Tag: ರಾಜರಾಜೇಶ್ವರ ದೇವಸ್ಥಾನ

  • ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ, ಆ ದೇವರೇ ಶಿಕ್ಷೆ ಕೊಡಲಿ: ಹೆಚ್‌ಡಿಕೆ

    ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ, ಆ ದೇವರೇ ಶಿಕ್ಷೆ ಕೊಡಲಿ: ಹೆಚ್‌ಡಿಕೆ

    –  ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ
    – ದಾಸರ ಕೀರ್ತನೆ ಮೂಲಕ ಡಿಕೆಶಿಗೆ ಹೆಚ್‌ಡಿಕೆ ಟಾಂಗ್

    ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರಿಗೆ ರಕ್ಷಣೆ ಮಾಡೋದಕ್ಕೆ ದೇವರು ಇರುವಂತೆ ನಮಗೂ ದೇವರಿದ್ದಾನೆ. ನಾನು ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ರಾಜರಾಜೇಶ್ವರ ದೇವರಿಗೇ ಇದನ್ನ ಬಿಡ್ತೀನಿ, ರಾಜರಾಜೇಶ್ವರ ದೇವರೆ ಅವರಿಗೆ ಶಿಕ್ಷೆ ಕೊಡಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ನಗರದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿಂದು ಸಭೆ ನಡೆಸಿ ಮಾತನಾಡಿದ ಅವರು, `ನಮ್ಮ ಸರ್ಕಾರದ ನಾಶಕ್ಕಾಗಿ ನನ್ನ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ (Shatru Bhairavi Yaga) ಮಾಡಿಸುತ್ತಿದ್ದಾರೆ’ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿ ಬಿಡು ನಾಲಿಗೆ” ಎಂಬ ಪುರಂದರ ದಾಸರ ಕೀರ್ತನೆಯ ಮೂಲಕ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಥಿಯೇಟರ್ ಸಮಸ್ಯೆ ಬಗ್ಗೆ ರಿಷಬ್ ಶೆಟ್ಟಿ ರಿಯಾಕ್ಷನ್

    ಯಾಗ ಮಾಡಿಸೋದು ಡಿಕೆಶಿ ಸಂಸ್ಕೃತಿ:
    ಡಿಸಿಎಂ ಆಗಿದ್ದರೂ ಆ ಸ್ಥಾನದ ಗೌರವ, ಮೌಲ್ಯ ಏನು ಅಂತ ಅವರಿಗೆ ಅರ್ಥ ಅಗಿಲ್ಲ. ಒಟ್ಟಿನಲ್ಲಿ ನಮ್ಮ ಕುಟುಂಬ ಮುಗಿಸಲೇಬೇಕು ಅಂತ ಶ್ರಮಪಡ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಯಾಗದ ಮಾತು ಹೇಳ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನನಗೆ ತಿಳಿವಳಿಕೆ ಬಂದಾಗಿನಿಂದ ಕುರಿ, ಕೋಣ, ಮೇಕೆ ಕಡಿಯೋದು ಯಾವತ್ತೂ ಮಾಡಿಲ್ಲ. ನಾವು ದೇವರ ಪೂಜೆ ಮಾಡ್ತೀವಿ. ಹಿಂದೂ ಸಂಸ್ಕೃತಿಯಲ್ಲಿ ಇರೋ ಧಾರ್ಮಿಕವಾಗಿ ನಾವು ಪೂಜೆ ಮಾಡ್ತೀವಿ. ನಮಗೆ ಇರೋ ದೋಷ ಪರಿಹಾರಕ್ಕೆ ದೇವಾಲಯಕ್ಕೆ ಹೋಗ್ತೀವಿ ಹೊರತು ಯಾಗ ಮಾಡುವುದಿಲ್ಲ. ಯಾಗ ಮಾಡೋದು ಡಿಕೆಶಿ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಳ್ಳನಿಗೆ ಮಳ್ಳ ಸಾಕ್ಷಿ:
    ಕಳ್ಳನಿಗೆ ಮಳ್ಳನ ಸಾಕ್ಷಿ ಎಂಬಂತೆ ಅವರೆ ತಮ್ಮ ನಮ್ಮ ಹೆಸರು ಹೇಳ್ತಾರೆ. ನಾನು ಎರಡು ಬಾರಿ ಸಿಎಂ ಆಗಿದ್ದೆ ಕೋಣ, ಕುರಿ ಕಡಿದು ಆಗಿಲ್ಲ. ದೇವರು ಕೊಟ್ಟು, ಆಗಿದ್ದೇನೆ. ದೇವೇಗೌಡರು ಅಧಿಕಾರ ಅನುಭವಿಸಿದ್ದೇ ಕಡಿಮೆ ಅವಧಿ. ಅದೇನು ಕೋಳಿ, ಕುರಿ ಕಡಿದು ಮಾಡಿ ಆಗಿದ್ದಾ? ಡಿಕೆ ಶಿವಕುಮಾರ್ ದೇವರು, ಶರಣರ ಜೊತೆ ಚೆಲ್ಲಾಟ ಆಡಬಾರದು. ಡಿಸಿಎಂ ನನಗೆ ಸ್ಪಷ್ಟ ಮಾಹಿತಿ ಇದೆ ಅಂತ ಹೇಳಿದ್ದಾರೆ. ಈಗ ಎಲ್ಲದ್ದಕ್ಕೂ ಎಸ್‌ಐಟಿ ಮಾಡ್ತಾರೆ, ಇದಕ್ಕೂ ಒಂದು ಎಸ್‌ಐಟಿ ತನಿಖೆ ಮಾಡಸಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಗೌಡರ ಕುಟುಂಬ ಮುಗಿಸುವ ಸಂಚು:
    ನಾನು ಇತ್ತೀಚೆಗೆ ವಿಶ್ರಾಂತಿಗೆಂದು ಕಬಿನಿ ಹಿನ್ನಿರಿಗೆ ಹೋಗಿದ್ದೆ. ಅದಕ್ಕೂ ಕೇರಳಕ್ಕೆ ಮಾಠ ಮಾಡಿಸೋಕೆ ಅಂತ ಹೇಳಿದ್ರು. ನನ್ನ ಮೊಮ್ಮಗನ ಜೊತೆ ವಿಶ್ರಾಂತಿಗೆ ಹೋಗಿದ್ದೆ. ನಾನು ಹೋಗಿ ಯಾಗ ಮಾಡಿಸಬೇಕಾ? ಕಾನೂನಿನ ಪ್ರಕಾರ ಕೋಣ, ಕುರಿ ಬಲಿ ಕೊಟ್ಟು ನಾಶ ಮಾಡೋದು ಅಪರಾಧ. ಆಗ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ತಾನೆ. ಜನರಲ್ಲಿ ನಮ್ಮ ಕುಟುಂಬ ನೆಲ ಕಚ್ಚಿಸಬೇಕು ಅಂತ ಇಂತಹ ಸುದ್ದಿ ಹರಡಿಸುತ್ತಿದ್ದಾರೆ. ಇಡೀ ದೇವೇಗೌಡ ಕುಟುಂಬ ನಾಶ ಮಾಡೋಕೆ ಮುಂದಾಗಿದ್ದಾರೆ. ಇದು ಅದರ ಮುಂದುವರಿದ ಭಾಗ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಯಾವಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ಆಯ್ತು ಅವತ್ತಿಂದ ಇವರಿಗೆ ಉಳಿಗಾಲ ಇಲ್ಲ ಅಂತ ಹೀಗೆಲ್ಲ ಮಾಡ್ತಿದ್ದಾರೆ. 25 ಸ್ಥಾನ ಗೆಲ್ಲುತ್ತೇವೆ ಅಂತ ಓಡಾಡುತ್ತಿದ್ದರು. ನಾವು ಮೈತ್ರಿ ಆದಾಗ ಅವರಿಗೆ ಗೆಲುವು ಸಾಧ್ಯವಿಲ್ಲ ಅಂತಾ ಗೊತ್ತಾಯ್ತು, ಅದಕ್ಕೆ ನಮ್ಮ ಕುಟುಂಬವನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದರ್ ಡೈರಿ ಶಾಕ್‌ – ಇಂದಿನಿಂದ ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಳ!

  • ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ

    ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ

    ಬೆಂಗಳೂರು: ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ (Taliparamba Rajarajeswara Temple) 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸ್ಪಷ್ಟಪಡಿಸಿದ್ದಾರೆ.

    ನಾನು ರಾಜರಾಜೇಶ್ವರನ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂಬುದು ನನ್ನ ವಿನಂತಿ ಎಂದು ಡಿಕೆಶಿ ಹೇಳಿದ್ದಾರೆ.


    ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ ಮಾಡಲಾಗಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಯನ್ನು ಇಂದು ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿತ್ತು. ಇದನ್ನೂ ಓದಿ: ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

    ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿ, ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಕಡಿಯಲಾಗಿದೆ ಎಂಬ ಹೇಳಿಕೆ 100% ರಷ್ಟು ಸುಳ್ಳು ಎಂದು ಹೇಳಿದ್ದರು.

    ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ ಎಂದು ಟ್ರಸ್ಟಿ ಸದಸ್ಯರು ಹೇಳಿಕೆ ನೀಡಿದ್ದು, ದೇವಸ್ಥಾನದ ಆವರಣದಲ್ಲಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ ಎಂದಿದ್ದಾರೆ.