Tag: ರಾಜಕುಮಾರ್ ಪಾಟೀಲ್ ತೇಲ್ಕೂರ್

  • ಪ್ರಿಯಾಂಕ್ ಖರ್ಗೆ ಅಕ್ಕ, ತಂಗಿಯರು ಮಂಚ ಹತ್ತಿಯೆ ನೌಕರಿಗೆ ಹೋಗಿದ್ದಾರಾ: ಪಾಟೀಲ್ ಗರಂ

    ಪ್ರಿಯಾಂಕ್ ಖರ್ಗೆ ಅಕ್ಕ, ತಂಗಿಯರು ಮಂಚ ಹತ್ತಿಯೆ ನೌಕರಿಗೆ ಹೋಗಿದ್ದಾರಾ: ಪಾಟೀಲ್ ಗರಂ

    ಕಲಬುರಗಿ: ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಮನೆಯಲ್ಲೂ ಅಕ್ಕ-ತಂಗಿಯರು ಮಂಚ ಹತ್ತಿ ನೌಕರಿಗೆ ಹೋಗಿದ್ದಾರಾ ಎಂದು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

    ಪ್ರಿಯಾಂಕ್ ಖರ್ಗೆ ಅವರ ಲಂಚ-ಮಂಚದ ಸರ್ಕಾರ ಹೇಳಿಕೆ ವಿಚಾರವನ್ನು ತೀವ್ರವಾಗಿ ಖಂಡಿಸಿದ ಅವರು, ನಮ್ಮ ಮನೆಯಲ್ಲಿ ಅಕ್ಕ ತಂಗಿಯರು ಜಾಬ್‌ಗೆ ಹೋಗಿದ್ದಾರೆ ಅವರೇನು ಮಂಚ ಏರಿ ಹೋಗಿದ್ದಾರಾ? ನಿಮ್ಮ ಮನೆಯಲ್ಲೂ ಅಕ್ಕ ತಂಗಿಯರು ಜಾಬ್‌ಗೆ ಹೋಗಿದ್ದಾರೆ ಅವರೂ ಮಂಚ ಏರಿ ಹೋಗಿದ್ದಾರಾ? ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವುದಿಲ್ಲ. ಲಂಚದ ಬಗ್ಗೆ ಮಾತನಾಡುತ್ತಾರೆ ಸರಿ, ಆದರೆ ಮಂಚದ ಬಗ್ಗೆ ಮಾತನಾಡಿ ರಾಜ್ಯದ ಮಹಿಳೆಯರ ಗೌರವ ತೆಗೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಪಂಡಿತರು ಟಾರ್ಗೆಟ್ – ಓರ್ವನ ಹತ್ಯೆ, ಮತ್ತೋರ್ವ ಗಂಭೀರ

    ಪ್ರಿಯಾಂಕ್ ಖರ್ಗೆ ಅವರು ಸಹ ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರು. ಅವರ ಮನೆಯಲ್ಲೂ ಸಹ ಅಕ್ಕ-ತಂಗಿಯರು ಇದ್ದಾರೆ. ಅವರು ಕೂಡ ಮಂಚ ಹತ್ತಿ ನೌಕರಿಗೆ ಹೋಗಿದ್ದಾರಾ? ಮಾತಾಡಬೇಕಾದರೆ ನಾಲಿಗೆ ಮೇಲೆ ಹಿಡಿತ ಇರಲಿ. ಮಂಚ ಹತ್ತಿ ನೌಕರಿಗೆ ಹೋಗಿರುವ ಒಂದೇ ಒಂದು ಉದಾಹರಣೆ ಕೊಡಲಿ. ಬಾಯಿಮಾತಿಗೆ ಏನೇನೋ ಮಾತನಾಡಿದರೆ ಸರಿ ಇರುವುದಿಲ್ಲ. ಈ ಹೇಳಿಕೆಯಿಂದ ಮಹಿಳೆಯರಿಗೆ ಪ್ರಿಯಾಂಕ್ ಅಗೌರವ ತೋರಿದ್ದಾರೆ. ಈ ರೀತಿಯ ಹೇಳಿಕೆ ಕುಟುಂಬಗಳಲ್ಲಿ ಬಿರುಕು ಮೂಡಿಸುತ್ತವೆ. ಇಂತಹ ನೀಚ ಮಾತು ಹೇಳುವುದು ಅವರಿಗೆ ಗೌರವತರಲ್ಲ. ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಿ ಎಂದು ಗುಡುಗಿದ್ದಾರೆ.

    ಪ್ರಿಯಾಂಕ್ ಖರ್ಗೆ ಅವರು, ಪ್ರಚಾರದ ಗೀಳಿಗಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅವರು ಈಗಲೇ ರಾಜ್ಯದ ಮಹಿಳೆಯರ ಕ್ಷಮೆ ಕೇಳಲಿ. ಸರ್ಕಾರದ ಬಗ್ಗೆ ಮಾತಾಡಲು ಅವರ ಬಳಿ ಏನು ಉಳಿದಿಲ್ಲ. ಅದಕ್ಕಾಗಿ ಈ ರೀತಿ ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    Live Tv
    [brid partner=56869869 player=32851 video=960834 autoplay=true]

  • ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಲ್ಲ: ಕರುಣಾಕರ ಖಾಸಲೆ

    ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಲ್ಲ: ಕರುಣಾಕರ ಖಾಸಲೆ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪಿ ಕಲಬುರಗಿಯ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ಪಕ್ಷದ ನಾಯಕಿಯಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಮಾಧ್ಯಮ ಪ್ರಕಟನೆ ಹೊರಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿದ ಅವರು, ದಿವ್ಯಾ ಹಾಗರಗಿ ಅಥವಾ ಯಾರೇ ಅಕ್ರಮದಲ್ಲಿ ಭಾಗವಹಿಸಿದ್ದರೆ ಅದನ್ನು ಪಕ್ಷ ಮತ್ತು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಅಕ್ರಮ ನಡೆದಿರುವುದು ಸಾಬೀತಾದರೆ ಶಿಕ್ಷೆ ಆಗಲಿದೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಈ ವಿಷಯದ ಕುರಿತು ಸಿಐಡಿ ತನಿಖೆ ನಡೆಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ದಿವ್ಯಾ ಹಾಗರಗಿ ಮೇಲೆ ಕೇಳಿ ಬಂದಿತ್ತು. ಅವರ ಪತಿ ರಾಜೇಶ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿದ್ದಾರೆ. ಇತ್ತ ದಿವ್ಯಾ ಹಾಗರಗಿ ಕಳೆದ 4 ದಿನಗಳಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ಗೆ 14 ದಿನ ನ್ಯಾಯಾಂಗ ಬಂಧನ

    ಈ ನಡುವೆ ವಿರೋಧ ಪಕ್ಷಗಳು ಬಿಜೆಪಿ ಪಕ್ಷದ ನಾಯಕಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಹೊರಿಸುತ್ತಿದೆ. ಈ ಎಲ್ಲದರ ನಡುವೆ ಬಿಜೆಪಿ ಸರ್ಕಾರ ಡ್ಯಾಮೆಜ್ ಕಂಟ್ರೋಲ್‍ಗೆ ಮುಂದಾಗಿ ಬಿಜೆಪಿಗೂ ದಿವ್ಯಾ ಹಾಗರಗಿ ಸಂಬಂಧವಿಲ್ಲ ಎಂದು ತಿಳಿಸಿದೆ.