Tag: ರಾಜಕುಮಾರ್

  • ನಿರ್ದೇಶಕ ಭಗವಾನ್ ಅವರ ಕೊನೆ ಆಸೆ ಈಡೇರಿಸುವೆ : ನಟ ರಾಘವೇಂದ್ರ ರಾಜಕುಮಾರ್

    ನಿರ್ದೇಶಕ ಭಗವಾನ್ ಅವರ ಕೊನೆ ಆಸೆ ಈಡೇರಿಸುವೆ : ನಟ ರಾಘವೇಂದ್ರ ರಾಜಕುಮಾರ್

    ಡಾ.ರಾಜಕುಮಾರ್ (Rajkumar) ನಟನೆಯ ಸೂಪರ್ ಹಿಟ್ ಸಿನಿಮಾಗಳ ಹಿಂದೆ ನಿರ್ದೇಶಕ ಭಗವಾನ್ (Bhagwan) ಅವರ ಶ್ರಮವೂ ಇದೆ. ವರನಟನಿಗಾಗಿಯೇ ಅವರು ವಿಶೇಷ ಕಥೆಗಳನ್ನು ಹುಡುಕುತ್ತಿದ್ದರು. ಅಥವಾ ವರದಪ್ಪನವರು ಹುಡುಕಿದ ಕಥೆಯನ್ನು ಇವರು ನಿರ್ದೇಶನ ಮಾಡುತ್ತಿದ್ದರು. ಹಾಗಾಗಿ ಅಣ್ಣಾವ್ರ ಕುಟುಂಬವು ಭಗವಾನ್ ಅವರನ್ನು ವಿಶೇಷ ಪ್ರೀತಿಯಿಂದ ಕಾಣುತ್ತಿತ್ತು. ಇಂದು ಭಗವಾನ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ರಾಘವೇಂದ್ರ ರಾಜ ಕುಮಾರ್ (Raghavendra Rajkumar) ಆ ಎಲ್ಲ ನೆನಪುಗಳನ್ನು ಹಂಚಿಕೊಂಡರು.

    ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜಕುಮಾರ್, ‘ಭಗವಾನ್ ಮಾಮಗೆ ದೊಡ್ಡದೊಂದು ಕನಸಿತ್ತು. ಮಂತ್ರಾಲಯ ಮಹಾತ್ಮೆ (Mantralaya Mahatme) ಸಿನಿಮಾವನ್ನು ಕಲರ್ ಪ್ರಿಂಟ್ ಮಾಡಿಸಬೇಕು ಅಂತ. ಅದನ್ನು ನಾನು ಮಾಡಿಸುತ್ತೇನೆ. ಅಪ್ಪಾಜಿಯಂತೆ ಅವರು ಕೂಡ ಶಿಸ್ತಿನ ಮನುಷ್ಯ. ತಂದೆಯನ್ನು ಕಳೆದುಕೊಂಡಷ್ಟೇ ದುಃಖವಾಗಿದೆ’ ಎಂದರು. ಇದನ್ನೂ ಓದಿ: ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದ ಭಗವಾನ್, ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’

    ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’

    ನಾಳೆ ಮಧ್ಯರಾತ್ರಿ ಕನ್ನಡದ ಎರಡು ಸಿನಿಮಾಗಳು ಶಿವರಾತ್ರಿಗಾಗಿ (Shivratri) ಕಾಯುತ್ತಿವೆ. ಈ ಬಾರಿಯ ಜಾಗರಣೆಯನ್ನು ಸಿನಿಮಾ ನೋಡುವ ಮೂಲಕ ಕಳೆಯಲಿದ್ದಾರೆ ರಿಷಬ್ (Rishabh Shetty) ಮತ್ತು ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳು. ಹೈದರಾಬಾದ್ ನ ಸಪ್ತಗಿರಿ ಚಿತ್ರಮಂದಿರದಲ್ಲಿ ಫೆ.19 ರಂದು ಬೆಳಗ್ಗೆ 12 ಗಂಟೆಗೆ ಮತ್ತು 3 ಗಂಟೆಗೆ ಕಾಂತಾರ (Kantara) ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈಗಾಗಲೇ ನೂರಾರು ಕೋಟಿ ಗಳಿಸಿರುವ ಈ ಸಿನಿಮಾ, ಕಿರುತೆರೆಯಲ್ಲೂ ಪ್ರಸಾರವಾಗಿದೆ. ಓಟಿಟಿಯಲ್ಲೂ ಇದೆ. ಆದರೂ, ಶಿವರಾತ್ರಿಗಾಗಿ ಸ್ಪೆಷಲ್ ಶೋ ಆಯೋಜನೆ ಮಾಡಲಾಗಿದೆ.

    ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ರಾಜಕುಮಾರ’ (Rajkumar) ಕೂಡ ಒಂದು. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಹಲವಾರು ದಾಖಲೆಗಳನ್ನು ಬರೆದಿದೆ. ಶತದಿನೋತ್ಸವದ ಜೊತೆಗೆ ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ 75 ಕೋಟಿ ರೂಪಾಯಿ ಬಾಚಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಶಿವರಾತ್ರಿಗಾಗಿ ಈ ಸಿನಿಮಾವನ್ನು ಮತ್ತೆ ಮರುಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸುವುದಕ್ಕಾಗಿಯೇ ಫೆಬ್ರವರಿ 19ರಂದು ಬೆಂಗಳೂರಿನ ಪೀಣ್ಯ ಏರಿಯಾದ ಭಾರತಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಈ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಶಿವರಾತ್ರಿಯ ಜಾಗರಣೆ ಮುಗಿಸಿಕೊಂಡು, ರಾಜಕುಮಾರ ಸಿನಿಮಾ ನೋಡಬಹುದು ಎಂದಿದ್ದಾರೆ ಆಯೋಜಕರು.

    ಶಿವರಾತ್ರಿಗಾಗಿ ನಗೆಜಾಗರಣೆ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ವಿಶೇಷವಾಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆಯಂತೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಅನ್ನು ಥಿಯೇಟರ್ ಮಾಲೀಕರು ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವರಾತ್ರಿಗೆ ಪುನೀತ್ ನಟನೆಯ ‘ರಾಜಕುಮಾರ’ ರೀ ರಿಲೀಸ್

    ಶಿವರಾತ್ರಿಗೆ ಪುನೀತ್ ನಟನೆಯ ‘ರಾಜಕುಮಾರ’ ರೀ ರಿಲೀಸ್

    ಪುನೀತ್ ರಾಜಕುಮಾರ್ (Puneeth Rajkumar) ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ರಾಜಕುಮಾರ’ (Rajkumar) ಕೂಡ ಒಂದು. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಹಲವಾರು ದಾಖಲೆಗಳನ್ನು ಬರೆದಿದೆ. ಶತದಿನೋತ್ಸವದ ಜೊತೆಗೆ ಕನ್ನಡ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ 75 ಕೋಟಿ ರೂಪಾಯಿ ಬಾಚಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಶಿವರಾತ್ರಿಗಾಗಿ (Shivratri) ಈ ಸಿನಿಮಾವನ್ನು ಮತ್ತೆ ಮರುಬಿಡುಗಡೆ ಮಾಡಲಾಗುತ್ತಿದೆ.

    ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸುವುದಕ್ಕಾಗಿಯೇ ಫೆಬ್ರವರಿ 19ರಂದು ಬೆಂಗಳೂರಿನ ಪೀಣ್ಯ ಏರಿಯಾದ ಭಾರತಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12.30ಕ್ಕೆ ಈ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಶಿವರಾತ್ರಿಯ ಜಾಗರಣೆ ಮುಗಿಸಿಕೊಂಡು, ರಾಜಕುಮಾರ ಸಿನಿಮಾ ನೋಡಬಹುದು ಎಂದಿದ್ದಾರೆ ಆಯೋಜಕರು. ಇದನ್ನೂ ಓದಿ: ಫೆ.23ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಟೀಸರ್

    Related Articles

    ಶಿವರಾತ್ರಿಗಾಗಿ ನಗೆಜಾಗರಣೆ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ವಿಶೇಷವಾಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆಯಂತೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಅನ್ನು ಥಿಯೇಟರ್ ಮಾಲೀಕರು ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ನಟ ಕೈಕಾಲ ಸತ್ಯನಾರಾಯಣ ನಿಧನ

    ಹಿರಿಯ ನಟ ಕೈಕಾಲ ಸತ್ಯನಾರಾಯಣ ನಿಧನ

    ತೆಲುಗು ಸಿನಿಮಾ ರಂಗದ ಹಿರಿಯ ನಟ ಹಾಗೂ ಕನ್ನಡದ ಡಾ.ರಾಜಕುಮಾರ್ (Rajkumar) ಜೊತೆ ನಟಿಸಿದ್ದ ಕೈಕಾಲ ಸತ್ಯನಾರಾಯಣ (Satyanarayana) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು, 1962ರಲ್ಲಿ ತೆರೆಗೆ ಬಂದ ರಾಜಕುಮಾರ್ ನಟನೆಯ ಸ್ವರ್ಣಗೌರಿ ಸಿನಿಮಾದಲ್ಲಿ ಇವರು ಶಿವನ ಪಾತ್ರಧಾರಿಯಾಗಿ ನಟಿಸಿದ್ದಾರೆ.

    ಸಿಪಾಯಿ ಕೂತುರು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸತ್ಯನಾರಾಯಣ ಈವರೆಗೂ ಏಳು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎನ್.ಟಿ.ಆರ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ನಾಲ್ಕು ವರ್ಷಗಳ ಹಿಂದೆ ತೆರೆಕಂಡ  ಮಹೇಶ್ ಬಾಬು ನಟನೆಯ ಮಹರ್ಷಿ ಇವರ ನಟನೆಯ ಕೊನೆಯ ಸಿನಿಮಾವಾಗಿದೆ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    1935ರ ಜುಲೈ 25 ರಂದು ಆಂಧ್ರಪ್ರದೇಶದಲ್ಲಿ ಜನಿಸಿರುವ ಸತ್ಯನಾರಾಯಣ, ಸಿನಿಮಾ ರಂಗದ ಮೇಲೆ ಸೆಳೆತ ಹಾಗೂ ರಂಗಭೂಮಿ ಮೇಲಿನ ಒಲವಿನಿಂದಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ವಿವಿಧ ಪಾತ್ರಗಳೇ ಅವರನ್ನು ಮತ್ತಷ್ಟು ಅವಕಾಶ ಸಿಗುವಂತೆ ಮಾಡಿದವು. ನಾಗೇಶ್ವರಮ್ಮ ಅವರನ್ನು ಮದುವೆಯಾಗಿರುವ ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಸತ್ಯನಾರಾಯಣ ಅವರ ನಿಧನಕ್ಕೆ ತೆಲುಗು ಚಿತ್ರೋದ್ಯಮ ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • ನನಗೂ ರಾಜಕೀಯಕ್ಕೂ ಆಗಿ ಬರಲ್ಲ : ಶಿವರಾಜ್ ಕುಮಾರ್

    ನನಗೂ ರಾಜಕೀಯಕ್ಕೂ ಆಗಿ ಬರಲ್ಲ : ಶಿವರಾಜ್ ಕುಮಾರ್

    ಪ್ರತಿ ಸಾರಿಯೂ ಚುನಾವಣೆ ಬಂದಾಗ ಡಾ.ರಾಜ್ ಕುಟುಂಬದ ಸದಸ್ಯರ ಹೆಸರು ಕಾಣಿಸಿಕೊಳ್ಳುತ್ತದೆ. ಅದು ರಾಜಕುಮಾರ್ ಕಾಲದಿಂದಲೂ ಕೇಳಿ ಬರುತ್ತಿದೆ. ಈ ಹಿಂದೆ ರಾಜಕುಮಾರ್ ಅವರನ್ನು ಚುನಾವಣೆಗೆ ನಿಲ್ಲಿಸುವ ಕಸರತ್ತು ನಡೆಯಿತು. ಆದರೆ, ರಾಜಕೀಯ ಪ್ರವೇಶಕ್ಕೆ ಅವರು ನಿರಾಕರಿಸಿದರು. ರಾಜಕೀಯ ಪಕ್ಷಗಳಿಂದ ಸದಾ ಅಂತರವನ್ನೇ ಕಾದುಕೊಂಡು ಬಂದರು. ಚುನಾವಣೆಯ ನಿಲ್ಲಿಸುವ ವಿಚಾರ ಜೋರಾದಾಗ, ತಪ್ಪಿಸಿಕೊಂಡು ಓಡಾಡಿದರು.

    ನಂತರ ಹೆಸರು ಬಂದಿದ್ದು ಪುನೀತ್ ರಾಜಕುಮಾರ್ ಅವರದ್ದು. ಬೆಂಗಳೂರಿನಲ್ಲಿ ಪುನೀತ್ ಅವರು ಮೋದಿಯನ್ನು ಭೇಟಿಯಾದಾಗ ಪುನೀತ್ ಬಿಜೆಪಿ ಸೇರಿಕೊಳ್ಳುತ್ತಾರೆ ಎನ್ನುವ ಸುದ್ದಿ ಆಯಿತು. ಅಲ್ಲದೇ, ಬಿಜೆಪಿಯ ಹಲವು ಮುಖಂಡರು ಪುನೀತ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದರು. ಆಗಂತೂ ಇನ್ನೂ ದೊಡ್ಡ ಸುದ್ದಿ ಆಯಿತು. ನಂತರದ ದಿನಗಳಲ್ಲಿ ಅವರು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಮಗೂ ರಾಜಕೀಯಕ್ಕೂ ಯಾವುದೇ ಕಾರಣಕ್ಕೂ ನಂಟು ಇರುವುದಿಲ್ಲ ಎಂದು ಮಾತನಾಡಿದರು. ಇದನ್ನೂ ಓದಿ: ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಪುನೀತ್ ಕಾಲವಾದ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೆಸರು ಕೂಡ ಮುನ್ನೆಲೆಗೆ ಬಂತು. ಅಶ್ವಿನಿ ಅವರು ಸದ್ಯದಲ್ಲೇ ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಹೇಳಲಾಯಿತು. ಈಗಲೂ ಅವರ ಹೆಸರು ಚಾಲ್ತಿಯಲ್ಲಿದೆ. ಆದರೆ, ಈ ಕುರಿತು ಅವರು ಇನ್ನೂ ಸ್ಪಷ್ಟನೆ ನೀಡಿಲ್ಲ. ಆದರೂ, ಅಶ್ವಿನಿ ಅವರ ಹೆಸರು ಇನ್ನೂ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಕಾದು ನೋಡಬೇಕು.

    ಈ ನಡುವೆ ಶಿವರಾಜ್ ಕುಮಾರ್ ಹೆಸರು ಕೂಡ ರಾಜಕಾರಣದಲ್ಲಿ ಕೇಳಿ ಬಂದಿದೆ. ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಈಗಾಗಲೇ ರಾಜಕೀಯ ಅಖಾಡ ಪ್ರವೇಶ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಶಿವಣ್ಣ ಹೆಸರು ತೇಲಿ ಬಂದಿದೆ. ಈ ಕುರಿತು ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ತಮಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾವು ರಾಜಕಾರಣ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಗೌರಿ’ ಚಿತ್ರದಲ್ಲಿರೋದು ಮೂರೇ ಪಾತ್ರಗಳು

    ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಗೌರಿ’ ಚಿತ್ರದಲ್ಲಿರೋದು ಮೂರೇ ಪಾತ್ರಗಳು

    ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಎನ್.ಎಸ್.ರಾಜಕುಮಾರ್ – ವಿ.ಎಸ್ ರಾಜಕುಮಾರ್ ನಿರ್ಮಾಣದ “ಗೌರಿ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಕೋರಿದರು. ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ರಾಜಕುಮಾರ್ ಅವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಚನ್ನ ಅವರು  ಕ್ಯಾಮೆರಾ ಚಾಲನೆ ಮಾಡಿದರು.

    ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆಯ ಕಾಲ. ವಿಶ್ವದಾದ್ಯಂತ ಕನ್ನಡ ಸಿನಿಮಾಗಳು ಹೆಸರು ಮಾಡುತ್ತಿದೆ. ಅದರಲ್ಲೂ ವಿಭಿನ್ನ ಕಥೆಯಿರುವ ಚಿತ್ರಗಳನ್ನು ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾನೆ. “ಗೌರಿ” ಸಹ ವಿಭಿನ್ನ ಕಥೆಯ ಚಿತ್ರ. ಇಡೀ ಸಿನಿಮಾ ಪೂರ್ತಿ ಕೇವಲ ಮೂರೇ ಪಾತ್ರಗಳಿರುತ್ತದೆ. ಕೆಲವು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ದಾಂಡೇಲಿಯಲ್ಲಿ ಬಹುಭಾಗದ ಚಿತ್ರೀಕರಣ ನಡೆಯಲಿದೆ. ಹೊಸವರ್ಷಕ್ಕೆ ಹೊಸತರಹದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು  ರಾಜಕುಮಾರ್ ಎಂಬ ಹೆಸರು ಸದಾ ನನ್ನ ಜೊತೆ ಇರುತ್ತದೆ ಎಂಬುದಕ್ಕೆ ಈ ಚಿತ್ರದ ನಿರ್ಮಾಪಕರು ಸಹ ರಾಜಕುಮಾರ್ ಅವರೆ ಎಂದು ನಾಯಕ ರವಿಚಂದ್ರನ್ ಚಿತ್ರದ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

    ಇದು ನನ್ನ ಮೊದಲ ನಿರ್ದೇಶನದ ಚಿತ್ರ.  ಖ್ಯಾತ ನಟರಾದ ರವಿಚಂದ್ರನ್ ಅವರು ನನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿರುವುದು ಸಂತೋಷವಾಗಿದೆ. ಮುಂಬೈನ ಬರ್ಕಾ ಬಿಷ್ಟ್ ಈ ಚಿತ್ರದ ನಾಯಕಿ. ಗ್ರೀಷ್ಮಾ ಎಂಬ ಬಾಲ ಕಲಾವಿದೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟು ಮೂರೇ ಪಾತ್ರಗಳು.ಇದೊಂದು ಕೌಟುಂಬಿಕ ಚಿತ್ರ. ಇದುವರೆಗೂ ಸಾಕಷ್ಟು ಫ್ಯಾಮಿಲಿ ಚಿತ್ರಗಳು ಬಂದಿವೆ. ಈ ಚಿತ್ರದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಯಾಕೆ ಸಮಸ್ಯೆಗಳು ಬರುತ್ತವೆ ಎಂಬುದನ್ನು ತೋರಿಸುತ್ತಿದ್ದೇವೆ. ಅವರಿಬ್ಬರ ನಡುವಿನ ಪ್ರೀತಿಗೆ ಯಾಕೆ ಸಮಸ್ಯೆ ಎದುರಾಗುತ್ತವೆ ಮತ್ತು ಅವರು ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. “ಗೌರಿ” ಚಿತ್ರಕ್ಕೆ “ಶಂಕರ B/H ” ಎಂಬ ಅಡಿಬರಹವಿದೆ.  ಇದೊಂದು ವಿಭಿನ್ನವಾದ ಚಿತ್ರಕಥೆ ಎನ್ನಬಹುದು.  ಕೌಟುಂಬಿಕ ಚಿತ್ರವಾದರೂ, ಕಥೆ ಕಾಡಿನಲ್ಲಿ ನಡೆಯುತ್ತದೆ. ದಾಂಡೇಲಿ, ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಅನೀಸ್.

    ನನಗೆ ಕನ್ನಡದಲ್ಲಿ‌ ಇದು ಮೊದಲನೆಯ ಚಿತ್ರ. ಅದರಲ್ಲೂ ದಕ್ಷಿಣ ಭಾರತದಲ್ಲೇ ಮೊದಲು ಎನ್ನಬಹುದು. ರವಿಚಂದ್ರನ್ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನಾಯಕಿ ಬರ್ಕಾ ಬಿಷ್ಟ್. ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಹದಿನೈದನೇ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎನ್ ಎಸ್ ರಾಜಕುಮಾರ್.

    Live Tv
    [brid partner=56869869 player=32851 video=960834 autoplay=true]

  • ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಸರಕಾರ ತಿದ್ದುಪಡಿ ಮಾಡಿದ ನಿಯಮವೇನು?

    ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಸರಕಾರ ತಿದ್ದುಪಡಿ ಮಾಡಿದ ನಿಯಮವೇನು?

    ರ್ನಾಟಕ ರತ್ನ ಪ್ರಶಸ್ತಿಯನ್ನು (Award) ನೀಡಲು ಹಲವು ಮಾನದಂಡಗಳನ್ನು (Criterion) ಸರಕಾರ ರೂಪಿಸಿದೆ. ಆ ಮಾನದಂಡದ ಆಧಾರದ ಮೇಲೆಯೇ ಈ ಪ್ರಶಸ್ತಿಯ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ. ಆದರೆ, ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗಾಗಿ ಮಾನದಂಡದಲ್ಲಿ ಕೆಲ ತಿದ್ದುಪಡಿ ಮಾಡಿ ಸರಕಾರ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಇದು ಮಹಾನ್ ನಟನಿಗೆ ಸಲ್ಲಿಸಿದ ಗೌರವವೂ ಆಗಿದೆ. ತಿದ್ದುಪಡಿ (Amendment) ವಿಷಯವನ್ನು ಸರಕಾರ ಕೂಡ ಒಪ್ಪಿಕೊಂಡಿದೆ.

    ಹಾಗಾದರೆ, ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಗೆ ಆಯ್ಕೆಯಾಗಲು ಮಾನದಂಡಗಳೇನು ಮತ್ತು ಪುನೀತ್ ಗಾಗಿ ತಿದ್ದುಪಡಿ ಮಾಡಿರುವ ನಿಯಮವೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ಈ ಹಿಂದೆ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಎಂ.ಸಿ. ವೇಣುಗೋಪಾಲ್ ಅವರು ನಿಯಮ 330ರಡಿ ಪ್ರಶ್ನೆಯೊಂದನ್ನು ಕೇಳಿ, ರಾಷ್ಟ್ರಕವಿ, ಕರ್ನಾಟಕ ರತ್ನ ಮುಂತಾದ ಬಿರುದುಗಳನ್ನು ನೀಡಲು ಇರುವ ಮಾನದಂಡಗಳು ಏನು? ಎಂದು ಪ್ರಶ್ನೆ ನೀಡಿದ್ದರು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಎಂ.ಸಿ. ವೇಣುಗೋಪಾಲ್ ಕೇಳಿದ ಪ್ರಶ್ನೆಗೆ 2020ರಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರು ಆಗಿದ್ದ ಗೋವಿಂದ ಎಂ ಕಾರಜೋಳ ಅವರ ಲಿಖಿತ ಉತ್ತರ ನೀಡಿ, ‘ಈ ಪ್ರಶಸ್ತಿಯನ್ನು ಕರ್ನಾಟಕದಲ್ಲಿ ಜನಿಸಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಂದರೆ, ಸಾಂಸ್ಕೃತಿಕ, ವೈಜ್ಞಾನಿಕ, ಮಾನವಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ಗಣನೀಯ ಸೇವೆಯನ್ನು ಸಲ್ಲಿಸಿದ ಕನಿಷ್ಠ 60 ವರ್ಷ ತುಂಬಿದ ಮಹಿನೀಯರನ್ನು ಗುರುತಿಸಿ, ಸರಕಾರವು ಪ್ರಶಸ್ತಿಯನ್ನು ನೀಡಲು ತೀಮಾರ್ನಿಸುತ್ತದೆ’ ಎಂದು ಉತ್ತರ ನೀಡಿದ್ದಾರೆ.

    ಮಾನ್ಯ ಸಚಿವರು ಕೊಟ್ಟ ಉತ್ತರವನ್ನು ಗಮನಿಸಿದಾಗ ಪುನೀತ್ ಅವರು ಜನಿಸಿದ್ದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ. ಹಾಗಾಗಿ ಬಹುಶಃ ಕರ್ನಾಟಕದಲ್ಲಿ ಜನಿಸಿದ ಎನ್ನುವ ಮಾನದಂಡವನ್ನು ತಿದ್ದುಪಡಿ ಮಾಡಿರಬಹುದು. ಅಲ್ಲದೇ, ಕನಿಷ್ಠ 60 ವರ್ಷ ತುಂಬಿದ ಮಹನೀಯರನ್ನು ಗುರುತಿಸಿ ಅಂತಿದೆ. ವಯಸ್ಸನ್ನು ಕೂಡ ತಿದ್ದುಪಡಿ ಮಾಡಿರಬಹುದು.

    Live Tv
    [brid partner=56869869 player=32851 video=960834 autoplay=true]

  • ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ 9ನೇ ರತ್ನ ಪುನೀತ್ ರಾಜ್ ಕುಮಾರ್

    ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ 9ನೇ ರತ್ನ ಪುನೀತ್ ರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಇಂದು ಪ್ರದಾನ ಮಾಡಲಾಗುತ್ತಿದೆ. ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದ್ದು, ಈವರೆಗೂ ಕರ್ನಾಟಕದಲ್ಲಿ ಎಂಟು ಜನರಿಗೆ ನೀಡಲಾಗಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ 9ನೇ ರತ್ನ ಪುನೀತ್ ರಾಜ್ ಕುಮಾರ್ ಎನ್ನುವುದು ವಿಶೇಷ. ಅಲ್ಲದೇ ಮರಣೋತ್ತರ ಪ್ರಶಸ್ತಿ ಪಡೆಯುತ್ತಿರುವ ಮೊದಲ ರತ್ನ ಇವರಾಗಿದ್ದಾರೆ.

    ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ (Award) ಇದಾಗಿದ್ದು, ಪುನೀತ್ ಅವರಿಗೆ ಸಿನಿಮಾ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಿನಿಮಾ ರಂಗಕ್ಕೆ ಈವರೆಗೂ ಎರಡು ಪ್ರಶಸ್ತಿಗಳು ಬಂದಿದ್ದು, 1992ರಲ್ಲಿ ಮೊದಲ ಬಾರಿಗೆ ಡಾ.ರಾಜ್ ಕುಮಾರ್ ಪಡೆದರೆ, 2022ರಲ್ಲಿ ಡಾ.ರಾಜ್ ಪುತ್ರ ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನಕ್ಕೆ ಆಯ್ಕೆಯಾಗಿದ್ದರು. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ದೇಶದಲ್ಲಿ ಭಾರತ ರತ್ನವು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದರೆ, ಕರ್ನಾಟಕ ಸರಕಾರವು ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನು ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂದು 1992ರಲ್ಲಿ ಘೋಷಣೆ ಮಾಡಿತು. ಈ ಪ್ರಶಸ್ತಿಯು 50 ಗ್ರಾಮ್ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ್ನು ಒಳಗೊಂಡಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರವು ಇಂತಹ ಗೌರವವನ್ನು 16 ನವೆಂಬರ್ 2021ರಲ್ಲಿ ಘೋಷಣೆ ಮಾಡಲಾಯಿತು.

    ಈವರೆಗೂ ಸಾಹಿತ್ಯ ಸೇವೆಗಾಗಿ ಕುವೆಂಪು, ಸಿನಿಮಾಗಾಗಿ ಡಾ.ರಾಜ್ ಕುಮಾರ್ (Rajkumar), ರಾಜಕೀಯ ಕ್ಷೇತ್ರದಲ್ಲಿಯ ಸಾಧನೆಗಾಗಿ ಎಸ್.ನಿಜಲಿಂಗಪ್ಪ, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸಿ.ಎನ್.ಆರ್.ರಾವ್, ಸಂಗೀತ ಸಾಧನೆಗಾಗಿ ಭೀಮಸೇನ್ ಜೋಷಿ, ಸಮಾಜಸೇವೆಗಾಗಿ ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ  ಈ ಗೌರವವನ್ನು ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ದೇವರಾಗಿದ್ದಾರೆ ಎಂದು ಭಾವುಕರಾದ ಶರತ್ ಕುಮಾರ್

    ಅಪ್ಪು ದೇವರಾಗಿದ್ದಾರೆ ಎಂದು ಭಾವುಕರಾದ ಶರತ್ ಕುಮಾರ್

    ಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ `ಪುನೀತ ಪರ್ವ’ (Puneeth Parva)  ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಜೊತೆಗೆ ಬಹುಭಾಷಾ ತಾರೆಯರು ಸಾಥ್ ಕೂಡ ನೀಡಿದ್ದಾರೆ. ಸೌತ್ ಆಕ್ಟರ್ ನಟ ಶರತ್ ಕುಮಾರ್ ಕೂಡ ಪುನೀತ ಪರ್ವಕ್ಕೆ ಆಗಮಿಸಿದ್ದಾರೆ. ಈ ವೇಳೆ ಪುನೀತ್ ನೆನೆದು ಭಾವುಕರಾಗಿದ್ದಾರೆ.

    `ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಶರತ್ ಕುಮಾರ್(Sarath Kumar) ಭಾಗಿಯಾಗಿದ್ದಾರೆ. ರಾಜಕುಮಾರ ಜೊತೆಗಿನ ನೆನಪನ್ನ ಈ ವೇಳೆ ಬಿಚ್ಚಿಟ್ಟಿದ್ದಾರೆ. ಮೊದಲು ನನಗೆ ಕರೆ ಮಾಡಿ, ರಾಜಕುಮಾರ ಚಿತ್ರದಲ್ಲಿ ನಟಿಸುವಂತೆ ಹೇಳಿದ್ದರು. ಈ ಚಿತ್ರದ ಸೆಟ್‌ನಲ್ಲಿ ನಾವು ಮೊದಲು ಭೇಟಿಯಾಗಿದ್ವಿ. ಈ ಚಿತ್ರ ಬಿಗ್ ಹಿಟ್ ಆಯ್ತು. ಅಪ್ಪುಗೆ ಮಾನವೀಯ ಗುಣ ಉಳ್ಳವರಾಗಿದ್ದರು. ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಇದನ್ನೂ ಓದಿ:ನಿರ್ದೇಶನದತ್ತ ಶ್ರುತಿ ಹರಿಹರನ್: ನಟನೆಗೆ ಫುಲ್ ಸ್ಟಾಪ್?

    ಪುನೀತ್ ಅವರಲ್ಲಿ ನಾವು ಒಂದು ಫೇಸ್ ನೋಡಿದ್ದೀವಿ. ಆದರೆ ಅವರ ಸಾಕಷ್ಟು ಒಳ್ಳೆಯ ಮುಖಗಳು ಇದೀಗ ನಮಗೆ ತಿಳಿದು ಬಂದಿದೆ ಎಂದು ಪುನೀತ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಈಗ ದೇವರಾಗಿದ್ದಾರೆ ಎಂದು ಶರತ್ ಕುಮಾರ್ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]