Tag: ರಾಘವ್ ಚಡ್ಡಾ

  • ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಬಾಲಿವುಡ್‌ನ (Bollywood) ನಯಾ ಜೋಡಿ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ (Parineethi Chopra) ಇತ್ತೀಚಿಗೆ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಆಗಿದ್ದರು. ನಿಶ್ಚಿತಾರ್ಥದ ಬೆನ್ನಲ್ಲೇ ಈ ಪ್ರೇಮ ಪಕ್ಷಿಗಳು ಕೈ ಕೈ ಹಿಡಿದು ಓಡಾಡಲು ಆರಂಭಿಸಿದ್ರು. ಇದೀಗ ಈ ಜೋಡಿ ಜೊತೆಯಾಗಿ ಅಮೃತಸರ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್‌ ಬಾಯ್‌ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಎಂಟ್ರಿ

    ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಪರಿಣಿತಿ ಚೋಪ್ರಾ ಪ್ರೀತಿಸಿ ಇದೀಗ ಹೊಸ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮೇ 13ರಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಸದ್ಯದಲ್ಲೇ ಹಸೆಮಣೆಗೆ (Wedding) ಏರಲಿದ್ದಾರೆ. ಈ ಬೆನ್ನಲ್ಲೇ ಅಮೃತಸರ ಗೋಲ್ಡನ್ ಟೆಂಪಲ್ (Golden Temple) ಭೇಟಿ ನೀಡಿ, ಅಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮದುವೆಗೂ ಮೊದಲು ಪರಿಣಿತಿ ಮತ್ತು ರಾಘವ್ ಚಡ್ಡಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಪರಿಣೀತಿ ಮತ್ತು ರಾಘವ್ ಇಬ್ಬರೂ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಪಾತ್ರೆ ತೊಳೆಯುವ ಸೇವೆ ಸಲ್ಲಿಸಿದ್ದಾರೆ. ಭಕ್ತರ ಜೊತೆ ಸೇರಿ ರಾಘವ್ ಮತ್ತು ಪರಿಣಿತಿ ಕೂಡ ಪಾತ್ರ ತೊಳೆಯುತ್ತಿದ್ದಾರೆ. ಇಬ್ಬರೂ ಬಿಳಿ ಬಣ್ಣದ ಬಟ್ಟೆ ಧರಿಸಿದ್ದಾರೆ. ಇಬ್ಬರ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ನೆಟ್ಟಿಗರು ರಾಘವ್ ಮತ್ತು ಪರಿಣಿತಿ ಜೋಡಿಯನ್ನು ಹೊಗಳುತ್ತಿದ್ದಾರೆ. ಡೌನ್ ಟು ಅರ್ಥ್ ಜೋಡಿ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಸ್ಥಾನದಲ್ಲಿ ನಡೆಯಲಿದೆ ಪರಿಣಿತಿ- ರಾಘವ್ ಮದುವೆ

    ರಾಜಸ್ಥಾನದಲ್ಲಿ ನಡೆಯಲಿದೆ ಪರಿಣಿತಿ- ರಾಘವ್ ಮದುವೆ

    ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadda) ಇತ್ತೀಚಿಗಷ್ಟೇ ಉಂಗುರ ಬದಲಿಸುವ ಮೂಲಕ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ರಾಜಸ್ಥಾನದಲ್ಲಿ ಪರಿಣಿತಿ- ರಾಘವ್ ಮದುವೆ ನಡೆಯಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    ಬಿಟೌನ್ ‘ಲವ್ ಬರ್ಡ್ಸ್’ ರಾಘವ್ – ಪರಿಣಿತಿ ಚೋಪ್ರಾ (Parineeti Chopra) ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ದೆಹಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮೇ 13ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಈ ಜೋಡಿಯ ಮದುವೆ ಯಾವಾಗ? ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಉದಯ್‌ಪುರ, ಜೈಪುರ ಸೇರಿದಂತೆ ಹಲವು ಕಡೆ ಪರಿಣಿತಿ ಜೋಡಿ ಮದುವೆ ಸ್ಥಳ ನೋಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ (Rajasthan) ಮದುವೆ ಸ್ಥಳ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ಅದ್ದೂರಿ ಮದುವೆಯಾಗಲು ಈ ಜೋಡಿ ನಿರ್ಧಾರ ಮಾಡಿದ್ದಾರೆ.

    ಪರಿಣಿತಿ- ರಾಘವ್ ಮದುವೆಯಲ್ಲಿ ರಾಜಕೀಯ- ಬಾಲಿವುಡ್ ಗಣ್ಯರ ದಂಡೇ ಇರಲಿದೆ. ಮದುವೆಗೆ ಈಗಿಂದಲೇ ಸಿದ್ಧತೆ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.

  • ನಟಿ ಪರಿಣಿತಿ- ರಾಘವ್ ಚಡ್ಡಾ ಎಂಗೇಜ್‌ಮೆಂಟ್‌ ಗ್ಯಾಲರಿ

    ನಟಿ ಪರಿಣಿತಿ- ರಾಘವ್ ಚಡ್ಡಾ ಎಂಗೇಜ್‌ಮೆಂಟ್‌ ಗ್ಯಾಲರಿ

    ಬಾಲಿವುಡ್ (Bollywood) ಅಂಗಳದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಬ್ಬರು ಹಸೆಮಣೆ ಏರುತ್ತಿದ್ದಾರೆ. ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ, ಸಿದ್- ಕಿಯಾರಾ ಜೋಡಿ ಇತ್ತೀಚಿಗೆ ಮದುವೆಯಾಗಿದ್ದರು. ಇದೀಗ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದರು. ಇದೀಗ ಎಂಗೇಜ್‌ಮೆಂಟ್ ಸಂಭ್ರಮ ಹೇಗಿತ್ತು ಎಂಬ ಮತ್ತೊಂದಿಷ್ಟು ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ನಟಿ ಪರಿಣಿತಾ ಚೋಪ್ರಾ (Parineeti Chopra) ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಸೌಂದರ್ಯ- ಪ್ರತಿಭೆ ಎರಡು ಇದ್ದರೂ ಒಳ್ಳೆಯ ಸಿನಿಮಾಗಳು ಪರಿಣಿತಿ ಚೋಪ್ರಾಗೆ ಸಿಗುತ್ತಿಲ್ಲ. ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.

     

    View this post on Instagram

     

    A post shared by @parineetichopra

    ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಇಬ್ಬರು ಲಂಡನ್‌ನಲ್ಲಿ ಒಟ್ಟಿಗೆ ಓದಿದ್ದರು. ಹಾಗಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಮೇ 13ರಂದು ದೆಹಲಿಯಲ್ಲಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡರು. ಈ ಸಂಭ್ರಮದಲ್ಲಿ ಸಹೋದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಭಾಗಿಯಾಗಿದ್ದರು.

     

    View this post on Instagram

     

    A post shared by @parineetichopra

    ಸದ್ಯ ರಾಘವ್- ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಫೋಟೋಗಳು ಎಲ್ಲೆಡೆ ಸದ್ದು ಮಾಡ್ತಿದೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

  • ಎಂಗೇಜ್ ಆಗಿ ಲಿಪ್ ಲಾಕ್ ಮಾಡಿಕೊಂಡ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಎಂಗೇಜ್ ಆಗಿ ಲಿಪ್ ಲಾಕ್ ಮಾಡಿಕೊಂಡ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಬಾಲಿವುಡ್ ನ ಮತ್ತೋರ್ವ ತಾರೆಯ ನಿಶ್ಚಿತಾರ್ಥವಾಗಿದೆ. ಮೂರು ದಿನಗಳ ಹಿಂದೆಯಷ್ಟೇ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಎಂಗೇಜ್ ಮೆಂಟ್ ದಿನ ಪರಿಣಿತಿ ಹಾಗೂ ರಾಘವ್ ಲಿಪ್ ಲಾಕ್ (Lip Lock) ಮಾಡಿಕೊಂಡ ವಿಡಿಯೋ ಸಖತ್ ವೈರಲ್ ಆಗಿದೆ. ಇಬ್ಬರೂ ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

    ಪರಿಣಿತಿ ಚೋಪ್ರಾ (Parineeti Chopra) ಹಾಗೂ ಸಂಸದ ರಾಘವ್ ಚಡ್ಡಾ (Raghav Chadha) ಎಂಗೇಜ್ ಮೆಂಟ್ (Engagement) ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಷಯ ಈ ಸುದ್ದಿಗೆ ಪುಷ್ಠಿ ಕೊಟ್ಟಿತ್ತು. ಆದರೆ, ಅವರು ಈ ವಿಷಯವನ್ನು ನಿರಾಕರಿಸುತ್ತಲೇ ಬಂದಿದ್ದರು. ಇದೀಗ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

    ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಂದಲ್ಲಿ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳ ಭಾಗಿಯಾಗಿದ್ದರು. ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಇಡೀ ಸಮಾರಂಭದಲ್ಲಿ ಮಿಂಚಿದ್ದಾರೆ. ದೆಹಲಿಯ (Delhi) ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ನಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ:ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬದಿಂದ 150 ಜನರಷ್ಟೇ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಿತಿ, ಮನೀಷ್ ಮಲ್ಹೋತ್ರಾ ಬಳಿ ಸರಳವಾಗಿ ಡ್ರೆಸ್ ಮಾಡಿಸಿದ್ದರು. ರಾಘವ್, ಅವರ ಚಿಕ್ಕಪ್ಪ ಪವನ್ ಸಚ್‌ದೇವ್ ಬಳಿ ನಿಶ್ಚಿತಾರ್ಥಕ್ಕೆ ಔಟ್ ಫಿಟ್ ಡಿಸೈನ್ ಮಾಡಿಸಲಾಗಿತ್ತು.‌

    ನಟಿ ಪರಿಣಿತಿ(Parineeti Chopra), ರಾಜಕಾರಣಿ ರಾಘವ್ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್‌ ಕುಮಾರ್ ಸೇರಿದಂತೆ ಹಲವು ಸಿನಿಮಾ ಸ್ಟಾರ್‌ಗಳು, ರಾಜಕೀಯ ಗಣ್ಯರು ಭಾಗಿಯಾಗಿದ್ದರು.

    ಹರಿಯಾಣದಲ್ಲಿ ನಡೆದ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿ ಆನಂತರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೋಷಕರ ಒಪ್ಪಿಗೆ ಪಡೆದುಕೊಂಡೇ ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಘವ್ ಚಡ್ಡಾ ಆಪ್ ಪಕ್ಷದಿಂದ ಎಂಪಿ ಆಗಿದ್ದರೆ, ಪರಿಣಿತಿ ಲೇಡಿಸ್ ವರ್ಸಸ್ ರಿಕ್ಕಿ ಬೇಲ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗಲೂ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  • ನಿಶ್ಚಿತಾರ್ಥಕ್ಕೆ ದುಬಾರಿ ರಿಂಗ್ ಖರೀದಿಸಿದ ನಟಿ ಪರಿಣಿತಿ ಚೋಪ್ರಾ

    ನಿಶ್ಚಿತಾರ್ಥಕ್ಕೆ ದುಬಾರಿ ರಿಂಗ್ ಖರೀದಿಸಿದ ನಟಿ ಪರಿಣಿತಿ ಚೋಪ್ರಾ

    ನಿನ್ನೆಯಷ್ಟೇ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ. ಎಂಗೇಜ್ ಮೆಂಟ್ ಗಾಗಿ ಅವರು ದುಬಾರಿ ರಿಂಗ್ (Ring) ಖರೀದಿ ಮಾಡಿದ್ದು, ವಜ್ರಸಹಿತ ಉಂಗುರ ಅದಾಗಿದೆ ಎಂದು ವರದಿಯಾಗಿದೆ. ತಮ್ಮ ಬಾಳಸಂಗಾತಿಗೆ ನಿನ್ನೆ ಪರಿಣಿತಾ ಚೋಪ್ರಾ ತೊಡಿಸಿರುವ ರಿಂಗಿನ ಬೆಲೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತಿದ್ದು, ಅದು ಸಾಲಿಟೇರ್ ವಜ್ರದಿಂದ ನಿರ್ಮಾಣವಾಗಿದೆಯಂತೆ.

    ಪರಿಣಿತಿ ಚೋಪ್ರಾ (Parineeti Chopra) ಹಾಗೂ ಸಂಸದ ರಾಘವ್ ಚಡ್ಡಾ (Raghav Chadha) ಎಂಗೇಜ್ ಮೆಂಟ್ (Engagement) ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಷಯ ಈ ಸುದ್ದಿಗೆ ಪುಷ್ಠಿ ಕೊಟ್ಟಿತ್ತು. ಆದರೆ, ಅವರು ಈ ವಿಷಯವನ್ನು ನಿರಾಕರಿಸುತ್ತಲೇ ಬಂದಿದ್ದರು. ಇದೀಗ ಸದ್ದಿಲ್ಲದೇ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದಾರೆ.

    ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಂದಲ್ಲಿ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳ ಭಾಗಿಯಾಗಿದ್ದರು. ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಇಡೀ ಸಮಾರಂಭದಲ್ಲಿ ಮಿಂಚಿದ್ದಾರೆ. ದೆಹಲಿಯ (Delhi) ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ನಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬದಿಂದ 150 ಜನರಷ್ಟೇ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಿತಿ, ಮನೀಷ್ ಮಲ್ಹೋತ್ರಾ ಬಳಿ ಸರಳವಾಗಿ ಡ್ರೆಸ್ ಮಾಡಿಸಿದ್ದರು. ರಾಘವ್, ಅವರ ಚಿಕ್ಕಪ್ಪ ಪವನ್ ಸಚ್‌ದೇವ್ ಬಳಿ ನಿಶ್ಚಿತಾರ್ಥಕ್ಕೆ ಔಟ್ ಫಿಟ್ ಡಿಸೈನ್ ಮಾಡಿಸಲಾಗಿತ್ತು.‌

    ನಟಿ ಪರಿಣಿತಿ(Parineeti Chopra), ರಾಜಕಾರಣಿ ರಾಘವ್ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್‌ ಕುಮಾರ್ ಸೇರಿದಂತೆ ಹಲವು ಸಿನಿಮಾ ಸ್ಟಾರ್‌ಗಳು, ರಾಜಕೀಯ ಗಣ್ಯರು ಭಾಗಿಯಾಗಿದ್ದರು.

    ಹರಿಯಾಣದಲ್ಲಿ ನಡೆದ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿ ಆನಂತರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೋಷಕರ ಒಪ್ಪಿಗೆ ಪಡೆದುಕೊಂಡೇ ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಘವ್ ಚಡ್ಡಾ ಆಪ್ ಪಕ್ಷದಿಂದ ಎಂಪಿ ಆಗಿದ್ದರೆ, ಪರಿಣಿತಿ ಲೇಡಿಸ್ ವರ್ಸಸ್ ರಿಕ್ಕಿ ಬೇಲ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗಲೂ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ

  • ಸದ್ದಿಲ್ಲದೇ ಎಂಗೇಜ್ ಆದ ನಟಿ ಪರಿಣಿತಿ ಚೋಪ್ರಾ

    ಸದ್ದಿಲ್ಲದೇ ಎಂಗೇಜ್ ಆದ ನಟಿ ಪರಿಣಿತಿ ಚೋಪ್ರಾ

    ಬಾಲಿವುಡ್ ನ (Bollywood) ಖ್ಯಾತ ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಸಂಸದ ರಾಘವ್ ಚಡ್ಡಾ (Raghav Chadha) ಎಂಗೇಜ್ ಮೆಂಟ್ (Engagement) ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಷಯ ಈ ಸುದ್ದಿಗೆ ಪುಷ್ಠಿ ಕೊಟ್ಟಿತ್ತು. ಆದರೆ, ಅವರು ಈ ವಿಷಯವನ್ನು ನಿರಾಕರಿಸುತ್ತಲೇ ಬಂದಿದ್ದರು. ಇದೀಗ ಸದ್ದಿಲ್ಲದೇ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದಾರೆ.

    ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಂದಲ್ಲಿ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳ ಭಾಗಿಯಾಗಿದ್ದರು. ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಇಡೀ ಸಮಾರಂಭದಲ್ಲಿ ಮಿಂಚಿದ್ದಾರೆ. ದೆಹಲಿಯ (Delhi) ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ನಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಉಂಗುರ ಬದಲಾಯಿಸಿಕೊಂಡಿದ್ದಾರೆ.

    ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬದಿಂದ 150 ಜನರಷ್ಟೇ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಿತಿ, ಮನೀಷ್ ಮಲ್ಹೋತ್ರಾ ಬಳಿ ಸರಳವಾಗಿ ಡ್ರೆಸ್ ಮಾಡಿಸಿದ್ದರು. ರಾಘವ್, ಅವರ ಚಿಕ್ಕಪ್ಪ ಪವನ್ ಸಚ್‌ದೇವ್ ಬಳಿ ನಿಶ್ಚಿತಾರ್ಥಕ್ಕೆ ಔಟ್ ಫಿಟ್ ಡಿಸೈನ್ ಮಾಡಿಸಲಾಗಿತ್ತು.‌

    ನಟಿ ಪರಿಣಿತಿ(Parineeti Chopra), ರಾಜಕಾರಣಿ ರಾಘವ್ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್‌ ಕುಮಾರ್ ಸೇರಿದಂತೆ ಹಲವು ಸಿನಿಮಾ ಸ್ಟಾರ್‌ಗಳು, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಹರಿಯಾಣದಲ್ಲಿ ನಡೆದ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿ ಆನಂತರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೋಷಕರ ಒಪ್ಪಿಗೆ ಪಡೆದುಕೊಂಡೇ ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಘವ್ ಚಡ್ಡಾ ಆಪ್ ಪಕ್ಷದಿಂದ ಎಂಪಿ ಆಗಿದ್ದರೆ, ಪರಿಣಿತಿ ಲೇಡಿಸ್ ವರ್ಸಸ್ ರಿಕ್ಕಿ ಬೇಲ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗಲೂ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  • ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ತಯಾರಿ ಹೇಗಿದೆ, ಯಾರಿರುತ್ತಾರೆ?

    ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ತಯಾರಿ ಹೇಗಿದೆ, ಯಾರಿರುತ್ತಾರೆ?

    ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಮದುವೆ ಸುದ್ದಿ ಸದ್ಯ ಬಿಟೌನ್ ಅಂಗಳದಲ್ಲಿ ಸದ್ದು ಮಾಡ್ತಿದೆ. ಅದ್ದೂರಿ ಎಂಗೇಜ್‌ಮೆಂಟ್‌ಗೆ ಯಾರೆಲ್ಲಾ ಭಾಗಿಯಾಗ್ತಿದ್ದಾರೆ? ಪರಿಣಿತಿ ಜೋಡಿ ಔಟ್‌ಫಿಟ್ ಲುಕ್ ಹೇಗಿರಲಿದೆ ಎಂಬುದರ ಡಿಟೈಲ್ಸ್ ಇಲ್ಲಿದೆ.

    ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಕಿಯಾರಾ- ಸಿದ್ ಮದುವೆ ನಂತರ ಪರಿಣಿತಿ ಚೋಪ್ರಾ ಮದುವೆ ಸಂಭ್ರಮ ಬಾಲಿವುಡ್ ರಂಗದಲ್ಲಿ ಮನೆ ಮಾಡಿದೆ. ಪ್ರಿಯಾಂಕಾ ಚೋಪ್ರಾ (Priyanka Chopra) ಸಹೋದರ ಸಂಬಂಧಿ ಪರಿಣಿತಿ ಅವರು ಸಿನಿಮಾಗೆ ಬ್ರೇಕ್ ಹಾಕಿ, ವೈಯಕ್ತಿಕ ಜೀವನದತ್ತ ಗಮನ ಕೊಡುತ್ತಿದ್ದಾರೆ.

    ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಇದೇ ಮೇ 13ಕ್ಕೆ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಪರಿಣಿತಿ -ರಾಘವ್ ಎಂಗೇಜ್‌ಮೆಂಟ್ (Engagement) ನಡೆಯುತ್ತಿದೆ. 2 ಕುಟುಂಬದಿಂದ 150 ಜನರಷ್ಟೇ ಭಾಗಿಯಾಗುತ್ತಿದ್ದಾರೆ. ಪರಿಣಿತಿ, ಮನೀಷ್ ಮಲ್ಹೋತ್ರಾ ಬಳಿ ಸರಳವಾಗಿ ಡ್ರೆಸ್ ಮಾಡಿಸಿದ್ದಾರೆ. ರಾಘವ್, ಅವರ ಚಿಕ್ಕಪ್ಪ ಪವನ್ ಸಚ್‌ದೇವ್ ಬಳಿ ನಿಶ್ಚಿತಾರ್ಥಕ್ಕೆ ಔಟ್ ಫಿಟ್ ಡಿಸೈನ್ ಮಾಡಿಸಲಾಗಿದೆ.‌ ಇದನ್ನೂ ಓದಿ:ಯಶ್ 19 ಅಲ್ಲ, ಯಶ್ 37 : ಜೋಕ್ ಮಾಡಿ ಹೊರಟೇ ಬಿಟ್ಟ ಯಶ್

    ನಟಿ ಪರಿಣಿತಿ(Parineeti Chopra), ರಾಜಕಾರಣಿ ರಾಘವ್ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್‌ ಕುಮಾರ್ ಸೇರಿದಂತೆ ಹಲವು ಸಿನಿಮಾ ಸ್ಟಾರ್‌ಗಳು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

  • ಜೊತೆಯಾಗಿ IPL ಮ್ಯಾಚ್ ವೀಕ್ಷಿಸಿದ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಜೊತೆಯಾಗಿ IPL ಮ್ಯಾಚ್ ವೀಕ್ಷಿಸಿದ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಇದೇ ಮೇ 13ಕ್ಕೆ ಎಂಗೇಜ್‌ಮೆಂಟ್ ನಿಗದಿಯಾಗಿದೆ. ಈ ಸುದ್ದಿ ಬೆನ್ನಲ್ಲೇ ಒಟ್ಟಾಗಿ ಐಪಿಎಲ್ ಮ್ಯಾಚ್‌ನ ಪರಿಣಿತಿ-ರಾಘವ್ ವೀಕ್ಷಿಸಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    A post shared by Viral Bhayani (@viralbhayani)

    ಪರಿಣಿತಿ- ರಾಘವ್ ಚಡ್ಡಾ ಜೋಡಿ ಹಲವು ದಿಣಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರೂ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ. ಆದರೆ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮೇ 13ಕ್ಕೆ ಎಂಗೇಜ್‌ಮೆಂಟ್ ನಿಗದಿಯಾಗಿದೆ. ಈ ಶುಭಸುದ್ದಿ ಬೆನ್ನಲ್ಲೇ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

    ಮೊಹಾಲಿಯಲ್ಲಿ ಬುಧವಾರ(ಮೇ 3)ರಂದು ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆದಿದೆ. IPL ಮ್ಯಾಚ್ ನೋಡಲು ಪರಿಣಿತಿ-ರಾಘವ್ ಆಗಮಿಸಿದ್ದರು. ಮ್ಯಾಚ್ ನೋಡುತ್ತಾ ಚಿಲ್ ಮಾಡಿದ್ದಾರೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರು. ಇದೀಗ ಈ ಕುರಿತ ಫೋಟೋ ಸಖತ್ ಸದ್ದು ಮಾಡ್ತಿದೆ. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ನಿಷೇಧಕ್ಕೆ ಹೆಚ್ಚಿದ ಒತ್ತಡ: ನಾಳೆ ಸಿನಿಮಾ ರಿಲೀಸ್

    ಮ್ಯಾಚ್ ನೋಡಲು ಬಂದ ಪ್ರೇಕ್ಷಕರು ಕೂಡ ಪರಿಣಿತಿ (Parineeti Chopra) ಜೋಡಿ ನೋಡಿ ಕೂಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.

  • ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್

    ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್

    ಥಿಯಾ ಶೆಟ್ಟಿ- ರಾಹುಲ್, ಸಿದ್- ಕಿಯಾರಾ ಬಳಿಕ ರಾಜಕಾರಣಿ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ (Parineeti Chopra) ಜೋಡಿ ಮದುವೆ ವಿಚಾರ ಚಾಲ್ತಿಯಲ್ಲಿದೆ. ಇದೀಗ ರಾಘವ್ – ಪರಿಣಿತಿ ಎಂಗೇಜ್‌ಮೆಂಟ್‌ಗೆ ಸಕಲ ಸಿದ್ಧತೆ ನಡೆಯುತ್ತಿದೆ.

    ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಇತ್ತೀಚಿಗೆ ರೆಸ್ಟೋರೆಂಟ್‌ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಮತ್ತೆ ಹಲವು ಸ್ಥಳಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಇಬ್ಬರ ಮದುವೆ ಸುದ್ದಿ ಸದ್ದು ಮಾಡಲು ಶುರುವಾಗಿತ್ತು.  ಹಾಗಾಗಿ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಇದೀಗ ಪರಿಣಿತಿ-ರಾಘವ್ ಎಂಗೇಜ್‌ಮೆಂಟ್ (Engagement) ಡೇಟ್ ಫಿಕ್ಸ್ ಆಗಿದೆ. ಎಲೆಕ್ಷನ್ ರಿಸಲ್ಟ್ (Election Result) ದಿನ ಮೇ 13ರಂದು ಈ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಅಧಿಕೃತವಾಗಿ ಎಂಗೇಜ್ ಆಗಲಿದ್ದಾರೆ. ದೆಹಲಿಯಲ್ಲಿ ಎಂಗೇಜ್‌ಮೆಂಟ್ ಸಮಾರಂಭ ನಡೆಯಲಿದೆ. ಪ್ರಿಯಾಂಕಾ ಚೋಪ್ರಾ, ನಿಕ್ ಸೇರಿದಂತೆ ಆಪ್ತರಷ್ಟೇ ಪರಿಣಿತಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಈ ವರ್ಷದ ಅಂತ್ಯದೊಳಗೆ ರಾಜಕಾರಣಿ ರಾಘವ್- ಪರಿಣಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ನಿಶ್ಚಿತಾರ್ಥದ ತಯಾರಿ ನಡೆಯುತ್ತಿದೆ.

  • ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಸಿದ್ಧಾರ್ಥ್- ಕಿಯಾರಾ ಅಡ್ವಾಣಿ ಮದುವೆಯ ಬಳಿಕ ಮತ್ತೊಂದು ಜೋಡಿ ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಗುಟ್ಟಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav chadha) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆ ಡೇಟ್‌ ಕೂಡ ಫಿಕ್ಸ್‌ ಆಗಿದೆ.

    ನಟಿ ಪರಿಣಿತಿ ಚೋಪ್ರಾ (Parineeti Chopra)ಸಿನಿಮಾಗಿಂತ ಇತ್ತೀಚಿಗೆ ರಾಜಕಾರಣಿ ರಾಘವ್ ಚಡ್ಡಾ ಜೊತೆಗಿನ ಲವ್ ರಿಲೇಷನ್‌ಶಿಪ್ ವಿಚಾರವಾಗಿಯೇ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚಿಗೆ ನಟಿಯ ಎಂಗೇಜ್‌ಮೆಂಟ್ ಸುದ್ದಿ ಹಬ್ಬಿತ್ತು. ಇದೀಗ ಪರಿಣಿತಿ-ರಾಘವ್ ಇಬ್ಬರು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ -ನಿಕ್ ಜೋನಸ್ ಭಾರತಕ್ಕೆ ಬಂದಿದ್ದರು. ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಮದುವೆ (Wedding) ಡೇಟ್ ಕೂಡ ಫಿಕ್ಸ್ ಆಗಿದ್ದು, ಮದುವೆ ತಯಾರಿ ನಡೆಯುತ್ತಿದೆ.

    ಪಾಪರಾಜಿಗಳ ಕಣ್ಣಿಗೆ ಪರಿಣಿತಿ ಚೋಪ್ರಾ ಕಾಣಿಸಿಕೊಂಡಾಗ, ರಾಘವ್ ಚಡ್ಡಾ ಜೊತೆಗಿನ ಮದುವೆ ಬಗ್ಗೆ ಕೇಳಲಾಗುತ್ತಿದೆ. ಎಲ್ಲರ ಪ್ರಶ್ನೆಗೂ ನಗುವಿನ ಮೂಲಕ ಉತ್ತರ ನೀಡಿ ಹೋಗ್ತಿದ್ದಾರೆ. ಈಗ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮನೆಗೆ ಪರಿಣಿತಿ ಭೇಟಿ ನೀಡಿದ್ದಾರೆ. ಮದುವೆಗೆ ಡ್ರೆಸ್ ಆರ್ಡರ್ ನೀಡಿ ಬಂದಿದ್ದಾರೆ. ಈ ವೇಳೆ ಮತ್ತೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಾಗ, ರಾಘವ್ ಚಡ್ಡಾ ಬಗ್ಗೆ ಕೇಳಲಾಗಿದೆ. ಯಾವುದೇ ಪ್ರಶ್ನೆಗೂ ಉತ್ತರಿಸದೇ ನಕ್ಕು ಸುಮ್ಮನಾಗಿದ್ದಾರೆ.

    ಪರಿಣಿತಿ ಚೋಪ್ರಾ ಈ ನಡೆ ಮದುವೆ ಅಂತೆ- ಕಂತೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಕ್ಟೋಬರ್‌ನಲ್ಲಿ ಪರಿಣಿತಿ-ರಾಘವ್ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಕಾದುನೋಡಬೇಕಿದೆ.