Tag: ರಾಜಮನೆತನ

  • ರಾಜಮನೆತನದಿಂದ ರಾಜಕೀಯಕ್ಕೆ; ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುಮಾರಿ – ಯಾರು ಈ ರಾಜಕುಮಾರಿ?

    ರಾಜಮನೆತನದಿಂದ ರಾಜಕೀಯಕ್ಕೆ; ರಾಜಸ್ಥಾನದ ನೂತನ ಡಿಸಿಎಂ ದಿಯಾ ಕುಮಾರಿ – ಯಾರು ಈ ರಾಜಕುಮಾರಿ?

    ಜೈಪುರ: ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭಜನ್‌ಲಾಲ್‌ ಶರ್ಮಾ (Bhajanlal Sharma) ಅವರನ್ನು ರಾಸ್ಥಾನದ ನೂತನ ಸಿಎಂ ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಈ ಬೆನ್ನಲ್ಲೇ ರಾಜವಂಶಸ್ಥೆ ದಿಯಾ ಕುಮಾರಿ (Diya Kumari) ಹಾಗೂ ಹಿರಿಯ ನಾಯಕ ಪ್ರೇಮ್‌ಚಂದ್‌ ಬೈರ್ವಾ ಅವರನ್ನ ಉಪಮುಖ್ಯಮಂತ್ರಿಗಳಾಗಿ ನೇಮ ಮಾಡಿದೆ.

    ಯಾರೀ ರಾಜಕುಮಾರಿ?
    ರಾಜ್ಯಸ್ಥಾನದ ನೂತನ ಉಪಮುಖ್ಯಮಂತ್ರಿಗಳಲ್ಲಿ (Rajasthan DCM) ಒಬ್ಬರಾದ ದಿಯಾ ಕುಮಾರಿ ಅವರು 1970ರ ಜನವರಿ 30 ರಂದು ರಾಜಮನೆತನದಲ್ಲಿ (Royal Family) ಜನಿಸಿದರು. ಅವರ ಅಜ್ಜ ಮಾನ್‌ ಸಿಂಗ್‌ II (2ನೇ ಮಾನ್‌ಸಿಂಗ್‌) ಜೈಪುರದ ಕೊನೆಯ ಆಡಳಿತ ಮಹರಾಜರಾಗಿದ್ದರು. ಇನ್ನೂ ದಿಯಾ ಕುಮಾರಿ ಅವರ ತಂದೆ ಬ್ರಿಗೇಡಿಯರ್ ಸವಾಯಿ ಭವಾನಿ ಸಿಂಗ್ ಅವರಿಗೆ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಶೌರ್ಯಕ್ಕಾಗಿ ಮಹಾವೀರ ಚಕ್ರ ನೀಡಿ ಗೌರವಿಸಲಾಗಿತ್ತು. ಇದನ್ನೂ ಓದಿ: ನಾನು ಏನನ್ನಾದರೂ ಕೇಳುವುದಕ್ಕಿಂತ ಸಾಯೋದೇ ಲೇಸು..: ಶಿವರಾಜ್‌ ಸಿಂಗ್‌ ಚೌಹಾಣ್

    ದಿಯಾ ಕುಮಾರಿ ಅವರು ಮಹಾರಾಣಿ ಗಾಯತ್ರಿ ದೇವಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಬಳಿಕ ನರೇಂದ್ರ ಸಿಂಗ್ ಎಂಬವರನ್ನ ವಿವಾಹವಾದರು. ದಂಪತಿಗೆ ಜೈಪುರದ ರಾಜವಂಶಸ್ಥ ಪದ್ಮನಾಭ್ ಸಿಂಗ್ ಸೇರಿದಂತೆ ಅವರಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ 2018ರಲ್ಲಿ ದಿಯಾ ಕುಮಾರಿ ಪತಿಗೆ ವಿಚ್ಛೇದನ ನೀಡಿದ್ದರು. ಇದನ್ನೂ ಓದಿ: ಶಾಸಕರ ಆದಾಯ ಕೋಟಿ ಕೋಟಿ ಹೆಚ್ಚಾದ್ರೂ ಕನಕಪುರ ಅಭಿವೃದ್ಧಿಯಾಗಿಲ್ಲ: ಪರೋಕ್ಷವಾಗಿ ಡಿಕೆಶಿ ತಿವಿದ ಯತ್ನಾಳ್‌

    ಕಾಲೇಜು ಶಿಕ್ಷಣದ ಬಳಿಕ ರಾಜಕೀಯ ಜೀವನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದಿಯಾ ಕುಮಾರಿ 2013ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದರು. ಅಲ್ಲಿಂದ ಅವರ ರಾಜಕೀಯ ಜೀವನ ಶುರುವಾಯಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮೇಲೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕಡೆಗೆ ಆಸಕ್ತಿ ತೋರಿದರು. ಇದರಿಂದಲೇ 2019ರ ಲೋಕಸಭಾ ಚುನಾವಣೆಯಲ್ಲಿ ದಿಯಾ ರಾಜ್‌ಸಮಂದ್‌ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ಬಹುಮತದಿಂದ ಗೆದ್ದು ಸಂಸದರಾದರು. ಈ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶಿಸಿದರು.

    ರಾಜಕೀಯದ ಹೊರತಾಗಿಯೂ ದಿಯಾ ಕುಮಾರಿ, ಎರಡು ಶಾಲೆಗಳು, ಟ್ರಸ್ಟ್‌ಗಳು, ವಸ್ತುಸಂಗ್ರಹಾಲಯಗಳು, ಹೋಟೆಲ್‌ಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಹಲವಾರು ವ್ಯಾಪಾರ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಮಹಾರಾಜ ಸವಾಯಿ ಮಾನ್ ಸಿಂಗ್-II ಮ್ಯೂಸಿಯಂ ಟ್ರಸ್ಟ್ ಮತ್ತು ಜೈಗಢ್ ಫೋರ್ಟ್ ಚಾರಿಟೇಬಲ್ ಟ್ರಸ್ಟ್ ಅನ್ನು ಇತರ ಉದ್ಯಮಗಳನ್ನೂ ನಿರ್ವಹಿಸುತ್ತಿರುವುದು ಗಮನಾರ್ಹ. ಇದನ್ನೂ ಓದಿ: ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ, ಭಯೋತ್ಪಾದಕರ ಕೇಂದ್ರ ಆಗ್ತಿದೆ ರಾಜ್ಯ: ಈಶ್ವರಪ್ಪ ಕಿಡಿ

  • ರಾಜಮನೆತನದವ್ರು ಎಂದು ದೇವಾಲಯದ ನಿಯಮ ಉಲ್ಲಂಘಿಸಿದ ಮಹಿಳೆ – ಹೊರದಬ್ಬಿದ ಪೊಲೀಸ್‌ ಸಿಬ್ಬಂದಿ

    ರಾಜಮನೆತನದವ್ರು ಎಂದು ದೇವಾಲಯದ ನಿಯಮ ಉಲ್ಲಂಘಿಸಿದ ಮಹಿಳೆ – ಹೊರದಬ್ಬಿದ ಪೊಲೀಸ್‌ ಸಿಬ್ಬಂದಿ

    ಭೋಪಾಲ್: ದೇವಸ್ಥಾನದ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮಧ್ಯಪ್ರದೇಶ (Madhya Pradesh) ಪನ್ನಾದ ರಾಜಮನೆತನದ ಮಹಿಳೆ ಜಿತೇಶ್ವರಿ ದೇವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರತಿ ವರ್ಷ ಪದ್ಧತಿಯಂತೆ ಪನ್ನಾ ಜಿಲ್ಲೆಯನ್ನು ಒಳಗೊಂಡಿರುವ ಬುಂದೇಲ್‌ಖಂಡ್ ಪ್ರದೇಶದ ಜನಪ್ರಿಯ ಧಾರ್ಮಿಕ ಕ್ಷೇತ್ರವಾದ ಶ್ರೀ ಜುಗಲ್ ಕಿಶೋರ್ ದೇವಸ್ಥಾನದಲ್ಲಿ ಈ ವರ್ಷವೂ ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಿಸಲಾಯಿತು. ಇದನ್ನೂ ಓದಿ: G20 ಒಕ್ಕೂಟಕ್ಕೆ ಆಫ್ರಿಕನ್ ಯೂನಿಯನ್ ಸೇರ್ಪಡೆ

    ದೇವಸ್ಥಾನಕ್ಕೆ ಆಗಮಿಸಿದ್ದ ಜಿತೇಶ್ವರಿ ದೇವಿ ಅವರು ಸ್ವತಃ ‘ಆರತಿ’ ಮಾಡಬೇಕೆಂದು ಒತ್ತಾಯಿಸುವ ಮೂಲಕ ದೇವಾಲಯದ ಧಾರ್ಮಿಕ ಕ್ರಿಯೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದಾಗ ಎಡವಿ ಬಿದ್ದಿದ್ದಾರೆ.

    ರಾಜಮನೆತನದ ಸದಸ್ಯೆಯನ್ನು ದೇವಾಲಯದ ಆವರಣದಿಂದ ಹೊರಹೋಗುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆಸಿರುವುದೂ ದೃಶ್ಯದಲ್ಲಿ ಸೆರೆಯಾಗಿದೆ. ಜಿತೇಶ್ವರಿ ದೇವಿ ಕುಡಿದ ಅಮಲಿನಲ್ಲಿ ದೇವಸ್ಥಾನದ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಯತ್ನಿಸಿದ್ದರು ಎಂದು ದೇವಸ್ಥಾನದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ವಾಗ್ವಾದದ ವೇಳೆ ಜಿತೇಶ್ವರಿ ದೇವಿಯನ್ನು ಪೊಲೀಸ್‌ ಸಿಬ್ಬಂದಿ ದೇವಸ್ಥಾನದಿಂದ ಹೊರಗೆ ಎಳೆದಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    ಘಟನೆ ಕುರಿತು ಪನ್ನಾ ಪೊಲೀಸ್ ಅಧೀಕ್ಷಕ ಸಾಯಿ ಕೃಷ್ಣ ಎಸ್ ತೋಟಾ ಪ್ರತಿಕ್ರಿಯಿಸಿ, ಸಂಪ್ರದಾಯದಂತೆ ರಾಜಮನೆತನದ ಪುರುಷರು ಮಾತ್ರ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ದೇವಾಲಯದಲ್ಲಿ ಪೊರಕೆಯಿಂದ ಶುಚಿಗೊಳಿಸುವ ಆಚರಣೆಯಾದ “ಚಾನ್ವಾರ್” ಅನ್ನು ಅರ್ಪಿಸುತ್ತಾರೆ. ಜಿತೇಶ್ವರಿ ದೇವಿಯ ಮಗನಿಗೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಕಾರಣ, ಅವರೇ ಸ್ವತಃ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲು ಮುಂದಾಗಿದ್ದರು ಎಂದಿದ್ದಾರೆ.

    ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕರೆದುಕೊಂಡು ಹೋಗುವಾಗ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಜಿತೇಶ್ವರಿ ದೇವಿ ಅವರು ಗಂಭೀರ ಆರೋಪ ಮಾಡಿದ್ದು, ರಕ್ಷಣಾ ಕಲ್ಯಾಣ ನಿಧಿಯಿಂದ ಪನ್ನಾದಲ್ಲಿ 65,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಆಪಾದಿತ ಹಗರಣದ ಬಗ್ಗೆ ದನಿಯೆತ್ತಿದ್ದಕ್ಕಾಗಿ ತನ್ನನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಟೋಕಿಯೋ: ರಾಜಕುಮಾರಿ ಮಾಕೋ ರಾಜಮನೆತನಕ್ಕೆ ಸೇರದ ಕಾಲೇಜು ದಿನಗಳಲ್ಲಿ ಸಹಪಾಠಿಯಾಗಿದ್ದ ಕಿ ಕೊಮೊರೋ ಅವರನ್ನು ಮದುವೆಯಾಗಿದ್ದಾರೆ. ಈ ಮೂಲಕವಾಗಿ ರಾಜ ಮನೆತನಕ್ಕೆ ಸಿಗುವ ಸ್ಥಾನಮಾನ ಕಳೆದುಕೊಂಡಿದ್ದಾರೆ.

    ರಾಜಮನೆತನದಲ್ಲಿ ಜನಿಸಿದ್ದಕ್ಕಾಗಿ ಸಿಗುವ ಎಲ್ಲಾ ಸರ್ಕಾರ ಪದವಿ ಗೌರಗಳನ್ನು ಅಧಿಕೃತವಾಗಿ ಕಳೆದುಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ರಾಜಕುಮಾರಿಯ ಸ್ಥಾನಮಾನಗಳನ್ನು ಅರಮನೆ ಹಿಂಪಡೆದಿದೆ. ಇದನ್ನೂ ಓದಿ:  ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ರಾಜ ಕುಟುಂಬದ ಹೊರಗಿನವರನ್ನು ರಾಜ ಕುಟುಂಬದ ಸ್ತ್ರೀಯರು ಮದುವೆಯಾದರೆ ಅವರಿಗೆ ರಾಜಮನೆತನದಿಂದ ನೀಡುವ ರಾಯಲ್ಟಿಯನ್ನು ಮಾಕೋ ತಿರಸ್ಕರಿಸಿದ್ದಾರೆ. ಜಪಾನ್‍ನ ಚಕ್ರವರ್ತಿ ಅಕಿಹಿಟೊರವರ ಮರಿ ಮೊಮ್ಮಗಳಾದ ಮಾಕೋ ಆಕೆಯ ಕಾಲೇಜಿನ ಸಹಪಾಠಿಯಾಗಿದ್ದ ಕೆಯಿ ಕೊಮುರೊ ಜೊತೆಗೆ ವಿವಾಹವಾಗಿದ್ದಾರೆ. ಸುಮಾರು 153 ಮಿಲಿಯನ್ ಭಾರತದ ಕರೆನ್ಸಿ ಪ್ರಕಾರ 10 ಕೋಟಿ ರೂಪಾಯಿ ಹಣವನ್ನು ಮಾಕೋ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

    ರಾಣಿ ಮಾಕೋ ಮದುವೆಗೆ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕವೂ ರಾಜಕುಮಾರಿ ಮಾತ್ರ ಆಕೆಯ ಸಹಪಾಠಿಯನ್ನು ವಿವಾಹವಾಗುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಸಾಮಾನ್ಯ ಹುಡುಗನನ್ನು ಮದುವೆಯಾಗುವ ಮೂಲಕವಾಗಿ ರಾಜಮನೆತನದ ಸ್ಥಾನಮಾನ ಕಳೆದುಕೊಂಡಿದ್ದಾರೆ.

  • ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ರಾಜ ಮನೆತನಕ್ಕೆ ಅಗೌರವ!

    ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ರಾಜ ಮನೆತನಕ್ಕೆ ಅಗೌರವ!

    ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಮೈಸೂರು ರಾಜವಂಶಸ್ಥರಿಗೆ ಸಮ್ಮೇಳನದಲ್ಲಿ ಅಗೌರವ ನೀಡಲಾಗಲಿದೆ ಎನ್ನುವ ಆರೋಪ ಕೇಳಿಬಂದಿದೆ.

    ಹೌದು, ಈ ಬಾರಿಯ 83ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮೈಸೂರು ರಾಜವಂಶದ ಮನೆತನಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

    ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರ ಊರಿನಲ್ಲೇ ಸಮ್ಮೇಳನ ನಡೆಯುತ್ತಿದ್ದರೂ, ಸಾಹಿತ್ಯ ಪರಿಷತ್‍ನ ಸ್ವಾಗತ ಸಮಿತಿ ರಾಜವಂಶಸ್ಥರಿಗೆ ಆಹ್ವಾನವನ್ನು ನೀಡದೇ ನಿರ್ಲಕ್ಷ್ಯವಹಿಸಿದೆ. ಮೈಸೂರು ಒಡೆಯರ್ ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೂ ಸಮಿತಿ ಆಹ್ವಾನವನ್ನು ನೀಡಿಲ್ಲ.

    ಈಗಲೂ ಮೈಸೂರಿನ ಸಾಹಿತ್ಯ ಪರಿಷತ್ ಮೂಲ ಕಚೇರಿ ಅರಮನೆಯ ಉತ್ತರದ್ವಾರದಲ್ಲಿದೆ. ಅರಮನೆ ಆವರಣದಲ್ಲೇ ಪರಿಷತ್ ಕಚೇರಿ ಇದ್ದರೂ ರಾಜಮನೆತನದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾಹಿತ್ಯ ಸಮ್ಮೇಳನದಲ್ಲಿ ಹೆಸರಿಗಷ್ಟೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪ ನಿರ್ಮಾಣ ಮಾಡಿರುವ ಸಮಿತಿ ಸಂಪ್ರಾದಾಯಕ್ಕಾದರೂ ರಾಜವಂಶಸ್ಥರಿಗೆ ಆಹ್ವಾನ ನೀಡದೇ ಅಪಮಾನ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಟೀಕೆ ಕೇಳಿಬಂದಿದೆ.

    ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದ್ದರು.