ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ (Rajakumar Takale) ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ (Navyashree Rao) ಹರಿಹಾಯ್ದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸೆಕ್ಸ್ ಟ್ರೆಡರ್ ಇದ್ದಾನೆ. ನನ್ನ ಖಾಸಗಿ ವೀಡಿಯೋ (Private Video) ಗಳನ್ನು ವೆಬ್‍ಸೈಟ್‍ಗೆ ಮಾರಾಟ ಮಾಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಮೊಬೈಲ್ ಕಳೆದು ಹೋಗಿದೆ ಅಂತಾ ಏಕೆ ಸುಳ್ಳು ಹೇಳುತ್ತಿದ್ದಾನೆ. ಆತನ ಮೊಬೈಲ್‍ನಲ್ಲಿ ಬೇರೆ ಹೆಣ್ಣುಮಕ್ಕಳ ವಿಡಿಯೋಗಳು ಸಹ ಇರಬಹದು ಎಂದು ಆರೋಪಿಸಿದರು.
ಟಾಕಳೆ ಮನೆಯೇ ಅಕ್ರಮ ಚಟುವಟಿಕೆ ನಡೆಸುವ ತಾಣವಾಗಿದೆ. ಆತನ ಪತ್ನಿ ಹೇಗೆ ನನಗೆ ಮನೆಯಲ್ಲಿ ಒಂದು ವಾರ ಇರಲು ಅವಕಾಶ ಕೊಟ್ಟಳು?. ಇದು ಬಿಗ್ ಮಾಫಿಯಾ ಇದೆ. ಒಬ್ಬ ನವ್ಯಶ್ರೀ ಸತ್ಯಾಸತ್ಯತೆ ಬಯಲಿಗೆಳೆದಿರಬಹುದು. ಸರ್ಕಾರಿ ಅಧಿಕಾರಿಯಾಗಿ ಸರ್ಕಾರಿ ಬಂಗಲೆ ದುರುಪಯೋಗ ಪಡಿಸಿಕೊಂಡಿದ್ದಾನೆ. ಈತನ ಕಾಮಕೃತ್ಯಕ್ಕೆ ಎಷ್ಟೋ ಹೆಣ್ಣು ಮಕ್ಕಳು ಬಲಿಯಾಗಿರಬಹುದು ಎಂದು ಪ್ರಶ್ನಿಸಿದ್ದಾರೆ. ಇಂತಹ ಗೋಮುಖ ವ್ಯಾಘ್ರನ ಜೊತೆ ಆತನ ಸಹೋದರರು ಸೇರಿದ್ದಾರೆ. ಯಾವ್ಯಾವ ವೆಬ್‍ಸೈಟ್‍ಗೆ ಯಾವ್ಯಾವ ಹೆಣ್ಣುಮಕ್ಕಳ ಖಾಸಗಿ ವಿಡಿಯೋ ಮಾರಾಟ ಮಾಡಿದ್ದಾನೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ
ಇದೇ ವೇಳೆ ರಾಜಕುಮಾರ್ ಟಾಕಳೆನ ಗಂಡ ಅಂತಾ ಒಪ್ಪಿಕೊಳ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನವ್ಯ, ನಾನು ಸಶಕ್ತಳಾಗಿದ್ದೇನೆ. ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಇದೆ. ನನಗೆ ಯಾವ ಗಂಡನ ಅವಶ್ಯಕತೆ ಇಲ್ಲ. ಗಂಡ ಅಂದ್ರೆ ಹೆಂಡತಿ ವೀಡಿಯೋ ಮಾಡಿ ಅಪ್‍ಲೋಡ್ ಮಾಡೋದಲ್ಲ. ಆತನ ಕ್ಷಮಿಸುವುದರಲ್ಲಿ ಅರ್ಥನೇ ಇಲ್ಲ ಎಂದು ಗರಂ ಆದರು.
ಬೆಳಗಾವಿ: ಕೋರ್ಟ್‍ನಲ್ಲಿ ರಾಜಕುಮಾರ ಟಾಕಳೆ ನಿರೀಕ್ಷಣಾ ಜಾಮೀನು ತಿರಸ್ಕಾರ ಆಗಿದೆ. ಅವರ ವಿರುದ್ಧ ಎಫ್‍ಐಆರ್ ಆಗಿ 13 ದಿನ ಕಳೆದರೂ ಪೊಲೀಸರು ಈವರೆಗೂ ರಾಜಕುಮಾರ ಟಾಕಳೆ ಅವರನ್ನು ಬಂಧಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಬಂದ ಬಳಿಕ 20 ದಿನಗಳಿಂದ ಬೆಳಗಾವಿಯಲ್ಲಿ ಇದ್ದು, ಕಾನೂನು ಹೋರಾಟ ಮಾಡುತ್ತಿದ್ದೇನೆ. ನನಗೆ ಆದ ಅನ್ಯಾಯದ ವಿರುದ್ಧ ಎಪಿಎಂಸಿ ಠಾಣೆಗೆ ದೂರು ನೀಡಿದ್ದೇನೆ. ರಾಜಕುಮಾರ ಟಾಕಳೆ ನಿರೀಕ್ಷಣಾ ಜಾಮೀನು ತಿರಸ್ಕಾರ ಆಗಿದೆ. ರಾಜಕುಮಾರ ಟಾಕಳೆ ವಿರುದ್ಧ ಎಫ್‍ಐಆರ್ ಆಗಿ 13 ದಿನ ಕಳೆದಿದೆ. ಈವರೆಗೂ ರಾಜಕುಮಾರ್ ಟಾಕಳೆ ಬಂಧನವಾಗಿಲ್ಲ. ಘನ ನ್ಯಾಯಾಲಯ ನವ್ಯಶ್ರೀಗೆ ಮತ್ತಷ್ಟು ಶಕ್ತಿ ಕೊಟ್ಟಿದೆ ಎಂದರು.
ನವ್ಯಶ್ರೀ ಫೌಂಡೇಶನ್ ಸರ್ಕಾರದಿಂದ ನೊಂದಾಯಿತ ಸಂಸ್ಥೆಯಾಗಿದೆ. ನೆರೆ ವೇಳೆ ಬಾಗಲಕೋಟೆಗೆ ಹೋಗಿ ಕೆಲಸ ಮಾಡಿದ್ದೇನೆ. ಕೋವಿಡ್ ವೇಳೆ ರೈತರ ಬಳಿ ತರಕಾರಿ ಖರೀದಿಸಿದ್ದೇವೆ. ನವ್ಯ ಫೌಂಡೇಶನ್‍ಗೆ ನವ್ಯಶ್ರೀ ಒಬ್ಬಳೇ ಅಲ್ಲ ಎಲ್ಲಾ ಪದಾಧಿಕಾರಿಗಳು ಇದ್ದಾರೆ. ನವ್ಯ ಫೌಂಡೇಶನ್‍ಗೆ ಬಹಳಷ್ಟು ಜನ ಸಹಕಾರ ಕೊಟ್ಟಿದ್ದಾರೆ. ನವ್ಯಶ್ರೀ ಸತ್ಯದ ಪರ ನಿಂತಿದ್ದಾಳೆ ಓಡಿ ಹೋಗಿಲ್ಲ ಎಂದು ಹೇಳಿದರು.
ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜಕುಮಾರ ಟಾಕಳೆ ನನ್ನ ಬಳಿ ಸಾಲದ ಹಣ ಪಡೆದಿದ್ದು ಬರೆದು ಕೊಟ್ಟಿದ್ದಾರೆ. ಎರಡು ಲಕ್ಷ ರೂ. ಡಿಡಿ ಬಡ್ಡಿ ಸಮೇತ ಸಂದಾಯ ಮಾಡಿರುತ್ತೇನೆ ಅಂತಾ ಬರೆದುಕೊಟ್ಟಿದ್ದಾರೆ. ಇನ್ನು ಮುಂದೆ ನಾನು ನವ್ಯಶ್ರೀ ಯಾವ ವಿಚಾರಕ್ಕೆ ಹೋಗಲ್ಲ ಅಂತಾ ಬರೆದುಕೊಟ್ಟಿದ್ದಾರೆ. ನನಗೆ ಕೊಡಬೇಕಾದ ಹಣ ಕೊಟ್ಟು ಎಫ್‍ಐಆರ್‌ನಲ್ಲಿ ತಿರುಚಿದ್ದಾನೆ. ತಾನೇ ತೋಡಿದ ಖೆಡ್ಡಾಗೆ ರಾಜಕುಮಾರ ಟಾಕಳೆ ಬಿದ್ದಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ರಾಜಕಾರಣದಲ್ಲಿ ನನಗೆ ದೆಹಲಿ ನಾಯಕರ ಸಂಪರ್ಕ ಇರೋದು ಚುನಾವಣೆ ಸಮಯದಲ್ಲಾಗಿತ್ತು. ನಾನು ನಾಯಕಿ ಅಲ್ಲ ಸೇವಕಿ ಅಂತಾ ಈಗಾಗಲೇ ಹೇಳಿದ್ದೇನೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಕೇರಳ, ದೆಹಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೇನೆ ಎಂದರು.
ನನಗೆ ಪಕ್ಷದ ಆದೇಶ ಬಂದ ಸಂದರ್ಭದಲ್ಲಿ ನಾನು ಚುನಾವಣಾ ಪ್ರಚಾರಕ್ಕೆ ಹೋಗಿದ್ದೇನೆ. ಕರ್ನಾಟಕ ವಿಧಾನಸಭೆ ಉಪಚುನಾವಣೆ ವೇಳೆಯೂ ಕೆಲಸ ಮಾಡಿದ್ದೇನೆ. ಬಹುಶಃ ಒಂದು ಕೆಟ್ಟ ಘಳಿಗೆ ನನಗೆ ಆಪಾದನೆಗಳು ಬಂದಿವೆ. ಸಾವಿರ ಟೀಕೆ ಎದುರಿಸುವ ಶಕ್ತಿ ನನ್ನ ಹತ್ತಿರ ಇದೆ. ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ ತಕ್ಷಣ ನಾನು ಓಡಿ ಹೋಗಿಲ್ಲ. 20 ದಿನಗಳಿಂದ ಎಪಿಎಂಸಿ ಠಾಣೆಗೆ ವಿಚಾರಣೆಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.
ರಾಜಕೀಯ ನಾಯಕರ ಸಪೋರ್ಟ್ ನಾನು ಕೇಳಿಲ್ಲ. ರಾಜಕುಮಾರ ಟಾಕಳೆಗೆ ಹಣ ಕೊಟ್ಟು ಕೊಂಡುಕೊಳ್ಳುವ ಅಭ್ಯಾಸ ಇದೆ. ರಾಜಕುಮಾರ ಟಾಕಳೆ ಮೊಬೈಲ್ ಸೀಜ್ ಮಾಡಿದರೆ ಮತ್ತಷ್ಟು ಹೆಣ್ಣುಮಕ್ಕಳ ಮರ್ಯಾದೆ ಉಳಿಯುತ್ತದೆ. ನಾನು ಎಫ್‍ಐಆರ್ ಕೊಟ್ಟು 13 ದಿನ ಆಗಿದೆ. ರಾಜಕುಮಾರ ಟಾಕಳೆಯನ್ನು ಕರೆದು ವಿಚಾರಣೆ ಮಾಡಬಹುದಲ್ಲ ಎಂದರು. ಇದನ್ನೂ ಓದಿ:ವಿದ್ಯಾರ್ಥಿನಿಗೆ ವೋಡ್ಕಾ ಕುಡಿಯುವಂತೆ ಒತ್ತಾಯಿಸಿದ ಶಿಕ್ಷಕ
ಬುಧವಾರ ಸಂಜೆ ಮನೆಯಿಂದ ಆತ ಪರಾರಿಯಾಗಿದ್ದಾನೆ. ರಾಜಕುಮಾರ ಟಾಕಳೆ ಬಂಧನ ಏಕೆ ಆಗಿಲ್ಲ. ದಯಮಾಡಿ ಬಂಧನ ಮಾಡಬೇಕು. ಆತ ನನ್ನ ಹೆಂಡತಿ ಅಂತಾ ಒಪ್ಪಿಕೊಳ್ಳಲಿ ಅಥವಾ ಬಿಡಲಿ ಅದನ್ನು ಹೇಗೆ ಪ್ರೂವ್ ಮಾಡಬೇಕೆಂದು ನನಗೆ ಗೊತ್ತಿದೆ. ನನ್ನ ಕಿಡ್ನಾಪ್ ಮಾಡಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕೊಟ್ಟಿದ್ದೇನೆ. ಪೊಲೀಸ್ ಇಲಾಖೆಗೆ ಬೇಕಾದ ಅಗತ್ಯ ದಾಖಲೆ ನೀಡಿದ್ದೇನೆ ಎಂದರು. ಇದನ್ನೂ ಓದಿ:ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ವಿಚಾರಕ್ಕೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ನವ್ಯಶ್ರೀ ಆಯ್ಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಏಕೆ ಹೋಗಬಾರದು. ನನಗೆ ಸಂಬಂಧ ದಾಖಲೆ ಆ ವಾಹಿನಿಗೆ ಹೋಗಿವೆ. ಕೆಲವು ಚರ್ಚೆ ಆಗಿದೆ ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಸೆಕ್ಷನ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಆದೇಶ ಹೊರಡಿಸಿದ್ದಾರೆ.
ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಅಧಿಕಾರಿಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ಆಸ್ಪತ್ರೆ ಊಟ ಬೇಡ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು- ವೈದ್ಯರೊಂದಿಗೆ ನವ್ಯಶ್ರೀ ಕಿರಿಕ್
ದೂರು-ಪ್ರತಿದೂರು: ಕಳೆದ ಹಲವು ದಿನಗಳ ಹಿಂದೆ ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ವಿರುದ್ಧ ಜುಲೈ 18ರಂದು ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್‍ಮೇಲ್ ಬಗ್ಗೆ ಉಲ್ಲೇಖಿಸಿದ್ದರು. ಇದಾದ ಬಳಿಕ ಜುಲೈ 23ರಂದು ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಪ್ರತಿ ದೂರು ನೀಡಿದ್ದರು.
ನವ್ಯಶ್ರೀ ದೂರಿನಂತೆ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ ಮಾಡಿಸಿದ್ದು, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯವಾಗಿ ನಿಂದಿಸುವುದು, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಹಾಗೂ ಖಾಸಗೀತನಕ್ಕೆ ಧಕ್ಕೆ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ವಿವಿಧ ಸೆಕ್ಷನ್ ಹಾಗೂ ಆ್ಯಕ್ಟ್‍ಗಳಡಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ರಾಜಕುಮಾರ್ ಟಾಕಳೆ ವಿರುದ್ಧ 12 ಪುಟಗಳ ದೂರು ದಾಖಲಿಸಿದ ನವ್ಯಶ್ರೀ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀಗೆ ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ನಗರದ ಚೆನ್ನಮ್ಮ ವೃತ್ತದ ಸಮೀಪದಲ್ಲಿರುವ ಬೀಮ್ಸ್ ಆಸ್ಪತ್ರೆಯಲ್ಲಿರುವ ನವ್ಯಶ್ರೀ ಆರ್ ರಾವ್ ಸಿಬ್ಬಂದಿ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಚೆನ್ನಪಟ್ಟಣ ಮೂಲದ ನವ್ಯಶ್ರೀ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿ ಹತ್ತು ಸೆಕ್ಷನಡಿ ಕೇಸ್ ದಾಖಲಿಸಿದ್ದರು.
ಇತ್ತ ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಪೊಲೀಸರು ನವ್ಯಶ್ರೀ ಅವರನ್ನು ವೈದ್ಯಕೀಯ ತಪಾಸಣೆ ನಡೆಸಲು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನವ್ಯಶ್ರೀ ಆಸ್ಪತ್ರೆ ಊಟ ಬೇಡ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು. ಬೆಳಗ್ಗೆ ಸ್ನಾನ ಮಾಡಲು ಬಿಸಿನೀರು ಬೇಕು ಎಂದು ಪಟ್ಟು ಹಿಡಿದಿದ್ದಲ್ಲದೇ, ನಾನು ಹೊರಗಡೆ ಹೋಗುವುದಾಗಿ ಆಸ್ಪತ್ರೆ ಸಿಬ್ಬಂದಿ ಜೊತೆಗೆ ನವ್ಯಶ್ರೀ ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ಮಧ್ಯಸ್ಥಿಕೆ ವಹಿಸಿ ನವ್ಯಶ್ರೀ ಕಿರಿಕ್‍ಗೆ ಸ್ನಾನ ಬಿಸಿನೀರು, ಹೋಟೆಲ್‍ನಿಂದ ಪಲಾವ್ ತಂದುಕೊಟ್ಟಿದ್ದಾರೆ. ವಿಧಾನಪರಿಷತ್ ಚುನಾವಣೆ – ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮಠಾಧೀಶರಿಂದ ಬಿಜೆಪಿ ಹೈಕಮಾಂಡ್‍ಗೆ ಪತ್ರ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಮತ್ತು ಸಾಮಾಜಿಕ ಕಾರ್ಯಕರ್ತೆ ದೂರು ಪ್ರತಿದೂರು ನೀಡಿದ ಹಿನ್ನೆಲೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಗೆ ನವ್ಯಶ್ರೀ ರಾವ್ ಆಗಮಿಸಿ ಪೊಲೀಸರ ತನಿಖೆಗೆ ಹಾಜರಾಗಿದ್ದಾರೆ.
ಕಳೆದ ಹಲವು ದಿನಗಳ ಹಿಂದೆ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ (ಜುಲೈ 18ರಂದು) ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್ ಮೇಲ್ ಉಲ್ಲೇಖಿಸಿದ್ದರು. ಇದಾದ ಬಳಿಕ ಕಳೆದ ಶನಿವಾರ (ಜು.23) ರಂದು ನವ್ಯಶ್ರೀ, ರಾಜಕುಮಾರ್ ಟಾಕಳೆ ವಿರುದ್ಧ ದೂರು ನೀಡಿದ್ದರು. ನವ್ಯಶ್ರೀ ದೂರಿನಲ್ಲಿ (376) ಅತ್ಯಾಚಾರ, (366) ಕಿಡ್ನಾಪ್, (312) ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506) ಜೀವ ಬೆದರಿಕೆ, (509) ಗೌರವಕ್ಕೆ ಧಕ್ಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ, (67A) ಲೈಂಗಿಕ ಪ್ರಚೋದನಕಾರಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆಕ್ಟ್ ಗಳನ್ನು ಹಾಕಿ ಎಫ್‍ಐಆರ್ ದಾಖಲಾಗಿತ್ತು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ವಿರುದ್ಧ 12 ಪುಟಗಳ ದೂರು ದಾಖಲಿಸಿದ ನವ್ಯಶ್ರೀ
ಇದಕ್ಕೂ ಮುನ್ನ ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್ ಎನ್ನಲಾಗಿರುವ ಅಶ್ಲೀಲ ವೀಡಿಯೋ ವೈರಲ್ ಆಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ವೈರಲ್ ಬೆನ್ನಲ್ಲೇ ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ನವ್ಯಶ್ರೀಯನ್ನು ವಿಚಾರಣೆ ನಡೆಸಲಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಯಾವಾಗ ಪರಿಚಯ, ಎಲ್ಲೆಲ್ಲಿ ಭೇಟಿ ಆಗಿದ್ದೀರಿ. ಆತನಿಂದ ಏನೆಲ್ಲಾ ಮೋಸ ಆಗಿದೆ ಎಂಬುವುದರ ಜೊತೆಗೆ ಟಾಕಳೆಗೆ 50 ಲಕ್ಷ ರೂ. ಹಣದ ಬೇಡಿಕೆ ಇಟ್ಟಿರುವ ಬಗ್ಗೆ ಪೊಲೀಸರು ಪ್ರಶ್ನೆಗಳನ್ನು ಕೇಳಲಿದ್ದಾರೆ. ಬಳಿಕ ನವ್ಯಶ್ರೀ ಮೆಡಿಕಲ್ ಚೆಕ್ ಅಪ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಉಗ್ರರಿಗೆ ಸಿಲಿಕಾನ್ ಸಿಟಿ ಸ್ಲೀಪರ್ ಸೇಲ್?
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ ಸೇರಿದಂತೆ ಇತರ ಸೆಕ್ಷನ್ ಹಾಕಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆಗಮಿಸಿ ಕೈಬರಹದಲ್ಲಿ ಹನ್ನೆರಡು ಪುಟಗಳ ದೂರು ನೀಡಿದ್ದಾರೆ. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ (376) ಅತ್ಯಾಚಾರ, (366) ಕಿಡ್ನಾಪ್, (312) ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506) ಜೀವ ಬೆದರಿಕೆ, (509) ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ, (67A) ಲೈಂಗಿಕ ಪ್ರಚೋದನಕಾರಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆಕ್ಟ್ ಗಳನ್ನು ಹಾಕಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ