Tag: ರಾಜಸ್ತಾನ

  • ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    – ವೀರೇಂದ್ರ ಹೆಗ್ಗಡೆಯವರಿಗೆ ಕಾರು ಹಸ್ತಾಂತರಿಸಿದ ರಾಜಸ್ತಾನದ ನಂದಜೀ

    ಮಂಗಳೂರು: ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರನ್ನು ರಾಜಸ್ತಾನದ ಸ್ವಾಮೀಜಿಯೊಬ್ಬರು ಕೊಡುಗೆ ನೀಡಿದ್ದಾರೆ.

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಂಟೇಜ್ ಕಾರ್ ಸಂಗ್ರಹದ ಅಭಿರುಚಿಯನ್ನು ನೋಡಿ ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜೀ ಪ್ರಶಂಸಿದ್ದರು. ಈಗ ಅವರು 1972ರ ಮೋಡೆಲ್‍ನ ಮರ್ಸಿಡಿಸ್ ಬೆನ್ಜ್ ಕಾರನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಕೊಡುಗೆಯಾಗಿ ನೀಡಿದರು.

    280 ಎಸ್.ಮಾದರಿಯ ಈ ಅತ್ಯುತ್ತಮ ಕಾರುನ್ನು ಸ್ವತಃ ಸ್ವಾಮಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆ ಅವರ ನಿವಾಸಕ್ಕೆ ಬಂದು ಕಾರಿನ ಕೀ ಹಸ್ತಾಂತರಿದ್ದಾರೆ. ಈ ಮೂಲಕ ಕಾರನ್ನು ಕೊಡುಗೆಯಾಗಿ ನೀಡಿದರು. ಬಳಿಕ ವೀರೆಂದ್ರ ಹೆಗ್ಗಡೆಯವರು ಕಾರನ್ನು ಚಲಾಯಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಈ ಸಂದರ್ಭ ಡಿ.ಹರ್ಷೇಂದ್ರ ಕುಮಾರ್ ಜೊತೆಗಿದ್ದರು.

    ಕೆಲವು ವರ್ಷಗಳ ಹಿಂದೆ ಜಾಗತಿಕ ಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಯುರೋಪ್ ಖಂಡದ ಆಸ್ಟ್ರೀಯಾ ದೇಶದಲ್ಲಿ ತಮ್ಮ ಆಶ್ರಮ ಪ್ರಾರಂಭಿಸಿ ಅಲ್ಲಿ ಯೋಗ ಪ್ರಚಾರ ಮತ್ತು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

  • ಪಾಕ್ ಮಹಿಳಾ ಅಧಿಕಾರಿಯಿಂದ ಹನಿಟ್ರ್ಯಾಪ್ – ಇಬ್ಬರು ಯೋಧರು ಅರೆಸ್ಟ್

    ಪಾಕ್ ಮಹಿಳಾ ಅಧಿಕಾರಿಯಿಂದ ಹನಿಟ್ರ್ಯಾಪ್ – ಇಬ್ಬರು ಯೋಧರು ಅರೆಸ್ಟ್

    ಜೈಪುರ: ಪಾಕಿಸ್ತಾನದ ಐಎಸ್‌ಐ ಮಹಿಳಾ ಅಧಿಕಾರಿಯೊಬ್ಬಳ ಹನಿಟ್ರ್ಯಾಪ್ ಗೆ ಒಳಗಾಗಿ ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಇಬ್ಬರು ಸೈನಿಕರನ್ನು ರಾಜಸ್ಥಾನದಲ್ಲಿ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಈ ಇಬ್ಬರು ಸೈನಿಕರನ್ನು ಮಧ್ಯಪ್ರದೇಶದ ಲ್ಯಾನ್ಸ್ ನಾಯಕ್ ರವಿವರ್ಮಾ ಮತ್ತು ಇನ್ನೊಬ್ಬರನ್ನು ಅಸ್ಸಾಂ ಮೂಲದ ವಿಚಿತಾ ಬೊಹ್ರಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸೈನಿಕರು ಪಾಕಿಸ್ತಾನಿ ಐಎಸ್‌ಐ ಅಧಿಕಾರಿಯನ್ನು ಭಾರತೀಯ ಮಹಿಳೆ ಎಂದು ತಿಳಿದು ಭಾರತೀಯ ಸೇನೆಯ ಪ್ರಮುಖ ಮಾಹಿತಿ ಮತ್ತು ಫೋಟೋಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಪಾಕ್‌ನ ಐಎಸ್‌ಐ ಅಧಿಕಾರಿಯೊಬ್ಬಳು ನಾನು ಪಂಜಾಬ್ ಮೂಲದ ಮಹಿಳೆ ಎಂದು ಹೇಳಿಕೊಂಡು ಪಾಕ್ ನಂಬರಿನಿಂದ ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಮೂಲಕ ಈ ಇಬ್ಬರು ಸೈನಿಕರಿಗೆ ಕರೆ ಮಾಡಿದ್ದಾಳೆ. ಪ್ರೋಟೋಕಾಲ್ ಮೂಲಕ ಕರೆ ಮಾಡಿದ ಕಾರಣ ಅದು ಇಂಡಿಯಾ ನಂಬರ್ ರೀತಿ ಕಾಣಿಸಿದೆ. ಇದನ್ನು ನಂಬಿದ ಸೈನಿಕರು ನಮ್ಮ ದೇಶದ ಸೇನೆಯ ಕೆಲ ಪ್ರಮುಖ ಮಾಹಿತಿ ಮತ್ತು ಕೆಲ ಗನ್‌ಗಳ ಫೋಟೋ ಗಳನ್ನು ವಾಟ್ಸಪ್ ಮತ್ತು ಫೇಸ್‌ಬುಕ್ ಮೂಲಕ ಕಳುಹಿಸಿದ್ದಾರೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

    ಸೈನಿಕರು ರಾಜಸ್ಥಾನದ ಪೋಖ್ರಾನ್ ಅಲ್ಲಿ ಕೆಲಸ ಮಾಡುತ್ತಿದ್ದು, ಈ ಜಾಗದಿಂದ ಸೇನಾ ಮಾಹಿತಿಗಳು ಸೋರಿಕೆ ಆಗುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಬೆನ್ನತ್ತಿದ ಸಿಬಿಐ ಮತ್ತು ಐಬಿ ತಂಡದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಜೋಧಪುರದ ರೈಲು ನಿಲ್ದಾಣದಲ್ಲಿ ಈ ಇಬ್ಬರು ಸೈನಿಕರನ್ನು ಬಂಧಿಸಿದ್ದಾರೆ.

    ಈ ಇಬ್ಬರು ಅಧಿಕಾರಿಗಳು ಹನಿಟ್ರ್ಯಾಪ್ ಗೆ ಒಳಗಾಗಿದ್ದು, ಪಾಕ್ ಅಧಿಕಾರಿಯನ್ನು ಭಾರತೀಯ ಮಹಿಳೆ ಎಂದು ತಿಳಿದು ಮಾಹಿತಿಯನ್ನು ಶೇರ್ ಮಾಡಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜೋಧಪುರದ ರೈಲ್ವೇ ನಿಲ್ದಾಣದಲ್ಲಿ ಊರಿಗೆ ಹೋಗುತ್ತಿದ್ದ ಸೈನಿಕರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಜೈಪುರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

  • ರಾಜಸ್ತಾನದಲ್ಲಿ ಐಎಎಫ್‍ನ ಮಿಗ್-21 ಯುದ್ಧ ವಿಮಾನ ಪತನ- ಪೈಲಟ್ ಪಾರು

    ರಾಜಸ್ತಾನದಲ್ಲಿ ಐಎಎಫ್‍ನ ಮಿಗ್-21 ಯುದ್ಧ ವಿಮಾನ ಪತನ- ಪೈಲಟ್ ಪಾರು

    ಬಿಕಾನೇರ್: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಇಂದು ರಾಜಸ್ಥಾನದ ಬಿಕಾನೇರ್ ಪ್ರದೇಶದ ಬಳಿ ಪತನವಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಿಕಾನೇರ್ ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಶೋಭಾಸರ್ ಕಿ ಧನಿ ಎಂಬ ಪ್ರದೇಶದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದೆ. ಮಿಗ್-21 ಟೇಕ್ ಆಫ್ ಆಗುವ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಬಹುಶಃ ಇದರಿಂದಲೇ ವಿಮಾನದ ತಾಂತ್ರಿಕ ವ್ಯವಸ್ಥೆಯಲ್ಲಿ ಏರುಪೇರಾಗಿ ವಿಮಾನ ಪತನವಾಗಿದೆ ಎಂದು ಐಎಎಫ್ ಅಧಿಕಾರಿಗಳು ಶಂಕಿಸಿದ್ದಾರೆ. ಈ ವಿಮಾನವನ್ನು ರಾಜಸ್ತಾನದಲ್ಲಿರುವ ಐಎಎಫ್‍ನ ನಾಲ್ ವಿಮಾನ ನಿಲ್ದಾಣದಿಂದ ಗಸ್ತು ಕಾರ್ಯಚರಣೆಗೆಂದು ತೆಗೆದುಕೊಂಡು ಹೋಗಲಾಗಿತ್ತು.

    ವಿಮಾನ ಪತನಗೊಳ್ಳುವ ವಿಷಯ ಅರಿವಿಗೆ ಬರುತ್ತಿದಂತೆ ಮೊದಲು ಪೈಲಟ್ ಪ್ಯಾರಾಚ್ಯೂಟ್ ನೆರವಿನಿಂದ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಶೋಭಾಸರ್ ಕಿ ಧನಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಬಿಕಾನೇರ್‍ನ ಎಸ್‍ಪಿ ಪ್ರದೀಪ್ ಮೋಹನ್ ಶರ್ಮಾ ಅವರು ತಿಳಿಸಿದ್ದಾರೆ.

    ಈ ಬಗ್ಗೆ ಐಎಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ರಾಜಸ್ತಾನದ ಬಿಕಾನೇರ್ ಬಳಿ ಮಿಗ್-21 ಯುದ್ಧ ವಿಮಾನ ಗಸ್ತು ತಿರುಗುತ್ತಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ತಾಂತ್ರಿಕ ದೋಷ ಉಂಟಾಗಿ ವಿಮಾನ ಪತನವಾಗಿರಬಹುದು. ಈ ಬಗ್ಗೆ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

    ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ರಾಷ್ಟ್ರಗಳು ಗಡಿಯಲ್ಲಿ ಒಬ್ಬರ ಮೇಲೊಬ್ಬರು ದಾಳಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಮಿಗ್-21 ಯುದ್ಧ ವಿಮಾನ ಪತನವಾಗಿದೆ. ಅಲ್ಲದೆ ಕಳೆದ ಫೆ. 27 ರಂದು ಪಾಕ್ ಹಾಗೂ ಭಾರತದ ಜೆಟ್‍ಗಳ ನಡುವೆ ಜಮ್ಮು-ಕಾಶ್ಮೀರಕ್ಕಾಗಿ ಡಾಗ್‍ಫೈಟ್ ಕೂಡ ನಡೆದಿತ್ತು. ಈ ಸಂದರ್ಭದಲ್ಲಿ ಮಿಗ್-21 ಚಲಾಯಿಸುತ್ತಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

    ರಾಜಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ವೀರಯೋಧ ಅಭಿನಂದನ್!

    ಜೈಪುರ: ಪಾಕ್ ಕಪಿಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ವೇಳೆ ವೀರಯೋಧನ ಕಥೆಯನ್ನು ಪಾಠವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದು ರಾಜಸ್ತಾನದ ಶಿಕ್ಷಣ ಮಂತ್ರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ಹೌದು, ಭಾರತದ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲು ರಾಜಸ್ತಾನ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಭಿನಂದನ್ ಅವರ ಶೌರ್ಯ, ಪರಾಕ್ರಮವನ್ನು ಮಕ್ಕಳು ತಿಳಿಯಬೇಕು ಎಂದು ಜೋಧಪುರದ ಪೈಲಟ್ ಶಿಕ್ಷಣ ಶಾಲೆಯ ಪಠ್ಯಪುಸ್ತಕದಲ್ಲಿ ಅಭಿನಂದನ್ ಅವರ ಬಗ್ಗೆ ಪಾಠವನ್ನು ಸೇರಿಸಲಾಗುತ್ತದೆ. ಈ ಮೂಲಕ ವೀರಯೋಧನಿಗೆ ನಮ್ಮ ಕಡೆಯಿಂದ ಗೌರವ ಸಲ್ಲಿಸುತ್ತಿದ್ದೇವೆ ಎಂದು ರಾಜಸ್ತಾನದ ಶಿಕ್ಷಣ ಮಂತ್ರಿ ಗೋವಿಂದ್ ಸಿಂಗ್ ದೋತಸ್ರಾ ಸೋಮವಾರದಂದು ಟ್ವೀಟ್ ಮಾಡಿದ್ದಾರೆ.

    ಯಾವ ತರಗತಿಯ ಪಠ್ಯದಲ್ಲಿ ಅಭಿನಂದನ್ ಅವರ ಪಾಠವನ್ನು ಸೇರಿಸಲಾಗುತ್ತಿದೆ ಎಂಬುದರ ಕುರಿತು ರಾಜಸ್ತಾನ ಶಿಕ್ಷಣ ಮಂತ್ರಿಗಳು ತಿಳಿಸಿಲ್ಲ. ಈ ಹಿಂದೆ ರಾಜಸ್ತಾನದ ಶಿಕ್ಷಣ ಮಂತ್ರಿಗಳು ಪುಲ್ವಾಮಾ ದಾಳಿಯ ಬಗ್ಗೆ ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದರು. ಅದನ್ನು ಪಠ್ಯಕ್ರಮ ವಿಮರ್ಶೆ ಸಮಿತಿ ಒಪ್ಪಿಕೊಂಡಿತ್ತು. ಶಾಲಾ ಪಠ್ಯಕ್ರಮಗಳ ಬಗ್ಗೆ ಗಮನ ವಹಿಸಲು ಈಗಾಗಲೇ ಎರಡು ಸಮಿತಿಯನ್ನು ರಾಜಸ್ತಾನ ಸರ್ಕಾರ ನಿಯೋಜಿಸಿದೆ. ಈಗ ಅಭಿನಂದನ್ ಅವರ ಕುರಿತು ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

    ಈ ಹಿಂದೆ ಇದ್ದ ಸರ್ಕಾರ ಶಾಲಾ ಪಠ್ಯಕ್ರಮಗಳಲ್ಲಿಯೂ ರಾಜಕಾರಣ ನಡೆಸಿದೆ. ನಮ್ಮ ದೇಶದ ಸಂಸ್ಕೃತಿ, ಕಲೆ, ಇತಿಹಾಸ ಹಾಗೂ ಮಹಾನ್ ವ್ಯಕ್ತಿಗಳ ಕುರಿತು ಪಠ್ಯಕ್ರಮದಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಶಿಕ್ಷಣ ಮಂತ್ರಿಗಳು ಆರೋಪಿಸಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಸುಮಾರು 31.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಸರ್ಕಾರಿ ಸೇನಾ ಅಕಾಡೆಮಿಯನ್ನು ಸಿಕರ್‍ನಲ್ಲಿ ರಾಜಸ್ತಾನ ಶಿಕ್ಷಣ ಇಲಾಖೆ ಉದ್ಘಾಟನೆ ಮಾಡಿತ್ತು. ಹಾಗೆಯೇ ಈ ಅಕಾಡೆಮಿಗೆ ಮಹಾರಾವ್ ಶೇಖಾಜಿ ಶಶಸ್ತ್ರ ಬಲ್ ಪ್ರಸಿಕ್ಷಣ್ ಅಕಾಡೆಮಿ ಎಂದು ಹೆಸರಿಡಲಾಗಿತ್ತು. ಈ ಅಕಾಡೆಮಿ ಮೂಲಕ ಯುವಕರು ಭಾರತೀಯ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆಗೆ ಸೇರಲು ಸಹಾಯವಾಗುವ ತರಬೇತಿಯನ್ನು ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪೋಖ್ರಾನ್: ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇತ್ತ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ವಾಯಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

    ಅಣ್ವಸ್ತ್ರ ಪರೀಕ್ಷಾರ್ಥ ಪ್ರಯೋಗ ನಡೆದಿದ್ದ ರಾಜಸ್ಥಾನ ರಾಜ್ಯದ ಪೋಖ್ರಾನ್ ಮರುಭೂಮಿಯಲ್ಲಿ ಯುದ್ಧ ವಿಮಾನಗಳು ಅಬ್ಬರಿಸಿವೆ. ನಿರ್ದೇಶಿತ ಕ್ಷಿಪಣಿ ಪ್ರಯೋಗ ಮೂಲಕ ಆರ್ಭಟಿಸಿದ್ದು, ಈ ಮೂಲಕ ವೈರಿ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

    ಪಾಕಿಸ್ತಾನದ ಗಡಿಯಲ್ಲೇ ನಡೆದ ಪ್ರದರ್ಶನದಲ್ಲಿ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಭಾಗವಹಿಸಿದ್ದವು. ಪ್ರಮುಖವಾಗಿ ತೇಜಸ್, ಹಾಂಕ್ ಎಂಕೆ-132, ನೆಲದಿಂದ ಆಕಾಶಕ್ಕೆ ಮತ್ತು ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಅಧಿಕಾರಿಗಳು ಹಾಗೂ ಐಎಎಫ್ ಗೌರವಾನ್ವಿತ ಸಮೂಹ ಕ್ಯಾಪ್ಟನ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ಭಾಗವಹಿಸಿದ್ದರು. ಈ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಇತ್ತ ಪುಲ್ವಾಮಾ ದಾಳಿ ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿ ಹೊರಡಿಸಿವೆ. ಇಂದು ದೆಹಲಿಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಭಯೋತ್ಪಾದಕ ದಾಳಿಯನ್ನು ಸರ್ವಾನುಮತದಿಂದ ಖಂಡಿಸಿವೆ. ಭಯೋತ್ಪಾದನೆ ದಮನಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಘೋಷಿಸಿವೆ. ಹುತಾತ್ಮರ ಕುಟುಂಬಗಳ ದು:ಖದಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.

    ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರಾದವರೂ ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಪಕ್ಷಗಳೂ ಒಮ್ಮತ ತೀರ್ಮಾನಕ್ಕೆ ಬಂದಿವೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ಸರ್ಕಾರದ ಜೊತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಹಿತಾಸಕ್ತಿ, ಭದ್ರತೆ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲುತ್ತೇವೆ, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತನಗೊಂಡು ಹೊತ್ತಿ ಉರಿದ ವಾಯುಸೇನಾ ವಿಮಾನ -ವಿಡಿಯೋ ನೋಡಿ

    ಪತನಗೊಂಡು ಹೊತ್ತಿ ಉರಿದ ವಾಯುಸೇನಾ ವಿಮಾನ -ವಿಡಿಯೋ ನೋಡಿ

    ಜೈಪುರ್: ಭಾರತೀಯ ವಾಯುಪಡೆಗೆ ಸೇರಿದ ಮಿಗ್ ಫೈಟರ್ ವಿಮಾನವೊಂದು ರಾಜಸ್ಥಾನದ ಜೋಧಪುರದ ಬಾಂದ್ ಸಮೀಪದ ದೆವ್ಲಿಯಾ ಗ್ರಾಮದ ಬಳಿ ಪತನಗೊಂಡಿದೆ.

    ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಅವಘಡ ಸಂಭವಿಸುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಪೈಲಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಹೇಳಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುತ್ತಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ವಾಯುಸೇನೆಯ ಅಧಿಕಾರಿಗಳು ಧಾವಿಸಿದ್ದಾರೆ. ಪೈಲಟ್ ನನ್ನು ಏರ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.

    ಮೂರು ವಾಯುಸೇನಾ ವಿಮಾನಗಳು ಪ್ರತಿನಿತ್ಯದ ಅಭ್ಯಾಸದಂತೆ ಇಂದು ಅಭ್ಯಾಸ ನಡೆಸುತ್ತಿದ್ದಾಗ ಮಿಗ್ ವಿಮಾನ ಪತನಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪತನಗೊಂಡ ವಿಮಾನ ಜೋಧಪುರ ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು.

    ಜೋಧಪುರದ ಡೆಪ್ಯೂಟಿ ಕಮಿಷನರ್ ಅಮಂದೀಪ್ ಸಿಂಗ್ ಪ್ರತಿಕ್ರಿಯಿಸಿ, ಈ ಅಪಘಾತದಿಂದ ಯಾವುದೇ ಪ್ರಾಣಾಹಾನಿ ಆಗಿಲ್ಲ. ಈ ಕುರಿತು ತನಿಖೆ ಆರಂಭಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

    https://twitter.com/Rahulsi16973840/status/1036866113299132417

  • ಬಸ್ ಟಾಪ್ ಹತ್ತಿ 50 ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರು!- ವಿಡಿಯೋ ನೋಡಿ

    ಬಸ್ ಟಾಪ್ ಹತ್ತಿ 50 ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರು!- ವಿಡಿಯೋ ನೋಡಿ

    ಜೈಪುರ: ಜಲಾವೃತವಾದ ಅಂಡರ್ ಪಾಸಿನಲ್ಲಿ ಸ್ಕೂಲ್ ಬಸ್ ಸಿಲುಕಿದ್ದು, ಅದರಲ್ಲಿದ್ದ 50 ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ದೌಸಾ ಜಿಲ್ಲೆಯ ಲಾಲ್‍ಸೆಟ್ ನಲ್ಲಿ ಈ ಭೀಕರ ದುರಂತ ನಡೆದಿದೆ. ಮಳೆಯಿಂದಾಗಿ ಜಲಾವೃತವಾದ ಅಂಡರ್ ಪಾಸಿನಲ್ಲಿ ಬಸ್ ಸಿಲುಕಿಕೊಂಡಿದೆ. ಈ ವೇಳೆ ನೀರು ಬಸ್ ಒಳಗೆ ನುಗ್ಗಲು ಪ್ರಾರಂಭಿಸಿದ್ದು, ಸ್ವಲ್ಪ ಎಡವಿದರೂ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಆದರೆ ತಕ್ಷಣ ಎಚ್ಚೆತ್ತುಕೊಂಡ ಬಸ್ಸಿನೊಳಗಿದ್ದ ಮಕ್ಕಳು ಒಬ್ಬೊಬ್ಬರೇ ಬಸ್ಸಿನ ಟಾಪ್ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಟಾಪ್ ಮೇಲಿದ್ದ 50 ಕ್ಕೂ ಹೆಚ್ಚು ಮಕ್ಕಳನ್ನು ಸ್ಥಳೀಯರು ಕರೆದುಕೊಂಡು ಹೋಗುವ ಮೂಲಕ ರಕ್ಷಿಸಿದ್ದಾರೆ.

    ಅಷ್ಟೇ ಅಲ್ಲದೇ ಮಕ್ಕಳನ್ನು ಸ್ಥಳೀಯರೇ ಈಜುಕೊಂಡು ಹೋಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ

    ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ

    ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ ಅಪಘಾತಕ್ಕೊಳಗಾದ ಘಟನೆ ರಾಜಸ್ತಾನದಲ್ಲಿ ನಡೆದಿದೆ.

    ಈ ಘಟನೆ ಕೋಟಾ- ಚಿತ್ತೂರ್ ಹೆದ್ದಾರಿಯಿಂದ ಸುಮಾರು 55 ಕಿ.ಮೀ ದೂರದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅಪಾಯದಿಂದ ಪಾರಾಗಿದ್ದಾರೆ.

    ಘಟನೆ ನಡೆದ ಕೂಡಲೇ ಜಶೋದಾ ಬೆನ್ ಅವರನ್ನು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದ್ದಾರೆ ಅಂತ ಚಿತ್ತೋರ್ ಗಢ್ ನ ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ ಸುರೇಶ್ ಕಾರ್ತಿಕ್ ತಿಳಿಸಿದ್ದಾರೆ.

    ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸಂಬಂಧಿಕರೆಂದು ತಿಳಿದುಬಂದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಜಯೇಂದ್ರ ಸಣ್ಣಪುಟ್ಟ ಗಾಯಗಳಾಗಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರೂ ಗುಜರಾತ್ ನ ಬರನ್ ಎಂಬಲ್ಲಿನ ಅತ್ರು ಗೆ ಪ್ರವಾಸ ಬೆಳೆಸಿದ್ದರು ಎಂಬುದಾಗಿ ವರದಿಯಾಗಿದೆ.

    ಘಟನೆ ಕುರಿತು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಜಶೋದಾ ಬೆನ್ ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

  • ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಜೈಪುರ: 30 ವರ್ಷದ ಸ್ವಯಂಘೋಷಿತ ದೇವಮಾನವನೊಬ್ಬ ತನ್ನ ಗುಪ್ತಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

    ಈ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ತಾರಾ ನಗರ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಮಂಗಳವಾರ ಸಂಜೆ ವೇಳೆ ಬೆಳಕಿಗೆ ಬಂದಿದೆ. ಕೃತ್ಯ ಎಸಗಿಕೊಂಡಿರೋ ಸ್ವಾಮೀಜಿಯನ್ನು ಸಂತೋಷ್ ದಾಸ್ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ಘಟನೆಗೆ ಕಾರಣವೇನು?: ಸ್ವಾಮೀಜಿ ಸಂತೋಷ್ ದಾಸ್ ತಾರ ನಗರ್ ಪ್ರದೇಶದಲ್ಲಿರುವ ತನ್ನ ಹರಿದಾಸ್ ಆಶ್ರಮದ ಪಕ್ಕದ ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಆರೋಪದಿಂದಲೇ ಸ್ವಾಮೀಜಿ ಈ ಕೃತ್ಯ ಎಸಗಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

    ಇದನ್ನೂ ಓದಿ:  ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ 

    ಮಂಗಳವಾರ ಬೆಳಗ್ಗೆ ಸ್ಥಳೀಯರ ಆರೋಪವನ್ನು ಸ್ವಾಮೀಜಿ ಒಪ್ಪಿಕೊಂಡಿದ್ದಾನೆ. ಈ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸ್ವಾಮೀಜಿ ಆಶ್ರಮಕ್ಕೆ ಬಂದು ತನ್ನ ಗುಪ್ತಾಂಗವನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ಬಳಿಕ ನೋವಿನಿಂದ ಚೀರಾಡಿಕೊಂಡಿದ್ದಾನೆ. ಈ ವೇಳೆ ಆಶ್ರಮದಲ್ಲಿದ್ದ ಇತರ ಸ್ವಾಮೀಜಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ದಾಸ್ ನನ್ನು ತಾರಾ ನಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬಿಕನೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಸದ್ಯ ಸ್ವಾಮೀಜಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಇದನ್ನೂ ಓದಿ: ಕೇರಳದ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ್ದು ಮಗಳ ಬಾಯ್ ಫ್ರೆಂಡ್ – ತಾಯಿಯಿಂದ ದೂರು

    ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ವಾಮೀಜಿಯಿಂದ ಹೇಳಿಕೆಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಾಗಿದೆ. ಕೆಲ ತಿಂಗಳ ಹಿಂದೆ ತೇರಳದ ತಿರುವನಂತಪುರಂನಲ್ಲಿ ಸ್ವಾಮೀಜಿಯೊಬ್ಬರ ಗುಪ್ತಾಂಗವನ್ನು ಕತ್ತರಿಸಿದ್ದು ಸುದ್ದಿಯಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಈ ಕೃತ್ಯ ಎಸಗಿದ್ದಾಳೆ ಎಂದಿದ್ದರೂ ನಂತರ ಸ್ವಾಮೀಜಿ ನಾನೇ ಗುಪ್ತಾಂಗವನ್ನು ಕತ್ತರಿಸಿಕೊಂಡೆ ಎಂದು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

    https://www.youtube.com/watch?v=Oul2v2F1DEM

  • ಕ್ಯಾಂಪಸ್‍ನಲ್ಲಿ ಕನ್ನಡ ಧ್ವಜ ಹಾರಿಸ್ಬೇಡಿ- ಪ್ರಾಂಶುಪಾಲರಿಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಇ-ಮೇಲ್

    ಕ್ಯಾಂಪಸ್‍ನಲ್ಲಿ ಕನ್ನಡ ಧ್ವಜ ಹಾರಿಸ್ಬೇಡಿ- ಪ್ರಾಂಶುಪಾಲರಿಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಇ-ಮೇಲ್

    ಬೆಂಗಳೂರು: ಕ್ಯಾಂಪಸ್‍ನಲ್ಲಿ ಕನ್ನಡ ಧ್ವಜ ಹಾರಿಸದಂತೆ ಹೊರ ರಾಜ್ಯದ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಆರ್‍ವಿ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಯಾದ ರಾಜಸ್ಥಾನ ಮೂಲದ ಮಧುಪ್ ಗುಪ್ತಾ ಇ-ಮೇಲ್ ಮೂಲಕ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ.

    ಮಧುಪ್ ಗುಪ್ತಾ ಬಿಇ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಕ್ಯಾಂಪಸ್‍ನಲ್ಲಿ ಕನ್ನಡ ಧ್ವಜ ಹಾರಿಸುವುದರಿಂದ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯುಂಟಾಗುತ್ತೆ ಅಂತ ಪತ್ರದಲ್ಲಿ ಬರೆದಿದ್ದಾನೆ.

    ವಿದ್ಯಾರ್ಥಿಯ ಕನ್ನಡ ವಿರೋಧಿ ಇ-ಮೇಲ್‍ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ವಿದ್ಯಾರ್ಥಿ ಕ್ಷಮಾಪಣೆ ಕೇಳಿದ್ದಾನೆ.