Tag: ರಾಖಿ ಸಾವಂತ್

  • ದೂರವಾದ ರಿತೇಶ್‍ ಹೆಸರು ಹೇಳುತ್ತಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರಾಖಿ ಸಾವಂತ್

    ದೂರವಾದ ರಿತೇಶ್‍ ಹೆಸರು ಹೇಳುತ್ತಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಪ್ರೇಮಿಗಳ ದಿನ ತಾನು ಪತಿಯಿಂದ ಬೇರೆಯಾಗುತ್ತಿರುವ ಕುರಿತಾಗಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಪತಿಯ ಕುರಿತಾಗಿ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

    ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರುವ ರಾಖಿ ಸಾವಂತ್ ಪಾಪರಾಜಿ ಫೋಟೋಗ್ರಾಫರ್ ಎದುರು ಕಣ್ಣೀರಿಟ್ಟಿದ್ದಾರೆ. ನನ್ನ ಪತಿ ರಿತೇಶ್‍ನಿಂದ ಬೇರ್ಪಟ್ಟಿದ್ದರೂ, ನಾನು ಅವನನ್ನು ಇನ್ನೂ ಪ್ರೀತಿಸುತ್ತಿದ್ದೇನೆ. ಕ್ಷಮಿಸಿ, ಇದು ನನ್ನ ತಪ್ಪು ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಾಮೆಂಟ್ ಮೂಲಕವಾಗಿ ರಾಖಿಗೆ ಸಮಾಧಾನ ಮಾಡಿದ್ದಾರೆ.

    ಹಿಂದಿ ಬಿಗ್ ಬಾಸ್ 15ನೇ ಸೀಸನ್‍ನಲ್ಲಿ ಇವರಿಬ್ಬರ ಮದುವೆ ವಿಚಾರ ಬಯಲಾಗಿತ್ತು. ಆದರೆ ಈಗ ರಾಖಿ ಸಾವಂತ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಸ್ಥಿತಿ ಕಂಡು ಅಭಿಮಾನಿಗಳು ಅಯ್ಯೋ ಪಾಪ ಎನ್ನುತ್ತಿದ್ದಾರೆ. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    ವ್ಯಾಲೆಂಟೈನ್ಸ್ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್‍ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಪತಿಯಿಂದ ದೂರವಾಗುತ್ತಿರುವ ವಿಚಾರವನ್ನು ಹೆಳಿಕೊಂಡಿದ್ದರು.

     

    View this post on Instagram

     

    A post shared by Viral Bhayani (@viralbhayani)

    ಹಿಂದಿ ಬಿಗ್ ಬಾಸ್ 14ನೇ ಸೀಸನ್‍ನಲ್ಲಿ ರಾಖಿ ಸಾವಂತ್ ಸ್ಪರ್ಧಿಸಿದ್ದರು. ಆಗ ಮೊದಲ ಬಾರಿಗೆ ಗಂಡನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಜಗತ್ತಿನ ಮುಂದೆ ಬರುವಂತೆ ರಿತೇಶ್ ಬಳಿ ಮನವಿ ಮಾಡಿಕೊಂಡರೂ ಕೂಡ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಂತಿಮವಾಗಿ ಬಿಗ್ ಬಾಸ್ 15ನೇ ಸೀಸನ್‍ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ತಾನು ಪತಿಯಿಂದ ದೂರವಾಗುತ್ತಿರುವ ಕುರಿತಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ ಬಾಲಿವುಡ್ ನಟಿ ರಾಖಿ ಸಾವಂತ್

    ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ ಬಾಲಿವುಡ್ ನಟಿ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್, ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಹೇಳಿದ್ದಾರೆ.

    ಪತಿ ರಿತೇಶ್ ಅವರಿಂದ ತಾವು ಬೇರ್ಪಟ್ಟಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ತಿಳಿಸಿದ್ದಾರೆ. ವ್ಯಾಲೆಂಟೈನ್ ಡೇ ಆಚರಣೆಗೂ ಒಂದು ದಿನ ಮುನ್ನ ಅಂದರೆ, ಫೆ.13ರಂದು ರಾಖಿ ಸಾವಂತ್ ಅವರು ಗಂಡನಿಂದ ಬೇರೆ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

     

    View this post on Instagram

     

    A post shared by Rakhi Sawant (@rakhisawant2511)

    ವ್ಯಾಲೆಂಟೈನ್ಸ್ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್‍ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    ಹಿಂದಿ ಬಿಗ್ ಬಾಸ್ 14ನೇ ಸೀಸನ್‍ನಲ್ಲಿ ರಾಖಿ ಸಾವಂತ್ ಸ್ಪರ್ಧಿಸಿದ್ದರು. ಆಗ ಮೊದಲ ಬಾರಿಗೆ ಗಂಡನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಜಗತ್ತಿನ ಮುಂದೆ ಬರುವಂತೆ ರಿತೇಶ್ ಬಳಿ ಮನವಿ ಮಾಡಿಕೊಂಡರೂ ಕೂಡ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಂತಿಮವಾಗಿ ಬಿಗ್ ಬಾಸ್ 15ನೇ ಸೀಸನ್‍ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ತಾನು ಪತಿಯಿಂದ ದೂರವಾಗುತ್ತಿರುವ ಕುರಿತಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  • ನಾನು ರಾಖಿಯನ್ನು ಈ ಕಾರಣಕ್ಕೆ ಇಷ್ಟಪಡುತ್ತೇನೆ- ಹಾಡಿ ಹೊಗಳಿದ ರಾಜ್ ಕುಂದ್ರಾ

    ನಾನು ರಾಖಿಯನ್ನು ಈ ಕಾರಣಕ್ಕೆ ಇಷ್ಟಪಡುತ್ತೇನೆ- ಹಾಡಿ ಹೊಗಳಿದ ರಾಜ್ ಕುಂದ್ರಾ

    ಮುಂಬೈ: ಬಾಲಿವುಡ್ ಎಂಟರ್ಟೈನ್ಮೆಂಟ್ ಕ್ವೀನ್ ರಾಖಿ ಸಾವಂತ್ ಅವರನ್ನು ಖ್ಯಾತ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೊಗಳಿದ್ದಾರೆ.

    ರಾಖಿ ಸಾವಂತ್ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಈ ವೀಡಿಯೋದಲ್ಲಿ ರಾಜ್ ಕುಂದ್ರಾ ಜೊತೆ ರಾಖಿ ಇದ್ದಾರೆ. ನನ್ನ ಅಣ್ಣ ರಾಜ್ ಕುಂದ್ರಾ ಎಂದು ವೀಡಿಯೋದಲ್ಲಿ ತೋರಿಸುತ್ತಾರೆ. ಆಗ ರಾಜ್, ಬಾಲಿವುಡ್ ನಲ್ಲಿ ನಾನು ನೋಡಿದ ನಿಜವಾದ ವ್ಯಕ್ತಿ. ಅದಕ್ಕೆ ನಾನು ರಾಖಿಯನ್ನು ಇಷ್ಟ ಪಡುತ್ತೇನೆ. ಇವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ಗೊತ್ತು ಎಂದು ಹೊಗಳಿದ್ದಾರೆ. ರಾಜ್ ಮಾತು ಕೇಳಿಸಿಕೊಂಡ ರಾಖಿ ‘ಲವ್ ಯೂ ಬ್ರದರ್’ ಎಂದು ಹೇಳಿದ್ದಾರೆ.

    ರಾಜ್ ಮತ್ತು ರಾಖಿ ನಿನ್ನೆ ಶಮಿತಾ ಶೆಟ್ಟಿ ಅವರ ಹುಟ್ಟುಹಬ್ಬ ಇದ್ದ ಕಾರಣ ಗೆಟ್-ಟುಗೆದರ್ ನಲ್ಲಿ ಭೇಟಿಯಾಗಿದ್ದರು. ರಾಖಿ ಈ ವೇಳೆ ವೀಡಿಯೋ ಮಾಡಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಇತ್ತೀಚೆಗೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ರಾಖಿ ಎಂದಿನಿಂತೆ ಜಿಮ್ ಗೆ ತೆರಳುತ್ತಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರತಿ ವರ್ಷ ನೀವು ನನಗೆ ಕರೆ ಮಾಡುತ್ತೀರಿ. ನಿಮಗೆ ಬೇಕಾದಂತೆ ನನ್ನನ್ನು ಬಳಸಿಕೊಳ್ಳುತ್ತೀರಿ. ನಾನು ಟಿಶ್ಯೂ ಪೇಪರ್ ಅಲ್ಲ. ನಾನು ಜೀವಂತ, ಉಸಿರಾಡುವ ಮನುಷ್ಯ. ಕಿತ್ತಳೆ ಹಣ್ಣಿನಲ್ಲಿ ರಸ ಇರುವವರೆಗೆ ಅದನ್ನು ಹಿಂಡುತ್ತೀರಿ ನಂತರ ಸಿಪ್ಪೆಯನ್ನು ಎಸೆಯುತ್ತೀರಿ. ಅಂತೆಯೇ ನನ್ನ ಮನರಂಜನೆ ಬೇಕಾಗುವವರೆಗೆ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ನಾನು ಕಿತ್ತಳೆ, ನಿಂಬೆ ಅಥವಾ ಟಿಶ್ಯೂ ಪೇಪರ್ ಅಲ್ಲ, ನೀವು ನನ್ನಿಂದ ಎಲ್ಲಾ ಮನರಂಜನೆಯನ್ನು ಪಡೆಯುತ್ತೀರಿ. ಆದರೆ ನನ್ನ ಬಿಟ್ಟು ಇತರರನ್ನು ಅಂತಿಮ ಹಂತಕ್ಕೆ ಕರೆದೊಯ್ಯುತ್ತೀರಿ. ಬಿಗ್ ಬಾಸ್, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಟ್ರೋಫಿಗೆ ಅರ್ಹವಾಗಿದ್ದೆ ಎಂದು ಹೇಳುತ್ತಾ ರಾಖಿ ಕಣ್ಣೀರು ಹಾಕಿದ್ದರು.

    ರಾಜ್ ಕುಂದ್ರಾ ಅವರನ್ನು ಕಳೆದ ವರ್ಷ ಪೊಲೀಸರು ಆ್ಯಪ್ ಮೂಲಕ ಪೋರ್ನ್ ಸಿನಿಮಾಗಳನ್ನು ಹಂಚುತ್ತಿದ್ದರು ಎಂಬ ಆರೋಪದ ಮೇಲೆ ಅರೆಸ್ಟ್ ಮಾಡಿದ್ದರು. ಆದರೆ ಸೆಪ್ಟೆಂಬರ್‍ನಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು.

    ಈ ಕುರಿತು ರಾಜ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ನಾನು ನನ್ನ ಜೀವನದಲ್ಲಿ ‘ಅಶ್ಲೀಲತೆಯ’ ನಿರ್ಮಾಣ ಮತ್ತು ವಿತರಣೆಯಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ. ಈ ಆರೋಪವನ್ನು ನನ್ನ ಮೇಲೆ ಬೇಕೆಂದು ಮಾಡಲಾಗಿದೆಯೇ ಹೊರತು, ಬೇರೇನೂ ಅಲ್ಲ ಎಂದು ಹೇಳಿದ್ದರು.

  • ಪ್ರತಿ ಬಾರಿಯೂ ನನ್ನ ಬಳಸಿಕೊಂಡು ನಂತ್ರ ಕೈ ಬಿಡ್ತಾರೆ: ರಾಖಿ ಕಣ್ಣೀರು

    ಪ್ರತಿ ಬಾರಿಯೂ ನನ್ನ ಬಳಸಿಕೊಂಡು ನಂತ್ರ ಕೈ ಬಿಡ್ತಾರೆ: ರಾಖಿ ಕಣ್ಣೀರು

    ಮುಂಬೈ: ಎರಡನೇ ಬಾರಿಯೂ ಬಿಗ್ ಬಾಸ್ ರಿಯಾಲಿಟಿ ಶೋನಿಂದ ನಟಿ ರಾಖಿ ಸಾವಂತ್ ಹೊರಗುಳಿದ್ದಿದ್ದು, ಈ ಸಂಬಂಧ ಇದೀಗ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

    ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಟಿ ಎಂದಿನಿಂತೆ ಜಿಮ್ ಗೆ ತೆರಳುತ್ತಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು, ಬಿಗ್ ಬಾಸ್ ನಿಂದ ಎರಡನೇ ಬಾರಿ ಹೊರ ಬಂದಿರುವುದಕ್ಕೆ ಅಸಮಾಧಾನ ಹೊರಹಾಕಿದರು.

    ಪ್ರತಿ ವರ್ಷ ನೀವು ನನಗೆ ಕರೆ ಮಾಡುತ್ತೀರಿ. ಮತ್ತು ನಿಮಗೆ ಬೇಕಾದಂತೆ ನನ್ನನ್ನು ಬಳಸಿಕೊಳ್ಳುತ್ತೀರಿ ಎಂಬುದನ್ನು ಇದು ತೋರಿಸುತ್ತಿದೆ. ನಾನು ಟಿಶ್ಯೂ ಪೇಪರ್ ಅಲ್ಲ ಆದರೆ ಜೀವಂತ, ಉಸಿರಾಡುವ ಮನುಷ್ಯ. ಕಿತ್ತಳೆ ಹಣ್ಣಿನಲ್ಲಿ ರಸ ಇರುವವರೆಗೆ ಅದನ್ನು ಹಿಂಡುತ್ತೀರಿ ನಂತರ ಸಿಪ್ಪೆಯನ್ನು ಎಸೆಯುತ್ತೀರಿ. ಅಂತೆಯೇ ನನ್ನ ಮನರಂಜನೆ ಬೇಕಾಗುವವರೆಗೆ ನನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದೀರಿ. ನಾನು ಕಿತ್ತಳೆ, ನಿಂಬೆ ಅಥವಾ ಟಿಶ್ಯೂ ಪೇಪರ್ ಅಲ್ಲ, ನೀವು ನನ್ನಿಂದ ಎಲ್ಲಾ ಮನರಂಜನೆಯನ್ನು ಪಡೆಯುತ್ತೀರಿ. ಆದರೆ ನನ್ನ ಬಿಟ್ಟು ಇತರರನ್ನು ಅಂತಿಮ ಹಂತಕ್ಕೆ ಕರೆದೊಯ್ಯುತ್ತೀರಿ. ಬಿಗ್ ಬಾಸ್, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಟ್ರೋಫಿಗೆ ಅರ್ಹನಾಗಿದ್ದೆ ಎಂದು ಹೇಳುತ್ತಾ ರಾಖಿ ಕಣ್ಣೀರು ಹಾಕಿದರು.

    ಸದ್ಯ ರಾಖಿ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ರಾಖಿ ಕಣ್ಣೀರಿಗೆ ಕರಗಿದ್ದಾರೆ. ಹೌದು ನಿಮಗೆ ಮತ್ತೆ ಅನ್ಯಾಯವಾಗಿದೆ, ಇನ್ನೊಮದು ಬಾರಿ ಕರೆದರೆ ಹೋಗಬೇಡಿ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ಮತ್ತೊಬ್ಬರು. ಹೌದು ಅಲ್ಲಿ ಟಿಆರ್‍ಪಿ ಕಡಿಮೆಯಾಗುತ್ತಿದ್ದಂತೆಯೇ ಇವರ ಅವಶ್ಯಕತೆ ಅಲ್ಲಿ ಬೇಕಾಯಿತು. ಆದರೆ ಫಿನಾಲೆವರೆಗೆ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ ಎಮದು ಮತ್ತೊಬ್ಬ ಅಭಿಮಾನಿ ಕಿಡಿಕಾರಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

  • ರಾಖಿಗೆ ಕಚ್ಚಿದ ನಾಯಿ – ನಾನು ಅದನ್ನ ಕಚ್ತೀನಿ ಅಂದ ನಟಿ

    ರಾಖಿಗೆ ಕಚ್ಚಿದ ನಾಯಿ – ನಾನು ಅದನ್ನ ಕಚ್ತೀನಿ ಅಂದ ನಟಿ

    ಮುಂಬೈ: ಸದಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ನಟಿ ರಾಖಿ ಸಾವಂತ್ ತಮಗೆ ನಾಯಿ ಕಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ರಾಖಿ ಹಿಂದೆ ನಾಯಿ ಬರುತ್ತಿರುವ ವೀಡಿಯೋ ಸಹ ವೈರಲ್ ಆಗಿದೆ.

    ಬಿಗ್‍ಬಾಸ್ ಓಟಿಟಿ ಶೋಗೆ ರಾಖಿ ಸಾವಂತ್ ಭಾನುವಾರ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ದೊಡ್ಡದಾದ ಗೌನ್ ಧರಿಸಿ ವ್ಯಾನಿಟಿ ವ್ಯಾನ್ ನಿಂದ ಹೊರ ಬಂದ ರಾಖಿ ಸಾವಂತ್ ಹಿಂದೆಯೇ ಒಂದು ನಾಯಿ ಬರುತ್ತಿತ್ತು. ಅಯ್ಯೋ ನಾಯಿ ಕಚ್ಚಬಹುದು ಅದನ್ನ ಓಡಿಸಿ ಎಂದು ರಾಖಿ ಹೇಳೋದನ್ನು ವೀಡಿಯೋದಲ್ಲಿ ನೋಡಬಹುದು. ಈ ವೀಡಿಯೋದಲ್ಲಿ ರಾಖಿ ಸಾವಂತ್ ಸುರಕ್ಷಿತವಾಗಿ ಸ್ಟುಡಿಯೋ ತಲುಪಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ನನ್ನ ಕಾಲಿಗೆ ನಾಯಿ ಕಚ್ಚಿದೆ. ಅರೇ ನನ್ನೊಂದಿಗೆ ಏನು ಆಗ್ತಿದೆ. ಕೊರೊನಾಗಾಗಿ ಇಂಜೆಕ್ಷನ್ ಚುಚ್ಚಿಕೊಳ್ಳಬೇಕು, ಕೆಲವೊಮ್ಮೆ ಡಿ3, ಇಮ್ಯುನಿಟಿ.. ಈಗ ನಾಯಿಗಾಗಿ. ಸದ್ಯ ನಾಯಿ ಕಚ್ಚಿದ್ದರಿಂದ ಇಂಜೆಕ್ಷನ್ ತೆಗೆದುಕೊಳ್ಳಬೇಕಿದೆ. ಈಗ ನಾನು ಆ ನಾಯಿಯನ್ನು ಕಚ್ಚುತ್ತೇನೆ ಎಂದು ಹೇಳಿ ಎಲ್ಲರನ್ನು ನಗಿಸಿದರು.

  • ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್

    ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿರುವ ವೀಡೀಯೋ ಸಖತ್ ವೈರಲ್ ಆಗುತ್ತಿದೆ.

    ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದಪರ ಅಥ್ಲೆಟಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ರಾಖಿ ಸಾವಂತ ಡಿಫರೆಂಟ್ ಎಂದು ಎಲ್ಲರಿಗೂ ಗೊತ್ತು. ಏನೇ ಮಾಡಿದ್ರೂ ಅದ್ರಕ್ಕೊಂದು ಇಮಿಟೇಷನ್ ಇದ್ದೇ ಇರುತ್ತದೆ. ಇದೀಗ ನೀರಜ್ ಚೋಪ್ರಾ ನಂತೆ ಜಾವೆಲಿನ್ ಎಸೆಯುವಂತೆ ಇಮಿಟೇಷನ್ ಮಾಡುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಮೂರು ವರ್ಷದ ಹಿಂದೆ ನಡೆದ ಕೊಲೆಗೆ ಮತ್ತೊಬ್ಬ ಬಲಿ

     

    View this post on Instagram

     

    A post shared by Viral Bhayani (@viralbhayani)

    ನೀರಜ್ ಚೋಪ್ರಾ ಜಯವನ್ನು ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸಿರುವ ರಾಖಿ ಸಾವಂತ್, ಮರದ ಕೋಲೊಂದನ್ನು ತೆಗೆದುಕೊಂಡು ನೀರಜ್ ಅವರನ್ನು ಅನುಕರಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ನಾನಾವಿಧವಾಗಿ ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ರಾಖಿ ಸಾವಂತ್ ಈ ಮೊದಲೂ ಕೂಡಾ ಅಂಗಡಿಗಳ ಎದುರು, ಜಿಮ್‍ನ ಹೊರಗೆ ಛಾಯಾಚಿತ್ರಕಾರರಿಗೆ ಸಿಕ್ಕಾಗ ತಮಾಷೆಯ ವೀಡಿಯೋಗಳನ್ನು ಮಾಡಿದ್ದರು. ಈ ಬಾರಿ ಜಿಮ್‍ನಲ್ಲಿ ಕಸರತ್ತು ಮುಗಿಸಿ ಹೊರಬರುವಾಗ ಜಾವೆಲಿನ್ ಎಸೆತದ ಅನುಕರಣೆ ಮಾಡಿದ್ದಾರೆ. ಕೋಲನ್ನು ಎಸೆದು, ಹೇಗಿತ್ತು ತನ್ನ ಎಸೆತ ಎಂದು ಅವರು ವೀಡಿಯೋ ಸೆರೆಹಿಡಿಯುವವರಲ್ಲಿ ಕೇಳಿದ್ದಾರೆ. ಕೊನೆಯಲ್ಲಿ ನೀರಜ್ ಸಾಧನೆಗೆ ಸಲಾಮ್ ಹೇಳುವಂತೆ, ಜೈ ಹೊ, ಜೈ ಹಿಂದ್ ಎಂದು ಹೇಳುತ್ತಾ ತಮ್ಮ ಕಾರನ್ನೇರಿ ಹೊರಟಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡು ಮೆಡಲ್ ಕೋಡಬೇಕು ಎಂದು ಪೋಸ್ಟ್ ಮಾಡಿದ್ದಾರೆ.

  • ಯೋಗ ಮಾಡಲು ಹೋಗಿ ಟ್ರೋಲ್‍ಗೊಳಗಾದ ನಟಿ ರಾಖಿ ಸಾವಂತ್

    ಯೋಗ ಮಾಡಲು ಹೋಗಿ ಟ್ರೋಲ್‍ಗೊಳಗಾದ ನಟಿ ರಾಖಿ ಸಾವಂತ್

    ಮುಂಬೈ: ಒಂದಲ್ಲ ಒಂದು ವಿಚಾರದಲ್ಲಿ ವಿವಾದ ಎಬ್ಬಿಸುತ್ತಿರುವ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇದೀಗ ತಮ್ಮ ಯೋಗಾಸನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ದಾರೆ.

    ಹೌದು. ತರಬೇತುದಾರರ ಸಹಾಯದಿಂದ ರಾಖಿ ಯೋಗಾಸನವೊಂದನ್ನು ಮಾಡಿದ್ದಾರೆ. ಇದರ ವೀಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಟ್ರೋಲಿಗರ ಬಾಯಿಗೆ ಆಹಾರ ಸಿಕ್ಕಂತಾಗಿದೆ. ವೀಡಿಯೋದಲ್ಲಿ ರಾಖಿ, ಚರ್ಮದ ಬಣ್ಣದ ಸ್ಪೋಟ್ರ್ಸ್ ಬ್ರಾ ಧರಿಸಿದ್ದಾರೆ. ಆದರೆ ಆಕೆ ಬ್ರಾ ಧರಿಸಿಯೇ ಇಲ್ಲವೆಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಈ ಹಿಂದೆ ನಟಿ ಕಂಗನಾ ರಣಾವತ್ ಅವರಿಗೆ ರಾಖಿ ಮನವಿ ಮಾಡಿದ್ದರು. ಕಂಗನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ರಾಖಿ, ಕಂಗನಾಜೀ ನಿಮ್ಮ ಬಳಿ ಕೋಟ್ಯಂತರ ರೂಪಾಯಿ ಹಣವನ್ನ ದೇಶಸೇವೆಗಾಗಿ ಬಳಸಿ ಎಂದು ಹೇಳಿದ್ದರು. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಕೂಡ ಶೇರ್ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ರಾಖಿ ಪಿಪಿಇ ಕಿಟ್ ಧರಿಸಿದ್ದರು. ಆದರೆ ವೀಡಿಯೋ ನೋಡಿದ ನೆಟ್ಟಿಗರು ನಿಮ್ಮ ಪಿಪಿಇ ಕಿಟ್ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದರು.

     

    View this post on Instagram

     

    A post shared by Rakhi Sawant (@rakhisawant2511)

    ರಾಖಿ ಸಾವಂತ್ ಅವರು ಬಿಗ್ ಬಾಸ್ ಸೀಸನ್ 14ರಲ್ಲಿ ಸ್ಪರ್ಧಿಸಿದ್ದರು. ಆದರೆ ಅರ್ದಧಲ್ಲಿಯೇ ಸ್ಪರ್ಧೆ ಕೈ ಬಿಟ್ಟಿದ್ದರು. ಆ ಬಳಿಕ ತಮ್ಮ ತಾಯಿಗೆ ಚಿಕಿತ್ಸೆ ಮಾಡಿದ್ದು, ರಾಖಿ ತಾಯಿ ಚಿಕಿತ್ಸೆಗೆ ಸಲ್ಮಾನ್ ಖಾನ್ ಕೂಡ ನೆರವು ನೀಡಿದ್ದರು. ಇದನ್ನೂ ಓದಿ: ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

     

    View this post on Instagram

     

    A post shared by Rakhi Sawant (@rakhisawant2511)

     

  • ಕಂಗನಾ ರಣಾವತ್‍ಗೆ ರಾಖಿ ಸಾವಂತ್ ಮನವಿ

    ಕಂಗನಾ ರಣಾವತ್‍ಗೆ ರಾಖಿ ಸಾವಂತ್ ಮನವಿ

    ಮುಂಬೈ: ಬಾಲಿವುಡ್ ಮಣಿಕರ್ಣಿಕಾ ಕಂಗನಾ ರಣಾವತ್‍ಗೆ ನಟಿ ರಾಖಿ ಸಾವಂತ್ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಬಳಿ ಕೋಟಿ ಕೋಟಿ ಹಣವಿದೆ. ಆಕ್ಸಿಜನ್ ಖರೀದಿಸಿ ದೇಶ ಸೇವೆಯಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.

    ಕಂಗನಾ ರಣಾವತ್ ಮತ್ತು ರಾಖಿ ಸಾವಂತ್ ಇಬ್ಬರ ನಡುವಿನ ಕೋಳಿ ಜಗಳ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಮುಂಬೈ ಕುರಿತು ಕಂಗನಾ ನೀಡಿದ ಹೇಳಿಕೆಯಲ್ಲಿ ರಾಖಿ ಸಾವಂತ್ ಅತ್ಯಂತ ಕಟು ಪದಗಳಲ್ಲಿ ಟೀಕಿಸಿದ್ದರು. ಇದೀಗ ಕಂಗನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಕಂಗನಾಜೀ ನಿಮ್ಮ ಬಳಿ ಕೋಟ್ಯಂತರ ರೂಪಾಯಿ ಹಣವನ್ನ ದೇಶಸೇವೆಗಾಗಿ ಬಳಸಿ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.

    ತಮ್ಮ ನಿವಾಸದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ರಾಖಿ ಸಾವಂತ್, ಎಲ್ಲರೂ ಸ್ಯಾನಿಟೈಸರ್ ಬಳಸಿ ಡಬಲ್ ಮಾಸ್ಕ್ ಹಾಕಿಕೊಳ್ಳಿ. ಸ್ಮಶಾನದಲ್ಲಿ ಹೆಣಗಳನ್ನ ಸುಡಲು ಜಾಗವಿಲ್ಲ. ದೇಶದ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನಿಮ್ಮನ್ನು ನೀವು ಕಾಪಾಡಿಕೊಳ್ಳೋದರ ಜೊತೆ ಪೋಷಕರನ್ನ ಕಾಪಾಡಿಕೊಳ್ಳಿ ಎಂದು ಕೊರೊನಾ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ನೀನು ಸುಳ್ಳಿ, ಸುಶಾಂತ್ ಸಾವನ್ನ ವೈಯಕ್ತಿಯ ಲಾಭಕ್ಕೆ ಬಳಕೆ- ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

     

    View this post on Instagram

     

    A post shared by Viral Bhayani (@viralbhayani)

    ಕೆಲ ದಿನಗಳ ಹಿಂದೆ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ರಾಖಿ ಸಾವಂತ್ ಪಿಪಿಇ ಕಿಟ್ ಧರಿಸಿದ್ದರು. ಈ ವೀಡಿಯೋ ನೋಡಿದ ನೆಟ್ಟಿಗರು ನಿಮ್ಮ ಪಿಪಿಇ ಕಿಟ್ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀನೇನು ಕೊಹಿನೂರು ವಜ್ರನಾ? ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

  • ಹೆಚ್ಚು ಹೆಣ್ಣಮಕ್ಕಳು ಹೆರದಂತೆ ಅಮ್ಮನಿಗೆ ಹೇಳಿ – ಬೀದಿಬದಿ ಮಕ್ಕಳಿಗೆ ರಾಖಿ ಡೈಲಾಗ್

    ಹೆಚ್ಚು ಹೆಣ್ಣಮಕ್ಕಳು ಹೆರದಂತೆ ಅಮ್ಮನಿಗೆ ಹೇಳಿ – ಬೀದಿಬದಿ ಮಕ್ಕಳಿಗೆ ರಾಖಿ ಡೈಲಾಗ್

    ಮುಂಬೈ: ವಿವಾದಗಳಿಂದಲೇ ಸುದ್ದಿಯಾಗುವ ನಟಿ ರಾಖಿ ಸಾವಂತ್ ಇತ್ತೀಚೆಗೆ ಬೀದಿ ಮಕ್ಕಳಿಗೆ ಅಮ್ಮಂಗೆ ಹೆಚ್ಚು ಮಕ್ಕಳನ್ನು ಹೆರದಂತೆ ಹೇಳಿ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

    ರಾಖಿ ಶಾಪಿಂಗ್ ಮಾಡಲು ತನ್ನ ಮನೆಯಿಂದ ಹೊರಗೆ ಬಂದಿದ್ದರು. ಆಗ ಅಲ್ಲಯೇ ಇದ್ದ ಬೀದಿಬದಿ ಮಕ್ಕಳನ್ನು ನೋಡಿ ಮಕ್ಕಳಿಗೆ ಸೇಬು ಎಳನೀರು ಕೊಟ್ಟಿದ್ದಾರೆ. ಮಕ್ಕಳ ಜೊತೆಗೆ ನಿಂತು ತಂಬಾ ಸಮಯದವರೆಗೆ ಮಾತನಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ರಾಖಿ ಸಾವಂತ್ ಬಡ ಮಕ್ಕಳಿಗೆ ಹಣ್ಣು ವಿತರಿಸಿ ಮಕ್ಕಳೊಂದಿಗೆ ಮಾತನಾಡುತ್ತಾ ಹೆಚ್ಚು ಮಕ್ಕಳನ್ನು ಮಾಡಬೇಡ ಎಂದು ಅಮ್ಮಗೆ ಹೇಳು. ನೀವು ಭಿಕ್ಷೆ ಬೇಡಬಾರದು. ಶಿಕ್ಷಣವನ್ನು ಪಡೆಯಬೇಕು ನೀವು. ಶಾಲೆಗೆ ಹೋಗಿ ಭಿಕ್ಷೆ ಬೇಡಬೇಡಿ. ಕಷ್ಟಪಟ್ಟು ಕೆಲಸ ಮಾಡಿ. ಭಿಕ್ಷೆ ಬೇಡಬಾರದು ಎಂದಿದ್ದಾರೆ. ಈ ವೇಳೆ ಹೆಚ್ಚು ಮಕ್ಕಳನ್ನು ಹೆರಬಾರದೆಂದು ನಿಮ್ಮ ತಾಯಿಗೆ ಹೇಳಿ ಎಂದಿದ್ದಾರೆ. ಕೊನೆಯ ಡೈಲಾಗ್ ಅಂತೂ ಸಖತ್ ವೈರಲ್ ಆಗಿದೆ. ರಾಖಿ ಸಾವಂತ್ ಮಾತು ಕೇಳಿ ಎಲ್ಲರೂ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.

  • ಅಮೀರ್‌ಗೆ ಕೊರೊನಾ ಪಾಸಿಟಿವ್- ಆಘಾತಗೊಂಡ ರಾಖಿ ಸಾವಂತ್

    ಅಮೀರ್‌ಗೆ ಕೊರೊನಾ ಪಾಸಿಟಿವ್- ಆಘಾತಗೊಂಡ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಗೆ ಕೊರೊನಾ ಬಂದಿರುವುದು ದೃಢಪಟ್ಟಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ನಟಿ ರಾಖಿ ಸಾವಂತ್ ಕೊಟ್ಟ ಪ್ರತಿಕ್ರಿಯೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹೌದು. ಅಮೀರ್ ಖಾನ್ ಕೊರೊನಾ ಬಂದಿದೆ ಅಂತ ತನ್ನ ಕಿವಿಗೆ ಬೀಳ್ತಿದ್ದಂತೆಯೇ ಅಚ್ಚರಿಗೊಳಗಾದ ರಾಖಿ, ಅಮೀರ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ವೀಡಿಯೋದಲ್ಲಿ ಏನಿದೆ..?
    ಡಾರ್ಕ್ ಪಿಂಕ್ ಜಿಮ್ ಡ್ರೆಸ್ ಹಾಕಿಕೊಂಡಿರುವ ರಾಖಿ ಕಾರು ಹತ್ತಲು ಮುಂದಾಗುತ್ತಾರೆ. ಈ ವೇಳೆ ಫೋಟೋಗ್ರಾಫರ್ ಒಬ್ಬರು ಅಮೀರ್ ಖಾನ್ ಗೆ ಕೊರೊನಾ ಬಂದಿರುವುದಾಗಿ ಮಾಹಿತಿ ನೀಡುತ್ತಾರೆ. ಈ ವೇಳೆ ಸೆನ್ ತಿರುಗಿದ ರಾಖಿ, ಓ ವೈ ಗಾಡ್ ಎಂದು ಆಘಾತಗೊಂಡರು. ಅಲ್ಲದೆ ಇದರಿಂದ ನನಗೆ ಭಯವಾಗ್ತಿದೆ. ಅಮೀರ್ ಜಿ ಐ ಲವ್ ಯೂ, ಮಿಸ್ ಯೂ ಅಂತೆಲ್ಲ ಆತಂಕದಿಂದಲೇ ಹೇಳಿದ್ದಾರೆ.

    ಈ ವೀಡಿಯೋವನ್ನು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಕೆಲವರು ರಾಖಿ ಮಾತಿಗೆ ತಮಾಷೆ ಮಾಡಿದರೆ, ಇನ್ನೂ ಕೆಲವರು ನೌಟಂಕಿ ಅಂತ ಹೇಳಿದ್ದಾರೆ. ಇನ್ನೂ ಕೆಲವರು ರಾಖಿ ಒಳ್ಳೆಯ ಮನಸ್ಸನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)