Tag: ರಾಘು ಜತೆ ಮಸೂದ್

  • ದೇಶದ ಮೊದಲ ಬಾಸ್ಕೆಟ್‌ಬಾಲ್‌ ಲೀಗ್‍ಗೆ ಅದ್ಧೂರಿ ಚಾಲನೆ

    ದೇಶದ ಮೊದಲ ಬಾಸ್ಕೆಟ್‌ಬಾಲ್‌ ಲೀಗ್‍ಗೆ ಅದ್ಧೂರಿ ಚಾಲನೆ

    ಬೆಂಗಳೂರು: ಬಾಸ್ಕೆಟ್‌ಬಾಲ್‌ ಪ್ರೇಮಿಗಳಿಗೆ ಇಂದು ಸಂತಸದ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ಟಿ20 ಲೀಗ್ ಐಪಿಎಲ್ ಮಾದರಿಯಲ್ಲೇ ಬಾಸ್ಕೆಟ್‌ಬಾಲ್‌ ಲೀಗ್ (INBL) ಸಹ ನಡೆಯಲಿದೆ. ಬೆಂಗಳೂರಿನಲ್ಲಿಂದು ಭಾರತೀಯ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಲೀಗ್ ಉದ್ಘಾಟನೆ ಮತ್ತು ಲೋಗೋ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

    ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಕ್ರೀಡೆಗಳಲ್ಲಿ ಬಾಸ್ಕೆಟ್‍ಬಾಲ್ ಸಹ ಒಂದು. ದೇಶದ ಬಾಸ್ಕೆಟ್‍ಬಾಲ್ ಕ್ರೀಡೆಯಲ್ಲಿ ಈಗ ಕ್ರಾಂತಿಕಾರಕ ಬದಲಾವಣೆ ಆಗ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಬಿಎಫ್‍ಐಯು, ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 (IPL) ರೀತಿ ಭಾರತೀಯ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಲೀಗ್ ಆರಂಭಿಸಿದೆ. ಮೊದಲ ಬಾಸ್ಕೆಟ್‌ಬಾಲ್‌ ಲೀಗ್ ಅನ್ನು ಇಂದು ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ಭಾರತೀಯ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಲೀಗ್‍ಗೆ ಚಾಲನೆ ನೀಡಿದರು. ಈ ಟೂರ್ನಿಯ ಉದ್ಘಾಟನಾ ಸಮಾರಂಭ ಇವತ್ತು ನಡೆದರೂ, ಇದರ ಚೊಚ್ಚಲ ಆವೃತ್ತಿಯು 2022ರ ಜನವರಿ-ಫೆಬ್ರವರಿಯಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 9 ಪುರುಷ, 9 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಇದನ್ನೂ ಓದಿ: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ

    ಇದೇ ವೇಳೆ ಬಾಸ್ಕೆಟ್‌ಬಾಲ್‌ ಟೂರ್ನಿಯ ಡೆಮೋ ಪಂದ್ಯವನ್ನು ಪ್ರದರ್ಶಿಸಲಾಯಿತು. ಬಳಿಕ ಮಾತಾಡಿದ ನಟ ಯಶ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಸೋಲು ಗೆಲುವಿನ ಬಗ್ಗೆ ಕಿವಿ ಮಾತು ಹೇಳಿದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

    ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಸ್ಲಂ ಡಾಗ್ ಮಿಲೆನಿಯರ್ ಚಿತ್ರದ ಜೈಹೋ ಹಾಡುವ ಹಾಡುವ ಮೂಲಕ ರಂಜಿಸಿದರು. ವೀಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಕ್ರೀಡಾಭಿಮಾನಿಗಳು, ವಿದ್ಯಾರ್ಥಿಗಳು ಜೈ ಹೋ ಹಾಡಿಗೆ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡಿದರು. ಕಾರ್ಯಕ್ರಮದಲ್ಲಿ ನಟ ದಿ. ಪುನೀತ್ ರಾಜ್ ಕುಮಾರ್‍ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಲ್‍ಇಡಿ ಪರದೆಗಳ ಮೇಲೆ ಪುನೀತ್ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಸಿಎಂ ಬೊಮ್ಮಾಯಿ ಮನವಿ ಮೇರೆಗೆ ಗಾಯಕ ವಿಜಯ್ ಪ್ರಕಾಶ್ ಪುನೀತ್‍ರ ಬೊಂಬೆ ಹೇಳುತೈತೆ ಹಾಡನ್ನು ಹಾಡುವ ಮೂಲಕ ಪುನೀತ್‍ಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

    ಐಎನ್‍ಬಿಎಲ್ ಉದ್ಘಾಟನೆ ಬಳಿಕ 24 ತಂಡಗಳ ಪ್ರದರ್ಶನ ಟೂರ್ನಿಯನ್ನು ಬಿಎಫ್‍ಐ ಆಯೋಜಿಸಿತ್ತು. ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ನಟ ಯಶ್, ಗಾಯಕ ವಿಜಯ್ ಪ್ರಕಾಶ್, ಬಿಎಫ್‍ಐ ಅಧ್ಯಕ್ಷ ಗೋವಿಂದ ರಾಜ್, ಸಚಿವರಾದ ನಾರಾಯಣಗೌಡ, ಶಂಕರ್ ಪಾಟೀಲ್ ಮುನೇನಕೊಪ್ಪ ಮತ್ತಿತರ ಗಣ್ಯರು ಪಾಲ್ಗೋಂಡಿದ್ದರು.