Tag: ರಾಜಕುಮಾರ ಟಾಕಳೆ

  • ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಪೊಲೀಸರ ವಶಕ್ಕೆ

    ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಪೊಲೀಸರ ವಶಕ್ಕೆ

    ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಅವರನ್ನು ಪೊಲೀಸರು ಬೆಳಗಾವಿ ರಾಮದೇವ ಹೋಟೆಲ್ ಬಳಿ ವಶಕ್ಕೆ ಪಡೆದಿದ್ದಾರೆ.

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣದ ವೇಳೆ ನವ್ಯಶ್ರೀ ಪ್ರತಿಭಟನೆಗೆ ಉದ್ದೇಶಿಸಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಎದುರು ಪ್ರತಿಭಟನೆ ಮಾಡಬೇಕೆಂದಿದ್ದರು. ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಕುಮಾರ ಟಾಕಳೆ ಬಂಧನಕ್ಕೆ ಆಗ್ರಹಿಸಿ ಸಚಿವ ಗೋವಿಂದ ಕಾರಜೋಳ ಎದುರೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಎಪಿಎಂಸಿ ಠಾಣೆ ಪೊಲೀಸರಿಂದ ನವ್ಯಶ್ರೀ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನವ್ಯಶ್ರೀಯನ್ನು ಬೆಳಗಾವಿ ಮಹಿಳಾ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ಇದನ್ನೂ ಓದಿ: ತೆರಿಗೆ ವಿನಾಯ್ತಿ ಕೈಬಿಡಲು ಕೇಂದ್ರ ಚಿಂತನೆ – ವಿನಾಯ್ತಿ ಬೇಡ ಎಂದವರಿಗೆ ಮಾತ್ರ ಕಡಿಮೆ ತೆರಿಗೆ

    ರಾಜಕುಮಾರ ಟಾಕಳೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದಾರೆ. ಟಾಕಳೆ ವಿರುದ್ಧ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ ಮಾಡಿಸಿದ್ದು, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯವಾಗಿ ನಿಂದಿಸುವುದು, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಹಾಗೂ ಖಾಸಗೀತನಕ್ಕೆ ಧಕ್ಕೆ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿರುವ ಬಗ್ಗೆ ನವ್ಯಶ್ರೀ ವಿವಿಧ ಸೆಕ್ಷನ್ ಹಾಗೂ ಆ್ಯಕ್ಟ್‌ಗಳಡಿ ಎಫ್‍ಐಆರ್ ದಾಖಲಿಸಿದ್ದರು. ಆದರೂ ಈವರೆಗೂ ಟಾಕಳೆಯನ್ನು ಬಂಧಿಸಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 5 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ ಸಿಎಂ

    Live Tv

  • ಟಾಕಳೆ ವಿರುದ್ಧ ಕೈ ಕಾರ್ಯಕರ್ತೆ ಅತ್ಯಾಚಾರ ಆರೋಪ – ನವ್ಯಶ್ರೀ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಪೊಲೀಸ್

    ಟಾಕಳೆ ವಿರುದ್ಧ ಕೈ ಕಾರ್ಯಕರ್ತೆ ಅತ್ಯಾಚಾರ ಆರೋಪ – ನವ್ಯಶ್ರೀ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಪೊಲೀಸ್

    ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಅವರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನವ್ಯಶ್ರೀ, ಟಾಕಳೆ ವಿರುದ್ಧ ಅತ್ಯಾಚಾರ ಆರೋಪ ಮಾಡಲಾಗಿದ್ದು, ಆಕೆಯನ್ನು ಎಪಿಎಂಸಿ ಪೊಲೀಸರು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ.

    ಬೆಳಗಾವಿಯ ಎಪಿಎಂಸಿ ಠಾಣೆಯಿಂದ ಕರೆದುಕೊಂಡು ಹೋದ ಪೊಲೀಸರು ಬಿಮ್ಸ್ ಆಸ್ಪತ್ರೆಯಲ್ಲಿ ನವ್ಯಶ್ರೀ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಿದ್ದಾರೆ. ನವ್ಯಶ್ರೀ, ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ ಹಾಗೂ ಗರ್ಭಪಾತದ ಆರೋಪ ಮಾಡಿದ್ದರು. ಅವರ ದೂರಿನ ಮೇರೆಗೆ ವೈದ್ಯಕೀಯ ತಪಾಸಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಳಿಯ, ನಟ ರಣವೀರ್ ಸಿಂಗ್ ಬೆತ್ತಲೆ ಪ್ರಕರಣ : ಮುಂಬೈನಲ್ಲಿ ದೂರು ದಾಖಲು

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ನವ್ಯಶ್ರೀ, ನನ್ನ ಅಶ್ಲೀಲ ಸಿಡಿ ವೈರಲ್ ಮಾಡಿಸಿದ ಆ ನಾಯಕ ಯಾರು ಎಂಬುದು ತನಿಖೆ ಮೂಲಕ ಬಯಲಾಗುತ್ತದೆ. ಅದಾದ್ಮೇಲೆ ನಾನೇ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ಈಗ ಟಾಕಳೆ ವಿರುದ್ಧ ದೂರು ನೀಡಿದ್ದೇನೆ. ಹೀಗಾಗಿ ವೈದ್ಯಕೀಯ ತಪಾಸಣೆ, ಸ್ಥಳ ಮಹಜರು ಮಾಡಬೇಕಾಗಿದೆ. ಪೊಲೀಸರ ತನಿಖೆಗೆ ಸಹಕಾರ ನೀಡುವ ಕೆಲಸ ಮೊದಲು ಮಾಡಬೇಕಾಗಿದೆ. ನಾನು ಏನು ವಿಚಾರ ಹೇಳಿದ್ದೀನಿ ಮುಂದಿನ ದಿನಗಳಲ್ಲಿ ಬಂದು ಖುದ್ದಾಗಿ ಮಾತನಾಡುತ್ತೇನೆ. ಮೊದಲು ಈ ತನಿಖೆ ಆಗಬೇಕು. ನಾವೆಲ್ಲ ಒಟ್ಟಾಗಿ ಸೇರಿ ಒಂದು ಸತ್ಯ ಬಯಲಿಗೆ ಎಳೆಯುವಂತ ಕೆಲಸ ಮಾಡಬೇಕಿದೆ. ಶಿಕ್ಷೆ ಕೊಡಿಸಬೇಕಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಕೈ ನಾಯಕರಿಗೆ ಮಾಹಿತಿ ಕೊಡ್ತಿದೆ – ಮುಂಬೈ ರಹಸ್ಯ ಬಿಚ್ಚಿಟ್ಟ ನವ್ಯಶ್ರೀ

    ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಕೈ ನಾಯಕರಿಗೆ ಮಾಹಿತಿ ಕೊಡ್ತಿದೆ – ಮುಂಬೈ ರಹಸ್ಯ ಬಿಚ್ಚಿಟ್ಟ ನವ್ಯಶ್ರೀ

    ಬೆಳಗಾವಿ: ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ನಾಯಕರೊಬ್ಬರಿಗೆ ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಮಾಹಿತಿ ಕೊಡ್ತಿದ್ದೆ ಎಂದು ನವ್ಯಶ್ರೀ ಆರ್. ರಾವ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ನನಗೆ ಮುಂಬೈಗೆ ಹೋಗಲು ಸೀಕ್ರೆಟ್ ಟಾಸ್ಕ್ ನೀಡಿದ್ದರು. ಅದು ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸೀಕ್ರೆಟ್ ಟಾಸ್ಕ್ ಆಗಿತ್ತು. ಅದಕ್ಕಾಗಿ ಬೇರೆ-ಬೇರೆ ಫ್ಲೈಟ್‌ಗಳಿಂದ ಮುಂಬೈಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ನಾನು ಮುಂಬೈನ ಸುಫಿಯೋಟೆಲ್ ಹೋಟೆಲ್‌ನಲ್ಲಿ ತಂಗಿದ್ದೆ. ನನ್ನ ಜೊತೆ ಮೂವರು ಮಹಿಳೆಯರು ಬಂದಿದ್ದರು. ಹೋಟೆಲ್‌ಗೆ ಹೋಗಿ ಶಾಸಕರ ಚಲನವಲನ ನೋಡಿಕೊಳ್ಳುತ್ತಿದ್ದೆ. ನಂತರ ಕಾಂಗ್ರೆಸ್ ನಾಯಕರಿಗೆ ಅರ್ಧರಾತ್ರಿ ವಾಟ್ಸಪ್ ಮೂಲಕ ಅತೃಪ್ತ ಶಾಸಕರ ಮಾಹಿತಿ ಕೊಡ್ತಿದ್ದೆ. ಆ ಸೀಕ್ರೆಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಮುಂಬೈ ರಹಸ್ಯ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ

    2023ಕ್ಕೆ ಚುನಾವಣೆಗೆ ನಿಲ್ಲಬೇಕೆಂದಿದ್ದೆ: ನಾನು ದೆಹಲಿಮಟ್ಟದ, ರಾಜ್ಯಮಟ್ಟದ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ಇರೋದು ನಿಜ. 2023ಕ್ಕೆ ಬೆಳಗಾವಿಯಿಂದ ಚುನಾವಣೆಗೆ ನಿಲ್ಲಬೇಕೆಂದಿದ್ದೆ. ಆದರೆ ಈಗ ರಾಜಕಾರಣ ಹೊರತುಪಡಿಸಿ ವೈಯಕ್ತಿಕ ಬದುಕು ಸರಿಪಡಿಸಿಕೊಳ್ಳಬೇಕಿದೆ. ಈ ಕೃತ್ಯಕ್ಕೆ ಸಹಕಾರ ಕೊಟ್ಟ ಮಹಾನಾಯಕ ಯಾರು ಎಂಬುದನ್ನು ಶೀಘ್ರದಲ್ಲೇ ಹೇಳುತ್ತೇನೆ. ಆತನ ಮುಂದಿನ ಜೀವನ ಮುಳ್ಳಾಗುವಂತೆ ಮಾಡ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಕಾಂಗ್ರೆಸ್ ನನ್ನನ್ನ ಸಸ್ಪೆಂಡ್ ಮಾಡಲಿ: ಕಾಂಗ್ರೆಸ್ ನಿಂದ ನನ್ನ ಇನ್ನೂ ಸಸ್ಪೆಂಡ್ ಮಾಡುವ ಲೆಟರ್ ಬಂದಿಲ್ಲ. ಬೇಕಾದರೆ ನನ್ನ ಸಸ್ಪೆಂಡ್ ಮಾಡಲಿ. ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆ ಇದ್ದೇನೆ, ಯಾವ ಪೋಸ್ಟ್ ಅಂತಾ ಹೇಳಲ್ಲ. ಇದನ್ನು ರಾಜಕೀಯವಾಗಿ ತಿರುಚುವ ಉದ್ದೇಶವೂ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ

    ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ

    ಬೆಳಗಾವಿ: ತೋಟಗಾರಿಕೆ ಇಲಾಖೆ ನಿರ್ದೇಶಕ ರಾಜಕುಮಾರ ಟಾಕಳೆ ನನ್ನನ್ನು ಕಿಡ್ನಾಪ್ ಮಾಡಿ ರೌಡಿಗಳ ಸರ್ಪಗಾವಲಿನೊಂದಿಗೆ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ ಎಂದು ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಆರೋಪಿಸಿದ್ದಾರೆ.

    ರಾಜಕುಮಾರ ಟಾಕಳೆ ಅವರು ನೀಡಿರುವ ದೂರಿನ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆಯೇ ನನ್ನನ್ನು ಕಿಡ್ನಾಪ್ ಮಾಡಿ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ. ನನ್ನಿಂದ ಬಲವಂತವಾಗಿ ಹೇಳಿಕೆ ಪಡೆದು, ಅದನ್ನೂ ಮಾರಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತನ್ನ ಹೆಸರಲ್ಲಿ ಹೋಟೆಲ್ ರಿಜಿಸ್ಟರ್ ಮಾಡಿಲ್ಲ ಅಂತಾ ಅಪ್ಪ-ಅಮ್ಮನ ತಲೆಗೆ ಗುಂಡಿಕ್ಕಿ ಕೊಂದ

    ಟಾಕಳೆ ವಿರುದ್ಧ ನಾನು ಸಿಇಎನ್ ಠಾಣೆಯಲ್ಲಿ ದೂರು ನೀಡುತ್ತಿದ್ದೇನೆ. ಮದುವೆಯಾಗಿ ಪತ್ನಿಯಿದ್ದರೂ ಮೋಸದಿಂದ ಮದುವೆಯಾಗಿರುವುದಕ್ಕಾಗಿ ವಂಚನೆ ಪ್ರಕರಣ, ಮಾವಿನ ತೋಪಿನಲ್ಲಿ ಕೂಡಿಹಾಕಿ ಬಲವಂತದಿಂದ ಹೇಳಿಕೆ ಪಡೆದಿದ್ದಕ್ಕಾಗಿ ಕಿಡ್ನಾಪ್ ಪ್ರಕರಣ, ನನ್ನ ಚಾರಿತ್ರ್ಯ ಹರಣ ಮಾಡಲು ಅಶ್ಲೀಲ ವೀಡಿಯೋಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವೆಬ್‌ಸೈಟ್‌ಗಳಿಗೆ ಮಾರಿಕೊಂಡಿದ್ದಕ್ಕಾಗಿ ಸೈಬರ್ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಲಿದ್ದೇನೆ. ಮುಖ್ಯವಾಗಿ ನನ್ನನ್ನು ಹನಿಟ್ರ್ಯಾಪ್‌ ಮಾಡಿ, ಹಣ ಪೀಕಿದಕ್ಕಾಗಿ ಹನಿಟ್ರ್ಯಾಪ್‌ ಪ್ರಕರಣದ ಅಡಿಯಲ್ಲೂ ದೂರು ದಾಖಲಿಸಲಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ವಾಟ್ಸಾಪ್‌ನಲ್ಲೇ ತಲಾಖ್ ನೀಡಿ ಪರಾರಿಯಾದ

    ಈಗಾಗಲೇ ಸುಳ್ಳು ದೂರಿನ ಮೇರೆಗೆ ನನ್ನ ಮೇಲೆ ದಾಖಲಾದ ಎಫ್‌ಐಆರ್ ಸ್ಕ್ವಾಷ್‌ ಮಾಡಲು ನ್ಯಾಯಾಲಯಕ್ಕೆ ಕೋರಿದ್ದೇನೆ. ಆ ವೀಡಿಯೋ ಇರೋದು ಬೆಂಗಳೂರಿನ ಕುಮಾರ ಕೃಪಾ ಗೆಸ್ಟ್‌ಹೌಸ್‌ನದ್ದು, ಅದಕ್ಕಾಗಿ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸೋಮವಾರ ರಾತ್ರಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಡಿಸಿಪಿ ಸ್ನೇಹಾ ಅವರನ್ನು ಭೇಟಿಯಾಗಿ ಸಾಕ್ಷಿ ಸಮೇತ ಎಲ್ಲ ವಿಚಾರಗಳನ್ನು ಮುಂದಿಟ್ಟಿದ್ದೇನೆ. ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಕೊಡಿಸಲು ಕೇಳಿಕೊಂಡಿದ್ದೇನೆ ಎಂದು ನವ್ಯಶ್ರೀ ಹೇಳಿದ್ದಾರೆ.

    ನಾನು ಅವನೊಂದಿಗೆ ಸೆಕ್ಸ್‌ಮೆಟ್‌ ತರಹ ಇರಬೇಕು ಅನ್ನೋದು ಟಾಕಳೆ ಉದ್ದೇಶ. ಅದಕ್ಕಾಗಿ ನನ್ನನ್ನು ಬೆಳಗಾವಿಯ ಶಿವಬಸವ ನಗರದ ಮಹಿಳಾ ಪಿಜಿಯಲ್ಲಿ ಇರಿಸಿದ್ದ. ಅಲ್ಲಿ ಯಾರೂ ಗಂಡಸರು ಬರಲ್ಲ ಅಂತಾ ಇರಿಸಿದ್ದ. ಆ ಆಡಿಯೋ ಕ್ಲಿಪ್‌ನಲ್ಲಿ ಮಾತನಾಡಿದ ಮೇಲೆಯೇ ನಾನು ಆತನ ಮನೆಗೆ ಬಂದಿದ್ದೆ. ಈತ ನನ್ನ ಜೊತೆ ಇದ್ದ ವೀಡಿಯೋಗಳನ್ನ ವೈರಲ್ ಮಾಡಿದ್ದಾನೆ. ನಾನು ಅವನ ವಿರುದ್ಧ ದೂರು ನೀಡುತ್ತೇನೆ ಎಂದಿದ್ದಾರೆ.

    ಸದ್ಯ ನನಗೆ ಈಗ ಬಂದಿರುವ ಮಾಹಿತಿಗಳೆಲ್ಲವೂ 2ನೇ ವ್ಯಕ್ತಿಯಿಂದ. ಇನ್ನೂ ಈ ತನಿಖೆಯಿಂದೆ ಯಾರಿದ್ದಾರೆ ಎಂಬುದೆಲ್ಲವನ್ನೂ ಪೊಲೀಸ್ ತನಿಖೆಯಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ.

    ಏನಿದು ಪ್ರಕರಣ?
    ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಚನ್ನಪಟ್ಟಣ ಮೂಲದ ನವ್ಯಶ್ರೀ ರಾಮಚಂದ್ರ ರಾವ್ ಹಾಗೂ ಆಪ್ತ ತಿಲಕ್ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ಬೆಳಗಾವಿ: ನವ್ಯಶ್ರೀ ಅವರ ಕಷ್ಟಕ್ಕೆ ಸ್ಪಂದಿಸಿ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಅಂದಿದ್ದೆ. ಆದ್ರೆ ನವ್ಯಶ್ರೀ ಕಳೆದ 4 ವರ್ಷಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು, ಈಗಾಗಲೇ 2 ಲಕ್ಷ ಹಣವನ್ನೂ ಪಡೆದಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಆರೋಪಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 3-4 ತಿಂಗಳಿನಿಂದ ನವ್ಯಶ್ರೀ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇನೆ. ನನ್ನ ಪತ್ನಿಯ ಸಹಕಾರದಿಂದಲೇ ಕೇಸ್ ದಾಖಲು ಮಾಡಿದ್ದೇನೆ. ನ್ಯಾಯಾಂಗ, ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: 1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP

    ನಾನೊಬ್ಬ ಸರ್ಕಾರಿ ನೌಕರನಾಗಿದ್ದು ಹೆಚ್ಚಿಗೆ ಹೇಳಲ್ಲ. ಕಳೆದ 5-6 ತಿಂಗಳಿಂದ ಸತತವಾಗಿ ಬ್ಲ್ಯಾಕ್‌ಮೇಲ್‌ ನಡೆಯುತ್ತಿದೆ. ನಾನು ಪತಿ ಎಂದು ನವ್ಯಶ್ರೀ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಕೇವಲ ಹಣಕಾಸಿನ ವ್ಯವಹಾರ ಇದೆ ಎಂದು ಪೊಲೀಸರು ಹೇಳಿದ್ದರು. ಇದಾದ ಬಳಿಕ ಮತ್ತೆ 50 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಈಗಾಗಲೇ 2 ಲಕ್ಷ ಹಣ ಸಹ ಪಡೆದುಕೊಂಡಿದ್ದಾರೆ. ನನ್ನ ಮದುವೆ ವಿಚಾರ ತಿಳಿದು ಬ್ಲ್ಯಾಕ್ ಮೆಲ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

    ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದೆ: ನವ್ಯಶ್ರೀ ಆಡಿಯೋ ರಿಲೀಸ್ ವಿಚಾರಕ್ಕೆ ಸಬಂಧಿಸಿದಂತೆ ಮಾತನಾಡಿರುವ ಅವರು, ಆಡಿಯೋದಲ್ಲಿ ಎಲ್ಲಿಯೂ ಪತ್ನಿ ಎಂದು ನಾನು ಹೇಳಿಲ್ಲ. ಮಾನವೀಯ ದೃಷ್ಟಿಯಿಂದ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅವರ ಮನೆ ಸಮಸ್ಯೆ ಬಗ್ಗೆ ಜಗಳ ನಡೆದಿತ್ತು. ಆಗ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಕ್ ಅನುಮತಿ ಪಡೆಯೋದ್ರಲ್ಲಿ ಹಿಂದೂ ದೇಗುಲಗಳ ನಿರಾಸಕ್ತಿ – ಮಸೀದಿ, ಚರ್ಚ್‌ಗಳೇ ಟಾಪ್

    ಮಾತನಾಡುವ ವೇಳೆ ಪತ್ನಿ ಸಹ ನನ್ನ ಜೊತೆಗೆ ಇದ್ರು. ನಮ್ಮ ಸಮಾಜದ ಮಹಿಳೆ ಎಂದು ನಮ್ಮ ಮನೆಗೆ ಬನ್ನಿ ಅಂತಾ ಹೇಳಿದ್ದೇನೆ. ಆಗ ಹೆಂಡತಿ ಯಾರು ಇವರು ಅಂತ ಕೇಳಿದಾಗ ಪತ್ನಿ, ಮಗಳಿಗೆ ಗೊತ್ತಿರಲಿ ಅಂತಾ ಹೇಳಿದ್ದೇನೆ. ನಾನು ಡಿಡಿ ರೂಪದಲ್ಲಿ 2 ಲಕ್ಷ ಹಣ, ಕ್ಯಾಷ್ 3 ಲಕ್ಷ ಕೊಟ್ಟಿದ್ದೇನೆ. ಅವರು ಯಾವುದೇ ದಾಖಲೆ ರಿಲೀಸ್ ಮಾಡಿದ್ರೂ ನನಗೇನೂ ತೊಂದರೆಯಿಲ್ಲ. ಜನರಿಗೆ ಈ ವಿಚಾರ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.

    ನನ್ನ ದೂರು ಸಂದೇಶವಾಗಲಿ: ಪತ್ನಿಯ ಸಹಕಾರದಿಂದಲೇ ದೂರು ನೀಡಿದ್ದೇನೆ. ಯಾರಿಗೂ ಈ ರೀತಿಯ ಬ್ಲ್ಯಾಕ್‌ಮೇಲ್ ಆಗಬಾರದು. ವೀಡಿಯೋ, ಆಡಿಯೋ ಬಗ್ಗೆ ತನಿಖೆ ಆಗಬೇಕು. ಸತ್ಯಾಸತ್ಯತೆಗಳು ಹೊರಬರಬೇಕು. ತಿಲಕ್ ಕುಮಾರ್ ಮಾವ ಅಂತಾ ಹೇಳಿದ್ರು. ಆಮೇಲೆ ಆಕೆಯ ಫ್ರೆಂಡ್ ಅಂತಾ ಗೊತ್ತಾಗಿದೆ. ಬ್ಲ್ಯಾಕ್‌ಮೇಲ್‌ಲ್‌ಗೆ ಒಳಗಾದವರಿಗೆ ನನ್ನ ದೂರು ಸಂದೇಶವಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಒಪ್ಕೊಂಡಿದ್ದೀನಿ, ಅವಳೂ ಒಪ್ಕೊಂಡಿದ್ದಾಳೆ, ನನ್ನ ಪತ್ನಿಯನ್ನೂ ಒಪ್ಪಿಸ್ತೀನಿ..: ನವ್ಯಶ್ರೀಯಿಂದ ಆಡಿಯೋ ರಿಲೀಸ್

    ನಾನು ಒಪ್ಕೊಂಡಿದ್ದೀನಿ, ಅವಳೂ ಒಪ್ಕೊಂಡಿದ್ದಾಳೆ, ನನ್ನ ಪತ್ನಿಯನ್ನೂ ಒಪ್ಪಿಸ್ತೀನಿ..: ನವ್ಯಶ್ರೀಯಿಂದ ಆಡಿಯೋ ರಿಲೀಸ್

    ಬೆಳಗಾವಿ: ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ ಕೇಸ್ ದಾಖಲಾಗಿರುವ ವಿಚಾರ ಸಂಬಂಧ ಇದೀಗ ನವ್ಯಶ್ರೀ ಅವರು ಆಡಿಯೋ ರಿಲೀಸ್ ಮಾಡಿದ್ದಾರೆ.

    ರಾಜಕುಮಾರ, ನವ್ಯಶ್ರೀ ಮತ್ತು ನವ್ಯಶ್ರೀ ಆಪ್ತ ತಿಲಕ್ ಜೊತೆಯಾಗಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ, ನಾನು ಒಪ್ಪಿಕೊಂಡಿದ್ದೇನೆ, ಅವಳು ಒಪ್ಪಿಕೊಂಡಿದ್ದಾಳೆ ನನ್ನ ಹೆಂಡತಿಯನ್ನೂ ಒಪ್ಪಿಸುತ್ತೇನೆ. ನನ್ನ ಹೆಂಡತಿ ಮಕ್ಕಳ ಜೊತೆಗೆ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನನ್ನ ಮಗಳಿಗೂ ಹೇಳಿದ್ದೇನೆ ಏನೂ ತೊಂದರೆ ಇಲ್ಲಾ ಎಂದು ರಾಜಕುಮಾರ ಹೇಳಿರುವುದು ಬಯಲಾಗಿದೆ.

    ಸುಲಿಗೆ, ಮಾನಸಿಕ ಹಿಂಸೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ನವ್ಯಶ್ರೀ ಹೇಳಿದ್ದೇನು..?
    ತೋಟಗಾರಿಕೆ ಇಲಾಖೆಯ ನನ್ನ ಗಂಡ ಅವನಿಂದ ನನಗೆ ಏನು ಮೋಸ ಆಗಿದೆ..? ಮೋಸ ಹೇಗಾಯ್ತು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು 15 ದಿನಗಳಿಂದ ಇಂಡಿಯಾದಲ್ಲೇ ಇರಲಿಲ್ಲ. ವಿದೇಶದಿಂದ ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವೀಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ನಾನು ಬೆಳಗಾವಿ ಪೊಲೀಸ್ ಆಯುಕ್ತರ ಬಳಿ ದೂರು ಕೊಡುತ್ತೇನೆ. ನನ್ನ ಮೇಲೆ ಎಫ್‍ಐಆರ್ ಆಗಿರುವ ಬಗ್ಗೆ ಮಾಹಿತಿಯಿಲ್ಲ. ಇಲ್ಲಿವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟ ರಾಜಕುಮಾರ ನನ್ನ ಗಂಡ – ಕಾಂಗ್ರೆಸ್‌ ಕಾರ್ಯಕರ್ತೆ ನವ್ಯಶ್ರೀ

    ಮೊದಲು ನಾನು ಕಂಪ್ಲೇಟ್ ಕಾಪಿ (ದೂರಿನ ಪ್ರತಿ) ಪಡೆಯುತ್ತೇನೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ? ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು ಯಾವ ರೀತಿ ಮದುವೆ ಆಗಿದ್ದೇನೆ ಅನ್ನೋದನ್ನೂ ಪ್ರೆಸ್‍ಮೀಟ್ ಮಾಡಿ ಹೇಳುತ್ತೇನೆ, ಎಲ್ಲರ ಪ್ರಶ್ನೆಗೂ ಉತ್ತರ ಕೊಡ್ತೇನೆ ಎಂದು ತಿಳಿಸಿದ್ದಾರೆ.

    ರಾಜಕುಮಾರ ಟಾಕಳೆ ಹೇಳಿದ್ದೇನು?
    ನವ್ಯಶ್ರೀ ಆರ್. ರಾವ್ ವಿರುದ್ಧ ದೂರು ನೀಡಿದ್ದ ರಾಜಕುಮಾರ ಟಾಕಳೆ, ಈ ಹಿಂದೆ ನಾನು ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿ ಕಾರ್ಯನಿರ್ವಹಿಸುವಾಗ ಬೆಂಗಳೂರಿನಲ್ಲಿದ್ದೆ. ಆಗ ನವ್ಯಶ್ರೀ ರಾವ್ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯವಾಗಿದ್ದರು. ಇದಾದ ಬಳಿಕ ಡಿಸೆಂಬರ್ 2020ರಲ್ಲಿ ಸಂದರ್ಭದಲ್ಲಿ ನವ್ಯಶ್ರೀ ಅವರು ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂತಾ ಪರಿಚಯ ಮಾಡಿಕೊಂಡಿದ್ದರು. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR

    ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‍ಜಿಒ ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದರು. ಒಂದೂವರೆ ವರ್ಷದ ಪರಿಚಯದಲ್ಲಿ ನಾನು ಬೇರೆಬೇರೆ ಸ್ಥಳ ಸೇರಿ ಬೆಳಗಾವಿಯಲ್ಲಿ ಭೇಟಿಯಾಗಿದ್ದೆವು. ಇದಾದ ಬಳಿಕ 2021ರ ಡಿಸಂಬರ್ 24ರಂದು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

    50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಬಳಿಕ ತನ್ನ ಮನೆಗೆ ಬಂದು ತನ್ನ ಬೇಡಿಕೆ ಈಡೇರುವವರೆಗೂ ಮನೆ ಬಿಟ್ಟು ಹೋಗಲ್ಲ ಅಂತಾ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಇದರ ಜೊತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೂರು ಕೊಟ್ಟ ರಾಜಕುಮಾರ ನನ್ನ ಗಂಡ – ಕಾಂಗ್ರೆಸ್‌ ಕಾರ್ಯಕರ್ತೆ ನವ್ಯಶ್ರೀ

    ದೂರು ಕೊಟ್ಟ ರಾಜಕುಮಾರ ನನ್ನ ಗಂಡ – ಕಾಂಗ್ರೆಸ್‌ ಕಾರ್ಯಕರ್ತೆ ನವ್ಯಶ್ರೀ

    ಬೆಳಗಾವಿ: ತೋಟಗಾರಿಕೆ ಇಲಾಖೆಯ ರಾಜಕುಮಾರ ಟಾಕಳೆ ನನ್ನ ಗಂಡ ಅವನಿಂದ ನನಗೆ ಏನು ಮೋಸ ಆಗಿದೆ. ಮುಂದಿನ ದಿನಗಳಲ್ಲಿ ಮೋಸ ಹೇಗಾಯ್ತು ಎಂಬುದನ್ನು ಹೇಳುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಕಾಂಗ್ರೆಸ್ ನಾಯಕಿ ನವ್ಯಶ್ರೀ ಪ್ರತಿಕ್ರಿಯಿಸಿದ್ದಾರೆ.

    ಸುಲಿಗೆ, ಮಾನಸಿಕ ಹಿಂಸೆ, ಸುಳ್ಳು ಅತ್ಯಾಚಾರ ಕೇಸ್ ದಾಖಋಲಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅವರ ವಿರುದ್ಧ ದೂರು ನೀಡಿದ್ದರು. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು 15 ದಿನಗಳಿಂದ ಇಂಡಿಯಾದಲ್ಲೇ ಇರಲಿಲ್ಲ. ವಿದೇಶದಿಂದ ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವೀಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ನಾನು ಬೆಳಗಾವಿ ಪೊಲೀಸ್ ಆಯುಕ್ತರ ಬಳಿ ದೂರು ಕೊಡುತ್ತೇನೆ. ನನ್ನ ಮೇಲೆ ಎಫ್‌ಐಆರ್ ಆಗಿರುವ ಬಗ್ಗೆ ಮಾಹಿತಿಯಿಲ್ಲ. ಇಲ್ಲಿವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ ಎಂದು ಹೇಳಿದ್ದಾರೆ.

    ಮೊದಲು ನಾನು ಕಂಪ್ಲೇಟ್ ಕಾಪಿ (ದೂರಿನ ಪ್ರತಿ) ಪಡೆಯುತ್ತೇನೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ? ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು ಯಾವ ರೀತಿ ಮದುವೆ ಆಗಿದ್ದೇನೆ ಅನ್ನೋದನ್ನೂ ಪ್ರೇಸ್‌ಮೀಟ್ ಮಾಡಿ ಹೇಳುತ್ತೇನೆ, ಎಲ್ಲರ ಪ್ರಶ್ನೆಗೂ ಉತ್ತರ ಕೊಡ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಚಿಯಾನ್ ವಿಕ್ರಮ್ ರೊಮ್ಯಾನ್ಸ್

    ರಾಜಕುಮಾರ ಟಾಕಳೆ ಹೇಳಿದ್ದೇನು?
    ನವ್ಯಶ್ರೀ ಆರ್. ರಾವ್ ವಿರುದ್ಧ ದೂರು ನೀಡಿದ್ದ ರಾಜಕುಮಾರ ಟಾಕಳೆ, ಈ ಹಿಂದೆ ನಾನು ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿ ಕಾರ್ಯನಿರ್ವಹಿಸುವಾಗ ಬೆಂಗಳೂರಿನಲ್ಲಿದ್ದೆ. ಆಗ ನವ್ಯಶ್ರೀ ರಾವ್ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯವಾಗಿದ್ದರು. ಇದಾದ ಬಳಿಕ ಡಿಸೆಂಬರ್ 2020ರಲ್ಲಿ ಸಂದರ್ಭದಲ್ಲಿ ನವ್ಯಶ್ರೀ ಅವರು ಸಾಫ್ಟ್‌ವೇರ್‌ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂತಾ ಪರಿಚಯ ಮಾಡಿಕೊಂಡಿದ್ದರು. ಇದನ್ನೂ ಓದಿ: ಕಸ ಸಾಗಿಸೋ ವಾಹನದ ಮೇಲೆ ಹುಚ್ಚಾಟ – ಸಾಹಸ ಮಾಡಿ ಆಸ್ಪತ್ರೆ ಸೇರಿದ ಯುವಕ

    ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‌ಜಿಒ ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದರು. ಒಂದೂವರೆ ವರ್ಷದ ಪರಿಚಯದಲ್ಲಿ ನಾನು ಬೇರೆಬೇರೆ ಸ್ಥಳ ಸೇರಿ ಬೆಳಗಾವಿಯಲ್ಲಿ ಭೇಟಿಯಾಗಿದ್ದೆವು. ಇದಾದ ಬಳಿಕ 2021ರ ಡಿಸಂಬರ್ 24ರಂದು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

    50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಬಳಿಕ ತನ್ನ ಮನೆಗೆ ಬಂದು ತನ್ನ ಬೇಡಿಕೆ ಈಡೇರುವವರೆಗೂ ಮನೆ ಬಿಟ್ಟು ಹೋಗಲ್ಲ ಅಂತಾ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಇದರ ಜೊತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]