Tag: ರಾಜಕೋಟ್

  • ಗುಜರಾತಿನ ರಾಜಕೋಟ್ ಬಳಿ ಭೂಕಂಪ

    ಗುಜರಾತಿನ ರಾಜಕೋಟ್ ಬಳಿ ಭೂಕಂಪ

    – ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ

    ಗಾಂಧಿನಗರ: ಗುಜರಾತಿನ ರಾಜಕೋಟ್ ಬಳಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

    ರಾಜಕೋಟ್ ನಿಂದ 122 ಕಿ.ಮೀ ದೂರದ ಉತ್ತರ, ವಾಯುವ್ಯ ಭಾಗದಲ್ಲಿ ಭೂಮಿ ಕಂಪಿಸಿದೆ. ಇಂದು ರಾತ್ರಿ 8.13 ನಿಮಿಷಕ್ಕೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ಹೇಳಿದೆ.

    ಕಛ್, ಸೌರಾಷ್ಟ್ರ ಮತ್ತು ಅಹಮದಾಬಾದ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವ ಅನುಭವ ಸ್ಥಳೀಯರಿಗೆ ಆಗಿದೆ. ಭೂಕಂಪನದ ಬಳಿಕ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿಯಾಗಿದೆ. ಭೂ ಕಂಪನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಪತ್ನಿಯನ್ನು ಹೊಗಳಿದ ಸ್ನೇಹಿತನನ್ನೇ ಕೊಂದು ರಸ್ತೆ ಬದಿ ಹೂತಿಟ್ಟ ಪತಿರಾಯ

    ಪತ್ನಿಯನ್ನು ಹೊಗಳಿದ ಸ್ನೇಹಿತನನ್ನೇ ಕೊಂದು ರಸ್ತೆ ಬದಿ ಹೂತಿಟ್ಟ ಪತಿರಾಯ

    ಗಾಂಧಿನಗರ: ಪತ್ನಿಯನ್ನು ಸ್ನೇಹಿತ ಹೊಗಳಿದಕ್ಕೆ ಸಿಟ್ಟಿಗೆದ್ದ ಪತಿ ಗೆಳೆಯನನ್ನೇ ಕೊಲೆಗೈದು, ರಸ್ತೆ ಬದಿ ಹೂತಿಟ್ಟ ಅಮಾನವೀಯ ಘಟನೆ ಗುಜರಾತ್‍ನ ರಾಜಕೋಟ್‍ನಲ್ಲಿ ಬೆಳಕಿಗೆ ಬಂದಿದೆ.

    ಸೋಮವಾರ ಈ ಘಟನೆ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ. ಖಜೂರ್ಡಿ ಗ್ರಾಮದ ನಿವಾಸಿ ರಾಕೇಶ್ ದಾಮೋರ್ ಕೊಲೆ ಮಾಡಿದ ಆರೋಪಿ. ನೀಲೇಶ್ ಮಾವಿ ಕೊಲೆಯಾದ ದುರ್ದೈವಿ. ನೀಲೇಶ್ ಸೋಮವಾರ ಖರ್ಜೂಡಿ ಗ್ರಾಮದಲ್ಲಿದ್ದ ಸ್ನೇಹಿತ ಸಂಜಯ್ ತೋಟಕ್ಕೆ ಬಂದಿದ್ದನು. ಈ ವೇಳೆ ಮಾತನಾಡುತ್ತಾ ರಾಕೇಶ್‍ನ ಪತ್ನಿಯನ್ನು ಹೊಗಳುತ್ತಿದ್ದನು. ಪದೇ ಪದೇ ಪತ್ನಿಯನ್ನು ನೀಲೇಶ್ ಹೊಗಳುತ್ತಿದ್ದದನ್ನು ಕಂಡು ರಾಕೇಶ್ ನೀಲೇಶ್ ಮೇಲೆ ಕೋಪಗೊಂಡಿದ್ದನು. ಇದೇ ಕೋಪದಲ್ಲಿ ರಾಕೇಶ್ ಸ್ನೇಹಿತ ನೀಲೇಶ್‍ನನ್ನು ಕೊಲೆ ಮಾಡಲು ನಿರ್ಧರಿಸಿದನು.

    ಸಂಜೆ ನೀಲೇಶ್‍ನನ್ನು ಮನೆಗೆ ಬಿಡುವ ನೆಪವೊಡ್ಡಿ ತನ್ನೊಡನೆ ಆತನನ್ನು ರಾಕೇಶ್ ಬೈಕ್‍ನಲ್ಲಿ ಕರೆದೊಯ್ದನು. ಮಾರ್ಗ ಮಧ್ಯೆ ಜಮುನಾನಗರ ಹೈವೇಯಲ್ಲಿ ಬೈಕ್‍ನಿಂದ ಕೆಳಗಿಳಿದು ಹಗ್ಗದಿಂದ ನೀಲೇಶ್ ಕತ್ತನ್ನು ಬಿಗಿದು ರಾಕೇಶ್ ಕೊಲೆಮಾಡಿದನು. ಬಳಿಕ ಸ್ವಲ್ಪ ದೂರ ಮೃತದೇಹವನ್ನು ಕೊಂಡೊಯ್ದು ರಸ್ತೆ ಬದಿ ಗುಂಡಿ ತೋಡಿ ಶವವನ್ನು ರಾಕೇಶ್ ಹೂತುಹಾಕಿ ಮನೆಗೆ ವಾಪಸ್ ತೆರೆಳಿದ್ದನು.

    ಇತ್ತ ನೀಲೇಶ್ ತಡರಾತ್ರಿಯಾದರೂ ಮನೆಗೆ ವಾಪಸ್ ಮರಳದಿದ್ದಾಗ ಆತನ ಮನೆಮಂದಿ ಪೊಲೀಸರ ಮೊರೆ ಹೋಗಿದ್ದು, ನೀಲೇಶ್ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಮನೆಯವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೀಲೇಶ್‍ಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಕೊನೆಯದಾಗಿ ನೀಲೇಶ್ ರಾಕೇಶ್ ಜೊತೆ ಕಾಣಿಸಿಕೊಂಡಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದರು.

    ಪೊಲೀಸರು ರಾಕೇಶ್‍ನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ಅಲ್ಲದೇ ನೀಲೇಶ್ ನನ್ನ ಪತ್ನಿಯನ್ನು ಪದೇ ಪದೇ ಹೊಗಳುತ್ತಿದ್ದ. ಇದರಿಂದ ನನಗೆ ಸಿಟ್ಟುಬಂದು ಆತನನ್ನು ಕೊಲೆ ಮಾಡಿ ರಸ್ತೆ ಬದಿ ಹೂತುಹಾಕಿದೆ ಎಂದು ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

  • ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ

    ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ

    ಗಾಂಧಿನಗರ: ಪೋಷಕರೊಂದಿಗೆ ಮಲಗಿದ್ದ ಅಪ್ರಾಪ್ತೆಯನ್ನು ಕಾಮಕನೊಬ್ಬ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.

    ಗುಜರಾತ್‍ನ ರಾಜಕೋಟ್ ಬಳಿಯ ಭಾವನಗರ ರಸ್ತೆ ಬಳಿ ಘಟನೆ ನಡೆದಿದ್ದು, ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. 8 ವರ್ಷದ ಬಾಲಕಿಯನ್ನು ಮಧ್ಯಮ ವಯಸ್ಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಅಮೂಲ್ ಕ್ರಾಸ್ ರಸ್ತೆಯ ರಾಜಕೋಟ್ ನಗರಸಭೆಯ ಗಾರ್ಡನ್‍ನಲ್ಲಿ ಬಾಲಕಿ ಕುಟುಂಬದವರೊಂದಿಗೆ ಮಲಗಿದ್ದಳು. ಅಲ್ಲಿಂದ ಬಾಲಕಿಯನ್ನು ಸೇತುವೆ ಕೆಳಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದಾನೆ.

    ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾತ್ರಿ 11.30ಕ್ಕೆ ಬಾಲಕಿಯನ್ನು ಬ್ಲಾಂಕೆಟ್ ಸಮೇತ ಎಳೆದುಕೊಂಡು ಹೋಗಿದ್ದಾನೆ. ಘಟನೆ ನಂತರ ಬಾಲಕಿ ತನ್ನ ಕುಟುಂಬದವರ ಬಳಿ ಓಡೋಡಿ ಬಂದಿದ್ದಾಳೆ. ಆರೋಪಿ ಕೆಲಹೊತ್ತು ಅದೇ ಸ್ಥಳದಲ್ಲಿ ಏಕಾಂಗಿಯಾಗಿ ಓಡಾಡಿದ್ದರ ಕುರಿತು ವಿಡಿಯೋದಲ್ಲಿ ದಾಖಲಾಗಿದೆ.

    ಈ ಕುರಿತು ಬಾಲಕಿಯ ಪೋಷಕರು ಮಾಹಿತಿ ನೀಡಿದ್ದು, ಮಲಗಿದ್ದಾಗ ನಡು ರಾತ್ರಿಯಲ್ಲಿ ಬಾಲಕಿ ಕಾಣದಿರುವುದನ್ನು ಅವಳ ಅಜ್ಜಿ ತಿಳಿಸಿದಳು. ತಕ್ಷಣವೇ ನಾವೆಲ್ಲರೂ ಎಚ್ಚರವಾದೆವು. ನಂತರ ಕುಟುಂಬಸ್ಥರೆಲ್ಲ ಸೇರಿ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದೆವು. ಅರ್ಧ ಗಂಟೆ ನಂತರ ಅವಳೇ ಓಡೋಡಿ ಬಂದು ಅಳಲು ಪ್ರಾರಂಭಿಸಿದಳು. ನಂತರ ಘಟನೆ ಕುರಿತು ನಮಗೆ ವಿವರಿಸಿದಳು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ನಂತರ ಘಟನೆ ಕುರಿತು ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಸರ್ಕಾರಿ ಮಹಿಳಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಘಟನೆ ನಂತರ ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ.

  • ಗುಜರಾತ್ ಸಿಎಂ ರೂಪಾಣಿ ವಿರುದ್ಧ ಸವಾಲು ಹಾಕಿ ಸೋತ ಕೈ ಶ್ರೀಮಂತ ಶಾಸಕ

    ಗುಜರಾತ್ ಸಿಎಂ ರೂಪಾಣಿ ವಿರುದ್ಧ ಸವಾಲು ಹಾಕಿ ಸೋತ ಕೈ ಶ್ರೀಮಂತ ಶಾಸಕ

    ರಾಜಕೋಟ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ರಾಜಕೋಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ವಿಚಾರದಲ್ಲಿ ಕಾಂಗ್ರೆಸ್ ಶ್ರೀಮಂತ ಶಾಸಕ ಇಂದ್ರನೀಲ್ ರಾಜಗುರು ಅವರನ್ನು ಸೋಲಿಸಿದ್ದಾರೆ.

    ಆರಂಭದಲ್ಲಿ ಹಿನ್ನಡೆಯಲ್ಲಿದ್ದ ರೂಪಾಣಿ ಕೊನೆ ಕೊನೆಗೆ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದರು. 2012ರಲ್ಲಿ ರಾಜಕೋಟ್ ಪೂರ್ವ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದ ರಾಜಗುರು ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸುವಂತೆ ಸಾರ್ವಜನಿಕವಾಗಿ ರೂಪಾನಿಗೆ ಸವಾಲು ಹಾಕಿದ್ದರು. ಈ ಸವಾಲಿಗೆ ರೂಪಾಣಿ ಪ್ರತಿಕ್ರಿಯೇ ನೀಡದ್ದಕ್ಕೆ ರಾಜಗುರು ನಾನೇ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿಮ್ಮನ್ನು ಸೋಲಿಸುತ್ತೇನೆ ಎಂದು ರಣಕಹಳೆ ಮೊಳಗಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು 2002ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಕಳುಹಿಸಿರುವ ಈ ಕ್ಷೇತ್ರದಲ್ಲಿ 1985ರಿಂದ ಸತತವಾಗಿ ಕಮಲ ಅರಳುತ್ತಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಈ ಕೇತ್ರದಲ್ಲಿ 7 ಬಾರಿ ಗೆದ್ದಿದ್ದಾರೆ. 85 ರಿಂದ ಸತತವಾಗಿ ಏಳು ಬಾರಿ ಗೆದ್ದಿದ್ದ 2002ರಲ್ಲಿ ನರೇಂದ್ರ ಮೋದಿ ಅವರಿಗೆ ಸ್ಥಾನ ತೆರವು ಮಾಡಿದ್ದ ಬಳಿಕ 2014ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಆಯ್ಕೆಯಾದ ಬಳಿಕ ರಾಜೀನಾಮೆ ನೀಡಿದ್ದರು.

    32 ವರ್ಷಗಳಿಂದ ಬಿಜೆಪಿಯನ್ನು ಗೆಲ್ಲಿಸುತ್ತಿರುವ, ಶೇ.100ರಷ್ಟು ನಗರ ಪ್ರದೇಶಗಳನ್ನೇ ಹೊಂದಿರುವ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಟೀದಾರ ಸಮುದಾಯದವರಿದ್ದಾರೆ. ಹೀಗಾಗಿ ರೂಪಾಣಿ ಈ ಚುನಾವಣೆಯಲ್ಲಿ ಸೋಲಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿ ರಾಜಗುರು ಕಣಕ್ಕೆ ಇಳಿದಿದ್ದರು.