ಸಾಥ್

    ನಿರ್ದೇಶನದತ್ತ ರಂಜನಿ ರಾಘವನ್- ಕನ್ನಡತಿಯ ಚಿತ್ರಕ್ಕೆ ಇಳಯರಾಜ ಸಾಥ್

    ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್‌ಗಳ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟಿ ರಂಜನಿ ರಾಘವನ್ (Ranjani Raghavan) ನಿರ್ದೇಶನದತ್ತ (Direction) ಮುಖ ಮಾಡಿದ್ದಾರೆ. ಹೊಸ ವರ್ಷದಂದು ನಿರ್ದೇಶನ ಮಾಡುತ್ತಿರುವ ಕುರಿತು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕ್ಯಾನ್ಸರ್ ಗೆದ್ದ ಶಿವಣ್ಣ- ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ನಟ

    ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ. ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ.ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

    ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000 ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ 13ರಂದು 2023ರ ವೇಳೆ ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು ಅಂತಷ್ಟೇ ಅಂದುಕೊಂಡಿದ್ದು. ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ ‘ಒನ್ ಕಾಲ್ ಅವೇ’ ಅನ್ನೋ ಜಂಭ ಹುಟ್ಟಿಸಿದ್ದಾರೆ.

    ಹೋದ ವರ್ಷ 2024 ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು. ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಆಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ‘ರಾಜಹಂಸ’ ಸಿನಿಮಾದ ಮೂಲಕ ನಾಯಕಿಯಾಗಿ ರಂಜನಿ ಎಂಟ್ರಿ ಕೊಟ್ಟರು. ‘ಕಾಂಗರೂ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

  • ಎಮಿರೇಟ್ಸ್ ವಿಮಾನಕ್ಕೆ‌ ಸಿಲುಕಿ 40 ರಾಜಹಂಸ ಹಕ್ಕಿಗಳು ಸಾವು

    ಎಮಿರೇಟ್ಸ್ ವಿಮಾನಕ್ಕೆ‌ ಸಿಲುಕಿ 40 ರಾಜಹಂಸ ಹಕ್ಕಿಗಳು ಸಾವು

    ಮುಂಬೈ: ಎಮಿರೇಟ್ಸ್‌ ವಿಮಾನಕ್ಕೆ (Emirates Aircraft) ಡಿಕ್ಕಿ ಹೊಡೆದು 40 ರಾಜಹಂಸ (Flamingos) ಹಕ್ಕಿಗಳು ಮುಂಬೈನ ಉಪನಗರವಾದ ಘಾಟ್‌ಕೋಪರ್‌ನಲ್ಲಿ ಸಾವಿಗೀಡಾಗಿವೆ. ಮೃತ ಹಕ್ಕಿಗಳು ವಿವಿಧ ಪ್ರದೇಶಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಇಳಿಯುವ ಕೆಲವೇ ಕ್ಷಣಗಳ ಮೊದಲು ವಿಮಾನವು ಹಕ್ಕಿ ಹಿಂಡುಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ದುಬೈಗೆ ತೆರಳಬೇಕಿದ್ದ ವಿಮಾನವು ನಿನ್ನೆ (ಸೋಮವಾರ) ರದ್ದುಗೊಂಡಿದೆ. ಇದನ್ನೂ ಓದಿ: ಅಮಿತ್‌ ಶಾ ಇನ್ನೂ ಪ್ರಧಾನಿಯಾಗಿಲ್ಲ ಆಗಲೇ ದುರಹಂಕಾರಿಯಾಗಿದ್ದಾರೆ: ಕೇಜ್ರಿವಾಲ್ ವಾಗ್ದಾಳಿ

    ಘಾಟ್ಕೋಪರ್ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಪಕ್ಷಿಗಳ ಬಗ್ಗೆ ಸ್ಥಳೀಯ ನಿವಾಸಿಗಳು, ವನ್ಯಜೀವಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

    ಪಕ್ಷಿಗಳ ಮೃತದೇಹಗಳು ಬಿದ್ದಿದ್ದ ಪ್ರದೇಶಗಳಿಗೆ ತೆರಳಿ ಅಧಿಕಾರಿಗಳು ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ರೆಕ್ಕೆಗಳು, ಉಗುರು, ಕೊಕ್ಕುಗಳ ಮುರಿದ ತುಂಡುಗಳು ಅಲ್ಲಲ್ಲಿ ಬಿದ್ದಿದ್ದವು. ಇದನ್ನೂ ಓದಿ: ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಹಕ್ಕಿಗಳ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೆಸ್ಕಿಂಕ್ ಅಸೋಸಿಯೇಷನ್ ಫಾರ್ ವೈಲ್ಡ್ಲೈಫ್ ವೆಲ್ಫೇರ್ (RAWW) ಸಂಸ್ಥಾಪಕ ಪವನ್ ಶರ್ಮಾ ಹೇಳಿದ್ದಾರೆ.

  • ನಾಳೆಯಿಂದ ಗೋವಾಕ್ಕೆ ಬಸ್ ಸಂಚಾರ ಆರಂಭ

    ನಾಳೆಯಿಂದ ಗೋವಾಕ್ಕೆ ಬಸ್ ಸಂಚಾರ ಆರಂಭ

    ಹುಬ್ಬಳ್ಳಿ: ಅವಳಿ ನಗರದ ಸಾರ್ವಜನಿಕರು ಬಹುದಿನಗಳಿಂದ ಕಾಯುತ್ತಿದ್ದ ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗುತ್ತದೆ.

    ಗೋವಾಕ್ಕೆ ತೆರಳುವ ಬಸ್ಸುಗಳು ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಲಾಕ್‍ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ ಒಂದು ರಾಜಹಂಸ ಮತ್ತು 8 ವೇಗಧೂತ, ವಾಸ್ಕೋಗೆ ಮತ್ತು ಮಡಗಾಂವಗೆ ತಲಾ 1 ಬಸ್ಸು ಸೇರಿ ಒಟ್ಟು 11 ಬಸ್ಸುಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು.

    ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 ವೇಗಧೂತ) ಹಾಗೂ ವಾಸ್ಕೋ ಮತ್ತು ಮಡಗಾಂವಗೆ ತಲಾ ಒಂದು ಬಸ್ ಸಂಚಾರವನ್ನು ಆರಂಭಿಸಲಾಗಿದೆ.

    ಪಣಜಿಗೆ ಹೋಗುವ ರಾಜಹಂಸ ಬಸ್ಸು ಬೆಳಗ್ಗೆ 8 ಗಂಟೆಗೆ ಮತ್ತು ವೇಗಧೂತ ಬಸ್ಸುಗಳು ಬೆಳಿಗ್ಗೆ 8:30 ಮತ್ತು 10:30 ಹಾಗೂ ರಾತ್ರಿ 11:45ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತವೆ. ಪಣಜಿಯಿಂದ ಹುಬ್ಬಳ್ಳಿಗೆ ಬರುವ ರಾಜಹಂಸ ಬಸ್ಸು ಮಧ್ಯಾಹ್ನ 2:30ಕ್ಕೆ ವೇಗಧೂತ ಬಸ್ಸುಗಳು ಬೆಳಿಗ್ಗೆ 10:30, ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 5:15ಕ್ಕೆ ಪಣಜಿಯಿಂದ ಹೊರಡುತ್ತವೆ. ಈ ಬಸ್ಸುಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ.

    ಮಡಗಾಂವಗೆ ಹೋಗುವ ಬಸ್ಸು ಬೆಳಿಗ್ಗೆ 8:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಕಲಘಟಗಿ, ಯಲ್ಲಾಪುರ, ಅಂಕೋಲಾ, ಕಾರವಾರ, ಸದಾಶಿವಗಡ, ಕಾಣಕೋಣ ಮಾರ್ಗವಾಗಿ ಮಧ್ಯಾಹ್ನ 2:30ಕ್ಕೆ ಮಡಗಾಂವ ತಲುಪುತ್ತದೆ. ಮಧ್ಯಾಹ್ನ 3:00ಕ್ಕೆ ಮಡಗಾಂವನಿಂದ ಹೊರಟು ರಾತ್ರಿ 9 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತದೆ. ವಾಸ್ಕೊಗೆ ಹೋಗುವ ಬಸ್ಸು ರಾತ್ರಿ 12:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಬೆಳಿಗ್ಗೆ 06 ಗಂಟೆಗೆ ವಾಸ್ಕೊ ತಲುಪುತ್ತದೆ. ವಾಸ್ಕೊದಿಂದ ಮಧ್ಯಾಹ್ನ 1:30ಕ್ಕೆ ಹೊರಟು ಹುಬ್ಬಳ್ಳಿಗೆ ಸಂಜೆ 7:30ಕ್ಕೆ ಆಗಮಿಸುತ್ತದೆ.

    ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

  • ಬೆಂಗಳೂರಿನಿಂದ ಮಡಿಕೇರಿಗೆ ರಾಜಹಂಸದಲ್ಲಿ ತೆರಳಿದ್ದ ಕೊರೊನಾ ಪೀಡಿತ

    ಬೆಂಗಳೂರಿನಿಂದ ಮಡಿಕೇರಿಗೆ ರಾಜಹಂಸದಲ್ಲಿ ತೆರಳಿದ್ದ ಕೊರೊನಾ ಪೀಡಿತ

    ಬೆಂಗಳೂರು: ಕೊರೊನಾ ಪೀಡಿತ 15ನೇ ವ್ಯಕ್ತಿ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿವರೆಗೆ ರಾಜಹಂಸ ಬಸ್ಸಿನಲ್ಲಿ ತೆರಳಿದ್ದ ವಿಚಾರ ಈಗ ಲಭ್ಯವಾಗಿದೆ.

    ಸೌದಿ ಅರೇಬಿಯಾ ಪ್ರವಾಸಕ್ಕೆ ತೆರಳಿದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಮಾರ್ಚ್ 15ರ  ರಾತ್ರಿ ಬಸ್ಸಿನಲ್ಲಿ ಮೈಸೂರಿನ ಸ್ಯಾಟಲೈಟ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿಂದ ರಾತ್ರಿ 11.15ರ ರಾಜಹಂಸ ಬಸ್ಸಿನಲ್ಲಿ ಮಡಿಕೇರಿಗೆ ಪ್ರಯಾಣ ಮಾಡಿ ಬಳಿಕ ಗ್ರಾಮಕ್ಕೆ ತೆರಳಿದ್ದಾನೆ.

    ರಾಜಹಂಸ ಬಸ್ ಮೈಸೂರಿನಲ್ಲಿ ಟೀ, ಕಾಫಿಗೆ ನಿಲ್ಲಿಸಿತ್ತು. ಈ ವೇಳೆ ವ್ಯಕ್ತಿ ಹೋಟೆಲಿಗೆ ತೆರಳಿ ಕಾಫಿ ಸೇವಿಸಿದ್ದಾನೆ. ಸಂಜೆ ಮನೆಗೆ ಬಂದ ನಂತರ ಸುಸ್ತು, ಜ್ವರದ ಲಕ್ಷಣ ಕಂಡು ಬಂದಿದೆ. ಕೂಡಲೇ ಮನೆಯವರು ಆತನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

    ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿರುವ ಎಲ್ಲಾ ಬಸ್ ಗಳಿಗೆ ಈಗ ಫ್ಯೂಮಿಗೇಷನ್ ಮಾಡಲಾಗುತ್ತಿದೆ. ಚಾಲಕ ನಿರ್ವಾಹಕ ಸೇರಿದಂತೆ ಸೋಂಕಿತ ವ್ಯಕ್ತಿ ಟ್ರಾವೆಲ್ ಮಾಡಿದ ಬಸ್ ಮಾಹಿತಿಯನ್ನು ಪತ್ತೆ ಮಾಡುವಾಗ ಸಾಕಷ್ಟು ಜನ ಪ್ರಯಾಣಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸೋಂಕು ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದೆ.

     

  • ಭರ್ಜರಿ ರೆಸ್ಪಾನ್ಸ್- ಕೋಟಿಯ ಕದ ತಟ್ಟಿದ ರಾಜಹಂಸ

    ಭರ್ಜರಿ ರೆಸ್ಪಾನ್ಸ್- ಕೋಟಿಯ ಕದ ತಟ್ಟಿದ ರಾಜಹಂಸ

    ಬೆಂಗಳೂರು: ಕಳೆದ ಶುಕ್ರವಾರ ಬಿಡುಗಡೆಗೊಂಡ ಹೊಸಬರ ಚಿತ್ರ `ರಾಜಹಂಸ’ ಗೆ ಪ್ರೇಕ್ಷಕ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಗ್ಗುತ್ತಿದೆ. ಈಗಾಗಲೇ ಕೇವಲ ಮೂರು ದಿನಗಳಲ್ಲಿ ಸಿನಿಮಾ 1 ಕೋಟಿ ರೂ. ಹಣವನ್ನು ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ರವಿವಾರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ಮೂಲಕ ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ತಮ್ಮ ಅಭಿಮಾನಿ ಬಳಗವನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಧಾರವಾಹಿ ಮೂಲಕವೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಚಿತ್ರದ ಗೆಲುವಿಗೆ ಕಾರಣವೆಂದು ಎಂದು ಹೇಳಬಹುದಾಗಿದೆ.

    ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆ ಕಂಡಿರುವ ರಾಜಹಂಸ ಚಲನ ಚಿತ್ರ ಬಾಡಿಗೆ ಸೇರಿ ಒಟ್ಟು 2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಹೊಸಬರ ಚಿತ್ರವಾದ ನಮ್ಮನ್ನು ಅಭಿಮಾನಿಗಳು ಮೆಚ್ಚಿದ್ದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ

    ಇನ್ನೂ ಸಿನಿಮಾದಲ್ಲಿ ರಂಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ.

    ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ.

     

     

  • ರಾಜಹಂಸಕ್ಕೆ ಮೆಚ್ಚುಗೆ: ಹೆಚ್ಚಾಗ್ತಿದೆ ಶೋ, ಉತ್ತರ ಕರ್ನಾಟಕದಲ್ಲಿ ಹೌಸ್‍ಫುಲ್!

    ರಾಜಹಂಸಕ್ಕೆ ಮೆಚ್ಚುಗೆ: ಹೆಚ್ಚಾಗ್ತಿದೆ ಶೋ, ಉತ್ತರ ಕರ್ನಾಟಕದಲ್ಲಿ ಹೌಸ್‍ಫುಲ್!

    ಬೆಂಗಳೂರು: ರಾಜಹಂಸ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಶೋಗಳು ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಕಡೆ ಥಿಯೇಟರ್ ಭರ್ತಿಯಾಗುತ್ತಿರುವುದು ಚಿತ್ರ ತಂಡಕ್ಕೆ ಖುಷಿಕೊಟ್ಟಿದೆ.

    ಈ ಸಂಬಂಧ ಚಿತ್ರ ತಂಡ ಇಂದು ಬೆಂಗಳೂರಿನ ಮಾಲ್‍ಗಳಿಗೆ ಭೇಟಿ ನೀಡುತ್ತಿದೆ ಎಂದು ಚಿತ್ರ ತಂಡ ಪರವಾಗಿ ನಾಯಕಿ ರಂಜನಿ ಅವರು ಫೇಸ್‍ಬುಕ್ ಲೈವ್ ನಲ್ಲಿ ಹೇಳಿದ್ದಾರೆ.

    ಹೊಸಬರಾಗಿ ನಿರ್ಮಿಸಿರುವ ಚಿತ್ರವನ್ನು ಪ್ರೇಕ್ಷಕ ಹೇಗೆ ನೋಡುತ್ತಾನೆ ಎನ್ನುವ ಒಂದು ಹೆದರಿಕೆ ಇತ್ತು. ಆದರೆ ಅಭಿಮಾನಿಗಳು ಮೆಚ್ಚಿರುವುದು ನಮಗೆ ಸಂತೋಷ ನೀಡಿದೆ ಎಂದು ಚಿತ್ರದ ನಾಯಕ ನಟ ಗೌರಿ ಶಿಕರ್ ಹೇಳಿದ್ದಾರೆ.

    ಎರಡು ಶೋ ಇರುವಲ್ಲಿ ನಾಲ್ಕು ಶೋ ಆಗುತ್ತಿದೆ. ಒಬ್ಬೊಬ್ಬರೇ ವೀಕ್ಷಿಸುವುದಕ್ಕಿಂತ ಇಡೀ ಕುಟುಂಬವೇ ನೋಡಬಹುದಾದ ಚಿತ್ರ ಇದಾಗಿದ್ದು, ಅಭಿಮಾನಿಗಳು ಇಷ್ಟ ಪಟ್ಟಿದ್ದು, ಇಂದು ನಾವು ಅಭಿಮಾನಿಗಳನ್ನು ಭೇಟಿ ಮಾಡುತ್ತೇವೆ ಎಂದು ರಂಜಿನಿ ಹೇಳಿದ್ದಾರೆ.

    ಸಿನಿಮಾದ ಒಳಗಡೆ ನಾಟಕವನ್ನು ತಂದಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ನಾಟಕ ಕುಟುಂಬದಿಂದ ಬಂದ ಹಂಸಳನ್ನು(ರಂಜಿನಿ) ಶ್ರೀಮಂತ ಕುಟುಂಬದಿಂದ ಬಂದ ಶೋಕಿಲಾಲನ ಪಾತ್ರದಲ್ಲಿರುವ ನಾಯಕ ರಾಜ(ಶಿಕರ್) ಪ್ರೀತಿ ಮಾಡಿ ಹೇಗೆ ಮದುವೆಯಾಗುತ್ತಾನೆ? ಆತನ ಕುಟುಂಬ ಏನು ಮಾಡುತ್ತದೆ ಎನ್ನುವುದೇ ಚಿತ್ರದ ಕತೆ.

    ಇದನ್ನೂ ಓದಿ: `ರಾಜಹಂಸ’ ಶೂಟಿಂಗ್ ವೇಳೆ ತಪ್ಪಿದ ದೋಣಿ ದುರಂತ

    ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಂಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆದಿದೆ.

     

     

  • `ರಾಜಹಂಸ’ ಶೂಟಿಂಗ್ ವೇಳೆ ತಪ್ಪಿದ ದೋಣಿ ದುರಂತ

    `ರಾಜಹಂಸ’ ಶೂಟಿಂಗ್ ವೇಳೆ ತಪ್ಪಿದ ದೋಣಿ ದುರಂತ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಶುಕ್ರವಾರ ಬಿಡುಗಡೆಯಾಗುತ್ತಿರುವ `ರಾಜಹಂಸ’ ಸಿನಿಮಾದ ಚಿತ್ರೀಕರಣ ವೇಳೆ ಭಾರೀ ದೋಣಿ ದುರಂತ ಸಂಭವಿಸಿದ್ದು ನಟ, ನಟಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

    ಚಿತ್ರತಂಡ ಕಳೆದ ವರ್ಷ ನವೆಂಬರ್ ನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿಯ ತುಂಗಾ ನದಿ ಬಳಿ ಚಿತ್ರೀಕರಣಕ್ಕೆ ತೆರಳಿತ್ತು. ಶೂಟಿಂಗ್ ನಲ್ಲಿ ದೋಣಿಯಲ್ಲಿ ಸಿನಿಮಾದ ನಾಯಕ ಗೌರಿ ಶಿಕರ್ ಮತ್ತು ನಾಯಕಿ ರಂಜಿನಿ ಇಬ್ಬರೇ ದೋಣಿಯಲ್ಲಿ ವಿಹರಿಸುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.

    ನದಿಯ ದಡದಲ್ಲಿಯೇ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಡ್ರೋಣ್ ಕ್ಯಾಮೆರಾದಿಂದ ದೃಶ್ಯಗಳನ್ನು ಶೂಟ್ ಮಾಡುತ್ತಿದ್ದರಿಂದ ತಂತ್ರಜ್ಞರು ಮತ್ತು ಸಹ ನಟರು ಸಹಜವಾಗಿಯೇ ದೂರದಲ್ಲಿ ನಿಂತಿದ್ದರು. ಈ ವೇಳೆ ದೋಣಿ ತನ್ನಷ್ಟಕ್ಕೆ ತಾನೇ ಚಲಿಸಲು ಆರಂಭಿಸಿದೆ. ಗೌರಿಶಿಕರವರಿಗೂ ಹುಟ್ಟು ಹಾಕುವುದು ಗೊತ್ತಿಲ್ಲ ಮತ್ತು ನಟಿ ರಂಜಿನಿವರಿಗೂ ಈಜು ಬರುತ್ತಿಲ್ಲವಾದ್ದರಿಂದ ಚಿತ್ರತಂಡ ಒಂದು ಕ್ಷಣ ಗಾಬರಿಗೊಂಡಿತ್ತು.

    ದೋಣಿ ಗಾಳಿಯೊ0ದಿಗೆ ಒಂದು ದಡದಿಂದ ಮತ್ತೊಂದು ದಡಕ್ಕೆ ಚಲಿಸಲಾರಂಭಿಸಿದೆ. ಈ ವೇಳೆ ಗೌರಿ ಶಿಕರ್ ಮತ್ತು ರಂಜಿನಿ ಸಿಲುಕಿದ್ದ ದೋಣಿ ಚಿಕ್ಕದಾದ ಬಂಡೆಗೆ ತಾಗಿ ನಿಂತುಕೊಂಡಿದೆ. ಕೂಡಲೇ ಚಿತ್ರತಂಡದ ಸಹಾಯಕರು, ಸಹನಟರು ನದಿಗೆ ಇಳಿದು ಇಬ್ಬರನ್ನು ರಕ್ಷಿಸಿದ್ದಾರೆ.

    ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಂಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಂಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

    ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ. ಸಿನಿಮಾ ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

     

     

  • ‘ರಾಜಹಂಸ’ದ ಹೀರೋ ರಾಜಸ್ಥಾನ ಪೊಲೀಸ್ ವಶಕ್ಕೆ – ಅಲ್ಲಿಂದ ವಾಪಸ್ ಬಂದ ಕತೆ ಓದಿ!

    ‘ರಾಜಹಂಸ’ದ ಹೀರೋ ರಾಜಸ್ಥಾನ ಪೊಲೀಸ್ ವಶಕ್ಕೆ – ಅಲ್ಲಿಂದ ವಾಪಸ್ ಬಂದ ಕತೆ ಓದಿ!

    ಬೆಂಗಳೂರು: ಕನ್ನಡದ `ರಾಜಹಂಸ’ ಸಿನಿಮಾದ ನಾಯಕ ನಟ ಗೌರಿ ಶಿಕರ್ ಅವರನ್ನು ಜೈಪುರದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿದ್ರಂತೆ. ಹೌದು, ರಾಜಹಂಸದ ಚಿತ್ರತಂಡ ಚಿತ್ರೀಕರಣಕ್ಕಾಗಿ ರಾಜಸ್ಥಾನದ ಜೈಪುರ ನಗರಕ್ಕೆ ತೆರಳಿತ್ತು. ಈ ವೇಳೆ ಜೈಪುರನ ಐತಿಹಾಸಿಕ ಕೋಟೆಯ ಒಳಭಾಗದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬರುವಾಗ ಪೊಲೀಸರು ನಾಯಕ ಗೌರಿಶಿಕರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದಾರೆ.

    ಏನಾಗಿತ್ತು?: ಜೈಪುರ ಕೋಟೆಯಲ್ಲಿ ಶೂಟಿಂಗ್ ಮುಗಿದ ಬಳಿಕ ಚಿತ್ರತಂಡ ಹೊರ ನಡೆದಿತ್ತು. ಕೊನೆಯಲ್ಲಿ ಉಳಿದ ನಾಯಕ ನಟ ಗೌರಿ ಶಿಕರ್‍ ಹೊರ ಹೋಗುವಷ್ಟರಲ್ಲಿ ಇಡೀ ಚಿತ್ರತಂಡ ಹೊರಟಿತ್ತು. ಇನ್ನೇನು ಹೊರಡುವಷ್ಟರಲ್ಲಿ ಬಂದ ಪೊಲೀಸರು ಕೋಟೆಯ ಪ್ರವೇಶದ ಟಿಕೆಟ್ ಕೇಳಿದ್ದಾರೆ. ಈ ವೇಳೆ ಗೌರಿ ಶಿಖರ್ ತಾವು ಸಿನಿಮಾ ಶೂಟಿಂಗ್ ಗಾಗಿ ಬಂದು ಚಿತ್ರತಂಡದ ಸದಸ್ಯರು ಮುಂದೆ ಹೋಗಿದ್ದು, ಹಾಗಾಗಿ ತಮ್ಮ ಬಳಿ ಟಿಕೆಟ್ ಇಲ್ಲವೆಂದು ತಿಳಿಸಿದ್ದಾರೆ.

    ಗೌರಿಶಿಕರ್ ತಾವು ಬಂದ ಉದ್ದೇಶವನ್ನು ಪೊಲೀಸರಿಗೆ ತಿಳಿಸಿದ್ರೂ, ಬೇರೆ ಭಾಷೆಯಾಗಿದ್ದರಿಂದ ಅರ್ಥವಾಗಿಲ್ಲ. ಹಾಗಾಗಿ ನನ್ನನ್ನು ನಾಲ್ಕು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಲಾಯಿತು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಬಂದಾಗ ಮೊಬೈಲ್ ನಲ್ಲಿ ಸಿನಿಮಾದ ಟೀಸರ್ ತೋರಿಸಿದಾಗ ನನ್ನನ್ನು ಬಿಟ್ಟು ಬಿಟ್ಟರು ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ನಟ ಗೌರಿಶಿಕರ್ ಹೇಳಿದ್ದಾರೆ.

    ಇದನ್ನೂ ಓದಿ: ನಿಮ್ಗೆ ಸೆಲ್ಫೀ ಕ್ರೇಝ್ ಇದ್ರೆ ಸೆಪ್ಟೆಂಬರ್ 8ಕ್ಕೆ ‘ರಾಜಹಂಸ’ ನೋಡಿ

    ಪೀ..ಪೀ..ಸಾಂಗ್ ಕೇಳಿ: ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ `ರಾಜಹಂಸ’ ಯುಟ್ಯೂಬ್ ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದೆ. ಹಳ್ಳಿ ಬೇರುಗಳು ಮತ್ತು ನಗರದ ಚಿಗುರುಗಳು ಜೊತೆಗೂಡಿ ಹ್ಯಾಪಿ ಅನ್ನೋ ಪೀಪಿ ಊದ್ತಾ ಕುಣಿದು ಕುಪ್ಪಳಿಸೋ ಪಕ್ಕಾ ಫ್ಯಾಮಿಲಿ ಹಾಡು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತನ್ನ ಸಂಗೀತದ ಅಲೆಗಳನ್ನು ಹರಿಸಿದೆ. ಜಾತ್ರೆಯ ಸನ್ನಿವೇಶವನ್ನು ಒಳಗೊಂಡಿರುವ ಪೀ..ಪೀ.. ಹಾಡಿನಲ್ಲಿ ಸಿನಿಮಾದ ಇಡೀ ಚಿತ್ರತಂಡ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

    ನಗರದ ಹುಡುಗ ಮತ್ತು ಹಳ್ಳಿ ಹುಡುಗಿಯ ಕುಟುಂಬಸ್ಥರು ದೇವರ ಸನ್ನಿಧಿಯಲ್ಲಿ ಒಂದಾಗಿ ಪೂಜೆ ಸಲ್ಲಿಸುವ ವಿಶೇಷ ಹಾಡು ಇದಾಗಿದೆ. ಹಾಡಿನ ಲಿರಿಕ್ಸ್ ಮಾತ್ರ ಅರ್ಥಪೂರ್ಣವಾಗಿದ್ದು, ಗ್ರಾಮೀಣ ಮತ್ತು ನಗರದ ಜೀವನ ಶೈಲಿಯನ್ನು ಹೇಳುತ್ತದೆ. ಹಾಡಿನ ಸಂಗೀತವೂ ಚೆನ್ನಾಗಿದ್ದು ಕೇಳುಗರನ್ನು ಸಹ ನಾಲ್ಕು ಸ್ಟೆಪ್ ಹಾಕುವಂತೆ ಮಾಡುತ್ತದೆ.

    ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಂಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಂಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

    ಇದನ್ನೂ ಓದಿ:  ಸೀನು, ಲವ್ ಎರಡನ್ನೂ ಕಂಟ್ರೋಲ್ ಮಾಡೋದು ಹೇಗೆ?

    ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ. ಸಿನಿಮಾ ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

     

     

  • ನಿಮ್ಗೆ ಸೆಲ್ಫೀ ಕ್ರೇಝ್ ಇದ್ರೆ ಸೆಪ್ಟೆಂಬರ್ 8ಕ್ಕೆ ‘ರಾಜಹಂಸ’ ನೋಡಿ

    ನಿಮ್ಗೆ ಸೆಲ್ಫೀ ಕ್ರೇಝ್ ಇದ್ರೆ ಸೆಪ್ಟೆಂಬರ್ 8ಕ್ಕೆ ‘ರಾಜಹಂಸ’ ನೋಡಿ

    ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ರಾಜಹಂಸ ಚಿತ್ರದ ರಿಲೀಸ್ ಡೇಟ್ ಪಕ್ಕಾ ಆಗಿದೆ. ಸೆಪ್ಟೆಂಬರ್ 8ರಂದು ಚಿತ್ರ ತೆರೆ ಕಾಣಲಿದೆ.

    ಚಿತ್ರದ ನಾಯಕನಿಗೆ ವಿಶೇಷವಾಗಿ ಯಾರಾದರೂ ಕಂಡರೆ ಸಾಕು ಅವರ ಜೊತೆ ಕಾಫಿ ಕುಡಿದು ಸೆಲ್ಫೀ ತೆಗೆದುಕೊಳ್ತಾನೆ. ಪ್ರಪಂಚದಲ್ಲಿ ನಾನೇ ಎಲ್ಲಾ ಆಗಲು ಸಾಧ್ಯವಿಲ್ಲ ಎಂದು ಸಾಧಕರ ಜೊತೆ ಕೂತು ಕಾಫಿ ಹೀರುತ್ತಾ ಸೆಲ್ಫೀ ತೆಗೆದುಕೊಂಡರೆ ಕಿಕ್ ಜಾಸ್ತಿ ಎಂದುಕೊಂಡು ಹೀರೋ ಸೆಲ್ಫೀ ತಗೋತಾ ಇರುತ್ತಾನೆ.

    ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

    ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಜನಗಣ ಮನ ದೇಶ ಹಾಡನ್ನು ಉತ್ತರ ಭಾರತದ ಜೈಪುರ, ಹರ್ಯಾಣ, ದೆಹಲಿ, ಉತ್ತರಪ್ರದೇಶ, ಹರಿದ್ವಾರ, ಹೃಷಿಕೇಶ, ಕಾಶಿ ಸೇರಿ ಒಟ್ಟು 10 ರಾಜ್ಯಗಳಲ್ಲಿ ಶೂಟ್ ಮಾಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್ ಹಾಗೂ ಗಾನಾದಲ್ಲಿ ಟ್ರೆಂಡ್ ಆಗಿದೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ.

  • ಸೀನು, ಲವ್ ಎರಡನ್ನೂ ಕಂಟ್ರೋಲ್ ಮಾಡೋದು ಹೇಗೆ? ಮಿಸ್ ಮಾಡ್ಲೇ ಬೇಡಿ ‘ರಾಜಹಂಸ’..!

    ಸೀನು, ಲವ್ ಎರಡನ್ನೂ ಕಂಟ್ರೋಲ್ ಮಾಡೋದು ಹೇಗೆ? ಮಿಸ್ ಮಾಡ್ಲೇ ಬೇಡಿ ‘ರಾಜಹಂಸ’..!

    ಬೆಂಗಳೂರು: ಚಂದನವನದಲ್ಲಿ ಇನ್ನೊಂದು ಚಂದದ ಪ್ರೇಮಕಥೆ ನಿಮ್ಮ ಮುಂದೆ ಬರಲು ಸಿದ್ಧವಾಗಿದೆ. ಯುವ ಪ್ರೇಮಿಗಳ ಅಂತರಾಳದ ಗುಸು ಗುಸು ಪ್ರೀತಿಯನ್ನು ಕನ್ನಡ ಪ್ರೇಕ್ಷಕರಿಗೆ ಉಣಬಡಿಸಲು `ರಾಜಹಂಸ’ ಚಿತ್ರತಂಡ ಬರ್ತಿದೆ.

    ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

    ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು RAP STAR  ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ.

    30 ದಿನ ಬೆಂಗಳೂರಿನಲ್ಲಿ, 30 ದಿನ ತೀರ್ಥಹಳ್ಳಿಯಲ್ಲಿ ಸೇರಿದಂತೆ ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಜನಮನ ಸಿನಿಮಾಸ್ ಚಿತ್ರದ ನಿರ್ಮಾಣ ಜವಬ್ದಾರಿಯನ್ನು ಹೊತ್ತುಕೊಂಡಿದೆ. ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಅವರು ಕಥೆ, ಚಿತ್ರಕಥೆ ಸೇರಿದಂತೆ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾಹಿತ್ಯ, ಸಂಭಾಷಣೆ-ಧನಂಜಯ್ ದಿಡಗ, ಛಾಯಗ್ರಹಣ ಅರೂರ್ ಸುಧಾಕರ್ ಸೇರಿದಂತೆ ವಿವಿಧ ತಂತ್ರಜ್ಞರು ಸಿನಿಮಾಗೆ ಕೆಲಸ ಮಾಡಿದ್ದಾರೆ.

    ಸಿನಿಮಾದ ಹಕ್ಕುಗಳನ್ನು ಈಗಾಗಲೇ ಮಾರ್ಸ್ ಡಿಸ್ಟ್ರಿಬ್ಯೂಟರ್ಸ್ ನ ಸುರೇಶ್ ಖರೀದಿಸಿದ್ದಾರೆ. ಒಟ್ಟಿನಲ್ಲಿ ಸುಂದರ ರೋಮ್ಯಾಂಟಿಕ್, ಆ್ಯಕ್ಷನ್ ಸ್ಟೋರಿಯನ್ನ ರಾಜಹಂಸ ಒಳಗೊಂಡಿದೆ.