Tag: ರಾಗಿ ಬೆಳೆ

  • ಭಾರೀ ಮಳೆಗೆ ಬೆಳೆ ನಾಶವಾಗುವ ಆತಂಕದಲ್ಲಿ ರೈತರು

    ಭಾರೀ ಮಳೆಗೆ ಬೆಳೆ ನಾಶವಾಗುವ ಆತಂಕದಲ್ಲಿ ರೈತರು

    ಬೆಂಗಳೂರು/ನೆಲಮಂಗಲ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ರೈತರು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಕಟಾವಿಗೆ ಬಂದಿದ್ದ ರಾಗಿ ಬೆಳೆ ಸಂಪೂರ್ಣವಾಗಿ ನೆಲಕಚ್ಚುವಂತಾಗಿದೆ. ಇನ್ನೂ ಈ ವರ್ಷ ಉತ್ತಮ ಮಳೆಯಿಂದಾಗಿ ರೈತರು ನಾನಾ ಬೆಳೆಗಳನ್ನು ಬೆಳೆದಿದ್ದರು, ಇನ್ನೂ ರಾಗಿ ಬೆಳೆ ಭೋಗವಾಗಿ ಎತ್ತರಕ್ಕೆ ಬೆಳೆದು ರೈತರಲ್ಲಿ ಸಂತಸಕ್ಕೆ ಕಾರಣವಾಗಿತ್ತು. ಈ ನಡುವೆ ಮಳೆಯಿಂದಾಗಿ ತಾಲೂಕಿನಲ್ಲಿ ರಾಗಿ ಬೆಳೆ ಕೈಗೆ ಬರುವ ವೇಳೆಯಲ್ಲಿ ಸಂಪೂರ್ಣವಾಗಿ ನೆಲ ಕಚ್ಚುವಂತಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗಲು ಶಿಕ್ಷಕ ಯತ್ನ

    Millet crop

    ಮಳೆ ಮುಂದುವರಿದರೆ ಜಾನುವಾರುಗಳಿಗೂ ಸಹ ಮೇವು ಸಿಗದ ಪರಿಸ್ಥಿತಿ ಎದುರಾಗಬಹುದು ಎಂದು ರೈತರಲ್ಲಿ ಕಳವಳ ಶುರುವಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಬೆಳೆ ಈ ವರ್ಷದ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯ ಹೊಡೆತ ಬಿದ್ದಿದ್ದು, ಕಟಾವು ಹಂತದಲ್ಲಿದ್ದ ರಾಗಿ ಬೆಳೆ, ಮಳೆಗೆ ನೆಲಕ್ಕೆ ಬಿದ್ದು, ರಾಗಿ ಬೆಳೆ ಕೈತಪ್ಪುವ ಆತಂಕದಲ್ಲಿ ತಾಲೂಕಿನ ರೈತರಿದ್ದಾರೆ. ಇದನ್ನೂ ಓದಿ:  ಮೊಬೈಲ್ ಕದಿಯಲು ರೋಗಿಯಾದ ಕಳ್ಳ – ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

  • ಕೋಲಾರದಲ್ಲೂ ಮಳೆಯಬ್ಬರ – ತುಂಬಿದ ಕೆರೆ ಕುಂಟೆ, ಬೆಳೆದ ರಾಗಿ ಬೆಳೆ ಮಣ್ಣು ಪಾಲು

    ಕೋಲಾರದಲ್ಲೂ ಮಳೆಯಬ್ಬರ – ತುಂಬಿದ ಕೆರೆ ಕುಂಟೆ, ಬೆಳೆದ ರಾಗಿ ಬೆಳೆ ಮಣ್ಣು ಪಾಲು

    ಕೋಲಾರ: ಉತ್ತರ ಕರ್ನಾಟಕ ಮಾತ್ರವಲ್ಲದೆ ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕೋಲಾರ, ಬಂಗಾರಪೇಟೆ ಮತ್ತು ಕೆಜಿಎಫ್ ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಮುಳಬಾಗಲು, ಶ್ರೀನಿವಾಸಪುರ ಮತ್ತು ಮಾಲೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ರೈತರಲ್ಲಿ ಅತಂಕ ಮೂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಜೋರು ಮಳೆಗೆ ರಾಗಿ ಸೇರಿದಂತೆ ವಿವಿಧ ಬೆಳೆಗಳು ನೆಲ ಕಚ್ಚುತ್ತಿದ್ದು, ಬೆಳೆದ ಬೆಳೆಯೆಲ್ಲ ಮಣ್ಣು ಪಾಲಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಹುತೇಕ ಕೆರೆ ಕುಂಟೆಗಳೆಲ್ಲ ತುಂಬಿವೆ. ಕೋಲಾರ ಜಿಲ್ಲೆಯಲ್ಲಿ ಮುಂಗಾರಿನಿಂದ ವಾರ್ಷಿಕ ವಾಡಿಕೆ ಮಳೆ 643 ಮಿ.ಮೀ ಇದ್ದು, ಈ ಬಾರಿ ಹೆಚ್ಚಾಗಿ 794 ಮಿ.ಮೀ ನಷ್ಟು ಮಳೆಯಾಗಿದೆ. ಅಂದ್ರೆ ಶೇ 23ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ.

    ಅಲ್ಲದೆ ಮಳೆಯಿಂದಾಗಿ 1 ಲಕ್ಷ 2 ಸಾವಿರ ಎಕ್ರೆ ಬಿತ್ತನೆ ಕಾರ್ಯ ಟಾರ್ಗೆಟ್ ಇದ್ದು, ಈ ಬಾರಿ 92 ಸಾವಿರ ಎಕ್ರೆಯಷ್ಟು ಭಿತ್ತನೆ ಕಾರ್ಯ ನಡೆದಿದೆ. ಶೇ 90ರಷ್ಟು ವಿಸ್ತೀರ್ಣದಲ್ಲಿ ಭಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ದೇವಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ರಾಗಿ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಮಳೆಗೆ ರಾಗಿ ತೆನೆ ಭಾಗುತಿದೆ. ಮಳೆ ಹೀಗೆ ಮುಂದುವರೆದಿದ್ದೆ ಆದಲ್ಲಿ ಬೆಳೆ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಮಳೆಯಿಂದ ನೆಲಕಚ್ಚಿ ಮೊಳಕೆಯೊಡೆದ ರಾಗಿ ಬೆಳೆ – ರೈತರ ಕಣ್ಣೀರು

    ಮಳೆಯಿಂದ ನೆಲಕಚ್ಚಿ ಮೊಳಕೆಯೊಡೆದ ರಾಗಿ ಬೆಳೆ – ರೈತರ ಕಣ್ಣೀರು

    ರಾಮನಗರ: ಈ ಹಿಂದೆ ಜಿಲ್ಲೆಯ ರೈತರು ಪದೇ ಪದೇ ಅನಾವೃಷ್ಟಿ ಎದುರಿಸುತ್ತಿದ್ದರು. ಆದರೆ ಈ ಬಾರಿ ಅತಿವೃಷ್ಟಿಯಿಂದ ಹಲವೆಡೆ ತಮ್ಮ ಬೆಳೆಯನ್ನ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

    ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಕ್ಯಾರ್ ಚಂಡಮಾರುತದ ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ರಾಗಿ ಬೆಳೆ ನೆಲಕಚ್ಚಿದೆ. ಅಲ್ಲದೇ ನೆಲಕಚ್ಚಿರುವ ರಾಗಿ ಬೆಳೆ ಮೊಳಕೆಯೊಡೆದು ರೈತರ ಕೈಗೆ ಸಿಗದಂತಾಗಿದೆ.

    ಈ ವರ್ಷ ಮೊದಮೊದಲು ಉತ್ತಮ ಮಳೆಯಾದ ಹಿನ್ನೆಲೆ ರೈತರು ಸಂತೋಷದಿಂದ ರಾಗಿ ಬಿತ್ತನೆ ಮಾಡಿದ್ದರು. ಇನ್ನೇನು ಬೆಳೆ ಕಟಾವು ಮಾಡಿ, ಬೆಳೆ ಮಾರಾಟ ಮಾಡಿ ಲಾಭ ಪಡೆದು, ಸಾಲ ತೀರಿಸಿ ನೆಮ್ಮದಿಯಿಂದ ಇರಬಹುದು ಎಂಬ ರೈತರ ಆಸೆಯನ್ನು ಎಡಬಿಡದೆ ಸುರಿದ ಮಳೆ ಹಾಳು ಮಾಡಿದೆ. ಕಟಾವಿಗೆ ಬಂದು ನಿಂತಿದ್ದ ರಾಗಿ ಬೆಳೆ ನೆಲಕಚ್ಚಿ, ಮೊಳಕೆಯೊಡೆದು ಕೈಗೆ ಬರದಂತಾಗಿ ರೈತರು ಕಣ್ಣೀರಿಡುತ್ತಿದ್ದಾರೆ.

    ಬೆಳೆ ಹಾಳಾಗಿ ಸಾಲ ಸೋಲ ಮಾಡಿ ರಾಗಿ ಬಿತ್ತನೆ ಮಾಡಿದ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಕೃಷಿ ಇಲಾಖೆಗೆ ದೂರು ನೀಡಿದ್ದರೂ ಪರಿಹಾರ ಕಲ್ಪಿಸಲು ಯಾವುದೇ ಅಧಿಕಾರಿಗಳು ಬೆಳೆ ವೀಕ್ಷಣೆಗೆ ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕೆಂದು ಎಂದು ರೈತರು ಮನವಿ ಮಾಡಿದ್ದಾರೆ.