Tag: ರಾಜಸ್ಥಾನ್

  • ರಾಜಸ್ಥಾನದ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ಮೀನಾ ರಾಜೀನಾಮೆ

    ರಾಜಸ್ಥಾನದ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ಮೀನಾ ರಾಜೀನಾಮೆ

    ಜೈಪುರ: ಬಿಜೆಪಿ (BJP) ನಾಯಕ ಕಿರೋಡಿ ಲಾಲ್ ಮೀನಾ (Kirodi Lal Meena) ಅವರು ರಾಜಸ್ಥಾನ (Rajasthan) ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷವು ತನ್ನ ಉಸ್ತುವಾರಿಯ ಕ್ಷೇತ್ರಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

    ಕಿರೋಡಿ ಮೀನಾ ಅವರು 10 ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ಕೃಷಿ, ಗ್ರಾಮೀಣಾಭಿವೃದ್ಧಿ, ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವರಾಗಿ ಕ್ಯಾಬಿನೆಟ್ ಖಾತೆಯನ್ನು ಹೊಂದಿದ್ದ ಮೀನಾ ಅವರು, ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದ ಏಳು ಸ್ಥಾನಗಳಲ್ಲಿ ಬಿಜೆಪಿ ಸೋತರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಾಗ್ದಾನ ಮಾಡಿದ್ದರು.

    ಪೂರ್ವ ರಾಜಸ್ಥಾನದ ದೌಸಾ, ಭರತ್‌ಪುರ, ಧೋಲ್‌ಪುರ್, ಕರೌಲಿ, ಅಲ್ವಾರ್, ಟೋಂಕ್-ಸವಾಯಿ ಮಾಧೋಪುರ್ ಮತ್ತು ಕೋಟಾ-ಬುಂಡಿಯಲ್ಲಿ ಪ್ರಚಾರ ಮಾಡಿದ್ದರು. ಈ ಪೈಕಿ ಕೋಟಾ ಮತ್ತು ಅಲ್ವಾರ್ ಲೋಕಸಭಾ ಸ್ಥಾನಗಳನ್ನು ಮಾತ್ರ ಬಿಜೆಪಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದನ್ನೂ ಓದಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಹೆಚ್‍ಡಿಕೆಗೆ ಸ್ಥಾನ

  • ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

    ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

    ಜೈಪುರ್: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ಭಾರೀ ಹಿನ್ನಡೆಯಾಗಿದೆ. ಬರೋಬ್ಬರಿ 400 ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮೂಲಗಳು ತಿಳಿಸಿವೆ.

    ನಾಗೌರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ನಾಗೌರ್ ಸಂಸದ ಮತ್ತು ಆರ್‌ಎಲ್‌ಪಿ ಮುಖ್ಯಸ್ಥ ಹನುಮಾನ್ ಬೇನಿವಾಲ್ ಅವರನ್ನು ಕಾಂಗ್ರೆಸ್ ಇಲ್ಲಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಏತನ್ಮಧ್ಯೆ, ಬೆನಿವಾಲ್ ನೀಡಿದ ದೂರು ಹಾಗೂ ನಾಗೌರ್‌ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಪರವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು.

    ಮಾಜಿ ಶಾಸಕ ಭರರಾಮ್, ಕುಚೇರಾ ಪುರಸಭೆ ಅಧ್ಯಕ್ಷ ತೇಜ್ಪಾಲ್ ಮಿರ್ಧಾ ಮತ್ತು ಸುಖರಾಮ್ ದೊಡ್ವಾಡಿಯಾ ಸೇರಿದಂತೆ ಈ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿದ್ದು, ನಾಗೌರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

    ಅಮಾನತುಗೊಳಿಸಿರುವುದನ್ನು ವಿರೋಧಿಸಿ ಮೂವರು ಕಾಂಗ್ರೆಸ್ ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೇ ವೇಳೆ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ತೇಜ್‌ಪಾಲ್‌ ಮಿರ್ಧಾ, ವಿಧಾನಸಭಾ ಚುನಾವಣೆ ವೇಳೆ ನಾಗೌರ್‌ನಲ್ಲಿ ಕಾಂಗ್ರೆಸ್‌ ಪ್ರಬಲ ಸ್ಥಾನದಲ್ಲಿತ್ತು. ಎಂಟರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿಯೂ ಅದರ ಸ್ಥಾನ ಅಷ್ಟೇ ಬಲವಾಗಿತ್ತು. ಹೀಗಿದ್ದರೂ, RLP ಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಲಾಯಿತು ಎಂದು ಪ್ರಶ್ನಿಸಿದ್ದರು.

    ಹನುಮಾನ್ ಬೇನಿವಾಲ್ ನಾಗೌರ್‌ನಲ್ಲಿ ಕಾಂಗ್ರೆಸ್ ಅನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಸಾಧನವಿದ್ದಂತೆ. ಅಂತಹ ವ್ಯಕ್ತಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಸಾಮೂಹಿಕ ರಾಜೀನಾಮೆ ಪತ್ರವನ್ನು ನೀಡುತ್ತಿದ್ದೇವೆ ಎಂದು ಮಿರ್ಧಾ ಸ್ಪಷ್ಟಪಡಿಸಿದ್ದಾರೆ.

  • ರಾಮಮಂದಿರದ ಜೊತೆಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ ಆಗಬೇಕು: ಯೋಗಿ ಕರೆ

    ರಾಮಮಂದಿರದ ಜೊತೆಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ ಆಗಬೇಕು: ಯೋಗಿ ಕರೆ

    ಜೈಪುರ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣದ ಜೊತೆಗೆ ಅಪವಿತ್ರಗೊಂಡಿರುವ ಧಾರ್ಮಿಕ ಸ್ಥಳಗಳ (Religious Places) ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಆರಂಭಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಕರೆ ನೀಡಿದ್ದಾರೆ.

    ರಾಜಸ್ಥಾನದಲ್ಲಿರುವ (Rajasthan) ನೀಲಕಂಠ ಮಹಾದೇವ ದೇವಸ್ಥಾನದಲ್ಲಿ (Neelkanth Mahadev Temple) ನಡೆದ `ಮೂರ್ತಿ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳನ್ನು ಪುನರ್ ಸ್ಥಾಪಿಸುವಂತೆ ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

    `ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಈ ಹಿಂದೆ ನಮ್ಮ ಧಾರ್ಮಿಕ ಸ್ಥಳಗಳನ್ನ ಅಪವಿತ್ರಗೊಳಿಸಿದ್ದಾರೆ. ಆದ್ರೆ 500 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರಿಶ್ರಮದೊಂದಿಗೆ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದಕ್ಕೆ ಭಕ್ತರ ಕೊಡುಗೆ ಅಪಾರವಾಗಿದೆ. ಇದರೊಂದಿಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಶುರು ಮಾಡಬೇಕು ಎಂದು ಕರೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಇಡೀ ದೇಶ ವಾಸಿಗಳು ತಮ್ಮ ಪರಂಪರೆಯನ್ನು ಗೌರವಿಸಿ, ಉಳಿಸುವಂತೆ ಮಾಡುವ ಪ್ರತಿಜ್ಞೆ ಮಾಡಿದ್ದರು. ಅದಕ್ಕೆ 1,400 ವರ್ಷಗಳ ನಂತರ ಭಗವಾನ್ ನೀಲಕಂಠ ದೇವಾಲಯದ ಪುನರ್ ಸ್ಥಾಪನೆಯು ಉದಾಹರಣೆಯಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ರಾಜಸ್ಥಾನದ ಭೂಮಿ ಧರ್ಮ, ಕರ್ಮ, ಭಕ್ತಿ ಮತ್ತು ಶಕ್ತಿ, ಸಮನ್ವಯದ ಕೇಂದ್ರ ಬಿಂದು. ನೀವು ಧರ್ಮದ ನೈಜ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ರಾಜಸ್ಥಾನಕ್ಕೆ ಬರುವುದು ಅವಶ್ಯಕ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ

    ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ

    ಜೈಪುರ: ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ತಮ್ಮನ್ನು ಬೆಂಬಲಿಸಿ ಮತ ನೀಡುವಂತೆ ಕೈಮುಗಿದು ಬೇಡಿಕೊಳ್ತಾರೆ, ಕಾಲಿಗೂ ಬೀಳುತ್ತಾರೆ. ಇದರಲ್ಲಿ ಹೊಸತೇನೂ ಇರುವುದಿಲ್ಲ. ಆದರೆ ಇಲ್ಲೊಬ್ಬ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಗೆ ಮತ ಕೇಳಲು ವಿನೂತನ ಪ್ರಯತ್ನ ಮಾಡಿದ್ದಾನೆ.

    ಮತದಾನಕ್ಕೂ ಮುನ್ನ ರಸ್ತೆಯಲ್ಲೇ ಯುವತಿಯರನ್ನ ತಡೆದು ನಿಲ್ಲಿಸಿ ಅವರ ಕಾಲಿಗೆ ಬೀಳುತ್ತಾ ನನಗೆ ವೋಟು ಕೊಡಿ ಎಂದು ಅಂಗಲಾಚಿದ್ದಾನೆ. ಯುವಕ ಕಾಲಿಗೆ ಬೀಳುತ್ತಿರುವುದಕ್ಕೆ ಯುವತಿಯರು ನಾಚಿ ನೀರಾಗಿದ್ದರು. ಹೀಗೆಲ್ಲಾ ಮಾಡ್ಬೇಡಿ ಎನ್ನುತ್ತಾ ಕಾಲ್ಕಿತ್ತಿದ್ದರು. ಸದ್ಯ ಯುವಕ ಕಾಲಿಗೆ ಬೀದಿದ್ದ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ರಾಜಸ್ಥಾನದ ಬರಾನ್‌ನ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಯುವಕ ರಸ್ತೆಯಲ್ಲೇ ಯುವತಿಯರನ್ನು ತಡೆದು ನಿಲ್ಲಿಸಿ ಒಬ್ಬೊಬ್ಬರಿಗೂ ಕಾಲಿಗೆ ಬಿದ್ದು, ಮತ ಕೊಡಿ ಎಂದು ಕೇಳಿದ್ದಾನೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನ ಬಂಧಿಸಿದ ಬಿಎಸ್‌ಎಫ್‌

    ಅಂದಹಾಗೆ ಸಂಘದ ಚುನಾವಣೆ ನಿನ್ನೆ (ಶುಕ್ರವಾರ) ನಡೆದಿದೆ. ಇಂದು ಎಣಿಕೆ ನಡೆಯುತ್ತಿದ್ದು, ಸಂಜೆಯ ವೇಳೆ ಫಲಿತಾಂಶ ಹೊರಬೀಳಲಿದೆ. ಆದರೆ ಮತದಾನಕ್ಕೂ ಮುನ್ನ ಯುವಕರು ಪರಿಪರಿಯಾಗಿ ಬೇಡಿಕೊಂಡಿದ್ದ ವೀಡಿಯೋ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ CPI ಆಂಜಪ್ಪ ಅಮಾನತು

    ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ CPI ಆಂಜಪ್ಪ ಅಮಾನತು

    ಕೋಲಾರ/ಜೈಪುರ: ಜೈಸಿಂಗ್‌ಪುರ ಖೋರ್ ಪ್ರದೇಶದಲ್ಲಿ ನಡೆದ ಜೂಟಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ CPI ಆಂಜಪ್ಪನನ್ನು ಅಮಾನತು ಮಾಡಲಾಗಿದೆ.

    ಆಂಜಪ್ಪನನ್ನು ಅಮಾನತು ಮಾಡಿರುವುದಾಗಿ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಆದೇಶಿಸಿದ್ದಾರೆ ಎಂದು ಕೋಲಾರದ ಎಸ್‌ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 8 ತಿಂಗಳ ಗರ್ಭಿಣಿಯನ್ನು ಒದ್ದ ಟಿಎಂಸಿ ಶಾಸಕನ ಬೆಂಬಲಿಗರು

    ಜೈಪುರದ ಜೈಸಿಂಗ್‌ಪುರ ಖೋರ್ ಪ್ರದೇಶದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಅಕ್ರಮ ಜೂಜಾಟದಲ್ಲಿ ತೊಡಗಿದ್ದ 13 ಮಹಿಳೆಯರು ಸೇರಿದಂತೆ 84 ಮಂದಿಯನ್ನು ನಿನ್ನೆ ಬಂಧಿಸಲಾಗಿದೆ. ಇದರಲ್ಲಿ ಕೋಲಾರದ CPI ಆಂಜಪ್ಪ, ಬೆಂಗಳೂರು ಗ್ರಾಮಾಂತರ ಸಬ್ ರಿಜಿಸ್ಟರ್ ಶ್ರೀನಾಥ್, ತೆರಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ಕೆ.ಎನ್.ರಮೇಶ್, ಬಿಜೆಪಿ ಮುಖಂಡ ರಾಜೇಶ್ ಹಾಗೂ ವ್ಯಾಪಾರಿ ಸುಧಾಕರ್ ಸೇರಿ ಕರ್ನಾಟಕದ 7 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    ಜೈಪುರ ಪೊಲೀಸರ ತಂಡ ಶನಿವಾರ ರಾತ್ರಿ ಆರೋಪಿಗಳು ಜೂಜಾಡುತ್ತಿದ್ದ ಸಾಯಿಪುರ ಬಾಗ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ. 9 ಹುಕ್ಕಾ, ಐಎಂಎಫ್‌ಎಲ್‌ನ 44 ಬಾಟಲಿಗಳು, 66 ಬಿಯರ್ ಬಾಟಲಿಗಳು, 14 ಐಷಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜೈಪುರ ಪೊಲೀಸ್ ಹೆಚ್ಚುವರಿ ಆಯುಕ್ತ ಅಜಯ್‌ಪಾಲ್ ಲಂಬಾ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ

    ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ

    ನವದೆಹಲಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟಕ್ಕ್ರೆ ಹಣ ಬರುವುದಿಲ್ಲ ಎಂಬ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಹೇಳಿಕೆ ವಿವಾದಕ್ಕೆ ಸಿಲುಕಿದೆ.

    ಮುಂಬೈನ ಅಂಧೇರಿಯಲ್ಲಿ ಶುಕ್ರವಾರ ನಡೆದ ದಿವಂಗತ ಶಾಂತಿದೇವಿ ಚಂಪಲಾಲ್ಜಿ ಕೊಠಾರಿ ಅವರ ಹೆಸರನ್ನು ಚೌಕ್‍ಗೆ ಹೆಸರಿಸುವ ಕಾರ್ಯಕ್ರಮಕ್ಕೆ ಕೋಶಿಯಾರಿ ಅವರು ಅಗಮಿಸಿದ್ದರು. ಈ ವೇಳೆ ಭಾಷಣ ಮಾಡಿದ ಅವರು, ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಓಡಿಸಿದ್ರೆ, ರಾಜ್ಯದಲ್ಲಿ ಹಣ ಉಳಿಯುವುದಿಲ್ಲ. ಅದು ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂದಿದ್ದರು. ಇದನ್ನೂ ಓದಿ: ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ 

    ಕೋಶಿಯಾರಿ ಅವರು ಮಾರ್ವಾಡಿ ಮತ್ತು ಗುಜರಾತಿ ಸಮುದಾಯವನ್ನು ಶ್ಲಾಘಿಸಿದ್ದು, ಅವರು ಎಲ್ಲಿಗೆ ಹೋದರೂ ಆಸ್ಪತ್ರೆಗಳು, ಶಾಲೆಗಳು ಇತ್ಯಾದಿಗಳನ್ನು ರಚಿಸುವ ಮೂಲಕ ಸ್ಥಳದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹೇಳಿಕೆ ವಿರೋಧಿಸಿದ ಶಿವಸೇನೆ ಮತ್ತು ಕಾಂಗ್ರೆಸ್‍ನ ಹಲವಾರು ನಾಯಕರು ಕೋಶಿಯಾರಿ ಅವರನ್ನು ಟೀಕಿಸಿದ್ದಾರೆ. ಕಷ್ಟಪಟ್ಟು ದುಡಿಯುವ ಮರಾಠಿ ಜನರನ್ನು ರಾಜ್ಯಪಾಲರು ಅವಮಾನಿಸಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಖಂಡಿಸಿದ್ದಾರೆ. ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ, ಮರಾಠಿಗರಿಗೆ ಅವಮಾನವಾಗುತ್ತಿದೆ ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ 

    ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಸಚಿನ್ ಸಾವಂತ್ ಕೂಡ ಈ ಕೋಶಿಯಾರಿ ಅವರ ಭಾಷಣದ ವೀಡಿಯೋವನ್ನು ಟ್ವೀಟ್ ಮಾಡಿ ರಾಜ್ಯಪಾಲರು ಈ ಹೇಳಿಕೆ ನೀಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಲೆಯಿಂದ ಹೊರಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ಬಾಲಕ!

    ಶಾಲೆಯಿಂದ ಹೊರಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ಬಾಲಕ!

    ಜೈಪುರ್: ಶಾಲೆಯಿಂದ ಹೊರ ಹಾಕಿದ್ದಕ್ಕೆ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲ್ಲಲು ಯತ್ನಿಸಿದ 15 ವರ್ಷ ವಯಸ್ಸಿನ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜಸ್ಥಾನ್‌ನಲ್ಲಿ ನಡೆದಿದೆ.

    ಒಂದು ವರ್ಷದ ಹಿಂದೆ ಆರೋಪಿ ಬಾಲಕ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ನಂತರ ಈತನನ್ನು ಶಾಲೆಯಿಂದ ಹೊರ ಹಾಕಲಾಗಿತ್ತು. ಅದಾದ ಬಳಿಕ ಈ ಬಾಲಕ ನಿತ್ಯ ಶಾಲೆಯಿಂದ ತನ್ನ ಸಂಬಂಧಿ ಹುಡುಗನನ್ನು ಕರೆದುಕೊಂಡು ಹೋಗಲು ಬರುತ್ತಿದ್ದ. ಈ ವೇಳೆ ಪ್ರಾಂಶುಪಾಲ ಭಗವಾನ್‌ ತ್ಯಾಗಿ ಅವರ ಕೊಠಡಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ

    ಒಮ್ಮೆ ಪ್ರಾಂಶುಪಾಲರ ಕೊಠಡಿಗೆ ಹೋಗಿ ಗನ್‌ನಿಂದ ಶೂಟ್‌ ಮಾಡಿ ಅವರನ್ನು ಕೊಲ್ಲಲು ಯತ್ನಿಸಿದ್ದಾನೆ. ಆದರೆ ಗನ್‌ನಿಂದ ಗುಂಡು ಹಾರಿಲ್ಲ. ಈ ವೇಳೆ ಶಾಲಾ ಸಿಬ್ಬಂದಿ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    POLICE JEEP

    ಬಾಲ ನ್ಯಾಯ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಫೋನ್‍ನಲ್ಲಿ ಆಧಾರ್ ಕಾರ್ಡ್ ಡೌನ್‍ಲೋಡ್ ಮಾಡುವುದು ಹೇಗೆ?

  • ಬಟ್ಲರ್ ಸ್ಫೋಟಕ ಶತಕದಾಟ – ರಾಯಲ್ಸ್ ಗೆ 55 ರನ್‍ಗಳ ಜಯ

    ಬಟ್ಲರ್ ಸ್ಫೋಟಕ ಶತಕದಾಟ – ರಾಯಲ್ಸ್ ಗೆ 55 ರನ್‍ಗಳ ಜಯ

    ಡೆಲ್ಲಿ: ಬಟ್ಲರ್ ಬಿರುಗಾಳಿ ಬ್ಯಾಟಿಂಗ್, ಮುಸ್ತುಫಿಸರ್ ರೆಹಮಾನ್ ಮತ್ತು ಕ್ರೀಸ್ ಮೋರಿಸ್ ಮಾರಕ ದಾಳಿಗೆ ನಲುಗಿದ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ತಂಡಕ್ಕೆ ಶರಣಾಗಿದೆ.

    ಗೆಲ್ಲಲು 221 ರನ್‍ಗಳ ಬೃಹತ್ ಮೊತ್ತ ಗುರಿ ಪಡೆದ ಹೈದರಾಬಾದ್ ತಂಡ 20 ಓವರ್‍ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರಾಜಸ್ಥಾನ ತಂಡ 55 ರನ್ ಗಳ ಜಯ ಗಳಿಸಿತು.

    ರಾಜಸ್ಥಾನ್ ಪರ ಮಾರಕದಾಳಿ ನಡೆಸಿದ ಮುಸ್ತುಫಿಸರ್ ರೆಹಮಾನ್ ಮತ್ತು ಕ್ರೀಸ್ ಮೋರಿಸ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಹೈದರಾಬಾದ್‍ಗೆ ಮುಳುವಾದರು.

    ಹೈದರಾಬಾದ್ ಪರ ಆರಂಭಿಕ ಆಟಗಾರರಾದ ಮನೀಶ್ ಪಾಂಡೆ 31ರನ್(20 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಜಾನಿ ಬೈರ್‍ಸ್ಟೋವ್ 30ರನ್(21 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದನ್ನು ಹೊರತು ಪಡಿಸಿದರೆ ಬೇರೆ ಯಾರು ಕೂಡ ಹೈದಾರಾಬಾದ್ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ನೆರವಾಗಲಿಲ್ಲ. ಮಧ್ಯಮಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ 20 ರನ್ (21 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ಇವರೊಂದಿಗೆ ಕೇದರ್ ಜಾದವ್ 19 ರನ್(19 ಎಸೆತ, 1 ಸಿಕ್ಸ್) ಸಿಡಿಸಿ ಔಟ್ ಆದರು. ಬಳಿಕ ಕುಸಿತ ಕಂಡ ಹೈದರಾಬಾದ್ ತಂಡ ಅಂತಿಮವಾಗಿ 55ರನ್‍ಗಳ ಅಂತರದಿಂದ ಸೋಲು ಕಂಡಿತು.

    ಬಟ್ಲರ್ ಸ್ಪೋಟಕ ಇನ್ನಿಂಗ್ಸ್
    ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಹೊಡಿಬಡಿ ಬ್ಯಾಟಿಂಗ್ ಮೂಲಕ ಹೈದರಾಬಾದ್ ತಂಡದ ಬೌಲರ್‍ಗಳನ್ನು ಚೆಂಡಾಡಿದರು. ಭರ್ಜರಿ ಶತಕ ಸಿಡಿಸಿ ಮೆರೆದಾಡಿದ ಬಟ್ಲರ್ 124 ರನ್(64 ಎಸೆತ, 11 ಬೌಂಡರಿ, 8 ಸಿಕ್ಸ್) ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸ್ ನ್ 48 ರನ್(33 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ, ಬಟ್ಲರ್ ಜೊತೆ ಎರಡನೇ ವಿಕೆಟ್‍ಗೆ 150ರನ್(88 ಎಸೆತ) ಜೊತೆಯಾಟವಾಡಿ ಔಟ್ ಆದರು.

    ಕೊನೆಯಲ್ಲಿ ರಾಜಸ್ಥಾನ್ ಪರ ರಿಯಾನ್ ಪಾರಾಗ್ 15 ರನ್(8 ಎಸೆತ, 1 ಸಿಕ್ಸ್) ಮತ್ತು ಡೇವಿಡ್ ಮಿಲ್ಲರ್ 7 ರನ್ (3 ಎಸೆತ, 1 ಸಿಕ್ಸ್) ಸಿಡಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು. 20 ಓವರ್‍ ಗಳ ಮುಕ್ತಾಯಕ್ಕೆ ರಾಜಸ್ಥಾನ ತಂಡ 3 ವಿಕೆಟ್ ಕಳೆದುಕೊಂಡು 220 ರನ್ ಮಾಡಿತು.

    ರನ್ ಏರಿದ್ದು ಹೇಗೆ?
    50 ರನ್ – 38 ಎಸೆತ
    100 ರನ್ – 75 ಎಸೆತ
    150 ರನ್ – 91 ಎಸೆತ
    220 ರನ್ – 120 ಎಸೆತ

  • ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಕತ್ತು ಸೀಳಿ ಬರ್ಬರ ಹತ್ಯೆ

    ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಕತ್ತು ಸೀಳಿ ಬರ್ಬರ ಹತ್ಯೆ

    ಜೈಪುರ: ಹಾಡಹಗಲೇ ಬಿಜೆಪಿ ಕಾರ್ಯಕರ್ತನನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಪ್ರತಾಪ್‍ಗಢದಲ್ಲಿ ಶನಿವಾರ ನಡೆದಿದೆ. ಇದರಿಂದ ರಾಜ್ಯಾದ್ಯಂತ ಆತಂಕ ಸೃಷ್ಠಿಯಾಗಿದೆ.

    ಸಾಮ್ರಾತ್ ಕುಮ್ವತ್ ಮೃತ ದುರ್ದೈವಿ. ರಸ್ತೆ ಬದಿಯಲ್ಲಿ ನಿಂತಿದ್ದ ಸಾಮ್ರಾತ್‍ನ್ನನ್ನ ಬೈಕ್‍ನಲ್ಲಿ ಬಂದ ಮೂರ್ನಾಲ್ಕು ದುಷ್ಕರ್ಮಿಗಳು ಮೊದಲು ಗುಂಡಿನ ದಾಳಿ ನಡೆಸಿ ನಂತರ ಕತ್ತಿಯಿಂದ ಆತನ ಕುತ್ತಿಗೆಯನ್ನ ಸೀಳಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಂತರ ಸ್ಥಳೀಯರು ಆತನನ್ನು ರಕ್ಷಿಸಲು ಮುಂದಾದರೂ ಕೂಡ ತೀವ್ರ ರಕ್ತ ಸ್ರಾವದಿಂದಾಗಿ ಸಾಮ್ರಾತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯನ್ನ ವಿರೋಧಿಸಿ ಸ್ಥಳೀಯರು ಸಾಮ್ರಾತ್‍ನ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ಕೈಗೊಂಡಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತನ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಹತ್ಯೆ ಮಾಡಿರುವುದಕ್ಕೆ ಬಿಜೆಪಿ ಪಕ್ಷದವರು ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿರುವ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಸಾಮ್ರಾತ್ ಕುಂಟುಂಬದವರು ಹೇಳುವ ಪ್ರಕಾರ, ಮೃತ ಸಾಮ್ರಾತ್ ಬಿಜೆಪಿ ಹಿಂದುಳಿದ ವರ್ಗದ ಘಟಕದಲ್ಲಿ ಸಕ್ರೀಯ ಕಾರ್ಯಕರ್ತನಾಗಿದ್ದು, ಯಾರೊಂದಿಗೆ ದ್ವೇಷವಿರಲಿಲ್ಲ. ಈತನ ಹತ್ಯೆಯಿಂದ ಕುಂಟುಂಬ ಸೇರಿದಂತೆ ನೆರೆಹೊರೆಯವರಿಗೂ ಆಘಾತವಾಗಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಕೃತ್ಯವನ್ನು ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಗಂಭೀರ ವಿಷಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿ ಕಾರಿನಲ್ಲಿದ್ದ ಚಾಲಕನನ್ನು ಹೊರಗೆಳೆದು ಬಿಜೆಪಿ ಶಾಸಕನ ಪುತ್ರನಿಂದ ಹಲ್ಲೆ! -ವಿಡಿಯೋ ವೈರಲ್

    ನಡುರಸ್ತೆಯಲ್ಲಿ ಕಾರಿನಲ್ಲಿದ್ದ ಚಾಲಕನನ್ನು ಹೊರಗೆಳೆದು ಬಿಜೆಪಿ ಶಾಸಕನ ಪುತ್ರನಿಂದ ಹಲ್ಲೆ! -ವಿಡಿಯೋ ವೈರಲ್

    ಬನ್ಸ್ವಾರ: ರಾಜಸ್ಥಾನದ ಬಿಜೆಪಿ ಶಾಸಕರ ಪುತ್ರನೊಬ್ಬ ನಡು ರಸ್ತೆಯಲ್ಲಿ ಕಾರಿನಿಂದ ಹೊರಗೆಳೆದು ಚಾಲಕನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬನ್ಸ್ವಾರ ಕ್ಷೇತ್ರದ ಶಾಸಕ ಧನ್ ಸಿಂಗ್ ರಾವತ್ ಪುತ್ರ ರಾಜ ಎಂಬಾತ ಕಾರು ಚಾಲಕ ನೀರವ್ ಉಪಾಧ್ಯಾಯ ಎಂಬವರ ಮೇಲೆ ಹಲ್ಲೆ ನಡೆಸಿದ್ದು, ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿದೆ. ಅಂದಹಾಗೇ ಶಾಸಕ ಪುತ್ರ ಕಾರು ಆಗಮಿಸುವ ವೇಳೆ ಹಲ್ಲೆಗೊಳಗಾದ ವ್ಯಕ್ತಿ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಕೃತ್ಯ ನಡೆಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಜೂನ್ 1 ರಂದು ಬನ್ಸ್ವಾರದ ವಿದ್ಯಾತ್ ಕಲೋನಿ ಬಳಿ ಘಟನೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಲ್ಲೆಗೆ ಒಳಗಾದ ನೀರವ್ ಉಪಾಧ್ಯಾಯ, ಜೂನ್ 1 ರಂದು ಘಟನೆ ನಡೆದಿದ್ದು, ನಾನು ಏಕಮುಖ ಸಂಚಾರದ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಅಲ್ಲಿ ಬಂದಂತಹ ಇನ್ನೊಂದು ಕಾರಿಗೆ ಮುಂದೆ ಹೋಗಲೂ ಆಗಿಲ್ಲ. ಈ ವಿಚಾರವಾಗಿ ಕೆಲವರೊಂದಿಗೆ ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಅವರು ಏಳು ಎಂಟು ಜನರಿದ್ದ ಕಾರಣ ನಾನು ಅಸಹಾಯಕನಾಗಿದ್ದೆ. ಆದರೆ ಈ ಕುರಿತು ಯಾವುದೇ ದೂರು ನೀಡಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಸಿಸಿಟಿವಿ ವಿಡಿಯೋನ ಪ್ರಕಾರ ಸ್ಕಾರ್ಪಿಯೋ ಕಾರಿನಲ್ಲಿ ಬಂದಂತಹ ಶಾಸಕರ ಪುತ್ರ ರಾಜ ಹಾಗೂ ಅವರ ಸ್ನೇಹಿತರು ಸ್ವಿಫ್ಟ್ ಕಾರೊಂದನ್ನು ಮುಂದೆ ಹೋಗದಂತೆ ನಡುರಸ್ತೆಯಲ್ಲಿ ತಡೆದು, ಕಾರಿನಲ್ಲಿದ್ದ ನೀರವ್ ಅವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ.

    ಸದ್ಯ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಠಾಣಾ ಎಸ್‍ಪಿ ಚಂದನ್ ಸಿಂಗ್, ಶಾಸಕರ ಪುತ್ರ ಅಥವಾ ಯಾವುದೇ ವ್ಯಕ್ತಿ ಹಲ್ಲೆ ನಡೆಸಿರುವ ಕುರಿತು ನಮಗೇ ಯಾವುದೇ ದೂರು ಬಂದಿಲ್ಲ. ಅದ್ದರಿಂದ ಘಟನೆ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಹೇಳಿದ್ದಾರೆ.