Tag: ರಾಜಶೇಖರ್

  • ಪರದೇಸಿ c/o ಲಂಡನ್ – ವಿಜಯ್ ರಾಘವೇಂದ್ರ ಮೇಲೆ ನಿರ್ದೇಶಕರ ಭರವಸೆ!

    ಪರದೇಸಿ c/o ಲಂಡನ್ – ವಿಜಯ್ ರಾಘವೇಂದ್ರ ಮೇಲೆ ನಿರ್ದೇಶಕರ ಭರವಸೆ!

    ವಿಜಯ್ ರಾಘವೇಂದ್ರ ನಟನೆಯ ಪರದೇಸಿ ಕೇರಾಫ್ ಲಂಡನ್ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಟೈಟಲ್ ಒಂದು ಆಕರ್ಷಣೆಯಾದರೆ ಇದರ ಬಗ್ಗೆ ಹೊರ ಬೀಳುತ್ತಿರೋ ಕುತೂಹಲದ ವಿಚಾರಗಳಿಂದಾಗಿ ಪ್ರೇಕ್ಷಕರೂ ಕೂಡಾ ಇದರ ಬಗ್ಗೆ ಆಕರ್ಷಿತರಾಗಿದ್ದಾರೆ. ಈ ಹಿಂದೆ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಜೋಡಿಯ ರಾಜ ಲವ್ಸ್ ರಾಧೆ ಗೆಲುವು ಕಂಡಿತ್ತಲ್ಲಾ? ಆ ಹಿಸ್ಟರಿ ಮತ್ತೆ ಮರುಕಳಿಸುತ್ತದೆಂಬ ಮಾತೇ ಎಲ್ಲೆಡೆ ಕೇಳಿ ಬರುತ್ತಿದೆ.

    ಬಹುತೇಕ ಚಿತ್ರತಂಡಗಳು ಒಂದು ಚಿತ್ರ ಪೂರ್ಣಗೊಳ್ಳುವ ಮುನ್ನವೇ ಛಿದ್ರವಾಗೋದೇ ಹೆಚ್ಚು. ಒಂದೇ ತಂಡ ಮತ್ತೊಂದು ಚಿತ್ರವನ್ನೂ ಸೇರಿ ಮಾಡಿದರೆ ಅದು ಪವಾಡದಂತೆಯೇ ಗೋಚರಿಸುತ್ತೆ. ಪರದೇಸಿ ಕೇರಾಫ್ ಲಂಡನ್ ವಿಚಾರದಲ್ಲಿ ಮಾತ್ರ ಅಂಥಾದ್ದೊಂದು ಪವಾಡ ಸಂಭವಿಸಿದೆ!

    ಇದು ನಿರ್ದೇಶಕ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಕಾಂಬಿನೇಷನ್ನಿನ ಎರಡನೇ ಚಿತ್ರ. ಇದೇ ಜೋಡಿ ಈ ಹಿಂದೆ ರಾಜ ಲವ್ಸ್ ರಾಧೆ ಮೂಲಕ ಮೋಡಿ ಮಾಡಿತ್ತು. ಆ ಚಿತ್ರವಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ರಾಜಶೇಖರ್ ವಿಜಯ್ ರಾಘವೇಂದ್ರ ಜೊತೆ ಮತ್ತೊಂದು ಚಿತ್ರ ಮಾಡುವ ಸುಳಿವನ್ನೂ ಬಿಟ್ಟು ಕೊಟ್ಟಿದ್ದರು. ಅದೇ ರೀತಿ ಈ ಜೋಡಿಯ ಸಂಗಮದೊಂದಿಗೆ ಈ ಚಿತ್ರ ವೇಗವಾಗಿ ತಯಾರಾಗಿ ನಿಂತಿದೆ. ಈ ತಿಂಗಳಾಂತ್ಯದಲ್ಲಿಯೇ ತೆರೆ ಕಾಣುವ ತಯಾರಿಯಲ್ಲಿದೆ.

    ಪರದೇಸಿ ಕೇರಾಫ್ ಲಂಡನ್ ಚಿತ್ರದ ಮೂಲಕ ವಿಜಯ್ ರಾಘವೇಂದ್ರರಿಗೆ ವಿಶಿಷ್ಟವಾದೊಂದು ಪಾತ್ರವನ್ನು ನಿರ್ದೇಶಕರು ಸೃಷ್ಟಿ ಮಾಡಿದ್ದಾರಂತೆ. ಈ ಪಾತ್ರ ಪ್ರೇಕ್ಷಕರಿಗೆ ಸರ್ಪ್ರೈಸ್ ನಂತಿರಲಿದೆಯಂತೆ. ಅದು ಯಾವ ರೀತಿಯದ್ದೆಂಬುದು ಈ ತಿಂಗಳಲ್ಲಿಯೇ ಬಯಲಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪರದೇಸಿ ಕೇರಾಫ್ ಲಂಡನ್ – ಇಲ್ಲಿರೋದು ಡಿಫರೆಂಟ್ ವಿಜಯ್ ರಾಘವೇಂದ್ರ!

    ಪರದೇಸಿ ಕೇರಾಫ್ ಲಂಡನ್ – ಇಲ್ಲಿರೋದು ಡಿಫರೆಂಟ್ ವಿಜಯ್ ರಾಘವೇಂದ್ರ!

    ರಾಜಶೇಖರ್ ನಿರ್ದೇಶನದ ಪರದೇಸಿ ಕೇರಾಫ್ ಲಂಡನ್ ಈ ತಿಂಗಳು ತೆರೆ ಕಾಣಲಿದೆ. ಈಗಾಗಲೇ ಹಾಡುಗಳ ಮೂಲಕವೂ ಭಾರೀ ಕ್ರೇಜ್ ಸೃಷ್ಟಿಸಿರೋ ಈ ಚಿತ್ರ ವಿಜಯ್ ರಾಘವೇಂದ್ರ ಅವರ ವೃತ್ತಿ ಬದುಕಲ್ಲಿ ಹೊಸ ತಿರುವು ನೀಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ರಾಜಶೇಖರ್ ಅಂಥಾದ್ದೊಂದು ರಸವತ್ತಾದ ಕಥನವನ್ನಿಲ್ಲಿ ದೃಶ್ಯ ರೂಪಕವಾಗಿಸಿದ್ದಾರೆ.

    ವಿಜಯ್ ರಾಘವೇಂದ್ರರನ್ನು ಹೊಸ ಗೆಟಪ್ಪಿನಲ್ಲಿ ಕಾಣಿಸಬೇಕೆಂಬ ಹಂಬಲದೊಂದಿಗೆ ಈ ಕಥೆಯನ್ನು ಸಿದ್ಧಪಡಿಸಿದ್ದವರು ರಾಜಶೇಖರ್. ಚಿತ್ರೀಕರಣವನ್ನೆಲ್ಲ ಅಚ್ಚುಕಟ್ಟಾಗಿಯೇ ಮಾಡಿ ಮುಗಿಸಿದ್ದ ಅವರು ಪ್ರತಿಯೊಂದು ವಿಚಾರದಲ್ಲಿಯೂ ಅದೇ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸಿದ್ದರು. ಹಾಡುಗಳ ವಿಚಾರದಲ್ಲಿ ಅವರು ವಹಿಸಿದ್ದ ಮುತುವರ್ಜಿಯೇ ಈ ಮಾತಿಗೆ ಸಾಕ್ಷಿಯಾಗುತ್ತೆ.

    ಸಾಮಾನ್ಯವಾಗಿ ಇತ್ತೀಚಿನ ಚಿತ್ರಗಳ ಹಾಡುಗಳಿಗೆ ಒಂದೋ ಪರಭಾಷಾ ಗಾಯಕ, ಗಾಯಕಿಯರಾಗಬೇಕು. ಇಲ್ಲದಿದ್ದರೆ ಕನ್ನಡದ ಖ್ಯಾತನಾಮರೇ ಹಾಡಬೇಕೆಂಬ ಟ್ರೆಂಡಿದೆ. ಕೆಲ ಮಂದಿ ಅದರ ಆಚೀಚೆಗೆ ದೃಷ್ಟಿ ಹಾಯಿಸಿದ್ದಿದೆ. ಆದರೆ ರಾಜಶೇಖರ್ ಅಪ್ಪಟ ಈ ನೆಲದ ಅಪರೂಪದ ಮಹಿಳೆಯೋರ್ವರಿಂದ ಒಂದು ಹಾಡನ್ನು ಹಾಡಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಎಂಬ ಹಾಡಿನ ಶೋನ ಮೂಲಕ ಪ್ರಸಿದ್ಧಿ ಪಡೆದವರು ಗಂಗಮ್ಮ. ಹಳ್ಳಿಗಾಡಿನಿಂದ ಬಂದಿರೋ ಗಂಗಮ್ಮ ಯಾವ ಥರದ ಹಾಡನ್ನೇ ಆದರೂ ಶ್ರುತಿಬದ್ಧವಾಗಿ, ಎಂಥವರೂ ತಲೆದೂಗುವಂತೆ ಹಾಡುವ ಕಲೆಗಾರಿಕೆಯ ಮೂಲಕವೇ ಗಾನಕೋಗಿಲೆ ಗಂಗಮ್ಮ ಎಂದೇ ಪ್ರಸಿದ್ಧರಾಗಿದ್ದಾರೆ. ರಾಜಶೇಖರ್ ತಮ್ಮ ಚಿತ್ರಕ್ಕಾಗಿ ಗಂಗಮ್ಮನವರಿಂದಲೇ ಒಂದು ಚೆಂದದ ಹಾಡನ್ನು ಹಾಡಿಸಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಈ ಹಾಡೂ ಕೂಡಾ ಜನಮನ ಗೆದ್ದಿದೆ. ಈ ಮೂಲಕವೇ ಈ ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆ ಮಾತುಗಳು ಹರಡಿಕೊಂಡಿವೆ. ಅದೆಲ್ಲವೂ ಗೆಲುವಾಗುವ ಸ್ಪಷ್ಟ ಸೂಚನೆಗಳೂ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಜುಂಡಿ ಕಲ್ಯಾಣ ನಿರ್ದೇಶಕ ಎಂ.ಎಸ್ ರಾಜಶೇಖರ್ ವಿಧಿವಶ

    ನಂಜುಂಡಿ ಕಲ್ಯಾಣ ನಿರ್ದೇಶಕ ಎಂ.ಎಸ್ ರಾಜಶೇಖರ್ ವಿಧಿವಶ

    ಬೆಂಗಳೂರು: ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ ವಿಧಿವಶರಾಗಿದ್ದಾರೆ.

    ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ರಾಜಶೇಖರ್ ಅವರು ನಿಧನರಾಗಿದ್ದಾರೆ. ರಾಜ ಶೇಖರ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ರಾಜಶೇಖರ್ ಅವರು ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಸೃಜನಶೀಲ ನಿರ್ದೇಶಕ ಎಂದೇ ಕರೆಸಿಕೊಂಡಿದ್ದರು. ಆದರೆ ಇಂದು ರಾಜಶೇಖರ್ ಎಲ್ಲರನ್ನು ಅಗಲಿ ಹೋಗಿದ್ದಾರೆ.

    ಅನುರಾಗ ಅರಳಿತು, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ನಂತಹ ಸ್ಟಾರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಗ್ಮೋರೆ ಖುಲಾಸೆಯಾದ್ರೂ ಆಶ್ಚರ್ಯವಿಲ್ಲ: ಪ್ರಗತಿಪರ ಚಿಂತಕ ಸಂಶಯ

    ವಾಗ್ಮೋರೆ ಖುಲಾಸೆಯಾದ್ರೂ ಆಶ್ಚರ್ಯವಿಲ್ಲ: ಪ್ರಗತಿಪರ ಚಿಂತಕ ಸಂಶಯ

    ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಯನ್ನು ಕೋರ್ಟ್ ತಾಂತ್ರಿಕ ಕಾರಣ ಕೊಟ್ಟು ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಅಂತ ವಿಮರ್ಷಕ, ಪ್ರಗತಿಪರ ಚಿಂತಕ ಜಿ ರಾಜಶೇಖರ್ ಸಂಶಯ ವ್ಯಕ್ತಗೊಳಿಸಿದರು.

    ಶನಿವಾರ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸಂಸ್ಮರಣೆ ನಡೆಯಿತು. ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿಚಾರವಾದಿ ಜಿ.ರಾಜಶೇಖರ್, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದಿದ್ದಾರೆ. ಆರೋಪಿ ಪರಶುರಾಮ ವಾಗ್ಮೋರೆ ಓರ್ವ ಗಲಭೆಕೋರ. ಸಿಂಧಗಿಯಲ್ಲಿ ಪಾಕ್ ಧ್ವಜದ ವಿಚಾರದಲ್ಲಿ ಘರ್ಷಣೆಗೆ ಕಾರಣವಾಗಿದ್ದವ ಎಂದರು.

    ಧ್ವಜದ ಪ್ರಕರಣದಿಂದ ವಾಗ್ಮೋರೆ ಖುಲಾಸೆಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಗೌರಿ ಕೊಲೆಯ ಆರೋಪಿಗಳು ಬಿಡುಗಡೆಯಾಗಬಹುದು. ತಾಂತ್ರಿಕ ಕಾರಣ ಕೊಟ್ಟು ಕೋರ್ಟ್ ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಎಂದು ಸಂಶಯ ವ್ಯಕ್ತಪಡಿಸಿ, ಆ ಪ್ರಕರಣ ಕೂಡ ಹೀಗೆಯೇ ಬಿದ್ದೋಯ್ತು ಎಂದರು.

    ಮಹಾತ್ಮಾ ಗಾಂಧಿಯನ್ನು ಕೊಂದವರೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮುಂತಾದ ವಿಚಾರವಾದಿಗಳನ್ನು ಕೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಆರ್ ಎಸ್ ಎಸ್ ಸಿದ್ಧಾಂತ ದೇಶದಲ್ಲಿ ಮುಸ್ಲಿಮರ ಹತ್ಯೆಗೆ ಕಾರಣವಾಗಿದೆ. ಗೌರಿ ಸೇರಿದಂತೆ ಎಲ್ಲಾ ಹತ್ಯೆಗಳು ಆರ್‍ಎಸ್‍ಎಸ್‍ನ ಸರಣಿ ಹತ್ಯೆಯೆಂದು ನಾವು ಭಾವಿಸುತ್ತೇವೆ ಎಂದು ಗಂಭೀರ ಆರೋಪ ಮಾಡಿದರು.

    ಹಿಂದುತ್ವದ ಅಮಲು ದೇಶವನ್ನು ಹಾಳುಗೆಡವುತ್ತಿದೆ. ಆರ್ ಎಸ್ ಎಸ್ ಎಸ್ ಒಂದು ದೇಶದ್ರೋಹಿ ಸಂಘಟನೆ ಅದನ್ನು ನಿಷೇಧ ಮಾಡಬೇಕಹ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv