ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಐಕಾನಿಕ್ ರಸ್ತೆ ರಾಜಪಥ್, (Rajpath) ಸದ್ಯ ಕರ್ತವ್ಯ ಪಥವಾಗಿ (Kartavya Path) ಬದಲಾಗಿರುವ ಹೊಸ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ. ಈ ಸಿದ್ಧತೆಯ ನಡುವೆ ಇನ್ನುಮುಂದೆ ನವ ಭಾರತದಲ್ಲಿ ಗುಲಾಮಿತನದ ಸಂಕೇತಗಳಿಗೆ ಸ್ಥಾನವಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇಂದು ಸಂಜೆ ಏಳು ಗಂಟೆಗೆ ರಾಜಪಥ್, ಕರ್ತವ್ಯ ಪಥವಾಗಿ ಬದಲಾಗಿರುವ ಹೊಸ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಸ್ವತಂತ್ರ ಪೂರ್ವಕ್ಕೂ ಮುನ್ನ ಕಿಂಗ್ಸ್ವೇ ಆಗಿದ್ದ ಈ ರಸ್ತೆಯನ್ನು ಸ್ವಾತಂತ್ರ್ಯದ ಬಳಿಕ ರಾಜಪಥ್ ಎಂದು ನಾಮಕರಣ ಮಾಡಲಾಗಿತ್ತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ನರೇಂದ್ರ ಮೋದಿ ಸರ್ಕಾರ ಮರು ನಾಮಕರಣ ಮಾಡಿದೆ. ಇದನ್ನೂ ಓದಿ: ಕಿಂಗ್ಸ್‌ವೇಯಿಂದ ರಾಜ್‌ಪಥ್; ರಾಜ್‌ಪಥ್‌ನಿಂದ ಕರ್ತವ್ಯ ಪಥ್ – ಇಲ್ಲಿದೆ ದೆಹಲಿಯ ಐಕಾನಿಕ್ ರಸ್ತೆಯ ಇತಿಹಾಸ
ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ನರೇಂದ್ರ ಮೋದಿ ಹೇಳಿದಂತೆ ಅಮೃತೋತ್ಸವ ಕಾಲ ಘಟ್ಟದಲ್ಲಿ ಎರಡನೇ ಪಂಚಪ್ರಾಣದ ಭಾಗವಾಗಿ ವಸಾಹತು ಶಾಹಿ ಮನಸ್ಥಿತಿಯ ಕುರುಹುಗಳನ್ನು ತೆಗೆದು ಹಾಕುವುದು ಇದರ ಉದ್ದೇಶವೂ ಆಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಹಲವು ಸಮಸ್ಯೆಗಳಿದ್ದ ರಾಜಪಥ್ ರಸ್ತೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐಕಾನಿಕ್ ರಸ್ತೆ ರಾಜಪಥ್, ಸದ್ಯ ಕರ್ತವ್ಯ ಪಥವಾಗಿ ಬದಲಾಗಿರುವ ಹೊಸ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಇಂದು ಸಂಜೆ ಏಳು ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಸ್ವತಂತ್ರ ಪೂರ್ವಕ್ಕೂ ಮುನ್ನ ಕಿಂಗ್ಸ್ವೇ ಆಗಿದ್ದ ಈ ರಸ್ತೆಯನ್ನು ಸ್ವಾತಂತ್ರ್ಯದ ಬಳಿಕ ರಾಜಪಥ್ ಎಂದು ನಾಮಕರಣ ಮಾಡಲಾಗಿತ್ತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ನರೇಂದ್ರ ಮೋದಿ ಸರ್ಕಾರ ಮರು ನಾಮಕರಣ ಮಾಡಿದೆ.
ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ನರೇಂದ್ರ ಮೋದಿ ಹೇಳಿದಂತೆ ಅಮೃತೋತ್ಸವ ಕಾಲ ಘಟ್ಟದಲ್ಲಿ ಎರಡನೇ ಪಂಚಪ್ರಾಣದ ಭಾಗವಾಗಿ ವಸಾಹತು ಶಾಹಿ ಮನಸ್ಥಿತಿಯ ಕುರುಹುಗಳನ್ನು ತೆಗೆದು ಹಾಕುವುದು ಇದರ ಉದ್ದೇಶವೂ ಆಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಹಲವು ಸಮಸ್ಯೆಗಳಿದ್ದ ರಾಜಪಥ್ ರಸ್ತೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್ ವಿರುದ್ಧ ಬಿಜೆಪಿ ಕಿಡಿ
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಗಣರಾಜ್ಯೋತ್ಸವದ ಪರೇಡ್ ನಡೆಯುವ ಪ್ರಮುಖ ರಸ್ತೆಯಾಗಿದೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ ಕುಡಿಯುವ ನೀರು, ಪಾರ್ಕಿಂಗ್, ಶೌಚಾಲಯ ಸೇರಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇತ್ತು, ಇದನ್ನು ಈಗ ಅಭಿವೃದ್ಧಿಪಡಿಸಲಾಗಿದೆ.
ಒಟ್ಟು 19 ಎಕರೆ ಭೂ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ, ರಸ್ತೆಯ ಎರಡು ಬದಿಯಲ್ಲಿರುವ ಹಸಿರು ಹೊದಿಕೆಯ ಆಸನ 3.5 ಲಕ್ಷ ಚದರ ಮೀಟರ್‌ಗಳಿಂದ 3.9 ಲಕ್ಷ ಚದರ ಮೀಟರ್‌ಗೆ ಹೆಚ್ಚಿಸಿದೆ, ಗಣರಾಜ್ಯೋತ್ಸವದ ಪರೇಡ್ ಅನುಕೂಲವಾಗುವಂತೆ ಸ್ಥಳಾವಕಾಶ ಹೆಚ್ಚಿಸಿದೆ, ವಿಶೇಷ ಹಾಸನದ ವ್ಯವಸ್ಥೆಯೂ ಮಾಡಲಾಗಿದೆ. ಇದನ್ನೂ ಓದಿ: ಉಮೇಶ್ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ
ಈ ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಕೊಯ್ಲು ಜೊತೆಗೆ ಹೊಸ ನೀರಾವರಿ ವ್ಯವಸ್ಥೆಯನ್ನು ಒಳಗೊಂಡಿದೆ. ಒಳಚರಂಡಿ ನೀರು ಮರು ಬಳಕೆ ಘಟಕ, ಸಾರ್ವಜನಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು ಮಾಡಿದೆ. 1225 ವಾಹನಗಳು, 40 ಬಸ್‍ಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ರಸ್ತೆ ಉದ್ದಕ್ಕೂ 40 ಮಾರಾಟ ಮಳಿಗೆಗಳನ್ನು ನಿರ್ಮಿಸಿದ್ದು, ರಾಜ್ಯವಾರು ವಿಶೇಷತೆ ಆದ್ಯತೆ ನೀಡಿದೆ.
ಈ ಪ್ರದೇಶದಲ್ಲಿರುವ ಕಾಲುವೆಗಳ ಅಭಿವೃದ್ಧಿಯಾಗಿದ್ದು, ಬೋಟಿಂಗ್ ವ್ಯವಸ್ಥೆ ಕಲ್ಪಿಸಿದೆ. ಸೇತುವೆಗಳು, 15.5 ಕಿಮೀ ಉದ್ದದ ಕೆಂಪು ಗ್ರ್ಯಾನೈಟ್‍ನ ವಾಕ್ ವೇಗಳನ್ನು ನಿರ್ಮಿಸಿದೆ. ರಾಷ್ಟ್ರಪತಿ ಭವನದ ಭಾಗದಿಂದ ಇಂಡಿಯಾ ಗೇಟ್, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಲು ಅಂಡರ್ ಪಾಸ್ ಮಾಡಲಾಗಿದೆ. ಬೆಳಕು, ಭದ್ರತೆ ಹಾಗೂ ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಗಿದೆ. ದೆಹಲಿ ರಾಜಪಥ್‍ನಲ್ಲಿ ಭಾರತದ ಸ್ವತಂತ್ರ್ಯೋತ್ಸವದ ಅಮೃತಮಹೋತ್ಸವ ಸಂಭ್ರಮ, ಕೋವಿಡ್ ಮಾರ್ಗಸೂಚಿಯ ನಡುವೆ ಗಣರಾಜ್ಯೋತ್ಸವ ಪರೇಡ್ ಸಂಭ್ರಮದಿಂದ ನಡೆಯಿತು.
ವಿಶೇಷತೆ ಏನು?
ರಾಜಪಥ್‍ನಲ್ಲಿ ವಿರಾಟ್ ಭಾರತದ ಒಂದು ವಿಹಾಂಗಮ ನೋಟವನ್ನು ಪ್ರದರ್ಶಿಸಲಾಯಿತು. ನವ ಭಾರತದ ಮಿಲಿಟರಿ ಶಕ್ತಿ ಇಂದಿನ ಸಮಾರಂಭದಲ್ಲಿ ಅನಾವರಣಗೊಂಡಿತು. ಈ ಸಮಾರಂಭದಲ್ಲಿ ಮೊಟ್ಟ ಮೊದಲ ಬಾರಿಗೆ 75 ವಿಮಾನಗಳು ಭವ್ಯ ಫ್ಲೈ-ಪಾಸ್ಟ್ ಮಾಡಿದವು. ಇದರೊಂದಿಗೆ ಪರೇಡ್‍ನಲ್ಲಿ ಹಲವು ರಾಜ್ಯಗಳ ಸ್ತಬ್ಧ ಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡಗರ ಕಣ್ಮನ ಸೆಳೆಯಿತು. ಇದನ್ನೂ ಓದಿ: ಜೈ ಹಿಂದ್ – ಗಣರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ
Defence Research & Development Organisation (@DRDO_India) demonstrates the country's strategic prowess at the #RepublicDay parade at Rajpath.
ಬೆಳಗ್ಗೆ 10:30 ಸುಮಾರಿಗೆ ಆರಂಭಗೊಂಡ ಪರೇಡ್ ಕಾರ್ಯಕ್ರಮ 12:15ಕ್ಕೆ ಮುಕ್ತಾಯಗೊಂಡಿತು. ಪ್ರತಿ ವರ್ಷ ಈ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿತ್ತು. ಈ ಬಾರಿ 30 ನಿಮಿಷ ತಡವಾಗಿ ಆರಂಭಗೊಂಡಿತು. ರಾಜಪಥ್‍ನಲ್ಲಿ ಮಂಜು ಆವರಿಸಿಕೊಂಡಿದ್ದ ಕಾರಣ ಈ ಬಾರಿ ಕಾರ್ಯಕ್ರಮವನ್ನು ಪೂರ್ವನಿಗದಿಯಂತೆ 10:30ಕ್ಕೆ ಆರಂಭಿಸಲಾಯಿತು. ಕೊರೊನಾ ಕಾಟದಿಂದಾಗಿ ಕಳೆದ ಬಾರಿಯಂತೆ ಈ ವರ್ಷ ಕೂಡಾ ಯಾವುದೇ ವಿದೇಶಿ ಮುಖ್ಯ ಅತಿಥಿಗೆ ಆಹ್ವಾನ ನೀಡಿಲ್ಲ. ಈ ಮೂಲಕ ಸತತ 2ನೇ ವರ್ಷ ಯಾವುದೇ ವಿದೇಶಿ ಅತಿಥಿ ಇಲ್ಲದೆ ಗಣರಾಜ್ಯೋತ್ಸವದ ಆಚರಣೆ ನಡೆಯಿತು. ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ: ಮೋದಿ ಟೋಪಿ, ಶಾಲು ವಿಶೇಷತೆ ಏನು?
ಪರೇಡ್‍ನಲ್ಲಿ ಮೊದಲ ಬಾರಿಗೆ ಭಾರತೀಯ ವಾಯುಪಡೆಯ 75 ವಿಮಾನಗಳ ಭವ್ಯ ಫ್ಲೈ-ಪಾಸ್ಟ್ ಮಾಡಿದವು. ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 480 ಸ್ಪರ್ಧಿಗಳು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಪ್ರತಿ 75 ಮೀಟರ್ ಅಂತರದಲ್ಲಿ 10 ದೊಡ್ಡ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳದಿಂದ ದೂರ ಕುಳಿತಿರುವ ಜನರಿಗೂ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಾಗಿತ್ತು.
Meghalaya tableau in full glory at the #RepublicDay Parade, highlighting 50 years of Statehood
ಪರೇಡ್‍ನಲ್ಲಿ ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದುಕೊಂಡವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಯಿತು. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಯಾರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶಕ್ಕೆ ನೀಡಲಾಗಿತ್ತು. ಕೊರೊನಾ ಭೀತಿಯಿಂದಾಗಿ ಈ ಬಾರಿ ವೀಕ್ಷಕರ ಸಂಖ್ಯೆಯನ್ನು 5 ರಿಂದ 8 ಸಾವಿರ ಪ್ರೇಕ್ಷಕರಿಗೆ ಮಾತ್ರ ಮಿತಿಗೊಳಿಸಲಾಗಿತ್ತು. ಕಳೆದ ವರ್ಷ 25 ಸಾವಿರ ಜನರು ಪರೇಡ್ ವೀಕ್ಷಿಸಿದ್ದರು.
ರಾಜಪಥ್‍ನಲ್ಲಿ 25 ಟ್ಯಾಬ್ಲೋಗಳ ಪರೇಡ್:
12 ರಾಜ್ಯ, 9 ಕೇಂದ್ರ ಸಚಿವಾಲಯಗಳು, 2 DRDO, ವಾಯುಪಡೆ ಮತ್ತು ನೌಕಾಪಡೆಯಿಂದ ತಲಾ ಒಂದು ಟ್ಯಾಬ್ಲೋ ಸೇರಿ ಒಟ್ಟು 25 ಟ್ಯಾಬ್ಲೋಗಳು ಪರೇಡ್‍ನಲ್ಲಿ ಸಾಗಿದವು. ಪರೇಡ್‍ನಲ್ಲಿ, ಸಿಆರ್‍ಪಿಎಫ್, ಎಸ್‍ಎಸ್‍ಬಿ ಸಿಬ್ಬಂದಿಯಿಂದ ಶೌರ್ಯ ಪ್ರದರ್ಶನ ನಡೆಯಿತು. ದೆಹಲಿ ಪೆÇಲೀಸರು, ಎನ್‍ಸಿಸಿ ಸ್ಕ್ವಾಡ್ ಸಹ ಪರೇಡ್ ನಲ್ಲಿ ಭಾಗಿಯಾದರು. ವಾಯುಪಡೆ, ನೌಕಾಪಡೆ ಮತ್ತು ಸೇನೆಯ 75 ವಿಮಾನಗಳು ಗ್ರ್ಯಾಂಡ್ ಫ್ಲೈಪಾಸ್ಟ್‍ನಲ್ಲಿ ಭಾಗಿಯಾದರು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಅಮೃತಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿ ಎಂಬಂತೆ ಗಣರಾಜ್ಯೋತ್ಸವದಲ್ಲಿ 17 ಜಾಗ್ವಾರ್ ಹೋರಾಟಗಾರರು ಭಾಗವಹಿಸಿದರು. ರಾಜಪಥ್‍ನ ಮೇಲ್ಭಾಗದಲ್ಲಿ 75ರ ಆಕೃತಿ ರಚನೆ ಮಾಡಲಾಗಿತ್ತು. ಇದನ್ನೂ ಓದಿ:ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ
Haryana's tableau at the #RepublicDay parade showcases the State's prowess in Sports
The state has brought laurels to India by winning the maximum number of medals in several national and international sporting events#RepublicDayIndiapic.twitter.com/C4qBfY7uCk
ಪರೇಡ್ ಮಾರ್ಗದಲ್ಲಿ ಕಡಿತ:
ಈ ಬಾರಿ ಪರೇಡ್ ಮಾರ್ಗವನ್ನೂ ಕಡಿತಗೊಳಿಸಲಾಗಿತ್ತು. ಈ ಹಿಂದೆ 8.3 ಕಿಮೀ ಇದ್ದ ಮಾರ್ಗವನ್ನು 3.3 ಕಿಮೀಗೆ ಇಳಿಸಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಪರೇಡ್‍ನಲ್ಲಿ 965 ಮತ್ತು 1971 ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು, ಹಳೆಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳು, ಹಳೆಯ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಸ್ಥಾನದಲ್ಲಿ ಹೊಸ ಹೊಸ ವಿಷಯಗಳನ್ನು ಕೂಡಾ ಇಂದು ಪ್ರದರ್ಶನಕ್ಕೆ ಇಡಲಾಗಿತ್ತು. ಹೀಗೆ ಹತ್ತು ಹಲವು ವೈಶಿಷ್ಟ್ಯಗಳ ಸಂಭ್ರಮಕ್ಕೆ ರಾಜಪಥ್ ವೇದಿಕೆಯಾಯಿತು.
ದಕ್ಷಿಣ ಭಾರತದಿಂದ ಕರ್ನಾಟಕದ ಏಕೈಕ ಸ್ತಬ್ಧ ಚಿತ್ರ:
ಪ್ರತಿ ವರ್ಷದಂತೆ ಈ ವರ್ಷವೂ ದೆಹಲಿ ರಾಜಪಥ್‍ನಲ್ಲಿ ಸಂಚರಿಸಲು ಕರ್ನಾಟಕದ ಸ್ತಬ್ಧ ಚಿತ್ರ ಗಮನಸೆಳೆಯಿತು. ಈ ಬಾರಿ ದಕ್ಷಿಣ ಭಾರತದಿಂದ ಕರ್ನಾಟಕದ ಏಕೈಕ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿತು. ಕರ್ನಾಟಕದ ಟ್ಯಾಬ್ಲೋ ಸತತ 13ನೇ ವರ್ಷವೂ ಪ್ರದರ್ಶನಗೊಂಡಿತು. ಈ ಬಾರಿ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದ್ದು, ಟ್ಯಾಬ್ಲೋ ತಯಾರಿ ಕಾರ್ಯದಲ್ಲಿ ಕಲಾವಿದ ಶಶಿಧರ್ ಅಡಪ ನೇತೃತ್ವ ವಹಿಸಿದ್ದರು. ಈ ಸ್ತಬ್ಧ ಚಿತ್ರವನ್ನು ತಯಾರು ಮಾಡಲು ಒಂದೂವರೆ ತಿಂಗಳು ಕಾಲ ನೂರಾರು ಜನರು ಒಟ್ಟಾಗಿ ಸೇರಿ ಕೆಲಸ ನಿರ್ವಹಿಸಿ ಕರ್ನಾಟಕದ ಕರಕುಶಲ ಕಲೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಇದನ್ನೂ ಓದಿ:ಗಣರಾಜ್ಯೋತ್ಸವದ ನಿಮಿತ್ತ ಗೂಗಲ್ ಡೂಡಲ್‍ನಿಂದ ವಿಶೇಷ ಗೌರವ
ಸ್ತಬ್ಧ ಚಿತ್ರದಲ್ಲಿ ಏನಿತ್ತು?
ಕರ್ನಾಟಕದ ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ ಇದ್ದು, ಈ ಕಲಾಕೃತಿಯ ಕೆಳಗಿನ ಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ ಜೊತೆಗೆ ಗಂಜೀಫಾ ಕಲಾಕೃತಿ ಇತ್ತು. ಸ್ತಬ್ದಚಿತ್ರದ ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ. ಹೂಜಿಯ ಇಕ್ಕೆಲೆಗಳಲ್ಲಿ ಕರಾವಳಿಯ ವೈಶಿಷ್ಠ್ಯವನ್ನು ಬಿಂಬಿಸುವ ಭೂತಾರಾಧನೆಯ ಮುಖವಾಡವನ್ನು ಹೊತ್ತ ಲೋಹದ ಕಲಾಕೃತಿಗಳು, ಹೂಜಿಯ ಹಿಂಬದಿಯಲ್ಲಿ ಬಿದರಿ ಕಲೆ ಬಳಸಿ ಸಿದ್ದಪಡಿಸಿರುವ ನವಿಲುಗಳಿದ್ದವು. ಅಲ್ಲದೆ, ಮಧ್ಯ ಭಾಗದ ಹಿಂಬಂದಿಯಲ್ಲಿ ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಸ್ತಬ್ದಚಿತ್ರದ ಕೇಂದ್ರ ಬಿಂದುವಿನಂತೆ ಕಂಗೊಳಿಸಿತು.
ಆಂಜನೇಯ ಸ್ವಾಮಿಯ ಮೂರ್ತಿಯ ಅಕ್ಕ-ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಮೆರುಗೆಣ್ಣೆಯ ಆಟಿಕೆಗಳು, ನವಲಗುಂದ ಧರಿ (ಜಮಖಾನೆ), ಶ್ರೀಗಂಧ ಮರದ ಕೆತ್ತನೆಯ ಹಾಗೂ ಮಣ್ಣಿನ ಕಲಾಕೃತಿಗಳು ಇತ್ತು. ಸ್ತಬ್ದಚಿತ್ರದ ಕೊನೆಯಲ್ಲಿ ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಿದ ಕಲಾಲೋಕದ ಮಹಾಮಾತೆ, ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾದ್ಯಾಯ ಅವರು ಗಂಧದ ಪೆಟ್ಟಿಗೆ, ನವಿಲಿನಾಕಾರದ ದೀಪದ ಕಲಶಗಳು, ಸಂಡೂರಿನ ಬಾಳೆ ನಾರಿನ ಚೀಲಗಳು ಹೀಗೆ ವಿವಿಧ ಕರಕುಶಲ ವಸ್ತುಗಳನ್ನು ಬಾಗಿನ ರೂಪದಲ್ಲಿ ನೀಡುತ್ತಿರುವ ದೃಶ್ಯಾವಳಿಯ ದೊಡ್ಡ ಪ್ರತಿಮೆ. ಹಿಂಭಾಗದ ಎಡ – ಬಲ ಭಾಗದಲ್ಲಿ ಕೈಮಗ್ಗದ ಹಿರಿಮೆಯ ಇಳಕಲ್ ಕಸೂತಿ ಸೀರೆಗಳು, ಮೊಳಕಾಲ್ಮೋರು ಸೀರೆಗಳು ಹಾಗೂ ಮೈಸೂರು ರೇಷ್ಮೆ ಸೀರೆ. ಹಿಂಭಾಗದಲ್ಲಿ ಕಿನ್ನಾಳ ಕಲೆಯಲ್ಲಿ ತಯಾರಿಸಿದ ಬಾಲೆಯರ ಕಲಾಕೃತಿಗಳು, ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಬೆತ್ತ, ಬಿದಿರು, ಕಾಡುಬಳ್ಳಿಗಳು ಹಾಗೂ ತಾಟಿನಿಂಗು ಮರದ ಎಲೆಯಿಂದ ತಯಾರಿಸಿದ ಬಗೆ ಬಗೆಯ ಬುಟ್ಟಿಗಳೂ ಕೂಡಾ ಸ್ತಬ್ದಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿತ್ತು. ಇದನ್ನೂ ಓದಿ:ಕೊರೊನಾ ನಿಯಂತ್ರಣದಲ್ಲಿ ಸರ್ಕಾರದಿಂದ ಅತ್ಯುತ್ತಮ ಸಾಧನೆ: ಗೆಹ್ಲೋಟ್
ಜಾನಪದ ತಜ್ಞ ಡಾ.ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡ ಯಕ್ಷಗಾನ ಪಾತ್ರಗಳಲ್ಲಿ ಹೆಜ್ಜೆ ಹಾಕಿ ರಾಜ್‍ಪಥ್‍ನಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.
ಬೀಟಿಂಗ್ ದಿ ರಿಟ್ರೇಟ್:
ಈ ಬಾರಿ ವಿಶೇಷವೆಂದರೆ ಗಣರಾಜ್ಯೋತ್ಸವ ಅಂಗವಾಗಿ ಜ.29 ರಂದು ನಡೆಯುವ ‘ಬೀಟಿಂಗ್ ದಿ ರಿಟ್ರೀಟ್’ ಸಮಾರಂಭವನ್ನು ವೀಕ್ಷಿಸಲು ಆಟೋ-ರಿಕ್ಷಾ ಚಾಲಕರು, ಕಾರ್ಮಿಕರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಚಿತ್ರದುರ್ಗ: ಇದುವರೆಗೂ ರಾಷ್ಟ್ರೀಯ ನಾಟಕೋತ್ಸವದ ಮೂಲಕ ಎಲ್ಲರ ಗಮನ ಸೆಳೆದಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ತರಳುಭಾಳು ಶಾಖಾ ಮಠದ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ಇಂದು ದೆಹಲಿಯ ರಾಜಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಭಾಗಿಯಾಗಲಿದ್ದಾರೆ.
ಇಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಜಗತ್ತಿನ ಮೊದಲ ಸಂಸತ್ ಎನಿಸಿದ್ದ 12 ನೇಶತಮಾನದ ಅನುಭವ ಮಂಟಪ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದ್ದು, ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿದ್ದ ಈ ಸ್ತಬ್ಧಚಿತ್ರದ ಪ್ರತಿರೂಪ ಇಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 28 ಜನ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಶಾಲೆಯಲ್ಲಿ ತರಬೇತಿ ಪಡೆದವರು ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ತಂಡದ ಮುಖ್ಯಸ್ಥರಾಗಿ ರಂಗಶಾಲೆಯ ಪ್ರಾಚಾರ್ಯ ಜಗದೀಶ್ ಆರ್ ನೇತೃತ್ವ ವಹಿಸಿದ್ದಾರೆ. ಸ್ತಬ್ಧಚಿತ್ರ ನಿರ್ಮಾಣ ಖ್ಯಾತ ಕಲಾವಿದರಾದ ಶಶಿದರ ಅಡಪ ಅವರದ್ದಾಗಿದ್ದು, ಈ ಸ್ತಬ್ಧ ಚಿತ್ರದ ಪ್ರಾಯೋಜಕತ್ವವನ್ನು ಕರ್ನಾಟಕ ಸರ್ಕಾರವಹಿಸಿಕೊಂಡಿದೆ.
ಕಳೆದ ಹನ್ನೊಂದು ವರ್ಷಗಳಿಂದ ರಾಜಪಥ್ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಭಾಗಿಯಾಗುತ್ತಿದ್ದು, ಈ ಬಾರಿ ಅನುಭವ ಮಂಟಪ ವಿಷಯ ವಸ್ತುವಿಗೆ ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿತ್ತು. 2020ರ ಗಣರಾಜೋತ್ಸವ ಹಿನ್ನೆಲೆ ಲಕ್ಕುಂಡಿ ದೇವಾಲಯ, ಹಾಲಕ್ಕಿ ಒಕ್ಕಲಿಗರು, ಮೆಕ್ಕಿಕಟ್ಟಿ, ಅನುಭವ ಮಂಟಪದ ವಿಷಯ ವಸ್ತುವನ್ನು ಆಯ್ಕೆ ಸಮಿತಿಗೆ ನೀಡಲಾಗಿತ್ತು. ಈ ಪೈಕಿ 12ನೇ ಶತಮಾನದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿ ಸೃಷ್ಟಿಸಿದ್ದ ಅನುಭವ ಮಂಟಪ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿತ್ತು.
ಪ್ರದರ್ಶನಗೊಳ್ಳುತ್ತಿರುವ ಅನುಭವ ಮಂಟಪ ಸ್ತಬ್ಧ ಚಿತ್ರ ಕಾಯಕವೇ ಕೈಲಾಸ, ದೇಹವೇ ದೇಗುಲ, ದಯವೇ ಧರ್ಮದ ಮೂಲವಯ್ಯ ಎನ್ನುವ ಮೂರು ಅಂಶಗಳನ್ನು ಒಳಗೊಂಡಿದೆ. ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಬಸವಣ್ಣನವರ ಪ್ರತಿಕೃತಿ ನಿರ್ಮಿಸಲಾಗಿದೆ. ಹಿಂಭಾಗದಲ್ಲಿ ಅನುಭವ ಮಂಟಪ, ಅದರೊಳಗೆ ಅಕ್ಕಮಹಾದೇವಿ, ಅಲ್ಲಮ ಪ್ರಭು ಸೇರಿ ಕೆಲವು ಪಾತ್ರಗಳನ್ನ ಕಲಾವಿದರು ಅಭಿನಯಿಸಲಿದ್ದಾರೆ.
ಕೆಳಭಾಗದಲ್ಲಿ ಅಕ್ಕನಾಗಮ್ಮ, ಶರಣೆ ಸತ್ಯಕ್ಕ, ಅಂಬಿಗರ ಚೌಡಯ್ಯ, ಮೊಳಿಗೆ ಮಾರಯ್ಯ, ಕಲ್ಯಾಣಮ್ಮ, ಹರಳಯ್ಯ, ಕುಂಬಾರ ಗುಂಡಣ್ಣ ಸಿದ್ಧಾರಾಮೇಶ್ವರ, ಬಾಚಿ ಕಾಯಕದ ಬಸಪ್ಪ ಅವರ ಪ್ರತಿಕೃತಿಗಳನ್ನು ಕಾಣಬಹುದು. ಕಲಾ ನಿರ್ದೇಶಕ ಶಶಿಧರ್ ಹಡಪದ ಅವರ ನೇತೃತ್ವದಲ್ಲಿ 20 ಮಂದಿ ವಿನ್ಯಾಸರು ಸುಮಾರು 45 ದಿನಗಳ ಕಾಲದಲ್ಲಿ ಈ ಸ್ತಬ್ಧ ಚಿತ್ರ ತಯಾರಿಸಿದ್ದಾರೆ. ರಾಜಪಥ್ ಪರೇಡ್‍ನಲ್ಲಿ ಕರ್ನಾಟಕವು ಈವರೆಗೂ ಒಮ್ಮೆ ಪ್ರಥಮ, ಎರಡು ಬಾರಿ ದ್ವಿತೀಯ ಹಾಗೂ ಎರಡು ತೃತೀಯ ಬಹುಮಾನ ಗೆದ್ದುಕೊಂಡಿದೆ.
ನವದೆಹಲಿ: ಗಣರಾಜ್ಯೋತ್ಸವ ಆಚರಣೆಗೆ ಈಗ ದಿನಗಣನೆ ಶುರುವಾಗಿದೆ. ದೇಶದ ಹಬ್ಬಕ್ಕೆ ದೆಹಲಿಯ ರಾಜಪಥ ರಸ್ತೆ ಸಿಂಗಾರಗೊಳ್ಳುತ್ತಿದ್ದು, ಈ ಬಾರಿ ನಡೆಯಲಿರುವ ಟ್ಯಾಬ್ಲೊ ಪರೇಡ್ ಗಳಲ್ಲಿ ಗಾಂಧಿಯ ಶಾಂತಿ ಮಂತ್ರ ಪಠಣವಾಗಲಿದೆ.
ದೇಶದ ಹಬ್ಬದ ಆಚರಣೆಗೆ ತಾಲೀಮು ಶುರುವಾಗಿದೆ. ಒಂದು ಕಡೆ ರಾಜಪಥ್ ರಸ್ತೆ ಸಿಂಗಾರಗೊಳ್ಳುತ್ತಿದರೆ, ಮತ್ತೊಂದು ಕಡೆ ದೇಶದ ಕಣ್ಮನ ಸೆಳೆಯಲು ಸ್ತಬ್ಧಚಿತ್ರಗಳು ತಯಾರಾಗುತ್ತಿವೆ. ಮಹಾತ್ಮ ಗಾಂಧೀಜಿ ಅವರ 150 ಜನ್ಮ ದಿನದ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಟ್ಯಾಬ್ಲೋ ಮೂಲಕ ಮಹಾತ್ಮ ಗಾಂಧಿಗೆ ವಿಶೇಷ ಗೌರವ ಸರ್ಮಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪರೇಡ್ ನಲ್ಲಿ 17 ರಾಜ್ಯಗಳು ಭಾಗವಹಿಸುತ್ತಿದ್ದು, ಭಾಗವಹಿಸುತ್ತಿರುವ ಎಲ್ಲಾ ರಾಜ್ಯಗಳಿಗೂ ಮಹಾತ್ಮ ಗಾಂಧಿ ವಸ್ತು ವಿಷಯ ಆಧರಿಸಿ ಪ್ರತಿ ರಾಜ್ಯದಲ್ಲಿ ಗಾಂಧಿ ಬಿಟ್ಟು ಹೋಗಿರುವ ನೆನಪುಗಳು ಆಯ್ದು ಸ್ತಬ್ಧ ಚಿತ್ರಗಳನ್ನು ರಚನೆ ಮಾಡಲಾಗುತ್ತಿದೆ.
ಕರ್ನಾಟಕದಿಂದಲೂ ಸ್ತಬ್ದಚಿತ್ರ ಪ್ರದರ್ಶನಕ್ಕೆ ಭರ್ಜರಿ ತಯಾರಿ ನಡೆದಿದೆ. ಸತತ ಹತ್ತು ವರ್ಷಗಳು ರಾಜಪಥ್ ರಸ್ತೆಯಲ್ಲಿ ಕರ್ನಾಟಕದ ತೇರು ಓಡಿಸಲು ಅವಕಾಶ ಸಿಕ್ಕಿದ್ದು ಈ ಬಾರಿಯೂ ರಾಜ್ಯದ ಸಂಸ್ಕೃತಿ ಅನಾವರಣಗೊಳ್ಳಲಿದೆ. 1924ರಲ್ಲಿ ಮೊದಲ ಬಾರಿ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‍ನ 39ನೇ ಬೆಳಗಾವಿ ಅಧಿವೇಶನದ ಕಥಾವಸ್ತುವನ್ನು ಕರ್ನಾಟಕ ಆಯ್ಕೆ ಮಾಡಿದ್ದು, ಕಲಾ ನಿರ್ದೇಶಕ ಶಶಿಧರ್ ಹಡಪಾ ನೇತೃತ್ವದಲ್ಲಿ 50 ಮಂದಿ ಕಲಾವಿದರು ರಚಿಸಿರುವ ರಾಜ್ಯದ ಸ್ತಬ್ಧ ಚಿತ್ರ ಕಣ್ಮನ ಸೆಳೆಯುತ್ತಿದೆ.
ಸ್ತಬ್ಧ ಚಿತ್ರದ ವಿಶೇಷತೆ ಏನು?
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಚಿತ್ರಣ ಟ್ಯಾಬ್ಲೊ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು ಅಧಿವೇಶನದಲ್ಲಿ ಗಾಂಧಿ ಮಾಡಿದ ಭಾಷಣದ ವೇದಿಕೆ ಮತ್ತು ವೇದಿಕೆಯ ಸುತ್ತ ಬಸವಣ್ಣ ಮತ್ತು ಕೃಷ್ಣರಾಜ ಒಡೆಯರ್ ಫೋಟೋಗಳು ಇರಲಿದೆ.
ಅಧಿವೇಶನದಲ್ಲಿ ಸರೋಜಿನಿ ನಾಯ್ಡು, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲರಿಂದ ಧ್ವಜರೋಹಣ, ಸ್ವತಂತ್ರ ಪೂರ್ವ ಮೊಟ್ಟಮೊದಲ ಕಲ್ಪನಾ ಧ್ವಜ ಹಾಗೂ ಬದಲಾವಣೆಗಳ ಚಿತ್ರಣ, ಹಿಂದೂ ಮುಸ್ಲಿಂ ಏಕತೆ, ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿಗೆ ಪ್ರೋತ್ಸಾಹ ಅಸ್ಪೃಶ್ಯತೆ ನಿವಾರಣೆ ಧ್ಯೆಯವಾಕ್ಯಗಳು ಇರಲಿವೆ.
ಮೊದಲ ಬಾರಿಗೆ ರಾಜಪಥದಲ್ಲಿ ಕನ್ನಡದ ಹಾಡು ಕೇಳಿಸಲಿದ್ದು, ಗಾಂಧಿ ನೆನಪಿಗೆ ಹಿನ್ನೆಲೆ ಧ್ವನಿಯಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿದು’ ಹಾಡು ಕೇಳಲಿದೆ.