Tag: ರಾಗಿ ಮಾಲ್ಟ್

  • ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ: ಮಧು ಬಂಗಾರಪ್ಪ

    ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ: ಮಧು ಬಂಗಾರಪ್ಪ

    ಬೆಂಗಳೂರು: ಮಿಡ್ ಡೇ ಮೀಲ್ಸ್ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ನಿರ್ಧಾರ ಮಾಡಲಾಗಿದೆ. ಮಧ್ಯಾಹ್ನ ಬಿಸಿಯೂಟದ ಜೊತೆ ರಾಗಿ ಮಾಲ್ಟ್ ಕೊಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

    ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಪ್ರೊಗ್ರಾಮ್ ಲಾಂಚ್ ಮಾಡ್ತೀವಿ. ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ರಾಗಿ ಮಾಲ್ಟ್ ನೀಡುವ ನಿರ್ಧಾರ ಮಾಡಿದ್ದೇವೆ. ಒಂದು ಎನ್‌ಜಿಒ ಎರಡು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ರು. ಅದು ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಕ್ಷೀರಭಾಗ್ಯದ ಹಾಲಿನ ಜೊತೆ ಬೆಳಗ್ಗೆ ರಾಗಿಗಂಜಿ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

    ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ಮಾಡಲು ನಿರ್ಧಾರ ಆಗಿದೆ. 6 ತಿಂಗಳಲ್ಲಿ ಎಲ್ಲವೂ ಸರಿ ಆಗುತ್ತದೆ. 3 ಸಾವಿರ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ. ಎರಡು ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ. ಎಲ್‌ಕೆಜಿಯಿಂದ 12 ನೇ ತರಗತಿವರೆಗೂ ಕೆಪಿಎಸ್ ಶಾಲೆಯಲ್ಲಿ ಇರಲಿದೆ. ಮೊದಲ ಬಾರಿಗೆ 3 ಪಬ್ಲಿಕ್ ಪರೀಕ್ಷೆ ಮಾಡ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿದೆ ಎಂದರು.

    ಎಸ್‌ಇಪಿ ಅನುಷ್ಠಾನ ಆಗಲಿದೆ. ಈ ಬಗ್ಗೆ ಮೊದಲ ಸಭೆ ಆಗಿದೆ. ಎಸ್‌ಇಪಿ ಇರೋದರಿಂದ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ. ಎಸ್‌ಇಪಿ ರಾಜ್ಯ ಪಠ್ಯ ಕ್ರಮವೋ, ಸಿಬಿಎಸ್‌ಇ ಪಠ್ಯಕ್ಕೋ ಅಂತ ರಿಪೋರ್ಟ್ ಬಂದ ಮೇಲೆ ಗೊತ್ತಾಗಲಿದೆ. ನಮ್ಮ ಸಿಲಬಸ್ ಸಿಬಿಎಸ್‌ಇ ಗಿಂತ ಉತ್ತಮವಾಗಿ ಇರಲಿದೆ. ವರದಿ ಬಂದ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೀವಿ ಎಂದು ಮಾಹಿತಿ ನೀಡಿದರು.

    10 ಮತ್ತು 12ನೇ ತರಗತಿ ಪರೀಕ್ಷೆಗೆ ಹಿಜಬ್‌ಗೆ ಅವಕಾಶ ಕೊಡುವ ವಿಚಾರವಾಗಿ ಮಾತನಾಡಿ, ಹಿಜಬ್ ವಿಚಾರ ಕೋರ್ಟ್ನಲ್ಲಿ ಇದೆ. ಈ ಬಗ್ಗೆ ನಾನು ಈಗ ಪ್ರತಿಕ್ರಿಯೆ ಕೊಡೋದು ಸರಿಯಲ್ಲ ಎಂದರು.

    ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಬಿ.ಬಿ.ಕಾವೇರಿ, ಪಿ.ಎಂ.ಪೋಷಣ್, ನಿರ್ದೇಶಕರಾದ ಶುಭಾ ಕಲ್ಯಾಣ್, ಅಪರ ಆಯುಕ್ತರಾದ ಜಯಶ್ರೀ ಇದ್ದರು.

  • ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ- ಸಖತ್ ಟೇಸ್ಟ್ ಆಗಿರುತ್ತೆ

    ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ- ಸಖತ್ ಟೇಸ್ಟ್ ಆಗಿರುತ್ತೆ

    ಬಿಸಿಲಿನ ತಾಪಮಾನ ಹೆಚ್ಚಾಗಿದೆ. ರಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರ. ಹೀಗಾಗಿ ಮನೆಯಲ್ಲಿರುವ ಮಕ್ಕಳು, ವೃದ್ಧರಿಗೆ ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ ಕೊಡಿ. ಪ್ರತಿದಿನ ರಾಗಿ ಮಾಲ್ಟ್ ಮಾಡಿ ಕುಡಿದರೆ ತೂಕವನ್ನು ಕಡಿಮೆ ಮಾಡಬಹುದು. ರಾಗಿ ಮಾಲ್ಟ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ರಾಗಿ ಹಿಟ್ಟು- 1 ಕಪ್
    * ಟೀಸ್ಪೂನ್ ಬೆಲ್ಲ- 2ಚಮಚ
    * ಹಾಲು- 1ಕಪ್
    * ಏಲಕ್ಕಿ ಪುಡಿ -ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ, ಸಣ್ಣ ಕಪ್‍ನಲ್ಲಿ ರಾಗಿ ಹಿಟ್ಟು ನೀರನ್ನು ಹಾಕಿ ಯಾವುದೇ ಉಂಡೆಗಳಾಗದಂತೆ ಮಿಶ್ರ ಮಾಡಿಟ್ಟಿರಿ.

    * ಈಗ ಪಾತ್ರೆಗೆ ನೀರನ್ನು ಹಾಕಿ, ನೀರು ಕುದಿಯಲು ಬಂದ ನಂತರ ಕರಗಿದ ರಾಗಿ ಹಿಟ್ಟಿನಲ್ಲಿ ಸೇರಿಸಿ. ಇದನ್ನೂ ಓದಿ: ಚೆನ್ನ ಪಲಾವ್ ಮಾಡುವ ಸರಳ ವಿಧಾನ ನಿಮಗಾಗಿ

    * ಮಿಶ್ರಣವು 5 ನಿಮಿಷಗಳ ನಂತರ ದಪ್ಪವಾಗುತ್ತದೆ. ಆಗ ಬೆಲ್ಲ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಹಾಲು, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ರಾಗಿ ಗಂಜಿ ಅಥವಾ ರಾಗಿ ಮಾಲ್ಟ್ ಸವಿಯಲು ಸಿದ್ಧವಾಗುತ್ತದೆ.

  • ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡೋ ವಿಧಾನ

    ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡೋ ವಿಧಾನ

    ಕೊರೊನಾ ಲಾಕ್‍ಡೌನ್ ಇಂದಿನಿಂದ ಸಡಿಲಿಕೆ ಆಗಿದೆ. ಆದರೆ ಜನರು ಆರೋಗ್ಯವನ್ನು ಕಾಪಾಡಿಕೊಳ್ಳವ ಬಗ್ಗೆ ಎಚ್ಚರವಹಿಸಬೇಕು. ಒಂದುಕಡೆ ಕೊರೊನಾ ವೈರಸ್ ಮತ್ತೊಂದೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ರಾಗಿ ಆರೋಗ್ಯ ಉತ್ತಮವಾದ ಆಹಾರ. ಹೀಗಾಗಿ ಮನೆಯಲ್ಲಿರುವ ಮಕ್ಕಳು, ವೃದ್ಧರಿಗೆ ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ ಕೊಡಿ. ಪ್ರತಿದಿನ ರಾಗಿ ಮಾಲ್ಟ್ ಮಾಡಿ ಕುಡಿದರೆ ತೂಕವನ್ನು ಕಡಿಮೆ ಮಾಡಬಹುದು. ರಾಗಿ ಮಾಲ್ಟ್ ಮಾಡುವ ವಿಧಾನ ಇಲ್ಲಿದೆ. ಇದನ್ನೂ ಓದಿ: ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    ಬೇಕಾಗುವ ಸಾಮಗ್ರಿಗಳು
    1. ರಾಗಿ ಹಿಟ್ಟು – 2 ಚಮಚ
    2. ಬೆಲ್ಲ – 1 ಚಮಚ
    3. ಹಾಲು – ಅರ್ಧ ಕಪ್
    4. ಏಲಕ್ಕಿ ಪುಡಿ – 1/4 ಚಮಚ

    ಮಾಡುವ ವಿಧಾನ
    * ಮೊದಲಿಗೆ ರಾಗಿ ಹಿಟ್ಟು, ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟು ಒಂದು ಕಪ್ ನೀರು ಹಾಕಿ ಕುದಿಸಿ.
    * ಈಗ ನೀರು ಕುದಿಯುತ್ತಿದ್ದಂತೆ ಮಿಕ್ಸ್ ಮಾಡಿಕೊಂಡಿದ್ದ ರಾಗಿಯನ್ನು ಹಾಕಿ ಗಂಟು ಬರದಂತೆ ಸುಮಾರು 9 ನಿಮಿಷ ಬೇಯಿಸಿ (ತಳ ಹಿಡಿಯದಂತೆ, ಗಂಟು ಬಾರದಂತೆ ಬಾಡಿಸುತ್ತಿರಬೇಕು)
    * ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಅರ್ಧ ಕಪ್ ಹಾಲು ಹಾಕಿ ಮಿಕ್ಸ್ ಮಾಡಿ (ಸ್ಟೌವ್ ಕಡಿಮೆ ಉರಿಯಲ್ಲಿರಬೇಕು)
    * ಈಗ ಏಲಕ್ಕಿ ಪುಡಿ ಹಾಕಿ ಎರಡ್ಮೂರು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿದರೆ ರಾಗಿ ಮಾಲ್ಟ್ ಸಿದ್ಧ (ಮುಚ್ಚುಳವನ್ನು ಮುಚ್ಚಬಾರದು)