Tag: ರಾಜಸ್ಥಾನಿ ಲಾಲ್ ಮಾಸ್

  • ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ

    ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ

    ರಾಜಸ್ಥಾನದ ಈ ಸಾಂಪ್ರದಾಯಿಕ ಮಟನ್ ಕರಿ ರೆಸಿಪಿ ಮದ್ರಾಸ್ ಶೈಲಿಯ ಅಡುಗೆಗೆ ಉತ್ತಮ ಪರ್ಯಾಯ. ಇಲ್ಲಿ ಸುಮಯ್ಯ ಮಟನ್ ಬಳಸಲಾಗುತ್ತದೆ. ಆದರೆ ಈ ರೆಸಿಪಿಯನ್ನು ಬೇಕೆಂದರೆ ಇತರ ಮಾಂಸವನ್ನು ಬಳಸಿಯೂ ತಯಾರಿಸಬಹುದು. ರಾಜಸ್ಥಾನ ಶೈಲಿಯ ಲಾಲ್ ಮಾಸ್ ಮಟನ್ ಕರಿ ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಮಟನ್ ಮಾಂಸ – 1 ಕೆಜಿ
    ಲವಂಗ – 6
    ದಾಲ್ಚಿನ್ನಿ ಎಲೆ – 1
    ಕಪ್ಪು ಏಲಕ್ಕಿ – 1
    ಹೆಚ್ಚಿದ ಈರುಳ್ಳಿ – 1
    ತುರಿದ ಶುಂಠಿ – 1 ಇಂಚು
    ತುರಿದ ಬೆಳ್ಳುಳ್ಳಿ – 4
    ಕಾಶ್ಮೀರಿ ಮೆಣಸಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಮೊಸರು – 400 ಗ್ರಾಂ
    ಬೆಳ್ಳುಳ್ಳಿ – 1
    ನೀರು – 50 ಮಿ.ಲೀ.
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಎಣ್ಣೆ – 3 ಟೀಸ್ಪೂನ್ ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ತಳವಿರುವ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಉರಿಯನ್ನು ಕಡಿಮೆ ಮಾಡಿ ಲವಂಗ, ಕಪ್ಪು ಏಲಕ್ಕಿ ಮತ್ತು ದಾಲ್ಚಿನ್ನಿ ಎಲೆ ಸೇರಿಸಿ ಸಿಡಿಯಲು ಬಿಡಿ. ಲಘುವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
    * ಅದಕ್ಕೆ ಮಟನ್ ಸೇರಿಸಿ ಬೆರೆಸಿಕೊಳ್ಳಿ.
    * ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಫ್ರೈ ಮಾಡಿ.
    * ಬಳಿಕ ಕಾಶ್ಮೀರಿ ಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಸೇರಿಸಿ ಮಟನ್ ಕಂದು ಬಣ್ಣ ಬರುವವರೆಗೆ ಸುಮಾರು 20 ನಿಮಿಷಗಳ ಕಾಲ ಹುರಿಯಿರಿ.
    * ಬಳಿಕ ಮೊಸರು ಮತ್ತು ಉಪ್ಪನ್ನು ಬೆರೆಸಿ 2-3 ನಿಮಿಷಗಳ ಕಾಲ ಮುಚ್ಚಳವಿಲ್ಲದೆ ಬೇಯಿಸಿ.
    * ಕತ್ತರಿಸಿದ ಬೆಳ್ಳುಳ್ಳಿ ಮತ್ತು ನೀರನ್ನು ಸೇರಿಸಿ, ನಂತರ ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಇನ್ನೂ 40-45 ನಿಮಿಷ ಬೇಯಿಸಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಮುಚ್ಚಳವನ್ನು ತೆಗೆಯದೇ ಸುಮಾರು 2 ಗಂಟೆ ಹಾಗೇ ವಿಶ್ರಾಂತಿ ನೀಡಿ.
    * ಇದೀಗ ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ತಯಾರಾಗಿದ್ದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಅಮೃತಸರಿ ಕುಲ್ಚಾ ಹೀಗೆ ಮಾಡಿ

    
    
  • ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆ?

    ಲಾಲ್ ಮಾಸ್ ರಾಜಸ್ಥಾನದ ಅತ್ಯಂತ ಜನಪ್ರಿಯ ಮಾಂಸಾಹಾರಿ ರೆಸಿಪಿ. ಸಾಂಪ್ರದಾಯಿಕವಾಗಿ ಲಾಲ್ ಮಾಸ್ ಅನ್ನು ಮಟನ್, ಮೊಸರು ಹಾಗೂ ರಾಜಸ್ಥಾನದ ವಿಶೇಷ ಕೆಂಪು ಮಥಾನಿಯಾ ಮೆಣಸಿನಕಾಯಿಗಳನ್ನು ಬಳಸಿ ತಯಾರಿಸಲಾಗುತ್ತದೆ. ನಾವಿಂದು ರಾಜಸ್ಥಾನಿ ಲಾಲ್ ಮಾಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮಟನ್ – 500 ಗ್ರಾಂ
    ಮೊಸರು – 1 ಕಪ್
    ರಾಜಸ್ಥಾನಿ ಕೆಂಪು ಮಥಾನಿಯಾ ಕೆಂಪು ಮೆಣಸಿನಕಾಯಿ – 10 + 5 (ಯಾವುದೇ ಇತರ ಒಣ ಮೆಣಸಿನಕಾಯಿ ಬಳಸಬಹುದು)
    ಹೆಚ್ಚಿದ ಈರುಳ್ಳಿ – 2
    ಶುಂಠಿ ಪೇಸ್ಟ್ – 2 ಟೀಸ್ಪೂನ್
    ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಸಾಸಿವೆ ಎಣ್ಣೆ – ಅರ್ಧ ಕಪ್
    ದಾಲ್ಚಿನಿ ಎಲೆ – 2
    ಲವಂಗ – 5
    ಏಲಕ್ಕಿ – 4
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ – 2 ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
    ತುಪ್ಪ – 2 ಟೀಸ್ಪೂನ್
    ಇದ್ದಿಲು – 1 ಇದನ್ನೂ ಓದಿ: ಮೊಘಲ್ ಸ್ಟೈಲ್‌ನ ಮಟನ್ ಕಡೈ ಚಪ್ಪರಿಸಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ 10 ಕೆಂಪು ಮೆಣಸಿನಕಾಯಿಗಳನ್ನು ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿ, ನಂತರ ನೀರನ್ನು ಸೋಸಿ ಮಿಕ್ಸರ್ ಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
    * ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಕೊತ್ತಂಬರಿಯನ್ನು ಹುರಿದು ಪುಡಿ ಮಾಡಿಕೊಳ್ಳಿ.
    * ದಾಲ್ಚಿನ್ನಿ ಎಲೆ, ಏಲಕ್ಕಿ ಮತ್ತು ಲವಂಗವನ್ನು ಎಣ್ಣೆಯಲ್ಲಿ ಕರಿದುಕೊಳ್ಳಿ. ಬಳಿಕ ಈರುಳ್ಳಿ ಸೇರಿಸಿ, ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಒಂದು ನಿಮಿಷ ಬೆರೆಸಿ.
    * ಶುಂಠಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
    * ಬಳಿಕ ಮಟನ್ ಸೇರಿಸಿ ಮಿಶ್ರಣ ಮಾಡಿ ಮತ್ತು ಬೇಯಿಸಿ.
    * ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ನಿರಂತರವಾಗಿ ಬೆರೆಸಿಕೊಳ್ಳಿ.
    * ನಂತರ ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿ. ನಡುವೆ ಬೆರೆಸಿಕೊಳ್ಳಿ.
    * 2 ಕಪ್ ಬೆಚ್ಚಗಿನ ನೀರನ್ನು ಸುರಿದು, ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಮುಚ್ಚಳವನ್ನು ಮುಚ್ಚಿ 40 ರಿಂದ 45 ನಿಮಿಷ ಬೇಯಿಸಿ.
    * ಬಳಿಕ ಮುಚ್ಚಳವನ್ನು ತೆಗೆದು ಬೆರೆಸಿ ಮತ್ತು ಬಟ್ಟಲಿಗೆ ವರ್ಗಾಯಿಸಿ.
    * ಗ್ಯಾಸ್ ಸ್ಟೌವ್ ಮೇಲೆ 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಇದ್ದಿಲುಗಳನ್ನು ಕಾಯಿಸಿಕೊಳ್ಳಿ.
    * ಸಣ್ಣ ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ, 5 ಒಣ ಕೆಂಪು ಮೆಣಸಿನಕಾಯಿ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಮತ್ತು ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ. ಅದು ಹುರಿಯಲು ಪ್ರಾರಂಭಿಸಿದಾಗ ಮಾಂಸದ ಕರಿ ಬಟ್ಟಲಿಗೆ ಸೇರಿಸಿ.
    * ಉಕ್ಕಿನ ಬಟ್ಟಲಿನಲ್ಲಿ ಕಾಯಿಸಿದ ಇದ್ದಿಲನ್ನು ಹಾಕಿ, ಬಟ್ಟಲನ್ನು ಕರಿ ಬಟ್ಟಲಿನಲ್ಲಿ ಇಡಿ. ಮೇಲಿನಿಂದ ತುಪ್ಪವನ್ನು ಸುರಿಯಿರಿ. ಹೊಗೆ ಏರಲು ಪ್ರಾರಂಭಿಸಿದಾಗ. ಬೌಲ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಮುಚ್ಚಳದ ಮೇಲೆ ಭಾರವಾದ ವಸ್ತುವನ್ನು ಇಡಿ.
    * ಒಂದೆರಡು ನಿಮಿಷ ಹಾಗೇ ಬಿಟ್ಟು ಬಳಿಕ ತೆರೆದರೆ ರಾಜಸ್ಥಾನಿ ಲಾಲ್ ಮಾಸ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]