Tag: ರಾಖಿ ಸಾವಂತ್

  • ರಾಖಿ ಸಾವಂತ್ ಇದೀಗ ಫಾತಿಮಾ: ಮೈಸೂರು ಹುಡುಗನ ಮದುವೆ ಕಹಾನಿ

    ರಾಖಿ ಸಾವಂತ್ ಇದೀಗ ಫಾತಿಮಾ: ಮೈಸೂರು ಹುಡುಗನ ಮದುವೆ ಕಹಾನಿ

    ನಿನ್ನೆಯಷ್ಟೇ ಮೈಸೂರಿನ ಹುಡುಗ ಆದಿಲ್ ಖಾನ್ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆ ಆಗಿರುವ ವಿಚಾರ ಬಿಟೌನ್ ಅಂಗಳದಿಂದ ಹೊರ ಬಿದ್ದಿತ್ತು. ಇದರ ಬೆನ್ನಲ್ಲೇ ರಾಖಿ ಅವರ ಹೆಸರು ಕೂಡ ಬದಲಾವಣೆ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಿಜಿಸ್ಟರ್ ಮದುವೆ ಆದ ನಂತರ ರಾಖಿ ಅವರು ಫಾತಿಮಾ ಆಗಿ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮದುವೆ ರಿಜಿಸ್ಟರ್ ನಲ್ಲಿ ರಾಖಿ ಅನಂತ್ ಸಾವಂತ್ ಅಂತಾನೇ ಹೆಸರಿದೆ. ಈ ರಿಜಿಸ್ಟರ್ ಆದ ನಂತರ ಹೆಸರಿನ ಬದಲಾವಣೆ ಆಗಿದೆಯಂತೆ.

    ರಾಖಿ ಸಾವಂತ್ ಕದ್ದುಮುಚ್ಚಿ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೈಸೂರು ಹುಡುಗ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಸುದ್ದಿಗೆ ಪೂರಕ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರಿಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ. ಅಲ್ಲದೇ, ರಿಜಿಸ್ಟರ್ ಪತ್ರದಲ್ಲಿ ಇಬ್ಬರು ಫೋಟೋ ಕೂಡ ಇರುವುದು ಕಂಡುಬಂದಿದೆ. ಇದನ್ನೂ ಓದಿ: ಹರಿಪ್ರಿಯಾ ತಂದೆ ಕಾರ್ಯದ ದಿನ ನಾನು ಪ್ರಪೋಸ್ ಮಾಡಿದೆ:ವಸಿಷ್ಠ ಸಿಂಹ

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.

    ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರೆಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಸೂರು ಹುಡುಗನ ಜೊತೆ ಗುಟ್ಟಾಗಿ ಮದುವೆಯಾದ ನಟಿ ರಾಖಿ ಸಾವಂತ್

    ಮೈಸೂರು ಹುಡುಗನ ಜೊತೆ ಗುಟ್ಟಾಗಿ ಮದುವೆಯಾದ ನಟಿ ರಾಖಿ ಸಾವಂತ್

    ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ (Rakhi Sawant) ಕದ್ದುಮುಚ್ಚಿ ಎರಡನೇ ಮದುವೆ (Marriage) ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಸೂರು (Mysore) ಹುಡುಗ ಆದಿಲ್ ಜೊತೆ ಸುತ್ತುತ್ತಿದ್ದ ಅವರು, ಅದೇ ಆದಿಲ್ (Adil) ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಸುದ್ದಿಗೆ ಪೂರಕ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರಿಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ.

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಿಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರಿಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಸಾವಂತ್ ತಾಯಿಗೆ ಕ್ಯಾನ್ಸರ್: ಅಮ್ಮನಿಗಾಗಿ ಪಾರ್ಥಿಸಿ ಎಂದ ನಟಿ

    ರಾಖಿ ಸಾವಂತ್ ತಾಯಿಗೆ ಕ್ಯಾನ್ಸರ್: ಅಮ್ಮನಿಗಾಗಿ ಪಾರ್ಥಿಸಿ ಎಂದ ನಟಿ

    ವಿವಾದಿತ ಮಾತುಗಳು, ಹಾಟ್ ಹಾಟ್ ಫೋಟೋ, ಬಾಯ್ ಫ್ರೆಂಡ್ ಜೊತೆಗಿನ ತಮಾಷೆ ಮಾಡುವಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳನ್ನು ಸದಾ ರಂಜಿಸುತ್ತಿದ್ದ ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ (Rakhi Sawant), ಇದೇ ಮೊದಲ ಬಾರಿಗೆ ಭಾವುಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅಮ್ಮನಿಗಾಗಿ ನೀವೆಲ್ಲರೂ ಪಾರ್ಥಿಸಿರಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

    ರಾಖಿ ಸಾವಂತ್ ತಾಯಿ ಜಯಾ ಸಾವಂತ್ (Jaya) ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ (Cancer) ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಹಾಗಾಗಿಯೇ ಮರಾಠಿ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದ ರಾಖಿ, ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಅಮ್ಮನ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವುದಾಗಿ ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    ತಾಯಿಯು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋವೊಂದನ್ನು ಹಾಕಿರುವ ಅವರು, ಆನಂತರ ವಿಡಿಯೋವೊಂದನ್ನು ಮಾಡಿ, ನಾನು ನನ್ನ ಬಾಯ್ ಫ್ರೆಂಡ್ ಆದಿಲ್ ಹಾಗೂ ಸಹೋದರ ರಾಕೇಶ್ ಮೂವರು ಅಮ್ಮನನ್ನು ಉಳಿಸಿಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿದ್ದೇವೆ. ನೀವು ಕೂಡ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ರಾಖಿನೇ ಹೇಳಿಕೊಂಡಂತೆ ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರಂತೆ. ಕ್ಯಾನ್ಸರ್ ಜೊತೆಗೆ ಬ್ರೇನ್ ಟ್ಯೂಮರ್ ಕೂಡ ಇರುವುದರಿಂದ ಅವರ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿದೆ. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ಈ ಹಂತದಲ್ಲಿ ಆಪರೇಷನ್ ಮಾಡುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರಂತೆ. ಸದ್ಯ ರಾಖಿ ತಾಯಿ ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    ಸಾಜಿದ್ ಖಾನ್ ವಿಷಯದಲ್ಲಿ ರಾಖಿ ಸಾವಂತ್(Rakhi Sawant) ಮತ್ತು ಶೆರ್ಲಿನ್(Sherlyn Chopra) ನಡುವೆ ಮಾತಿನ ಚಕಮಕಿ ಜೋರಾಗಿದೆ. ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದು, ಈ ವಿಚಾರ ಈಗ ಠಾಣೆ ಮೆಟ್ಟಿಲೇರಿದೆ. ಇದೀಗ ಶೆರ್ಲಿನ್ ಚೋಪ್ರಾ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.

    ಶೆರ್ಲಿನ್ ಮತ್ತು ರಾಖಿ ಸಾವಂತ್ ನಡುವಿನ ವಾರ್ ಇದೀಗ ಕಾನೂನು ರೂಪ ಪಡೆದಿದೆ. ಶೆರ್ಲಿನ್ ವಿರುದ್ಧ ನಟಿ ರಾಖಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಜೊತೆಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶನಿವಾರ ಮುಂಬೈನ(Mumbai) ಓಶಿವಾರ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ತನ್ನ ವಕೀಲರೊಂದಿಗೆ ಶೆರ್ಲಿನ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಈ ಕುರಿತು ಮಾಧ್ಯಮಕ್ಕೆ ರಾಖಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್‌

    ಶೆರ್ಲಿನ್ ಚೋಪ್ರಾ ವಿರುದ್ಧ ಹಲವು ಸಾಕ್ಷ್ಯಾಧಾರಗಳಿವೆ. ಅದನ್ನು ನ್ಯಾಯಾಲಯಕ್ಕೆ ಒದಗಿಸುತ್ತೇನೆ. ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನುಗಳಿವೆ. ಆದರೆ ಅದನ್ನು ಕೆಲವರು ದೂರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾಜಿದ್ ಖಾನ್(Sajid Khan) ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಇನ್ನೂ ಶೆರ್ಲಿನ್, ಹಣಕ್ಕಾಗಿ ಪುರುಷರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂದು ನಟಿಯ ವಿರುದ್ಧ ರಾಖಿ ಆರೋಪ ಮಾಡಿದ್ದಾರೆ.

    ನಾನು ಸಮಾಜ ಸೇವಕಿ. ನಾನು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದು ರಾಖಿ ಸಾವಂತ್ ಮಾತನಾಡಿದ್ದಾರೆ. ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಶೆರ್ಲಿನ್ ಇಲ್ಲಸಲ್ಲದ ಆರೋಪ ಮಾಡಿರುವುದು ನನ್ನ ಜೀವನಕ್ಕೂ ಪರಿಣಾಮ ಬೀರಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ಲ್ಲದ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತಾರೆ ನಟಿಯರಾದ ರಾಖಿ ಸಾವಂತ್ (Rakhi Sawant) ಮತ್ತು ಶೆರ್ಲಿನ್ ಚೋಪ್ರಾ (Sherlina Chopra). ಮದುವೆ, ಬಾಯ್ ಫ‍್ರೆಂಡ್, ಬ್ರೇಕಪ್ ಎನ್ನುತ್ತಾ ದಿನಕ್ಕೊಂದು ಸದ್ದು ಮಾಡುವ ಚಾಳಿ ರಾಖಿಗಿದ್ದರೆ, ಮೀಟೂ ಕಾರಣದಿಂದಾಗಿ ಶೆರ್ಲಿನ್ ಚೋಪ್ರಾ ಇತ್ತೀಚೆಗಂತೂ ಸಾಕಷ್ಟು ಸುದ್ದಿ ಆಗುತ್ತಿದ್ದಾಳೆ. ಈ ಇಬ್ಬರ ನಡುವೆ ಯಾವತ್ತೂ ಕೋಲ್ಡ್ ವಾರ್ ಇದ್ದೇ ಇದೆ. ಇದು ಮತ್ತೊಮ್ಮೆ ಸಾಬೀತಾಗಿದೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಶೆರ್ಲಿನ್ ಚೋಪ್ರಾ, ಖಡಕ್ಕಾಗಿಯೇ ರಾಖಿಗೆ ಸಂದೇಶವೊಂದನ್ನು ನೀಡಿದ್ದಾರೆ. ರಾಖಿ ನಾನ್ ಸೆನ್ಸ್ ಎಂದು ಮೂದಲಿಸಿದ್ದಾರೆ. ರಾಖಿ ಮೂರ್ನಾಲ್ಕು ತಿಂಗಳಿಗೊಮ್ಮೆ ಬಾಯ್ ಫ್ರೆಂಡ್ ಬದಲಾಯಿಸುತ್ತಾಳೆ. ಗಂಡನನ್ನೂ ಬದಲಾಯಿಸುತ್ತಾಳೆ. ಆಕೆ ಡುಮ್ಮಿ (Dummy). ಜಿಮ್ ಮುಂದೆ ಓಡಾಡುತ್ತಾಳೆಯೇ ಹೊರತು, ಜಿಮ್ ನಲ್ಲಿ ಕಷ್ಟ ಪಡಲ್ಲ ಎಂದು ಕಾಮೆಂಟ್ ಮಾಡಿದ್ದಾಳೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

    ರಾಖಿ ಮೇಲೆ ಶೆರ್ಲಿನ್ ಕೋಪ ಮಾಡಿಕೊಳ್ಳಲು ಕಾರಣ ಸಾಜಿದ್ (Sajid) ಮೇಲೆ ರಾಖಿ ತೋರಿಸಿದ ಅನುಕಂಪ. ಹಿಂದಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಸದ್ಯ ನಿರ್ದೇಶಕ ಸಾಜಿದ್ ಇದ್ದಾನೆ. ಅವನ ಮೇಲೆ ಶೆರ್ಲಿನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಸಾಜಿದ್ ನನ್ನು ಮನೆಯಿಂದ ಆಚೆ ಹಾಕಿ ಎಂದು ಗುಡುಗಿದ್ದಳು. ಅವನೊಬ್ಬ ಅವಿವೇಕಿ ಎಂದೂ ಜರಿದಿದ್ದರು. ಈ ಮಾತಿಗೆ ಸಾಜಿದ್ ಮೇಲೆ ರಾಕಿ ಅನುಕಂಪ ತೋರಿದ್ದರು. ಸಾಜಿದ್ ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು.

    ಸಾಜಿದ್ ಪರ ರಾಖಿ ಸಾವಂತ್ ಬ್ಯಾಟಿಂಗ್ ಮಾಡಿದಳು ಎನ್ನುವ ಕಾರಣಕ್ಕಾಗಿ ಶೆರ್ಲಿನ್ ಇದೀಗ ತಿರುಗಿ ಬಿದ್ದಿದ್ದಾಳೆ. ರಾಖಿ ದೇಹ ಬೆಳೆಸಿದ್ದಾಳೆ. ಅದನ್ನು ಕರಗಿಸಬೇಕು ಅಂತ ಜಿಮ್ ಮುಂದೆ ತಿರುಗುತ್ತಾಳೆ. ಜಿಮ್ ಒಳಗೆ ಹೋಗಬೇಕು, ಮೆಂಬರ್ ಶಿಪ್ ತಗೆದುಕೊಳ್ಳಬೇಕು, ಕಷ್ಟ ಪಡಬೇಕು. ಆಕೆಗೆ ಕಷ್ಟ ಪಡೋದು ಏನು ಅಂತಾನೇ ಗೊತ್ತಿಲ್ಲ ಎಂದು ಕಾಲೆಳೆದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ಬಾಲಿವುಡ್ ನಟಿ ಕಂಗನಾ ಈ ಬಾರಿ ಮಥುರಾ ಲೋಕಸಭಾ ಚುನಾವಣೆಯಲ್ಲಿ(Lokasabha Election) ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಕುರಿತಂತೆ ಹಾಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ, ಕಂಗನಾ ಅಲ್ಲ ರಾಖಿ ಸಾವಂತ್ ಬೇಕಾದರೂ ಸ್ಪರ್ಧಿಸಬಹುದು ಎಂದು ಮಾತನಾಡಿದ್ದರು. ಇದೀಗ ಹೇಮಾ ಮಾಲಿನಿ ಅವರ ಮಾತಿಗೆ ರಾಖಿ ಸಾವಂತ್(Rakhi Sawant) ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ(Narendra Modi) ಮತ್ತು ಹೇಮಾ ಮಾಲಿನಿ ಅವರಿಗೆ ಧನ್ಯವಾದ ಕೂಡ ಹೇಳಿದ್ದಾರೆ.

    ಹೇಮಾಮಾಲಿನಿ ಅವರು ಪ್ರತಿನಿಧಿಸುವ ಕ್ಷೇತ್ರದಿಂದ ಈ ಬಾರಿ ನಟಿ ಕಂಗನಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೇಮಾ ಮಾಲಿನಿ ಅವರು, ಇದು ದೇವರಿಗೆ ಬಿಟ್ಟಿದ್ದು, ಶ್ರೀಕೃಷ್ಣ ತಾನು ಅಂದುಕೊಂಡಿದ್ದನ್ನು ಮಾಡುತ್ತಾನೆ. ಮಥುರಾದಲ್ಲಿ ಸ್ಪರ್ಧಿಸಲು ಬೇರೆ ರಾಜಕಾರಣಿಗಳು ನಿಮಗೆ ಸಿಗುವುದಿಲ್ಲವೇ? ಸಿನಿಮಾ ತಾರೆಯರು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ವಿಚಾರವನ್ನು ನೀವು ಎಲ್ಲರ ತಲೆಯಲ್ಲಿ ತುಂಬಿಸುತ್ತಿದ್ದೀರಾ. ಮಥುರಾ ಸಿನಿ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬಂತೆ ಬಿಂಬಿಸುತ್ತಿದ್ದೀರಾ. ನಿಮಗೆ ಮಥುರಾದಲ್ಲಿ ಸ್ಪರ್ಧಿಸಲು ಸಿನಿ ತಾರೆಯರೇ ಬೇಕಾ? ನಾಳೆ ರಾಖಿ ಸಾವಂತ್ ಕೂಡ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು. ಇದೀಗ ಹೇಮಾ ಮಾಲಿನಿ (Hema Malini ಅವರ ಮಾತಿಗೆ ರಾಖಿ ಸಾವಂತ್ ಪ್ರತಿಯುತ್ತರ ನೀಡಿದ್ದಾರೆ.

    2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆದರೆ ಯಾರ ವಿರುದ್ಧ ನಿಲ್ಲುತ್ತೇನೆ ಎಂಬುದು ಅಚ್ಚರಿ ಮೂಡಿಸಿದೆ ಎಂದು ರಾಖಿ ಮಾತನಾಡಿದ್ದಾರೆ. ಇನ್ನೂ ಈ ರಾಜಕೀಯ ಚುನಾವಣೆಗೆ ನಾನು ಅರ್ಹಳೆಂದು ಪರಿಗಣಿಸಿರುವುದಕ್ಕೆ ಪ್ರಧಾನಿ ಮೋದಿಜೀ ಮತ್ತು ಹೇಮಾ ಮಾಲಿನಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ

    ನಾನು ಬಾಲ್ಯದಿಂದಲೂ ಸಮಾಜ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಪ್ರಧಾನಿ ಮೋದಿಜೀ ಅವರು ಚಹಾ ಮಾಡಿ ಪ್ರಧಾನಿ ಆಗಬಹುದು. ನಾನ್ಯಾಕೆ ಸಾಧ್ಯವಿಲ್ಲ. ನನಗೆ ನಿಮ್ಮೆಲ್ಲರ ಹಾರೈಕೆ ಬೇಕು ಎಂದು ರಾಖಿ ಸಾವಂತ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಂಗನಾ ಅಲ್ಲ ರಾಖಿ ಸಾವಂತ್ ಬೇಕಾದ್ರೂ ಸ್ಪರ್ಧಿಸಲಿ – ಹೇಮಾಮಾಲಿನಿ ಸಿಡಿಮಿಡಿ

    ಕಂಗನಾ ಅಲ್ಲ ರಾಖಿ ಸಾವಂತ್ ಬೇಕಾದ್ರೂ ಸ್ಪರ್ಧಿಸಲಿ – ಹೇಮಾಮಾಲಿನಿ ಸಿಡಿಮಿಡಿ

    ಲಕ್ನೋ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಈ ಬಾರಿ ಮಥುರಾ ಲೋಕಸಭಾ ಚುನಾವಣೆಯಲ್ಲಿ (Loka Sabha Election) ಸ್ಪರ್ಧಿ ಸಲಿದ್ದಾರೆ ಎಂಬ ಊಹಾಪೋಹಗಳ ಕುರಿತಂತೆ ಹಾಲಿ ಬಿಜೆಪಿ ಸಂಸದೆ ಹೇಮಾಮಾಲಿನಿ (Hema Malini) ಕಂಗನಾ ಅಲ್ಲ ರಾಖಿ ಸಾವಂತ್ (Rakhi Sawant) ಬೇಕಾದರೂ ಸ್ಪರ್ಧಿಸಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಹೇಮಾಮಾಲಿನಿ ಅವರು ಪ್ರತಿನಿಧಿಸುವ ಕ್ಷೇತ್ರದಿಂದ ಈ ಬಾರಿ ನಟಿ ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂವ ವದಂತಿಗಳ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೇಮಾಮಾಲಿನಿ ಅವರು, ಇದು ದೇವರಿಗೆ ಬಿಟ್ಟಿದ್ದು, ಶ್ರೀಕೃಷ್ಣ ತಾನು ಅಂದುಕೊಂಡಿದ್ದನ್ನು ಮಾಡುತ್ತಾನೆ. ಮಥುರಾದಲ್ಲಿ ಸ್ಪರ್ಧಿಸಲು ಬೇರೆ ರಾಜಕಾರಣಿಗಳು (Politicians) ನಿಮಗೆ ಸಿಗುವುದಿಲ್ಲವೇ? ಸಿನಿಮಾ ತಾರೆಯರಯ ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ವಿಚಾರವನ್ನು ನೀವು ಎಲ್ಲರ ತಲೆಯಲ್ಲಿ ತುಂಬಿಸುತ್ತಿದ್ದೀರಾ. ಮಥುರಾ (Mathura)  ಸಿನಿ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬಂತೆ ಬಿಂಬಿಸುತ್ತಿದ್ದೀರಾ. ನಿಮಗೆ ಮಥುರಾದಲ್ಲಿ ಸ್ಪರ್ಧಿಸಲು ಸಿನಿ ತಾರೆಯರೇ ಬೇಕಾ? ನಾಳೆ ರಾಖಿ ಸಾವಂತ್ ಕೂಡ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೊಬ್ಬರು ಓಹೋ ಈ ಮಹಿಳೆ ಸ್ವತಃ ಸಿನಿ ತಾರೆ. ಇವರ ಪತಿ ಮತ್ತು ಮಗ ಕೂಡ ರಾಜಕೀಯಕ್ಕೆ ಸೇರಿದ್ದಾರೆ. ಆದರೆ ಈ ಮಹಿಳೆಗೆ ಸಿನಿ ತಾರೆಯರು ರಾಜಕೀಯಕ್ಕೆ ಬಂದರೆ ಸಮಸ್ಯೆ ಇದೆಯೇ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ಇತ್ತೀಚೆಗಷ್ಟೇ ಕಂಗನಾ ರಣಾವತ್ ಕುಟುಂಬಸ್ಥರೊಂದಿಗೆ ಪ್ರಸಿದ್ಧ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಬಂಕೆ ಬಿಹಾರಿ ದೇವಸ್ಥಾನದಿಂದ ಹೊರ ಹೋಗುವ ವಿಐಪಿ ಮಾರ್ಗದಲ್ಲಿ ಕಂಗನಾ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಭಕ್ತರ ಗುಂಪು ಮತ್ತು ಸ್ಥಳೀಯರು ಆಕೆಯ ಕಡೆಗೆ ಓಡುತ್ತಿರುವುದು ಕಂಡುಬಂದಿತ್ತು. ದೇವಾಲಯದಿಂದ ಕಂಗನಾ ಹೊರಬರಲು ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಿಂದ ಕಂಗನಾ ರಣಾವತ್ ಬಿಜೆಪಿಯಿಂದ ಸ್ಪರ್ದಿಸುತ್ತಾರೆ ಎನ್ನುವ ಊಹಾಪೋಹ ಎದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಸ್ಸಿಂಗ್ ಪಾತ್ರಗಳ ಬಗ್ಗೆ ರಾಖಿ ಸಾವಂತ್ ಬೇಸರ

    ಕಿಸ್ಸಿಂಗ್ ಪಾತ್ರಗಳ ಬಗ್ಗೆ ರಾಖಿ ಸಾವಂತ್ ಬೇಸರ

    ತ್ತಿನ ಪಾತ್ರಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಬೇಸರಿಸಿಕೊಂಡಿದ್ದಾರೆ. ಈವರೆಗೂ ತಾವು ಮಾಡಿರುವ ಪಾತ್ರಗಳು ಅಂಥದ್ದೇ ಆಗಿದ್ದರ ಬಗ್ಗೆಯೂ ಅವರಿಗೆ ಬೇಸರವಿದೆಯಂತೆ. ತಮ್ಮೊಳಗೆ ಅದ್ಭುತ ಕಲಾವಿದೆ ಇದ್ದರೂ, ಎಕ್ಸ್ ಪೋಸ್ ಮಾಡುವಂತಹ ಮತ್ತು ಮಾದಕವಾಗಿ ಕಾಣುವಂತಹ ಪಾತ್ರಗಳನ್ನೇ ನಿರ್ದೇಶಕರು ನೀಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

    ಬೇರೆ ಬೇರೆ ಪಾತ್ರಗಳ ಮೂಲಕ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ನನಗೂ ಇದೆ. ಒಳ್ಳೆಯ ಪಾತ್ರಗಳನ್ನು ಕೊಡಿ, ಅದ್ಭುತವಾಗಿಯೇ ಅವುಗಳನ್ನು ನಿಭಾಯಿಸುತ್ತೇನೆ ಎಂದು ಅನೇಕ ನಿರ್ದೇಶಕರಿಗೆ ಹೇಳಿದ್ದೇನೆ. ಆದರೆ, ಅವರು ನನ್ನ ಮಾತುಗಳನ್ನು ಕೇಳುವುದೇ ಇಲ್ಲ. ಕೇವಲ ಕಿಸ್ಸಿಂಗ್ ದೃಶ್ಯಗಳು ಇದ್ದರೆ ಮಾತ್ರ ಕರೆಯುತ್ತಾರೆ. ಅವರು ನನ್ನನ್ನು ಅಷ್ಟಕ್ಕೇ ಸೀಮಿತ ಮಾಡಿಕೊಂಡಿದ್ದಾರೆ. ನಾನು ಅದರಾಚೆಗೂ ಕಠಿಣ ಪಾತ್ರಗಳನ್ನು ನಿಭಾಯಿಸಬಲ್ಲೆ ಎಂದಿದ್ದಾರೆ ರಾಖಿ ಸಾವಂತ್. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ

    ಮೈಸೂರು ಹುಡುಗ ಆದಿಲ್ ನನ್ನು ಪ್ರೀತಿಸಲು ಶುರು ಮಾಡಿದಾಗಿಂದ ರಾಖಿ ತುಂಬಾ ಬದಲಾಗಿದ್ದಾರಂತೆ. ತುಂಡು ಉಡುಗೆಗಳನ್ನು ತೊಡುತ್ತಿಲ್ಲವಂತೆ. ಚುಂಬಿಸುವಂತಹ, ಬೆಡ್ ರೂಮ್ ದೃಶ್ಯಗಳು ಇರುವಂತಹ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲವಂತೆ. ಆದಿಲ್ ಕುಟುಂಬಕ್ಕೆ ಅದೆಲ್ಲ  ಇಷ್ಟವಾಗದೇ ಇರುವ ಕಾರಣಕ್ಕಾಗಿ ಇಂತಹ ನಿರ್ಧಾರ ತಗೆದುಕೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ‘ಬೂಸ್ಟರ್ ಡೋಸ್’ ಅನ್ನು ‘ವಯಾಗ್ರ’ಕ್ಕೆ ಹೋಲಿಸಿದ ರಾಖಿ ಸಾವಂತ್

    ಕೋವಿಡ್ ‘ಬೂಸ್ಟರ್ ಡೋಸ್’ ಅನ್ನು ‘ವಯಾಗ್ರ’ಕ್ಕೆ ಹೋಲಿಸಿದ ರಾಖಿ ಸಾವಂತ್

    ಕೋವಿಡ್ ಅಪಾಯದಿಂದ ಪಾರಾಗಲು ಬೂಸ್ಟರ್ ಡೋಸ್ ತಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸತತ ಮನವಿ ಮಾಡಿಕೊಳ್ಳುತ್ತಿವೆ. ಆದರೆ, ಬೂಸ್ಟರ್ ಡೋಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ, ಸಖತ್ ಟ್ರೋಲ್ ಆಗಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಬೂಸ್ಟರ್ ಡೋಸ್ ಅನ್ನು ಅವರು ವಯಾಗ್ರಕ್ಕೆ ಹೋಲಿಸಿದ್ದಾರೆ. ಸದ್ಯ ಬೂಸ್ಟರ್ ಡೋಸ್ ತಗೆದುಕೊಂಡಿರುವ ಅವರು ,ಎರಡು ದಿನದಿಂದ ವಯಾಗ್ರ ತಿಂದಂತೆ ನೋವಾಗುತ್ತಿದೆ ಎಂದಿದ್ದಾರೆ.

    ಬಾಯ್ ಫ್ರೆಂಡ್ ಊರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಖಿ ಸಾವಂತ್ ಅವರನ್ನು ಪಾಪರಾಜಿಗಳ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ನನ್ನ ಜೀವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಳು ಮಾಡಿಬಿಟ್ಟರು. ಬೂಸ್ಟರ್ ಡೋಸ್ ತಗೆದುಕೊಂಡು ಎದೆಬಡಿತ ಜಾಸ್ತಿ ಅನಿಸುತ್ತಿದೆ. ಎದೆಯೊಳಗೆ ಏನೋನೋ ಆಗುತ್ತಿದೆ. ವಯಾಗ್ರ ತಿಂದಂತಹ ನೋವದು. ಬೂಸ್ಟರ್ ಡೋಸ್ ತಗೆದುಕೊಂಡು ಎರಡು ದಿನದಿಂದ ಒದ್ದಾಡ್ತಾ ಇದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:ಲಲಿತ್ ಮೋದಿ ಡೇಟಿಂಗ್ ವಿಚಾರ: ಟ್ರೋಲಿಗರಿಗೆ ಸುಶ್ಮಿತಾ ಸೇನ್ ತಿರುಗೇಟು

    ಸದ್ಯ ಬಾಯ್ ಫ್ರೆಂಡ್ ಆದಿಲ್ ಮೈಸೂರಿನಲ್ಲಿದ್ದು, ಅವರನ್ನು ನೋಡಲು ಮೈಸೂರಿಗೆ ತೆರಳುತ್ತಿರುವುದಾಗಿ ರಾಖಿ ಸಾವಂತ್ ಹೇಳಿದರು. ಈ ಕಡೆ ಬಾಯ್ ಫ್ರೆಂಡ್ ಇಲ್ಲ, ಆ ಕಡೆ ಬೂಸ್ಟರ್ ಡೋಸ್ ತಗೆದುಕೊಂಡಿರುವ ನೋವು. ನನ್ನ ಸ್ಥಿತಿ ಯಾರಿಗೂ ಬರಬಾರದು ಅಂದಿರುವ ರಾಖಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಲವರ್ಸ್ ಅಲ್ಲ ತಂದೆ ಮಗಳು : ರಾಖಿ ಸಾವಂತ್

    ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಲವರ್ಸ್ ಅಲ್ಲ ತಂದೆ ಮಗಳು : ರಾಖಿ ಸಾವಂತ್

    ಲಿತ್ ಮೋದಿ ಮತ್ತು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದರೆ, ಇತ್ತ ವಿವಾದಿತ ತಾರೆ ರಾಖಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಸುಶ್ಮಿತಾ ಸೇನ್ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಅವರು ಕೆಲವರು ಸೌಂದರ್ಯಕ್ಕಾಗಿ ಅಲ್ಲ, ದುಡ್ಡಿಗಾಗಿ ಹುಡುಗರ ಹಿಂದೆ ಹೋಗುತ್ತಾರೆ ಎಂದು ಹೇಳಿದ್ದಾರೆ.

    ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಅವರ ವಯಸ್ಸಿನ ಅಂತರದ ಬಗ್ಗೆಯೂ ಮಾತನಾಡಿದ ಅವರು, ಸುಶ್ಮಿತಾ ಸೇನ್ ಅವರು ಲಲಿತ್ ಮೋದಿಯಲ್ಲಿ ಸೌಂದರ್ಯ ಕಂಡು ಹೋಗಿಲ್ಲ, ಕೇವಲ ಅವರಿಗೆ ಕಂಡಿದ್ದು ದುಡ್ಡು. ಹಾಗಾಗಿ ಈ ವಯಸ್ಸಿನಲ್ಲೂ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಲವರ್ ಎಂದು ಕರೆಯುವುದಿಲ್ಲ. ತಂದೆ ಮಗಳು ಎಂದು ಕರೆಯುತ್ತೇನೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಎರಡು ದಿನಗಳಿಂದ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಡೇಟಿಂಗ್ ವಿಚಾರ ನಾನಾ ಗಾಸಿಪ್ ಗಳಿಗೆ ಕಾರಣವಾಗುತ್ತಿದೆ. ಸ್ವತಃ ಸುಶ್ಮಿತಾ ಸೇನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸುಶ್ಮಿತಾ ಮಾಜಿ ಬಾಯ್ ಫ್ರೆಂಡ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೋದಿ ಪುತ್ರ ಕೂಡ ಮಾತನಾಡಿದ್ದಾರೆ. ಹೀಗಾಗಿ ಈ ಸುದ್ದಿಯು ಸಾಕಷ್ಟು ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]