Tag: ರಾಜಗೋಪಾಲನಗರ

  • ಹುಡುಗಿ ವಿಚಾರಕ್ಕೆ ಗಲಾಟೆ – ಬೆಂಗಳೂರಲ್ಲಿ ಗೆಳೆಯನಿಂದ್ಲೇ ಯುವಕನ ಕೊಲೆ

    ಹುಡುಗಿ ವಿಚಾರಕ್ಕೆ ಗಲಾಟೆ – ಬೆಂಗಳೂರಲ್ಲಿ ಗೆಳೆಯನಿಂದ್ಲೇ ಯುವಕನ ಕೊಲೆ

    ಬೆಂಗಳೂರು: ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರೋ ಘಟನೆ ನಗರದ ರಾಜಗೋಪಾಲನಗರದಲ್ಲಿ ನಡೆದಿದೆ.

    ಹೇಮಂತ ಕೊಲೆಯಾದ ಯುವಕ. ಸೋಮವಾರ ರಾತ್ರಿ ಸುಮಾರು 8.30ರ ವೇಳೆಯಲ್ಲಿ ಹೇಮಂತ್ ತನ್ನ ಗೆಳೆಯನ ಜೊತೆ ಒಂದು ರೌಂಡ್ ಎಣ್ಣೆ ಪಾರ್ಟಿ ಮುಗಿಸಿ ಇನ್ನೇನು ವಾಪಸ್ಸು ಮನೆ ಕಡೆ ಮುಖಮಾಡಿದ್ದ. ಅಷ್ಟರಲ್ಲೆ ತನ್ನ ಹಳೆ ದೋಸ್ತಿ ಮಧು ಯಮನಂತೆ ಎದುರುಗಡೆ ಸಿಕ್ಕಿದ್ದಾನೆ. ಈ ಹಿಂದೆ ಹೇಮಂತ ಹುಡುಗಿ ವಿಚಾರವಾಗಿ ಮಧುಗೆ ಹೊಡೆದಿದ್ದ ಎನ್ನಲಾಗಿದೆ.

    ಅದೇ ಕಾರಣಕ್ಕೆ ಹೇಮಂತ್‍ಗೆ ಚಟ್ಟ ಕಟ್ಟಲೇಬೇಕೆಂದು ಟೈಂಗಾಗಿ ಮಧು ಕಾದಿದ್ದ. ಹೇಮಂತ ಒಬ್ಬನೇ ಸಿಕ್ಕಿದ್ದರಿಂದ ಮಧು ಡ್ರ್ಯಾಗರ್ ತೆಗೆದು ಆತನಿಗೆ ಚುಚ್ಚಿದ್ದಾನೆ. ಪರಿಣಾಮ ಹೇಮಂತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಘಟನೆ ನಡೆದ ಒಂದು ಗಂಟೆ ಒಳಗಡೆ ಅರೋಪಿ ಮಧುವನ್ನ ರಾಜಗೋಪಾಲನಗರ ಪೋಲಿಸರು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡ್ತಿದ್ದಾರೆ.

  • ಬೆಂಗ್ಳೂರಲ್ಲಿ ಮತ್ತೊಂದು ಶೂಟೌಟ್: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್‍ಗೆ ಗುಂಡು

    ಬೆಂಗ್ಳೂರಲ್ಲಿ ಮತ್ತೊಂದು ಶೂಟೌಟ್: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್‍ಗೆ ಗುಂಡು

    ಬೆಂಗಳೂರು: ನಗರದಲ್ಲಿ ಮತ್ತೊಂದು ಶೂಟೌಟ್ ನಡೆದಿದೆ. ರಾಜಗೋಪಾಲ್ ನಗರದ ಪಿಳ್ಳಪ್ಪ ಕಟ್ಟೆ ಬಳಿ ಪವನ್ ಎಂಬ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ಇಂದು ಬೆಳಗಿನ ಜಾವ ಕಾರ್ಯಾಚರಣೆ ನಡೆದಿದ್ದು, ದರೋಡೆಗೆ ಬಂದಿದ್ದ ರೌಡಿಶೀಟರ್ ಪವನ್ ಮೇಲೆ ರಾಜಗೋಪಾಲನಗರ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿ ನೇತೃತ್ವದಲ್ಲಿ ಶೂಟೌಟ್ ನಡೆದಿದೆ. ಗಾಯಾಳು ಪವನ್‍ನನ್ನು ಪೀಣ್ಯದ ಜೈ ಮಾರುತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪವನ್ ಆಲಿಯಾಸ್ ಪಾಪಿರೆಡ್ಡಿ ಮೇಲೆ 20 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆಯೇ ಪವನ್ ಶೂಟೌಟ್‍ಗೆ ಗುರಿಯಾಗಿದ್ದಾನೆ.

    ಅತ್ತ ಕುಖ್ಯಾತ ಕಳ್ಳ ಕೊಮ್ಮಘಟ್ಟ ಮಂಜನ ಮೇಲೆ ಪೊಲೀಸರು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ. ನಗರದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಬಳಿ ಮಂಜ ಇದ್ದ ಬಗ್ಗೆ ಮಾಹಿತಿ ತಿಳಿದ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಪುನೀತ್, ಆತನನ್ನು ಹಿಡಿಯಲು ಪ್ರಯತ್ನಿಸಿದ್ರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದು, ಒಂದು ಗುಂಡು ಗಾಳಿಯಲ್ಲಿ ಹಾರಿದ್ರೆ, ಮತ್ತೊಂದು ಗುಂಡು ಈತನ ಕಾಲಿಗೆ ಬಿದ್ದಿದೆ. ಗುಂಡೇಟು ತಿಂದ ಮಂಜನನ್ನು ಪೊಲೀಸರು ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

    ಕೊಮ್ಮಘಟ್ಟ ಮಂಜ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಮಂಜ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.