Tag: ರಾಖಿ ಸಾವಂತ್

  • ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್ ಗೆ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ

    ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್ ಗೆ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ

    ಬಾಲಿವುಡ್ ನಟ ಸಲ್ಮಾನ್ ಖಾನ್ ಪರವಾಗಿ ನಿಂತಿರುವ ಮತ್ತು ಸಲ್ಮಾನ್ ಕುರಿತಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡುವ ರಾಖಿ ಸಾವಂತ್ (Rakhi Sawant) ಗೆ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ ಬಂದಿದೆಯಂತೆ. ಈ ಕುರಿತು  ರಾಖಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ವಿಚಾರವಾಗಿ ಮೂಗು ತೂರಿಸಿದಂತೆ ರಾಖಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆಯಂತೆ.

    ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ (Mumbai) ಪೊಲೀಸರು (Police) ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    salman

    ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

    ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.  ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ.

  • ಒಂದು ಇಡ್ಲಿ, ಒಂದು ವಡೆ ತಗೊಂಡು ಗಲಾಟೆ ಮಾಡಿದ ರಾಖಿ ಸಾವಂತ್

    ಒಂದು ಇಡ್ಲಿ, ಒಂದು ವಡೆ ತಗೊಂಡು ಗಲಾಟೆ ಮಾಡಿದ ರಾಖಿ ಸಾವಂತ್

    ಹಾದಿ ರಂಪ ಬೀದಿ ರಂಪ ಮಾಡುವುದರಲ್ಲಿ ಬಾಲಿವುಡ್ (Bollywood) ನಟಿ ರಾಖಿ ಸಾವಂತ್ (Rakhi Sawant) ಯಾವತ್ತಿಗೂ ಮುಂದು. ಸಣ್ಣ ಸಣ್ಣ ವಿಚಾರಗಳನ್ನೂ ಬೀದಿಗೆ ತಂದು ಮಾತನಾಡುತ್ತಾರೆ, ಕಣ್ಣೀರು ಹಾಕುತ್ತಾರೆ, ಜಗಳ ಮಾಡುತ್ತಾರೆ. ಕ್ಯಾಮೆರಾಗಳು ಎದುರಿಗೆ ಬಂದರೆ ಸಾಕು ಏನಾದರೂ ಒಂದು ರಂಪ ಇದ್ದೇ ಇರುತ್ತದೆ. ಕೇವಲ ಬೀದಿಯಲ್ಲಿ ಮಾತ್ರವಲ್ಲ, ಏರ್ ಪೋರ್ಟ್ ನಲ್ಲೂ ರಾಖಿ ಜಗಳ ಮಾಡಿಕೊಂಡಿದ್ದಾರೆ.

    ಸದ್ಯ ರಂಜಾನ್ ಉಪವಾಸದಲ್ಲಿರುವ ರಾಖಿ, ಸಂಜೆ ಉಪವಾಸವನ್ನು ಪೂರ್ಣಗೊಳಿಸಲು ಏರ್ ಪೋರ್ಟ್ ನಲ್ಲಿ ಒಂದು ಇಡ್ಲಿ ಹಾಗೂ ಒಂದು ವಡೆಯನ್ನು ಖರೀದಿಸಿದ್ದಾರೆ. ಅದಕ್ಕೆ ಆ ಹೋಟೆಲ್ ನವರು 600 ರೂಪಾಯಿಗಳ ಬಿಲ್ ನೀಡಿದ್ದಾರೆ. ಒಂದು ವಡೆ, ಒಂದು ಇಡ್ಲಿಗೆ ಇಷ್ಟೊಂದು ಬೆಲೆನಾ ಎಂದು ಸಣ್ಣ ಮಟ್ಟದಲ್ಲಿ ಗಲಾಟೆ ಮಾಡಿದ್ದಾರೆ. ಗಲಾಟೆ ನಂತರ ತಿಂಡಿ ಸವಿದು ಬಿಲ್ ಕೂಡ ಕೊಟ್ಟಿದ್ದಾರೆ. ಆ ಬಿಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ರಾಖಿ. ಇದನ್ನೂ ಓದಿ:ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

    ಮೈಸೂರು ಹುಡುಗ ಆದಿಲ್ (Adil) ನನ್ನು ಮದುವೆಯಾದ ನಂತರ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರಂತೆ. ಈ ಕಾರಣಕ್ಕಾಗಿಯೇ ಅವರು ರಂಜಾನ್ ಉಪವಾಸ ಮಾಡುತ್ತಿದ್ದಾರೆ. ಪತಿ ಆದಿಲ್ ಆದಷ್ಟು ಬೇಗ ಜೈಲಿನಿಂದ (Jail) ಬರಲಿ ಎಂದೂ ಅವರು ಪ್ರಾರ್ಥಿಸುತ್ತಿದ್ದಾರೆ. ಈ ಉಪವಾಸ ಮಾಡುತ್ತಿರುವುದು ಆದಿಲ್ ಗೆ ಬೇಗ ಜಾಮೀನು ಸಿಗಲಿ ಎನ್ನುವ ಕಾರಣಕ್ಕೆ ಎಂದು ಅವರು ಹೇಳಿದ್ದಾರೆ.

    ವರದಕ್ಷಿಣೆ ಹಾಗೂ ಕಿರುಕುಳದ ಆರೋಪ ಹೊರಸಿ, ಸ್ವತಃ ಪತಿಯನ್ನೇ ಜೈಲುಗೆ ಕಳುಹಿಸಿದ್ದಾರೆ ರಾಖಿ ಸಾವಂತ್. ಆದಿಲ್ ಕ್ಷಮಿಸುವಂತೆ ಕೇಳಿಕೊಂಡಿದ್ದಾನೆ. ಆದರೆ, ನಾನು ಕ್ಷಮಿಸಲ್ಲ ಎಂದೂ ಹೇಳಿಕೊಂಡಿದ್ದರು. ಮೊನ್ನೆಯಷ್ಟೇ ಆದಿಲ್ ಆಚೆ ಬರುವುದಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದಿದ್ದರು.

  • ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಕೋರ್ಟ್ ಮುಂದೆ ಅರ್ಜಿ

    ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಕೋರ್ಟ್ ಮುಂದೆ ಅರ್ಜಿ

    ಬಾಲಿವುಡ್ (Bollywood)  ನಟಿ ರಾಖಿ ಸಾವಂತ್ (Rakhi Sawant) ತಮ್ಮದಲ್ಲದ ತಪ್ಪಿಗಾಗಿ ಮತ್ತೆ ಸುದ್ದಿಯಾಗಿದ್ದಾರೆ. ಲಿಪ್ ಕಿಸ್ (Lip Kiss) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿ ಸುದ್ದಿಯಾಗಿದ್ದು, ಈ ಪ್ರಕರಣ ಬರೋಬ್ಬರಿ 17 ವರ್ಷಗಳ ಹಿಂದೆ ನಡೆದದ್ದು ಎಂದು ಹೇಳಲಾಗುತ್ತಿದೆ.

    ಬಾಲಿವುಡ್ ಗಾಯಕ ಮಿಕಾ ಸಿಂಗ್  (Mika Singh) ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಕಿಸ್ ಮಾಡಿದ್ದರು. 2006ರಲ್ಲಿ ನಡೆದ ಘಟನೆಯ ಬಗ್ಗೆ ರಾಖಿ ಕೋರ್ಟ್ ಮೊರೆ ಹೋಗಿದ್ದರು. ಸತತ 17 ವರ್ಷಗಳಿಂದ ಈ ಕೇಸ್ ನಡೆಯುತ್ತಿದೆ. ಹಾಗಾಗಿ ಇದೀಗ ಮಿಕಾ ಸಿಂಗ್ ಆ ಕೇಸ್ ಅನ್ನು ಕ್ಲೋಸ್ ಮಾಡಬೇಕು ಎಂದು ಬಾಂಬೆ ಹೈಕೋರ್ಟಿಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಾಕಿಭಾಯ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಧಮ್ಕಿ

    ಪ್ರಕರಣದ ನಂತರ ನಾವಿಬ್ಬರೂ ಮನಸ್ತಾಪವನ್ನು ಬಗೆಹರಿಸಿಕೊಂಡಿದ್ದೇವೆ. ರಾಖಿ ಸಾವಂತ್ ಕೂಡ ತಮ್ಮದೇ ಆದ ಉದ್ಯೋಗದಲ್ಲಿ ಬ್ಯುಸಿಯಾಗಿದ್ದಾರೆ. ಎಫ್.ಐ.ಆರ್ ಕ್ಲೋಸ್ ಮಾಡಲು ಅವರಿಗೆ ಯಾವುದೇ ಅಭ್ಯಂತರವಿಲ್ಲ. ಹಾಗಾಗಿ ಈ ಪ್ರಕರಣವನ್ನು ಅಂತ್ಯಗೊಳಿಸಬೇಕು ಎಂದು ಮಿಕಾ ಮನವಿ ಮಾಡಿದ್ದಾರೆ.

  • ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡ ನಟಿ ರಾಖಿ ಸಾವಂತ್

    ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡ ನಟಿ ರಾಖಿ ಸಾವಂತ್

    ಳೆದ ಎರಡು ವಾರಗಳಿಂದ ಬಾಲಿವುಡ್ ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದೇ ಸುದ್ದಿ. ಸದ್ಯ ಅಮೆರಿಕಾದಲ್ಲಿ ಬೀಡುಬಿಟ್ಟು, ಹಾಲಿವುಡ್ ಸಿನಿಮಾಗಳನ್ನು ಮಾಡುತ್ತಿರುವ ಪ್ರಿಯಾಂಕಾ ಮೊನ್ನೆಯಷ್ಟೇ ಬಾಲಿವುಡ್ ಬಗ್ಗೆ ಮಾತನಾಡಿದ್ದರು. ಇಲ್ಲಿನ ರಾಜಕಾರಣದ ಬಗ್ಗೆ ಕಿಡಿಕಾರಿದ್ದರು. ತಾರತಮ್ಯದ ಪಟ್ಟಿಯನ್ನೇ ಬಿಚ್ಚಿಟ್ಟಿದ್ದರು. ಅವರ ಮಾತು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

    ಪ್ರಿಯಾಂಕಾ ಚೋಪ್ರಾಗೆ ಬಾಲಿವುಡ್ ನಲ್ಲಿ ಆದ ಅನ್ಯಾಯಗಳ ಪಟ್ಟಿ ಒಂದೊಂದೇ ಹೊರ ಬರುತ್ತಿದ್ದಂತೆಯೇ ಬಾಲಿವುಡ್ ಮೌನಕ್ಕೆ ಜಾರಿತು. ಹಾಗಂತ ಕಂಗನಾ ರಣಾವತ್ (Kangana Ranaut) ಸುಮ್ಮನಿರಲಿಲ್ಲ. ಪ್ರಿಯಾಂಕಾಗೆ ಅನ್ಯಾಯವಾಗಿದ್ದು ಕರಣ್ ಜೋಹರ್‌ನಿಂದ ಎಂದು ನೇರವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು. ಈ ವಿಚಾರದಲ್ಲಿ ಪ್ರಿಯಾಂಕಾ ಪರ ಇರುತ್ತೇನೆ ಎಂದು ಘೋಷಿಸಿದರು. ಅಲ್ಲಿಗೆ ಚರ್ಚೆ ಮತ್ತೊಂದು ಹಾದಿ ಹಿಡಿಯಿತು. ಇದನ್ನೂ ಓದಿ: Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

    ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಖಿ ಸಾವಂತ್ (Rakhi Sawant) ಕೂಡ ಮಾತನಾಡಿದ್ದಾರೆ. ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡಿರುವ ರಾಖಿ, ಎಲ್ಲಿಂದಲೋ ಬರುತ್ತೀರಿ, ಸಿಹಿ ಸವಿಯುತ್ತೀರಿ. ಮತ್ತೆ ಅದೇ ರಂಗದ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತೀರಿ. ಇದು ಸರಿಯಲ್ಲ. ಯಾವಾಗ ನಿಮಗೆ ನೋವಾಗಿತ್ತೋ, ಅವತ್ತೇ ಆ ಕುರಿತು ಮಾತನಾಡಬೇಕು ಎಂದು ರಾಖಿ ಹೇಳಿದ್ದಾರೆ. ನೀವು ಬಾಲಿವುಡ್ ಬಿಟ್ಟು ತುಂಬಾ ವರ್ಷಗಳೇ ಆಗಿವೆ. ಈ ಕುರಿತು ನೀವು ಮಾತನಾಡಬಾರದು ಎಂದಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಆಡಿದ ಮಾತುಗಳು ಸುಳ್ಳು. ಇಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಅನೇಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಪ್ರಿಯಾಂಕಾ ಯಾಕೆ ಆ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ತಾಯಿ ನನಗೆ ತುಂಬಾ ಪರಿಚಯ. ಹಾಗಾಗಿ ಈ ವಿಷಯದಲ್ಲಿ ನಾನು ತಟಸ್ಥ ರೀತಿಯಲ್ಲಿ ನಿಂತು ಮಾತನಾಡುತ್ತೇನೆ ಎಂದಿದ್ದಾರೆ ರಾಖಿ.

  • ರಂಜಾನ್ ಬರ್ತಿದೆ ಪತಿ ಆದಿಲ್ ರಿಲೀಸ್ ಮಾಡಿ : ಕಣ್ಣೀರಿಟ್ಟ ನಟಿ ರಾಖಿ

    ರಂಜಾನ್ ಬರ್ತಿದೆ ಪತಿ ಆದಿಲ್ ರಿಲೀಸ್ ಮಾಡಿ : ಕಣ್ಣೀರಿಟ್ಟ ನಟಿ ರಾಖಿ

    ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ (Ramzan)  ಬಗ್ಗೆ ನಟಿ ರಾಖಿ ಸಾವಂತ್ ಮಾತನಾಡಿದ್ದು, ತಾವು ಮುಸ್ಲಿಂ ಧರ್ಮಕ್ಕೆ ಮತಾಂತಗೊಂಡಿದ್ದರಿಂದ ಈ ಬಾರಿ ಉಮ್ರಾಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮುಸ್ಲಿಮರ ಪವಿತ್ರ ಸ್ಥಳವಾಗಿರುವ ಉಮ್ರಾನಲ್ಲಿ ಪತಿ ಆದಿಲ್ ಖಾನ್ ಗಾಗಿ ಪ್ರಾರ್ಥಿಸುವೆ ಅಂದಿದ್ದಾರೆ. ರಂಜಾನ್ ಇರುವುದರಿಂದ ಪತಿಯನ್ನು ಕ್ಷಮಿಸಿರುವೆ. ಹಾಗಾಗಿ ಆತನನ್ನು ಬೇಗನೇ ಜೈಲಿನಿಂದ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ರಾಖಿ ಸಾವಂತ್ (Rakhi Sawant) ಮಾತಿಗೆ ಗೊಂದಲಕ್ಕೀಡಾಗಿದ್ದಾರೆ ಅಭಿಮಾನಿಗಳು. ಮೈಸೂರಿನ (Mysuru) ಹುಡುಗ ಆದಿಲ್ ಖಾನ್ (Adil Khan) ನಿಂದ ರಾಖಿಗೆ ಮೋಸವಾಗಿದೆ ಎಂದು ಹೇಳುತ್ತಿದ್ದವರು, ಇದೀಗ ರಾಖಿ ಆಡಿದ ಮಾತಿನಿಂದಾಗಿ ತಲೆಚಚ್ಚಿಕೊಳ್ಳುತ್ತಿದ್ದಾರೆ. ಈವರೆಗೂ ಆದಿಲ್ ಗೆ ಶಿಕ್ಷೆಯಾಗಬೇಕು, ಅವನು ಜೈಲಿನಲ್ಲಿ ಇರಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಕ್ಯಾಮೆರಾ ಮುಂದೆ ಹೇಳುತ್ತಿದ್ದ ರಾಖಿ, ಈಗ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಭಾರತ- ಆಸ್ಟ್ರೇಲಿಯಾ ಏಕದಿನ ಪಂದ್ಯ ವೀಕ್ಷಿಸಿದ ರಜನಿಕಾಂತ್‌

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ಒಂದು ಆಲೋಚನೆ ಹೊಳೆಯಿತು. ರಂಜಾನ್ ಅಂದರೆ, ಅದು ಕ್ಷಮಿಸುವ ಹಬ್ಬ. ಏನೇ ನೋವನ್ನುಂಟು ಮಾಡಿದರೂ ಕ್ಷಮಿಸಿಬಿಡಿ ಎಂದು ಹೇಳುತ್ತದೆ ಪ್ರಾರ್ಥನೆ. ಹಾಗಾಗಿ ನಾನು ಆದಿಲ್ ಬಗ್ಗೆ ಸಾಫ್ಟ್ ನಿಲುವು ಪಡೆದಿದ್ದೇನೆ. ನಾನು ಅವನಿಗೆ ಕ್ಷಮಿಸದೇ ಇರಬಹುದು. ಆದರೆ, ಅವನಿಗೆ ಬೇಲ್ ಸಿಗಲಿ’ ಎಂದು ಪ್ರಾರ್ಥಿಸಿದೆ ಎಂದಿದ್ದಾರೆ.

    ಆದಿಲ್ ಖಾನ್ ಗೆ ಶಿಕ್ಷೆ ಆಗಲೇಬೇಕು ಎಂದು ಮೈಸೂರಿನವರೆಗೂ ಬಂದಿದ್ದ ರಾಖಿ ಸಾವಂತ್, ಇಲ್ಲೊಂದು ದೂರು ದಾಖಲಿಸಿದ್ದರು. ಆದಿಲ್ ಗೆ ಜಾಮೀನು ಸಿಗದಂತೆ ಹೆಸರಾಂತ ವಕೀಲರನ್ನು ನೇಮಿಸಿಕೊಂಡಿದ್ದರು ರಾಖಿ. ಇದೀಗ ಮನಸ್ಸು ಬದಲಿಸಿಕೊಂಡು ಗಂಡನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸಿದ್ದಾರಂತೆ. ಈ ನಡೆಯು ಅವರ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡಿದೆ.

  • ಗಂಡನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸುತ್ತೇನೆ: ರಾಖಿ ಸಾವಂತ್

    ಗಂಡನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸುತ್ತೇನೆ: ರಾಖಿ ಸಾವಂತ್

    ರಾಖಿ ಸಾವಂತ್ (Rakhi Sawant) ಮಾತಿಗೆ ಗೊಂದಲಕ್ಕೀಡಾಗಿದ್ದಾರೆ ಅಭಿಮಾನಿಗಳು. ಮೈಸೂರಿನ (Mysuru) ಹುಡುಗ ಆದಿಲ್ ಖಾನ್ (Adil Khan) ನಿಂದ ರಾಖಿಗೆ ಮೋಸವಾಗಿದೆ ಎಂದು ಹೇಳುತ್ತಿದ್ದವರು, ಇದೀಗ ರಾಖಿ ಆಡಿದ ಮಾತಿನಿಂದಾಗಿ ತಲೆಚಚ್ಚಿಕೊಳ್ಳುತ್ತಿದ್ದಾರೆ. ಈವರೆಗೂ ಆದಿಲ್ ಗೆ ಶಿಕ್ಷೆಯಾಗಬೇಕು, ಅವನು ಜೈಲಿನಲ್ಲಿ ಇರಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಕ್ಯಾಮೆರಾ ಮುಂದೆ ಹೇಳುತ್ತಿದ್ದ ರಾಖಿ, ಈಗ ಉಲ್ಟಾ ಹೊಡೆದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ಒಂದು ಆಲೋಚನೆ ಹೊಳೆಯಿತು. ರಂಜಾನ್ ಅಂದರೆ, ಅದು ಕ್ಷಮಿಸುವ ಹಬ್ಬ. ಏನೇ ನೋವನ್ನುಂಟು ಮಾಡಿದರೂ ಕ್ಷಮಿಸಿಬಿಡಿ ಎಂದು ಹೇಳುತ್ತದೆ ಪ್ರಾರ್ಥನೆ. ಹಾಗಾಗಿ ನಾನು ಆದಿಲ್ ಬಗ್ಗೆ ಸಾಫ್ಟ್ ನಿಲುವು ಪಡೆದಿದ್ದೇನೆ. ನಾನು ಅವನಿಗೆ ಕ್ಷಮಿಸದೇ ಇರಬಹುದು. ಆದರೆ, ಅವನಿಗೆ ಬೇಲ್ ಸಿಗಲಿ’ ಎಂದು ಪ್ರಾರ್ಥಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ ಹಂಚಿಕೊಂಡ ದೀಪಿಕಾ ದಾಸ್‌

    ಆದಿಲ್ ಖಾನ್ ಗೆ ಶಿಕ್ಷೆ ಆಗಲೇಬೇಕು ಎಂದು ಮೈಸೂರಿನವರೆಗೂ ಬಂದಿದ್ದ ರಾಖಿ ಸಾವಂತ್, ಇಲ್ಲೊಂದು ದೂರು ದಾಖಲಿಸಿದ್ದರು. ಆದಿಲ್ ಗೆ ಜಾಮೀನು ಸಿಗದಂತೆ ಹೆಸರಾಂತ ವಕೀಲರನ್ನು ನೇಮಿಸಿಕೊಂಡಿದ್ದರು ರಾಖಿ. ಇದೀಗ ಮನಸ್ಸು ಬದಲಿಸಿಕೊಂಡು ಗಂಡನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸಿದ್ದಾರಂತೆ. ಈ ನಡೆಯು ಅವರ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡಿದೆ.‌

     

  • ಪತಿ ಆದಿಲ್ ನನ್ನು ಕ್ಷಮಿಸಿದರೆ, ಅವನು ನನ್ನನ್ನು ಕೊಲ್ಲಬಹುದು: ನಟಿ ರಾಖಿ ಸಾವಂತ್

    ಪತಿ ಆದಿಲ್ ನನ್ನು ಕ್ಷಮಿಸಿದರೆ, ಅವನು ನನ್ನನ್ನು ಕೊಲ್ಲಬಹುದು: ನಟಿ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant), ತನ್ನ ಪತಿ ಆದಿಲ್ ಖಾನ್ (Adil Khan) ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಅವನು ಜೈಲಿಂದ (Jail) ಮಸೇಜ್ ಮಾಡಿರುವ ಕುರಿತು ಮಾತನಾಡಿದ್ದರು. ಇದೀಗ ಆತನನ್ನು ಕ್ಷಮಿಸಿದರೆ ಬಹುಶಃ ನನ್ನನ್ನು ಅವನು ಕೊಲ್ಲಬಹುದು ಎಂದು ಹೇಳಿಕೆ ನೀಡಿದ್ದಾರೆ. ಜೈಲಿನಿಂದ ಕಳುಹಿಸಿರುವ ಸಂದೇಶದಲ್ಲಿ ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡಿದ್ದಾನೆ ಎಂದೂ ರಾಖಿ ತಿಳಿಸಿದ್ದಾರೆ.

    ನಿನ್ನೆಯಷ್ಟೇ ಪತಿ ಆದಿಲ್ ಕುರಿತಾಗಿ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ ಎಂದಿದ್ದಾರೆ ರಾಖಿ. ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದಾರೆ ರಾಖಿ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.

    ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತು.

  • ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್

    ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತೆ ಪತಿ ಆದಿಲ್ ಖಾನ್ (Adil Khan) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೈಲಿನಿಂದ ಅವನು ಮೆಸೇಜ್ ಕಳುಹಿಸಿರುವ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಆತನ ವಿರುದ್ಧ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ (Marriage) ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ ಎಂದಿದ್ದಾರೆ ರಾಖಿ.

    ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತೆಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದಾರೆ ರಾಖಿ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.

    ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತು.

  • ನನಗಿಂತ ಹಾಟ್ ಹೆಂಡತಿ ಬೇಕಿತ್ತಾ ಆದಿಲ್ ಗೆ? : ಏರ್ ಪೋರ್ಟಿನಲ್ಲಿ ರಾಖಿ ಪ್ರಶ್ನೆ

    ನನಗಿಂತ ಹಾಟ್ ಹೆಂಡತಿ ಬೇಕಿತ್ತಾ ಆದಿಲ್ ಗೆ? : ಏರ್ ಪೋರ್ಟಿನಲ್ಲಿ ರಾಖಿ ಪ್ರಶ್ನೆ

    ರೆಬರೆ ಬಟ್ಟೆಗಳನ್ನು ಧರಿಸಿಕೊಂಡು ಬೀದಿಗೆ ಇಳಿಯುತ್ತಿದ್ದ ಬಾಲಿವುಡ್ ನಟಿ ರಾಖಿ ಸಾವಂತ್, ಮದುವೆ ನಂತರ ಡ್ರೆಸ್ ಕೋಡ್ ಬದಲಾಯಿಸಿಕೊಂಡಿದ್ದರು. ಪತಿ ಆದಿಲ್ ಮನೆಯವರಿಗೆ ನಾನು ತೊಡುವ ಬಟ್ಟೆಗಳು ಇಷ್ಟವಾಗುವುದಿಲ್ಲ ಎನ್ನುತ್ತಾ ಮೈತುಂಬಾ ಉಡುಗೆ ತೊಡುತ್ತಿದ್ದರು. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಬುರ್ಕಾ ಕೂಡ ತೊಡಲು ಶುರು ಮಾಡಿದ್ದರು. ಆದಿಲ್ ಕೈ ಕೊಡುತ್ತಿದ್ದಂತೆಯೇ ಮತ್ತೆ ಬದಲಾಗಿದ್ದಾರೆ ರಾಖಿ.

    ರಾಖಿ ಫೌಂಡೇಶನ್ ಉದ್ಘಾಟನೆಗಾಗಿ ದುಬೈಗೆ ತೆರಳುತ್ತಿದ್ದ ಅವರು ಕ್ಯಾಮೆರಾ ಕಣ್ಣಿಗೆ ಮತ್ತೆ ಹಳೆ ರಾಖಿಯಂತೆ ಕಂಡರು. ತುಂಡುಡುಗೆಯಲ್ಲೇ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ರಾಖಿ ಕಾಸ್ಟ್ಯೂಮ್ ನೋಡಿದ ಕೆಲವರು ಮತ್ತೆ ರಾಖಿ ಬದಲಾಗಿದ್ದಾರೆ ಎನ್ನುವ ಪ್ರಶ್ನೆ ಹಾಕಿದ್ದರು. ಅದಕ್ಕೆ ಉತ್ತರಿಸಿದ ರಾಖಿ, ನಾನು ಮೊದಲನಂತೆ ಆಗಿದ್ದೇನೆ. ಹೀಗೆಯೇ ಇರುತ್ತೇನೆ. ಯಾರಿಗಾಗಿ ನಾನು ಬದಲಾಗಿದ್ದೇನೋ, ಅವರೇ ನನ್ನಿಂದ ದೂರವಾಗಿದ್ದಾರೆ ಎಂದರು. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ತುಸು ತಮಾಷೆಯಾಗಿ ಮತ್ತೆ ಮಾತನಾಡಿದ ರಾಖಿ, ‘ನನ್ನಂತಹ ಹಾಟ್ ಹೆಂಡತಿ ಬಿಟ್ಟು, ಆದಿಲ್ ದೂರ ಹೋಗಿದ್ದಾನೆ. ನನಗಿಂತ ಹಾಟ್ ಹೆಂಡತಿ ಬೇಕಾ?’ ಎಂದು ಪ್ರಶ್ನೆ ಮಾಡಿದರು. ಗಂಡನ ಮೇಲೆ ತುಸು ಅನುಕಂಪವನ್ನೂ ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದರು. ಆದಿಲ್ ಸದ್ಯ ಜೈಲಿನಲ್ಲಿದ್ದಾನೆ. ರಾಖಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಕಾರಣದಿಂದಾಗಿ ಅವರು ರಾಖಿ ಫೌಂಡೇಶನ್ ಶುರು ಮಾಡಿದ್ದಾರಂತೆ.

    ಎರಡು ದಿನಗಳ ಕಾಲ ಮೈಸೂರಿನಲ್ಲಿ ಬೀಡು ಬಿಟ್ಟಿದ್ದ ರಾಖಿ, ಮೊನ್ನೆಯಷ್ಟೇ ಮುಂಬೈಗೆ ತೆರಳಿದ್ದರು. ಆದಿಲ್ ಕುಟುಂಬವನ್ನು ಭೇಟಿ ಮಾಡಲು ಮೈಸೂರಿಗೆ ಬಂದಿದ್ದ ರಾಖಿಗೆ, ಆದಿಲ್ ಕುಟುಂಬ ಭೇಟಿಯನ್ನು ನಿರಾಕರಿಸಿತ್ತು. ಅಲ್ಲದೇ, ಮನೆ ಬಾಗಿಲಿಗೆ ಬೀಗ ಹಾಕಿ, ಬೇರೆ ಕಡೆ ಸ್ಥಳಾಂತರಗೊಂಡಿದೆ. ಆದಿಲ್ ಕುಟುಂಬದ ಭೇಟಿ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಮುಂಬೈಗೆ ರಾಖಿ ವಾಪಸ್ಸಾಗಿದ್ದರು.

  • ಮೈಸೂರಿನ ಆದಿಲ್ ಮನೆ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ

    ಮೈಸೂರಿನ ಆದಿಲ್ ಮನೆ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮೈಸೂರಿನಲ್ಲಿ (Mysore) ಬೀಡು ಬಿಟ್ಟಿದ್ದಾರೆ. ತನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಪತಿ ಆದಿಲ್ (Adil) ಮನೆಯ ಮುಂದೆ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ನನ್ನ ಗಂಡನ ಮನೆಯಲ್ಲಿ ಇರುವುದಕ್ಕೆ ನನಗೆ ಅವಕಾಶ ಬೇಕು ಎಂದು ಆದಿಲ್ ಮನೆಗೆ ಬಂದ ರಾಖಿಯನ್ನು ಆದಿಲ್ ಕುಟುಂಬ ಒಳಗೆ ಬಿಟ್ಟುಕೊಂಡಿಲ್ಲ. ಬಾಗಿಲು ತಗೆಯದೇ ಇರುವ ಕಾರಣಕ್ಕಾಗಿ ಮತ್ತೆ ಕಣ್ಣೀರು ಸುರಿಸಿದ್ದಾರೆ ರಾಖಿ.

    ಕೌಟುಂಬಿಕ ಕಲಹ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ರಾಖಿ ಸಾವಂತ್ ಮೈಸೂರು ಕೋರ್ಟ್ ಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ‘ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು’ ಎಂದಿದ್ದರು.

    ಮುಂದುವರೆದು ಮಾತನಾಡಿದ ರಾಖಿ, ‘ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌’ ಎಂದು ಆರೋಪ ಮಾಡಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ‘ಆದಿಲ್ ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ. ಇದಕ್ಕಾಗಿಯೇ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಕೊಡಿಸಿ’ ಎಂದು ಮಾಧ್ಯಮಗಳ ಮುಂದೆ ರಾಖಿ ಗಳಗಳನೆ ಅತ್ತರು.  ಇದೀಗ ನ್ಯಾಯಕ್ಕಾಗಿ ಆದಿಲ್ ಮನೆಯ ಮುಂದೆಯೇ ಪ್ರತಿಭಟಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k