Tag: ರಾಘವ್ ಛಡ್ಡಾ

  • ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ನವದೆಹಲಿ: ಕೇಂದ್ರ ಗೃಹ ಸಚಿವರೇ (ಅಮಿತ್‌ ಶಾ) ಈ ಗಲಭೆಗಳನ್ನು ರೂಪಿಸುತ್ತಿದ್ದಾರೆ. ಬುಲ್ಡೋಜರ್ ಬಳಸುವುದಾದರೆ ಗೃಹ ಸಚಿವರ ಮನೆ ನೆಲಸಮ ಮಾಡಲು ಬಳಸಿ ಎಂದು ಎಎಪಿ ಸಂಸದ ರಾಘವ್‌ ಛಡ್ಡಾ ಕಿಡಿಕಾರಿದ್ದಾರೆ.

    ಜಹಾಂಗೀರ್‌ಪುರಿಯಲ್ಲಿ ದೆಹಲಿ ಉತ್ತರ ಪಾಲಿಕೆ ನಡೆಸಿದ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಛಡ್ಡಾ ಅವರು, ಕೇಂದ್ರ ಗೃಹ ಸಚಿವರೇ ಗಲಭೆಗಳನ್ನು ರೂಪಿಸುತ್ತಿದ್ದಾರೆ. ಅವರ ಮನೆ ಧ್ವಂಸ ಮಾಡಲು ಬುಲ್ಡೋಜರ್‌ ಬಳಸಿ. ಆಗ ಗಲಭೆಗಳು ನಿಲ್ಲುತ್ತವೆ ಎಂದು ಬಿಜೆಪಿ ನೇತೃತ್ವದ ಪಾಲಿಕೆಗೆ ಕುಟುಕಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

    ಬಿಜೆಪಿಯು ಕಳೆದ ಎಂಟು ವರ್ಷಗಳಲ್ಲಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳಿಗೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಿದೆ. ಅವರನ್ನು ಕೇವಲ ಕೋಮುಗಲಭೆ ಸೃಷ್ಟಿಸಲು ಬಳಸಲಾಗುತ್ತಿದೆ. ಮುಂದಿನ ಗಲಭೆಗಳ ಸ್ಥಳದ ಬಗ್ಗೆ ನಿಮಗೆ ತಿಳಿಯಬೇಕಾದರೆ, ಬಾಂಗ್ಲಾದೇಶಿಗಳು ಮತ್ತು ರೊಹಿಂಗ್ಯಾಗಳನ್ನು ಎಲ್ಲಿ ಸ್ಥಳಾಂತರಿಸಿದ್ದಾರೆ ಎಂಬ ಪಟ್ಟಿಯನ್ನು ಬಿಜೆಪಿಯಿಂದ ಕೇಳಿ ಎಂದು ತಿಳಿಸಿದ್ದಾರೆ.

    ಬಿಜೆಪಿಯವರು 15 ವರ್ಷಗಳ ಕಾಲ ನಗರಸಭೆಯಲ್ಲಿ ಆಡಳಿತ ನಡೆಸಿದ್ದು, ಬಿಜೆಪಿ ನಾಯಕರು ಲಂಚ ಪಡೆದು ಅಕ್ರಮ ಕಟ್ಟಡಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಈ ಅಕ್ರಮ ಕಟ್ಟಡಗಳನ್ನು ಕೆಡವಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಲು ಲಂಚ ಪಡೆದ ಬಿಜೆಪಿ ನಾಯಕರ ಮನೆಗಳನ್ನೂ ಕೆಡವಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ: ರಾಹುಲ್ ಗಾಂಧಿ

    ಹನುಮ ಜಯಂತಿ ವೇಳೆ ಗಲಭೆಗೆ ಕಾರಣವಾದ ಜಹಾಂಗೀರ್‌ಪುರಿಯಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಬಿಜೆಪಿ ನೇತೃತ್ವದ ಉತ್ತರ ದೆಹಲಿ ಪಾಲಿಕೆ ಕ್ರಮಕೈಗೊಂಡಿತ್ತು. ಬುಲ್ಡೋಜರ್‌ ಮೂಲಕ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ ಕಾರ್ಯಾಚರಣೆಗೆ ತಡೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆ ನಡೆಸಲಿದೆ.

  • ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ 25,000 ಬಹುಮಾನ: ಎಎಪಿ

    ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ 25,000 ಬಹುಮಾನ: ಎಎಪಿ

    ಚಂಢೀಗಢ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತಿಯೊಂದು ಪ್ರಕರಣಕ್ಕೆ ಅವರಿಗೆ 25,000 ಬಹುಮಾನ ನೀಡುವುದಾಗಿ ಆಮ್ ಆದ್ಮಿ ಹೇಳಿದೆ.

    ಮರಳು ಅಕ್ರಮ ಗಣಿಗಾರಿಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪುರಾವೆ ಕೊಟ್ಟವರಿಗೆ 25,000 ಬಹುಮಾನ ನೀಡಲಾಗುವುದು ಎಂದು ಚನ್ನಿ ಗುರುವಾರವಷ್ಟೇ ಹೇಳಿದ್ದರು. ಅವರು ಈ ಘೋಷಣೆ ಮಾಡಿದ ಮರುದಿನ ಸುದ್ದಿಗೋಷ್ಠಿ ನಡೆಸಿದ ಎಎಪಿ ವಕ್ತಾರ ರಾಘವ್ ಛಡ್ಡಾ, ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತಿಯೊಂದು ಪ್ರಕರಣಕ್ಕೆ ಅವರಿಗೆ 25,000 ಬಹುಮಾನ ನೀಡುವುದಾಗಿ ಸವಾಲು ಎಸೆದಿದ್ದಾರೆ. ಮರಳು ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ನಿಜವಾದ ಉದ್ದೇಶವಾಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇದನ್ನೂ ಓದಿ:  ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ

    ಚನ್ನಿ ಅವರ ವಿಧಾನಸಭೆ ಕ್ಷೇತ್ರವಾದ ರಾಮ್‍ಪಂತ್‍ನಲ್ಲಿಯೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಕೇವಲ ಐದು ನಿಮಿಷಗಳಲ್ಲಿ ಮುಖ್ಯಮಂತ್ರಿ  ಅವರು ಪಡೆಯಬಹುದು. ನೀವು ನನ್ನ ಜೊತೆ ಬನ್ನಿ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ನಾನು ನಿಮಗೆ ತೋರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.  ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ

    ನಿಮ್ಮ ಕ್ಷೇತ್ರದ ಜಿಂದಾಪುರ್ ಪಿಂಡ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ನಾನು ನಿಮಗೆ ಪುರಾವೆಗಳನ್ನು, ನಿಮ್ಮ ವಿರುದ್ಧವೇ ಮೊದಲು ಎಫ್‍ಐಆರ್ ದಾಖಲಿಸಿಕೊಳ್ಳಿ. ಮುಖ್ಯಮಂತ್ರಿಯೇ ಅಕ್ರಮ ಗಣಿಗಾರಿಕೆಯ ಅತಿದೊಡ್ಡ ಮಾಫಿಯಾ ಆದಂತಿದೆ. ಚನ್ನಿ ಅವರ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಬಹಿರಂಗಪಡಿಸಿದ್ದೇವೆ ಎಂದು  ಛಡ್ಡಾ ಹೇಳಿದ್ದರು.