Tag: ರಾಗಿಗುಡ್ಡ

  • ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ PFI ಕಾರ್ಯಕರ್ತರ ಕೈವಾಡ?

    ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ PFI ಕಾರ್ಯಕರ್ತರ ಕೈವಾಡ?

    ಶಿವಮೊಗ್ಗ: ಇಲ್ಲಿನ ರಾಗಿಗುಡ್ಡದಲ್ಲಿ (Ragigudda) ಅಕ್ಟೋಬರ್ 1 ರಂದು ಈದ್ ಮಿಲಾದ್ ಹಬ್ಬದ ಮೆರವಣಿಗೆ ಆಯೋಜಿಸಲಾಗಿತ್ತು. ಸಂಜೆ ಮೆರವಣಿಗೆ ಆರಂಭವಾದ ನಂತರ ರಾಗಿಗುಡ್ಡದ ಶನೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯಲ್ಲಿದ್ದವರ ಮೇಲೆ ಒಂದು ಕಲ್ಲು ತೂರಿ ಬಂದಿದೆ. ಇದರಿಂದ ರೊಚ್ಚಿಗೆದ್ದ ಮೆರವಣಿಗೆಯಲ್ಲಿ ಇದ್ದವರು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದರು. ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಗಳ ಮೇಲೆ ದಾಳಿ ನಡೆಸಿದ್ದರು. ವಾಹನಗಳ ಜಖಂಗೊಳಿಸಿದ್ದರು. ಘಟನೆಯಲ್ಲಿ 7 ಮಂದಿ ನಾಗರಿಕರು ಸೇರಿದಂತೆ ಪೊಲೀಸರು ಗಾಯಗೊಂಡಿದ್ದರು.

    ಘಟನೆ ಬಳಿಕ ಸ್ಥಳದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 27 ಎಫ್‍ಐಆರ್ ದಾಖಲಿಸಿ, 65 ಮಂದಿಯನ್ನು ಬಂಧಿಸಿದ್ದು, ಬಂಧಿತರನ್ನು ಚಿತ್ರದುರ್ಗ, ಬಳ್ಳಾರಿ ಹಾಗೂ ಕಲಬುರಗಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಬಿಜೆಪಿ (BJP) ಈ ಹಿಂದಿನಿಂದಲೂ ಆರೋಪಿಸುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಈ ಘಟನೆ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕಾರ್ಯಕರ್ತರ ಕೈವಾಡ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಡಲಿಯಿಂದ ಹಲ್ಲೆಗೈದು ಹೊರಹಾಕಿ ಮನೆಯೊಳಗೆ ಮಲಗಿದ- ಬೆಳಗೆದ್ದು ನೋಡಿದಾಗ ಪತ್ನಿ ಸಾವು

    ಪೊಲೀಸರ ತನಿಖೆ ವೇಳೆ ನಿಷೇಧಿತ ಪಿಎಫ್ ಐ (PFI) ಕಾರ್ಯಕರ್ತರ ಹೆಸರು ಕೇಳಿ ಬಂದಿದೆ ಎನ್ನಲಾಗಿದೆ. ಪೊಲೀಸರ ತನಿಖೆ ವೇಳೆ 8 ಮಂದಿ ಪಿಎಫ್ ಐ ಕಾರ್ಯಕರ್ತರ ಹೆಸರು ಬಹಿರಂಗಗೊಂಡಿದ್ದು, ಮೌಸಿನ್, ನಬಿ, ಮುಬಾರಕ್, ಇಮ್ರಾನ್, ಅಬ್ದುಲ್, ಹಿದಾಯತ್, ಇರ್ಫಾನ್, ಅನ್ವರ್ ಈ ಎಂಟು ಮಂದಿ ನಿಷೇಧಿತ ಪಿಎಫ್ ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೇ ರಾಗಿಗುಡ್ಡದಲ್ಲಿ ಗಲಭೆ ನಡೆಯಲು ಯುವಕರಿಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ. ಪೊಲೀಸರು ಈಗಾಗಲೇ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದು, ಉಳಿದವರಿಗೆ ತಲಾಶ್ ನಡೆಸಿದ್ದಾರೆ. ಘಟನೆ ಹಿಂದೆ ಪಿಎಫ್ ಐ ಕೈವಾಡ ಇರುವ ಕಾರಣ ಈ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ಮಾಜಿ ಸಚಿವ ಈಶ್ವರಪ್ಪ ಆಗ್ರಹಿಸಿದ್ದಾರೆ.

    ಒಟ್ಟಾರೆ ಘಟನೆ ನಂತರ ಪೊಲೀಸರು ಎಚ್ಚೆತ್ತುಕೊಂಡಿದ್ದು, ತಲೆಮರೆಸಿಕೊಂಡಿರುವ ನಿಷೇಧಿತ ಪಿಎಫ್ ಐ ಕಾರ್ಯಕರ್ತರ ಬಂಧನಕ್ಕೆ ಎರಡು ತಂಡ ರಚಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಆರೋಪಿಗಳ ಪತ್ತೆ ನಂತರ ಮತ್ತಷ್ಟು ವಿಚಾರಗಳು ಬಹಿರಂಗಗೊಳ್ಳುತ್ತವೆಯಾ ಎಂಬುದನ್ನು ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಸ್ತ್ರಾಸ್ತ್ರದ ಮೂಲಕವೇ ಪ್ರತಿಕ್ರಿಯೆ ನೀಡಲು ಹಿಂದೂ ಸಮಾಜ ಸಿದ್ಧ: ಅರುಣ್‌ಕುಮಾರ್ ಪುತ್ತಿಲ ಗುಡುಗು

    ಶಸ್ತ್ರಾಸ್ತ್ರದ ಮೂಲಕವೇ ಪ್ರತಿಕ್ರಿಯೆ ನೀಡಲು ಹಿಂದೂ ಸಮಾಜ ಸಿದ್ಧ: ಅರುಣ್‌ಕುಮಾರ್ ಪುತ್ತಿಲ ಗುಡುಗು

    – ನವರಾತ್ರಿ ದಿನ ಪ್ರತಿ ಮನೆಯಲ್ಲೂ ತಲ್ವಾರ್‌ಗಳಿಗೆ ಪೂಜೆ ಮಾಡುವಂತೆ ಪುತ್ತಿಲ ಕರೆ

    ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ತಲ್ವಾರ್ ಹಿಡಿದು ಸಾಗಲು ಸರ್ಕಾರ ಅವಕಾಶ ಕೊಡುವುದಾದರೆ, ಮಾರಕಾಸ್ತ್ರ ಹಿಡಿದು ಹಿಂದೂ ಸಮಾಜದ ಮೇಲೆ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ ಹಿಂದು ಸಮಾಜದ ಮುಖಂಡ ಅರುಣ್‌ಕುಮಾರ್ ಪುತ್ತಿಲ (Arun Kumar Puthila) ಪ್ರಶ್ನಿಸಿದ್ದಾರೆ.

    ಶಿವಮೊಗ್ಗದ ರಾಗಿಗುಡ್ಡಕ್ಕೆ (Shivamogga Ragiguda) ಭೇಟಿ ನೀಡಿ ಅಲ್ಲಿನ ಸಂತ್ರಸ್ಥರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮಲ್ಲೂ ಶಸ್ತ್ರಾಸ್ತ್ರ ಇದೆ. ಅಗತ್ಯ ಬಿದ್ದರೆ ಶಸ್ತ್ರಾಸ್ತ್ರಗಳ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ಧವಿದೆ. ನವರಾತ್ರಿಯ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡುತ್ತೇವೆ. ಪ್ರತಿ ಮನೆಯಲ್ಲೂ ಸ್ಕ್ರೂಡ್ರೈವರ್‌, ಸ್ಪ್ಯಾನರ್‌ಗೆ ಪೂಜೆ ಮಾಡದೇ ತಲ್ವಾರ್‌ಗಳಿಗೆ ಪೂಜೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಪ್ರಪಂಚವೇ ಎದುರಾದ್ರು ತಮ್ಮನಾಗಿ ದರ್ಶನ್ ಜೊತೆ ಇರುತ್ತೇನೆ- ವಿನೋದ್ ಪ್ರಭಾಕರ್

    ಮುಸ್ಲಿಮರ ಮತಗಳನ್ನು ಪಡೆಯುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಮತಾಂಧತೆಗೆ ಬೆಂಬಲ ನೀಡುತ್ತಿದೆ. ರಾಗಿಗುಡ್ಡದ ಘಟನೆ ಸಹ ಪೂರ್ವ ನಿಯೋಜಿತ ಕೃತ್ಯ. ರಾಗಿಗುಡ್ಡದಲ್ಲಿ ಗಣೇಶೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇದರಿದ ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಅಂತಾ‌ ಈ ಘಟನೆ ನಡೆದಿದೆ. ಪಾಠ ಕಲಿಸಿದ ಶಿಕ್ಷಕರ ಮನೆಗೇ ಮುಸ್ಲಿಂ ವಿದ್ಯಾರ್ಥಿಗಳು ನುಗ್ಗಿ ದಾಂಧಲೆ ನಡೆಸಿರುವುದು‌ ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: LAM ರೀಸರ್ಚ್, ಲಿಯೋ ಲ್ಯಾಬ್ಸ್, ಟೆಕಾಂಡ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಎಂ.ಬಿ ಪಾಟೀಲ್‌ ಚರ್ಚೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ- ಕೋಟಾ ಶ್ರೀನಿವಾಸ ಪೂಜಾರಿ

    ಸಿದ್ದರಾಮಯ್ಯ ಸರ್ಕಾರ ಹಿಂದೂಗಳಿಗೆ ಸುರಕ್ಷಿತ ಅಲ್ಲ- ಕೋಟಾ ಶ್ರೀನಿವಾಸ ಪೂಜಾರಿ

    ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ (Siddaramaiah) ಹಿಂದೂಗಳಿಗೆ (Hindu) ಸುರಕ್ಷಿತ ಅಲ್ಲ ಎಂದು ಬಿಜೆಪಿ ಮಾಜಿ ಸಚಿವ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗ ಗಲಭೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಗುರುವಾರ ಸತ್ಯ ಶೋಧನ ಸಮಿತಿ ಶಿವಮೊಗ್ಗಗೆ (Shivamogga) ಹೋಗಿತ್ತು.ನೊಂದ ಹಿಂದೂಗಳು ಸಮಿತಿ ಮುಂದೆ ಬದುಕಲಿ ಬಿಡಿ ಅಂತ ಹೇಳ್ತಿದ್ದಾರೆ. ನಾವು ಪಾಠ ಕಲಿಸಿದ ಮಕ್ಕಳು ಶಿಕ್ಷಕರಾದ ನಮ್ಮ ಮನೆಗೆ ಕಲ್ಲಿನಿಂದ ಹೊಡೆಯುವ ದುರಂತ ನೋಡಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ (Kashmiri Pandits) ಊರು ಬಿಟ್ಟು ಹೋಗೋ ಸ್ಥಿತಿ ನಿರ್ಮಾಣ ಆಗಿತ್ತು. ಈಗ ಅದೇ ನೋವನ್ನು ರಾಗಿಗುಡ್ಡದಲ್ಲಿ ಇರುವ ಹಿಂದೂಗಳು ಅನುಭವಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

     

    ಹಿಂದೂಗಳಿಗೆ ಕರ್ನಾಟಕ ಸೇಫ್ (Karnataka Safe) ಅಲ್ಲ ಎಂಬ ಭಾವನೆ ಬರುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ದುರಾದೃಷ್ಟಕ್ಕೆ ಹಿರಿಯ ಸಚಿವರು ವೇಷ ಮರೆಸಿಕೊಂಡು ಬಂದಿದ್ದಾರೆ ಅಂತ ಹಿಂದೂಗಳ ಮೇಲೆ ಆರೋಪ ಮಾಡ್ತಾರೆ. ತ್ರಿಶೂಲ ಇಟ್ಟುಕೊಂಡಿದ್ದಕ್ಕೆ ತಳವಾರ್ ಹಿಡಿದ್ದಾರೆ ತಪ್ಪೇನು ಅಂತ ಉಸ್ತುವಾರಿ ಮಂತ್ರಿ ಕೇಳ್ತಾರೆ. ಗಣೇಶೋತ್ಸವದಲ್ಲಿ ಯಾರಾದರೂ ತ್ರಿಶೂಲ ಹಿಡಿದುಕೊಂಡಿರುವುದನ್ನು ತೋರಿಸಲಿ ನೋಡೋಣ ಎಂದು ಸವಾಲ್ ಹಾಕಿದರು.

    ನೋವಿನ ಸಂಗತಿ ಅಂದರೆ 75 ಸಾವಿರ ರೂ. ನಷ್ಟ ಅಂತ ಜಿಲ್ಲಾಡಳಿತ ವರದಿ ಕೊಟ್ಟಿದೆ. 6-7 ಕಾರು ಜಖಂ ಆಗಿದೆ. ಮನೆಗಳ ಗಾಜು ಒಡೆದು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೇವಲ 75 ಸಾವಿರ ರೂ. ನಷ್ಟ ಅಂತ ತೋರಿಸಿ ಇಷ್ಟು ದೊಡ್ಡ ಗಲಟೆಯನ್ನು ಏನು ಇಲ್ಲ ಅಂತ ಸರ್ಕಾರ ತೋರಿಸಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳು ಸುರಕ್ಷಿತ ಅಲ್ಲ ಅನ್ನೋ ಸ್ಥಿತಿ ಆಗಿದೆ ವಾಗ್ದಾಳಿ ನಡೆಸಿದರು.

     

    ರಾಗಿಗುಡ್ಡದ ಜನರು ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದರೂ ಸಿಎಂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕೊಡುತ್ತೇನೆ ಎಂದು ಹೇಳಿಲ್ಲ. ಏನೇ ನಷ್ಟ ಆದರೂ ನಮಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂಬ ರೀತಿ ಇದ್ದಾರೆ. ಎಸ್‌ಪಿ, ‌ಡಿಸಿಗೆ ಈ ಸರ್ಕಾರ ಕೆಲಸ ಮಾಡಲು ಬಿಡುತ್ತಿಲ್ಲ. ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ. ಗೃಹ ಸಚಿವರು ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸುತ್ತಾರೆ ಅಂದರೆ ಅವರು ರಾಜ್ಯದಲ್ಲಿ ಇಲ್ಲ ಅನ್ನೋ ಮಾಹಿತಿ ಇದೆ. ಸಿದ್ದರಾಮಯ್ಯ ಇಂತಹ ಆಡಳಿತ ನೀಡುತ್ತಿರುವುದು ನೋವಿನ ಸಂಗತಿ ಅಂತ ಕಿಡಿಕಾರಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು

    ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು

    ಶಿವಮೊಗ್ಗ: ನಗರದ (Shivamogga) ರಾಗಿಗುಡ್ಡದಲ್ಲಿ (Ragigudda) ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸತ್ಯಶೋಧನಾ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದ ತಂಡ ಮಾಹಿತಿ ಕಲೆಹಾಕಲು ನಗರಕ್ಕೆ ತೆರಳಿದೆ. ತಂಡದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಡಾ.ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ ಇದ್ದಾರೆ. ಪ್ರಕರಣ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿ ತಂಡ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್‌ ಮಾಡಿದವರ ಹಿಂದೆ ಬಿದ್ದ ಖಾಕಿ

     

    ಮೊದಲಿಗೆ ಬಿಜೆಪಿ ಮುಖಂಡರ ತಂಡ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದೆ. ಈ ವೇಳೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಏಳು ಜನ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದೆ. ಅಲ್ಲದೇ ಗಾಯಾಳುಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದೆ.

    ಈ ವೇಳೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಅವರು ಗಾಯಾಳುಗಳ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಗಲಭೆ ನಡೆದ ಸ್ಥಳಕ್ಕೆ ತಂಡ ಭೇಟಿ ನೀಡಿದ್ದು, ಸಂತ್ರಸ್ಥರ ಮನೆಗಳಿಲ್ಲಿ ಪರಿಸ್ಥಿತಿ ಅವಲೋಕಿಸಿದೆ.

    ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಹಲವು ಮನೆಗಳಿಗೆ ಹಾನಿಯಾಗಿತ್ತು. ಈ ವೇಳೆ ಪೊಲೀಸರ ಮೇಲೂ ಹಲ್ಲೆಗಳಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು ಜನಜೀವನ ಮೊದಲಿನ ಸ್ಥಿತಿಗೆ ಬಂದಿದೆ. ಇದನ್ನೂ ಓದಿ: ನಾವು ಸಾಬ್ರು ಗೊತ್ತಲ್ಲ; ಒಂದಾ ನಾವು, ಇಲ್ಲಾ ಅವ್ರು ಸಾಯ್ಬೇಕು- ಪೊಲೀಸ್ರ ಮುಂದೆ ಅವಾಜ್ ಹಾಕಿದ್ದವ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್

    ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್

    ಬೆಂಗಳೂರು: ಕಾಂಗ್ರೆಸ್ (Congress) ಎಂದರೆ ಹಿಂದೂ ವಿರೋಧಿ ಅನ್ನೋದನ್ನು ಆ ಪಕ್ಷದ ನಾಯಕರೇ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗ (Shivamogga) ಗಲಭೆ ಪ್ರಕರಣದ ಹಿನ್ನೆಲೆ ಸ್ಥಳಕ್ಕೆ ಬಿಜೆಪಿ (BJP) ಸತ್ಯ ಶೋಧನೆ ತಂಡ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ವಾಸ್ತವತೆ ಮತ್ತು ನೊಂದ ನಾಗರಿಕರನ್ನು ಮಾತನಾಡಿಸಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡುತ್ತೇವೆ. ಬಳಿಕ ಸರ್ಕಾರದ ಮೇಲೆ ಸೂಕ್ತ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

    ಭಯದ ಭಾವನೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು ಸ್ಥಳೀಯರ ಹಿತ ಸಂರಕ್ಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಅಧಿಕಾರಿಗಳಿಗೂ ಜನರಿಗೆ ನಿರ್ಭೀತಿಯಾಗಿ ವ್ಯವಸ್ಥೆ ಮಾಡಲು ಜನರ ಪ್ರತಿನಿಧಿಗಳಾಗಿ ಒತ್ತಾಯ ಮಾಡುತ್ತೇವೆ. ಆಸ್ಪತ್ರೆಗೆ ಭೇಟಿ ಕೊಡುತ್ತೇವೆ, ಗಾಯಳುಗಳನ್ನು ಭೇಟಿ ಮಾಡಿ ಬರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?

    ಗಲಭೆ ವಿಚಾರವಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ದೊಡ್ಡ ಬಹುಮತ ಬಂದಿದೆ, ನಾವು ಏನು ಬೇಕಾದರೂ ಮಾಡಬಹುದು. ನಮಗೆ ಲೈಸೆನ್ಸ್ ಕೊಟ್ಟಿದ್ದಾರೆ ಅನ್ನೋ ಮನಸ್ಥಿತಿ ಇದು. ಸಣ್ಣ ಗಲಾಟೆಯಾದಾಗ ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರು, ಮತ್ತೊಬ್ಬರು ಎಲ್ಲಾರು ಭೇಟಿ ಮಾಡುತ್ತಾರೆ. ಆದರೆ ಇಲ್ಲಿಗ್ಯಾಕೆ ಯಾರು ಬರ್ತಿಲ್ಲ? ಶಿವಮೊಗ್ಗಕ್ಕೆ ಭೇಟಿ ಮಾಡಿ, ಸ್ಥಳ ಪರಿಶೀಲನೆ ಮಾಡಿ ನೊಂದವರನ್ನು ಯಾಕೆ ಭೇಟಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

    ಹೊಡೆಯುವುದು, ಗಲಭೆ ನಿರ್ಮಾಣಕ್ಕೆ ಪೂರಕವಾದ ಕೆಲಸ ಮಾಡುವುದೇ ಕಾಂಗ್ರೆಸ್ ಪಕ್ಷ. ಅನೇಕ ಬಾರಿ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದರು. ಅವರು ಮಾತ್ರ ಹಳೇ ಬುದ್ಧಿ ಬಿಡುತ್ತಿಲ್ಲ. ರಾಮಲಿಂಗಾರೆಡ್ಡಿಯವರ ಹೇಳಿಕೆ ಕೂಡ ಮೊಂಡುತನವನ್ನು ಪ್ರದರ್ಶನ ಮಾಡುತ್ತಿದೆ. ಉದ್ದಟತನದ ಮಾತುಗಳು ಇದು. ಕಾಂಗ್ರೆಸ್ ಎಂದರೆ ಆ್ಯಂಟಿ ಹಿಂದೂ ಅನ್ನೋದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಎಂದು ಅಶ್ವಥ್ ನಾರಾಯಣ್ ಗುಡುಗಿದರು. ಇದನ್ನೂ ಓದಿ: ಸಿಕ್ಕಿಂ ಪ್ರವಾಹ – 102 ಜನ ನಾಪತ್ತೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಘಟನೆ ಕುರಿತು ಅಲ್ಲಿನ ಮಹಿಳೆಯರು ಮಾತನಾಡಿದ್ದನ್ನು ನೋಡಿ ಆತಂಕವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಈದ್ ಮಿಲಾದ್ (Shivamogga EidMilad) ಮೆರವಣಿಗೆ ಘರ್ಷಣೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ. ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾವು ಎಂತವರು ಗೊತ್ತಲ್ಲಾ.. ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕ್ಬೇಕಿತ್ತು: ಪೊಲೀಸರಿಗೆ ಕಿಡಿಗೇಡಿಯಿಂದ ಆವಾಜ್

    ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿಲ್ಲ ಯಾಕೆ?. ಗಲಭೆ ಮಾಡಿದವರನ್ನು ಅಮಾಯಕರ ಪಟ್ಟಿಯಲ್ಲಿ ಸೇರಿಸಿ, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ತಲ್ವಾರ್ ಪ್ರದರ್ಶಿಸಿ, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿಗೂ ಕಲ್ಲು ತೂರಲಾಗಿದೆ. ಗೃಹ ಸಚಿವರು ಮರದ ತಲ್ವಾರ್‍ಗೆ ಬಣ್ಣ ಬಳಿಯಲಾಗಿದೆ ಅಂತಾರೆ. ತನಿಖೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಮುಸಲ್ಮಾನರ ಓಲೈಕೆಗಾಗಿ ಪೊಲೀಸರಿಗೆ ಇದುವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಭೇಟಿ ಕೊಡಲಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸುತ್ತೇವೆ. ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟವನ್ನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾವು ಎಂತವರು ಗೊತ್ತಲ್ಲಾ.. ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕ್ಬೇಕಿತ್ತು: ಪೊಲೀಸರಿಗೆ ಕಿಡಿಗೇಡಿಯಿಂದ ಆವಾಜ್

    ನಾವು ಎಂತವರು ಗೊತ್ತಲ್ಲಾ.. ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕ್ಬೇಕಿತ್ತು: ಪೊಲೀಸರಿಗೆ ಕಿಡಿಗೇಡಿಯಿಂದ ಆವಾಜ್

    ಶಿವಮೊಗ್ಗ: ನಾವು ಮಾತು ತಪ್ಪಿದ್ರೆ ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕಬೇಕಿತ್ತು. ನಿಮಗೆ ಗೊತ್ತಲ್ಲಾ ನಾವು ಎಂತಹವರು ಅಂತಾ? ಒಂದೋ ನಾವು ಸಾಯಬೇಕು ಇಲ್ಲಾ ಅವರು ಸಾಯಬೇಕು ಎನ್ನುತ್ತ ಶಿವಮೊಗ್ಗದಲ್ಲಿ (Shivamogga) ಕಲ್ಲುತೂರಾಟಕ್ಕೆ (Stone Pelting) ಸಂಬಂಧಿಸಿದಂತೆ ಕಿಡಿಗೇಡಿಯೊಬ್ಬ ಪೊಲೀಸರಿಗೆ (Police)  ಆವಾಜ್ ಹಾಕಿರುವ ವೀಡಿಯೋ ತುಣುಕೊಂದು ಇದೀಗ ಬೆಳಕಿಗೆ ಬಂದಿದೆ.

    ಶಿವಮೊಗ್ಗದ ರಾಗಿಗುಡ್ಡದಲ್ಲಿ (Ragigudda) ಶನಿವಾರ ಈದ್ ಮಿಲಾದ್ ಮೆರವಣಿಗೆ ವೇಳೆ ಉದ್ವಿಗ್ನತೆ ಉಂಟಾಗಿತ್ತು. ಕಲ್ಲುತೂರಾಟ, ಗಲಾಟೆ ಆರಂಭವಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ ದಾಳಿ ಮಾಡಿದ್ದರು. ಗುಂಪುಗೂಡಿ ಮನೆಗಳು ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೂ ದಾಳಿ ನಡೆಸಿದ್ದರು.

    ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಈ ಘಟನೆ ರಾತ್ರಿ ನಡೆದಿದ್ದರೆ ಅಂದು ಸಂಜೆ ಪುಂಡ ಯುವಕರು ಪೊಲೀಸರಿಗೆ ಅವಾಜ್ ಹಾಕಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಅದೇ ಯುವಕರು ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿರುವುದು ಬೇರೆ ವೀಡಿಯೋಗಳಲ್ಲಿಯೂ ಕಾಣಿಸಿಕೊಂಡಿದೆ. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    ನಿಮಗೆ ಬೆಲೆ ಕೊಟ್ಟು ನಾವು ಏನೂ ಮಾಡಿಲ್ಲ. ನಾವು ಗಣಪತಿ ಹಬ್ಬಕ್ಕೂ ಏನೂ ಮಾಡಿಲ್ಲ. ನಾವು ಮಾತು ತಪ್ಪಿದ್ರೆ ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕಬೇಕಿತ್ತು. ನಿಮಗೆ ಗೊತ್ತಲ್ಲಾ ನಾವು ಎಂತಹವರು ಅಂತಾ? ನಾವು ಸಾಯಬೇಕು ಇಲ್ಲವೇ ಅವರು ಸಾಯಬೇಕು ಎಂದು ಪೊಲೀಸರಿಗೇ ಯುವಕನೊಬ್ಬ ಆವಾಜ್ ಹಾಕಿರುವುದು ವೀಡಿಯೋದಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    ಶಿವಮೊಗ್ಗ: ಜಿಲ್ಲೆಯ ರಾಗಿಗುಡ್ಡದಲ್ಲಿ (Ragigudda) ಕಳೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ನಡೆದ ಕೋಮು ಗಲಭೆಗೆ (Communal Riots) ಸಾಕಷ್ಟು ಟ್ವಿಸ್ಟ್ ಸಿಗುತ್ತಿದೆ.

    ಈದ್ ಮಿಲಾದ್ ಮೆರವಣಿಗೆಯ ವೇಳೆ ರಾಗಿಗುಡ್ಡದ ಮುಖ್ಯ ರಸ್ತೆಯಲ್ಲಿರುವ ಶನೇಶ್ವರ ದೇವಾಲಯದ ಹತ್ತಿರ ಗಲಭೆ ಶುರುವಾಗಿತ್ತು. ಕಲ್ಲು ತೂರಾಟ (Stone Pelting) ನಡೆಸಿ ಬರಬ್ಬೋರಿ 7ಕ್ಕೂ ಹೆಚ್ಚು ಮನೆಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಆದರೆ ಈ ಗಲಭೆಗೆ ಮುನ್ನ ಎರಡು ಓಮ್ನಿ ಕಾರಿನಲ್ಲಿ ಬಂದ 15ಕ್ಕೂ ಹೆಚ್ಚು ಯುವಕರ ತಂಡ ಈ ಗಲಭೆ ಮಾಡಿದೆ. ಆ ಕಾರು ಕೆಎ 20 ನೋಂದಣಿಯ ಗಾಡಿಗಳಾಗಿದ್ದು, ಅವುಗಳಲ್ಲಿ ಮಂಗಳೂರು (Mangaluru) ಇಲ್ಲ ಉಡುಪಿ (Udupi) ಜಿಲ್ಲೆಗಳಿಂದ ಕಿಡಿಗೇಡಿಗಳು ಬಂದು ಪ್ರೀ ಪ್ಲಾನ್ ಮಾಡಿಕೊಂಡು ಗಲಭೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

    ಕಿಡಿಗೇಡಿಗಳ ಚಲನವಲನಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅಲ್ಲದೇ ಪೊಲೀಸರು ಕೂಡ ಉತ್ತರ ಪ್ರದೇಶದ ನಂಬರ್ ಪ್ಲೇಟ್ ಇರುವ ಕಾರನ್ನು ವಶಕ್ಕೆ ಪಡೆದಿದ್ದು, ಈ ಕಾರು ಕೂಡ ಗಲಭೆಗೆ ಬಳಸಲಾಗಿದೆ ಎನ್ನಲಾಗುತ್ತಿದೆ. ಇದರಿಂದ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರೀ ಪ್ಲಾನ್ಡ್ ಆಗಿ ನಡೆದಿದ್ದು ಎನ್ನುವ ಸಂಶಯ ಮೂಡಿದ್ದು, ಗಲಭೆ ಸ್ಥಳಕ್ಕೆ ಬಂದ ಓಮ್ನಿಗಳ ಜಾಡು ಹಿಡಿದು ಪೊಲೀಸರು ಹೊರಟಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರೂ ಕೂಡ ಇದೊಂದು ಪ್ರೀ ಪ್ಲಾನ್‌ ಗಲಭೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

    ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

    ಶಿವಮೊಗ್ಗ: ಜಿಲ್ಲೆಯ ರಾಗಿಗುಡ್ಡದಲ್ಲಿ (Ragigudda) ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone Pelting) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ (Shivamogga) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ ಇಡೀ ನಗರಕ್ಕೆ ನಿಷೇಧಾಜ್ಞೆ ಹೇರಿರುವುದಕ್ಕೆ ವರ್ತಕರು ಹಾಗೂ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕಳೆದ ಭಾನುವಾರ ಮಧ್ಯಾಹ್ನ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ಹಮ್ಮಿಕೊಂಡಿದ್ದರು. ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ನಗರದ ವಿವಿಧೆಡೆಗಳಿಂದ ಗಾಂಧಿ ಬಜಾರಿಗೆ ಮುಸ್ಲಿಂ ಬಾಂಧವರು ಆಗಮಿಸಿದ್ದರು. ಅದರಂತೆ ರಾಗಿಗುಡ್ಡದಿಂದಲೂ ಮೆರವಣಿಗೆ ಹೊರಡಲು ಮುಸ್ಲಿಂ ಬಾಂಧವರು ಸಿದ್ಧರಾಗಿದ್ದರು.

    ಈ ವೇಳೆ ಮೆರವಣಿಗೆ ಸಾಗುವಾಗ ಮುಸ್ಲಿಂ ಬಾಂಧವರ ಗುಂಪಿನ ಮೇಲೆ ಕಲ್ಲು ತೂರಿ ಬಂದಿದೆ. ಇಷ್ಟೇ ಸಾಕಿತ್ತು ಶಿವಮೊಗ್ಗದಲ್ಲಿ ಕೋಮು ಭಾವನೆ ಕೆರಳಲು. ಮುಸ್ಲಿಂ ಗುಂಪಿನ ಮೇಲೆ ಕಲ್ಲು ತೂರಿ ಬರುತ್ತಿದ್ದಂತೆ ಪ್ರತಿಯಾಗಿ ಮುಸ್ಲಿಂಮರು ಕಲ್ಲು ತೂರಾಟ ನಡೆಸೇ ಬಿಟ್ಟಿದ್ದರು.

    ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಚಾರ್ಜ್ ನಡೆಸಿದರು. ಜೊತೆಗೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿದರು. ಆದರೆ ಜಿಲ್ಲಾಡಳಿತ ಘಟನೆ ನಡೆದ ರಾಗಿಗುಡ್ಡದಲ್ಲಿ ಮಾತ್ರ 144 ನಿಷೇಧಾಜ್ಞೆ ಜಾರಿಗೊಳಿಸದೇ ಇಡೀ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ 144 ಸೆಕ್ಷನ್ ಜಾರಿಗೊಳಿದೆ. ಇಡೀ ನಗರ ಪ್ರದೇಶದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿದ್ದಕ್ಕೆ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ, ಓಂ ಗಣಪತಿ ವಿಸರ್ಜನೆ, ಈದ್ ಮಿಲಾದ್ ಮೆರವಣಿಗೆ ಎಂದು ಕಳೆದ 3-4 ದಿನಗಳಿಂದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದೀಗ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸುವುದು ಎಷ್ಟು ಸರಿ ಎಂದು ವರ್ತಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ

    ಪೊಲೀಸರು ಹಾಗೂ ಜಿಲ್ಲಾಡಳಿತ ಘಟನೆ ನಡೆದ ರಾಗಿಗುಡ್ಡದಲ್ಲಿ ಮಾತ್ರ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸದೇ, ಈಡಿ ಶಿವಮೊಗ್ಗ ನಗರ ಪ್ರದೇಶಕ್ಕೆ ಜಾರಿಗೊಳಿಸಿರುವ ಹಿಂದೆ ಪೊಲೀಸರ ಮುಂಜಾಗ್ರತಾ ಕ್ರಮವೇ ಅಡಗಿದೆ. ರಾಗಿಗುಡ್ಡದಲ್ಲಿ ಘಟನೆ ಆಗಿದೆ ಅಂತಾ ಸುಮ್ಮನೆ ಕೈಕಟ್ಟಿ ಕುಳಿತುಕೊಂಡರೆ, ಇದು ಹೇಳಿ ಕೇಳಿ ಶಿವಮೊಗ್ಗ. ಸಣ್ಣ ವಿಷಯವು ದೊಡ್ಡದಾಗಿ ಇಡೀ ನಗರವನ್ನು ವ್ಯಾಪಿಸಿಕೊಳ್ಳುತ್ತದೆ. ಹೀಗಾಗಿ ಜಿಲ್ಲಾಡಳಿತ ಇಡೀ ಮಹಾನಗರ ಪಾಲಿಕೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದೆ.

    ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿರುವುದಕ್ಕೆ ಬಿಜೆಪಿ ಮುಖಂಡರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆ ಎಲ್ಲಿ ನಡೆದಿದೆಯೋ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ವಿನಾಃ ಕಾರಣ ಎಲ್ಲರಿಗೂ ತೊಂದರೆ ಕೊಡಬೇಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗವನ್ನ ಮತ್ತೊಂದು ಪಾಕಿಸ್ತಾನ ಮಾಡಲು ಸಂಚು ಮಾಡಿದ್ದಾರೆ: ಸಿ.ಟಿ ರವಿ

    ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 24 ಪ್ರಕರಣಗಳನ್ನು ದಾಖಲಿಸಿಕೊಂಡು, 60 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಶಿವಮೊಗ್ಗದ ಪರಿಸ್ಥಿತಿ ಶಾಂತವಾಗಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈದ್ ಮಿಲಾದ್‍ಗೆ ಹಾಕಿದ್ದ ಬ್ಯಾನರ್, ಹಸಿರು ಬಣ್ಣದ ಬಟ್ಟೆ ತೆರವು

    ಈದ್ ಮಿಲಾದ್‍ಗೆ ಹಾಕಿದ್ದ ಬ್ಯಾನರ್, ಹಸಿರು ಬಣ್ಣದ ಬಟ್ಟೆ ತೆರವು

    ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈದ್ ಮಿಲಾದ್‍ಗೆ (Eid Milad) ಹಾಕಿದ್ದ ಬ್ಯಾನರ್, ಹಸಿರು ಬಣ್ಣದ ಬಟ್ಟೆ ತೆರವುಗೊಳಿಸಲಾಗಿದೆ.

    ಸಾಕಷ್ಟು ವಿವಾದದ ನಂತರ ತೆರವು ಕಾರ್ಯಾಚರಣೆ ನಡೆದಿದೆ. ರಾಗಿಗುಡ್ಡದ ಮುಖ್ಯರಸ್ತೆಯ ಹಮೀರ್ ಅಹಮದ್ ಸರ್ಕಲ್‍ನಲ್ಲಿ ಬ್ಯಾನರ್ ಗಳನ್ನು ಹಾಕಲಾಗಿತ್ತು. ಇದೀಗ ನಗರಪಾಲಿಕೆ ಸಿಬ್ಬಂದಿ ಈ ಕಮಾನನ್ನ ತೆರವುಗೊಳಿಸಿದ್ದಾರೆ. ಈ ಮೂಲಕ ನಗರದಲ್ಲಿದ್ದ ಎಲ್ಲಾ ಕಟೌಟ್‍ಗಳನ್ನು ಪಾಲಿಕೆ ತೆರವುಗೊಳಿಸಿದೆ. ಪವಿತ್ರ ಹೋಟೆಲ್ ಬಳಿ ಇದ್ದ ಖಡ್ಗ ಕೂಡ ತೆರವುಗೊಳಿಸಲಾಗಿದೆ.

    ಮಾಜಿ ಸಚಿವ ಈಶ್ವರಪ್ಪ ಅವರು ಕಟೌಟ್ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ತೆರವು ಮಾಡದಿದ್ರೆ ಎಲ್ಲಾ ಕಡೆ ತ್ರಿಶೂಲ ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ

    ಈದ್ ಮಿಲಾದ್ ಮೆರವಣಿಗೆ (Eid Milad Procession) ವೇಳೆ ಕಲ್ಲು ತೂರಾಟ (Stone Pelting) ನಡೆಸಿರುವ ಘಟನೆ ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಶಾಂತಿನಗರದಲ್ಲಿ ನಡೆದಿದೆ. 2 ಗುಂಪಿನ ನಡುವೆ ಕಲ್ಲು ತೂರಾಟ ನಡೆದು, 6 ಮಂದಿ ಗಾಯಗೊಂಡಿದ್ದಾರೆ. 7 ಮನೆ, 1 ಕಾರು, 1 ಬೈಕ್ ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. 35 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]