Tag: ರಾಜಸ್ಥಾನ ರಾಯಲ್ಸ್

  • IPL 2025 | ʻವೈಭವʼ ಫಿಫ್ಟಿ – ರಾಯಲ್‌ ಆಗಿ ಗೆದ್ದು ಆಟ ಮುಗಿಸಿದ ರಾಜಸ್ಥಾನ್‌

    IPL 2025 | ʻವೈಭವʼ ಫಿಫ್ಟಿ – ರಾಯಲ್‌ ಆಗಿ ಗೆದ್ದು ಆಟ ಮುಗಿಸಿದ ರಾಜಸ್ಥಾನ್‌

    ನವದೆಹಲಿ: ವೈಭವ್‌ ಸೂರ್ಯವಂಶಿ (Vaibhav Suryavanshi)ಅವರ ಅಮೋಘ ಅರ್ಧಶತಕದ ಬ್ಯಾಟಿಂಗ್‌ ನೆರವಿನೊಂದಿಗೆ ರಾಜಸ್ಥಾನ್ಸ್‌ ರಾಯಲ್ಸ್‌ (Rajasthan Royals) ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಂಜು ಸ್ಯಾಮ್ಸನ್‌ ನಾಯಕತ್ವದ ಆರ್‌ಆರ್‌ (RR)ತಂಡ 18ನೇ ಆವೃತ್ತಿಯ ಐಪಿಎಲ್‌ಗೆ (IPL) ವಿದಾಯ ಹೇಳಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 8 ಓವರ್‌ಗಳ ನಷ್ಟಕ್ಕೆ 187 ರನ್‌ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ರಾಜಸ್ಥಾನ 17.1 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸುವ ಮೂಲಕ ಕೊನೆಯ ಪಂದ್ಯದಲ್ಲಿ ವಿಜಯಶಾಲಿಯಾಯಿತು.ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ಲೀಗ್‌ ಸುತ್ತಿನ ಕೊನೆಯ ಪಂದ್ಯದಲ್ಲಿ ಗೆಲಲ್ಲೇಬೇಕೆಂದು ಪಣತೊಟ್ಟು ಕಣಕ್ಕಿಳಿದ ರಾಜಸ್ಥಾನ ರಾಯಲ್ಸ್‌ ಪಂದ್ಯದ ಮೊದಲಿನಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಯಶಸ್ವಿ ಜೈಸ್ವಾಲ್‌ 19 ಎಸೆತಗಳಲ್ಲಿ 36 ರನ್‌, ವೈಭವ್‌ ಸೂರ್ಯವಂಶಿ 33 ಎಸೆತಗಳಲ್ಲಿ 57 ರನ್‌, ಸಂಜು ಸ್ಯಾಮ್ಸನ್‌ 31 ಎಸೆತಗಳಲ್ಲಿ 41 ರನ್‌, ರಿಯಾನ್‌ ಪರಾಗ್‌ 4 ಎಸೆತಗಳಲ್ಲಿ 3 ರನ್‌, ಧ್ರುವ್‌ ಜುರೆಲ್‌ 12 ಎಸೆತಗಳಲ್ಲಿ 31 ರನ್‌ ಹಾಗೂ ಶಿಮ್ರಾನ್‌ ಹೆಟ್ಮೆಯರ್‌ 5 ಎಸೆತಗಳಲ್ಲಿ 12 ರನ್‌ ಗಳಿಸಿದರು.

    ಚೆನ್ನೈ ಪರ ಬೌಲಿಂಗ್‌ ಮಾಡಿದ ರವಿಚಂದ್ರನ್‌ ಅಶ್ವಿನ್‌ 2, ಅನ್ಶುಲ್‌ ಕಾಂಬೋಜ್‌, ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟಿಂಗ್‌ ಮಾಡಿ, ಆಯುಷ್‌ ಮಾತ್ರೆ 20 ಎಸೆತಗಳಲ್ಲಿ 43 ರನ್‌, ಡೆವೊನ್‌ ಕಾನ್ವೇ 8 ಎಸೆತಗಳಲ್ಲಿ 10 ರನ್‌, ರವಿಚಂದ್ರನ್‌ ಅಶ್ವಿನ್‌ 8 ಎಸೆತಗಳಲ್ಲಿ 13 ರನ್‌, ಡೆವಾಲ್ಡ್‌ ಬ್ರೆವಿಸ್‌ 25 ಎಸೆತಗಳಲ್ಲಿ 42 ರನ್‌, ಶಿವಂ ದುಬೆ 32 ಎಸೆತಗಳಲ್ಲಿ 39 ರನ್‌, ಎಂಎಸ್‌ ಧೋನಿ 17 ಎಸೆತಗಳಲ್ಲಿ 16 ರನ್‌ ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಳ್ಳುವ ಮೂಲಕ 187 ಗಳಿಸಿದರು.

    ರಾಜಸ್ಥಾನ ಪರ ಬೌಲಿಂಗ್‌ ಮಾಡಿದ ಯುದ್ವೀರ್‌ ಸಿಂಗ್‌ ಹಾಗೂ ಆಕಾಶ್‌ ಮಧ್ವಾಲ್‌ ತಲಾ 3 ವಿಕೆಟ್‌ ಪಡೆದರೆ, ತುಷಾರ್‌ ಸಿಂಗ್‌, ವನಿಂದು ಹಸರಂಗ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು. ಈಗಾಗಲೇ ಪ್ಲೇಆಫ್‌ನಿಂದ ಹೊರಬಿದ್ದಿರುವ ಚೆನ್ನೈ ತಂಡ ಗೆಲುವು ಸಾಧಿಸಿದ್ದರೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ.ಇದನ್ನೂ ಓದಿ: ಬೆಂಗ್ಳೂರಲ್ಲಿ ಮಳೆ ಕಾಟ – ತವರಿನಲ್ಲಿ ನಡೆಯಬೇಕಿದ್ದ RCB ಕೊನೆಯ ಪಂದ್ಯ ಲಕ್ನೋಗೆ ಶಿಫ್ಟ್

  • ಲಕ್ನೋ ಸೂಪರ್‌ ಆಟಕ್ಕೆ ಶರಣಾದ ರಾಯಲ್ಸ್‌ – 2 ರನ್‌ಗಳ ರೋಚಕ ಜಯ

    ಲಕ್ನೋ ಸೂಪರ್‌ ಆಟಕ್ಕೆ ಶರಣಾದ ರಾಯಲ್ಸ್‌ – 2 ರನ್‌ಗಳ ರೋಚಕ ಜಯ

    ಜೈಪುರ: ಕೊನೆಯಲ್ಲಿ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ರಾಜಸ್ಥಾನ ರಾಯಲ್ಸ್‌ (Rjasthan Royals) ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 2 ರನ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಲಕ್ನೋ 5 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟಿ ನಷ್ಟಕ್ಕೆ 178 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತ್ತು.

    ಕೊನೆಯ ಓವರ್‌ವರೆಗೂ ಗೆಲುವು ರಾಜಸ್ಥಾನ ಕಡೆಗೆ ವಾಲಿತ್ತು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿತ್ತು.ಕ್ರೀಸ್‌ನಲ್ಲಿ ಹೆಟ್ಮೇಯರ್‌ ಮತ್ತು ಧ್ರುವ್‌ ಜುರೇಲ್‌ ಇದ್ದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್‌ ಮತ್ತು 2 ರನ್‌ ತೆಗೆದ ಹೆಟ್ಮೇಯರ್‌ ಮೂರನೇ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾಗುವ ಮೂಲಕ ಪಂದ್ಯ ರೋಚಕ ಘಟ್ಟದತ್ತ ತಿರುಗಿತು.

    4ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ಎಸೆತದಲ್ಲಿ ದುಬೆ ಸಿಕ್ಸ್‌ ಸಿಡಿಸಲು ಹೋದರು. ಆದರೆ ಮಿಲ್ಲರ್‌ ಕ್ಯಾಚ್‌ ಡ್ರಾಪ್‌ ಮಾಡಿದ ಕಾರಣ 2 ರನ್‌ ಓಡಿದರು. ಕೊನೆಯ ಎಸೆತದಲ್ಲಿ 4 ರನ್‌ ಬೇಕಿತ್ತು. ಆದರೆ ದುಬೆ ಸಿಂಗಲ್‌ ರನ್‌ ತೆಗೆದ ಕಾರಣ ಲಕ್ನೋ ಪಂದ್ಯವನ್ನು ಗೆದ್ದುಕೊಂಡಿತು.

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ಸೂಪರ್‌ ಓವರ್‌ನಲ್ಲಿ ಸೋತಿತ್ತು. ಈಗ ಲಕ್ನೋ ವಿರುದ್ಧವೂ ಕೊನೆ ಕ್ಷಣದಲ್ಲಿ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಕಾರಣ ರಾಜಸ್ಥಾನ ಸೋಲು ಕಂಡಿದೆ.

    ರಾಜಸ್ಥಾನ ಪರ ಜೈಸ್ವಾಲ್‌ 74 ರನ್‌(52 ಎಸೆತ, 5 ಬೌಂಡರಿ, 4 ಸಿಕ್ಸ್‌), ಮೊದಲ ಪಂದ್ಯವಾಡಿದ 14 ರ ಸೂರ್ಯವಂಶಿ 34 ರನ್‌(20 ಎಸೆತ, 2 ಬೌಂಡರಿ, 3 ಸಿಕ್ಸ್‌), ನಾಯಕ ರಿಯಾನ್‌ ಪರಾಗ್‌ 39 ರನ್‌(26 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು. ಅವೇಶ್‌ ಖಾನ್‌ ಮೂರು ವಿಕೆಟ್‌ ಕೀಳುವ ಮೂಲಕ ರಾಜಸ್ಥಾನಕ್ಕೆ ಶಾಕ್‌ ನೀಡಿದರು.

    ಲಕ್ನೋ ಪರ ಮಾರ್ಕ್ರಾಮ್ 66 ರನ್‌(45 ಎಸೆತ, 5 ಬೌಂಡರಿ, 3 ಸಿಕ್ಸ್‌), ಅಯುಷ್‌ ಬದೋನಿ 50 ರನ್‌ (34 ಎಸೆತ, 5 ಬೌಂಡರಿ, 1 ಸಿಕ್ಸ್‌) ಹೊಡೆದರೆ ಕೊನೆಯಲ್ಲಿ ಅಬ್ದುಲ್‌ ಸಮಾದ್‌ ಔಟಾಗದೇ 30 ರನ್‌ (10 ಎಸೆತ, 4 ಸಿಕ್ಸ್‌) ಸಿಡಿಸಿದ ಪರಿಣಾಮ ತಂಡ 180 ರನ್‌ ಗಳಿಸಿತು.

  • ಸ್ಟಾರ್ಕ್ ಮ್ಯಾಜಿಕ್‌, ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ – ಪಂದ್ಯ ಟೈ ಆಗಿದ್ದು ಹೇಗೆ?

    ಸ್ಟಾರ್ಕ್ ಮ್ಯಾಜಿಕ್‌, ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ – ಪಂದ್ಯ ಟೈ ಆಗಿದ್ದು ಹೇಗೆ?

    ನವದೆಹಲಿ: ಮಿಚೆಲ್‌ ಸ್ಟಾರ್ಕ್ ಮ್ಯಾಜಿಕ್‌ ಬೌಲಿಂಗ್‌ ನೆರವಿನಿಂದ ಸೂಪರ್‌ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲೂ ಗೆದ್ದು ಬೀಗಿದೆ.

    ಸೂಪರ್‌ ಓವರ್‌ ಹೇಗಿತ್ತು?
    ರಾಜಸ್ಥಾನ ಪರ ಹೆಟ್ಮೇಯರ್ ಮತ್ತು ಪರಾಗ್‌ ಕ್ರೀಸ್‌ಗೆ ಆಗಮಿಸಿದರು. ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್‌ ಬಂದಿಲ್ಲ, ಎರಡನೇ ಎಸೆತದಲ್ಲಿ ಬೌಂಡರಿ ಹೊಡೆದ ಹೆಟ್ಮೇಯರ್‌ ಮೂರನೇ ಎಸೆತದಲ್ಲಿ ಒಂದು ರನ್‌ ತೆಗೆದರು. 4 ಎಸೆತವನ್ನು ಪರಾಗ್‌ ಬೌಂಡರಿಗೆ ಅಟ್ಟಿದ್ದರು. ಆದರೆ ಈ ಎಸೆತ ನೋಬಾಲ್‌ ಆಗಿತ್ತು. ಮರು ಎಸೆತದಲ್ಲಿ ಯಾವುದೇ ರನ್‌ ಬಂದಿಲ್ಲ. ಆದರೆ ಹೆಟ್ಮೇಯರ್‌ ಓಡಿದ್ದರಿಂದ ಪರಾಗ್‌ ರನೌಟ್‌ ಆದರು. 5ನೇ ಎಸತದಲ್ಲಿ ಹೆಟ್ಮೆಯರ್‌ 2 ರನ್‌ ಕದಿಯಲು ಮುಂದಾಗಿದ್ದರು. ಆದರೆ 2 ರನ್‌ ಓಡುವ ವೇಳೆ ಜೈಸ್ವಾಲ್‌ ರನೌಟ್‌ ಆದರು. ಎರಡು ವಿಕೆಟ್‌ ಪತನಗೊಂಡ ಪರಿಣಾಮ ರಾಜಸ್ಥಾನದ ಇನ್ನಿಂಗ್ಸ್‌ 11 ರನ್‌ಗಳಿಗೆ ಅಂತ್ಯವಾಯಿತು.

    ಡೆಲ್ಲಿ ಪರ ಕ್ರೀಸ್‌ಗೆ ರಾಹುಲ್‌ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಬಂದಿದ್ದರು. ಸಂದೀಪ್‌ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್‌ 2 ರನ್‌, ಎರಡನೇ ಎಸೆತದಲ್ಲಿ 4 ರನ್‌, ಮೂರನೇ ಎಸೆತದಲ್ಲಿ ಒಂದು ರನ್‌ ಓಡಿದರು. 4ನೇ ಎಸೆತವನ್ನು ಸ್ಟಬ್ಸ್ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ರೋಚಕ ಜಯವನ್ನು ತಂದುಕೊಟ್ಟರು.

    ಟೈ ಆಗಿದ್ದು ಹೇಗೆ?
    ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ (Rajasthan Royals) ಗೆಲುವಿಗೆ 9 ರನ್‌ ಬೇಕಿತ್ತು. ಆದರೆ ಮಿಚೆಕ್‌ ಮಿಚೆಲ್ ಸ್ಟಾರ್ಕ್ ಕೇವಲ 8 ರನ್‌ ನೀಡಿದ್ದರಿಂದ ಪಂದ್ಯ ಟೈನಲ್ಲಿ ಅಂತ್ಯವಾಯಿತು.

    ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸುವ ಮೂಲಕ ಮ್ಯಾಚ್‌ ಟೈ ಆಗುವ ಮೂಲಕ ಪಂದ್ಯ ರೋಚಕ ಘಟಕ್ಕೆ ತಿರುಗಿತು ಇದನ್ನೂ ಓದಿ: ಐಪಿಎಲ್‌ನಲ್ಲಿ ಫಿಕ್ಸಿಂಗ್‌ ಕರಿನೆರಳು | ಹೈದರಾಬಾದ್‌ ಉದ್ಯಮಿ ಸಂರ್ಪಕಿಸಿದ್ರೆ ಕೂಡ್ಲೇ ತಿಳಿಸಿ – ಆಟಗಾರರಿಗೆ ವಾರ್ನಿಂಗ್‌

    ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್ 5 ಬಾಲ್‌ಗೆ 9 ರನ್‌ ಹೊಡೆದು ಪೆವಿಲಿಯನ್‌ ಸೇರಿದರು. ಬಳಿಕ ಬಂದ ಕರುಣ್‌ ನಾಯರ್‌ ರನ್‌ ಔಟ್‌ ಆಗುವ ಮೂಲಕ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದರು. ನಂತರ ಕ್ರೀಸ್‌ಗಿಳಿದ ಕನ್ನಡಿಗ ಕೆ ಎಲ್‌ ರಾಹುಲ್‌ ಹಾಗೂ ಅಭಿಷೇಕ್‌ ಪೋರೆಲ್‌ 57 ಎಸೆತಗಳಲ್ಲಿ 63 ರನ್ ಜೊತೆಯಾಟವಾಡಿದರು. 38 ರನ್‌ ಕಲೆ ಹಾಕಿದ ಕೆ ಎಲ್‌ ರಾಹುಲ್‌, ಜೋಫ್ರಾ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಯುವ ಆಟಗಾರ ಅಭಿಷೇಕ್‌ ಪೊರೆಲ್‌ 49 ರನ್‌ಗೆ ಔಟ್‌ ಆಗುವ ಮೂಲಕ ಅರ್ಧಶತಕ ಬಾರಿಸುವಲ್ಲಿ ವಿಫಲರಾದರು.

    105 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ನಾಯಕ ಅಕ್ಸರ್‌ ಪಟೇಲ್‌ ಆಸರೆಯಾದರು. ಈ ಜೋಡಿ 19 ಎಸೆತಗಳಲ್ಲಿ 41 ರನ್‌ ಕಲೆ ಹಾಕುವ ಮೂಲಕ ತಂಡ ಮೊತ್ತವನ್ನು ಹೆಚ್ಚಿಸಿದರು ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ ಅಜೇಯ 34 ರನ್‌ ಗಳಿಸಿದರು. ಬಳಿಕ ಬ್ಯಾಟಿಂಗ್‌ ಮಾಡಿದ ಅಶುತೋಷ್‌ ಶರ್ಮಾ ಅಜೇಯ 15 ರನ್‌ ಬಾರಿಸಿ ತಂಡಕ್ಕೆ ಕೊಡುಗೆ ನೀಡಿದರು.

    ರಾಜಸ್ಥಾನ ಪರ ಜೋಫ್ರಾ ಆರ್ಚರ್ 2 ವಿಕೆಟ್‌ ಉರುಳಿಸಿದರು. ಉಳಿದಂತೆ ಮಹೇಶ್ ತೀಕ್ಷಣ್, ವನಿಂದು ಹಸರಂಗಾ ತಲಾ ಒಂದು ವಿಕೆಟ್‌ಗಳಿಸಿದರು.

    ಡೆಲ್ಲಿ ನೀಡಿದ 189 ರನ್‌ ಗುರಿ ಬೆನ್ನಟ್ಟಿದ ರಾಜಸ್ಥಾನ್‌ ಆರಂಭಿಕ ಬ್ಯಾಟ್ಸ್‌ಮೆನ್‌ ಯಶಸ್ವಿ ಜೆಸ್ವಾಲ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ 34 ಬಾಲ್‌ಗೆ 61 ರನ್‌ ಜೊತೆಯಾಟವಾಡುವ ಮೂಲಕ ಡೆಲ್ಲಿ ಬೌಲರ್ಸ್‌ಗಳ ಬೆವರಿಳಿಸಿದರು. ಸಂಜು 19 ಬಾಲ್‌ಗೆ 31 ರನ್‌ ಗಳಿಸಿ ಗಾಯಗೊಂಡ ಬಳಿಕ ನಿವೃತ್ತಿಗೊಂಡರು.

    ರಿಯಾನ್‌ ಪರಾಗ್‌ 8 ರನ್‌ ಗಳಿಸಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಜೆಸ್ವಾಲ್‌ ಹಾಗೂ ನಿತೀಶ್‌ ರಾಣಾ ತಲಾ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದು ಓಟಾದರು. 17 ರನ್‌ ಗೆ ಜುರೇಲ್‌ 26 ರನ್‌ ಗಳಿಸಿ ಕೊನೆಯ ಬಾಲ್‌ನಲ್ಲಿ ರನ್‌ ಔಟಾದರು. ಹೆಟ್ಮೇಯರ್‌ 15 ರನ್‌ ಗಳಿಸುವ ಅಜೇಯರಾಗಿ ಉಳಿದರು.

  • ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

    ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

    ಗುವಾಹಟಿ: ಐಪಿಎಲ್‌ನಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದ ನಾಯಕ ರಿಯಾನ್‌ ಪರಾಗ್‌ (Riyan Parag) ಅವರನ್ನು ಬ್ಯಾನ್‌ ಮಾಡಬೇಕೆಂದು ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

    ಕ್ರಿಕೆಟ್‌ ಅಭಿಮಾನಿಗಳು ರಿಯಾನ್‌ ಪರಾಗ್‌ ವಿರುದ್ಧ ಕಿಡಿಕಾರಲು ಕಾರಣವಾಗಿದ್ದು ಒಂದು ವಿಡಿಯೋ. ಅಭಿಮಾನಿಗಳ ಜೊತೆ ಸೆಲ್ಫಿ (Selfie) ತೆಗೆಯುವ ವೇಳೆ ಪರಾಗ್‌ ತೋರಿದ ವರ್ತನೆ ನೆಟ್ಟಿಗರ ಪಿತ್ತ ನೆತ್ತಿಗೆರುವಂತೆ ಮಾಡಿದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಆಗಿದ್ದು ಏನು?
    ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ 6 ರನ್‌ಗಳಿಂದ ತಂಡ ಗೆದ್ದ ಬಳಿಕ ಅಭಿಮಾನಿಗಳು ಪರಾಗ್‌ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದೆ ಬಂದಿದ್ದಾರೆ. ಈ ವೇಳೆ ಪರಾಗ್‌ ಸೆಲ್ಫಿ ಕ್ಲಿಕ್ಕಿಸಿ ಮೊಬೈಲ್‌ ಅನ್ನು ನೇರವಾಗಿ ಕೈಯಲ್ಲಿ ನೀಡದೇ ಎಸೆದಿದ್ದಾರೆ. ಇದನ್ನೂ ಓದಿ: ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್‌ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ ಅನಿಕೇತ್‌ ಔಟ್‌

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗುತ್ತಿದೆ. ಮೊಬೈಲ್‌ ಕೈಯಲ್ಲಿ ಕೊಡಬಹುದಿತ್ತು. ಅದನ್ನು ಯಾಕೆ ಎಸೆಯಬೇಕಿತ್ತು? ಇಷ್ಟೊಂದು ಅಹಂಕಾರ ತೋರಿಸುವ ಅಗತ್ಯ ಏನು? ಇಷ್ಟೊಂದು ಧಿಮಾಕು ಇರುವ ರಿಯಾನ್‌ ಪರಾಗ್‌ ಅವರನ್ನು ಐಪಿಎಲ್‌ನಿಂದಲೇ ಬ್ಯಾನ್‌ ಮಾಡಬೇಕು ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕುತ್ತಿದ್ದಾರೆ.

    ಗುವಾಹಟಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 182 ರನ್‌ ಹೊಡೆದಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲಲಿ 8 ವಿಕೆಟ್‌ ನಷ್ಟಕ್ಕೆ 176 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಪರಾಗ್‌ 37 ರನ್‌(28 ಎಸೆತ, 2 ಬೌಂಡರಿ, 2 ಸಿಕ್ಸ್‌) ಹೊಡೆದಿದ್ದರು.

    ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ನಿಧಾನಗತಿಯ ಓವರ್‌ ಎಸೆದಿದ್ದಕ್ಕೆ ನಾಯಕ ರಿಯಾನ್‌ ಪರಾಗ್‌ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.

     

  • ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಜೈಪುರ: ಕ್ರಿಕೆಟ್ ಆಡುವಾಗ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ರಾಜಸ್ತಾನ ರಾಯಲ್ಸ್ (Rajsthan Royals) ತಂಡದ ಆಟಗಾರರಿಗೆ ಕೋಚಿಂಗ್ ನೀಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹಲವು ಆಟಗಾರರು ತಂಡ ಸೇರಿಕೊಂಡಿದ್ದು, ತವರು ಮೈದಾನಗಳಲ್ಲಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಈ ಮಧ್ಯೆ ಕಾಲಿಗೆ ಗಂಭೀರ ಗಾಯ ಮಾಡಿಕೊಂಡು ಎದ್ದು ನಿಲ್ಲಲೂ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿರುವ ರಾಹುಲ್ ದ್ರಾವಿಡ್ ತರಬೇತಿ ಸಲುವಾಗಿ ಮೈದಾನಕ್ಕೆ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    ಮಾತ್ರವಲ್ಲದೇ ಕಾಲಿನ ಗಾಯದ ಹೊರತಾಗಿಯೂ ತಂಡದ ತರಬೇತಿ ಅವಧಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡು ಆಟಗಾರರಿಗೆ ತರಬೇತಿ ಕೂಡ ನೀಡಿದ್ದಾರೆ. ಪ್ರಸ್ತುತ ಸರಿಯಾಗಿ ನಡೆಯಲು ಸಾಧ್ಯವಾಗದ ದ್ರಾವಿಡ್, ಗಾಲ್ಫ್ ಕಾರ್ಟ್‌ನಲ್ಲಿ ಮೈದಾನಕ್ಕೆ ಆಗಮಿಸಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಮಾರ್ಗದರ್ಶನ ನೀಡುತ್ತಾ ಕ್ರಚಸ್ ಸಹಾಯದಿಂದ ನಿಂತಿದ್ದರು. ಇದನ್ನೂ ಓದಿ: ಅಂಬಾನಿ ಮಗನ ಮದುವೆಯಲ್ಲಿ ಡೈಮಂಡ್ ಕಳೆದುಕೊಂಡ ಕಿಮ್ ಕರ್ದಾಶಿಯಾನ್

    ಈ ವಿಡಿಯೋವನ್ನು ರಾಜಸ್ಥಾನ ರಾಯಲ್ಸ್ ತಂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘ಭಾರತದ ಮಾಜಿ ಕೋಚ್ 10 ವರ್ಷಗಳ ನಂತರ ಆರ್‌ಆರ್‌ಗೆ ಮರಳುತ್ತಿದ್ದಾರೆ. ಈ ಹಿಂದೆ ನಾಯಕ ಮತ್ತು ಮಾರ್ಗದರ್ಶಕರಾಗಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಮತ್ತೆ ಕೋಚ್ ಆಗಿ ತಂಡ ಸೇರ್ಪಡೆಯಾಗಿದ್ದಾರೆ’ ಎಂದು ಸಂತಸ ಹಂಚಿಕೊಂಡಿದೆ. ಇದನ್ನೂ ಓದಿ: ಹಾರ್ದಿಕ್‌ ಪಾಂಡ್ಯ ಕಮಾಲ್‌ – ಜಸ್ಟ್‌ 6 ನಿಮಿಷದಲ್ಲಿ ಕೊಹ್ಲಿ ದಾಖಲೆ ಉಡೀಸ್‌

    ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಯಂಗ್ ಲಯನ್ಸ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ವಿಜಯ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಗಾಯಗೊಂಡಿದ್ದರು. ಎಡಗಾಲಿಗೆ ದೊಡ್ಡ ಮಟ್ಟದಲ್ಲೇ ಬ್ಯಾಂಡೇಜ್ ಹಾಕಿದ್ದ ವೈದ್ಯರು ವಿಶ್ರಾಂತಿ ಸೂಚಿಸಿದ್ದರು. ಇದು ಐಪಿಎಲ್ ಆರಂಭದ ಸಮಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಆತಂಕಕ್ಕೂ ಕಾರಣವಾಗಿತ್ತು. ಇದನ್ನೂ ಓದಿ: ತುಂಗಾಭದ್ರಾ ಅಣೆಕಟ್ಟಿನಲ್ಲಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರಿನ ಸದ್ಬಳಕೆಗೆ ಕ್ರಮ: ಡಿ.ಕೆ.ಶಿವಕುಮಾರ್

  • RCB ಗೆದ್ದರೆ ಬಿಕಿನಿ ಫೋಟೋ ಹಂಚಿಕೊಳ್ತೀನಿ ಎಂದಿದ್ದ ಹನಿ ರೋಸ್‌, ಈಗ ಒಡೆದ ಹೃದಯ!

    RCB ಗೆದ್ದರೆ ಬಿಕಿನಿ ಫೋಟೋ ಹಂಚಿಕೊಳ್ತೀನಿ ಎಂದಿದ್ದ ಹನಿ ರೋಸ್‌, ಈಗ ಒಡೆದ ಹೃದಯ!

    ಅಹಮದಾಬಾದ್‌: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಎಲಿಮಿನೇಟರ್-1‌ (Eliminator) ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಗೆದ್ದರೆ, ಬಿಕಿನಿ ಫೋಟೋ ಪೋಸ್ಟ್‌ ಮಾಡುತ್ತೇನೆ ಎಂದು ಹೇಳಿದ್ದ ಸೌತ್‌ನ ಹಾಟ್‌ ಬ್ಯೂಟಿ ಹನಿ ರೋಸ್‌ (Honey Rose) ಈಗ ಒಡೆದ ಹೃದಯದ ಎಮೋಜಿ ಹಂಚಿಕೊಂಡಿದ್ದಾರೆ.

    ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಹನಿ ರೋಸ್‌, ಆರ್‌ಸಿಬಿ ಗೆದ್ದರೆ ನಾನು ಪಂದ್ಯದ ನಂತರ ನನ್ನ ಬಿಕಿನಿ ಚಿತ್ರವನ್ನು ಪೋಸ್ಟ್ ಮಾಡುತ್ತೇನೆ. ʻAAARRRRR CEEEEE BEEEEE!!!!!!!!ʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಆರ್‌ಸಿಬಿ ಪಂದ್ಯದ ಸೋಲಿನ ಬಳಿಕ ʻಆರ್‌ಸಿಬಿ ಎಂಬ ಹೆಸರಿನೊಂದಿಗೆʼ ಮೂರು ಒಡೆದ ಹೃದಯದ ಎಮೋಜಿಯನ್ನ ಹಂಚಿಕೊಂಡಿದ್ದಾರೆ.

    ನಟಿಯ ಪೋಸ್ಟ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ʻಸದ್ಯ ಆ ದೇವರು ನಮ್ಮನ್ನು ಬದುಕಿಸಿದ ಅಂತ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಒಂದೇ ಒಂದು ಫೋಟೋವನ್ನಾದರೂ ಪೋಸ್ಟ್‌ ಅಂತ ಕೇಳಿಕೊಂಡಿದ್ದಾರೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರಾಗಿರುವ ಹಾಟ್‌ ಬ್ಯೂಟಿ ಹನಿ ರೋಸ್‌, ಇವರು ಮಾಡಿದ ಸಿನಿಮಾಗಳಿಗಿಂತ (Honey Rose Cinema) ಇವರ ಹಾಟ್ ಹಾಟ್ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮಾನ್ಸ್ಟರ್‌, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ.

    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ನ ಎಲಿಮಿನೇಟ್‌-1 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 8 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು. 173 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ (Rajasthan Royals) ಇನ್ನು 6 ಎಸೆತ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆದು ಜಯ ಸಾಧಿಸಿತು.

  • ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ನವದೆಹಲಿ: ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ (IPL 2024) ಪಂದ್ಯದ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಬಂಧನ ವಿರೋಧಿಸಿ ಪ್ರತಿಭಟಿಸಿದ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

    ಪಂದ್ಯದ ವೇಳೆ ಆಪ್ (AAP) ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಪ್ರೇಕ್ಷಕರು ಆಟವನ್ನು ಆನಂದಿಸಲು ನಾವು ಪ್ರೋತ್ಸಾಹಿಸುತ್ತೇವೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಇಂತಹ ಘಟನೆಗಳಿಗೆ ಕ್ರೀಡಾಂಗಣದಲ್ಲಿ ಅವಕಾಶ ನೀಡುವುದಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.

    ಅಭಿಮಾನಿಗಳು ಕಂಬಿಯ ಹಿಂದೆ ಕೇಜ್ರಿವಾಲ್ ಅವರ ಫೋಟೋ ಇರುವ ಹಳದಿ ಟೀ ಶರ್ಟ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಕೊನೆಯಲ್ಲಿ ಕಮ್ಮಿನ್ಸ್‌, ಭುವನೇಶ್ವರ್‌ ಮ್ಯಾಜಿಕ್‌ – ಹೈದ್ರಾಬಾದ್‌ಗೆ 1 ರನ್‌ ರೋಚಕ ಜಯ

    ಕೊನೆಯಲ್ಲಿ ಕಮ್ಮಿನ್ಸ್‌, ಭುವನೇಶ್ವರ್‌ ಮ್ಯಾಜಿಕ್‌ – ಹೈದ್ರಾಬಾದ್‌ಗೆ 1 ರನ್‌ ರೋಚಕ ಜಯ

    ಹೈದರಾಬಾದ್‌: ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಮತ್ತು ಭುವನೇಶ್ವರ್‌ ಕುಮಾರ್‌ (Bhuvneshwar Kumar) ಅವರ ಮ್ಯಾಜಿಕ್‌ ಬೌಲಿಂಗ್‌ನಿಂದಾಗಿ  ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) 1 ರನ್‌ಗಳ ರೋಚಕ ಜಯ ದಾಖಲಿಸಿದೆ.

    ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 3 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಕೊನೆಯವರೆಗೆ ಹೋರಾಡಿತ್ತು. ಅಂತಿಮವಾಗಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿ ಸೋತಿತು.

    ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್‌ ಗೆಲ್ಲಲು 45 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 3 ರನ್‌, 17 ನೇ ಓವರ್‌ನಲ್ಲಿ 15 ರನ್‌, 18ನೇ ಓವರ್‌ನಲ್ಲಿ 7 ರನ್‌ ಬಂತು. 19ನೇ ಓವರ್‌ ಎಸೆದ ಕಮ್ಮಿನ್ಸ್‌ ಕೇವಲ 7 ರನ್‌ ನೀಡಿ ನಿಯಂತ್ರಿಸಿದರು.

    ಭುವನೇಶ್ವರ್‌ ಎಸೆದ ಕೊನೆಯ ಓವರ್‌ನಲ್ಲಿ ಒಂದು ಬೌಂಡರಿ ಸೇರಿದಂತೆ 11 ರನ್‌ ಬಂತು. ಕೊನೆಯ ಎಸೆತದಲ್ಲಿ ಎರಡು ರನ್‌ ಬೇಕಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ ಬಾಲ್‌ ಬ್ಯಾಟ್‌ಗೆ ತಾಗದೇ ಪೊವೆಲ್‌ ಪ್ಯಾಡ್‌ಗೆ ತಾಗಿ ಎಲ್‌ಬಿ ಔಟಾದ ಪರಿಣಾಮ ರಾಜಸ್ಥಾನ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.

    ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್‌ 67 ರನ್‌ (40 ಎಸೆತ, 7 ಬೌಂಡರಿ, 2 ಸಿಕ್ಸರ್‌) ರಿಯಾನ್‌ ಪರಾಗ್‌ 77 ರನ್‌ ( 49 ಎಸೆತ,8 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು. ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಪಡೆದರೆ, ಪ್ಯಾಟ್‌ ಕಮ್ಮಿನ್ಸ್‌ ಮತ್ತು ನಟರಾಜನ್‌ ತಲಾ 2 ವಿಕೆಟ್‌ ಪಡೆದರು.

    ಹೈದರಾಬಾದ್‌ ಪರ ಟ್ರಾವಿಸ್‌ ಹೆಡ್‌ 58 ರನ್‌ (44 ಎಸೆತ, 6 ಬೌಂಡರಿ, 3 ಸಿಕ್ಸರ್‌), ನಿತೀಶ್‌ ಕುಮಾರ್‌ ರೆಡ್ಡಿ ಔಟಾಗದೇ 76 ರನ್(42‌ ಎಸೆತ, 3 ಬೌಂಡರಿ, 8 ಸಿಕ್ಸರ್‌), ಕ್ಲಾಸನ್‌ ಔಟಾಗದೇ 42 ರನ್‌ (19 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದರು.

  • ಜೈಸ್ವಾಲ್‌ ಶತಕ – ಮಳೆಗೆ ಕೊಚ್ಚಿ ಹೋದ ಮುಂಬೈ, ರಾಜಸ್ಥಾನಕ್ಕೆ ಭರ್ಜರಿ ಜಯ

    ಜೈಸ್ವಾಲ್‌ ಶತಕ – ಮಳೆಗೆ ಕೊಚ್ಚಿ ಹೋದ ಮುಂಬೈ, ರಾಜಸ್ಥಾನಕ್ಕೆ ಭರ್ಜರಿ ಜಯ

    ಜೈಪುರ: ಸಂದೀಪ್‌ ಶರ್ಮಾ (Sandeep Sharma) ಅವರ ಅತ್ಯುತ್ತಮ ಬೌಲಿಂಗ್‌ ಮತ್ತು ಯಶಸ್ವಿ ಜೈಸ್ವಾಲ್‌ (Yashasvi Jaiswal) ಅವರ ಸ್ಫೋಟಕ ಶತಕದಿಂದಾಗಿ ರಾಜಸ್ಥಾನ ರಾಯಲ್ಸ್‌ (Rajasthan Royals) ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 180 ರನ್‌ಗಳ ಗುರಿಯನ್ನು ಪಡೆದ ರಾಜಸ್ಥಾನ ಇನ್ನೂ 8 ಎಸೆತ ಬಾಕಿ ಇರುವಂತೆಯೇ 183 ರನ್‌ ಹೊಡೆದು ಜಯಗಳಿಸಿತು.

    ಜೋಸ್‌ ಬಟ್ಲರ್‌ ಮತ್ತು ಯಶಸ್ವಿ ಜೈಸ್ವಾಲ್‌ 74 ರನ್‌ಗಳ ಜೊತೆಯಾಟವಾಡಿ ಆರಂಭಿಕ ಮುನ್ನಡೆ ನೀಡಿದರು. ಬಟ್ಲರ್‌ 35 ರನ್‌(25 ಎಸೆತ, 6 ಬೌಂಡರಿ) ಹೊಡೆದು ಔಟಾದರು. ನಂತರ ಯಶಸ್ವಿ ಜೈಸ್ವಾಲ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ ಮುರಿಯದ ಎರಡನೇ ವಿಕೆಟಿಗೆ 65 ಎಸೆತಗಳಲ್ಲಿ 109 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಪಂದ್ಯದ ಮಧ್ಯೆ ಮಳೆ ಬಂದರೂ ರಾಜಸ್ಥಾನಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ. ಅಂತಿಮವಾಗಿ ಜೈಸ್ವಾಲ್‌ ಔಟಾಗದೇ 104 ರನ್‌(60 ಎಸೆತ, 9 ಬೌಂಡರಿ, 7 ಸಿಕ್ಸರ್‌) ಸಿಡಿಸಿ ಈ ಐಪಿಎಲ್‌ನಲ್ಲಿ ಎರಡನೇ ಶತಕ ಸಿಡಿಸಿದರು. ಜೈಸ್ವಾಲ್‌ಗೆ ಉತ್ತಮ ಸಾಥ್‌ ನೀಡಿದ ಸ್ಯಾಮ್ಸನ್‌ ಔಟಾಗದೇ 38 ರನ್‌ (28 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮುಂಬೈ 52 ರನ್‌ಗಳಿರುಷ್ಟವರಲ್ಲಿ ಪ್ರಮಖ 4 ವಿಕೆಟ್‌ ಕಳೆದುಕೊಂಡಿತ್ತು. ವಡೇರಾ ಮತ್ತು ತಿಲಕ್‌ ವರ್ಮಾ 5ನೇ ವಿಕೆಟಿಗೆ 52 ಎಸೆತಗಳಲ್ಲಿ 99 ರನ್‌ ಜೊತೆಯಾಟವಾಡಿದರು. ಆದರೆ 28 ರನ್‌ ಗಳಿಸುವಷ್ಟರಲ್ಲಿ ಕೊನೆಯ 5 ವಿಕೆಟ್‌ ಕಳೆದುಕೊಂಡ ಪರಿಣಾಮ ಮುಂಬೈ 9 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿತು.

    ರಾಜಸ್ಥಾನ ಪರ ಸಂದೀಪ್‌ ಶರ್ಮಾ 18 ರನ್‌ ನೀಡಿ 5 ವಿಕೆಟ್‌ ಕಿತ್ತರೆ ಟ್ರೆಂಟ್‌ ಬೌಲ್ಟ್‌ 2 ವಿಕೆಟ್‌ ಪಡೆದರು.

  • ಕೊನೆಯ ಓವರ್‌ನಲ್ಲಿ 2 ಸಿಕ್ಸ್‌ – ರಾಯಲ್ಸ್‌ಗೆ ರೋಚಕ 3 ವಿಕೆಟ್‌ಗಳ ಜಯ

    ಕೊನೆಯ ಓವರ್‌ನಲ್ಲಿ 2 ಸಿಕ್ಸ್‌ – ರಾಯಲ್ಸ್‌ಗೆ ರೋಚಕ 3 ವಿಕೆಟ್‌ಗಳ ಜಯ

    ಮುಲ್ಲನಪುರ: ಬೌಲಿಂಗ್‌, ಬ್ಯಾಟಿಂಗ್‌ ಪಡೆ ಉತ್ತಮವಾಗಿದ್ದರೆ ತಂಡ ನಿರಂತರ ಜಯ ಸಾಧಿಸುತ್ತದೆ ಎನ್ನುವುದಕ್ಕೆ ರಾಜಸ್ಥಾನ ತಂಡವೇ ಸಾಕ್ಷಿ. ಪಂಜಾಬ್‌ ಕಿಂಗ್ಸ್‌ ಭಾರೀ ಪೈಪೋಟಿ ನೀಡಿದ್ದರೂ ರಾಜಸ್ಥಾನ ರೋಚಕ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 148 ರನ್‌ಗಳ ಸವಾಲನ್ನು ಪಡೆದ ರಾಜಸ್ಥಾನ ಇನ್ನೂ 1 ಬಾಲ್‌ ಇರುವಂತೆಯೂ 7 ವಿಕೆಟ್‌ ನಷ್ಟಕ್ಕೆ 152 ರನ್‌ ಹೊಡೆದು ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲುವ ಮೂಲಕ 10 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು.  ಇದನ್ನೂ ಓದಿ: ಅಂಬೇಡ್ಕರ್‌ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಕೊನೆಯ 3 ಓವರ್‌ಗಳಲ್ಲಿ ರಾಜಸ್ಥಾನ ಗೆಲ್ಲು 34 ರನ್‌ ಬೇಕಿತ್ತು. ಹರ್ಷಲ್‌ ಪಟೇಲ್‌ ಎಸೆದ 18ನೇ ಓವರ್‌ನಲ್ಲಿ 14 ರನ್‌ ಬಂದರೆ ಕರ್ರನ್‌ ಎಸೆತ 19ನೇ ಓವರ್‌ನಲ್ಲಿ 10 ರನ್‌ ಬಂದರೂ 2 ವಿಕೆಟ್‌ ಕಳೆದುಕೊಂಡಿತ್ತು.

    ಕೊನೆಯ ಓವರ್‌ನಲ್ಲಿ 10 ರನ್‌ ಬೇಕಿತ್ತು. ಅರ್ಶ್‌ದೀಪ್‌ ಎಸೆದ ಮೊದಲ 2 ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಹೇಟ್ಮೇಯರ್‌ ಸಿಕ್ಸ್‌ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಾಲ್ಕನೇ ಎಸೆತದಲ್ಲಿ ಕರ್ರನ್‌ ಮಿಸ್‌ ಫಿಲ್ಡ್‌ ಮಾಡಿದ ಕಾರಣ 2 ರನ್‌ ಬಂತು. ಐದನೇ ಎಸೆತದಲ್ಲಿ ಹೇಟ್ಮೇಯರ್‌ ಸಿಕ್ಸ್‌ ಸಿಡಿಸಿ ತಂಡಕ್ಕೆ ಐದನೇ ಗೆಲುವು ತಂದುಕೊಟ್ಟರು.  ಇದನ್ನೂ ಓದಿ: ಈ ಬಾರಿ ಮೋದಿ ಗರಿಷ್ಠ 214-240 ಸ್ಥಾನ ಗೆಲ್ಲಬಹುದು: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

     

    ಹೇಟ್ಮೇಯರ್‌ ಔಟಾಗದೇ 27 ರನ್‌(10 ಎಸೆತ,1 ಬೌಂಡರಿ, 3 ಸಿಕ್ಸ್‌), ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 39 ರನ್‌, ತನುಶ್‌ ಕೋಟ್ಯಾನ್‌ 24 ರನ್‌, ನಾಯಕ ಸಂಜು ಸ್ಯಾಮ್ಸನ್‌ 23 ರನ್‌ ಹೊಡೆದು ಔಟಾದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 52 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ವಿಕೇಟ್‌ ಉರುಳುತ್ತಿದ್ದರೂ ಜಿತೇಶ್‌ ಶರ್ಮಾ 29 ರನ್‌(24 ಎಸೆತ, 1 ಬೌಂಡರಿ, 2 ಸಿಕ್ಸರ್)‌, ಕೊನೆಯಲ್ಲಿ ಅಶುತೋಶ್‌ ಶರ್ಮಾ ಸ್ಫೋಟಕ 31 ರನ್‌ (16 ಎಸೆತ, 1 ಬೌಂಡರಿ, 3 ಸಿಕ್ಸ್‌) ಸಿಡಿಸಿದ ಪರಿಣಾಮ ತಂಡ 140 ರನ್‌ಗಳ ಗಡಿ ದಾಟಿತು.