Tag: ರಾಜಶೇಖರ್ ಹಿಟ್ನಾಳ್

  • ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ – ರಾಜಶೇಖರ ಹಿಟ್ನಾಳ್

    ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ – ರಾಜಶೇಖರ ಹಿಟ್ನಾಳ್

    ಕೊಪ್ಪಳ: ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ, ಯಾರೂ ಒತ್ತಾಯ ಮಾಡಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ್ (Rajshekar Hitnal) ವಾಗ್ದಾಳಿ ನಡೆಸಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಗೆ ಯಾರೂ ಪಟ್ಟು ಹಿಡಿದಿಲ್ಲ, ಯಾರೂ ಒತ್ತಾಯವನ್ನು ಮಾಡಿಲ್ಲ. ಸಿದ್ದರಾಮಯ್ಯ ಸಾಹೇಬರೇ 5 ವರ್ಷ ಸಿಎಂ ಆಗಿ ಮುಂದುವರೆಯತ್ತಾರೆಂದು ನಮ್ಮ ಎಲ್ಲ ಮುಖಂಡರು ಹೇಳಿದ್ದಾರೆ. ನಾನಷ್ಟೇ ಅಲ್ಲ, ಎಲ್ಲ ಮುಖಂಡರು ಹೇಳಿದ್ದಾರೆ. ಯಾರೋ ಒಬ್ಬರು ಹೇಳುತ್ತಾರೆ ಎಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಪಕ್ಷದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲ್ಲ ಎಂದರು.ಇದನ್ನೂ ಓದಿ: 5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ

    ಈಗಾಗಲೇ ಇಕ್ಬಾಲ್ ಹುಸೇನ್‌ಗೆ ನೋಟಿಸ್ ಕೊಡಲಾಗಿದೆ. ಕೇವಲ ನೋಟಿಸ್ ಅಲ್ಲ, ಅವರ ಮೇಲೆ ಕ್ರಮ ಆಗುತ್ತದೆ. ಇನ್ನೂ ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ಸಿದ್ದರಾಮಯ್ಯ ಸಾಹೇಬರ ಬಗ್ಗೆ ಯಾರೂ ಮಾತಾಡಿಲ್ಲ. ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಹಾಗೂ ಅನುದಾನ ಎಲ್ಲರಿಗೂ ಸಿಕ್ಕಿದೆ. ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.

    ಮಂಗಳವಾರ ಸಹೋದರ ರಾಘವೇಂದ್ರ ಹಿಟ್ನಾಳ್ ಸಿಎಂ ಪರ ಬ್ಯಾಟ್ ಬೀಸಿದ್ದರು, ಇಂದು ಸಹೋದರನ ಹೇಳಿಕೆಗೆ ಸಂಸದ ರಾಜಶೇಖರ್ ಹಿಟ್ನಾಳ್ ಕೂಡ ಧ್ವನಿಗೂಡಿಸಿದರು. ಪಕ್ಷದಲ್ಲಿ ಅಸಮಾಧಾನ ಇದ್ರೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬಾರದಾ? ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರೇನೂ ಬಿಜೆಪಿ ಜೊತೆ ಹೋಗ್ತೀನಿ ಅಂತಾ ಹೇಳಿದಾರಾ ಎಂದು ಕಿಡಿಕಾರಿದರು.ಇದನ್ನೂ ಓದಿ: ಪಕ್ಷದಲ್ಲಿ ಯಾರೇ ಶಿಸ್ತು ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ – ಡಿಕೆಶಿ

  • ಕೊಪ್ಪಳಕ್ಕೆ ರಾಜಶೇಖರ್‌ ರಾಜ – ಕ್ಯಾವಟೂರ್‌ಗೆ ಸೋಲು

    ಕೊಪ್ಪಳಕ್ಕೆ ರಾಜಶೇಖರ್‌ ರಾಜ – ಕ್ಯಾವಟೂರ್‌ಗೆ ಸೋಲು

    ಕೊಪ್ಪಳ: ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ (Rajashekar Hitnal) ಅವರು ಬಿಜೆಪಿ ಡಾ. ಬಸವರಾಜ್‌ ಕ್ಯಾವಟೂರ್‌ (Basavaraj S Kyavater) ಅವರನ್ನು 46,357 ಮತಗಳಿಂದ ಸೋಲಿಸಿದ್ದಾರೆ.

    ಕೊನೆಯವರೆಗೂ ರೋಚಕತೆಯಿಂದ ಕೂಡಿದ ಸ್ಪರ್ಧೆಯಲ್ಲಿ ರಾಜಶೇಖರ ಹಿಟ್ನಾಳ್‌ ಅವರು 6,63,511 ಮತಗಳನ್ನು ಪಡೆದರೆ ಬಸವರಾಜ್‌ ಕ್ಯಾವಟೂರ್‌ ಅವರು 6,17,154 ಮತಗಳನ್ನು ಪಡೆದರು.


    ಕಳೆದ ಚುನಾವಣೆಯಲ್ಲಿ ಕರಣಿ ಸಂಗಣ್ಣ (Karadi Sanganna) ಈ ಕ್ಷೇತ್ರದಿಂದ ಜಯಗಳಿಸಿದ್ದರು. ಈ ಬಾರಿಯೂ ಕರಡಿ ಸಂಗಣ್ಣ ಟಿಕೆಟ್‌ ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದಕ್ಕೆ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

    2019ರ ಚುನಾವಣೆಯಲ್ಲಿ ಕರಡಿ ಸಂಗಣ್ಣ 38 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.

     

  • ಎಲೆಕ್ಷನ್ ಬೆನ್ನಲ್ಲೇ ಕೈ, ಕಮಲ ಅಭ್ಯರ್ಥಿಗಳ ಪರ ಜೋರಾಯ್ತು ಬೆಟ್ಟಿಂಗ್ ದಂಧೆ

    ಎಲೆಕ್ಷನ್ ಬೆನ್ನಲ್ಲೇ ಕೈ, ಕಮಲ ಅಭ್ಯರ್ಥಿಗಳ ಪರ ಜೋರಾಯ್ತು ಬೆಟ್ಟಿಂಗ್ ದಂಧೆ

    ಕೊಪ್ಪಳ: ಲೋಕಸಭಾ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಇತ್ತ ಚುನಾವಣೆ ಮರುದಿನವೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಪರವಾಗಿ ಕೊಪ್ಪಳದಲ್ಲಿ ಬೆಟ್ಟಿಂಗ್ ಜೋರಾಗಿದೆ.

    ಕೊಪ್ಪಳ ಲೋಕಸಭಾ ಕ್ಷೇತ್ರ ಸಾಕಷ್ಟು ಸುದ್ದಿಯಾಗಿದ್ದ ಕ್ಷೇತ್ರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನರ ಪ್ರತಿಷ್ಠೆಯ ಕಣ ಇದಾಗಿತ್ತು. ಎರಡು ದಿನದ ಹಿಂದೆ ಚುನಾವಣೆ ಮುಗಿದು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಸಂಗಣ್ಣ ಕರಡಿ ಯೋಗ ಮಾಡಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಸ್ವಗ್ರಾಮ ಹಿಟ್ನಾಳದಲ್ಲಿ ಠಿಕಾಣಿ ಹೂಡಿದ್ದಾರೆ.

    ಅಭ್ಯರ್ಥಿಗಳಿಬ್ಬರು ರಿಲ್ಯಾಕ್ಸ್ ಮೂಡಲ್ಲಿದ್ದರೆ, ಕೊಪ್ಪಳ ನಗರದಲ್ಲಿ ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಜೋರಾಗಿದೆ. ಅದರಲ್ಲೂ ಅಹಿಂದ ವರ್ಗದ ಜನ ರಾಜಶೇಖರ್ ಹಿಟ್ನಾಳ್ ಗೆಲ್ಲುತ್ತಾರೆ ಎಂದು ಬೆಟ್ ಕಟ್ಟುತ್ತಿದ್ದಾರೆ. ಐವತ್ತು ಸಾವಿರದಿಂದ ಹಿಡಿದು ಬೆಟ್ ಲಕ್ಷ ಲಕ್ಷ ದಾಟಿದೆ. ಹಣ ಅಲ್ಲದೆ ಕೆಲವು ಹಳ್ಳಿಗಳಲ್ಲಿ ಜಮೀನಿನ ಮೇಲೆ ಬೆಟ್ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

    ಕುರುಬ ಹಾಗೂ ಮುಸ್ಲಿಂ ಮತದಾರರು ಅತೀ ಹೆಚ್ಚು ಇರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅವರೆಡು ಸಮುದಾಯದ ಮತಗಳು ರಾಜಶೇಖರ್ ಹಿಟ್ನಾಳ್ ಅವರಿಗೇ ಬಿದ್ದಿದೆ ಎಂದು ಅಂದುಕೊಂಡು ಬೆಟ್ ಕಟ್ಟುತ್ತಿದ್ದಾರೆ ಎಂದು ಸ್ಥಳೀಯರಾದ ಆರತಿ ತಿಪ್ಪಣ್ಣ ಹೇಳಿದ್ದಾರೆ.

    ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕ್ಷೇತ್ರಗಳಿವೆ. ಬೆಟ್ ಕಟ್ಟೋರು ಕ್ಷೇತ್ರವಾರು ಯಾವ ಪಾರ್ಟಿ ಲೀಡ್ ಬರತ್ತದೆ ಅನ್ನೋ ವಿಷಯಕ್ಕೂ ಬೆಟ್ ಕಟ್ಟುತ್ತಿದ್ದಾರೆ. ಬಹುತೇಕರು ಈ ಬೆಟ್ ಕಟ್ಟೋರು ಸಂಸದರು ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರಾಗಿದ್ದಾರೆ. ಕೊಪ್ಪಳ ನಗರಸಭೆ ಸದಸ್ಯರು ಬೆಟ್ ಕಟ್ಟುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಿಜೆಪಿ ಸದಸ್ಯ ಮಲ್ಲಪ್ಪ, ಕವಲೂರ ಬಿಜೆಪಿ ಗೆಲ್ಲುತ್ತದೆ ಎಂದು 25 ಲಕ್ಷ ಬೆಟ್ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.