Tag: ರಾಜಸ್ತಾನ್ ರಾಯಲ್ಸ್

  • BCCIನಿಂದ ನಿರ್ಲಕ್ಷ್ಯಕ್ಕೀಡಾಗಿದ್ದ ಇಶಾನ್‌ ಕಿಶನ್‌ನಿಂದ ಬೌಂಡರಿ, ಸಿಕ್ಸರ್‌ ಸುರಿಮಳೆ – SRH ಪರ 45 ಬಾಲ್‌ಗೆ ಸೆಂಚುರಿ

    BCCIನಿಂದ ನಿರ್ಲಕ್ಷ್ಯಕ್ಕೀಡಾಗಿದ್ದ ಇಶಾನ್‌ ಕಿಶನ್‌ನಿಂದ ಬೌಂಡರಿ, ಸಿಕ್ಸರ್‌ ಸುರಿಮಳೆ – SRH ಪರ 45 ಬಾಲ್‌ಗೆ ಸೆಂಚುರಿ

    ಹೈದರಾಬಾದ್: ಭಾನುವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಐಪಿಎಲ್‌ 2025ರ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಶತಕ ಸಿಡಿಸಿ ಇಶಾನ್‌ ಕಿಶನ್‌ ಮಿಂಚಿದ್ದಾರೆ. 2025ರ ಐಪಿಎಲ್‌ ಟೂರ್ನಿಯಲ್ಲಿ ಇದು ಮೊದಲ ಶತಕ. ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಕಿಶನ್‌ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.

    ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 106 ರನ್‌ ಗಳಿಸಿದ್ದು ವಿಶೇಷವಾಗಿತ್ತು. ಮೆಗಾ ಹರಾಜಿನಲ್ಲಿ 11.25 ಕೋಟಿ ರೂ.ಗೆ ಖರೀದಿಸಿದ ನಂತರ ಎಸ್‌ಆರ್‌ಹೆಚ್‌ ಪರ ಕಿಶನ್‌ ಆಡಿದ ಮೊದಲ ಪಂದ್ಯ ಇದು. ತಮ್ಮ ಫಸ್ಟ್‌ ಮ್ಯಾಚ್‌ನಲ್ಲೇ ಅಬ್ಬರಿಸಿದ್ದಾರೆ.

    ಸ್ವಲ್ಪ ಉದಾಸೀನ ಮನೋಭಾವದ ಕಿಶನ್‌ಗೆ ಬುದ್ದಿ ಕಲಿಸಲೆಂದು ಆಗಿನ ಟೀಂ ಇಂಡಿಯಾದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌, ಒಂದಷ್ಟು ದೇಶೀಯ ಪಂದ್ಯಗಳನ್ನು ಆಡಿ ಬರುವಂತೆ ಹೇಳಿದ್ದರು. ಆದರೆ, ಕಿಶನ್‌ ಅದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಪರಿಣಾಮವಾಗಿ 2024ರಲ್ಲಿ ಬಿಸಿಸಿಐ ವಾರ್ಷಿಕ ಒಪ್ಪಂದದ ಪಟ್ಟಿಯಿಂದಲೂ ಕಿಶನ್‌ ಅವರನ್ನು ಹೊರಗಿಡಲಾಯಿತು.

    ಇಂದು ಎಸ್‌ಆರ್‌ಹೆಚ್‌ ಪರ ಕೀಪರ್‌ ಬ್ಯಾಟರ್‌ ನೀಡಿದ ಪ್ರದರ್ಶನವು ಬಿಸಿಸಿಐ ಟಕ್ಕರ್‌ ಕೊಟ್ಟಂತಿದೆ. ಉತ್ತಮ ಫಾರ್ಮ್‌ನಲ್ಲಿದ್ದಾಗಲೇ ಆಟಗಾರರನ್ನು ಬಿಸಿಸಿಐ ಹೊರಗಿಟ್ಟಿತ್ತು. ಐಪಿಎಲ್‌ ಇತಿಹಾಸದಲ್ಲೇ ಇದು ಎರಡನೇ ಅತಿ ಹೆಚ್ಚು ರನ್‌ ಗಳಿಕೆಯಾಗಿದೆ. ಈ ಹಿಂದೆ ಆರ್‌ಸಿಬಿ ವಿರುದ್ಧ ಕೇವಲ 3 ವಿಕೆಟ್‌ ನಷ್ಟಕ್ಕೆ ಹೈದರಾಬಾದ್‌ 287 ರನ್‌ ಬಾರಿಸಿತ್ತು.

  • ರಾಜಸ್ತಾನ್ ರಾಯಲ್ಸ್‌ಗೆ, ರಾಯಲ್ ಚಾಲೆಂಜರ್ಸ್ ಸವಾಲು

    ರಾಜಸ್ತಾನ್ ರಾಯಲ್ಸ್‌ಗೆ, ರಾಯಲ್ ಚಾಲೆಂಜರ್ಸ್ ಸವಾಲು

    ದುಬೈ: ಐಪಿಎಲ್ ದ್ವಿತೀಯಾರ್ಧದ 43ನೇ ಪಂದ್ಯದಲ್ಲಿಂದು ರಾಜಸ್ತಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.

    ಬೆಂಗಳೂರು ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದಿರುವ ನಾಲ್ಕು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ಆರ್​ಸಿಬಿ  ಆಡಿರುವ ಓಟ್ಟು 10 ಪಂದ್ಯಗಳಲ್ಲಿ 6 ರಲ್ಲಿ ಜಯ ಹಾಗೂ ನಾಲ್ಕರಲ್ಲಿ ಸೋಲು ಕಂಡಿದೆ. ಇನ್ನೊಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ಟೂರ್ನಿಯಲ್ಲಿ ಉಳಿಯಬೇಕಾದರೆ ಗೆಲುವು ಅನಿವಾರ್ಯವಾಗಿದೆ. ಒಟ್ಟು 10 ಪಂದ್ಯಗಳನ್ನಾಡಿರುವ ರಾಜಸ್ತಾನ್ 4 ಗೆಲುವು ಹಾಗೂ 6 ಸೋಲುಗಳನ್ನು ಕಂಡಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ 7ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್

    ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ  11, ರಾಜಸ್ತಾನ್ 10ರಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲದ ಹೋರಾಟ ನಡೆಸಿವೆ. ಸದ್ಯ ಆರ್​ಸಿಬಿಯ ಆಟಗಾರರು ಉತ್ತಮ ಫಾರ್ಮ್‍ನಲ್ಲಿದ್ದು, ಪಂದ್ಯವನ್ನು ಗೆಲ್ಲುವ ಹುಮ್ಮಸಿನಲ್ಲಿದೆ.

    ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ಬಳಿಕ ಬೆಂಗಳೂರು ತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಕ್ಸ್‍ವೆಲ್ ಅಬ್ಬರ ಆರ್‍ಸಿಬಿ ತಂಡಕ್ಕೆ ಆನೆ ಬಲ ತಂದುಕೊಟ್ಟಿದೆ. ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಸುಧಾರಿಸಿರುವ ಬೆಂಗಳೂರು ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಇದನ್ನೂ ಓದಿ: ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ರಾಜಸ್ಥಾನ್ ರಾಯಲ್ಸ್ ಕೂಡ ಬಲಿಷ್ಟ ತಂಡವಾಗಿದ್ದರೂ, ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡುತ್ತಿಲ್ಲ. ಟೂರ್ನಿಯ ಆರಂಭದಲ್ಲಿ ಪಂಜಾಬ್ ವಿರುದ್ಧ ಮೊದಲ ಪಂದ್ಯ ಗೆದ್ದು ಉಳಿದ ಪಂದ್ಯಗಳನ್ನು ಗೆಲುವಿನ ಅಂತರದಲ್ಲಿ ಕೈಚೆಲ್ಲಿದೆ. ನಾಯಕ ಸಂಜು ಸಮ್ಸನ್, ಲಿವಿಸ್ ಬಿಟ್ಟರೆ ಉಳಿದ ಬ್ಯಾಟ್ಸ್‍ಮನ್‍ಗಳು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗುತ್ತಿದ್ದಾರೆ. ಬೌಲಿಂಗ್ ವಿಭಾಗ ಕೂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಾಣದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.

    ಉಭಯ ತಂಡಗಳು ಇಂದು ದುಬೈನಲ್ಲಿ ಸೆಣಸಾಟ ನಡೆಸಲಿದ್ದು, ಸೋಲಿನ ಸರಪಳಿ ಕಳಚಲು ರಾಜಸ್ತಾನ್ ರಾಯಲ್ಸ್ ಸಿದ್ದವಾಗಿದೆ. ಮತ್ತೊಂದೆಡೆ ಪ್ಲೇ ಆಫ್ ಗೆ ಲಗ್ಗೆ ಹಾಕಲು ಆರ್​ಸಿಬಿಗೆ ಇನ್ನೆರೆಡು ಗೆಲುವ ಅಗತ್ಯವಾಗಿದೆ.

  • ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 7 ವಿಕೆಟ್‍ಗಳ ಭರ್ಜರಿ ಜಯಗಳಿಸುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ.

    ರಾಜಸ್ಥಾನ ನೀಡಿದ್ದ 165 ರನ್‍ಗಳ ಗುರಿಯನ್ನು ಬೆನ್ನತ್ತಿದ ಹೈದರಾಬಾದ್, 18.3 ಓವರ್‌ಗಳಲ್ಲಿ 167 ರನ್ ಗಳಿಸಿ ಜಯದ ನಗೆ ಬೀರಿತು. ಈ ಮೂಲಕ ಯುಎಇನಲ್ಲಿ ಮೊದಲ ಜಯವನ್ನು ತನ್ನದಾಗಿಸಿಕೊಂಡಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, ದುಬೈ ಪಿಚ್‍ನಲ್ಲಿ ನಿಧಾನವಾಗಿ ಉತ್ತಮ ಮೊತ್ತ ಕಲೆ ಹಾಕಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 164ರನ್ ಪೇರಿಸಿತು. ರಾಜಸ್ಥಾನ್ ಪರ ಜೈಸ್ವಾಲ್ 36 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿದರು. ಮಹಿಪಾಲ್ ಲೊಮರ್ 29ರನ್ (28 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿದರೆ, ನಾಯಕ ಸಂಜು ಸ್ಯಾಮ್ಸನ್ 82 ರನ್ (57 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಹೈದರಾಬಾದ್ ಬೌಲರ್‍ಗಳನ್ನು ಬೆಂಡೆತ್ತಿದರು. ಸನ್ ರೈಸರ್ಸ್ ಹೈದರಾಬಾದ್ ಪರ ಸಿದ್ದಾರ್ಥ್ ಕೌಲ್ 2, ರಶೀದ್ ಖಾನ್ 1, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10ಏ ಕಿಂಗ್

    165 ರನ್‍ಗಳ ಗುರಿ ಬೆನ್ನತ್ತಿದ ಹೈದರಾಬಾದ್‍ಗೆ ಜೇಸನ್ ರಾಯ್ ಹಾಗೂ ವೃದ್ಧಿಮಾನ್ ಸಹಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ, 5.1 ಓವರ್‌ಗಳಲ್ಲಿ 57 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ವೃದ್ಧಿಮಾನ್ ಸಹಾ 18 ರನ್ (11 ಎಸೆತ, 2 ಬೌಂಡರಿ, 1 ಸಿಕ್ಸರ್) ಮಹಿಪಾಲ್‍ಗೆ ವಿಕೆಟ್ ಒಪ್ಪಿಸಿದರು. ರಾಜಸ್ಥಾನ್ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ ಜೇಸನ್ ರಾಯ್ 60 ರನ್ (42 ಎಸೆತ, 8 ಬೌಂಡರಿ, 1 ಸಿಕ್ಸರ್) ಚಚ್ಚಿ ಚೇತನ್ ಸಕರಿಯಾಗೆ ವಿಕೆಟ್ ಕೊಟ್ಟು ಹೊರ ನಡೆದರು. ನಂತರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆಟವಾಡಿ ಸನ್ ರೈಸರ್ಸ್ ಹೈದರಾಬಾದ್‍ಗೆ ಗೆಲುವು ದೊರಕಿಸಿಕೊಟ್ಟರು. ಇದನ್ನೂ ಓದಿ: 5 ಎಸೆತದಲ್ಲಿ 21 ರನ್ ಚಚ್ಚಿದ ಜಡೇಜಾ – ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಜಯ

    ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ಕೇನ್ ವಿಲಿಯಮ್ಸನ್, 51 ರನ್ (41 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇವರಿಗೆ ಉತ್ತಮ ಸಾಥ್ ನೀಡಿದ ಅಭಿಷೇಕ್ ಶರ್ಮಾ 21 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ ತಂಡದ ಗೆಲುವಿಗೆ ಸಹಕಾರಿಯಾದರು.

  • ರಾಜಸ್ತಾನ್ ರಾಯಲ್ಸ್ ಬಗ್ಗು ಬಡಿದ ಡೆಲ್ಲಿ ಪ್ಲೇ ಆಫ್‍ಗೆ ಎಂಟ್ರಿ

    ರಾಜಸ್ತಾನ್ ರಾಯಲ್ಸ್ ಬಗ್ಗು ಬಡಿದ ಡೆಲ್ಲಿ ಪ್ಲೇ ಆಫ್‍ಗೆ ಎಂಟ್ರಿ

    – ಡೆಲ್ಲಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ತಾನ್
    – ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆರಿದ ಡೆಲ್ಲಿ ಕ್ಯಾಪಿಟಲ್ಸ್

    ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ತಾನ್ ರಾಯಲ್ಸ್ ತಂಡವನ್ನು 33 ರನ್‍ಗಳ ಅಂತರದಲ್ಲಿ ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 155 ರನ್‍ಗಳ ಸವಾಲು ಪಡೆದ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

    ಡೆಲ್ಲಿ ತಂಡದ ಆರಂಭಿಕರಾದ ಪೃಥ್ವಿ ಶಾ ಹಾಗೂ ಧವನ್‍ರನ್ನು ಬೇಗ ಔಟ್ ಮಾಡುವ ಮೂಲಕ ಆರಂಭಿಕ ಅಘಾತ ನೀಡಿತು. ಶಾ 12 ಎಸೆತಗಳಲ್ಲಿ 10 ರನ್, ಧವನ್ 8 ಎಸೆತಗಳಲ್ಲಿ 8 ರನ್‍ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ನಂತರ ಜೊತೆಯಾದ ನಾಯಕ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿದರು.

    ಡೆಲ್ಲಿ ಕ್ಯಾಪಿಡಲ್ಸ್ ಪರ ಪಂತ್ 24, ಹಾಗೂ ಅಯ್ಯರ್ 43, ಹೆಟ್ಮಿಯರ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಬಿರುಸಿನ 28 ರನ್‍ಗಳಿಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್‍ಗಳಿಸಿತು. ರಾಜಸ್ತಾನ್ ಪರ ಮುಸ್ತಫಜುರ್ ರೆಹಮಾನ್ ಹಾಗೂ ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಪಡೆದರು. ಇದನ್ನೂ ಓದಿ: ಆರ್​ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ

    157 ರನ್ ಟಾರ್ಗೆಟ್ ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್, ಆರಂಭದಲ್ಲೇ ಡೆಲ್ಲಿ ಬೌಲರ್‍ಗಳನ್ನು ಎದುರಿಸಲಾಗದೆ ವಿಕೆಟ್‍ಗಳನ್ನು ಕಳೆದುಕೊಂಡಿತು. ಡೆಲ್ಲಿ ಪರ ಲಿವಿಂಗ್‍ಸ್ಟೊನ್ 1 ರನ್, ಜೈಸ್ವಾಲ್ 4 ಎಸೆತಗಳಲ್ಲಿ 5 ರನ್, ಮಿಲ್ಲರ್ 10 ಎಸೆತಗಳಲ್ಲಿ 7 ರನ್‍ಗಳಿಸಿದರು. ಮಹಿಪಾಲ್ ಲೊಮರ್ 24 ಎಸೆತಗಳಲ್ಲಿ 19 ರನ್‍ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.

    ಆರಂಭದಿಂದಲೂ ಶಿಸ್ತಿನ ದಾಳಿ ನಡೆಸಿದ ಡೆಲ್ಲಿ ಬೌಲರ್ಸ್, ರಾಜಸ್ತಾನವನ್ನು ರನ್‍ಗಳಿಸಲು ಪರಾದಡುವಂತೆ ಮಾಡಿದರು. ರಾಜಸ್ತಾನ್ ಪರ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ಹೊರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಸಂಜು 53 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 70 ರನ್‍ಗಳಿಸಿದರು. ಡೆಲ್ಲಿ ಪರ ಅನ್ರಿಚ್ ನಾಟ್ರ್ಜೆ 2 ವಿಕೆಟ್ ಅಶ್ವಿನ್ 1, ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.