Tag: ರಾಜಕೀಯ

  • ರಾಜಕೀಯ ಸೇರ್ತಿರಾ? ಪ್ರಶ್ನೆಗೆ ಶಿವಣ್ಣ ಹೀಗಂದ್ರು

    ರಾಜಕೀಯ ಸೇರ್ತಿರಾ? ಪ್ರಶ್ನೆಗೆ ಶಿವಣ್ಣ ಹೀಗಂದ್ರು

    ಹಾಸನ: ನೀವು ರಾಜಕೀಯ ಪ್ರವೇಶ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ನನಗೆ ರಾಜಕೀಯ ಇಷ್ಟ ಇಲ್ಲ. ಹೀಗಾಗಿ ಆ ಕ್ಷೇತ್ರಕ್ಕೆ ನಾನು ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಹಾಸನದಲ್ಲಿ ನೂತನವಾಗಿ ಆರಂಭವಾಗಿರುವ ಖಾಸಾಗಿ ಜ್ಯುವೆಲರ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯ ಸೇರುತ್ತೇನೆ ಅನ್ನೋದು ಸುಳ್ಳು. ಒಂದು ವೇಳೆ ರಾಜಕೀಯಕ್ಕೆ ಬಂದ್ರೆ ಮೊದಲು ಜನರಿಗೆ ತಿಳಿಸುತ್ತೇನೆ ಎಂದು ತಿಳಿಸಿದ್ರು.

    ಇದೇ ವೇಳೆ ಶಿವರಾಜ್‍ಕುಮಾರ್, ಪತ್ನಿ ಗೀತಾ ಅವರು ಮತ್ತೆ ಚುನಾವಣೆಗೆ ನಿಲ್ಲುವ ಬಗ್ಗೆಯೂ ಅಲ್ಲಗಳೆದರು. ಅಮ್ಮನ ಸಾವಿನ ಹಿನ್ನೆಲೆಯಲ್ಲಿ ಸಾಂತ್ವನ ಹೇಳಲು ರಾಹುಲ್ ಗಾಂಧಿ ಬಂದಿದ್ದರು. ಅವರ ಬಗ್ಗೆ ಗೌರವವಿದೆ. ಅಂದಮಾತ್ರಕ್ಕೆ ರಾಜಕೀಯಕ್ಕೆ ಬರುತ್ತೇವೆ ಎಂಬುದು ಸುಳ್ಳು ಅಂದ್ರು.

    ಖಾಸಗಿ ಜ್ಯುವೆಲರ್ ಮಳಿಗೆ ಹಾಸನದಲ್ಲಿ ಆರಂಭವಾಗಿರುವುದು ಖುಷಿ ತಂದಿದೆ. ಆ ಸಂಸ್ಥೆಯ ರಾಯಭಾರಿಯಾಗಿರುವುದು ಸಂತಸ ತಂದಿದೆ ಎಂದು ಶಿವರಾಜ್‍ಕುಮಾರ್ ಹೇಳಿದ್ರು.

  • ಡಿಸೆಂಬರ್ 12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

    ಡಿಸೆಂಬರ್ 12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

    ಚೆನ್ನೈ: ಸೂಪರ್‍ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಆಗುವುದು ಪಕ್ಕಾ ಎಂದು ಹಿಂದೂ ಮಕ್ಕಳ ಕಚ್ಚಿ(ಎಚ್‍ಎಂಕೆ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಅರ್ಜುನ್ ಸಂಪತ್ ಹೇಳಿದ್ದಾರೆ.

    ಸೋಮವಾರ ಬೆಳಗ್ಗೆ ಅರ್ಜುನ್ ಸಂಪತ್ ರಜನಿಕಾಂತ್ ಅವರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿಯಾದ ಬಳಿಕ ಮಾತನಾಡಿದ ಅವರು, ದ್ರಾವಿಡ ಪಕ್ಷಗಳಿಂದ ಮುಕ್ತವಾಗಲು ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ತಿಳಿಸಿದರು.

    ಕಳೆದ 50 ವರ್ಷಗಳಿಂದ ತಮಿಳುನಾಡು ದ್ರಾವಿಡ ಪಕ್ಷಗಳ ಆಡಳಿತದಿಂದ ನಲುಗಿ ಹೋಗಿದೆ. ಹೀಗಾಗಿ ನಾನು ರಾಜ್ಯದ ಜನರ ಒಳಿತಿಗಾಗಿ ರಾಜಕೀಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದೆ ಎಂದು ಅವರು ತಿಳಿಸಿದರು.

    ಮಾತುಕತೆ ವೇಳೆ, ವ್ಯವಸ್ಥೆ ಈಗ ಭ್ರಷ್ಟವಾಗಿದೆ. ಒಂದು ವೇಳೆ ನಾನು ಏನು ಮಾಡದೇ ಇದ್ದರೆ ಅಪರಾಧಿ ಭಾವನೆ ನನ್ನನ್ನು ಕಾಡಲಿದೆ. ಹಿಮಾಲಯದಿಂದ ಹಿಡಿದು ದಕ್ಷಿಣದವರೆಗಿನ ನದಿಗಳ ಜೋಡಣೆ ಮಾಡುವ ಕನಸಿನ ಯೋಜನೆ ಪೂರ್ಣಗೊಳ್ಳಬೇಕಾದರೆ ರಾಜಕೀಯಕ್ಕೆ ಬಂದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು ಎಂದು ತಿಳಿಸಿದರು.

    ರಾಜಕೀಯ ಅಲ್ಲದೇ ಆಧ್ಯತ್ಮದ ಬಗ್ಗೆ ನಾವು ಚರ್ಚೆ ನಡೆಸಿದ್ವಿ. ತಮಿಳಿನ ಸಂತರಾದ ನಯನಾರ ಮತ್ತು ಆಲ್ವರರ ಬಗ್ಗೆ ಮಾತನಾಡಿದ್ದೇವು. ಸ್ವಾಮಿ ಸಚ್ಚಿದಾನಂದ ಸರಸ್ವತಿ ಮತ್ತು ದಯಾನಂದ ಸರಸ್ವತಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾನು ದಯಾನಂದರ ಶಿಷ್ಯ ಎಂದು ರಜನಿ ಹೇಳಿದರು ಎಂದರು.

    ಅರ್ಜುನ್ ಸಂಪತ್ ಜೊತೆಗಿನ ಭೇಟಿ ಬಳಿಕ ಈಗ ರಜನಿಕಾಂತ್ ಡಿಸೆಂಬರ್ 12ರ ತಮ್ಮ 67ನೇ ಹುಟ್ಟುಹಬ್ಬದಂದು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಮೂಲಗಳಿಂದ ಸಿಕ್ಕಿದೆ. ರಜನೀಕಾಂತ್ ಈಗ ಇರುವ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗದೇ ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಕಾಲಾ ರಜನಿ ಅವರ ಕೊನೆಯ ಚಿತ್ರವಾಗಲಿದ್ದು, ಮುಂದಿನ ವರ್ಷದಿಂದ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕನ್ನಡಿಗ ರಜನೀಕಾಂತ್ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ

    ಕನ್ನಡಿಗ ರಜನೀಕಾಂತ್ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ

    ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಂದು ಕನ್ನಡ ವಿರೋಧಿ ಹೋರಾಟ ಆರಂಭವಾದಂತಿದೆ. ಕನ್ನಡಿಗ ರಜನೀಕಾಂತ್ ರಾಜಕೀಯದಿಂದ ದೂರ ಉಳಿಯಬೇಕೆಂದು ತಮಿಳು ಪರ ಸಂಘಟನೆಗಳು ಪಟ್ಟು ಹಿಡಿದಿವೆ.

    ರಜನಿ ರಾಜಕೀಯ ಪ್ರವೇಶ ವಿರೋಧಿಸಿ ರಸ್ತೆಗೆ ಇಳಿದಿರುವ ತಮಿಳು ಸಂಘಟನೆಗಳು ರಜನೀಕಾಂತ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿವೆ. ಅಲ್ಲದೇ ರಜನೀಕಾಂತ್ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದು, ನಿವಾಸದ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

    ತಮಿಳುನಾಡು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ತಿರುನಾವುಕ್ಕರಸರ್ ರಜನೀಕಾಂತ್ ರಾಜಕೀಯ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ರಜನೀಕಾಂತ್ ಹೊಸ ಪಕ್ಷವನ್ನು ಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

    “ರಜನೀಕಾಂತ್ ಅವರನ್ನು 35- 40 ವರ್ಷಗಳಿಂದ ತಿಳಿದ ವ್ಯಕ್ತಿಯೊಬ್ಬರು ನನಗೆ ತಿಳಿಸಿದ ಮಾಹಿತಿ ಪ್ರಕಾರ ರಜನೀಕಾಂತ್ ಯವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಆದರೆ ಅವರೇ ಒಂದು ಪಕ್ಷವನ್ನು ಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ ಎನ್ನುವ ಮಾತನ್ನು ಮಾಧ್ಯಮಕ್ಕೆ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

    ಅಭಿಮಾನಿಗಳ ಜೊತೆಗೆ ಕಳೆದ ವಾರ ನಡೆಸಿದ ಸಂವಾದದಲ್ಲಿ ರಜನೀಕಾಂತ್ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದರು. ನನ್ನನ್ನು ಅಪ್ಪಟ ತಮಿಳಿಗನಾಗಿ ರೂಪಿಸಿದ್ದಕ್ಕೆ ನಿಮಗೆ ಧನ್ಯವಾದ ಎಂದು ರಜನೀ ಹೇಳಿದ್ದರು.

    ಇದನ್ನೂ ಓದಿ: ರಜನೀಕಾಂತ್ ರಾಜಕೀಯ ಎಂಟ್ರಿ ಪಕ್ಕಾ: ಮತ್ತೆ ಈ ಪ್ರಶ್ನೆ ಈಗ ಉದ್ಭವವಾಗಿದ್ದು ಏಕೆ?

  • ಪಂಚರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಇವಿಎಂ ನೀಡ್ತೀವಿ, ಆರೋಪ ಸಾಬೀತು ಪಡಿಸಿ:  ಪಕ್ಷಗಳಿಗೆ ಆಯೋಗದಿಂದ ಆಫರ್

    ಪಂಚರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಇವಿಎಂ ನೀಡ್ತೀವಿ, ಆರೋಪ ಸಾಬೀತು ಪಡಿಸಿ: ಪಕ್ಷಗಳಿಗೆ ಆಯೋಗದಿಂದ ಆಫರ್

    ನವದೆಹಲಿ: ಇವಿಎಂ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಇವಿಎಂ ನೀಡುತ್ತೇವೆ. ನಿಮ್ಮ ಆರೋಪವನ್ನು ಸಾಬೀತು ಪಡಿಸಿ ಎನ್ನುವ ಆಫರ್ ನೀಡಿದೆ.

    ಇವಿಎಂ ದುರ್ಬಳಕೆ ಆಗುತ್ತಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಚುನವಣಾ ಆಯೋಗ ಸರ್ವಪಕ್ಷಗಳ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ, ನಿಮ್ಮ ಆರೋಪವನ್ನು ದೃಢಪಡಿಸಲು ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯಗಳ ಚುನಾವಣೆಗೆ ಬಳಕೆಯಾದ ಇವಿಎಂ ನೀಡಲು ಆಯೋಗ ಸಿದ್ಧವಿದೆ ಎಂದು ತಿಳಿಸಿದರು.

    ಈ ಸಭೆಯಲ್ಲಿ ಭಾರತದಲ್ಲಿ ಬಳಕೆಯಾಗುತ್ತಿರುವ ಇವಿಎಂ ಎಷ್ಟು ಸುರಕ್ಷಿತವಾಗಿದೆ ಎನ್ನುವುದನ್ನು ವಿವರಿಸಲಾಯಿತು. ಆದರೆ ಇವಿಎಂ ಹ್ಯಾಕಥಾನ್ ನಡೆಯುವ ದಿನ ಪ್ರಕಟವಾಗಿಲ್ಲ. ಸಭೆಯಲ್ಲಿ ಚುನಾವಣಾ ಆಯೋಗ ಯಾವ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ. ಎಲ್ಲ ಪಕ್ಷಗಳನ್ನು ಸಮಾನವಾಗಿ ನೋಡುತ್ತೇವೆ ಎಂದು ಆಯುಕ್ತ ನಸೀಂ ಜೈದಿ ತಿಳಿಸಿದರು.

    ಈ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿಪಿಐ, ಆರ್‍ಜೆಡಿ ಮತ್ತು ಆರ್‍ಎಲ್‍ಡಿ ಹಲವಾರು ಗಂಭೀರ ವಿಚಾರಗಳನ್ನು ಪ್ರಸ್ತಾಪ ಮಾಡಿದೆ. ಸಭೆಯ ಬಳಿಕ ಮಾತನಾಡಿದ ಸಿಪಿಐ ಕಾರ್ಯದರ್ಶಿ ಅತುಲ್ ಅಂಜನ್, ಅಭಿವೃದ್ಧಿ ಹೊಂದಿದ ದೇಶಗಳು ಯಾಕೆ ಇವಿಎಂ ಬಳಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಇಂದು ಆಯೋಜನೆಗೊಂಡ ಸಭೆಯಲ್ಲಿ 7 ರಾಷ್ಟ್ರೀಯ ಪಕ್ಷ ಮತ್ತು 48 ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಇದನ್ನೂ ಓದಿ:ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

     

  • ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ!

    ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ!

    ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುವೆಂಪು ನಗರದಲ್ಲಿರುವ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.

    ಕಳೆದ 2013 ರ ಚುನಾವಣೆಯ ನಂತರ ಹೆಬ್ಬಾಳ್ಕರ್ ಮನೆ ಮುಂಭಾಗದಲ್ಲಿ ನಿರಂತರವಾಗಿ ವಾಮಾಚಾರ ಮಾಡಲಾಗುತ್ತಿದೆ ಎನ್ನಲಾಗಿದೆ. ಮನೆ ಮುಂದೆ, ಕಾರ್ ಕೆಳಗೆ ನಿಂಬೆಹಣ್ಣು, ತೆಂಗಿನಕಾಯಿ, ಮೊಟ್ಟೆ, ಮೆಣಸಿನಕಾಯಿ, ಬೂದುಗುಂಬಳಕಾಯಿ, ಕುಂಕುಮ, ಅರಶಿಣ ಪತ್ತೆಯಾಗಿದೆ.

    ಅಮವಾಸೆ ಮತ್ತು ಹುಣ್ಣಿಮೆ ದಿನಗಳಂದು ವಾಮಾಚಾರ ಹೆಚ್ಚಾಗಿರುತ್ತದೆ. ಮಾಟಮಂತ್ರದಿಂದ ಮಾನಸಿಕ ಹಿಂಸೆ ಆಗುತ್ತಿದೆ. ನಾನು ಮಾಟ ಮಂತ್ರ ನಂಬಲ್ಲ. ಆದರೆ ಮಾಟಮಂತ್ರದಂತಹ ಅನೇಕ ಘಟನೆ ನಡೆದಿವೆ. ನನ್ನ ಕಾರು, ಸಹೋದರ ಚನ್ನಾರಾಜ್ ಕಾರಿಗೆ ಅಪಘಾತಗಳಾಗಿವೆ. ಯಾವ ಸಾಧನೆಗೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: ಕಲಬುರಗಿ: ವಾಮಾಚಾರಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದ ಗ್ರಾಮಸ್ಥರು

    https://www.youtube.com/watch?v=WmoOtp7rMK4

  • ಎರಡೆಲೆ ಚಿಹ್ನೆಗಾಗಿ ಕೋಟಿ ಡೀಲ್ ಮಾಡ್ದೋನು ಬೆಂಗ್ಳೂರು ಹುಡ್ಗ – ದಕ್ಷಿಣ ಭಾರತದ ರಾಜಕಾರಣಿಗಳೆಲ್ಲಾ ಈತನ ಸಂಬಂಧಿಕರಂತೆ!

    ಎರಡೆಲೆ ಚಿಹ್ನೆಗಾಗಿ ಕೋಟಿ ಡೀಲ್ ಮಾಡ್ದೋನು ಬೆಂಗ್ಳೂರು ಹುಡ್ಗ – ದಕ್ಷಿಣ ಭಾರತದ ರಾಜಕಾರಣಿಗಳೆಲ್ಲಾ ಈತನ ಸಂಬಂಧಿಕರಂತೆ!

    ಮುರುಳೀಧರ್ ಹೆಚ್.ಸಿ.

    ನವದೆಹಲಿ: ಎಐಎಡಿಎಂಕೆಯ ಎರಡೆಲೆ ಚಿಹ್ನೆಗಾಗಿ ಡೀಲ್ ಕುದುರಿಸೋಕೆ ಮುಂದಾದವನು ಬೆಂಗಳೂರಿನ ಯುವಕ. ಮೊದಲಿನಿಂದಲೂ ಈತನಿಗೆ ಹಣದ ಹುಚ್ಚು ವ್ಯಾಮೋಹ, ಕಾರುಗಳೆಂದರೆ ಶೋಕಿ. ಸುಖೇಶ್ ಚಂದ್ರಶೇಖರನ್ ಎಂಬ ಹೆಸರಿನ ಈತ ಮೂಲತಃ ತಮಿಳುನಾಡಿನವನು. ಆದರೆ ಈತ ನೆಲೆಸಿರೋದು ಮಾತ್ರ ಬೆಂಗಳೂರಿನಲ್ಲಿ.

    ಘಟನೆ ಏನು?: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದಿನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರನ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.30 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗಿದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿ ಹಾಕಿದ್ದು, ಸುಖೇಶ್ ಚಂದ್ರಶೇಖರನ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡಬ್ಲ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.

    ತಮಿಳುನಾಡು ಅಂದ್ರೆ ಜಯಲಲಿತಾ, ಜಯಲಲಿತಾ ಅಂದ್ರೆ ತಮಿಳುನಾಡು ಅಂತಿತ್ತು. ಯಾವಾಗ ಜಯಲಲಿತಾ ಸಾವನ್ನಪ್ಪಿದರೋ ಬಳಿಕ ಇಡೀ ತಮಿಳುನಾಡಿನ ರಾಜಕೀಯವೇ ಬುಡಮೇಲು ಆಗಿಬಿಟ್ಟಿತ್ತು. ಇನ್ನು ಆರ್‍ಕೆ ನಗರ ಉಪಚುನಾವಣೆಗೆ ಎರಡೆಲೆಗಾಗಿ ಬಡಿದಾಡಿಕೊಂಡ ಎರಡು ಬಣ ಬೇರೆ ಬೇರೆ ಚಿಹ್ನೆಯನ್ನು ಇಟ್ಟುಕೊಂಡು ಚುನಾವಣೆಗೆ ಇಳಿದ್ರು. ಆದರೆ ಭ್ರಷ್ಟಚಾರದ ಕಾರಣದಿಂದ ಉಪಚುನಾವಣೆಯೇ ಕ್ಯಾನ್ಸಲ್ ಆಗಿಬಿಟ್ಟಿತ್ತು.

    ಎರಡೆಲೆಗೆ 50 ಕೋಟಿ..!: ಇಷ್ಟೆಲ್ಲ ಆದ್ಮೇಲೆ ಎರಡೆಲೆ ಚಿಹ್ನೆಯನ್ನು ಪಡೆದುಕೊಳ್ಳೊದೇ ಪ್ರತಿಷ್ಟೆಯನ್ನಾಗಿ ಮಾಡಿಕೊಂಡ ಎರಡು ಬಣಗಳಲ್ಲಿ ದಿನಕರನ್ ಒಂದು ಹೆಜ್ಜೆ ಮುಂದೆಯೇ ಹೋದಂತಿದೆ… ಎರಡೆಲೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ 50 ಕೋಟಿ ಡೀಲ್ ಮಾತನಾಡೋದಕ್ಕೆ ಹೋಗಿ 1 ಕೋಟಿ ಹಣವನ್ನು ಕೊಡೋದಕ್ಕೆ ಡೀಲ್ ಮಾಡಿಕೊಂಡಿದ್ದರಂತೆ. ಈ ವಿಚಾರ ತಿಳಿದಿದ್ದ ದೆಹಲಿ ಕ್ರೈಂ ಬ್ರಾಂಚ್ ಪೊಲೀಸ್ರು ಸುಖೇಶ್ ಚಂದ್ರಶೇಖರನ್‍ನನ್ನು ಬಂಧಿಸಿದ್ದಾರೆ.

    ದಕ್ಷಿಣದ ರಾಜಕರಾಣಿಗಳೆಲ್ಲಾ ಸಂಬಂಧಿಕರೇ!: ಹಣ ಕೊಡೋದಕ್ಕೆ ಹೋಗಿ ಪೊಲೀಸ್ರ ಕೈಯಲ್ಲಿ ತಗ್ಲಾಕೊಂಡ ಸುಖೇಶ್ ಚಂದ್ರಶೇಖರನ್ ಮೂಲ ಕೆದುಕುತ್ತಾ ಹೋದ್ರೆ ಒಂದು ಫಿಲಂ ಸ್ಟೋರಿಯನ್ನೇ ಮಾಡ್ಬಹುದು. ಚೆನ್ನೈ ಮೂಲದ ಸುಕೇಶ್ ಬೆಂಗಳೂರಿನಲ್ಲೇ ನೆಲೆಸಿ ಸಿಕ್ಕ ಸಿಕ್ಕ ಜನರಿಗೆಲ್ಲಾ ಮೋಸ ಮಾಡಿಕೊಂಡೇ ಜೀವನ ಮಾಡ್ತಾ ಇದ್ದ. ರಾಜಕಾರಣಿಗಳ ಸಂಬಂಧಿ ಅಂತ ಹೇಳಿಕೊಳ್ತಾ ಇದ್ದ ಸುಖೇಶ್, ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ನಾನು ಕುಮಾರಸ್ವಾಮಿ ಸಂಬಂಧಿ ಎಂದು ಬಾಲಾಜಿ ಎಂಬುವವರಿಗೆ ಬರೋಬರಿ 1 ಕೋಟಿಯಷ್ಟು ಉಂಡೆ ನಾಮ ತೀಡಿ ಎಸ್ಕೇಪ್ ಆಗಿದ್ನಂತೆ.

    2009ರಲ್ಲಿಯೇ ಕೋರಮಂಗಲ ಪೊಲೀಸ್ರು 10 ಲಕ್ಷ ಚೀಟಿಂಗ್ ಕೇಸ್‍ನಲ್ಲಿ ಅರೆಸ್ಟ್ ಆಗಿದ್ದ ಸುಖೇಶ್ ಮೋಸ ಮಡೋದಕ್ಕೆ ಶುರು ಮಾಡಿದ್ದೇ ತನ್ನ 17ನೇ ವಯಸ್ಸಿನಲ್ಲಿ. ಟೀನೇಜ್‍ನಲ್ಲಿ ನೋಡಿದ್ದೆಲ್ಲಾ ಬೇಕು ಅಂದುಕೊಳ್ಳುವ ವಯಸ್ಸಿನ ಹುಡ್ಗ ಸಿಕ್ಕ ಸಿಕ್ಕವರನ್ನೆಲ್ಲಾ ಮೋಸ ಮಾಡಬಹುದು ಅಂತ ಸುಲಭವಾಗಿ ತಿಳಿದುಕೊಂಡುಬಿಟ್ಟಿದ್ದ.

    ಜಯಲಲಿತಾ ಸೋದರನ ಮಗ ಅಂತೆ..!, ಕರುಣಾನಿಧಿಯ ಮೊಮ್ಮಗ..!: ಹಾವು ಮುಂಗುಸಿಯಂತೆ ಬಡಿದಾಡಿಕೊಳ್ತಾ ಇದ್ದ ಜಯಲಲಿತಾ ಮತ್ತು ಕರುಣಾನಿಧಿ ಸಂಬಂಧಿ ಅಂತ ಜನರಿಗೆ ಮೋಸ ಮಾಡ್ತಾ ಇದ್ದ. ಒಬ್ಬೊಬ್ಬರ ಬಳಿ ಒಂದೊಂದು ರೀತಿಯಲ್ಲಿ ಹೇಳ್ತಾ ಇದ್ದ ಸುಖೇಶ್ ಚಂದ್ರಶೇಖರನ್ ತಮಿಳುನಾಡಿನಲ್ಲಿಯೇ 100 ಕೋಟಿಗೂ ಮೀರಿದ ವಂಚನೆಯನ್ನು ಮಾಡಿದ್ದಾನೆ. ಪೊಲೀಸ್ರ ಕೈಯಲ್ಲಿ ಸಾಕಷ್ಟು ಬಾರಿ ಸಿಕ್ಕಿಬಿದ್ದಿದ್ದಾನೆ.

    ಕಾರು ಅಂದ್ರೆ ಮೋಜು..!, ಹುಡ್ಗೀರು ಅಂದ್ರೆ ಇವನದ್ದೇ ಕಾರುಬಾರು..!: ತನ್ನ 17ನೇ ವಯಸ್ಸಿನಲ್ಲಿ ಸಿಕ್ಕ ಸಿಕ್ಕವರೆನ್ನೆಲ್ಲಾ ಮೋಸ ಮಾಡಿಕೊಂಡು ಜೀವನ ಮಾಡೋದಕ್ಕೆ ಪ್ರಮುಖ ಕಾರಣವೇ ಅವನ ವಿಲಾಸಿ ಜೀವನ. ಕಾರುಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಬೆಳಸಿಕೊಂಡಿದ್ದ ಸುಖೇಶ್ ಇಷ್ಟೆಲ್ಲಾ ಮೋಸ ಮಾಡ್ತಾ ಇದ್ದಿದ್ದೇ ತನ್ನ ವಿಲಾಸಿ ಜೀವನಕ್ಕಾಗಿ. ಬಿಎಂಡಬ್ಲೂ, ಆಡಿ ಮುಂತಾದ ಕೋಟಿ ಕೋಟಿ ಮೌಲ್ಯದ ಕಾರುಗಳನ್ನು ಖರೀದಿ ಮಾಡಿ ಮಜಾ ಮಾಡ್ತಿದ್ದ. ಇನ್ನು ಹುಡ್ಗೀರ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ಮಾಡಿಕೊಂಡಿದ್ದವನಿಗೆ ಮಾಡಲ್‍ಗಳು ಅಂದ್ರೆ ಭಯಂಕರ ಹುಚ್ಚು.

    ಬಾಡಿಗಾರ್ಡ್ಸ್ ಕೊಟ್ಟು ಕೊಡೋದು ಹಣ ಪೀಕೋದು…!: ಬಾಡಿಗಾರ್ಡ್ಸ ಗಳನ್ನು ಕೊಡೋದಾಗಿ ಹೇಳಿ ರಾಜಕಾರಣಿಗಳ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದ. ಹಾಗೆಯೇ ಇಂಟೀರಿಯರ್ ಡೆಕೊರೇಷನ್ ಮಾಡಿಕೊಡ್ತೀನಿ ಎಂದು ಮನೆಯ ಒಳಗೆ ಎಂಟ್ರಿ ಕೊಡುವ ಈತ ರಾಜಕಾರಣಿಗಳನ್ನು ಪರಿಚಯ ಮಾಡಿಕೊಂಡು ಬಳಿಕ ಅವರ ಡೀಲ್‍ಗಳು ಅವರ ಕೆಲಸವೆಲ್ಲವನ್ನೂ ಮಾಡಿಕೊಡ್ತಾನೆ. ಇದೇ ರೀತಿ ದಿನಕರನ್ ಪರಿಚಯ ಮಾಡಿಕೊಂಡು ಡೀಲ್ ಮಾಡಿದ್ನಂತೆ ಸುಖೇಶ್.

    10 ಪರ್ಸೆಂಟ್ ಡೀಲ್..!: ಎರಡೆಲೆಗಾಗಿ 50 ಕೋಟಿ ಡೀಲ್ ಮಾಡೋದಕ್ಕೆ ಬಂದು ಪೊಲೀಸ್ರ ಕೈಗೆ ಸಿಕ್ಕಿಬಿದ್ದಿರೋ ಸುಖೇಶ್ ಚಂದ್ರಶೇಖರನ್ ದಿನಕರ್ ಜೊತೆಗೆ 10 ಪರ್ಸೆಂಟ್ ಡೀಲ್ ಮಾತನಾಡಿಕೊಂಡಿದ್ದು, ಅದನ್ನು ಕುದುರಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ ದಿನಕರನ್ ಕೂಡ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

     

  • ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಜಲಿ ಗ್ರಾಮದ ಸರಳ, ಸಜ್ಜನಿ, ಮೌಲ್ಯಾಧಾರಿತ ರಾಜಕಾರಣಿ ಹಾಗೂ ಸಾಹಿತಿಯಾಗಿದ್ದ ಜ್ಞಾನದೇವ ದೊಡ್ಡಮೇಟಿ ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾದ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರ ಪುತ್ರರಿವರು. ಇವರು ಕೂಡಾ ಸ್ವಾತಂತ್ರ್ಯ ಹೋರಾಟ ಕಂಡಂತವರು. 1983 ಹಾಗೂ 85 ರಲ್ಲಿ ಎರಡು ಬಾರಿ ರೋಣ ಕ್ಷೇತ್ರದಿಂದ ಜನತಾಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಜ್ಞಾನದೇವ ದೊಡ್ಡಮೇಟಿಯವರು ಸಾಹಿತಿ ಸಹ ಆಗಿದ್ರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮತ್ತು ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

    ದೊಡ್ಡಮೇಟಿ ಅವರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರದಂತೆ ಅಪಾರ ಬಂಧು-ಬಳಗವನ್ನ ಅಗಲಿದ್ದಾರೆ. ಇಂದು ಸಂಜೆ ಗದಗ ಜಿಲ್ಲೆಯ ಜಕ್ಕಲ್ಲಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದೊಡ್ಡಮೇಟಿ ಅವರ ಅಗಲಿಕೆಯಿಂದ ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಜ್ಞಾನದೇವ ದೊಡ್ಡಮೇಟಿ ಅವರಿಗೆ 86 ವರ್ಷ ವಯಸ್ಸಾಗಿತ್ತು.

     

  • ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

    ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

    ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ರಾಜ್ಯಸಭೆಯ ಸಂಸದರೊಬ್ಬರ ಮೇಲೆ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಹೌದು, ದಕ್ಷಿಣ ಭಾರತದಲ್ಲಿ ಪಕ್ಷ ಬಲವರ್ಧನೆಯ ವಿಚಾರವಾಗಿ ಇಂದು ದೆಹಲಿಯ ಲೋಕಮಾನ್ಯ ತಿಲಕ್ ರಸ್ತೆಯಲ್ಲಿರುವ ನಿವಾಸದಲ್ಲಿ ಮೋದಿ ಬೆಳಗ್ಗೆ ಬಿಜೆಪಿ ಅಧಿಕಾರ ಇಲ್ಲದೇ ಇರುವ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಸಂಸದರ ಸಭೆ ನಡೆಸಿದರು.

    ಈ ಸಭೆಯಲ್ಲಿ ಕರ್ನಾಟಕದ ಸಂಸದರೊಬ್ಬರು ಭೂ ಕಾನೂನು ತಿದ್ದುಪಡಿ ವಿಚಾರದಲ್ಲಿ ಸಲಹೆ ನೀಡಿದರು. ಈ ಸಲಹೆಗೆ ಗರಂ ಆದ ಮೋದಿ ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠವನ್ನು ಹೇಳಿಕೊಟ್ಟಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    “70ರ ದಶಕದ ರಾಜಕಾರಣ ಬೇರೆ. ಈಗಿನ ರಾಜಕರಾಣದ ಸ್ಟೈಲೇ ಬೇರೆ. 70ರ ದಶಕದ ರಾಜಕಾರಣವನ್ನು ಬಿಟ್ಟುಬಿಡಿ. ಇನ್ನು ಏನಿದ್ದರೂ ಈಗಿನ ಟ್ರೆಂಡ್‍ಗೆ ಲಾಭವಾಗುವ ರಾಜಕಾರಣ ಮಾಡಿ. ಜನರಿಗೆ ಅನುಕೂಲ ಆಗಬೇಕು ಮತ್ತು ಅರ್ಥವಾಗಬೇಕು. ಆ ಕಾನೂನು ಜಾರಿಗೆ ತರುವುದು ನಮಗೆ ಗೊತ್ತಿದೆ. ನೀವು ಮೊದಲು ಜನರಿಗೆ ಹತ್ತಿರವಾಗುವ ರಾಜಕಾರಣ ಮಾಡಿ” ಎಂದು ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಭೆಯಲ್ಲಿ ಮೋದಿ ಸಡನ್ ಆಗಿ ಗರಂ ಆಗಿದ್ದನ್ನು ನೋಡಿ ಸಂಸದರು ಕಕ್ಕಾಬಿಕ್ಕಿಯಾಗಿದ್ದರಂತೆ. ಮೋದಿಯ ಫುಲ್ ಕ್ಲಾಸ್ ಬಳಿಕ ಸಭೆ ಫುಲ್ ಸೈಲೆಂಟ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಸಭೆಯಲ್ಲಿ ಏನು ಚರ್ಚೆ ಆಗಿದೆ?
    ಕೇಂದ್ರದ ಯೋಜನೆಗಳಿಗೆ ರಾಜ್ಯದವರು ಹೊಸ ಹೆಸರು ಇಟ್ಟು ತಮ್ಮ ಯೋಜನೆ ಎಂದು ಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ಗಮನಹರಿಸಿ. ರಾಜ್ಯ ಸರ್ಕಾರದ ಹೊಸ ಬೆಳಕು ಯೋಜನೆ ಕೇಂದ್ರದ ಯೋಜನೆಯಾಗಿದ್ದು ಇದನ್ನು ರಾಜ್ಯ ಸರ್ಕಾರ ತಮ್ಮದು ಎಂದು  ಬಿಂಬಿಸುತ್ತಿದೆ. ಇಂತಹ ಅಂಶಗಳನ್ನು ನೀವು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

    ಬಿಜೆಪಿ ಸರ್ಕಾರ ಇರದ ರಾಜ್ಯಗಳಲ್ಲಿ ಸಂಸದರೇ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಬೇಕು. ಮುದ್ರಾ ಯೋಜನೆ, ಫಸಲ್ ಭೀಮಾ, ಉಜ್ವಲ ಯೋಜನೆ ಬಗ್ಗೆ ಪ್ರಚಾರ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ತಳ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಸಂಘಟನೆಗೆ ಆದ್ಯತೆ ನೀಡುಬೇಕು ಎಂದು ಸೂಚಿಸಿದ್ದಾರೆ.

    ಇನ್ನೂ ಎರಡು ವರ್ಷದ ಅವಧಿ ಮಾತ್ರ ಇದೆ. ಸಮಯ ಎಷ್ಟು ಬೇಗ ಹೋಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ಅರಿತುಕೊಂಡು ಪಕ್ಷ ಸಂಘಟನೆಯ ಜೊತೆ ಅಭಿವೃದ್ಧಿ ಕಾರ್ಯವನ್ನು ಮಾಡಿ ಎಂದು ನಾಯಕರಿಗೆ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಸಭೆಯಲ್ಲಿ ರಾಜ್ಯದ ಹಿತವನ್ನು ಮರೆತ ಬಿಜೆಪಿ ಸಂಸದರು

  • ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಚೆನ್ನೈ: ತಮಿಳುನಾಡಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದೇಶಾದ್ಯಂತ ಸುದ್ದಿ ಮಾಡ್ತಿದೆ. ಈ ನಡುವೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಹೊಸ ಚಿತ್ರ ಮಾಡಲು ಹೊರಟಿದ್ದಾರೆ.

    ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾ ಹಾಗೂ ಶಶಿಕಲಾ ಸಂಬಂಧವನ್ನಿಟ್ಟುಕೊಂಡು ರಾಮಗೋಪಾಲ್ ವರ್ಮಾ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಚಿತ್ರಕ್ಕೆ `ಶಶಿಕಲಾ’ ಅಂತಾ ಟೈಟಲ್ ಇಡಲು ತೀರ್ಮಾನಿಸಲಾಗಿದ್ದು, ಚಿತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆಯಂತೆ. ದಿವಂಗತ ಜಯಲಲಿತಾರ ಬಗ್ಗೆ ನನಗೆ ಅಪಾರ ಗೌರವವಿದೆ. ಅದಕ್ಕಿಂತಲೂ ಹೆಚ್ಚಾಗಿ ಶಶಿಕಲಾರ ಪ್ರಾಮಾಣಿಕತೆ ಬಗ್ಗೆ ನನಗೆ ಹೆಚ್ಚು ಗೌರವ ಇದೆ. ಹಾಗಾಗಿ ನಾನು ಚಿತ್ರಕ್ಕೆ ಶಶಿಕಲಾ ಅಂತಾ ಹೆಸರಿಟ್ಟಿದ್ದೇನೆ ಅಂತಾ ರಾಮ್‍ಗೋಪಾಲ್ ವರ್ಮಾ ಹೇಳಿದ್ದಾರೆ.

    ಈ ಚಿತ್ರಕ್ಕೆ ರಾಜಕೀಯದ ಟಚ್ ಇಲ್ಲ. ಶಶಿಕಲಾ ತಮಿಳಿಗರ ಪಾಲಿಗೆ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಹಾಗಾಗಿ ಚಿತ್ರ ರಾಜಕೀಯೇತರವಾಗಿದ್ದು ಕಾಲ್ಪನಿಕ ಕಥೆ ಒಳಗೊಂಡಿದೆ ಅಂತಾ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಕೂಡ ವರ್ಮಾ ರಕ್ತಚರಿತ, ಕಿಲ್ಲಿಂಗ್ ವೀರಪ್ಪನ್, 26/11ರ ಮುಂಬೈ ದಾಳಿ ಕುರಿತ ಚಿತ್ರ್ರಗಳನ್ನು ಮಾಡಿದ್ದರು.

  • ರಾಜಕೀಯ ಪಕ್ಷಗಳಿಗೆ ಜೇಟ್ಲಿಯಿಂದ ಬಿಗ್ ಶಾಕ್

    ನವದೆಹಲಿ: ನವೆಂಬರ್ 8 ರಂದು 500, 1 ಸಾವಿರ ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಬಿಗ್ ಶಾಕ್ ನೀಡಿದ ಸರ್ಕಾರ ಈಗ ರಾಜಕೀಯ ಪಕ್ಷಗಳಿಗೆ ಮತ್ತೊಂದು ಶಾಕ್ ನೀಡಿದೆ. ಬೇನಾಮಿಯಾಗಿ ವ್ಯಕ್ತಿಯೊಬ್ಬ ಗರಿಷ್ಠ 2 ಸಾವಿರ ರೂ. ಹಣವನ್ನು ದೇಣಿಗೆಯಾಗಿ ರಾಜಕೀಯ ಪಕ್ಷಗಳಿಗೆ ನೀಡಬಹುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

    2 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಡಿಜಿಟಲ್ ಪಾವತಿ, ಡಿಡಿ ಚೆಕ್ ಮೂಲಕ ನೀಡಬೇಕು ಎನ್ನುವ ಪ್ರಸ್ತಾಪವನ್ನು ಜೇಟ್ಲಿ ಬಜೆಟ್‍ನಲ್ಲಿ ಮಂಡಿಸಿದ್ದಾರೆ. ಅಷ್ಟೇ ಅಲ್ಲದೇ ಹಣ ನೀಡಿದ ವ್ಯಕ್ತಿಗಳ ವಿವರವನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.

    ರಾಜಕೀಯ ಪಕ್ಷಗಳ ನಿಧಿ ಸೇರುವ ಬೇನಾಮಿ ದೇಣಿಗೆ ನಿಯಂತ್ರಣಕ್ಕೆ ಸದ್ಯ ಯಾವುದೇ ನಿಯಮಗಳಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 29ಸಿ ಪ್ರಕಾರ ರಾಜಕೀಯ ಪಕ್ಷಗಳ ನಿಧಿಗೆ ನೀಡುವ ಬೇನಾಮಿ ದೇಣಿಗೆಯ ಘೋಷಣೆ ಮಾಡುವುದು ಕಡ್ಡಾಯ. ಇಲ್ಲಿಯವರೆಗೆ 20,000ಕ್ಕಿಂತ ಹೆಚ್ಚಿನ ದೇಣಿಗೆಗೆ ಮಾತ್ರ ಈ ನಿಯಮ ಅನ್ವಯವಾಗುತಿತ್ತು. ಹೀಗಾಗಿ ರಾಜಕೀಯ ಪಕ್ಷಗಳ ನಿಧಿ ಸೇರುವ ಬೇನಾಮಿ ದೇಣಿಗೆಯ ಮೇಲೆ ನಿಷೇಧ ಹೇರುವ ನಿಯಮ ಜಾರಿಗೆ ತರುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

    ಭಾರತದ ಏಳು ರಾಜಕೀಯ ಪಕ್ಷಗಳು 2015-2016ರ ಅವಧಿಯಲ್ಲಿ 1,744 ಮಂದಿಯಿಂದ ದೇಣಿಗೆ ಪಡೆದಿದ್ದು, ಒಟ್ಟು 102.02 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ಈ ಹಿಂದೆ ತಿಳಿಸಿತ್ತು.

    ರಾಜಕೀಯ ಪಕ್ಷಗಳನ್ನು ಆರ್‍ಟಿಐ ಅಡಿ ತರಬೇಕು ಎನ್ನುವ ಕೂಗು ಬಹಳ ದಿನಗಳಿಂದ ಬಂದಿದ್ದರೂ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈಗ ಈ ಹೊಸ ಪ್ರಸ್ತಾಪಕ್ಕೆ ರಾಜಕೀಯ ಪಕ್ಷಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎನ್ನುವ ಕುತೂಹಲ ಹೆಚ್ಚಾಗಿದೆ.