Tag: ರಾಖಿ ಸಾವಂತ್

  • ರಾಖಿ ತಾಯಿಗೆ ಕ್ಯಾನ್ಸರ್ – ವೀಡಿಯೋ ಮೂಲಕ ಸಲ್ಮಾನ್ ಖಾನ್, ಸೋದರನಿಗೆ ಥ್ಯಾಂಕ್ಸ್

    ರಾಖಿ ತಾಯಿಗೆ ಕ್ಯಾನ್ಸರ್ – ವೀಡಿಯೋ ಮೂಲಕ ಸಲ್ಮಾನ್ ಖಾನ್, ಸೋದರನಿಗೆ ಥ್ಯಾಂಕ್ಸ್

    ಮುಂಬೈ: ನಟಿ, ಬಿಗ್ ಬಾಸ್-14ರ ಸ್ಪರ್ಧಿ ರಾಖಿ ಸಾವಂತ್ ತಾಯಿ ಜಯಾ ಸಾವಂತ್ ಹಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇದೀಗ ಆಪರೇಷನ್‍ಗೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಅವರು ವೀಡಿಯೋ ಮೂಲಕ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್‍ಗೆ ಧನ್ಯವಾದ ತಿಳಿಸಿದ್ದಾರೆ.

    ಇತ್ತೀಚೆಗೆ ನಟಿ ರಾಖಿ ಸಾವಂತ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಾಯಿಯ ಆರೋಗ್ಯ ವಿಚಾರಿಸಿದ್ದು, ಕೆಲ ಕಾಲ ಅಮ್ಮನೊಂದಿಗೆ ಕಾಲ ಕಳೆದಿದ್ದಾರೆ. ಈ ವೇಳೆ ವಿಡಿಯೋ ಮೂಲಕ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್‍ಗೆ ಧನ್ಯವಾದ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಸಹಾಯ ಮಾಡಿದ್ದಕ್ಕೆ ವೀಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಸೊಹೈಲ್ ಖಾನ್ ಸಹ ಈ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಾಖಿ ಮೈ ಡಿಯರ್, ನಿಮ್ಮ ತಾಯಿಗೆ ಏನೇ ಬೇಕಾದರೂ ಯಾವುದೇ ಸಮಯದಲ್ಲಿ ನೀವು ನೇರವಾಗಿ ನನಗೆ ಕರೆ ಮಾಡಬಹುದು. ನನಗೆ ನಿಮ್ಮ ತಾಯಿ ಬಗ್ಗೆ ಗೊತ್ತಿಲ್ಲ, ಆದರೆ ನಿನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ನೀನು ತುಂಬಾ ಸ್ಟ್ರಾಂಗ್, ಅಲ್ಲದೆ ಅವರ ಮಗಳು. ಅಂದರೆ ನಿನಗಿಂತ ನಿಮ್ಮ ತಾಯಿ ಹೆಚ್ಚು ಸ್ಟ್ರಾಂಗ್ ಆಗಿರ್ತಾರೆ. ಬೇಗನೇ ಅವರು ಗುಣಮುಖರಾಗಲೆಂದು ನಾನು ಪ್ರಾರ್ಥಿಸುತ್ತೇನೆ. ಒಬ್ಬ ಮಗಳಾಗಿ ಸ್ಥಳದಲ್ಲಿದ್ದು ಎಲ್ಲವನ್ನೂ ಮಾಡುತ್ತಿದ್ದೀಯಾ. ನಿನಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನೇರವಾಗಿ ನನಗೆ ಕರೆ ಮಾಡು ಎಂದು ಮನವಿ ಮಾಡಿದ್ದಾರೆ.

     

    View this post on Instagram

     

    A post shared by yogen shah (@yogenshah_s)

    ಇದಕ್ಕೆ ರಾಖಿ ತಾಯಿ ವೀಡಿಯೋ ಮೂಲಕ ಪ್ರತಿಕ್ರಿಯಿಸಿ, ಬೆಂಬಲ ಹಾಗೂ ಸಹಾಯಕ್ಕಾಗಿ ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಅವರಿಗೆ ಧನ್ಯವಾದಗಳು. ಸದ್ಯ ಕೀಮೋಥೆರಪಿ ಮಾಡಲಾಗುತ್ತಿದೆ. ಇಂದಿಗೆ 4 ಕೀಮೋಥೆರಪಿ ಆಗಿವೆ ಇನ್ನೂ 2 ಬಾಕಿ ಇವೆ. ಬಳಿಕ ಆಪರೇಷನ್ ಮಾಡಲಾಗುತ್ತದೆ. ಥ್ಯಾಂಕ್ಯೂ, ದೇವರು ನಿಮ್ಮ ಕನಸುಗಳನ್ನು ನನಸಾಗಿಸಲಿ ಎಂದು ಪ್ರಾರ್ಥಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈ ಬಗ್ಗೆ ಮತ್ತೊಂದು ವೀಡಿಯೋದಲ್ಲಿ ಮಾಹಿತಿ ಹಂಚಿಕೊಂಡಿರುವ ರಾಖಿ ಸಾವಂತ್, ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸಲು ನನ್ನ ತಾಯಿ ವೀಡಿಯೋ ಮಾಡಿದ್ದರು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೀಮೋಥೆರಪಿ ಮಾಡಲಾಗುತ್ತಿದೆ. ಕೀಮೊ ಮಾಡುತ್ತಿರುವುದರಿಂದ ಹೊಟ್ಟೆ ನೋವು, ವಾಂತಿ ಶುರುವಾಗಿದೆ. ಇದೆಲ್ಲದರ ಮಧ್ಯೆಯೂ ನಗುತ್ತಲೇ ವೀಡಿಯೋ ಮಾಡಿದ್ದಾಳೆ. ಬಿಗ್ ಬಾಸ್-14ರಿಂದ ಹೊರ ಬಂದ ಬಳಿಕ ನನಗೆ ಇದು ದೊಡ್ಡ ಶಾಕ್. ಕೀಮೋ ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ, ನಮ್ಮ ತಾಯಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ರಾಖಿ ಸಾವಂತ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ನನ್ನ ತಾಯಿಯನ್ನು ಉಳಿಸಿಕೊಳ್ಳಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ 14 ಲಕ್ಷ ರೂ. ಸಿಕ್ಕಿದೆ. ಇದನ್ನೂ ಅವಳ ಚಿಕಿತ್ಸೆಗೆ ಬಳಸುತ್ತೇನೆ ಎಂದು ಹೇಳಿದ್ದರು.

  • ಗೊತ್ತಿದಿದ್ರೆ ಅವರ ಸಂಸಾರ ಒಡೆಯುತ್ತಿರಲಿಲ್ಲ: ಪತಿ ಬಗ್ಗೆ ರಾಖಿ ಬೇಸರ

    ಗೊತ್ತಿದಿದ್ರೆ ಅವರ ಸಂಸಾರ ಒಡೆಯುತ್ತಿರಲಿಲ್ಲ: ಪತಿ ಬಗ್ಗೆ ರಾಖಿ ಬೇಸರ

    ಮುಂಬೈ: ಬಿಗ್‍ಬಾಸ್ ಮನೆಯಿಂದ ಹೊರ ಬಂದಿರುವ ನಟಿ ರಾಖಿ ಸಾವಂತ್ ಪತಿ ರಿತೇಶ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಿತೇಶ್ ವಿವಾಹಿತ ಅಂತ ಮೊದಲೇ ತಿಳಿದಿದ್ರೆ ನಾನು ಆತನ ಸಂಸಾರವನ್ನ ಒಡೆಯುತ್ತಿರಲಿಲ್ಲ ಎಂದು ರಾಖಿ ಹೇಳಿಕೊಂಡಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿಯೂ ರಾಖಿ ತಮ್ಮ ಖಾಸಗಿ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದರು. ಮದುವೆಯ ವಿಷಯವನ್ನ ಮುಚ್ಚಿಡುವ ಅವಶ್ಯಕತೆ ನನಗಿರಲಿಲ್ಲ. ಆದ್ರೆ ಕಾರಣಾಂತರಗಳಿಂದ ವಿಷಯವನ್ನ ಹೇಳಿಕೊಳ್ಳಲಾಗಲಿಲ್ಲ. ತುಂಬಾ ಪ್ರೀತಿಸಿ, ಇಷ್ಟಪಟ್ಟು ರಿತೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟೆ. ಆದ್ರೆ ಅವನ ಜೊತೆ ಬಾಳುವ ಅದೃಷ್ಟ ನನಗಿಲ್ಲ ಎಂದು ಹೇಳುತ್ತಾ ಮಂಕಾದ್ರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಬಳಿ ಸ್ಪರ್ಮ್ ದಾನ ಕೇಳಿದ ರಾಖಿ ಸಾವಂತ್

    ಬಿಗ್‍ಬಾಸ್ ಪ್ರವೇಶಿಸಿದ ಬಳಿಕ ತಮ್ಮದೇ ಮಾತು, ಡ್ಯಾನ್ಸ್, ಕಿರಿಕಿರಿ, ಜಗಳದಿಂದ ಮನರಂಜನೆ ಕಳೆದುಕೊಂಡಿದ್ದ ಮನೆಗೆ ಹೊರ ಹುರುಪು ನೀಡಿದ್ದರು. ಸ್ಪರ್ಧಿಗಳಿಗೆ ನೇರವಾಗಿ ತಿರುಗೇಟು ನೀಡುವ ಮೂಲಕ ವೀಕ್ಷಕರಿಗೆ ಇಷ್ಟವಾಗಿದ್ದರು. ಆದ್ರೆ ಫೈನಲ್ ನಲ್ಲಿ ಬಿಗ್‍ಬಾಸ್ ನೀಡಿದ 14 ಲಕ್ಷ ರೂ. ಪಡೆದು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಮನೆ ಪ್ರವೇಶಿಸಿದಾಗಿನಿಂದಲೂ ತನ್ನತನ ಬಿಟ್ಟುಕೊಡದ ನಟಿ ರುಬಿನಾ ಬಿಗ್‍ಬಾಸ್-14ರ ವಿನ್ನರ್ ಆದರು.

  • ಬಿಗ್‍ಬಾಸ್ ಸ್ಪರ್ಧಿ ಬಳಿ ಸ್ಪರ್ಮ್ ದಾನ ಕೇಳಿದ ರಾಖಿ ಸಾವಂತ್

    ಬಿಗ್‍ಬಾಸ್ ಸ್ಪರ್ಧಿ ಬಳಿ ಸ್ಪರ್ಮ್ ದಾನ ಕೇಳಿದ ರಾಖಿ ಸಾವಂತ್

    ಮುಂಬೈ: ನನಗೆ ಅಭಿನವ್ ಶುಕ್ಲಾ ಸ್ಪರ್ಮ್ ದಾನ ಕೊಡಲಿ. ಬಿಗ್‍ಬಾಸ್ ಮನೆಯಿಂದ ಹೊರ ಹೋದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ.

    ಈ ಬಾರಿ ಬಿಗ್‍ಬಾಸ್ ಮನೆಗೆ ರಾಖಿ ಸಾವಂತ್ ಎಂಟ್ರಿ ನೀಡಿದಾಗಿನಿಂದ ಶೋಗೆ ಹೊಸ ಲುಕ್ ಬಂದಿದೆ. ರಾಖಿಯ ಜಗಳ, ಫನ್ನಿ ಮಾತುಗಳು, ಡ್ಯಾನ್ಸ್ ನೋಡುಗರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ವಾಹಿನಿ ಸಹ ರಾಖಿಯ ಮಾತುಗಳನ್ನ ಕೇಂದ್ರಿಕರಿಸಿ ಸಂಚಿಕೆಯ ಪ್ರೋಮೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತದೆ. ಇದೀಗ ಸಹ ಸ್ಪರ್ಧಿ ಸೋನಾಲಿ ಫೋಗಾಟ್ ಜೊತೆ ರಾಖಿ ಮಾತಾಡಿರುವ ಸಣ್ಣ ವೀಡಿಯೋ ಕ್ಲಿಪ್ ಹೊರ ಬಂದಿದ್ದು, ವೈರಲ್ ಆಗುತ್ತಿದೆ.

    ಕೆಲ ದಿನಗಳ ಹಿಂದೆ ಬಿಗ್‍ಬಾಸ್ ಜೊತೆ ಮಾತನಾಡುತ್ತಾ, ಅಭಿನವ್ ಶುಕ್ಲಾ ಸ್ಮಾರ್ಟ್ ಮತ್ತು ಹ್ಯಾಂಡ್‍ಸಮ್. ನನಗೆ ಅವರು ಅಂದ್ರೆ ತುಂಬಾ ಇಷ್ಟ. ನಾನು ಅವರನ್ನ ಪಟಾಯಿಸಿಕೊಳ್ಳಲೇ ಎಂದು ಕೇಳಿ ರಾಖಿ ಕಣ್ಣು ಹೊಡೆದಿದ್ದರು. ಆದ್ರೆ ಶುಕ್ಲಾ ಪತ್ನಿ ರುಬಿನಾ ಇದಕ್ಕೆ ಒಪ್ಪಲ್ಲ ಅಲ್ಲವಾ ಎಂದು ಬೇಸರ ಸಹ ವ್ಯಕ್ತಪಡಿಸಿದ್ದರು.

    ಸೋನಾಲಿ ಜೊತೆ ಮಾತನಾಡುತ್ತಾ, ಈಗಾಗಲೇ ನನ್ನ ಅಂಡಾಣುಗಳನ್ನ ಫ್ರೀಝರ್ ನಲ್ಲಿರಿಸಿದ್ದೇನೆ. ಅಭಿನವ್ ಶುಕ್ಲಾ ತಮ್ಮ ಸ್ಪರ್ಮ್ ನೀಡಿದ್ರೆ ಮುದ್ದಾದ ಮಗುವಿನ ತಾಯಿ ಆಗುತ್ತೇನೆ. ಇಲ್ಲಿಂದ ಹೊರ ಹೋದ ನಂತರ ಶುಕ್ಲಾ, ಪತ್ನಿ ರುಬಿನಾ ಹಾಗೂ ಅವರ ಕುಟುಂಬಸ್ಥರ ಜೊತೆ ಮಾತನಾಡುತ್ತೇನೆ. ಅಭಿನವ್ ನನ್ನನ್ನು ಡೇಟ್ ಗೆ ಕರೆದುಕೊಂಡು ಹೋಗಿ ಒಂದು ಕಾಫಿ ಕುಡಿಸಲಿ, ಸಿನಿಮಾಗೆ ಕರೆದುಕೊಂಡು ಹೋಗಲಿ ಎಂದು ತಮ್ಮ ಆಸೆಗಳನ್ನ ರಾಖಿ ಹೊರ ಹಾಕಿದ್ದಾರೆ.

  • ಬಿಗ್‍ಬಾಸ್ ಮನೆಗೆ ರಾಖಿ ಸಾವಂತ್ ಪತಿಯ ಎಂಟ್ರಿ

    ಬಿಗ್‍ಬಾಸ್ ಮನೆಗೆ ರಾಖಿ ಸಾವಂತ್ ಪತಿಯ ಎಂಟ್ರಿ

    – ಗಂಡನನ್ನು ನೆನೆದು ಕಣ್ಣೀರಿಟ್ಟ ರಾಖಿ

    ಮುಂಬೈ: ಬಿಗ್‍ಬಾಸ್ ಮನೆಗೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪತಿ ರಿತೇಶ್ ಎಂಟ್ರಿ ಕೊಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಬಿಗ್‍ಬಾಸ್ ಮನೆಗೆ ಎಂಟ್ರಿ ನೀಡಿರುವ ರಾಖಿ ಸಾವಂತ್ ತಮ್ಮ ಫನ್ನಿ ಚಟುವಟಿಕೆಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಇತರೆ ಸ್ಪರ್ಧಿಗಳಿಗೆ ನೇರಾನೇರ ಟಾಂಗ್ ನೀಡುವ ಮೂಲಕ ರಾಖಿ ಸದ್ದು ಮಾಡುತ್ತಿದ್ದಾರೆ. ಈ ನಡುವೆ ರಾಖಿ ಸಾವಂತ್ ಪತಿ ರಿತೇಶ್ ನನ್ನು ನೆನಪು ಮಾಡಿಕೊಳ್ಳುತ್ತಿರೋದನ್ನ ಕಾಣಬಹುದಾಗಿದೆ. ಇಂದು ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ಪತಿಯನ್ನ ನೆನೆದು ಕಣ್ಣೀರಿಟ್ಟಿದ್ದಾರೆ.

    ಮನೆಯಲ್ಲಿ ರುಬಿನಾಳ ಪತಿ ಅಭಿನವ್ ನನಗೆ ಇಷ್ಟ ಆಗ್ತಾನೆ. ಬೇರೆಯವರ ಪತಿಯನ್ನ ನೋಡಿದಾಗ ನನಗೆ ಒಂದು ತರಹ ಆಗುತ್ತೆ. ಹಾಗಾಗಿ ಪತಿಯ ಜೊತೆ ಮಾತನಾಡಿಸಿ. ಇಲ್ಲವಾದ್ರೆ ರುಬಿನಾಳ ಪತಿಯನ್ನ ಪಟಾಯಿಸುತ್ತೇನೆ ಎಂದು ರಾಖಿ ಡೈಲಾಗ್ ಹೊಡೆದಿದ್ದಾಳೆ.

     

    View this post on Instagram

     

    A post shared by ColorsTV (@colorstv)

    ಕಳೆದ ಒಂದು ವರ್ಷದ ಹಿಂದೆ ತನ್ನ ಮದುವೆ ಆಗಿದೆ ಎಂದು ರಾಖಿ ಹೇಳಿಕೊಂಡಿದ್ದು, ಪತಿ ಹೆಸರನ್ನ ರಿವೀಲ್ ಮಾಡಿಲ್ಲ. ಆದ್ರೆ ಮಂಗಳಸೂತ್ರ, ಸಿಂಧೂರ ಧರಿಸುವ ಮೂಲಕ ತಾನು ವಿವಾಹಿತೆ ಅಂತ ರಾಖಿ ಸಾವಂತ್ ಹೇಳುತ್ತಿದ್ದರು. ಬಿಗ್‍ಬಾಸ್ ಪ್ರವೇಶಕ್ಕೂ ಮುನ್ನ ಮನೆಯಲ್ಲಿ ಪತಿಯ ಬಗ್ಗೆ ಹೇಳುತ್ತೇನೆ ಅಂದಿದ್ದರು.

     

     

    View this post on Instagram

     

    A post shared by ColorsTV (@colorstv)

  • ಬಿಗ್‍ಬಾಸ್ ಮುಂದೆ ಮದ್ವೆ ಗುಟ್ಟು ಹೇಳ್ತೀನಿ: ರಾಖಿ ಸಾವಂತ್

    ಬಿಗ್‍ಬಾಸ್ ಮುಂದೆ ಮದ್ವೆ ಗುಟ್ಟು ಹೇಳ್ತೀನಿ: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಮದುವೆ ರಹಸ್ಯ ರಿವೀಲ್ ಮಾಡೋದಾಗಿ ಹೇಳಿದ್ದಾರೆ.

    ಕೆಲ ತಿಂಗಳ ಹಿಂದೆ ವಧುವಿನ ಡ್ರೆಸ್ ತೊಟ್ಟ ಫೋಟೋಗಳನ್ನ ರಾಖಿ ಸಾವಂತ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ತದನಂತರ ಮದುವೆಯಾಗಿದ್ದು ಅಂತ ಹೇಳಿಕೊಂಡು ಮಾಂಗಲ್ಯ ಮತ್ತು ಸಿಂಧೂರ ಹಚ್ಚಿಕೊಳ್ಳಲಾರಂಭಿಸಿದ್ದರು. ಆದ್ರೆ ಇದುವರೆಗೂ ಪತಿ ಯಾರು ಎಂಬುದರ ಗುಟ್ಟನ್ನ ರಾಖಿ ಸಾವಂತ್ ಹೇಳಿಲ್ಲ. ಆದ್ರೆ ನೆಟ್ಟಿಗರು ರಾಖಿ ಡ್ರಾಮಾ ಮಾಡಿದ್ದಾಳೆ ಅಂತಾನೇ ಹೇಳಿದ್ದರು. ಕೆಲ ದಿನಗಳ ಹಿಂದೆ ರಾಖಿ ಡಿವೋರ್ಸ್ ಪಡೆದ ಬಗ್ಗೆಯೂ ಸುದ್ದಿ ಹಬ್ಬಿತ್ತು. ಈ ಎಲ್ಲ ಊಹಾಪೋಹಗಳ ನಡುವೆ ರಾಖಿ ಸಾವಂತ್ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಬಿಗ್‍ಬಾಸ್ ಮನೆ ಪ್ರವೇಶಿಸುವ ಮುನ್ನ ಮಾತಾಡಿರುವ ರಾಖಿ, ನನ್ನ ಮದುವೆಗೆ ಸಂಬಂಧಿಸಿದ ಎಲ್ಲ ರಹಸ್ಯಗಳನ್ನು ಹೇಳುತ್ತೇನೆ. ಬಿಗ್‍ಬಾಸ್ ಮನೆಯಲ್ಲಿ ಫೋನ್, ಟಿವಿ ಇರಲ್ಲ. ಖಾಲಿ ಕುಳಿತಾಗ ನನ್ನ ಮದುವೆ ವಿಚಾರಗಳನ್ನ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    -ನೀನು ಸುಳ್ಳಿ, ಸುಶಾಂತ್ ಸಾವನ್ನ ವೈಯಕ್ತಿಯ ಲಾಭಕ್ಕೆ ಬಳಕೆ

    ಮುಂಬೈ: ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರ ಮತ್ತು ಸಿಎಂ ಉದ್ಧವ್ ಠಾಕ್ರೆ ಬಳಿ ಕ್ಷಮೆ ಕೇಳಬೇಕೆಂದು ನಟಿ ರಾಖಿ ಸಾವಂತ್ ಆಗ್ರಹಿಸಿದ್ದಾರೆ. ರಾಖಿ ಸಾವಂತ್ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು ಕಂಗನಾ ವಿರುದ್ಧ ಕಿಡಿಕಾರಿದ್ದಾರೆ.

    ಕಂಗನಾ ಇಷ್ಟು ದಿನ ಹೇಳಿದೆಲ್ಲ ಸುಳ್ಳು ಅನ್ನೋದು ಸಾಬೀತಾಗ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವನ್ನ ವೈಯಕ್ತಿಯ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ನಟಿ ಕಂಗನಾಗೆ ನಾಚಿಕೆ ಆಗಬೇಕು. ಹಾಗಾಗಿ ಸುಶಾಂತ್ ಅವರ ನಿಜವಾದ ಅಭಿಮಾನಿಗಳು, ಸಿಎಂ ಠಾಕ್ರೆ ಮತ್ತು ಪುತ್ರ ಆದಿತ್ಯ ಬಳಿ ಬಹಿರಂಗವಾಗಿ ಕ್ಷೆಮ ಯಾಚಿಸಬೇಕು. ಜೊತೆಗೆ ನಿರ್ಮಾಪಕ ಕರಣ್ ಜೋಹರ್, ಹಿರಿಯ ನಟಿ ಊರ್ಮಿಳಾ ಮಾತೊಂಡ್ಕರ್, ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲ ಬಾಲಿವುಡ್ ಸೆಲೆಬ್ರಿಟಿಗಳ ಬಳಿ ಕ್ಷಮೆ ಯಾವಾಗ ಕೇಳ್ತಿಯಾ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್‌ ಪರೀಕ್ಷೆ – ಸಾಬೀತಾದ್ರೆ ಮುಂಬೈ ತೊರೆಯುತ್ತೇನೆ

    ನೀನು ಸೋತಿದ್ದೀಯಾ, ನಿನ್ನ ಬಗ್ಗೆ ನನಗೆ ಅನುಕಂಪ ಇದೆ. ರಾಜಕೀಯ ಲಾಭ ಪಡೆದುಕೊಳ್ಳಲು ಬಾಲಿವುಡ್ ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ ನಿನ್ನ ಎಲ್ಲ ಕಾರ್ಯಗಳು ವಿಫಲವಾಗಿವೆ. ಮುಂದಿನ ದಿನಗಳಲ್ಲಿ ನಿನಗೆ ಯಾವುದೇ ಸಿನಿಮಾಗಳು ಸಿಗಲ್ಲ. ನಿನಗೆ ಹೋರಾಟ ಅಂದ್ರೆ ಇಷ್ಟ ಅಲ್ವಾ, ದೇಶದ ಗಡಿಯಲ್ಲಿ ಹೋಗಿ ಸೇವೆ ಸಲ್ಲಿಸು. ಅಲ್ಲಿ ಚೀನಾ ವಿರುದ್ಧ ಹೋರಾಟ ಮಾಡು. ಎಲ್ಲ ಕಡೆಯೂ ನಿನ್ನ ಸುಳ್ಳು ಬಯಲಾಗಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

    ಈ ಹಿಂದೆಯೂ ಕಂಗನಾ ವಿರುದ್ಧ ಗುಡುಗಿದ್ದ ರಾಖಿ ಸಾವಂತ್, ಸಿನಿಮಾ ಇಂಡಸ್ಟ್ರಿಯಲ್ಲಿರೋ ಎಲ್ಲ ನಿರ್ಮಾಪಕರು, ನಿರ್ದೇಶಕರು ಕೆಟ್ಟವರಿದ್ದಾರೆ. ನಿನ್ನ ತಲೆಯ ಮೇಲೆ ಕೊಹಿನೂರು ವಜ್ರ ಇದೆಯಾ? ನಿನ್ನ ಹೊರತು ಬಾಲಿವುಡ್‍ನಲ್ಲಿರುವವರು ಕೆಟ್ಟವರಾ? ಬಾಲಿವುಡ್ ಕಂಗನಾಳನ್ನ ಬಾಯ್‍ಕಾಟ್ ಮಾಡಿ. ಅಲ್ಲೇ ಹಿಮಾಲಯದ ಮನೆಯಲ್ಲಿ ಕುಳಿತುಕೊಳ್ಳಿ. ಬಾಲಿವುಡ್ ಸಿನಿಮಾದ ಹಣದಿಂದ ಊರಲ್ಲಿ ಮನೆ ಇದೆ. ಮೊದಲಿಗೆ ಅದು ಸಹ ಇರಲಿಲ್ಲ. ಈಗ ಬಾಲಿವುಡ್ ಕಂಗನಾಗೆ ಕೆಟ್ಟದಾಗಿ ಕಾಣುತ್ತಿದೆಯಾ ಎಂದು ರಾಖಿ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ

    https://www.instagram.com/p/CGKjhRTHVDW/

    ಕಂಗನಾ ಹೇಳಿಕೆ ಪ್ರಕಾರ ಮುಂಬೈನಲ್ಲಿ ಭಯೋತ್ಪಾದಕರಿದ್ದಾರೆ ಅಂತೆ. ಮುಂಬೈ ನಗರವನ್ನ ಪಿಓಕೆ ಹೋಲಿಕೆ ಮಾಡೋದು ಎಷ್ಟು ಸರಿ. ಮುಂಬೈ ಬಗ್ಗೆ ಮಾತನಾಡುವ ನೀನು ಇಲ್ಲಿಗ್ಯಾಕೆ ಬಂದಿರುವೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಇದೆನಾ? ನೋಡೋಣ ನೀನು ಎಷ್ಟು ಜನರಿಗೆ ಉದ್ಯೋಗ ಕೊಡ್ತೀಯಾ ತಿಳಿಸು. ಬಾಲಿವುಡ್ ಸೂಪರ್ ಹಿಟ್ ಸಿನಿಮಾ ನೀಡಿರುವ ಕರಣ್ ಜೋಹರ್ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನಿನ್ನ ವರ್ತನೆಗೆ ಸಿನಿಮಾಗಳು ಸಿಕ್ಕಿಲ್ಲ. ಹಾಗಾಗಿ ನಿನ್ನದೇ ಪ್ರೊಡೆಕ್ಷನ್ ಹೌಸ್ ಮಾಡಿಕೊಡು ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

  • ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

    ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

    -ನೀನೇ ಕೊಹಿನೂರು ವಜ್ರನಾ?

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ರಾಖಿ ಸಾವಂತ್ ನಡುವಿನ ಜಟಾಪಟಿ ಮುಂದುವರಿದಿದೆ. ಕಂಗನಾ ರಣಾವತ್ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಬಾಲಿವುಡ್ ಬಹುತೇಕ ತಾರೆಯರು ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಕಂಗನಾ ವಿರುದ್ಧ ಗುಡುಗಿರುವ ರಾಖಿ ಸಾವಂತ್ ಭಿಕ್ಷೆ ಬೇಡಲು ಮುಂಬೈಗೆ ಏಕೆ ಬಂದೆ?. ನೀವು ಇದಲ್ಲಿಯೇ ಇರಬೇಕಿತ್ತ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ ಇಂಡಸ್ಟ್ರಿಯಲ್ಲಿರೋ ಎಲ್ಲ ನಿರ್ಮಾಪಕರು, ನಿರ್ದೇಶಕರು ಕೆಟ್ಟವರಿದ್ದಾರೆ. ನಿನ್ನ ತಲೆಯ ಮೇಲೆ ಕೊಹಿನೂರು ವಜ್ರ ಇದೆಯಾ? ನಿನ್ನ ಹೊರತು ಬಾಲಿವುಡ್‍ನಲ್ಲಿರುವವರು ಕೆಟ್ಟವರಾ? ಬಾಲಿವುಡ್ ಕಂಗನಾಳನ್ನ ಬಾಯ್‍ಕಾಟ್ ಮಾಡಿ. ಅಲ್ಲೇ ಹಿಮಾಲಯದ ಮನೆಯಲ್ಲಿ ಕುಳಿತುಕೊಳ್ಳಿ. ಬಾಲಿವುಡ್ ಸಿನಿಮಾದ ಹಣದಿಂದ ಊರಲ್ಲಿ ಮನೆ ಇದೆ. ಮೊದಲಿಗೆ ಅದು ಸಹ ಇರಲಿಲ್ಲ. ಈಗ ಬಾಲಿವುಡ್ ಕಂಗನಾಗೆ ಕೆಟ್ಟದಾಗಿ ಕಾಣುತ್ತಿದೆಯಾ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್‌ ಪರೀಕ್ಷೆ – ಸಾಬೀತಾದ್ರೆ ಮುಂಬೈ ತೊರೆಯುತ್ತೇನೆ

    ಕಂಗನಾ ಹೇಳಿಕೆ ಪ್ರಕಾರ ಮುಂಬೈನಲ್ಲಿ ಭಯೋತ್ಪಾದಕರಿದ್ದಾರೆ ಅಂತೆ. ಮುಂಬೈ ನಗರವನ್ನ ಪಿಓಕೆ ಹೋಲಿಕೆ ಮಾಡೋದು ಎಷ್ಟು ಸರಿ. ಮುಂಬೈ ಬಗ್ಗೆ ಮಾತನಾಡುವ ನೀನು ಇಲ್ಲಿಗ್ಯಾಕೆ ಬಂದಿರುವೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಇದೆನಾ? ನೋಡೋಣ ನೀನು ಎಷ್ಟು ಜನರಿಗೆ ಉದ್ಯೋಗ ಕೊಡ್ತೀಯಾ ತಿಳಿಸು. ಬಾಲಿವುಡ್ ಸೂಪರ್ ಹಿಟ್ ಸಿನಿಮಾ ನೀಡಿರುವ ಕರಣ್ ಜೋಹರ್ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನಿನ್ನ ವರ್ತನೆಗೆ ಸಿನಿಮಾಗಳು ಸಿಕ್ಕಿಲ್ಲ. ಹಾಗಾಗಿ ನಿನ್ನದೇ ಪ್ರೊಡೆಕ್ಷನ್ ಹೌಸ್ ಮಾಡಿಕೊಡು ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ

    ಮುಂದಿನ ದಿನಗಳಲ್ಲಿ ಕಂಗನಾ ಬೆಂಬಲ ನೀಡುತ್ತಿರುವ ಜನರಿಂದಲೇ ಛೀಮಾರಿ ಹಾಕಿಸಿಕೊಳ್ಳುವ ಕಾಲ ಬರಲಿದೆ. ಬೇಕಾದ್ರೆ ನನ್ನ ಮಾತಗಳನ್ನ ಬರೆದಿಟ್ಟುಕೊಳ್ಳಿ. ನಾರ್ಕೋಟಿಕ್ಸ್ ತಂಡದವರು ಕಂಗನಾರನ್ನ ಡ್ರಗ್ಸ್ ಪರೀಕ್ಷೆಗೆ ಒಳಪಡಿಸಿ. ಆದ್ರೆ ಡ್ರಗ್ಸ್ ಸೇವನೆ ಮಾಡುತ್ತಿರುವ ವಿಷಯ ಬೆಳಕಿಗೆ ಬರಲಿದೆ ಎಂದು ರಾಖಿ ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

    https://www.instagram.com/p/CE9LwJuHE3_/

    ಪಟ್ಟ ಹಳ್ಳಿಗಳಿಂದ ಬಂದ ಅನೇಕರು ಸ್ಟಾರ್ ಗಳಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ನನ್ನನ್ನ ದೇಶದ ಜನತೆ ಪರಿಚಯಿಸಿದ್ದು ಬಾಲಿವುಡ್. ಒಂದು ಕಾಲದಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕಿವೆ. ಮುಂದೊಂದು ದಿನ ಬಾಲಿವುಡ್ ನಮ್ಮನ್ನ ಮರೆಯಬಹುದು. ಕೆಲಸ ನೀಡದಕ್ಕೆ ಕರ್ಮಭೂಮಿ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಬೇಕಾದ್ರೆ ನನ್ನ ವಿಡಿಯೋಗಳಿಂದ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿ, ಆದ್ರೆ ನನ್ನ ಧ್ವನಿಯನ್ನ ಅಡಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

    https://www.instagram.com/p/CE6zD2oHACX/

  • ಸುಶಾಂತ್ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತಾನೆ: ರಾಖಿ ಸಾವಂತ್

    ಸುಶಾಂತ್ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರ್ತಾನೆ: ರಾಖಿ ಸಾವಂತ್

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತೆ ಮರುಜನ್ಮ ಪಡೆಯಲಿದ್ದಾರೆ ಎಂದು ಡ್ರಾಮಾ ಕ್ವೀನ್ ರಾಖಿ ಸಾವಂತ್ ಹೇಳಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ರಾಖಿ ಸಾವಂತ್, ರಾತ್ರಿ ಮಲಗಿದಾಗ ಅಶರೀರ ವಾಣಿಯೊಂದು ಕೇಳಿಸಿತು. ಭಯಗೊಂಡು ಯಾರು ಅಂತ ಕೇಳಿದಾಗ ಸುಶಾಂತ್ ಎಂಬ ಹೆಸರು ಬಂತು. ನಾನು ಮತ್ತೆ ನಿನ್ನ ಮಗನಾಗಿ ಹುಟ್ಟಿ ಬರಲಿದ್ದೇನೆ. ಈ ವಿಷಯವನ್ನು ನ್ನ ಅಭಿಮಾನಿಗಳಿಗೆ ತಿಳಿಸಿ ಎಂದು ಹೇಳಿದ. ಬಾಲಿವುಡ್ ಎಲ್ಲವನ್ನು ನನಗೆ ಕೊಟ್ಟು, ಹಿಂಪಡೆಯಿತು. ಪಾರ್ಟಿಗಳಿಂದ ನನ್ನನ್ನು ಬಾಯ್ಕಟ್ ಮಾಡಲಾಯಿತು. ನಾನು ಯಾರನ್ನೂ ಸುಮ್ಮನೆ ಬಿಡಲ್ಲ ಎಂದು ಸಂದೇಶವನ್ನು ಸುಶಾಂತ್ ಕನಸಿನಲ್ಲಿ ಹೇಳಿದ ಎಂದು ರಾಖಿ ಹೇಳಿಕೊಂಡಿದ್ದಾರೆ.

    https://www.instagram.com/p/CBsKsE-j__y/

    ನನ್ನ ಸಾವಿನಿಂದ ಅರ್ಧಕ್ಕೆ ನಿಂತಿರೋ ಸಿನಿಮಾಗಳನ್ನು ಪೂರ್ಣಗೊಳಿಸುವಂತೆ ಹೇಳಿ. ಆ ಸಿನಿಮಾಗಳಲ್ಲಿ ರಾಖಿ ಮತ್ತು ಸನ್ನಿ ಲಿಯೋನ್ ಐಟಂ ಹಾಡು ಇರಬೇಕು. ನನ್ನನ್ನ ಬೆಂಬಲಿಸಿದ ಕಂಗನಾ ರಣಾವತ್, ರಾಖಿ ಸಾವಂತ್ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ದೇಹವಿಲ್ಲದೇ ಏನಾಯ್ತು, ನನ್ನ ಆತ್ಮ ಇನ್ನು ಜೀವಂತವಾಗಿದ್ದು, ಯಾರನ್ನೂ ಬಿಡಲ್ಲ ಎಂದು ಹೇಳುತ್ತಿದ್ದಾಗ ಎಚ್ಚರವಾಯಿತು. ಸಮಯ ಬೆಳಗಿನ ಜಾವ 4 ಗಂಟೆ ಆಗಿತ್ತು. ಬೆಳಗಿನ ಜಾವ ಬಿದ್ದು ಕನಸು ನನಸಾಗುತ್ತೆ ಎಂಬ ಮಾತಿದೆ ಎಂದು ರಾಖಿ ರೀಲ್ ಬಿಟ್ಟಿದ್ದಾರೆ.

    https://www.instagram.com/p/CBiVJyqDo33/

    ಜೂನ್ 14ರಂದು ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಬಾಲಿವುಡ್‍ನಲ್ಲಿಯ ಸ್ವಜನಪಕ್ಷಪಾತದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಸುಶಾಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ನಂಗೆ ಇನ್ನೂ ಮಕ್ಕಳಾಗಿಲ್ಲ, ಪತಿ ಬಳಿ ಕರ್ಕೊಂಡು ಹೋಗಿ- ಮೋದಿಗೆ ರಾಖಿ ಮನವಿ

    ನಂಗೆ ಇನ್ನೂ ಮಕ್ಕಳಾಗಿಲ್ಲ, ಪತಿ ಬಳಿ ಕರ್ಕೊಂಡು ಹೋಗಿ- ಮೋದಿಗೆ ರಾಖಿ ಮನವಿ

    ಮುಂಬೈ: ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮುಂಬೈನಲ್ಲಿ ನೆಲೆಸಿರುವ ಬಾಲಿವುಡ್ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರ ಬಳಿ ಪತಿ ಇರುವಲ್ಲಿಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ.

    ರಾಖಿ ಸಾವಂತ್ ಈ ಬಗ್ಗೆ ಮಾತನಾಡಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. “ಮೋದಿ ಜೀ ಮುಂಬೈನಲ್ಲಿ ಕೊರೊನಾ ವೈರಸ್ ಕಡಿಮೆಯಾಗುವುದಿಲ್ಲ. ಹೀಗಾಗಿ ಶೀಘ್ರವೇ ನೀವು ಪ್ರೈವೇಟ್ ಜೆಟ್‍ನಲ್ಲೋ ಅಥವಾ ಹೆಲಿಕಾಪ್ಟರ್ ನಲ್ಲೋ ನನ್ನನ್ನು ಮುಂಬೈನಿಂದ ಹೊರಗೆ ಕರೆದುಕೊಂಡು ಹೋಗಿ” ಎಂದು ಮೊದಲಿಗೆ ಮನವಿ ಮಾಡಿಕೊಂಡಿದ್ದಾರೆ.

    ನಾನು ಕೆಲವು ತಿಂಗಳ ಹಿಂದಷ್ಟೆ ಮದುವೆಯಾಗಿದ್ದೀನಿ, ಇನ್ನೂ ನನಗೆ ಮಕ್ಕಳು ಸಹ ಆಗಿಲ್ಲ. ಹೀಗಾಗಿ ನನ್ನನ್ನು ನನ್ನ ಗಂಡನ ಬಳಿಗೆ ಕರೆದುಕೊಂಡು ಹೋಗಿ. ನಾನು ನಿಮ್ಮನ್ನು ಬೆಂಬಲಿಸಿದ್ದೇನೆ, ಆದ್ದರಿಂದ ನೀವು ನನಗೆ ಸಹಾಯ ಮಾಡಿ. ಪ್ಲೀಸ್ ಮೋದಿಜೀ ನನ್ನನ್ನು ಪತಿಯ ಬಳಿ ಕರೆದುಕೊಂಡು ಹೋಗಿ” ಎಂದು ರಾಖಿ ಗೋಗರೆದಿದ್ದಾರೆ.

    ಅಷ್ಟೇ ಅಲ್ಲದೇ ಮುಂಬೈನಲ್ಲಿ ಇನ್ನೂ ಆರು ತಿಂಗಳು ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದಿಲ್ಲ. ಅಪಾರ್ಟ್ ಮೆಂಟ್‍ನಲ್ಲಿ ಇರುವವರು ಮನೆಯಲ್ಲಿಯೇ ಇದ್ದಾರೆ. ಆದರೆ ಈ ಗುಡಿಸಿಲಿನಲ್ಲಿ ವಾಸಿಸುವರು ಮನೆಯಿಂದ ಹೊರಬಂದು ಸುಮ್ಮನೆ ತಿರುಗಾಡುತ್ತಿದ್ದಾರೆ. ಅವರಿಗೆ ಬುದ್ಧಿ ಇಲ್ಲ. ಹೀಗಾಗಿ ಮುಂಬೈನಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ರಾಖಿ ಆರೋಪ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಮೋದಿ ಅವರೇ ಚಂದ್ರನ ಮೇಲೆ ಮನೆ ಏನಾದರೂ ಕಟ್ಟಿದ್ದರೆ, ಅಲ್ಲಿಗಾದರೂ ನನ್ನನ್ನು ಕಳುಹಿಸಿ ಎಂದು ಬೇಸರದಿಂದ ಕೇಳಿಕೊಂಡಿದ್ದಾರೆ. ನಮ್ಮ ಸಿಎಂ ತುಂಬಾ ತಾಳ್ಮೆ, ಸೌಮ್ಯವಿರುವವರು. ಹೀಗಾಗಿ ಅವರು ಸುಮ್ಮನೆ ಮನೆಯಿಂದ ಹೊರಗೆ ಓಡಾಡುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ರಾಖಿ ಸಾವಂತ್ 2019ರ ಜುಲೈ 28ರಂದು ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

    https://www.facebook.com/gaurav.gd.357/videos/565876110728471/?t=137

  • ಚೀನಾದ ಪಾಪಿ ಜನರು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ: ರಾಖಿ

    ಚೀನಾದ ಪಾಪಿ ಜನರು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ: ರಾಖಿ

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಚೀನಾದ ಪಾಪಿ ಜನರು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾಳೆ.

    ರಾಖಿ ತನ್ನ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ, “ದೇವರೇ, ವೈರಸ್‍ನಿಂದ ಬಳಲುತ್ತಿರುವ ಜನರಿಗಾಗಿ ನಾನು ಪ್ರಾರ್ಥನೆ ಮಾಡುತ್ತಿದ್ದೇನೆ. ಇಡೀ ದೇಶದಲ್ಲಿ ಈ ವೈರಸ್ ಹರಡುತ್ತಿದೆ. ಚೀನಾದ ಜನರು ಇಷ್ಟು ದಿನ ಪ್ರಾಣಿಗಳನ್ನು ತಿಂದಿದ್ದಕ್ಕೆ ಈಗ ಬುದ್ಧಿ ಕಲಿಯುತ್ತಿದ್ದಾರೆ. ಅವರು ಇದೆಲ್ಲಾ ತಿನ್ನಬಾರದಿತ್ತು. ದೇವರೇ ದಯವಿಟ್ಟು ಚೀನಾದ ಪಾಪಿ ಜನರನ್ನು ಕ್ಷಮಿಸಿಬಿಡಿ” ಎಂದು ಹೇಳಿದ್ದಾಳೆ. ಇದನ್ನೂ ಓದಿ: ಕೊರೊನಾ ವೈರಸ್ ಕೊಲ್ಲಲು ಚೀನಾಗೆ ಹೊರಟ ರಾಖಿ

    ದೇವರು ನಮಗೆ ಏನ್ನನ್ನು ತಿನ್ನಲು ನೀಡಿದ್ದಾರೋ ಅದನ್ನು ತಿನ್ನಿ. ನಾನು ಇಡೀ ಚೀನಾ ದೇಶದ ಕಡೆಯಿಂದ ಕ್ಷಮೆ ಕೇಳುತ್ತೇನೆ. ಕೊರೊನಾ ವೈರಸ್ ಈಗ ತುಂಬಾ ಹರಡಿದ್ದು, ಇವರನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ರಾಖಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕೆಲವರು ವಿಡಿಯೋ ಮಾಡಿ ಯಾರು ಪ್ರಾರ್ಥನೆ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೇವರು ನಿಮ್ಮ ಫೋನಿನಲ್ಲಿ ಇದ್ದಾರಾ ಎಂದು ಕಮೆಂಟ್ ಮಾಡಿದ್ದಾರೆ.

    ಈ ಹಿಂದೆ ರಾಖಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅದಕ್ಕೆ, ಮೋದಿಜಿ ನಾನು ಚೀನಾಗೆ ಹೋಗುತ್ತಿದ್ದೇನೆ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ. ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರೂ ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಸ್ಪೆಷಲ್ ಔಷಧಿ ತಂದಿದ್ದೇನೆ. ಚೀನಾದಲ್ಲಿ ಜನರು ಉಸಿರಾಡಲು ಕೂಡ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದ್ದಳು.

     

    View this post on Instagram

     

    #jesus #jesuschrist #jesuslovesyou #jesussaves #jesusislord

    A post shared by Rakhi Sawant (@rakhisawant2511) on