Tag: ರಾಜಮಾತೆ ವಿಜಯರಾಜೇ ಸಿಂಧಿಯಾ

  • ಗ್ವಾಲಿಯರ್ ರಾಜಮಾತೆ ಜನ್ಮಶತಮಾನೋತ್ಸವದಲ್ಲಿ ಬಿಎಸ್‍ವೈ ಭಾಗಿ

    ಗ್ವಾಲಿಯರ್ ರಾಜಮಾತೆ ಜನ್ಮಶತಮಾನೋತ್ಸವದಲ್ಲಿ ಬಿಎಸ್‍ವೈ ಭಾಗಿ

    – ಪ್ರಧಾನಿ ಮೋದಿಯಿಂದ 100ರೂ. ನಾಣ್ಯ ಬಿಡುಗಡೆ

    ನವದೆಹಲಿ: ಗ್ವಾಲಿಯರ್ ರಾಜಮಾತೆ ಹಾಗೂ ಮಧ್ಯಪ್ರದೇಶದ ಮಾಜಿ ಸಂಸದೆ ವಿಜಯರಾಜೇ ಸಿಂಧಿಯಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ 100ರೂ.ಗಳ ಹೊಸ ನಾಣ್ಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಹಣಕಾಸು ಇಲಾಖೆ ಮುದ್ರಿಸಿರುವ ವಿಶೇಷ 100ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುಯಲ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಗ್ವಾಲಿಯರ್ ರಾಜಮಾತೆ ಹಾಗೂ ಮಧ್ಯಪ್ರದೇಶದ ಮಾಜಿ ಸಂಸದೆ ವಿಜಯರಾಜೇ ಸಿಂಧಿಯಾ ಬಡವರಿಗಾಗಿ ಶ್ರಮಿಸಿದ್ದು, ಅಂತಹ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಅವರ ನೆನಪಿನಾರ್ಥ 100ರೂ. ನಾಣ್ಯ ಬಿಡುಗಡೆ ಮಾಡಲಾಗಿದೆ. ರಾಜಮಾತೆಯ ತಮ್ಮ ಜೀವನ ಹಾಗೂ ಕೆಲಸದ ಮೂಲಕವೇ ಯಾವಾಗಲೂ ಬಡವರ ಆಕಾಂಕ್ಷೆಗಳನ್ನು ಈಡೇರಿಸುವುದಾಗಿತ್ತು. ಜನಸೇವೆಗಾಗಿ ಅವರ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.

    ಜನರ ಸೇವೆ ಮಾಡಲು ದೊಡ್ಡ ಕುಟುಂಬದಲ್ಲಿ ಜನಿಸಬೇಕಾಗಿಲ್ಲ ಎಂಬುದನ್ನು ನಾವು ರಾಜಮಾತೆ ಸಿಂಧಿಯಾ ಜೀವನದಿಂದ ಕಲಿಯಬೇಕು. ರಾಷ್ಟ್ರದ ಮೇಲಿನ ಪ್ರೀತಿ ಹಾಗೂ ಪ್ರಜಾಪ್ರಭುತ್ವದ ಮನೋಧರ್ಮವಿದ್ದರೆ ಜನ ಸೇವೆ ಮಡಲು ಸಾಧ್ಯ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ವಿಜಯರಾಜೇ ಸಿಂಧಿಯಾ ಅವರ ಕುಟುಂಬಸ್ಥರು ಹಾಗೂ ವಿವಿಧ ಗಣ್ಯರು ಭಾಗವಹಿಸಿದ್ದರು.

    ರಾಜಮಾತೆ ವಿಜಯರಾಜೇ ಸಿಂಧಿಯಾ ಅವರು ಜನ ಸಂಘದ ನಾಯಕಿಯಾಗಿದ್ದರು. ಅಲ್ಲದೆ ಬಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಇವರು ಸಹ ಒಬ್ಬರು. ರಾಜ ಮನೆತನದಿಂದ ಬಂದ ಸಿಂಧಿಯಾ ಬಿಜೆಪಿಯ ಪ್ರಮುಖರಲ್ಲಿ ಒಬ್ಬರಾಗಿದ್ದರು. ಹಿಂದುತ್ವದ ಪ್ರತಿಪಾದಕರಾಗಿದ್ದರು. ಅವರು ಅಕ್ಟೋಬರ್ 12, 1919 ರಲ್ಲಿ ಜನಿಸಿದ್ದರು. ಅವರ ಮಗಳು ವಸುಂಧರಾ ರಾಜೆ ಹಾಗೂ ಮೊಮ್ಮಗ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯ ಹಿರಿಯರಾಗಿದ್ದಾರೆ.