Tag: ರಾಜಕೀಯ ಪಕ್ಷ

  • ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?

    ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?

    ಬೆಂಗಳೂರು:  ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್ (Basangouda Patil Yatnal) ಈಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಒತ್ತಡ ಇದೆ ಎಂದಿರುವ ಯತ್ನಾಳ್, ರಾಜ್ಯವೆಲ್ಲಾ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ಕರ್ನಾಟಕದಲ್ಲಿ ಹೊಸ ಪಕ್ಷ ಕಟ್ಟಿ ಗೆದ್ದವರ ಪಟ್ಟಿ ನೋಡಿದರೆ ಜೆಡಿಎಸ್ ಮಾತ್ರ ಕಾಣುತ್ತದೆ. ಉಳಿದ ಘಟಾನುಘಟಿಗಳು ಹೊಸ ಪಕ್ಷದ ಸಹವಾಸವೇ ಬೇಡ ಎಂದು ಮರಳಿ ರಾಷ್ಟ್ರೀಯ ಪಕ್ಷದ ಗೂಡು ಸೇರಿದ್ದಾರೆ.

    ಮಾಜಿ ಸಿಎಂಗಳಾದ ಬಂಗಾರಪ್ಪ, ಯಡಿಯೂರಪ್ಪ, ಹಾಲಿ ಸಿಎಂ ಸಿದ್ದರಾಮಯ್ಯ ಅವರಂತಹ ಮಾಸ್ ಲೀಡರ್‌ಗಳೇ ಸುಸ್ತಾಗಿದ್ದಾರೆ. ಜನಶಕ್ತಿ ಎಷ್ಟೇ ಒಟ್ಟಿಗಿದ್ದರೂ ಆರ್ಥಿಕ ಸಂಪನ್ಮೂಲದ ಶಕ್ತಿಯೂ ಅಷ್ಟೇ ಇರಬೇಕು.

    ಎಸ್.ಬಂಗಾರಪ್ಪ
    ಎಸ್.ಬಂಗಾರಪ್ಪ (S Bangarappa ) 2 ಬಾರಿ ಪಕ್ಷ ಕಟ್ಟಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ವಿರುದ್ಧ ಗುಟುರು ಹಾಕಿ ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ) ಸ್ಥಾಪನೆ ಮಾಡಿದ್ದರು. ಇದನ್ನೂ ಓದಿ: ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್‌ ಲೆಕ್ಕಾಚಾರ?

    1996ರಲ್ಲಿ ಕೆಸಿಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇದಾದ ಬಳಿಕ ಮತ್ತೆ ಕಾಂಗ್ರೆಸ್‌ ಮರಳಿ ಕಡಿಮೆ ಅವಧಿಯಲ್ಲೇ ಮತ್ತೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಕರ್ನಾಟಕ ವಿಕಾಸ ಪಕ್ಷ ರಚಿಸಿದ್ದರು.

    1998ರಲ್ಲಿ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಸಿಪಿಯಿಂದ ಸೋಲು ಕಂಡರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.

    ಸಿದ್ದರಾಮಯ್ಯ:
    ದೇವೇಗೌಡರ ವಿರುದ್ಧ ಗುಟುರು ಹಾಕಿ ಹೊಸ ಪಕ್ಷ ಕಟ್ಟಿದ್ದರು. ಅಖಿಲ ಭಾರತ ಪ್ರಗತಿಪರ ಜನತಾದಳ (ಎಬಿಪಿಜೆಡಿ) ಎಂಬ ಹೊಸಪಕ್ಷ ಸ್ಥಾಪಿಸಿದ್ದರು. ಆದರೆ ಯಾವುದೇ ಸಾರ್ವತ್ರಿಕ ಚುನಾವಣೆ ಎದುರಿಸದೇ ಪಕ್ಷವನ್ನು ವಿಸರ್ಜಿಸಿ ಬೃಹತ್ ಸಮಾವೇಶ ಮಾಡಿ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್‌ ಸೇರಿದ್ದರು. ಇದನ್ನೂ ಓದಿ: ನಾಳೆಯಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ಯಡಿಯೂರಪ್ಪ:
    2012ರಲ್ಲಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಕರ್ನಾಟಕ ಜನತಾ ಪಾರ್ಟಿ (KJP) ಸ್ಥಾಪನೆ ಮಾಡಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದ್ದರಿಂದ ಬಿಜೆಪಿ 40 ಸ್ಥಾನಕ್ಕೆ ಕುಸಿದಿತ್ತು. ಯಡಿಯೂರಪ್ಪ (Yediyurappa) ನೇತೃತ್ವದ ಕೆಜೆಪಿಯಿಂದ 6 ಮಂದಿಗೆ ಗೆಲುವು ಸಿಕ್ಕಿತ್ತು. ಲೋಕಸಭೆ ಚುನಾವಣೆ ವೇಳೆ ಕೆಜೆಪಿಯನ್ನು ವಿಲೀನಗೊಳಿಸಿ ಬಿಜೆಪಿಗೆ ಸೇರ್ಪಡೆಯಾದರು.

    ಶ್ರೀರಾಮುಲು:
    ಬಿಜೆಪಿಗೆ ಸಡ್ಡು ಹೊಡೆದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಹೊಡೆತ ಬಿದ್ದಿತ್ತು. ಬಿಎಸ್‌ಆರ್ ಕಾಂಗ್ರೆಸ್‌ನಿಂದ ನಾಲ್ವರ ಗೆಲುವು ಸಾಧಿಸಿದ್ದರು. ನಂತರ ಪಕ್ಷ ಮುನ್ನಡೆಸಲಾಗದೇ ರಾಮುಲು (Sriramulu) ಬಿಜೆಪಿ ಸೇರಿದ್ದರು.

    ಜನಾರ್ದನ ರೆಡ್ಡಿ
    ಗಣಿ ಕೇಸಲ್ಲಿ ಜೈಲಿನಿಂದ ವಾಪಸ್ ಆದ ಬಳಿಕ ಬಿಜೆಪಿ ಜರ್ನಾರ್ದನ ರೆಡ್ಡಿ ಅವರನ್ನು (Janardhan Reddy) ದೂರ ಇಟ್ಟಿತ್ತು. 2023ರ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪನೆ ಮಾಡಿದ್ದರು. ಜನಾರ್ದನ ರೆಡ್ಡಿ ವಿಧಾನಸಭೆಗೆ ಆಯ್ಕೆಯಾದರೂ ಬಿಜೆಪಿಗೆ ಹಲವು ಕಡೆ ಪೆಟ್ಟು ನೀಡಿತ್ತು. 2024ರ ಲೋಕಸಭಾ ಚುನಾವಣೆ ವೇಲೆ ರೆಡ್ಡಿ ಬಿಜೆಪಿಗೆ ಬೆಂಬಲ ನೀಡಿದರು ಅಷ್ಟೇ ಅಲ್ಲದೇ ಕೆಆರ್‌ಪಿಪಿಯನ್ನು ಬಿಜೆಪಿ ಜೊತೆ ವಿಲೀನ ಮಾಡಿದರು.

    ಉಪೇಂದ್ರ
    ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿರುವ ಉಪೇಂದ್ರ (Upendra) ಸದ್ಯ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.

    ಅಶೋಕ್ ಖೇಣಿ
    ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿದ್ದ ಅಶೋಕ್ ಖೇಣಿ (Ashok Kheny) ಒಂದು ಬಾರಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನ ಮಾಡಿದ್ದಾರೆ.

  • ರಾಜಕೀಯ ಪಕ್ಷಗಳಿಗೆ ಮೂಗುದಾರ ಹಾಕಲು ಸುಪ್ರೀಂ ಸಿದ್ಧತೆ – ಉಚಿತ ಕೊಡುಗೆಗಳ ನಿಯಂತ್ರಣಕ್ಕೆ ಸಮಿತಿ ರಚಿಸಲು ಒಲವು

    ರಾಜಕೀಯ ಪಕ್ಷಗಳಿಗೆ ಮೂಗುದಾರ ಹಾಕಲು ಸುಪ್ರೀಂ ಸಿದ್ಧತೆ – ಉಚಿತ ಕೊಡುಗೆಗಳ ನಿಯಂತ್ರಣಕ್ಕೆ ಸಮಿತಿ ರಚಿಸಲು ಒಲವು

    ನವದೆಹಲಿ: ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಸಮಿತಿ ರಚಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಇಂದು ನಡೆದ ವಿಚಾರಣೆ ವೇಳೆ ಸಿಜೆಐ ಪೀಠ ಇಂತದೊಂದು ಅಭಿಪ್ರಾಯ ಕೋರ್ಟ್ ವ್ಯಕ್ತಪಡಿಸಿದೆ.

    ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರುವುದರಿಂದ ಉಚಿತ ಕೊಡುಗೆಗಳ ಸಾಧಕ-ಬಾಧಕಗಳನ್ನು ನಿರ್ಧರಿಸುವ ಅಗತ್ಯವಿದೆ. ಹೀಗಾಗಿ ಸಮಿತಿಯಲ್ಲಿ ನೀತಿ ಆಯೋಗ, ಹಣಕಾಸು ಆಯೋಗ, ಆಡಳಿತ ಮತ್ತು ವಿರೋಧ ಪಕ್ಷಗಳು, ಆರ್‍ಬಿಐ ಮತ್ತು ಇತರ ಮಧ್ಯಸ್ಥಗಾರರು ಒಳಗೊಂಡಿರಬೇಕು ಎಂದು ಸಿಜೆಐ ಎನ್‍ವಿ ರಮಣ ಹೇಳಿದ್ದಾರೆ.  ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ಪ್ರಸ್ತಾಪಿತ ಸಮಿತಿಯೂ ಉಚಿತ ಕೊಡುಗೆಗಳನ್ನು ಹೇಗೆ ನಿಯಂತ್ರಿಸುವುದು ಮತ್ತು ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಕೋರ್ಟ್‍ಗೆ ವರದಿಗಳನ್ನು ನೀಡಬೇಕು ಎಂದು ಪೀಠ ಹೇಳಿದೆ. ತಜ್ಞರ ಸಮಿತಿಯ ರಚನೆಯ ಕುರಿತು ಏಳು ದಿನಗಳಲ್ಲಿ ತಮ್ಮ ಸಲಹೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಹಾಗೂ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮತ್ತು ಅರ್ಜಿದಾರರಿಗೆ ನ್ಯಾಯಾಲಯ ಹೇಳಿದೆ.

    Law

    ವಿಚಾರಣೆ ವೇಳೆ ಚುನಾವಣಾ ಆಯೋಗದ “ನಿಷ್ಕ್ರಿಯತೆ”ಯಿಂದ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಇದಕ್ಕೆ ಉತ್ತರಿಸಿದ ಆಯೋಗದ ಪರ ವಕೀಲರು ಉಚಿತಗಳ ಮೇಲಿನ ನ್ಯಾಯಾಲಯದ ತೀರ್ಪಿನಿಂದ ತನ್ನ ಕೈಗಳನ್ನು ಕಟ್ಟಲಾಗಿದೆ ಎಂದು ಹೇಳಿದರು. ಇದಕ್ಕೆ ಮತ್ತೆ ಉತ್ತರಿಸಿದ ಕೋರ್ಟ್ ಅಗತ್ಯಬಿದ್ದರೆ ಹಳೆಯ ತೀರ್ಪನ್ನು ಮರುಪರಿಶೀಲಿಸುವುದಾಗಿ ಹೇಳಿದೆ. ಇದನ್ನೂ ಓದಿ: ವರ್ಷದ ಹಿಂದೆ ಅತ್ಯಾಚಾರಗೈದು ಜೈಲು ಸೇರಿದ್ದವನಿಂದ ಮತ್ತೆ ರೇಪ್ – ಸ್ನೇಹಿತನಿಂದಲೇ ಕೃತ್ಯ ಸೆರೆ

    ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಕಾನೂನು ಜಾರಿಗೊಳಿಸಲು ಸಂಸತ್ತಿಗೆ ಬಿಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಜೆಐ ಯಾವುದೇ ರಾಜಕೀಯ ಪಕ್ಷವು ಉಚಿತ ಕೊಡುಗೆಗಳ ನಿರ್ಧಾರದ ವಿರುದ್ಧ ನಿಲ್ಲುವುದಿಲ್ಲ ಎಂದು ಹೇಳಿದರು.

    ಮುಂದುವರಿದು ಇದರ ಬಗ್ಗೆ ಸಂಸತ್ತು ಚರ್ಚೆ ನಡೆಸುತ್ತದೆ ಎಂದು ನೀವು ಭಾವಿಸುತ್ತೀರಾ? ಯಾವ ರಾಜಕೀಯ ಪಕ್ಷವು ಚರ್ಚೆ ನಡೆಸುತ್ತದೆ? ಯಾವುದೇ ರಾಜಕೀಯ ಪಕ್ಷವು ಉಚಿತಗಳನ್ನು ವಿರೋಧಿಸುವುದಿಲ್ಲ. ಪ್ರತಿಯೊಬ್ಬರೂ ಅದನ್ನು ಬಯಸುತ್ತಾರೆ. ನಾವು ತೆರಿಗೆ ಪಾವತಿದಾರರು ಮತ್ತು ದೇಶದ ಆರ್ಥಿಕತೆಯ ಬಗ್ಗೆ ಯೋಚಿಸಬೇಕು ಎಂದು ಸಿಜೆಐ ರಮಣ, ವಕೀಲ ಕಪಿಲ್ ಸಿಬಲ್‍ಗೆ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ, ಕಾಂಗ್ರೆಸ್ ಹೆಸರು ಹೇಳಿ ಭವಿಷ್ಯ ನುಡಿದ ಮಕಣಾಪುರದ ದೈವ

    ಬಿಜೆಪಿ, ಕಾಂಗ್ರೆಸ್ ಹೆಸರು ಹೇಳಿ ಭವಿಷ್ಯ ನುಡಿದ ಮಕಣಾಪುರದ ದೈವ

    ವಿಜಯಪುರ: ಇದೇ ಮೊದಲ ಬಾರಿ ರಾಜಕೀಯ ಪಕ್ಷಗಳ ಹೆಸರು ಹೇಳಿ ದೈವ ಭವಿಷ್ಯ ನುಡಿದಿದ್ದು, ರಾಜಕಾರಣಿಗಳಿಗೆ ಶಾಕ್ ನೀಡಿದೆ.

    ಚಡಚಣ ತಾಲೂಕಿನ ಮಕಣಾಪುರದ ಸೋಮಲಿಂಗ ದೇವಸ್ಥಾನದ ಕಲ್ಲೂರುಸಿದ್ಧ ಭವಿಷ್ಯ ಬಹಳ ಪ್ರಸಿದ್ಧ. ಮಕಣಾಪುರ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿ ಬಳಿಕ ದೈವ ಭವಿಷ್ಯ ನುಡಿಯುತ್ತೆ. ಶಿವನ ಅವತಾರ ಸೋಮಲಿಂಗ ದೇವರ ಸೇವಕನಾಗಿರುವ ಪವಾಡ ಪುರುಷ ಕಲ್ಲೂರುಸಿದ್ಧ ಭವಿಷ್ಯವನ್ನು ಜನರು ನಂಬುತ್ತಾರೆ. ನಾಲಿಗೆ ಮೇಲೆ ಶಿವನೆ ಕುಳಿತು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಇದನ್ನೂ ಓದಿ: ಇ-ಹರಾಜು ಮೂಲಕ ಸಾರಿಗೆಯೇತರ ವಾಹನಗಳಿಗೆ ‘ವಿಐಪಿ ಸಂಖ್ಯೆ’: ಹರಿಯಾಣ ಸಿಎಂ

    ಹೇಳಿದ್ದೇನು?
    ಕಯ್ಯಲ್ಲಿ ಬೆಳ್ಳಿ ತ್ರಿಶೂಲ, ಮುಖಕ್ಕೆ ದೇವರ ಮುಖವಾಡ ಧರಿಸಿ ಭವಿಷ್ಯವನ್ನು ನುಡಿಯುತ್ತೆ. ಈ ವೇಳೆ ದೈವ, ಕಾಂಗ್ರೆಸ್-ಬಿಜೆಪಿ ತಾ ಮುಂದು ನಾ ಮುಂದು ಎನ್ನುತ್ವೆ. ಎರಡು ಪಕ್ಷಗಳ ನಡುವೆ ಭಾರೀ ತಿಕ್ಕಾಟ ನಡೆಯುತ್ತೆ ಎಂದು ಭವಿಷ್ಯವನ್ನ ಕಲ್ಲೂರುಸಿದ್ಧ ದೈವ ನುಡಿದಿದೆ.

    ಎರಡು ಪಕ್ಷಗಳು ನಾ ಮುಂದು, ತಾ ಮುಂದು ಎನ್ನುವಾಗ ಜಗತ್ತೆ ಅಲ್ಲೋಲ ಕಲ್ಲೋಲ ಆಗುತ್ತೆ. ಎರಡು ಪಕ್ಷದ ತಿಕ್ಕಾಟದಿಂದ ಅಲ್ಲೋಲ ಕಲ್ಲೋಲ. ಬಿಜೆಪಿ ಜನರಿಗೆ ಹೊಂದಿಕೊಂಡು ಹೋದರೆ ನಿಶಾನೆ(ಧ್ವಜ/ಗೆಲುವು) ಹಚ್ತೇನೆ. ಇಲ್ಲಂದ್ರ ಕಡಿದು ಮೂರು ತುಂಡು ಮಾಡೀನಿ ಎಂದು ದೈವ ನುಡಿದಿದೆ. ಇದನ್ನೂ ಓದಿ: ಪವಾರ್‌ ಆಯೋಜಿಸಿದ್ದ ಡಿನ್ನರ್‌ನಲ್ಲಿ ಗಡ್ಕರಿ, ರಾವತ್‌ ಭಾಗಿ

    ಬಿಜೆಪಿ ಜನರೊಂದಿಗೆ ಹೊಂದಾಣಿಕೆ ಆದ್ರೆ ಗೆಲುವು ಎಂದು ಬರುತ್ತೆ. ಈ ವೇಳೆ ಭೂಕಂಪನ ಭವಿಷ್ಯವನ್ನು ಕಲ್ಲೂರುಸಿದ್ಧ ದೈವ ನುಡಿದಿದೆ. ನಾಲ್ಕು ಮೂಲೆ ಸೋಸಿ(ಶೋಧಿಸಿ) ನೋಡುದ್ರಾಗ ಕತ್ತಲೆ ಬಿತ್ತಲೆ. ಭೂತ್ಯಾನ ಹಚ್ಚಿ ಬಯಲು ಮಾಡಿದ್ರ ಎರಡು ಮೂಲೆ ತೊಟ್ಟಲಿಟ್ಟು ತೂಗಿತು ಎನ್ನುವ ಮೂಲಕ ಎರಡು ಭಾಗದಲ್ಲಿ ಭೂಕಂಪ ಆಗಬಹುದು ಎಂದಿದೆ.

  • ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

    ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

    ಕೀವ್: ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣಾ ಮಂಡಳಿ ರಷ್ಯಾದ ಪರವಾಗಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದೆ. ಇದೀಗ ಉಕ್ರೇನ್‌ನಲ್ಲಿ ಸಮರ ಕಾನೂನು ಜಾರಿಗೊಳಿಸಲಾಗಿದೆ.

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಮೇಲೆ ಯುದ್ಧ ಸಾರಿರುವ ರಷ್ಯಾದೊಂದಿಗೆ ಸಂಬಂಧ ಹೊಂದಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ್ದಾರೆ. 4.41 ಕೋಟಿ ಜನಸಂಖ್ಯೆ ಇರುವ ಉಕ್ರೇನ್‌ನಲ್ಲಿ 450 ಸಂಸತ್ ಸ್ಥಾನಗಳಲ್ಲಿ 44 ಸ್ಥಾನಗಳನ್ನು ರಷ್ಯಾಗೆ ಬೆಂಬಲ ನೀಡುತ್ತಿದ್ದ ರಾಜಕೀಯ ಪಕ್ಷದವರೇ ಪಡೆದುಕೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ 

    ಭಾನುವಾರ ವೀಡಿಯೋ ಸಂದೇಶವನ್ನು ಕಳುಹಿಸಿದ ಉಕ್ರೇನ್ ಅಧ್ಯಕ್ಷ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಮಟ್ಟದ ಯುದ್ಧವನ್ನೇ ನಡೆಸಿದೆ. ಈ ಯುದ್ಧಕ್ಕೆ ನಮ್ಮ ದೇಶದ ಒಳಗಡೆಯೇ ಕೆಲವು ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡಿರುವುದು ಗಮನಕ್ಕೆ ಬಂದಿದೆ. ರಷ್ಯಾದೊಂದಿಗೆ ಸಂಬಂಧವನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಸಮರ ಕಾನೂನಿನ ಅವಧಿಗೆ ಅಮಾನತುಗೊಳಿಸಲಾಗುವುದು ಎಂದಿದ್ದಾರೆ.ಇದನ್ನೂ ಓದಿ: 98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

     

  • ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಲ್ಲೆಲ್ಲೂ ರಾಜಕೀಯವೇ ರಾರಾಜಿಸುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ಮನೋಜ್ ತಿವಾರಿ ಅವರ ಜಾಕೆಟ್ ಮೇಲೆ, ಅಗ್ನಿಮಿತ್ರ ಪಾಲ್ ಅವರ ಡಿಸೈನರ್ ಸೀರೆಗಳ ಕಮಲದ ಚಿಹ್ನೆ ಇತ್ತು. ಇದೀಗ ಸ್ವೀಟ್ ಅಂಗಡಿಯ ಮಾಲೀಕ ಸಂದೇಶ್ ಸರದಿ.

    ಕೋಲ್ಕತ್ತಾದ ಬಲರಾಮ್ ಮುಲ್ಲಿಕ್ ರಾಧರಮನ್ ಮುಲ್ಲಿಕ್ ಸ್ವೀಟ್‍ಗಳ ಮೇಲೆ ರಾಜಕೀಯ ಪಕ್ಷದ ಚಿಹ್ನೆಗಳನ್ನು ರಚಿಸುವ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ರಾಜಕೀಯದ ಪ್ರಮುಖ ಪಕ್ಷಗಳ ಚಿಹ್ನೆ ಸೇರಿದಂತೆ ಕಾಂಗ್ರೆಸ್, ಭಾರತೀಯ ಜನತಾ ಪಕ್ಷದ ಚಿಹ್ನೆ ಜೊತೆಗೆ ಜೈ ಶ್ರೀ ರಾಮ್ ಮತ್ತು ಖೇಲಾ ಹೋಬ್ ಎಂಬ ಎರಡು ಪದಗಳನ್ನು ಸ್ವೀಟ್‍ಗಳ ಮೇಲೆ ರಚಿಸಿದ್ದಾರೆ. ಇದೀಗ ಈ ಸ್ವೀಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

    ಈ ಕುರಿತಂತೆ ಮಾತನಾಡಿದ ಸ್ವೀಟ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ ಮಲ್ಲಿಕ್, ವರ್ಷದ ಬಹುದೊಡ್ಡ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಾವು ಚುನಾವಣೆಯ ಸಂಬಂಧಪಟ್ಟಂತೆ ಸ್ವೀಟ್‍ಗಳನ್ನು ತಯಾರಿ ಮಾಡುತ್ತಿದ್ದು, ಈ ಸ್ವೀಟ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಖೇಲಾ ಹೋಬ್ ಮತ್ತು ಜೈ ಶ್ರೀ ರಾಮ್ ಎಂದು ಪದವನ್ನು ರಚಿಸಿರುವ ಸ್ವೀಟ್‍ಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿಹೋಗಿದೆ ಎಂದು ಹೇಳಿದ್ದಾರೆ.

    ಸದ್ಯ ಈ ಸ್ವೀಟ್‍ಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಗ್ರಾಹಕರು ರಾಜಕೀಯ ಚಿಹ್ನೆಗಳುಳ್ಳ ಸ್ವೀಟ್‍ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

  • ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನನಗೆ ಇಷ್ಟವಾಗಲ್ಲ: ಪವನ್ ಕಲ್ಯಾಣ್

    ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನನಗೆ ಇಷ್ಟವಾಗಲ್ಲ: ಪವನ್ ಕಲ್ಯಾಣ್

    ಹೈದರಾಬಾದ್: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಹೇಳುತ್ತಾರೆ. ಆದ್ರೆ ರಾಜಕೀಯ ಪಕ್ಷಗಳ ಸಭೆಗಳಲ್ಲಿ ಯಾಕೆ ರಾಷ್ಟ್ರಗೀತೆ ಹಾಕಿ ಗೌರವಿಸಲ್ಲ ಎಂದು ಜನ ಸೇನಾ ಮುಖ್ಯಸ್ಥ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ.

    ಕೆಲ ದಿನಗಳ ಹಿಂದೆ, “2019ರ ಲೋಕಸಭೆ ಚುನಾವಣೆ ಬರುವ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ಎರಡು ವರ್ಷದ ಹಿಂದೆಯೇ ನನಗೆ ಹೇಳಿತ್ತು” ಎಂದು ಹೇಳಿಕೆ ನೀಡಿ ಪವನ್ ಕಲ್ಯಾಣ್ ಸುದ್ದಿಯಲ್ಲಿದ್ದರು. ಈಗ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕುವ ಬಗ್ಗೆ ಹೇಳಿಕೆ ನೀಡಿ ಮತ್ತೆ ಎಲ್ಲೆಡೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆಗೂ ಮೊದಲೇ ಯುದ್ಧ – ಬಿಜೆಪಿ ನನಗೆ ಹೇಳಿಲ್ಲ ಎಂದ ಪವನ್ ಕಲ್ಯಾಣ್

    ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ಶನಿವಾರ ನಡೆದ ಯುವ-ಸಂವಾದಾತ್ಮಕ ಅಧಿವೇಶನ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಭಾಗಿಯಾಗಿದ್ದರು. ಈ ವೇಳೆ ಭಾಷಣ ಮಾಡುತ್ತ, ನನಗೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಇಷ್ಟವಾಗಲ್ಲ. ಚಿತ್ರಮಂದಿರದಲ್ಲಿ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಕಳೆಯುವ ವಿರಾಮದ ಸಮಯವನ್ನು ಈಗ ಒಬ್ಬರ ದೇಶಭಕ್ತಿಯನ್ನು ಅಳಿಯಲು ಬಳಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

    ರಾಜಕೀಯ ಪಕ್ಷಗಳು ತಮ್ಮ ಸಭೆ ಸಮಾರಂಭಗಳು ಆರಂಭವಾಗುವ ಮುನ್ನವೇಕೆ ರಾಷ್ಟ್ರಗೀತೆಯನ್ನು ಹಾಕುವುದಿಲ್ಲ? ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ಹಾಕಬೇಕು? ದೇಶದಲ್ಲಿರುವ ಎಲ್ಲಾ ಕಚೇರಿಗಳಲ್ಲೂ ರಾಷ್ಟ್ರಗೀತೆ ಮೊಳಗಬೇಕು. ಯಾರು ಕಾನೂನನ್ನು ಮಾಡುತ್ತಾರೋ ಅವರು ಕೂಡ ಅದನ್ನು ಪಾಲಿಸಬೇಕು ಎಂದು ಹೇಳಿದರು.

    ಈ ಹಿಂದೆ 2016ರಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಕ್ಕೆ ಜನ ಸೇನಾ ಮುಖ್ಯಸ್ಥರ ಮೇಲೆ ಹೈದರಾಬಾದ್‍ನ ವಕೀಲರೊಬ್ಬರು ದೂರು ದಾಖಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಮನ ಹೆಸ್ರಲ್ಲಿ ದೇಶ ಒಡೆಯುವ ಕೆಲಸ ಮಾಡ್ಬೇಡಿ: ಬಾಬಾ ರಾಮ್‍ದೇವ್

    ರಾಮನ ಹೆಸ್ರಲ್ಲಿ ದೇಶ ಒಡೆಯುವ ಕೆಲಸ ಮಾಡ್ಬೇಡಿ: ಬಾಬಾ ರಾಮ್‍ದೇವ್

    ಮುಂಬೈ: ಯಾವುದೇ ರಾಜಕೀಯ ಪಕ್ಷಕ್ಕೂ ರಾಮ ಸೇರಿಲ್ಲ. ರಾಜಕೀಯಕ್ಕಾಗಿ ರಾಮನನ್ನು ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಾವೆಲ್ಲ ಸನ್ಯಾಸಿಗಳು ಒಗ್ಗೂಡಿ ರಾಮ ಮಂದಿರ ನಿರ್ಮಾಣಕ್ಕೆ ಹೋರಾಡಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಕರೆಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನು ಕೇವಲ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ರಾಮ ಇಡೀ ದೇಶಕ್ಕೆ ಸೇರಿದವನು. ಆದ್ದರಿಂದ ಎಲ್ಲಾ ಸಾಧು ಸಂತರು ಕೂಡ ಜೊತೆಗೂಡಿ ರಾಮನ ಮೇಲಿರುವ ಭಕ್ತಿಯನ್ನು ಸಾರಬೇಕು. ದೇಶಕ್ಕೆ ಯಾವುದೇ ತಪ್ಪು ಪರಿಲ್ಪನೆಯನ್ನು ನೀಡುವ ರೀತಿ ನಮ್ಮ ಭಕ್ತಿ ಇರಬಾರದು ಎಂದು ಕಿಡಿಕಾರಿದ್ದಾರೆ.

    ಒಂದು ವೇಳೆ ಸಂತರು ಹಾಗೂ ಸನ್ಯಾಸಿಗಳು ಒಗ್ಗೂಡಿ ಪ್ರಾಮಾಣಿಕತೆಯಿಂದ ಇರದಿದ್ದರೆ ದೇಶದಲ್ಲಿ ಏಕತೆ ಹಾಗೂ ಸಮಗ್ರತೆಯನ್ನು ಹೇಗೆ ಕಾಯ್ದುಕೊಳ್ಳಲು ಸಾಧ್ಯ? ರಾಮನ ಹೆಸರನ್ನು ಬಳಸಿಕೊಂಡು ದೇಶವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ನಾನು ಎಲ್ಲಾ ಸನ್ಯಾಸಿಗಳು ಹಾಗೂ ಸಂತರ ಬಳಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡರು.

    ಕೆಲ ಸನ್ಯಾಸಿಗಳು ಹಾಗೂ ಪ್ರಜೆಗಳು ರಾಮ ಮಂದಿರವನ್ನು ಆದಷ್ಟು ಬೇಗ ಅಯೋಧ್ಯೆಯಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದ್ರೆ ಜನವರಿ 30ರಂದು ಸನ್ಯಾಸಿಗಳು ಹಾಗೂ ಸಂತರು ಸಂಘಟಿತಗೊಂಡಾಗ ರಾಮಮಂದಿರ ನಿರ್ಮಾಣದ ಕಾರ್ಯ ಫೆಬ್ರವರಿ 21ಕ್ಕೆ ಆರಂಭವಾಗಲಿದೆ ಎಂದು ತಿಳಿಸಿದ್ದರು.

    ಜನವರಿ 29ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ವಿವಾದದಲ್ಲಿರುವ ಅಯೋಧ್ಯೆಯ ಜಾಗವನ್ನು ಹೊರತುಪಡಿಸಿ ಇನ್ನುಳಿದ ಸ್ಥಳವನ್ನು ರಾಮ ಮಂದಿರ ಪುನರ್ ನಿರ್ಮಿಸಲು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಳಂಕಿತರ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ- ಸಂಸತ್ ಕಾನೂನು ರೂಪಿಸಲಿ: ಸುಪ್ರೀಂ

    ಕಳಂಕಿತರ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ- ಸಂಸತ್ ಕಾನೂನು ರೂಪಿಸಲಿ: ಸುಪ್ರೀಂ

    ನವದೆಹಲಿ: ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಗೆ ನಿಲ್ಲುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ದೋಷಾರೋಪ ಎದುರಿಸುತ್ತಿರುವವರ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಮತ್ತು ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕೆಂದು ಸರ್ಕಾರೇತರ ಸಂಸ್ಥೆ ಮತ್ತು ಬಿಜೆಪಿ ನಾಯಕ ಅಶ್ವನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ, ಕಳಂಕಿತರು ಚುನಾವಣೆಗೆ ಸ್ಪರ್ಧೆ ಮಾಡದಂತೆ ಸಮರ್ಪಕ ಕಾಯ್ದೆ ರೂಪಿಸುವಂತೆ ಮಂಗಳವಾರ ಸಂಸತ್ತಿಗೆ ಸೂಚಿಸಿದೆ.

    ಚಾರ್ಜ್ ಶೀಟ್ ಆಧರಿಸಿ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಕೇಂದ್ರ ಕಾಯ್ದೆ ರೂಪಿಸುವವರೆಗೂ ಕ್ರಿಮಿನಲ್ ಹಿನ್ನೆಲೆ ಹೊಂದಿದ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಉತ್ತಮ ಜನರಿಂದ ಆಳ್ವಿಕೆ ಪಡೆದುಕೊಳ್ಳುವುದು ನಮ್ಮ ಹಕ್ಕು. ಈ ಕುರಿತು ಕಾಯ್ದೆ ರೂಪಿಸಲು ಅದಷ್ಟು ಬೇಗ ಕಾರ್ಯಾರಂಭ ಮಾಡಿದರೆ ಒಳಿತು ಎಂದು ಸುಪ್ರೀಂ ಈಗ ಈ ಚೆಂಡನ್ನು ಸಂಸತ್ ಅಂಗಳಕ್ಕೆ ಎಸೆದಿದೆ. ಅಲ್ಲದೇ ಜನರೇ ರಾಜಕಾರಣಿಗಳ ಭವಿಷ್ಯ ನಿರ್ಧರಿಸುವವರು ಎಂದಿದೆ.

    ರಾಜಕೀಯ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಅಲ್ಲದೇ ಅಭ್ಯರ್ಥಿಗಳು ಸಹ ತಮ್ಮ ಮೇಲಿರುವ ಕ್ರಿಮಿನಲ್ ಆರೋಪಗಳ ಕುರಿತು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳ ವಿವರಗಳ ಕುರಿತು ವ್ಯಾಪಕ ಪ್ರಚಾರ ನೀಡಲು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಬಳಕೆ ಮಾಡಲು ರಾಜಕೀಯ ಪಕ್ಷಗಳಿಗೆ ಕೋರ್ಟ್ ಸೂಚನೆ ನೀಡಿದೆ.

    ಸದ್ಯ ಜಾರಿಯಲ್ಲಿರುವ ನಿಯಮಗಳ ಅನ್ವಯ ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಸಾಬೀತಾದರೆ ಆತನಿಗೆ 6 ವಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಆದರೆ ಅವರು ರಾಜಕೀಯ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ.

    ಇದೇ ವೇಳೆ ಜನಪ್ರತಿನಿಧಿಗಳು ವಕೀಲರಾಗಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಸಲ್ಲಿಸಲಾಗಿದ್ದ ಅರ್ಜಿಗೆ ಕೋರ್ಟ್, ಎಲ್ಲಾ ಜನ ಪ್ರತಿನಿಧಿಗಳು ವಕೀಲರಾಗಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ನಿಷೇಧ ವಿಧಿಸಿಲ್ಲವದ್ದರಿಂದ ಜನಪ್ರತಿನಿಧಿಗಳು ತಮ್ಮ ಅಧಿಕಾರ ಅವಧಿಯಲ್ಲಿ ವಕೀಲರಾಗಿ ಮುಂದುವರಿಯಬಹುದು ಎಂದು ಸ್ಪಷ್ಟಪಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬಾಡಿಗಾರ್ಡ್ ಜೊತೆ ದಿಢೀರ್ ಮೈಸೂರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರೈ

    ಬಾಡಿಗಾರ್ಡ್ ಜೊತೆ ದಿಢೀರ್ ಮೈಸೂರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರೈ

    ಮೈಸೂರು: ಯಾವುದೇ ಬಾಡಿಗಾರ್ಡ್ ಇಲ್ಲದೆ ಇಷ್ಟು ದಿನ ರಾಜ್ಯ ಸುತ್ತುತ್ತಿದ್ದ ನಟ ಪ್ರಕಾಶ್ ರೈ ಈಗ ದಿಢೀರನೆ ಇಬ್ಬರು ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಗೆ ಬಾಡಿಗಾರ್ಡ್ ಜೊತೆಯಲ್ಲೇ ರೈ ಆಗಮಿಸಿದರು.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈ, ನನಗೆ ಯಾವಾಗ ಏನಾಗೋತ್ತೋ ಅನ್ನೋ ಆತಂಕ ಇದ್ದೇ ಇದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಬಾಡಿಗಾರ್ಡ್ ಜೊತೆಗಿಟ್ಟುಕೊಂಡಿದ್ದೇನೆ. ನನಗೆ ಭಯ ಇಲ್ಲ ಆದ್ರೆ ಜೀವದ ಬೆಲೆ ಗೊತ್ತಿದೆ. ಅದಕ್ಕೆ ಬಾಡಿಗಾರ್ಡ್ ಇಟ್ಟುಕೊಂಡಿದ್ದೇನೆ. ನನ್ನ ಕುಟುಂಬದ ರಕ್ಷಣೆಯನ್ನು ನೋಡಿಕೊಳ್ಳಬೇಕಿದೆ ಎಂದರು.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಿಜೆಪಿಯವರು ನಿಮ್ಮನ್ನ ಬದುಕೋಕೆ ಬಿಡ್ತಾರಾ ಅಂತ ಪ್ರಶ್ನೆ ಕೇಳಿದ್ರು. ಆದ್ರೆ ನನಗೆ ಭಯ ಇರೋದು ನನ್ನಂತವರು ಇರಲೇಬಾರದಾ ಅಂತ. ಅದಕ್ಕೆ ನಾನು ಕೋಮುವಾದದ ವಿರುದ್ಧ ಪ್ರಶ್ನೆ ಮಾಡುತ್ತಿದ್ದೇನೆ. ನನ್ನ ಹೋರಾಟಕ್ಕೆ ಸ್ಪಷ್ಟತೆ ಇದೆ. ನಾನು ಸಂಪೂರ್ಣ ಬಿಜೆಪಿ ವಿರೋಧಿ. ನನ್ನ ಹೋರಾಟದ ಹಾದಿಯಲ್ಲಿ ಬಿಜೆಪಿ ತಪ್ಪುಗಳೇ ಎದ್ದು ಕಾಣ್ತಿವೆ. ಅದಕ್ಕಾಗಿ ಅವರ ವಿರುದ್ಧ ಹೋರಾಟ ಮಾಡ್ತಿನಿ. ನನಗೆ ವಾಜಪೇಯಿ ಇದ್ದ ಬಿಜೆಪಿ ಬೇಕು. ನಾನು ವಿರೋಧಿಸುವ ಜನರನ್ನ ಬಿಜೆಪಿಯಿಂದ ತೆಗೆದು ಹಾಕಿದ್ರೆ ಅವರಿಗೆ ಬೆಂಬಲ ಕೊಡ್ತಿನಿ ಎಂದು ತಮ್ಮ ಜಸ್ಟ್ ಆಸ್ಕಿಂಗ್ ಅಭಿಯಾನದ ಬಗ್ಗೆ ಸಮರ್ಥನೆ ನೀಡಿದರು.

    ಮೈಸೂರು ಸಂಸದ ಪ್ರತಾಪ್‍ಸಿಂಹ ಅವರ ನಟ ರೈ ಕಾಗೆ ಎಂಬ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್‍ಸಿಂಹ ಹೇಳಿಕೆ ಚೆನ್ನಾಗಿದೆ. ನಾನು ಸಿಂಹ ಯಾವಾಗಾ ಬೇಕು ಅವಾಗ ಘರ್ಜಿಸುತ್ತೇನೆ ಎಂದಿದ್ದು ಉತ್ತಮ. ಆದ್ರೆ ಅವರ ತಿರುಗೇಟಿನಲ್ಲಿ ಆರೋಗ್ಯಕರ ಚರ್ಚೆ ಬದಲು ಡರ್ಟಿನೆಸ್ ಇದೆ. ಅದು ನನಗೆ ಇಷ್ಟ ಆಗೋಲ್ಲ. ಅವರ ಪದಬಳಕೆಯಲ್ಲೆ ಅವರ ಬ್ರೈನ್‍ನಲ್ಲಿ ಏನಿದೆ ಅಂತಾ ಗೊತ್ತಾಗುತ್ತೆ ಎಂದು ಟಾಂಗ್ ಕೊಟ್ಟರು.

    ಕಾವೇರಿ ನದಿ ನೀರು ವಿಚಾರದಲ್ಲಿ ನಟರಾದ ರಜನೀಕಾಂತ್, ಕಮಲ್ ಹಾಸನ್ ನೀಡಿರೋ ಹೇಳಿಕೆಗೆ ಗರಂ ಆಗಿಯೇ ಪ್ರತಿಕ್ರಿಯಿಸಿದ ರೈ, ರಜನಿಕಾಂತ್, ಕಮಲಹಾಸನ್ ದೊಡ್ಡ ನಟರಾದ ತಕ್ಷಣ ಬಾಯಿಗೆ ಬಂದ ಹಾಗೇ ಮಾತನಾಡಬಹುದೇ. ಅವರ ಮಾತನ್ನ ನಾನು ಯಾಕೇ ಕೇಳಬೇಕು? ಎಂದು ರಜನಿಕಾಂತ್ ಹಾಗೂ ಕಮಲಹಾಸನ್ ವಿರುದ್ಧ ಹರಿಹಾಯ್ದರು.

    ಕಾವೇರಿ ನದಿ ನೀರು ವಿಚಾರ ಟಿ20 ಮ್ಯಾಚ್ ಅಲ್ಲ. ಅವರು ಹೇಳಿಕೆ ನೀಡಿದ್ರು ಅಂತ ನಾ ಮಾತಾಡೋಕೆ ಆಗೋಲ್ಲ. ಅವರು ಹಾಗೇ ಹೇಳಿದ್ರೆ ನಾನು ಹೀಗೆ ಹೇಳ್ತಿನಿ ಅಷ್ಟೇ. ಅವರದ್ದೆ ಭಾಷೆಯಲ್ಲಿ ನಾನು ಉತ್ತರ ಕೊಡಬೇಕು ಅಂತ ಏನೂ ಇಲ್ಲ. ಮೊದಲು ನದಿ ಏನು ಹೇಳುತ್ತೆ ಕೇಳೋಣ. ಆಮೇಲೆ ನಾವು ಮಾತನಾಡೋಣ. ಅದು ಬಿಟ್ಟು ರಜನಿಕಾಂತ್ ಹೇಳಿಕೆಗೆ ಮರು ಹೇಳಿಕೆ ಕೊಟ್ಟು ನಾನು ಜಗಳ ಆಡೋಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ವ್ಯಕ್ತಿಗತವಾಗಿ ನನಗೆ ಇಷ್ಟ. ಆದರೆ, ಅವರ ಪರವಾಗಿ ನಾನು ಪ್ರಚಾರಕ್ಕೆ ಹೋಗಲ್ಲ. ಅವರೇ ಎಲ್ಲಾ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

    ಕರ್ನಾಟದಲ್ಲಿ ಕೋಮುವಾದಿಗಳ ರಾಜಕೀಯ ಬೇಡ. ಕೋಮುವಾದ ಬೇಡ ಎನ್ನುವ ರಾಜಕಾರಣಿಗಳನ್ನ ನೀವು ಆರಿಸಿಕೊಳ್ಳಿ. ನಾನೊಬ್ಬ ಮತದಾರನಾಗಿ ಬಂದಿದ್ದೇನೆ. ಜನರು ಹೇಳೊದನ್ನ ದೊಡ್ಡ ವೇದಿಕೆ ಸಿಗದೆ ನಿಮ್ಮ ಮುಂದೆ ಹೇಳಲು ಬಂದಿದ್ದೇನೆ. ಇತ್ತೀಚೆಗೆ ರಾಜ್ಯಪಾಲರೊಬ್ಬರು ಮಹಿಳೆಯೊಬ್ಬರನ್ನ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ಆಕೆ ನನ್ನ ಅನುಮತಿ ಇಲ್ಲದೆ ಹೇಗೆ ಮುಟ್ಟಿದ್ರಿ ಅನ್ನೋ ಪ್ರಶ್ನೆ ಮಾಡ್ತಾರೆ. ಇನ್ನೊಬ್ಬ ರಾಜಕಾರಣಿ ಹೆಣ್ಣುಮಕ್ಕಳು ದೊಡ್ಡ ಪತ್ರಕರ್ತರಾಗೋದು ದೊಡ್ಡವರ ಜೊತೆ ಮಲಗೋಕೆ ಅಂತಾರೇ. ಇವರೆಲ್ಲರನ್ನ ಕನಿಷ್ಠ ಪ್ರಶ್ನೆ ಮಾಡುವ ನೈತಿಕತೆ ನಿಮ್ಮ ಪಕ್ಷಗಳಿಗಿಲ್ಲ. ಇಂತಹ ರಾಜಕಾರಣಿಗಳು ನಮಗೆ ಬೇಕಿಲ್ಲ ಅಂತ ರೈ ಹೇಳಿದ್ದಾರೆ.

  • ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷ- ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ಚಾಲನೆ

    ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷ- ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ಚಾಲನೆ

    ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಒಂದರ ಹಿಂದೊಂದು ಹೊಸ ರಾಜಕೀಯ ಪಕ್ಷಗಳು ತಲೆ ಎತ್ತುತ್ತಿವೆ. ಹೊಸ ಪಕ್ಷಗಳ ಉದ್ಘಾಟನೆಗೆ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರದಲ್ಲಿ ಇಂದು ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷವೊಂದರ ಉದ್ಘಾಟನೆಗೆ ವೇದಿಕೆ ಸಜ್ಜಾಗಿದೆ. ಜನಸಾಮಾನ್ಯರ ಪಕ್ಷ ಎನ್ನುವ ಹೆಸರಿನಡಿ ಇದಕ್ಕೆ ಚಾಲನೆ ದೊರೆಯಲಿದೆ.

    ಜನಸಾಮಾನ್ಯರಿಂದ ಜನಸಾಮಾನ್ಯರಿಗಾಗಿ ನಮ್ಮ ಪಕ್ಷ ಎನ್ನುವುದು ಸಂಘಟಿಕರ ಘೋಷಣೆ ಆಗಿದೆ. ಇದೇ ಕಾರಣಕ್ಕೆ ಇಂದು ಪಕ್ಷದ ಉದ್ಘಾಟನೆಯನ್ನು ಸಹ ಜನಸಾಮಾನ್ಯರಿಂದಲೇ ಮಾಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸಮಾನತಾವಾದಿ ಅಣ್ಣ ಬಸವಣ್ಣನ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಬೆಳಗ್ಗೆ 11.30ಕ್ಕೆ ಹೊಸ ಪಕ್ಷಕ್ಕೆ ಚಾಲನೆ ದೊರೆಯಲಿದೆ.

    ಬಸ್ ನಿಲ್ದಾಣದ ಬಳಿಯ ಬಯಲು ಜಾಗದಲ್ಲಿ ಬೃಹತ್ ವೇದಿಕೆ ಹಾಕಲಾಗಿದ್ದು, ಅಂದಾಜು ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿ ಇದ್ದಾರೆ. 45 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಒಂದು ಲಕ್ಷ ಜನರಿಗೆ ಊಟಕ್ಕೆಂದು ಮಾದಲಿ, ಪಲಾವ್ ಮಾಡಲಾಗುತ್ತಿದೆ.