Tag: ರಾಘವೇಂದ್ರ ಸ್ಟೋರ್

  • ಜಗ್ಗೇಶ್ ಹುಟ್ಟು ಹಬ್ಬಕ್ಕೆ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್

    ಜಗ್ಗೇಶ್ ಹುಟ್ಟು ಹಬ್ಬಕ್ಕೆ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್

    ಪುನೀತ್ ರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಒಂದೇ ದಿನ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಪುನೀತ್ ಮತ್ತು ಜಗ್ಗೇಶ್. ಈ ವರ್ಷ ಪುನೀತ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಜಗ್ಗೇಶ್. ಹಾಗಾಗಿ ಇಂದು ಅವರು ಮಂತ್ರಾಲಯದ ರಾಯರ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

    ಜಗ್ಗೇಶ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದೇ ಇದ್ದರೂ, ಅವರ ಮೂರು ಸಿನಿಮಾಗಳ ಪೋಸ್ಟರ್ ಗಳು ಇಂದು ಬಿಡುಗಡೆ ಆಗಿವೆ. ಮೂರು ವಿಭಿನ್ನ ರೀತಿಯಲ್ಲಿ ಡಿಸೈನ್ ಆಗಿದ್ದು ವಿಶೇಷ. ಸದ್ಯ ಜಗ್ಗೇಶ್ ‘ತೋತಾಪುರಿ’, ‘ರಂಗನಾಯಕ’ ಮತ್ತು ‘ರಾಘವೇಂದ್ರ ಸ್ಟೋರ್ಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿವೆ.

    ತೋತಾಪುರಿ

    ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಗಿಸುತ್ತಲೇ ಒಂದೊಳ್ಳೆ ಭಾವನಾತ್ಮಕ ಕಥೆಯನ್ನು ಈ ಸಿನಿಮಾ ಹೇಳಲಿದೆಯಂತೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾರುವಂತಹ ಚಿತ್ರ ಕೂಡ ಇದಾಗಿದೆ. ಜಗ್ಗೇಶ್ ಹೀರೋ ಆಗಿ ನಟಿಸಿದ್ದರೆ, ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ್ ನಾಯಕಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರುತ್ತಿರುವುದು ವಿಶೇಷ. ಕೆ.ಎ. ಸುರೇಶ್ ಇದರ ನಿರ್ಮಾಪಕರು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ರಂಗನಾಯಕ

    ಮಠದ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಸಿನಿಮಾ ‘ರಂಗನಾಯಕ’. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ನಟನೊಬ್ಬನ ಬದುಕಿನ ಕುರಿತಾದ ಸಿನಿಮಾ ಇದಾಗಿದ್ದು, ಜಗ್ಗೇಶ್ ರಂಗನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಮತ್ತು ಗುರು ಪ್ರಸಾದ್ ಮತ್ತೆ ಸಿನಿಮಾ ಮಾಡುವುದಿಲ್ಲ ಎಂಬ ಗಾಂಧಿನಗರದ ಮಾತನ್ನು ಸುಳ್ಳು ಮಾಡಿದ ಚಿತ್ರವಿದು. ವಿಖ್ಯಾತ ಈ ಚಿತ್ರದ ನಿರ್ಮಾಪಕರು. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ರಾಘವೇಂದ್ರ ಸ್ಟೋರ್ಸ್

    ‘ರಾಜಕುಮಾರ’ ಸಿನಿಮಾ ಖ್ಯಾತಿಯ ಸಂತೋಷ್ ಆನಂದ್ ರಾಮ್, ಇದೇ ಮೊದಲ ಬಾರಿಗೆ ಜಗ್ಗೇಶ್ ಗಾಗಿ ಮಾಡಿದ ಚಿತ್ರ ‘ರಾಘವೇಂದ್ರ ಸ್ಟೋರ್ಸ್’. ಅನ್ನದ ಮಹತ್ವವನ್ನು ಇಟ್ಟುಕೊಂಡು ಕಥೆ ಬರೆದಿದ್ದಾರಂತೆ ನಿರ್ದಶಕರು. ಜಗ್ಗೇಶ್ ನಾಯಕನಾದರೆ, ಶ್ವೇತಾ ಶ್ರೀವಾತ್ಸವ್ ನಾಯಕಿ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ, ಡಬ್ಬಿಂಗ್ ಕೆಲಸವನ್ನೂ ಮುಗಿಸಿದೆ ಚಿತ್ರತಂಡ. ಹೊಂಬಾಳೆ ಫಿಲ್ಮ್ಸ್ ಇದರ ನಿರ್ಮಾಪಕರು.

  • ಜಗ್ಗೇಶ್ 18 ವರ್ಷವರಾಗಿದ್ದಾಗ ಸಿನಿಮಾಕ್ಕಾಗಿ ಚಾನ್ಸ್ ಕೇಳ್ತಿದ್ದಿದ್ದು ಹೇಗೆ ಗೊತ್ತಾ?

    ಜಗ್ಗೇಶ್ 18 ವರ್ಷವರಾಗಿದ್ದಾಗ ಸಿನಿಮಾಕ್ಕಾಗಿ ಚಾನ್ಸ್ ಕೇಳ್ತಿದ್ದಿದ್ದು ಹೇಗೆ ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಅವರು ತಾವು 18 ವರ್ಷದವರಾಗಿದ್ದಾಗ ಸಿನಿಮಾಕ್ಕಾಗಿ ಹೇಗೆ ಅವಕಾಶ ಕೇಳುತ್ತಿದ್ದರು ಎಂಬ ಕುರಿತ ಪುಟ್ಟ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸುವ ನಟ ಜಗ್ಗೇಶ್. ದಶಕಗಳಿಂದ ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ಜಗ್ಗೇಶ್ ಅವರು ಯಾವುದೇ ಪಾತ್ರಕೊಟ್ಟರು ಲೀಲಾಜಾಲವಾಗಿ ಅಭಿನಯಿಸುತ್ತಾರೆ. 1982ರಲ್ಲಿ ಇಬ್ಬನಿ ಕರಗಿತು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ತರ್ಲೆ ನನ್ ಮಗ ಸಿನಿಮಾದ ಮೂಲಕ ನಾಯಕನಟನಾಗಿ ಬಣ್ಣ ಹಚ್ಚಿದರು. ಮೊದಲಿಗೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಜಗ್ಗೇಶ್ ಇದೀಗ ಚಂದನವನದಲ್ಲಿ ನಾಯಕ ನಟನಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

    ಒಂದು ಕಾಲದಲ್ಲಿ ಅಭಿನಯಿಸಲು ಅವಕಾಶ ಸಿಗದೇ ಪರಾದಾಡುತ್ತಿದ್ದ ಜಗ್ಗೇಶ್ ಆಗ ಸಿನಿಮಾಗಳ ಅವಕಾಶಕ್ಕಾಗಿ ತಾವು ಹೇಗೆ ಎಲ್ಲರಲ್ಲೂ ಮನವಿಮಾಡಿಕೊಳ್ಳುತ್ತಿದ್ದರು ಎಂಬುವುದನ್ನು ಹಾಸ್ಯಮಯವಾಗಿ ನಟಿಸಿ ತೋರಿಸಿದ್ದಾರೆ. ಇನ್ನೂ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ

    ವೀಡಿಯೋದಲ್ಲಿ ಜಗ್ಗೇಶ್ ಅವರು, ನನಗೂ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಆಸೆ ಇದೆ. ನಾನು ಅಭಿನಯಕ್ಕೆ ಎಲ್ಲ ರೀತಿಯ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಸ್ವಿಮಿಂಗ್, ಹಾರ್ಸ್ ರೈಡಿಂಗ್ ಎಲ್ಲವನ್ನು ಮಾಡುತ್ತೇನೆ. ನನಗೆ ಆ್ಯಕ್ಟಿಂಗ್ ಮಾಡಬೇಕು ಎಂದು ತುಂಬಾ ಇಷ್ಟ ಒಂದೇ ಒಂದು ಚಾನ್ಸ್ ಕೊಡಿ ಸರ್.. ಪ್ಲೀಸ್ ಸರ್ ಎಂದು ಹಾಸ್ಯಮಯವಾಗಿ ಹೇಳುತ್ತಾ ನಟಿಸಿರುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋ ಜೊತೆಗೆ. ನಾನು 18ವರ್ಷ ಇದ್ದಾಗ ಹೀಗೆ ಸಿನಿಮದಲ್ಲಿ ಅವಕಾಶ ಕೇಳುತ್ತಿದ್ದದ್ದು, ಆಧುನಿಕ ಅವಿಷ್ಕಾರದಲ್ಲಿ ನಿಮ್ಮ ನಗಿಸಲು ಈ ಯತ್ನ.. ಜಸ್ಟ್ ಫಾರ್ ಫನ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಡು, ನುಡಿ ವಿಚಾರಕ್ಕೆ ಬಂದ್ರೆ ನಾನು ಜೊತೆಯಾಗಿರುತ್ತೇನೆ: ನಿಖಿಲ್ ಕುಮಾರಸ್ವಾಮಿ

    Raghavendra Stores Jaggesh Hombale Films Santhosh Ananddram

    ಸದ್ಯ ಜಗ್ಗೇಶ್ ಅವರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ರಾಘವೇಂದ್ರ ಸ್ಟೋರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಇನ್ನೂ ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್ ನಡಿ ನಿರ್ಮಾಣವಾಗುತ್ತಿರು 12ನೇ ಸಿನಿಮಾವಾಗಿದೆ.