Tag: ರಾಘವೇಂದ್ರ ಮಠ

  • ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್

    ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್

    – ನಿತ್ಯ ಪೂಜೆ ಉತ್ಸವಗಳಲ್ಲಿ ಬದಲಾವಣೆ

    ರಾಯಚೂರು: ರಾಹುಗ್ರಸ್ತ ರಕ್ತಚಂದ್ರಗ್ರಹಣ (Bloodmoon Eclipse 2025) ಹಿನ್ನೆಲೆ ಇಂದು ಮಂತ್ರಾಲಯ (Mantralaya) ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಿತ್ಯ ಪೂಜೆ ಉತ್ಸವಗಳಲ್ಲಿ ಬದಲಾವಣೆಯಾಗಲಿದೆ.

    ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್ ಆಗಲಿದ್ದು, ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿದೆ. ಮಧ್ಯಾಹ್ನ 12:30ಕ್ಕೆ ಎಲ್ಲಾ ಪೂಜೆ, ಉತ್ಸವ, ಸೇವೆಗಳು, ಸಂಸ್ಥಾನ ಪೂಜೆ, ಪಾದ ಪೂಜೆ, ಪ್ರಸಾದ ಮುಕ್ತಾಯಗೊಳ್ಳಲಿದೆ. ರಾತ್ರಿ ವೇಳೆ ನಡೆಯುವ ಸೇವೆ ಉತ್ಸವಗಳು ಹಗಲಿನಲ್ಲೇ ಜರುಗಲಿವೆ. ಇದನ್ನೂ ಓದಿ: ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ

    ಪ್ರಾಂಗಣದಲ್ಲಿ ನಡೆಯುವ ವಿವಿಧ ರಥೋತ್ಸವ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಗ್ರಹಣ ಕಾಲದಲ್ಲಿ ಮಠದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಗ್ರಹಣ ಮುಕ್ತಾಯ ಬಳಿಕ ರಾಯರ ವೃಂದಾವನಕ್ಕೆ ಜಲಾಭಿಷೇಕ ಮಾಡಲಾಗುತ್ತದೆ. ಇದನ್ನೂ ಓದಿ: ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

  • ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

    ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

    – ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ

    ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳು (Sri Raghavendra Swamy) ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷಗಳು ಸಂದಿವೆ. ಈ ಹಿನ್ನೆಲೆ ಮಂತ್ರಾಲಯ ರಾಯರ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವದ ಮುಖ್ಯ ಘಟ್ಟ ಮಧ್ಯಾರಾಧನೆಯನ್ನ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

    ಗುರು ರಾಯರ ಆರಾಧನಾ ಮಹೋತ್ಸವದ ಬಹು ಮುಖ್ಯವಾದ ದಿನ ಮಧ್ಯಾರಾಧನೆ ಇಂದು ಮಂತ್ರಾಲಯ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ನಡೆಯುತ್ತಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ಶ್ರಾವಣ ಶುಕ್ಲ ಪಕ್ಷದ ಬಿದಿಗೆಯ ಮಂಗಳಕರವಾದ ಈ ದಿನವನ್ನ ಮಧ್ಯಾರಾಧನೆ (Madhyaradhane) ಎಂದು ಆಚರಿಸಲಾಗುತ್ತದೆ. ಈ ದಿನ ಭಕ್ತರಿಗೆ ವಿಶೇಷ ಅನುಗ್ರಹ ದೊರೆಯುತ್ತದೆ ಅನ್ನೋ ಪ್ರತೀತಿಯಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ – ಸಂಜೆ ಗುರು ಅನುಗ್ರಹ ಪ್ರಶಸ್ತಿ ಪ್ರದಾನ

    ಈ ದಿನ ವಿಶೇಷವಾಗಿ ಮಠದ ಪೀಠಾಧಿಪತಿಗಳು ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ಮಾಡುತ್ತಾರೆ. ಪ್ರತಿನಿತ್ಯದ ಪಂಚಾಮೃತ ಅಭಿಷೇಕಕ್ಕಿಂತ ಹತ್ತುಪಟ್ಟು ಹೆಚ್ಚು ಪದಾರ್ಥಗಳನ್ನ ಬಳಸಲಾಗುತ್ತದೆ. ಮಧ್ಯಾರಾಧನೆ ಅಂಗವಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಜರುಗುತ್ತದೆ. ನೂತನವಾಗಿ ನಿರ್ಮಾಣವಾದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ. ದೇಶದ ವಿವಿಧೆಡೆಯಿಂದ ಭಕ್ತರು, ಗಣ್ಯರು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುತ್ತಾರೆ.

    ಮಂತ್ರಾಲಯಕ್ಕೆ ಬರುವ ಭಕ್ತರು ಪವಿತ್ರ ತುಂಗಭದ್ರಾ ನದಿ ಸ್ನಾನ ಮಾಡಲು ಹಾತೊರೆಯುತ್ತಾರೆ. ಆದರೆ, ಈ ಭಾರಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರಕ್ಕೆ ತೆರಳದಂತೆ ಭಕ್ತರಿಗೆ ಮುನ್ಸೂಚನೆ ನೀಡಿ, ಕಟ್ಟೆಚ್ಚರ ವಹಿಸಲಾಗಿದೆ. ನದಿ ಪಾತ್ರದಲ್ಲಿ ರಾಯರ ಭಕ್ತರಿಗೆ ಪುಣ್ಯ ಸ್ನಾನಕ್ಕಾಗಿ ಶವರ್‌ಗಳ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಮೂಲ ವೃಂದಾವನಕ್ಕೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

    ರಾಯರ ಆರಾಧನಾ ಮಹೋತ್ಸವಕ್ಕೆ ದೇಶದ ಮೂಲೆ
    ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ. ಇಂದಿನ ಮಧ್ಯಾರಾಧನೆ ಬಳಿಕ ಆ.12 ರಂದು ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಉತ್ತರಾರಾಧನೆಯೊಂದಿಗೆ ರಾಯರ ಆರಾಧನಾ ಮಹೋತ್ಸವದ ಮುಖ್ಯ ಮೂರು ದಿನಗಳ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

  • ಮಂತ್ರಾಲಯದಲ್ಲಿ ರಾಯರ 430ನೇ ಜನ್ಮದಿನ ಸಂಭ್ರಮ – ನೂರಾರು ಕಲಾವಿದರಿಂದ ನಾದಹಾರ ಸೇವೆ

    ಮಂತ್ರಾಲಯದಲ್ಲಿ ರಾಯರ 430ನೇ ಜನ್ಮದಿನ ಸಂಭ್ರಮ – ನೂರಾರು ಕಲಾವಿದರಿಂದ ನಾದಹಾರ ಸೇವೆ

    ರಾಯಚೂರು: ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 430ನೇ ಜನ್ಮದಿನವನ್ನು ಮಂತ್ರಾಲಯದಲ್ಲಿ ವರ್ಧಂತಿ ಉತ್ಸವವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

    ಕಳೆದ 6 ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಗುರುವೈಭವೋತ್ಸವಕ್ಕೆ ಗುರುವಾರ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ತೆರೆ ಬೀಳಲಿದೆ. ಇದನ್ನೂ ಓದಿ: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್‌ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು

    ಗುರುರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನ ಪ್ರತಿ ವರ್ಷದಂತೆ ಈ ವರ್ಷವೂ ಮಂತ್ರಾಲಯದಲ್ಲಿ (Mantralaya) ಗುರುವೈಭವೋತ್ಸವವಾಗಿ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಚೆನ್ನೈ ಶ್ರೀರಾಘವೇಂದ್ರ ನಾದಹಾರ ಸೇವಾ ಟ್ರಸ್ಟ್‌ನ ನೂರಾರು ಕಲಾವಿದರಿಂದ ನಾದಹಾರ ಸಮರ್ಪಣಾ ಸೇವೆ ನಡೆಯಿತು. ಕಳೆದ 20 ವರ್ಷಗಳಿಂದ ನಾದಹಾರ ಸಮರ್ಪಣಾ ಸೇವೆ ನಡೆಯುತ್ತಿದೆ. ಇದನ್ನೂ ಓದಿ: ದ.ಕೊರಿಯಾ| ಯುದ್ಧ ವಿಮಾನದಿಂದ ಜನವಸತಿ ಪ್ರದೇಶಕ್ಕೆ ಆಕಸ್ಮಿಕವಾಗಿ ಬಿತ್ತು ಬಾಂಬ್

    ಗುರುವೈಭವೋತ್ಸವ ಹಿನ್ನೆಲೆ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಿತು. ಉತ್ಸವ ಮೂರ್ತಿ ಪ್ರಹ್ಲಾದ ರಾಜರನ್ನ ಚಿನ್ನದ ರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು. ದೇಶದ ಮೂಲೆ ಮೂಲೆಯಿಂದ ಆಗಮಿಸುತ್ತಿರುವ ಭಕ್ತರು ಶ್ರೀ ಗುರುರಾಯರ ದರ್ಶನ ಪಡೆಯುತ್ತಿದ್ದಾರೆ.

  • ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್

    ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್

    – ಅಳಿಯ, ಪುತ್ರಿಯ ಜೊತೆ ಪೂಜೆ ಸಲ್ಲಿಸಿದ ಸುಧಾಮೂರ್ತಿ

    ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murthy) ಅವರ ಅಳಿಯ ರಿಷಿ ಸುನಾಕ್ (Rishi Sunak) ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ.

    ಮಂಗಳವಾರ ಬೆಂಗಳೂರಿಗೆ ಪತ್ನಿ ಜೊತೆ ಆಗಮಿಸಿದ್ದ ಸುನಾಕ್ ಅವರು ಬಳಿಕ ರಾಘವೇಂದ್ರ ಮಠಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಡ್ರೈ ಪೋರ್ಟ್ ಎಂದರೇನು?  ಬಿಹಾರದಲ್ಲಿ ಅದರ ಅವಶ್ಯಕತೆ ಏನಿತ್ತು? 

    ಜಯನಗರದ ನಂಜನಗೂಡು ಶ್ರೀಗುರು ರಾಘವೇಂದ್ರ ಮಠಕ್ಕೆ ಕುಟುಂಬ ಸಮೇತ ಸುನಾಕ್ ಭೇಟಿ ಕೊಟ್ಟಿದ್ದಾರೆ. ಸುಧಾಮೂರ್ತಿ ದಂಪತಿ, ಅಳಿಯ ಋಷಿ ಸುನಾಕ್ ದಂಪತಿ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.

    ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ.ವಾದಿಂದ್ರಾಚಾರ್ಯ ಅವರು ರಾಯರ ಶೇಷ ವಸ್ತ್ರ, ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಇದನ್ನೂ ಓದಿ: MUDA Case: ಇಂದು ಮೈಸೂರು ‘ಲೋಕಾ’ ಕಚೇರಿಯಲ್ಲಿ ಸಿಎಂ ವಿಚಾರಣೆ

  • ಹೊಸ ವರ್ಷಾಚರಣೆ – ಮಂತ್ರಾಲಯ ರಾಯರ ಮಠಕ್ಕೆ ಹರಿದು ಬಂದ ಭಕ್ತಸಾಗರ

    ಹೊಸ ವರ್ಷಾಚರಣೆ – ಮಂತ್ರಾಲಯ ರಾಯರ ಮಠಕ್ಕೆ ಹರಿದು ಬಂದ ಭಕ್ತಸಾಗರ

    ರಾಯಚೂರು: ಹೊಸ ವರ್ಷಾಚರಣೆ (New Year) ಹಿನ್ನೆಲೆ ಮಂತ್ರಾಲಯದ (Mantralaya) ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ (Devotees) ದಂಡು ಹರಿದು ಬಂದಿದೆ.

    ಶನಿವಾರದಿಂದ ಈವರೆಗೂ ಸುಮಾರು 1 ಲಕ್ಷ ಭಕ್ತರು ರಾಯರ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಲ್ಕು ಪ್ರತ್ಯೇಕ ಸರತಿ ಸಾಲುಗಳ ಮೂಲಕ ರಾಯರ ಮೂಲ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷದ ಪಾರ್ಟಿಗೆ 193 ಕೋಟಿ ಮೌಲ್ಯದ ಎಣ್ಣೆ ಸೇಲ್

    ಹೊಸ ವರ್ಷದಂದು ರಾಯರ ಕೃಪೆಗೆ ಪಾತ್ರರಾಗಲು ಭಕ್ತರು ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ. ಕ್ಯಾಲೆಂಡರ್ ಹೊಸ ವರ್ಷವಾಗಿರುವುದರಿಂದ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳನ್ನ ನೇರವೇರಿಸಿಲ್ಲ. ಎಂದಿನಂತೆ ಬೆಳಗ್ಗೆ ನಿತ್ಯದ ಪೂಜೆಯನ್ನು ಮಾಡಲಾಗಿದೆ. ಇದನ್ನೂ ಓದಿ: ಹೊಸ ವರ್ಷ, ಹೊಸ ದಿನ- ದೇವರ ಮೊರೆ ಹೋದ ರಾಜ್ಯದ ಜನ

  • ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಂತರ ರೂ. ಸಂಗ್ರಹ

    ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಂತರ ರೂ. ಸಂಗ್ರಹ

    ರಾಯಚೂರು: ಗುರುರಾಯರ ಸನ್ನಿಧಿಯಾದ ಮಂತ್ರಾಲಯ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Mutt) ಮಾರ್ಚ್ ತಿಂಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

    ಕಳೆದ 27 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಟ್ಟು 2 ಕೋಟಿ 11 ಲಕ್ಷ 95 ಸಾವಿರದ 988 ರೂ. ಕಾಣಿಕೆಯನ್ನು ಭಕ್ತರು ನೀಡಿದ್ದಾರೆ. ಇದರಲ್ಲಿ 2 ಕೋಟಿ 7 ಲಕ್ಷ 39 ಸಾವಿರದ 68 ರೂ. ನೋಟುಗಳಲ್ಲಿದ್ದು, 4 ಲಕ್ಷ 56 ಸಾವಿರದ 920 ರೂಪಾಯಿ ನಾಣ್ಯಗಳಿದ್ದವು. ಇನ್ನೂ 7 ಗ್ರಾಂ ಚಿನ್ನ, 571 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ನೀಡಲಾಗಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್ 

    ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು ಹಾಗೂ ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಕಾಣಿಕೆ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

  • 500 ಸ್ವಯಂಸೇವಕರಿಂದ ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯ

    500 ಸ್ವಯಂಸೇವಕರಿಂದ ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಸ್ವಚ್ಛತಾ ಕಾರ್ಯ

    ರಾಯಚೂರು: ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇದೀಗ ತುಂಗಾರತಿ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ತುಂಗಭದ್ರಾ ನದಿಯ ಸ್ವಚ್ಛತೆಗೆ ನೂರಾರು ಜನ ಸ್ವಯಂ ಸೇವಕರು ಮುಂದಾಗಿದ್ದಾರೆ. ಯುವ ಬ್ರಿಗೇಡ್ ಹಾಗೂ ರಾಯರ ಮಠದ ನೇತೃತ್ವದಲ್ಲಿ ನದಿ ಸ್ವಚ್ಛಗೊಳಿಸಲಾಗುತ್ತಿದೆ.

    ಮಂತ್ರಾಲಯ ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಪವಿತ್ರ ತಾಣ. ತುಂಗಭದ್ರೆ ತಟದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಿತ್ಯ ಭಕ್ತರ ದಂಡು ಹರಿದು ಬರುತ್ತಲೇ ಇರುತ್ತದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಪಾಪ ಕಳೆದುಕೊಳ್ಳಲು ತುಂಗಭದ್ರೆಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಜೊತೆಗೆ ತಮ್ಮ ಬಟ್ಟೆ ಸೇರಿದಂತೆ ನಾನಾ ವಸ್ತುಗಳನ್ನು ನದಿಗೆ ಬಿಟ್ಟುಬಿಡುತ್ತಾರೆ. ಇದನ್ನೂ ಓದಿ: ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

    ಭಕ್ತರ ಪಾಪ ಕಳೆಯುವ ತುಂಗಭದ್ರಾ ನದಿ ಈಗ ಮಲೀನವಾಗಿದೆ. ತುಂಗಾರಾಧನೆ ಹೆಸರಲ್ಲಿ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಈಗ ಆರಂಭವಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರೀಗೆಡ್‌ನ 500 ಜನರ ತಂಡ ತುಂಗಭದ್ರಾ ನದಿ ಸ್ವಚ್ವತೆಗೆ ಮುಂದಾಗಿದೆ. ಮಾರ್ಚ್ 12 ಹಾಗೂ 13 ರಂದು ಎರಡು ದಿನಗಳ ಕಾಲ ನದಿ ಸ್ವಚ್ಚತಾ ಕಾರ್ಯ ನಡೆಯಲಿದೆ.

    ತುಂಗಭದ್ರೆಯ ಮಲೀನತೆ ಕಳೆಯಲು ಮುಂದಾಗಿರುವ ಯುವ ಬ್ರೀಗೆಡ್ ಸದಸ್ಯರೊಂದಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠವೂ ಕೂಡ ಕೈ ಜೋಡಿಸಿದೆ. ನಾಡಿನ ವಿವಿಧೆಡೆಯಿಂದ ಬಂದವರಿಗೆ ವಸತಿ, ಊಟದ ಸೌಕರ್ಯ ಅಗತ್ಯ ಸಲಕರಣೆಗಳನ್ನು ಮಠ ಪೂರೈಸಿದೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಯಾರು, ಎಲ್ಲಿ ಮಾಡಿದರೂ ರಾಘವೇಂದ್ರ ಸ್ವಾಮಿಗಳ ಮಠ ಸಹಕಾರ ನೀಡಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಲ್ಯಾಂಡ್ ಮಾಫಿಯಾ ಸೇರಿ ಎಲ್ಲಾ ಮಾಫಿಯಾಗಳನ್ನ ರಾಜ್ಯದಲ್ಲಿ ಬಗ್ಗುಬಡಿಯುತ್ತೇವೆ: ಬೊಮ್ಮಾಯಿ

    ಒಟ್ಟಿನಲ್ಲಿ ಕಸದಿಂದ ತುಂಬಿದ್ದ ತುಂಗಭದ್ರಾ ನದಿ ಈಗಲಾದರೂ ಸ್ವಚ್ಛವಾಗುತ್ತಿದೆ ಎನ್ನುವುದೇ ಸಮಾಧಾನಕರ ಸಂಗತಿ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಯುವಬ್ರಿಗೇಡ್ ಸ್ವಯಂ ಸೇವಕರು ನದಿ ಸ್ವಚ್ಛ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನು ಮುಂದಾದರೂ ತೀರ್ಥ ಕ್ಷೇತ್ರಗಳಿಗೆ ತೆರಳುವ ಜನರು ಸ್ವಚ್ಛತೆ ಕಾಪಾಡಬೇಕಿದೆ.

  • ಮೋದಿ ಮತ್ತೊಮ್ಮೆ ಪ್ರಧಾನಿ- ರಾಯರಿಗೆ ಚಿನ್ನದ ರಥೋತ್ಸವ ಸೇವೆ ನೀಡಿದ ವೃದ್ಧ ದಂಪತಿ!

    ಮೋದಿ ಮತ್ತೊಮ್ಮೆ ಪ್ರಧಾನಿ- ರಾಯರಿಗೆ ಚಿನ್ನದ ರಥೋತ್ಸವ ಸೇವೆ ನೀಡಿದ ವೃದ್ಧ ದಂಪತಿ!

    ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸಿ ವೃದ್ಧ ದಂಪತಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗೆ ಮೋದಿ ಹೆಸರಿನಲ್ಲಿ ವಿಶೇಷ ಚಿನ್ನದ ರಥೋತ್ಸವ ಸೇವೆಯನ್ನ ಮಾಡಿಸಿದ್ದಾರೆ.

    ಮಂತ್ರಾಲಯ ರಾಘವೇಂದ್ರ ಮಠದಲ್ಲಿ 7 ಸಾವಿರ ರೂಪಾಯಿ ರಥೋತ್ಸವ ಶುಲ್ಕ ನೀಡಿ ಮೋದಿ ಅವರ ಹೆಸರಿನಲ್ಲಿ ರಶೀದಿ ಪಡೆದಿದ್ದಾರೆ. ಮಾರ್ಚ್ 24ರಂದು ಬೆಳಗಾವಿ ಮೂಲದ ದಂಪತಿ ರಾಯರಿಗೆ ಪೂಜೆ ಸಲ್ಲಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಅಂದುಕೊಂಡಿದ್ದೆಲ್ಲಾ ನೆರೆವೇರುತ್ತೆ ಅನ್ನೋ ನಂಬಿಕೆಯಲ್ಲಿ ವೃದ್ಧ ದಂಪತಿ ಈ ವಿಶೇಷ ರಥೋತ್ಸವ ಸೇವೆ ಸಲ್ಲಿಸಿದ್ದಾರೆ. ಈ ದಂಪತಿ ಮೋದಿ ಮೇಲಿಟ್ಟಿರುವ ಪ್ರೀತಿ, ಅಭಿಮಾನ ಸದ್ಯ ನೆಟ್ಟಿಗರ ಮನ ಗೆದ್ದಿದೆ.