ರಾಯಚೂರು: ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದ (Raghavendra swami Mutt) ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 3,48,69,621 ರೂ. ಕಾಣಿಕೆ ಸಂಗ್ರಹವಾಗಿದೆ.
ಕಳೆದ 30 ದಿನಗಳಲ್ಲಿ ಮಂತ್ರಾಲಯ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಕಾಣಿಕೆಯಲ್ಲಿ 3,39,35,121 ರೂ. ನಗದು, 9,34,500 ರೂಪಾಯಿ ನಾಣ್ಯಗಳು ಸಂಗ್ರಹವಾಗಿವೆ.
37.200 ಗ್ರಾಂ ಚಿನ್ನ, 1280 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಎರಡು ದಿನಗಳಿಂದ ಮಂತ್ರಾಲಯ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರಸೇವಕರು ಭಾಗವಹಿಸಿದ್ದರು.
ರಾಯಚೂರು: ಕಲಿಯುಗ ಕಾಮಧೇನು ಕಲ್ಪವೃಕ್ಷ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt Mantralaya) ಕಳೆದ 26 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳ (December) 26 ದಿನಗಳ ಕಾಣಿಕೆ ಹುಂಡಿ ಎಣಿಕೆಕಾರ್ಯ ಮುಕ್ತಾಯಗೊಂಡಿದ್ದು ಒಟ್ಟು 2,95,74,004 ರೂ. ಕಾಣಿಕೆ ಸಂಗ್ರಹವಾಗಿದೆ. ಇದನ್ನೂ ಓದಿ: ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್ ನಿಲ್ಲಿಸಿ – ಯುಜಿಸಿ
ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 2, 89, 63,504 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 6,10,500 ರೂ. ನಾಣ್ಯಗಳ ಸಂಗ್ರಹವಾಗಿದೆ. 71 ಗ್ರಾಂ ಚಿನ್ನ ಹಾಗೂ 439 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.
ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು , ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swami Mutt) ಕಳೆದ ಒಂದು ತಿಂಗಳಲ್ಲಿ ಭಕ್ತರಿಂದ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಒಟ್ಟು 3,82,59,839 ರೂ. ಕಾಣಿಕೆ ಸಂಗ್ರಹವಾಗಿದೆ.
ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,74,85,859 ರೂ. ಕರೆನ್ಸಿ ನೋಟುಗಳು ಹಾಗೂ 7,73,980 ರೂ. ನಾಣ್ಯಗಳ ಸಂಗ್ರಹವಾಗಿದೆ. 53 ಗ್ರಾಂ ಚಿನ್ನ ಹಾಗೂ 1,200 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿದೇಶಿ ಮಹಿಳೆಯ ಬ್ಯಾಗ್‍ನಲ್ಲಿ ಲಕ್ಷ ಲಕ್ಷ ಹಣ ಪತ್ತೆ!
ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಕಾಣಿಕೆ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ ತಿಂಗಳಲ್ಲಿ ಒಟ್ಟು 3,76,67,469 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಅತಿ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ದಿನವೇ CWMA ಸಭೆ – ನೀರು ಹಂಚಿಕೆಯಲ್ಲಿ ಸಿಗಲಿದ್ಯಾ ರಿಲೀಫ್?
ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿ ವೃಂದಾವನ ದರ್ಶನಕ್ಕೆ ಜೂನ್ 15 ರಿಂದ ಭಕ್ತರಿಗೆ ಅವಕಾಶ ನೀಡುವುದಾಗಿ ಮಠದ ಆಡಳಿತ ಮಂಡಳಿ ಹೇಳಿತ್ತು. ಆದರೆ ಇನ್ನೂ ಸಿದ್ಧತೆಗಳು ಪೂರ್ಣಗೊಳ್ಳದ ಹಿನ್ನೆಲೆ ಮಠದ ಮಹಾದ್ವಾರ ಇಂದೂ ಸಹ ತೆರೆದಿಲ್ಲ.
ಭಕ್ತರಿಗೆ ಮುಕ್ತ ಅವಕಾಶ ನೀಡುವ ಕುರಿತು ಅನಿರ್ದಿಷ್ಟವಾಗಿ ಮುಂದೂಡಿರುವ ಮಠದ ಆಡಳಿತ ಮಂಡಳಿ, ದರ್ಶನಕ್ಕೆ ಅವಕಾಶ ನೀಡುವ ದಿನಾಂಕವನ್ನು ಸಧ್ಯದಲ್ಲೇ ಪ್ರಕಟಿಸುವುದಾಗಿ ಮಠದ ನೂತನ ವ್ಯವಸ್ಥಾಪಕ ವೆಂಕಟೇಶ್ ಜೋಶಿ ತಿಳಿಸಿದ್ದಾರೆ.
ಸುರಕ್ಷತಾ ಕ್ರಮ ಕೈಗೊಳ್ಳಲು ಪರಿಕರ ಜೋಡಣೆಗೆ ಸಮಯ ತೆಗೆದುಕೊಂಡ ಮಠ, ಮಂತ್ರಾಲಯ ಪ್ರವಾಸ ಮುಂದೂಡುವಂತೆ ಭಕ್ತರಿಗೆ ಮನವಿ ಮಾಡಿದೆ. ಮೊದಲಿಗೆ ಮಂತ್ರಾಲಯ ಮಠದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಮಾತ್ರ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹೊರರಾಜ್ಯ ಹಾಗು ಜಿಲ್ಲೆಯ ಭಕ್ತರಿಗೆ ಜೂನ್ 15ರ ನಂತರ ಅವಕಾಶ ಎಂದು ಹೇಳಲಾಗಿತ್ತು. ಆದರೆ ಮಂತ್ರಾಲಯದಲ್ಲಿ ದರ್ಶನಕ್ಕೆ ಪೂರ್ವ ತಯಾರಿ ಪೂರ್ಣಗೊಳ್ಳದ ಹಿನ್ನೆಲೆ ಇದುವರೆಗೂ ರಾಯರ ಮಠದ ಬಾಗಿಲು ತೆಗೆದಿಲ್ಲ. ರಾಯರ ವೃಂದಾವನ ದರ್ಶನಕ್ಕೆ ಬಂದವರಿಗೆ ದರ್ಶನ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಭಕ್ತರು ಹೊರಗಡೆಯಿಂದಲೇ ರಾಯರಿಗೆ ನಮಿಸಿ ಮರಳುತ್ತಿದ್ದಾರೆ.
– 20 ದಿನ ಕಲ್ಯಾಣ ಮಂಟಪ ಬುಕ್ಕಿಂಗ್ ಇಲ್ಲ
– ಮಠದಲ್ಲಿ ಹೆಚ್ಚು ದಿನ ಇರದಂತೆ ಸೂಚನೆ
ರಾಯಚೂರು: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚಾಮೃತ ವಿತರಣೆ ನಿಷೇಧಿಸಲಾಗಿದೆ. ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಭಕ್ತರಿಗೆ ವಿತರಿಸುವ ಪಂಚಾಮೃತ ನಿಲ್ಲಿಸಲಾಗಿದೆ. ಎಲ್ಲ ವೃಂದಾವನಗಳಿಗೂ ಎಂದಿನಂತೆ ಪಂಚಾಮೃತಾಭೀಷೆಕ ನಡೆಯುತ್ತದೆ. ಆದರೆ ಶನಿವಾರದಿಂದ ಭಕ್ತರಿಗೆ ವಿತರಿಸುವುದನ್ನು ಮಾತ್ರ ನಿಲ್ಲಿಸಲಾಗಿದೆ.
ಬೆಳಗ್ಗೆ ಹಾಗೂ ಸಂಜೆಯ ಪ್ರಸಾದ ಹಾಗೂ ದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ. ಜನತೆ ಮಠಕ್ಕೆ ಬರಬಾರದು ಎನ್ನುವ ವದಂತಿಗಳು ಹಬ್ಬುತ್ತಿವೆ. ಇದಾವುದಕ್ಕೂ ಕಿವಿಗೊಡದೆ, ಭಕ್ತರು ರಾಯರ ದರ್ಶನಕ್ಕೆ ಬರಬಹುದು. ಆದರೆ ವಿದೇಶದಿಂದ ಬರುವಗಿಗೆ ಮಾತ್ರ ಕೆಲದಿನಗಳ ನಿರ್ಬಂಧ ಹೇರಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ದರ್ಶನ ಬಂದ್ ಎನ್ನುವ ವದಂತಿ ಹಬ್ಬಿದ ಹಿನ್ನೆಲೆ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ ಮಠದ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟಪಡಿಸಿದೆ.
ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಲ್ಯಾಣ ಮಂಟಪಗಳ ಬುಕ್ಕಿಂಗ್‍ನ್ನು ಇಪ್ಪತ್ತು ದಿನಗಳಕಾಲ ಬಂದ್ ಮಾಡಿದೆ. ಲೋಕ ಕಲ್ಯಾಣಕ್ಕಾಗಿ ಮಾರ್ಚ್ 22 ಕ್ಕೆ ಧನ್ವಂತರಿ ಹೋಮ ಹಮ್ಮಿಕೊಂಡಿದೆ. ಜಪ ತಪಗಳು ನಿರಂತರವಾಗಿ ನಡೆದಿದೆ. ಎಲ್ಲ ಶಾಖಾ ಮಠಗಳಲ್ಲಿ ಹೋಮ ನೆರವೇರಿಸುವಂತೆ ಸೂಚಿಸಲಾಗಿದೆ. ಕೆಮ್ಮು ನೆಗಡಿ ಜ್ವರ ಇರುವ ಭಕ್ತರು ಮನೆಯಲ್ಲೇ ರಾಯರನ್ನು ಜಪಿಸುವಂತೆ ಹೇಳಿದೆ. ಮಠಕ್ಕೆ ಬರುವ ಭಕ್ತರಿಗೆ ಎರಡು ಮೂರು ದಿನಗಳ ಕಾಲ ಉಳಿಯಬೇಡಿ, ದರ್ಶನ ಮಾಡಿಕೊಂಡು ಹೊರಡಿ ಎಂದು ಆಡಳಿತ ಮಂಡಳಿ ಸೂಚಿಸಿದೆ.