Tag: ರಾಘವೇಂದ್ರ ಹುಣಸೂರು

  • ನಟ ರಮೇಶ್ ಅರವಿಂದ್ ಬರೆದ ಯಶಸ್ಸಿನ ಕುರಿತಾದ ಪುಸ್ತಕ ಬಿಡುಗಡೆ

    ನಟ ರಮೇಶ್ ಅರವಿಂದ್ ಬರೆದ ಯಶಸ್ಸಿನ ಕುರಿತಾದ ಪುಸ್ತಕ ಬಿಡುಗಡೆ

    ಬೆಂಗಳೂರಿನ ಬಿ. ಪಿ. ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ನಟ ರಮೇಶ್ ಅರವಿಂದ್ (Ramesh Aravind)  ಅವರ ‘ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು’ ಕೃತಿಯನ್ನು ಹಿರಿಯ ನಟ ಅನಂತ್ ನಾಗ್ (Ananth Nag) ಬಿಡುಗಡೆ ಮಾಡಿದರು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭರ್ಜರಿ ಡಿಮ್ಯಾಂಡ್

    ಈ ವೇಳೆ ಮಾತನಾಡಿದ ಅವರು, ಬಾಲ್ಯದಲ್ಲಿ ನಮಗೆ ೩೦-೪೦ ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅವರ ಕೃತಿ ಕೂಡ ಹೆಚ್ಚು-ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

    ರಮೇಶ್ ಅರವಿಂದ ಅವರು, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದಿದ್ದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದರು.

    ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್ (ಜೋಗಿ) (Jogi) ಮಾತನಾಡಿ, ರಮೇಶ್ ಆವರಿಂದ ಒಂದು ಕೆಟ್ಟ ಮಾತು ಬರಬಹುದು ಎಂದು ಕಳೆದ ೨೫ ವರ್ಷದಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ.ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಈ ಗುಣ ಈ ಕೃತಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು. ಝಿ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು (Raghavendra Hunsur) ವೇದಿಕೆಯಲ್ಲಿದ್ದರು. ಜಮೀಲ್ ಸಾವಣ್ಣ (Jameel) ಪ್ರಾಸ್ತಾವಿಕ ಮಾತು ಆಡಿದರು. ರಂಜನೀಕೀರ್ತಿ ನಿರೂಪಣೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ವೀಕೆಂಡ್ ವಿಥ್ ರಮೇಶ್ ಸೀಸನ್ 4 ಏಪ್ರಿಲ್ 20ರಿಂದ ಶುರು!

    ವೀಕೆಂಡ್ ವಿಥ್ ರಮೇಶ್ ಸೀಸನ್ 4 ಏಪ್ರಿಲ್ 20ರಿಂದ ಶುರು!

    ಟ ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಬರುತ್ತಿದೆ. ಇದೇ ಏಪ್ರಿಲ್ 20ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ರಿಂದ ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ವೀಕೆಂಡ್ ವಿಥ್ ರಮೇಶ್ ಈಗಾಗಲೇ 3 ಸೀಸನ್‍ಗಳಲ್ಲಿ ಪ್ರಸಾರಗೊಂಡು ಅತ್ಯಂತ ಜನಪ್ರಿಯತೆ ಪಡೆದಿತ್ತು. ಹಲವಾರು ಸಾಧಕರು ಹಾಟ್ ಸೀಟ್‍ನಲ್ಲಿ ಕುಳಿತು ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದರು. ಅವರ ಸಾಧನೆಯ ಹಾದಿ ಇತರ ಪ್ರತಿಭೆಗಳಿಗೆ ಒಂದು ಸ್ಫೂರ್ತಿಯಾಗಿತ್ತು. ಅಂತಹ ವಿಭಿನ್ನ ಶೈಲಿಯ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ದೊರೆಯುತ್ತಿದೆ.

    4ನೇ ಸೀಸನ್‍ನ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದುವರೆಗೆ ಜೀ ತಂಡ ನಡೆಸಿದ ಅವಿರತ ಪ್ರಯತ್ನದ ಫಲವಾಗಿ ವೀರೇಂದ್ರ ಹೆಗಡೆಯವರು ಬಂದಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವೀಕೆಂಡ್ ವಿಥ್ ರಮೇಶ್ ಫೋನ್ ಫ್ರೋಮೋ ಮೇಕಿಂಗ್ ಮೀಡಿಯಾ ಹಾಗೂ ಮೊದಲ ಸಂಚಿಕೆಯ ಝಲಕ್‍ನ ಪ್ರದರ್ಶನ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹಾಗೂ ರಮೇಶ್ ಅರವಿಂದ್ ಈ ಕಾರ್ಯಕ್ರಮದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ರಾಘವೇಂದ್ರ ಹುಣಸೂರು ಮಾತನಾಡಿ ವೀಕೆಂಡ್ ವಿಥ್ ರಮೇಶ್ 2014ರಲ್ಲಿ ಆರಂಭವಾಗಿತ್ತು. ಈವರೆಗೆ ನಡೆದ 3 ಸೀಸನ್‍ಗಳಲ್ಲಿ 65 ಜನ ಸೆಲೆಬ್ರಿಟಿಗಳು ಇಲ್ಲಿಗೆ ಬಂದು ತಮ್ಮ ಜೀವನದ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ. ಅವರೆಲ್ಲರೂ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದ್ದರು. ಇದು ನನ್ನ ಬದುಕಿನ ಬೆಸ್ಟ್ ಇಂಟರ್‍ವ್ಯೂ ಎಂದು ಹೇಳಿದ್ದಾರೆ. ಇಷ್ಟು ಜನ ಸಾಧಕರನ್ನು ಕರೆತರುವುದರೊಂದಿಗೆ ಅವರಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ ಮರೆಯಲಾಗದ ಘಟನೆಗಳನ್ನು ತೋರಿಸುವುದು ಇದೆಲ್ಲಾ ರೀಸರ್ಚ್ ಟೀಮ್ ಪಟ್ಟ ಶ್ರಮದ ಫಲ. 10 ಸೆಕೆಂಡ್‍ಗಳ ಈ ಫ್ರೋಮೋವನ್ನು ಕುಶಾಲನಗರದ ಮಂದಾಲಪಟ್ಟಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.

    ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ಮಾತನಾಡಿ, ಇಲ್ಲಿ ಬರುವ ಒಬ್ಬೊಬ್ಬರ ಕಥೆಯೂ ರೋಚಕ. ಪ್ರೀತಿಯಿಂದ ರಮೇಶ್, ಖುಶಿಯಿಂದ ರಮೇಶ್, ನಂತರ ವೀಕೆಂಡ್ ವಿಥ್ ರಮೇಶ್ ಬಂದಿದೆ. ಇಲ್ಲಿ ಬರುವ ಎಲ್ಲರ ಸಾಧನೆಯ ಬಗ್ಗೆ ತಿಳಿದುಕೊಳ್ಳುವ ಅದ್ಭುತವಾದ ಅವಕಾಶ ನನಗೆ ಸಿಕ್ತು ಎಂದು ಹೇಳಿದರು. ವೀಕೆಂಡ್ ವಿಥ್ ರಮೇಶ್ ಇದೇ 20 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30 ರಿಂದ ಪ್ರಸಾರವಾಗಲಿದೆ.

    ಮುಂದಿನ ಸಂಚಿಕೆಗಳಲ್ಲಿ ನಟಿ ಪ್ರೇಮ, ಮಾಲಾಶ್ರೀ, ರಾಘಣ್ಣ ಅಲ್ಲದೆ ರಾಹುಲ್ ದ್ರಾವಿಡ್, ಅನಿಲ್‍ಕುಂಬ್ಳೆ ಮೊದಲಾದ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದರು.

  • ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಸರ್ಪ್ರೈಸ್ ಕೊಡಲಿದ್ದಾರಂತೆ ಯಶ್!

    ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಸರ್ಪ್ರೈಸ್ ಕೊಡಲಿದ್ದಾರಂತೆ ಯಶ್!

    ಬೆಂಗಳೂರು: ಪ್ರತಿ ಬಾರಿಯೂ ಹಬ್ಬಕ್ಕಾಗಿ ಜೀ ಕನ್ನಡ ವಾಹಿನಿಯ ವಿಶೇಷ ಏನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆಯೇ ವಾಹಿನಿ ಕೂಡ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ಈ ಬಾರಿಯೂ ದೀಪಾವಳಿಗಾಗಿ ಕಲರ್ ಫುಲ್ ಕಾರ್ಯಕ್ರಮ ರೂಪಿಸಿದೆ. ಪ್ರೇಕ್ಷಕರೊಟ್ಟಿಗೇ ದೀಪಾವಳಿ ಆಚರಿಸಲು ಜೀ ಕನ್ನಡ ವಾಹಿನಿಯ ಕುಟುಂಬವೇ ನೋಡುಗರ ಮನೆಬಾಗಿಲಿಗೆ ಹೊರಟಿದೆ. ಅದು ‘ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್ 2018’ರ ಮೂಲಕ. ಇದೇ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಚ್ಚರಿ ಕೊಡ್ತಾರಂತೆ!

    ಸರ್ಪ್ರೈಸ್ ಕೊಡಲು ಬರಲಿದ್ದಾರೆ ಯಶ್: ರಾಕಿಂಗ್ ಸ್ಟಾರ್ ಯಶ್ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ 2018’ರ ವೇದಿಕೆಯಲ್ಲಿ ವಾಹಿನಿಯ ನೋಡುಗರಿಗೆ ಸರ್ಪ್ರೈಸ್ ನೀಡಲಿದ್ದಾರೆ. ಅದು ಯಾವ ರೀತಿಯ ಸರ್ಪ್ರೈಸ್ ಎನ್ನುವುದನ್ನು ಕಾದು ನೋಡಿ ಎಂದಿದ್ದಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು.

    ಪ್ರತಿ ವರ್ಷ ನಡೆಯುವ ಜೀ ಕುಟುಂಬದ ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ‘ಜೀ ಕುಟುಂಬ ಅವಾರ್ಡ್ಸ್ 2018’ರ ಕಾರ್ಯಕ್ರಮ ಕೂಡ ಸಿದ್ಧವಾಗಿದೆ. ವಾಹಿನಿಯ ಕುಟುಂಬದ ಸದಸ್ಯರಾದ ಧಾರಾವಾಹಿ, ರಿಯಾಲಿಟಿ ಶೋಗಳ ಕಲಾವಿದರು ಮತ್ತು ತಂತ್ರಜ್ಞರು, ರಿಯಾಲಿಟಿ ಶೋಗಳು ನಿರ್ಣಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ಮನರಂಜನೆಗಾಗಿ ಹತ್ತಾರು ಕಾರ್ಯಕ್ರಮಗಳು, ನೂರಾರು ಕಲಾವಿದರು, ಅವರ ಕುಟುಂಬದ ಸದಸ್ಯರು, ಕೇವಲ ಕಿರುತೆರೆಯ ಕಲಾವಿದರು ಮಾತ್ರವಲ್ಲ, ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಕೂಡ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಪ್ರಶಸ್ತಿ ವಿಜೇತರು ಮತ್ತು ಅವರಿಗೆ ಗೌರವಿಸಲು ಆಗಮಿಸಿದ್ದ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮಾತುಕತೆ, ಸಿನಿಮಾ ಮತ್ತು ಕಿರುತೆರೆ ಕಲಾವಿದರು ವಿವಿಧ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಲಿವೆ.

    ಧಾರಾವಾಹಿನೋ ಅಥವಾ ರಿಯಾಲಿಟಿ ಶೋಗಳ ಕಲಾವಿದರನ್ನು ಆಯಾ ಕಾರ್ಯಕ್ರಮಗಳಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯ. ಆದರೆ, ಈ ಎಲ್ಲರನ್ನೂ ಒಟ್ಟಾಗಿಸಿದ ಹೆಮ್ಮೆ ಜೀ ಕುಟುಂಬ ಅವಾರ್ಡ್ಸ್ ನದ್ದು. ಎಲ್ಲರೂ ಒಟ್ಟಾಗಿದ್ದರಿಂದ ಡಬಲ್ ಮನರಂಜನೆ ಕೂಡ ಇಲ್ಲಿದೆ.

    ವರ್ಷಪೂರ್ತಿ ಸಾಧನೆ ಮಾಡಿದ ಸಾಧಕರ ಶ್ರಮ, ಅವರನ್ನು ಸನ್ಮಾನಿಸಿದ ಸಂತೃಪ್ತಿ ಮತ್ತು ತಮ್ಮ ಶ್ರಮಕ್ಕೆ ಸಂದ ಗೌರವಕ್ಕಾಗಿ ಸಾಧಕರ ಭಾವುಕ ನುಡಿಗಳು ಖುಷಿ ಕಂಬನಿಯಾಗಿ ಇಳಿದಿವೆ. ಈ ಭಾವುಕ ಕ್ಷಣವೇ ಜೀ ಕುಟುಂಬ ಅವಾಡ್ರ್ಸ್ ಗೆ ಸಿಕ್ಕ ದೊಡ್ಡ ಜಯ.

    22 ಬೆಸ್ಟ್ ಅವಾರ್ಡ್ಸ್, 7 ಫೇವರೆಟ್ ಕ್ಯಾಟಗರಿ ಅವಾಡ್ರ್ಸ್ ಜತೆಗೆ ಸ್ಪೆಷಲ್ ಕ್ಯಾಟಗರಿಯಲ್ಲಿ ಜೀ ಕನ್ನಡ ಹಿರಿಯ ಸದಸ್ಯರಿಗೂ ಪ್ರಶಸ್ತಿ ನೀಡಲಾಗಿದೆ. ಇವುಗಳ ಜತೆಗೆ ಪ್ರಾಮಿಸಿಂಗ್ ನ್ಯೂ ಫೇಸ್ ಆಫ್ ಮೇಲ್ ಮತ್ತು ಫಿಮೇಲ್, ಸ್ಟೈಲ್ ಐಕಾನ್ (ಮೇಲ್ ಮತ್ತು ಫಿಮೇಲ್) ಪ್ರೈಡ್ ಆಫ್ ಜೀ ಕನ್ನಡ ಹೀಗೆ 40 ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

    ವರ್ಣರಂಜಿತ ಈ ವೇದಿಕೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರಾದ ರಾಗಿಣಿ ದ್ವಿವೇದಿ, ಸಾನ್ವಿ, ಅಜಯ್ ರಾವ್ ಮತ್ತು ಜೀ ಕನ್ನಡ ಧಾರಾವಾಹಿ ಮತ್ತು ರಿಯಾಲಿಟಿ ಶೋ ಪ್ರತಿಭೆಗಳು ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ನವೆಂಬರ್ 3 ಮತ್ತು 4 ರಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv