Tag: ರಾಖಿ ಸಾವಂತ್

  • ಬಾಲ್ಕನಿಗೆ ಬರಬೇಡಿ ಎಂದು ಸಲ್ಮಾನ್ ಗೆ ಮನವಿ ಮಾಡಿದ ರಾಖಿ

    ಬಾಲ್ಕನಿಗೆ ಬರಬೇಡಿ ಎಂದು ಸಲ್ಮಾನ್ ಗೆ ಮನವಿ ಮಾಡಿದ ರಾಖಿ

    ಜೀವ ಬೆದರಿಕೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ನಟಿ ರಾಖಿ ಸಾವಂತ್ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನು ನೋಡಲು ಬಾಲ್ಕಿನಿಗೆ ಬರಬೇಡಿ ಎಂದು ರಾಖಿ (Rakhi Sawant) ಮನವಿ ಮಾಡಿದ್ದಾರೆ. ಈ ಹಿಂದೆಯೂ ಜೀವ ಬೆದರಿಕೆ ವಿಷಯದಲ್ಲಿ ಸಲ್ಮಾನ್ ಪರ ನಿಂತಿದ್ದರು ರಾಖಿ ಸಾವಂತ್.

    ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಗುಂಡಿನ ದಾಳಿಯ ನಂತರ ಅವರ ಕುಟುಂಬ ಸಾಕಷ್ಟು ಆತಂಕ್ಕೆ ಒಳಗಾಗಿದೆ. ಸಲ್ಮಾನ್ ಹತ್ಯೆ ಮಾಡಲು ನಾನಾ ರೀತಿಯ ಕಸರತ್ತುಗಳನ್ನು ದುರುಳರು ಮಾಡುತ್ತಿದ್ದಾರೆ. ಹಾಗಾಗಿ ತಾವಿರುವ ಅಪಾರ್ಟ್ಮೆಂಟ್ ಅನ್ನು ಖಾಲಿ ಮಾಡಲು ಸಲ್ಮಾನ್ ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತು ಸಲ್ಮಾನ್ ಸಹೋದರ ಅರ್ಬಾಜ್ ಮಾಹಿತಿ ನೀಡಿದ್ದು, ಅಂತಹ ಯೋಚನೆ ಸದ್ಯಕ್ಕಿಲ್ಲ ಅಂದಿದ್ದಾರೆ.

    ಗುಂಡಿನ ದಾಳಿಯನ್ನು ಮುಂಬೈ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಗುಂಡಿನ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಲಾಗಿದೆ. ನಂತರ ಗನ್ ಅನ್ನು ನದಿಯಲ್ಲಿ ಬೀಸಾಕಿದ್ದನ್ನು ಪತ್ತೆ ಹಚ್ಚಿ, ಗನ್ ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೀಗ ಗನ್ ಸಪ್ಲೈ ಮಾಡಿದವರನ್ನೂ ಪೊಲೀಸರು ಬಂಧಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಗನ್ ಸರಬರಾಜು ಮಾಡಿದ್ದು ಸುಭಾಷ್ ಚಂದರ್ ಮತ್ತು ಅನುಜ್ ಥಾಪಸ್ ಎಂದು ಗೊತ್ತಾಗಿದ್ದು, ಈ ಇಬ್ಬರನ್ನೂ ಪಂಜಾಬ್ (Punjab) ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 15ರಂದು ಆರೋಪಿಗಳಿಗೆ ಇವರು ಪಿಸ್ತೂಲ್ ಮತ್ತು ಕಾಟ್ರಿಜ್ ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ನಡುವೆ ಮುಂಬೈ ಪೊಲೀಸರಿಂದ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ.  ಆರೋಪಿ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ 20 ವಯಸ್ಸಿನ ರೋಹಿತ್ ತ್ಯಾಗಿ. ಆರೋಪಿಯು, ನಟ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಬಾಂದ್ರಾ ಪೊಲೀಸ್ ಠಾಣೆಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

     

    ಕ್ಯಾಬ್ ಡ್ರೈವರ್ ಸಲ್ಮಾನ್ ಖಾನ್ ಅವರ ಮನೆಯಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಬಂದು ಬುಕ್ಕಿಂಗ್ ಬಗ್ಗೆ ಅಲ್ಲಿನ ವಾಚ್‌ಮನ್‌ ಬಳಿ ಕೇಳಿದ್ದಾರೆ. ಮೊದಲು ದಿಗ್ಭ್ರಮೆಗೊಂಡ ವಾಚ್‌ಮನ್, ತಕ್ಷಣ ಬುಕಿಂಗ್ ಬಗ್ಗೆ ಹತ್ತಿರದ ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಮುಂಬೈನ ಬಾಂದ್ರಾ ಪೊಲೀಸರು, ಕ್ಯಾಬ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ಟ್ರ್ಯಾಕ್ ಮಾಡಿದ್ದಾರೆ. ಕ್ಯಾಬ್ ಬುಕ್ ಮಾಡಿದ ವ್ಯಕ್ತಿ ಘಾಜಿಯಾಬಾದ್‌ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್ ತ್ಯಾಗಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿರುವುದು ಚೇಷ್ಟೆಗಾಗಿ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಿದರು. ನಂತರ ಅವರನ್ನು ಮುಂಬೈಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

  • ಸುಪ್ರೀಂ ಕೋರ್ಟ್ ಅಂಗಳಕ್ಕೆ ರಾಖಿ ಸಾವಂತ್ ಪ್ರಕರಣ

    ಸುಪ್ರೀಂ ಕೋರ್ಟ್ ಅಂಗಳಕ್ಕೆ ರಾಖಿ ಸಾವಂತ್ ಪ್ರಕರಣ

    ಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಾಲಿವುಡ್ ನಟಿ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ರಾಖಿ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬಾಂಭೆ ಹೈಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ರಾಖಿ ಇದೀಗ ಸುಪ್ರೀಂ ಕೋರ್ಟ್ (Supreme Court)  ಮೆಟ್ಟಿಲು ಏರಿದ್ದಾರೆ. ಇಂದು ಪ್ರಕರಣದ ವಿಚಾರಣೆ ನಡೆಯಲಿದೆ.

    ತಮ್ಮ ಖಾಸಗಿ ವಿಡಿಯೋಗಳನ್ನು ರಾಖಿ ಸಾವಂತ ಇತರರಿಗೆ ಹಂಚುತ್ತಿದ್ದಾರೆ. ಇದರಿಂದ ಮಾನನಷ್ಟವಾಗುತ್ತಿದೆ ಎಂದು ರಾಖಿ ಮಾಜಿ ಗೆಳೆಯ ಆದಿಲ್ (Adil Khan) ದೂರು ನೀಡಿದ್ದರು. ಜೊತೆಗೆ ಗಂಭೀರ ಆರೋಪವನ್ನೂ ಅವರು ಮಾಡಿದ್ದರು. ಈ ನಡುವೆ ಆದಿಲ್ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ (Somi Khan) ಜೊತೆ ಮದುವೆ (Marriage) ಆಗಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿರುವ ಆದಿಲ್ ಮುಂದಿನ ದಿನಗಳಲ್ಲಿ ಮುಂಬೈಗೆ ಹೋದ ನಂತರ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಮದುವೆ ವಿಚಾರವನ್ನೂ ಅವರು ಖಚಿತ ಪಡಿಸಿದ್ದಾರೆ.

    ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಇದೀಗ ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದಾರೆ. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ.

     

    ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ. ನಟಿ ಸೋಮಿ ಖಾನ್ ಜೊತೆಗಿನ ಮದುವೆ ಬಗ್ಗೆ ಆದಿಲ್ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಫೋಟೋ ಕೂಡ ಹೊರ ಬಂದಿವೆ ಹಾಗೂ ಮದುವೆ ಕುರಿತು ಆದಿಲ್ ಮಾತನಾಡಿದ್ದಾರೆ.

  • ಸಲ್ಮಾನ್ ದೇವತಾ ಮನುಷ್ಯ, ಅವರನ್ನು ಕೊಲ್ಲಬೇಡಿ: ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್

    ಸಲ್ಮಾನ್ ದೇವತಾ ಮನುಷ್ಯ, ಅವರನ್ನು ಕೊಲ್ಲಬೇಡಿ: ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್

    ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಗುಂಡಿಕ್ಕಿ ಕೊಲ್ಲುವ ಮಾತುಗಳನ್ನು ಆಡಿದವರಿಗೆ ಕೈ ಮುಗಿದು ವಿನಂತಿ ಮಾಡಿಕೊಂಡಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant). ಸಲ್ಮಾನ್ ಒಳ್ಳೆಯವರು. ಅವರಿಗೆ ತೊಂದರೆ ಕೊಡಬೇಡಿ. ಅವರು ಒಂದು ರೀತಿಯಲ್ಲಿ ದೇವತಾ ಮನುಷ್ಯ. ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಅವರನ್ನು ಕೊಲ್ಲುವುದರಿಂದ ನಿಮಗೇನು ಸಿಗುತ್ತದೆ? ದಯವಿಟ್ಟು ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟು ಕೈ ಮುಗಿದಿದ್ದಾರೆ ರಾಖಿ ಸಾವಂತ್.

    ರಾಖಿ ಸಾವಂತ್ ಅವರ ಕಣ್ಣೀರಿಗೆ ಕಾರಣ, ಸಲ್ಮಾನ್ ಖಾನ್ (Salman Khan) ಅವರ ಮುಂಬೈಯ ಬಾಂದ್ರಾದ ನಿವಾಸದೆದುರು ಏಪ್ರಿಲ್ 14ರಂದು ನಡೆದ ಗುಂಡಿನ ದಾಳಿ. ಈಗಾಗಲೇ ದಾಳಿಗೆ  ಸಂಬಂಧಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಬೈಕ್‌ನಲ್ಲಿ ಬಂದು ಗುಂಡು ಹಾರಿಸಿದ ಇಬ್ಬರು ಶಂಕಿತರನ್ನು ಮುಂಬೈ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

    ಸಲ್ಮಾನ್ ಖಾನ್ ಮುಂಬೈ ನಿವಾಸದ ಹೊರಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಇದೀಗ ಈ ದಾಳಿಯಲ್ಲಿ ತಮ್ಮದೇ ಕೈವಾಡವಿದೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್  (Bishnoi) ಸಹೋದರ ಅನ್ಮೋಲ್ ಬಿಷ್ಣೋಯ್ ಹೇಳಿಕೊಂಡಿದ್ದರು. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಇಬ್ಬರೂ ಶಂಕಿತರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದರು. ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡ 2 ಶೂಟರ್‌ಗಳನ್ನು ಪೊಲೀಸರು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ.

    ಅಂದಹಾಗೆ, ಅನ್ಮೋಲ್‌ನ ಫೇಸ್‌ಬುಕ್ ಪೇಜ್‌ನಲ್ಲಿ, ಈ ಘಟನೆ ಟ್ರೈಲರ್ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಸಲ್ಮಾನ್ ಖಾನ್‌ಗೆ ಎಚ್ಚರಿಕೆ ನೀಡಿದ್ದರು. ಸಲ್ಮಾನ್ ಖಾನ್ ಇದು ನಾವು ನಿಮಗೆ ತೋರಿಸಿದ್ದು, ಟ್ರೈಲರ್ ಮಾತ್ರ. ನಮ್ಮ ಸಾಮರ್ಥ್ಯ, ಶಕ್ತಿ ಏನು ಎಂಬುದರ ಪರಿಚಯ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಇದು ನಾವು ನೀಡುವ ಮೊದಲ ಮತ್ತು ಕೊನೆಯ ವಾರ್ನಿಂಗ್ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

    ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದರು. ನಂತರ ಸ್ಥಳದಲ್ಲಿ ಪರಾರಿಯಾಗಿದ್ದರು. ಮುಂಬೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಗುಂಡು ಹಾರಿಸಿದ ವ್ಯಕ್ತಿ ಪತ್ತೆಗೆ ಬಲೆ ಬೀಸಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಹೇಳಿದ್ದ. ತಾನು ಟಾರ್ಗೆಟ್ ಮಾಡಿರುವ 10 ಮಂದಿ ಹೆಸರಿನ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲಿಗರಾಗಿದ್ದಾರೆ ಎಂದಿದ್ದ. 1998ರ ಕೃಷ್ಣಮೃಗ ಬೇಟೆ ಆರೋಪ ಹೊತ್ತಿರುವ ಬಾಲಿವುಡ್ ನಟನ ಮೇಲೆ ಬಿಷ್ಣೋಯ್ ಹಗೆ ಸಾಧಿಸುತ್ತಿದ್ದಾನೆ.

     

    ಬಿಷ್ಣೋಯ್ ತನ್ನ ಸಹಾಯಕ ಸಂಪತ್ ನೆಹ್ರಾ ಬಳಸಿಕೊಂಡು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ಕಣ್ಣಿಟ್ಟಿದ್ದ. ವಿಚಾರ ತಿಳಿಯುತ್ತಿದ್ದಂತೆ ನೆಹ್ರಾನನ್ನು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ವಶಪಡಿಸಿಕೊಂಡಿದೆ. ಕಳೆದ ವರ್ಷ ಏಪ್ರಿಲ್ 11 ರಂದು ಬಂದ ಮತ್ತೊಂದು ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಭದ್ರತೆಯನ್ನು Y + ಗೆ ಹೆಚ್ಚಿಸಿದ್ದರು. ಖಾನ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ವಿದ್ಯಾರ್ಥಿಯ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.

  • ಆದಿಲ್ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿದ ನಟಿ ರಾಖಿ

    ಆದಿಲ್ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿದ ನಟಿ ರಾಖಿ

    ಮೈಸೂರು ಹುಡುಗ ಆದಿಲ್ ನನ್ನು ತಾವು ಮದುವೆ ಆಗಿರುವುದಾಗಿ ಘೋಷಿಸಿಕೊಂಡಿದ್ದರು ಬಾಲಿವುಡ್ ನಟಿ ರಾಖಿ ಸಾವಂತ್. ಅದಕ್ಕೆ ಸಂಬಂಧಿಸಿದ ಫೋಟೋ ಕೂಡ ರಿಲೀಸ್ ಮಾಡಿದ್ದರು. ನಂತರ ಇಬ್ಬರ ಮಧ್ಯ ಗಲಾಟೆ ಆಯಿತು. ಆದಿಲ್ ನನ್ನು ಜೈಲಿಗೆ ಕಳುಹಿಸುವಲ್ಲಿ ರಾಖಿ ಯಶಸ್ವಿಯಾದರು. ಜೈಲಿನಿಂದ ಆಚೆ ಬಂದ ಮೇಲೆ ಆದಿಲ್ ಮತ್ತೊಂದು ಮದುವೆ ಆಗಿದ್ದಾರೆ. ಆ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿ ಗೇಲಿ ಮಾಡಿದ್ದಾರೆ ರಾಖಿ.

    ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ (Somi Khan) ಜೊತೆ ಮದುವೆ (Marriage) ಆಗಿರುವ ಮೈಸೂರು ಹುಡುಗ, ಆದಿಲ್ (Adil), ಮೊನ್ನೆಯಷ್ಟೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ತಮ್ಮ ಮದುವೆ ವಿಚಾರವನ್ನೂ ಅವರು ಖಚಿತ ಪಡಿಸಿದ್ದಾರೆ.

    ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಇದೀಗ ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದಾರೆ. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

    ರಾಖಿ ಸಾವಂತ್  ಅವರಿಂದ ದೂರವಾದ್ಮೇಲೆ ಇದೀಗ ಗುಟ್ಟಾಗಿ ನಟಿ ಸೋಮಿ ಖಾನ್ ಜೊತೆ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ. ನಟಿ ಸೋಮಿ ಖಾನ್ ಜೊತೆಗಿನ ಮದುವೆ ಬಗ್ಗೆ ಆದಿಲ್ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಫೋಟೋ ಕೂಡ ಹೊರ ಬಂದಿವೆ ಹಾಗೂ ಮದುವೆ ಕುರಿತು ಆದಿಲ್ ಮಾತನಾಡಿದ್ದಾರೆ.

     

    ಕಳೆದ ವರ್ಷ ಆದಿಲ್ ಖಾನ್ ತನಗೆ ಕಿರುಕುಳ ಕೊಡ್ತಾರೆ ಅಂತ ಪತಿ ವಿರುದ್ಧ ಕೇಸ್ ಹಾಕಿ ಜೈಲಿಗೆ ಅಟ್ಟಿದ್ದರು. ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಆದಿಲ್ ಕೂಡ ರಾಖಿ ವಿರುದ್ಧ ರಾಂಗ್ ಆಗಿದ್ದರು. ಇಷ್ಟೇಲ್ಲಾ ಆದ್ಮೇಲೆ ಏನಾಯ್ತು ಎಂದು ಸ್ಪಷ್ಟನೆ ಸಿಕ್ಕಿಲ್ಲ. ಇಬ್ಬರೂ ಸೈಲೆಂಟ್‌ ಆದರು. ಇದೀಗ ಆದಿಲ್ ಖಾನ್ ಮದುವೆ ಆಗಿರುವ ವಿಚಾರಕ್ಕೆ ರಾಖಿ ಸಾವಂತ್ ಅವರ ಮುಂದಿನ ನಡೆಯೇನು ಎಂಬುದರ ಬಗ್ಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ನನಗೆ ಮತ್ತೊಂದು ಮದುವೆಗೆ ಅವಕಾಶವಿದೆ: ರಾಖಿ ಬಾಯ್ ಫ್ರೆಂಡ್ ಆದಿಲ್ ಮಾತು

    ನನಗೆ ಮತ್ತೊಂದು ಮದುವೆಗೆ ಅವಕಾಶವಿದೆ: ರಾಖಿ ಬಾಯ್ ಫ್ರೆಂಡ್ ಆದಿಲ್ ಮಾತು

    ಬಾಲಿವುಡ್ ನಟಿ ರಾಖಿ ಸಾವಂತ್ ಜೊತೆ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದ ಆದಿಲ್, ಆನಂತರ ತಮ್ಮಿಬ್ಬರ ನಡುವೆ ಅಂಥದ್ದು ಏನೂ ನಡೆದೇ ಇಲ್ಲವೆಂದು ಸ್ಪಷ್ಟನೆ ನೀಡಿದ್ದರು. ಆದರೆ, ತಾನು ಆದಿಲ್ ಜೊತೆ ನಿಕಾ ಆಗಿರೋದಾಗಿ ಸಾಕ್ಷಿ ಸಮೇತ ಹೇಳಿಕೊಂಡಿದ್ದರು ರಾಖಿ. ಈ ಕಾರಣಕ್ಕಾಗಿಯೇ ತನಗೆ ಮೋಸ ಆಗಿದೆ ಎಂದು ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಆ ಕೇಸ್ ಇನ್ನೂ ನಡೆತಾ ಇದೆ. ಈ ನಡುವೆ ಆದಿಲ್ ಬೇರೊಬ್ಬ ಹುಡುಗಿತ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಈ ಕುರಿತಂತೆ ಅವರು ಯೂಟ್ಯೂ‍ಬ್ ವಾಹಿನಿಗಳಿಗೆ ಸಂದರ್ಶನ ನೀಡಿ, ತನ್ನ ಧರ್ಮದಲ್ಲಿ ಮತ್ತೊಂದು ಮದುವೆ ಆಗೋದಕ್ಕೆ ಅವಕಾಶವಿದೆ. ಆ ಕಾರಣಕ್ಕಾಗಿ ಇನ್ನೊಂದು ಮದುವೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಸಲಿಗೆ ರಾಕಿ ಜೊತೆ ತಮ್ಮದು ಮದುವೆನೇ ಆಗಿಲ್ಲ ಎನ್ನುವ ಅರ್ಥದಲ್ಲೂ ಮಾತನಾಡಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ (Somi Khan) ಜೊತೆ ಮದುವೆ (Marriage) ಆಗಿರುವ ಮೈಸೂರು ಹುಡುಗ ಆದಿಲ್ (Adil), ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಇದೀಗ ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದರು. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೊತೆ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು.  ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ.

     

    ಕಳೆದ ವರ್ಷ ಆದಿಲ್ ಖಾನ್ ತನಗೆ ಕಿರುಕುಳ ಕೊಡ್ತಾರೆ ಅಂತ ಪತಿ ವಿರುದ್ಧ ಕೇಸ್ ಹಾಕಿ ಜೈಲಿಗೆ ಅಟ್ಟಿದ್ದರು. ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಆದಿಲ್ ಕೂಡ ರಾಖಿ ವಿರುದ್ಧ ರಾಂಗ್ ಆಗಿದ್ದರು. ಇಷ್ಟೆಲ್ಲಾ ಆದ್ಮೇಲೆ ಏನಾಯ್ತು ಎಂದು ಸ್ಪಷ್ಟನೆ ಸಿಕ್ಕಿಲ್ಲ. ಇಬ್ಬರೂ ಸೈಲೆಂಟ್‌ ಆದರು. ಈಗ ಆದಿಲ್ ಮತ್ತೊಂದು ಮದುವೆ ಆಗುವ ಮೂಲಕ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಇದು ತಮ್ಮದು ಮೊದಲನೇ ಮದುವೆ ಎಂದು ಸ್ಪಷ್ಟ ಪಡಿಸಿದ್ದಾರೆ.

  • ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ: ಬಾಯ್ ಫ್ರೆಂಡ್ ಆದಿಲ್

    ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ: ಬಾಯ್ ಫ್ರೆಂಡ್ ಆದಿಲ್

    ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ (Somi Khan) ಜೊತೆ ಮದುವೆ (Marriage) ಆಗಿರುವ ಮೈಸೂರು ಹುಡುಗ, ಬಾಲಿವುಡ್ ನಟಿ ರಾಖಿ ಸಾವಂತ್ ಬಾಯ್ ಫ್ರೆಂಡ್ ಆದಿಲ್ (Adil), ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿರುವ ಆದಿಲ್ ಮುಂದಿನ ದಿನಗಳಲ್ಲಿ ಮುಂಬೈಗೆ ಹೋದ ನಂತರ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಮದುವೆ ವಿಚಾರವನ್ನೂ ಅವರು ಖಚಿತ ಪಡಿಸಿದ್ದಾರೆ.

    ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಇದೀಗ ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದಾರೆ. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

    ರಾಖಿ ಸಾವಂತ್  ಅವರಿಂದ ದೂರವಾದ್ಮೇಲೆ ಇದೀಗ ಗುಟ್ಟಾಗಿ ನಟಿ ಸೋಮಿ ಖಾನ್ ಜೊತೆ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ. ನಟಿ ಸೋಮಿ ಖಾನ್ ಜೊತೆಗಿನ ಮದುವೆ ಬಗ್ಗೆ ಆದಿಲ್ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಫೋಟೋ ಕೂಡ ಹೊರ ಬಂದಿವೆ ಹಾಗೂ ಮದುವೆ ಕುರಿತು ಆದಿಲ್ ಮಾತನಾಡಿದ್ದಾರೆ.

    ಕಳೆದ ವರ್ಷ ಆದಿಲ್ ಖಾನ್ ತನಗೆ ಕಿರುಕುಳ ಕೊಡ್ತಾರೆ ಅಂತ ಪತಿ ವಿರುದ್ಧ ಕೇಸ್ ಹಾಕಿ ಜೈಲಿಗೆ ಅಟ್ಟಿದ್ದರು. ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಆದಿಲ್ ಕೂಡ ರಾಖಿ ವಿರುದ್ಧ ರಾಂಗ್ ಆಗಿದ್ದರು. ಇಷ್ಟೇಲ್ಲಾ ಆದ್ಮೇಲೆ ಏನಾಯ್ತು ಎಂದು ಸ್ಪಷ್ಟನೆ ಸಿಕ್ಕಿಲ್ಲ. ಇಬ್ಬರೂ ಸೈಲೆಂಟ್‌ ಆದರು.

     

    ಇದೀಗ ಆದಿಲ್ ಖಾನ್ ಮದುವೆ ಆಗಿರುವ ವಿಚಾರಕ್ಕೆ ರಾಖಿ ಸಾವಂತ್ ಅವರ ಮುಂದಿನ ನಡೆಯೇನು ಎಂಬುದರ ಬಗ್ಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ಅನಂತ್ ಅಂಬಾನಿ ತೂಕದ ಬಗ್ಗೆ ಟೀಕೆ ಮಾಡಿದ ರಾಖಿ ಸಾವಂತ್

    ಅನಂತ್ ಅಂಬಾನಿ ತೂಕದ ಬಗ್ಗೆ ಟೀಕೆ ಮಾಡಿದ ರಾಖಿ ಸಾವಂತ್

    ದಾ ವಿವಾದಗಳ ಮೂಲಕ ಸುದ್ದಿಯಾಗುವ ನಟಿ ರಾಖಿ ಸಾವಂತ್ (Rakhi Sawant) ಇದೀಗ ಮುಖೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ತೂಕದ ವಿಚಾರವಾಗಿ ಟೀಕೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಮುಖೇಶ್ ಅಂಬಾನಿಗೆ ಬಿಗ್ ಆಫರ್ ಕೂಡ ಕೊಟ್ಟಿದ್ದಾರೆ.

    ಅನಂತ್ ಅಂಬಾನಿ ತೂಕದ ಮೇಲೆ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಡಿಯರ್ ಅಂಬಾನಿ ಅವರೇ ನಿಮ್ಮ ಮಗ ಅನಂತ್ ಅಂಬಾನಿ ಚೆನ್ನಾಗಿ ತೂಕ ಬೆಳೆಸಿಕೊಂಡಿದ್ದಾರೆ. ಆತನನ್ನು ನನ್ನ ಬಳಿ 5 ದಿನ ಕಳುಹಿಸಿ. ಸಣ್ಣಗೆ ಮಾಡಿ ಕಳುಹಿಸುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಪರಿಣಿತಿ ಚೋಪ್ರಾ?

    ಅಲ್ಲದೆ, ಸುಮ್ಮನೆ ಕಳುಹಿಸಿಬೇಡಿ, ಸ್ವಲ್ಪ ಹಣ ಕೊಟ್ಟು ನನ್ನನ್ನು ಕೊಂಡುಕೊಳ್ಳಿ, ಆತನೊಂದಿಗೆ ಕಸರತ್ತುಗಳನ್ನು ಮಾಡುವುದಲ್ಲದೆ, ತೃಪ್ತಿ ಮಾಡಿ ಕಳುಹಿಸುತ್ತೇನೆ. ಅನಂತ್ ಅಂಬಾನಿಯನ್ನು ಜೀರೋ ಸೈಜ್ ಮಾಡಿ ನಿಮ್ಮ ಬಳಿ ಕಳುಹಿಸುವ ಜವಾಬ್ದಾರಿ ನನ್ನದು ಅಂತ ಮುಖೇಶ್ ಅಂಬಾನಿಗೆ ರಾಖಿ ಆಫರ್ ನೀಡಿದ್ದಾರೆ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

    ರಾಖಿ ಈ ಹೇಳಿಕೆ ನೀಡುತ್ತಿದ್ದಂತೆ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲ ಆರೋಗ್ಯ ಸಮಸ್ಯೆಯಿಂದ ಅನಂತ್ ಹಾಗೇ ಆಗಿದ್ದಾರೆ. ಒಬ್ಬರಿಗೆ ಬಾಡಿ ಶೇಮಿಂಗ್ ಮಾಡುವುದು ಎಷ್ಟು ಸರಿ ಎಂದು ರಾಖಿಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

  • ಸೀಕ್ರೆಟ್ ಆಗಿ 2ನೇ ಮದುವೆಯಾದ ರಾಖಿ ಸಾವಂತ್ ಪತಿ- ಹುಡುಗಿ ಯಾರು?

    ಸೀಕ್ರೆಟ್ ಆಗಿ 2ನೇ ಮದುವೆಯಾದ ರಾಖಿ ಸಾವಂತ್ ಪತಿ- ಹುಡುಗಿ ಯಾರು?

    ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಇದೀಗ ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದಾರೆ. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

    ರಾಖಿ ಸಾವಂತ್ (Raki Sawant) ಅವರಿಂದ ದೂರವಾದ್ಮೇಲೆ ಇದೀಗ ಗುಟ್ಟಾಗಿ ನಟಿ ಸೋಮಿ ಖಾನ್ ಜೊತೆ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ. ನಟಿ ಸೋಮಿ ಖಾನ್ ಜೊತೆಗಿನ ಮದುವೆ ಬಗ್ಗೆ ಆದಿಲ್ ಯಾವುದೇ ಮಾಹಿತಿ ನೀಡಿಲ್ಲ.‌ ಇದನ್ನೂ ಓದಿ:ಅಭಿಮಾನಿಗಳ ನಡೆಗೆ ಮುನಿಸಿಕೊಂಡ ಸಮಂತಾ

     

    View this post on Instagram

     

    A post shared by SOMI KHAN (@somikhan_ks)

    ಕಳೆದ ವರ್ಷ ಆದಿಲ್ ಖಾನ್ ತನಗೆ ಕಿರುಕುಳ ಕೊಡ್ತಾರೆ ಅಂತ ಪತಿ ವಿರುದ್ಧ ಕೇಸ್ ಹಾಕಿ ಜೈಲಿಗೆ ಅಟ್ಟಿದ್ದರು. ಸಾಲು ಸಾಲು ಆರೋಪಗಳನ್ನ ಮಾಡಿದ್ದರು. ಆದಿಲ್ ಕೂಡ ರಾಖಿ ವಿರುದ್ಧ ರಾಂಗ್ ಆಗಿದ್ದರು. ಇಷ್ಟೇಲ್ಲಾ ಆದ್ಮೇಲೆ ಏನಾಯ್ತು ಎಂದು ಸ್ಪಷ್ಟನೆ ಸಿಕ್ಕಿಲ್ಲ. ಇಬ್ಬರೂ ಸೈಲೆಂಟ್‌ ಆದರು.

    ಇದೀಗ ಆದಿಲ್ ಖಾನ್ ಮದುವೆ ಆಗಿರುವ ವಿಚಾರಕ್ಕೆ ರಾಖಿ ಸಾವಂತ್ ಅವರ ಮುಂದಿನ ನಡೆಯೇನು ಎಂಬುದರ ಬಗ್ಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ನಿರೀಕ್ಷಣಾ ಜಾಮೀನು ನಿರಾಕರಣೆ : ನಟಿ ರಾಖಿಗೆ ಸಂಕಷ್ಟ

    ನಿರೀಕ್ಷಣಾ ಜಾಮೀನು ನಿರಾಕರಣೆ : ನಟಿ ರಾಖಿಗೆ ಸಂಕಷ್ಟ

    ಅಶ್ಲೀಲ ವಿಡಿಯೋ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant)ಗೆ ಮುಂಬೈ ನ್ಯಾಯಾಲಯವು ನಿರೀಕ್ಷಣಾ ಜಾಮೀನು (Anticipatory Bail) ನೀಡಲು ನಿರಾಕರಿಸಿದೆ. ಈ ಹಿಂದೆ ತಮ್ಮ ಮಾಜಿಪತಿ ಅನಿಲ್ ದುರಾನಿ (Anil Durrani) ಅವರ ಅಶ್ಲೀಲ ವಿಡಿಯೋವನ್ನು ರಾಕಿ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದರು. ಹಾಗಾಗಿ ದುರಾನಿ ಕೋರ್ಟ್ ಮೆಟ್ಟಿಲು ಏರಿದ್ದರು.

    ಮುಂಬೈಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಸ್ವತಃ ಮಾಜಿಪತ್ನಿಯ ವಿರುದ್ಧವೇ ದುರಾನಿ ದೂರು ನೀಡಿದ್ದರು. ತಮ್ಮ ಖಾಸಗಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

     

    ದೂರು ದಾಖಲಾಗುತ್ತಿದ್ದಂತೆಯೇ ರಾಖಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ್ ವೈ ಭೋಂಸ್ಲೆ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ರಾಖಿ ಬಿಡುಗಡೆ ಮಾಡಿರುವ ವಿಡಿಯೋ ಅಶ್ಲೀಲವಾಗಿವೆ ಎಂದು ಕೋರ್ಟ್ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದೆ. ಹಾಗಾಗಿ ರಾಖಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಬಂದೂಕು ಹಿಡಿದು ಬೀದಿಗೆ ಬಂದ ರಾಖಿ ಸಾವಂತ್

    ಬಂದೂಕು ಹಿಡಿದು ಬೀದಿಗೆ ಬಂದ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್, ಬಂದೂಕು (Gun) ಹಿಡಿದುಕೊಂಡು ಬೀದಿಗೆ ಬಂದಿದ್ದಾರೆ. ಸೈನಿಕರ ವೇಷದಲ್ಲಿ ಬಂದೂಕು ಹಿಡಿದುಕೊಂಡು ಬೀದಿಗೆ ಬಂದ ರಾಖಿ, ದೇಶ ಸೇವೆಗಾಗಿ ನಾನು ಸದಾ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಪ್ಯಾಲೇಸ್ತೀನ್ (Palestine) ಮತ್ತು ಇಸ್ರೇಲ್ ನಡುವೆ ಯುದ್ದ ನಡೆದಿರುವ ಈ ಸಂದರ್ಭದಲ್ಲಿ ರಾಖಿ ಹುಚ್ಚಾಟ ಕಂಡು ಕೆಲವರು ಈಕೆಯನ್ನು ಪ್ಯಾಲೇಸ್ತೀನ್ ಗೆ ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

    ಪ್ರಚಾರಕ್ಕಾಗಿ ನಾನಾ ವೇಷಗಳನ್ನು ಹಾಕುತ್ತಲೇ ಇರುತ್ತಾರೆ ರಾಖಿ ಸಾವಂತ್. ಈವರೆಗೂ ನಾನಾ ರೀತಿಯ ಕಾಸ್ಟ್ಯೂಮ್ ಹಾಕಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿಗೆ ಸೈನಿಕನ ವೇಷದಲ್ಲಿ ರಾಖಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಜನರು ಈ ವೇಷ ಮತ್ತು ಅವಳ ಡ್ರಾಮಾಗೆ ನೆಗೆಟಿವ್ ಕಾಮೆಂಟ್ ಗಳನ್ನೇ ಹಾಕಿದ್ದಾರೆ.

    ರಿಷಬ್ ಶೆಟ್ಟಿಗೆ ವಿಚಿತ್ರ ಬೇಡಿಕೆ ಇಟ್ಟ ರಾಖಿ

    ರಾಖಿ ಸಾವಂತ್ (Rakhi Sawant) ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ತಮ್ಮ ಬಯೋಪಿಕ್ (Biopic) ಬಗ್ಗೆ ಆಸೆಯನ್ನ ನಟಿ ವ್ಯಕ್ತಪಡಿಸಿದ್ದರು. ತನ್ನ ಜೀವನ ಚರಿತ್ರೆಯನ್ನ ಕಾಂತಾರ ನಟ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂದಿದ್ದರು.

    ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತೆರೆಮರೆಯಲ್ಲಿ ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ (Vidya Balan) ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ. ಆ ಬಗ್ಗೆ ನಾನು ಯೋಚಿಸಿಲ್ಲ ಎಂದು ರಾಖಿ ಸಾವಂತ್ ಎಂದಿದ್ದಾರೆ. ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ರಿಷಬ್ ಶೆಟ್ಟಿಯ ಹೆಸರನ್ನು ರಾಖಿ ಸಾವಂತ್ ಸೂಚಿಸಿದ್ದಾರೆ. ರಿಷಬ್, ತನ್ನ ಬಯೋಪಿಕ್ ನಿರ್ದೇಶಿಸಿದರೆ ಚೆನ್ನಾಗಿರುತ್ತೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ.

     

    ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]