Tag: ರಾಘವೇಂದ್ರ

  • ನೆನಪಿರಲಿ ಪ್ರೇಮ್ 25ನೇ ಸಿನಿಮಾ ಅನೌನ್ಸ್ ಆಯ್ತು

    ನೆನಪಿರಲಿ ಪ್ರೇಮ್ 25ನೇ ಸಿನಿಮಾ ಅನೌನ್ಸ್ ಆಯ್ತು

    ಬೆಂಗಳೂರು: ನೆನಪಿರಲಿ ಸಿನಿಮಾದ ಮೂಲಕ ಭರವಸೆಯ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಲವ್ಲಿ ಸ್ಟಾರ್ ಪ್ರೇಮ್ 25ನೇ ಸಿನಿಮಾದ ಖುಷಿಯಲ್ಲಿದ್ದಾರೆ. ಪ್ರತಿಯೊಬ್ಬ ಸಿನಿ ತಾರೆಯೂ ತಮ್ಮ 25ನೇ ಸಿನಿಮಾ ವಿಶೇಷವಾಗಿರಬೇಕೆಂಬ ಕನಸಿಟ್ಟುಕೊಂಡಿರುತ್ತಾರೆ. ಅದರಂತೆ ಪ್ರೇಮ್ ಕೂಡ ತನ್ನ 25ನೇ ಸಿನಿಮಾ ವಿಭಿನ್ನವಾಗಿರಬೇಕೆಂದು ವಿನೂತನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಸ್ಪೆಷಲ್ ಆಗಿ ಕಾಣಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದಾರೆ. ಹೌದು ಪ್ರೇಮ್ ಅಭಿನಯದ 25ನೇ ಚಿತ್ರಕ್ಕೆ ಪ್ರೇಮಂ ಪೂಜ್ಯಂ ಎಂದು ಟೈಟಲ್ ಫಿಕ್ಸ್ ಆಗಿದ್ದು, ಟೈಟಲ್ ಜತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಅಂದಹಾಗೆ ಈ ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದು, ರಕ್ಷಿತಾ ಕೆಡಂಬಾಡಿ ಹಾಗೂ ಡಾ. ರಾಜ್ ಕುಮಾರ್ ಜಾನಕಿ ರಾಮನ್ ಬಂಡವಾಳ ಹೂಡುತ್ತಿದ್ದಾರೆ.

    ಲೈಫ್ ಜೊತೆ ಒಂದು ಸೆಲ್ಫೀ ಚಿತ್ರದ ನಂತರ ಪ್ರೇಮ್ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಖಾಸಗಿ ಕಾರ್ಯಕ್ರಮಗಳು ಹಾಗೂ ಸುಮಲತಾ ಪರ ಪ್ರಚಾರದ ಸಮಯದಲ್ಲಿ ಬಿಟ್ಟರೆ ಇನ್ನೆಲ್ಲೂ ಪ್ರೇಮ್ ಕಾಣಿಸಿಕೊಂಡಿರಲಿಲ್ಲ. ಒಂದು ವರ್ಷದ ಬಳಿಕ ಹೊಸ ಸಿನಿಮಾ ಪ್ರೇಮಂ ಪೂಜ್ಯಂ ಅನೌನ್ಸ್ ಆಗಿದ್ದು, ಚಿತ್ರದಲ್ಲಿ ಪ್ರೇಮ್ ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿರುವ ಚಿತ್ರ ತಂಡ ಮತ್ತಿನ್ನಾವ ವಿಚಾರವನ್ನೂ ಬಿಟ್ಟುಕೊಟ್ಟಿಲ್ಲ. ಲೋಕಸಭಾ ಚುನಾವಣಾ ಪ್ರಚಾರದ ನಂತರ ಪ್ರೇಮ್ ಪ್ರೇಮಂ ಪೂಜ್ಯಂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಗ್ರಾಮೀಣ ಜನರ ಗುಳೆಗೆ ನೊಂದಿತು ಮನ- ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ನೀಡಿದ್ರು ಹಾವೇರಿಯ ರಾಘವೇಂದ್ರ

    ಗ್ರಾಮೀಣ ಜನರ ಗುಳೆಗೆ ನೊಂದಿತು ಮನ- ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ನೀಡಿದ್ರು ಹಾವೇರಿಯ ರಾಘವೇಂದ್ರ

    ಹಾವೇರಿ: ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಹಲವರ ಸಾಧನೆಯನ್ನು ತೋರಿಸಿದ್ದೇವೆ. ಅದೇ ರೀತಿ ಇವತ್ತಿನ ಪಬ್ಲಿಕ್ ಹೀರೋ ರಾಘವೇಂದ್ರ ಅವರು ಹಾವೇರಿಯ ಶಿಗ್ಗಾಂವಿ ತಾಲೂಕಿನ ಇವರು ಗಾರ್ಮೆಂಟ್ಸ್ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.

    ಹೌದು. ಹಾವೇರಿಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿರೋ ಪ್ರಭಂಜನ್ ಗಾರ್ಮೆಂಟ್ಸ್ ಸ್ಥಾಪಕ ರಾಘವೇಂದ್ರ ಮೇಲಗೇರಿ ಅವರೇ ಇವತ್ತಿನ ಪಬ್ಲಿಕ್ ಹೀರೋ. ಬಿ.ಎ ಪದವೀಧರರಾಗಿರೋ ರಾಘವೇಂದ್ರ ಮೊದಲಿಗೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಶಿಗ್ಗಾಂವಿ ತಾಲೂಕಿನಲ್ಲಿ ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡ್ತಿದ್ರು. ಆದರೆ, ಉದ್ಯೋಗಕ್ಕಾಗಿ ಪಟ್ಟಣಕ್ಕೆ ಗುಳೆಹೋಗೋ ಗ್ರಾಮೀಣ ಜನತೆಯನ್ನು ನೋಡಿದ ರಾಘವೇಂದ್ರ ಅವರು ಗುತ್ತಿಗೆದಾರ ಕೆಲಸಕ್ಕೆ ಗುಡ್‍ಬೈ ಹೇಳಿದ್ರು. ಸ್ನೇಹಿತರ ಜೊತೆ ಸೇರಿ ಗಾರ್ಮೆಂಟ್ಸ್ ಓಪನ್ ಮಾಡಿದ್ರು.

    ಬಂಕಾಪುರ ಪಟ್ಟಣದಲ್ಲಿ ಕಳೆದ ಮಾರ್ಚ್ ನಲ್ಲಿ ಪ್ರಭಂಜನ್ ಇಂಡಸ್ಟ್ರೀಸ್ ಗಾರ್ಮೆಂಟ್ಸ್ ಸ್ಥಾಪನೆಯಾಗಿದ್ದು ಈಗ 380ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ವಿಕಲಚೇತನರಿಗೂ ಅವಕಾಶ ಕೊಟ್ಟಿದ್ದಾರೆ. ಇದರಿಂದ ಬೆಂಗಳೂರು, ಹುಬ್ಬಳ್ಳಿಗೆ ಗುಳೇಹೋಗೋದು ತಪ್ಪಿದೆ. ಸಂಬಳ, ಇಎಸ್‍ಐ, ಪಿಎಫ್ ಯಾವ ಸಮಸ್ಯೆಯೂ ಇಲ್ಲ ಅಂತ ಉದ್ಯೋಗಿ ಆಶಾ ಹೇಳಿದ್ದಾರೆ.

    ವಾರ್ಷಿಕ 40 ರಿಂದ 50 ಸಾವಿರ ಶರ್ಟ್ಸ್ ಸಿದ್ಧಪಡಿಸ್ತಿರೋ ಪ್ರಭಂಜನ್ ಗಾರ್ಮೆಂಟ್ಸ್, ಬೆಂಗಳೂರು, ಗುಜರಾತ್ ಸೇರಿದಂತೆ ವಿದೇಶಕ್ಕೂ ರಫ್ತು ಮಾಡ್ತಿದೆ.

  • ರಾಘವೇಂದ್ರ ಯಾರ ಮಗ? ಬಿಎಸ್‍ವೈ ಗೆ ಸಿಎಂ ಪ್ರಶ್ನೆ

    ರಾಘವೇಂದ್ರ ಯಾರ ಮಗ? ಬಿಎಸ್‍ವೈ ಗೆ ಸಿಎಂ ಪ್ರಶ್ನೆ

    ಮೈಸೂರು: ರಾಘವೇಂದ್ರ ಯಾರ ಮಗ? ಒಂದು ಬಾರಿ ಸಂಸದ ಆಗಿಲ್ವಾ. ಆತ ಯಡಿಯೂರಪ್ಪನ ಮಗನಾ ಅಥವಾ ಅವರ ಅಮ್ಮನ ಮಗನಾ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ವಂಶ ಪಾರಂಪರ್ಯ ರಾಜಕೀಯ ಮಾಡಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಗೆ ಟಾಂಗ್ ನೀಡಿದ್ರು. ವರುಣಾದ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತಾಡೋಕೆ ನಾನು ಬಿಜೆಪಿ ವಕ್ತಾರ ಅಲ್ಲ. ವರುಣಾದಲ್ಲಿ ಯಾವ ಬಿಜೆಪಿ ಅಭ್ಯರ್ಥಿಯನ್ನೂ ನಿಲ್ಲಿಸಿದ್ರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಯಡಿಯೂರಪ್ಪ ವೀಕ್ ಆಗಿಲ್ಲ. ಯಡಿಯೂರಪ್ಪ ಯಾವಾಗಲೂ ವೀಕ್. ಕಳಂಕಿತ ವ್ಯಕ್ತಿಯಾಗಿರೋ ಅವರಿಗೆ ಸಾರ್ವಜನಿಕ ಮೌಲ್ಯಗಳಿಲ್ಲ. ಹೀಗಾಗಿ ಯಾವಾಗಲೂ ವೀಕ್ ಆಗಿಯೇ ಇದ್ದಾರೆ ಅಂತ ಅವರು ಲೇವಡಿ ಮಾಡಿದ್ರು. ಇದನ್ನೂ ಓದಿ: ಯಡಿಯೂರಪ್ಪನವರೇ ದಯವಿಟ್ಟು ನನಗೆ ಮೋಸ ಮಾಡ್ಬೇಡಿ, ನಿಮ್ಮ ಕಾಲಿಗೆ ಬೇಕಾದರೂ ಬೀಳ್ತೇನೆ- ಬಿಜೆಪಿ ಅಭ್ಯರ್ಥಿ ಮನವಿ

    ಚಾಮುಂಡೇಶ್ವರಿ ತಿರಸ್ಕರಿಸಿದ್ದಾಳೆ, ಬನಶಂಕರಿಯೂ ತಿರಸ್ಕರಿಸುತ್ತಾಳೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಶ್ರೀರಾಮುಲು ಯಾರ್ ರೀ? ಅವರಿಗೆ ನನ್ನ ರಾಜಕೀಯ ಇತಿಹಾಸ ಗೊತ್ತಿಲ್ಲ. ಶ್ರೀರಾಮುಲು ಶಾಸಕನಾಗಿದ್ದೇ 2004ರಲ್ಲಿ. ನಾನು 1983ರಲ್ಲೇ ಚಾಮುಂಡೇಶ್ವರಿಯಲ್ಲಿ ಶಾಸಕನಾಗಿದ್ದೆ. ನನ್ನ ಬಗ್ಗೆ ಅವರೇನು ಮಾತನಾಡುತ್ತಾರೆ. ನಾನು ಸಮೀಕ್ಷೆಗಳನ್ನು ನಂಬಲ್ಲ. ಆದ್ರೆ ಜನ ಸಮೀಕ್ಷೆಯಲ್ಲಿ ನಾನು ಮುಖ್ಯಮಂತ್ರಿಯಾಗಲಿ ಅನ್ನೋದೇ ಜಾಸ್ತಿ ಅಂದ್ರು. ಇದನ್ನೂ ಓದಿ: ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ನಾನು ಇಂದು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಮಧ್ಯಾಹ್ನ ಎರಡು ಗಂಟೆ ವೇಳೆಗೆ ನಾಮಪತ್ರ ಸಲ್ಲಿಸುತ್ತೇನೆ. ಅಂಬರೀಶ್ ನಾಮಪತ್ರ ಸಲ್ಲಿಸೋದು ಹೈಕಮಾಂಡ್ ಗೆ ಬಿಟ್ಟಿದ್ದು. ಅದು ನಂಗೆ ಗೊತ್ತಿಲ್ಲ ಅಂತ ಅವರು ಹೇಳಿದ್ರು.