Tag: ರಾಖಿ ಸಾವಂತ್

  • ‘ಜೈ ಪಾಕಿಸ್ತಾನ’ ಎಂದ ರಾಖಿ ಸಾವಂತ್- ನಟಿಯನ್ನು ದೇಶ ಬಿಟ್ಟು ಓಡಿಸಲು ಆಗ್ರಹ

    ‘ಜೈ ಪಾಕಿಸ್ತಾನ’ ಎಂದ ರಾಖಿ ಸಾವಂತ್- ನಟಿಯನ್ನು ದೇಶ ಬಿಟ್ಟು ಓಡಿಸಲು ಆಗ್ರಹ

    ‘ಪಾಕ್ ಜನರೇ, ನಾನು ನಿಮ್ಮೊಂದಿಗೆ ಇದ್ದೇನೆ’ ಎಂದ ನಟಿ ವಿರುದ್ಧ ಜನಾಕ್ರೋಶ

    ದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡೋ ರಾಖಿ ಸಾವಂತ್ (Rakhi Sawant) ಇದೀಗ ಪಾಕ್ ಪರ ಮಾತನಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ವಾತಾವರಣ ನಡುವೆ ರಾಖಿ ಸಾವಂತ್ ಪಾಕ್ ಪರ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ:ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ

    ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾನು ರಾಖಿ ಸಾವಂತ್, ನಾನು ಸತ್ಯವನ್ನೇ ಮಾತನಾಡುತ್ತೇನೆ. ಸತ್ಯವನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ. ಪಾಕಿಸ್ತಾನದ ಜನರೇ, ನಾನು ನಿಮ್ಮೊಂದಿಗೆ ಇದ್ದೇನೆ ‘ಜೈ ಪಾಕಿಸ್ತಾನ’ (Pakistan) ಎಂದು ಹೇಳಿದ್ದಾರೆ.

    ಭಾರತದಲ್ಲಿದ್ದು ಭಾರತೀಯಳಾಗಿ ಪಾಕ್ ಪರ ಧ್ವನಿಯೆತ್ತಿದ ರಾಖಿ ಸಾವಂತ್ ವಿರುದ್ಧ ಅನೇಕರು ಕೆಂಡಕಾರಿದ್ದಾರೆ. ಈ ಹಿನ್ನೆಲೆ ರಾಖಿ ಸಾವಂತ್ ಅವರನ್ನು ದೇಶದಿಂದ ಓಡಿಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಎದುರಾಳಿ ದೇಶದ ಪರ ರಾಖಿ ಮಾತನಾಡುತ್ತಾ ಅವರ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಅವರನ್ನು ಭಾರತದಿಂದ ಹೊರಹಾಕಬೇಕು ಎಂದು ಮಹಾರಾಷ್ಟç ನವನಿರ್ಮಾಣ್ ಸೇನಾ ಕಾರ್ಯಕರ್ತ ಅನೀಶ್ ಖಂಡಗಾಲೆ ಖಂಡಿಸಿದ್ದಾರೆ. ಇದನ್ನೂ ಓದಿ:‌’ಡ್ರ್ಯಾಗನ್’ ಸಕ್ಸಸ್ ಬೆನ್ನಲ್ಲೇ ಸ್ಟಾರ್ ನಟನಿಗೆ ಕಯಾದು ಲೋಹರ್ ಜೋಡಿ

    ಇದೀಗ ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ರಾಖಿ ವಿರುದ್ಧ ಕಿಡಿಕಾರಿದ್ದಾರೆ. ಇದು ದೇಶದ್ರೋಹ ಕೆಲಸ, ರಾಖಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.

  • ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    ಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಾಲಿವುಡ್ ಚಿತ್ರರಂಗದ ಅನೇಕ ನಟ ನಟಿಯರು ಖಂಡಿಸಿದ್ದಾರೆ. ಇದೀಗ ರಾಖಿ ಸಾವಂತ್ (Rakhi Sawant) ಅವರು ಹಿಂದೂ ಮತ್ತು ಮುಸ್ಲಿಂ ವಿಭಜನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ರಜೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡೋದಾಗಿ ನಟಿ ಹೇಳಿದ್ದಾರೆ. ಇದನ್ನೂ ಓದಿ: ದಳಪತಿ ವಿಜಯ್‌ ನೋಡಲು ಮರದಿಂದ ಜಿಗಿದು ಅಭಿಮಾನಿಯ ಹುಚ್ಚಾಟ- ವಿಡಿಯೋ ವೈರಲ್

    ರಾಖಿ ಬುರ್ಖಾ ಧರಿಸಿ ಉಗ್ರರ ದಾಳಿ ಕುರಿತು ಮಾತನಾಡಿ, ನಾವೆಲ್ಲರೂ ಒಂದೇ. ನಮ್ಮ ಹಿಂದೂಸ್ಥಾನದಿಂದ ಮುಸ್ಲಿಮರನ್ನು ಯಾರೂ ಓಡಿಸಲು ಸಾಧ್ಯವಿಲ್ಲ. ಭಾರತವು ಹಿಂದೂಗಳಿಗೆ ಸೇರಿದಷ್ಟೇ ಮುಸ್ಲಿಮರಿಗೂ ಸೇರಿದೆ. ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಬೇಡಿ. ಸಣ್ಣ ಮಕ್ಕಳಂತೆ ವರ್ತಿಸಬೇಡಿ, ಪ್ರಬುದ್ಧರಾಗಿರಿ. ದೇವರ ಮೇಲೆ ಕರುಣೆ ತೋರಿ. ದೇವರು ಎಷ್ಟು ನೋವನ್ನು ಅನುಭವಿಸುತ್ತಿರಬಹುದು ಎಂದು ಊಹಿಸಿ. ಅವನು ನಮ್ಮೆಲ್ಲರನ್ನೂ ಸೃಷ್ಟಿಸಿದನು, ನಾವೆಲ್ಲರೂ ಅವನ ಮಕ್ಕಳು. ಆದರೆ ನಾವು ಪರಸ್ಪರ ಜಗಳವಾಡುತ್ತಿದ್ದೇವೆ. ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದೇವೆ ಇದರಿಂದ ದೇವರಿಗೂ ಬೇಜಾರ್ ಆಗಿದೆ ಎಂದಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

     

    View this post on Instagram

     

    A post shared by Rakhi Sawant (@rakhisawant2511)

    ನಾನು ನನ್ನ ಮುಂದಿನ ರಜೆಯನ್ನು ಕಾಶ್ಮೀರದಲ್ಲಿ ಕಳೆಯುತ್ತೇನೆ. ಕಾಶ್ಮೀರಕ್ಕೆ ಹೋಗುವುದು ನಮ್ಮ ಹಕ್ಕು. ಕಾಶ್ಮೀರ ನಮ್ಮದು ಮತ್ತು ಕಾಶ್ಮೀರದ ಜನರು ನಮ್ಮ ಸಹೋದರ ಸಹೋದರಿಯರು. ನಾವು ಭಾರತದ ಹೊರಗೆ ಹೋಗುವುದಿಲ್ಲ. ನಾನು ಕಾಶ್ಮೀರಕ್ಕೆ ಹೋಗುತ್ತೇನೆ, ನೀವು ನನ್ನನ್ನು ಬೆಂಬಲಿಸುತ್ತೀರಾ? ಅಲ್ವಾ ಎಂದು ಅಭಿಮಾನಿಗಳಿಗೆ ನಟಿ ಪ್ರಶ್ನಿಸಿದ್ದಾರೆ. ಈ ಕಾರ್ಯಕ್ಕೆ ಬಾಲಿವುಡ್ ಕೂಡ ಬೆಂಬಲಿಸುತ್ತದೆ ಎಂದು ರಾಖಿ ಮಾತನಾಡಿದ್ದಾರೆ.

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.

  • ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

    ಯೂಟ್ಯೂಬರ್ ರಣವೀರ್‌ ಅಲಹಬಾದಿಯಾ ಕೀಳು ಹೇಳಿಕೆ ಕೇಸ್‌ – ರಾಖಿ ಸಾವಂತ್‌ಗೆ ಸಮನ್ಸ್

    – ಫೆ.27ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್

    ನವದೆಹಲಿ: ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ (India’s Got Latent) ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಯೂಟ್ಯೂಬರ್‌ ರಣವೀರ್‌ ಅಲಹಬಾದಿಯಾ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ರಾಖಿ ಸಾವಂತ್‌ಗೆ (Rakhi Sawant) ಮಹಾರಾಷ್ಟ್ರ ಸೈಬರ್‌ ಪೊಲೀಸರು ಸಮನ್ಸ್‌ ನೀಡಿದ್ದಾರೆ.

    ಇದೇ ಫೆ.27 ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವಂತೆ ನಟಿಗೆ ಸಮನ್ಸ್‌ ನೀಡಿದ್ದಾರೆ. ಇದೇ ವೇಳೆ ರಣವೀರ್ ಅಲಹಬಾದಿಯಾ (Ranveer Allahbadia), ಸಮಯ್‌ ರೈನಾ, ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರ ಪ್ಯಾನಲಿಸ್ಟ್‌ಗಳಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್‌ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚೆಗೆ ನಡೆದಿದ್ದ ಇಂಡಿಯಾಸ್‌ ಗಾಟ್‌ ಟ್ಯಾಲೆಂಡ್‌ ಶೋನಲ್ಲಿ ರಾಖಿ ಸಾವಂತ್‌ ಅತಿಥಿಯಾಗಿ‌ ಭಾಗವಹಿಸಿದ್ದರು. ಈ ಹಿನ್ನೆಲೆ ರಾಖಿ ಸಾವಂತ್‌ಗೆ ನೋಟಿಸ್‌ ನೀಡಲಾಗಿದೆ.

    ಅಷ್ಟಕ್ಕೂ ಏನಿದು ವಿವಾದ?
    ಯುಟ್ಯೂಬ್‌ ಚಾನೆಲ್‌ನಲ್ಲಿ ಮೂಡಿಬಂದ ʻಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ʼ ಕಾಮಿಡಿ ರಿಯಾಲಿಟಿ ಶೋಗೆ ಬಂದಿದ್ದ ಸ್ಪರ್ಧಿಯೊಬ್ಬರ ಬಳಿ ಪೋಷಕರ ಲೈಂಗಿಕತೆಯ ಬಗ್ಗೆ ರಣವೀರ್‌ ಕೇಳಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಣವೀರ್‌ ಅಲ್ಲಾಬಾದಿಯಾ ಅವರ ಪಾಡ್‌ಕಾಸ್ಟ್‌ ಅನ್ನು ನಿಷೇಧಿಸುವಂತೆ ಆಗ್ರಹ ಕೇಳಿಬಂದಿತ್ತು. ಅಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸೇರಿದಂತೆ ಹಲವು ನಾಯಕರೂ ರಣವೀರ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಪೊಲೀಸರು ದೂರು ಸಹ ದಾಖಲಿಸಿಕೊಂಡಿದ್ದಾರೆ.

    ಕ್ಷಮೆ ಕೇಳಿದ ರಣವೀರ್ ಅಲ್ಲಾಬಾದಿಯಾ
    ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ, ವಿಡಿಯೋ ಮೂಲಕ ಕ್ಷಮೆ ಕೇಳಿದ ರಣವೀರ್‌, ʻನನ್ನ ಹೇಳಿಕೆ ಸರಿಯಲ್ಲʼ, ಅದು ತಮಾಷೆಯೂ ಅಲ್ಲ. ಈ ಬಗ್ಗೆ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ವೇದಿಕೆಗಳನ್ನು ಈ ರೀತಿಯೇ ಬಳಸಿಕೊಳ್ಳುತ್ತೀರಾ ಎಂದು ಹಲವರು ಕೇಳಿದ್ದೀರಿ. ಖಂಡಿತವಾಗಿ, ಈ ರೀತಿಯಾಗಿ ವೇದಿಕೆಯನ್ನು ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಈಗ ಏನಾಗಿದೆಯೋ ಅದರ ಬಗ್ಗೆ ಯಾವುದೇ ವಿವರಣೆ, ಕಾರಣ ಅಥವಾ ಸ್ಪಷ್ಟನೆ ನೀಡುವುದಿಲ್ಲ. ನಿಮ್ಮ ಬಳಿ ಕ್ಷಮೆಯನ್ನು ಕೇಳುತ್ತೇನೆ ಎಂದು ಹೇಳಿದ್ದರು.

    ಯಾರ‍್ಯಾರ ಮೇಲೆ ಕೇಸ್‌?
    ಈ ವಿವಾದಕ್ಕೆ ಸಂಬಂಧಿಸಿದಂತೆ ಆಶೀಶ್ ಚಂಚ್ಲಾನಿ, ಜಸ್‌ಪ್ರೀತ್ ಸಿಂಗ್, ಅಪೂರ್ವಾ ಮಖಿಜಾ, ರಣವೀರ್ ಅಲಹಬಾದಿಯಾ, ಸಮಯ್ ರೈನಾ ಇತರರ ವಿರುದ್ಧ ಕೇಸ್‌ ದಾಖಲಾಗಿದೆ. ಇವರ ಮೇಲೆ ಅಶ್ಲೀಲತೆಯನ್ನು ಉತ್ತೇಜಿಸುವ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಗುವಹಾಟಿ ಪೊಲೀಸರು ಸಹ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ಟ್ವೀಟ್ ಮಾಡಿದ್ದರು.

  • 3ನೇ ಮದ್ವೆಗೆ ಸಜ್ಜಾದ ರಾಖಿ ಸಾವಂತ್‌..? – ಪಾಕಿಸ್ತಾನದ ಪೊಲೀಸ್ ಆಫೀಸರ್ ಜೊತೆ ವಿವಾಹ

    3ನೇ ಮದ್ವೆಗೆ ಸಜ್ಜಾದ ರಾಖಿ ಸಾವಂತ್‌..? – ಪಾಕಿಸ್ತಾನದ ಪೊಲೀಸ್ ಆಫೀಸರ್ ಜೊತೆ ವಿವಾಹ

    – ಭಾರತದಲ್ಲಿ ಆರತಕ್ಷತೆ, ಪಾಕ್‌ನಲ್ಲಿ ಮದುವೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹನಿಮೂನ್‌ ಅಂತಾರೆ ನಟಿ

    ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ (Rakhi Sawant) ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್. ಈಕೆ ಹೋದ ಕಡೆಯಲ್ಲ ಕಾಂಟ್ರವರ್ಸಿ ಇದ್ದೇ ಇರುತ್ತೆ. ಕೆಲವೊಮ್ಮೆ ಅಭಿಮಾನಿಗಳಿಗಾಗಿ ಅವರೇ ಗಾಸಿಪ್ ಮೈ ಮೇಲೆ ಎಳೆದುಕೊಳ್ತಾರೆ ಅನ್ನಿಸುತ್ತೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಾಖಿ 3ನೇ ಮದುವೆಯಾಗಲು (Rakhi Sawant Marriage) ಸಜ್ಜಾಗಿದ್ದಾರಂತೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಖಿ ಸಾವಂತ್‌, ಪಾಕಿಸ್ತಾನದ ವ್ಯಕ್ತಿಯೊಬ್ಬರಿಂದ ಮದುವೆ ಪ್ರಸ್ತಾಪ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

    ಪಾಕಿಸ್ತಾನದಿಂದ (Pakistan) ನನಗೆ ಮದುವೆ ಪ್ರಸ್ತಾಪಗಳು ಬರುತ್ತಿವೆ ಎಂದಿರುವ ರಾಖಿ, ನನ್ನ ಹಿಂದಿನ ಮದುವೆಗಳಿಂದ ನನಗಾದ ನೋವು, ನಾನು ಅನುಭವಿಸಿದ ನರಕಯಾತನೆ, ಎಲ್ಲವೂ ಪಾಕಿಸ್ತಾನದ ಪ್ರಜೆಗಳಿಗೆ ಗೊತ್ತು ಅವರು ಕೂಡ ಎಲ್ಲವನ್ನು ನೋಡಿದ್ದಾರೆ. ಭಾವಿ ಪತಿ ನಟ ಹಾಗೂ ಪೊಲೀಸ್‌ ಅಧಿಕಾರಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ಸಜ್ಜಾದ ಚೈತ್ರಾ ವಾಸುದೇವನ್

    ಮುಂದುವರಿದು… ಈ ಬಾರಿ ಉತ್ತಮ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಪಾಕಿಸ್ತಾನದ ಜನರನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಅಲ್ಲಿ ನನಗೆ ತುಂಬಾ ಜನ ಅಭಿಮಾನಿಗಳಿದ್ದಾರೆ. ಈ ರೀತಿಯ ಮದುವೆಗಳಿಂದ 2 ದೇಶಗಳ ನಡುವೆ ಶಾಂತಿ ನೆಲೆಸುತ್ತೆ ಎಂದು ಅಂತ ಹೇಳಿದ್ದಾರೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಇನ್ನೂ ಪಾಕಿಸ್ತಾನದಲ್ಲಿ ನನ್ನ ಮದುವೆ ನಡೆಯಲಿದ್ದು ಭಾರತದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದಿರುವ ರಾಖಿ ಸ್ವಿಜರ್ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ಗೆ ಹನಿಮೂನ್‌ಗೆ ನಾವು ಹೋಗಲಿದ್ದೇವೆ, ಆ ನಂತರ ದುಬೈನಲ್ಲಿ ನಾವು ಖಾಯಂ ಆಗಿ ನೆಲಸಲಿದ್ದೇವೆ ಅಂತ ತಿಳಿಸಿದ್ದಾರೆ.

    ಈ ಹಿಂದೆ… ಮೈಸೂರಿನ ಅದಿಲ್‌ ಖಾನ್‌ ದುರಾನಿ ಅವರನ್ನು ಮದುವೆಯಾಗಿದ್ದ ರಾಖಿ ಸಾವಂತ್‌ 2023ರಲ್ಲಿ ಬೇರೆಯಾಗಿದ್ದರು. ಆದಿಲ್‌ಗೂ ಮುನ್ನ ರಾಖಿ ರಿತೇಶ್‌ ರಾಜ್‌ ಸಿಂಗ್‌ ಅವರನ್ನ ವಿವಾಹವಾಗಿದ್ದರು. ರಿತೇಶ್‌ ಮತ್ತು ರಾಖಿ ಹಿಂದಿ ಬಿಗ್‌ ಬಅಸ್‌ 15ರ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು.  ಇದನ್ನೂ ಓದಿ: ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

  • Bigg Boss: ‘ಬಿಗ್‌ ಬಾಸ್‌’ಗೆ ಎಂಟ್ರಿ ರಾಖಿ ಸಾವಂತ್

    Bigg Boss: ‘ಬಿಗ್‌ ಬಾಸ್‌’ಗೆ ಎಂಟ್ರಿ ರಾಖಿ ಸಾವಂತ್

    ಕಿರುತೆರೆಯ ಜನಪ್ರಿಯ ಶೋ ದೊಡ್ಮನೆ ಆಟಕ್ಕೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 11ರ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದರ ನಡುವೆ ಮರಾಠಿ ‘ಬಿಗ್ ಬಾಸ್ ಸೀಸನ್ 5’ಕ್ಕೆ (Bigg Boss Marati 5) ರಾಖಿ ಸಾವಂತ್ (Rakhi Sawant) ಆಗಮಿಸಿದ್ದಾರೆ.

     

    View this post on Instagram

     

    A post shared by Colors Marathi (@colorsmarathi)

    ರಿತೇಶ್ ದೇಶ್‌ಮುಖ್ ನಿರೂಪಣೆಯ ಮರಾಠಿ ಬಿಗ್ ಬಾಸ್‌ಗೆ ರಾಖಿ ಆಗಮಿಸಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದು, ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದಿದ್ದಾರೆ.

    ಬಳಿಕ ಸ್ಪರ್ಧಿ ನಿಕ್ಕಿ ತಂಬೋಲಿ ರಾಖಿ ಕ್ವಾಟ್ಲೆ ಕೊಟ್ಟಿದ್ದಾರೆ. ರಾಖಿ ಮಾತಿಗೆ ನಿಕ್ಕಿ ಮುಖ ಕಿವುಚಿಕೊಂಡಿದ್ದಾರೆ. ಒಟ್ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.

  • ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ರಾಖಿ ಸಾವಂತ್‌ ಮೊದಲ ವೀಡಿಯೋ

    ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ರಾಖಿ ಸಾವಂತ್‌ ಮೊದಲ ವೀಡಿಯೋ

    ಬಾಲಿವುಡ್‌ ಡ್ರಾಮಾ ಕ್ವೀನ್ ರಾಖಿ ಸಾವಂತ್ (Rakhi Sawant) ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ರಾಖಿ ಸಾವಂತ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಆಕೆ ಹಲವು ಕಾಯಿಲೆಗಳಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.

    ಹೃದಯ ಸಮಸ್ಯೆ ಜೊತೆಗೆ ನಟಿಯ ಕಿಡ್ನಿ ಕೂಡ ಕೆಟ್ಟಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಹೊಟ್ಟೆಯಲ್ಲಿ 10 ಸೆಂ.ಮೀ ಗಡ್ಡೆ ಇದ್ದು, ಬಳಿಕ ಶಸ್ತ್ರಚಿಕಿತ್ಸೆ (Surgery) ನಡೆಸಲಾಗಿದೆ. ಇದೀಗ ಶಸ್ತ್ರಚಿಕಿತ್ಸೆಯ ನಂತರ ರಾಖಿಯ ಮೊದಲ ವೀಡಿಯೊ ಹೊರಬಿದ್ದಿದೆ. ಅದರಲ್ಲಿ ಅವರು ನೋವಿನಿಂದ ನರಳುತ್ತಿರುವುದನ್ನು ಕಾಣಬಹುದಾಗಿದೆ. ರಾಖಿಯ ಈ ವೀಡಿಯೊವನ್ನು ಆಕೆಯ ಮಾಜಿ ಪತಿ ರಿತೇಶ್ ಅವರು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಖಿ ಆಸ್ಪತ್ರೆಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಶಸ್ತ್ರಚಿಕಿತ್ಸೆಯ ನಂತರ ರಾಖಿಗೆ ನಡೆಯಲು ಕಷ್ಟಪಡುತ್ತಿದ್ದಾರೆ.

    ವೀಡಿಯೋದಲ್ಲಿ ಏನಿದೆ..?: ರಾಖಿ ನೋವಿನಿಂದ ಕೂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಆಸ್ಪತ್ರೆಯ ಸಿಬ್ಬಂದಿ ರಾಖಿ ನಡೆಯಲು ಪ್ರಯತ್ನಿಸಿದಾಗ ಆಕೆ ನೋವಿನಿಂದ ಸಂಕಟ ಪಡುತ್ತಿದ್ದಾರೆ. ಅಲ್ಲದೇ ನರ್ಸ್ ಅವರಿಗೆ ಮೊದಲು ನೇರವಾಗಿ ನಿಲ್ಲಲು ಮತ್ತು ನಂತರ ನಿಧಾನವಾಗಿ ನಡೆಯಲು ಪ್ರಯತ್ನಿಸುವಂತೆ ಹೇಳುವುದು ವೀಡಿಯೋದಲ್ಲಿ ಕೇಳುತ್ತದೆ. ಇದಾದ ನಂತರ ರಾಖಿ ನಿಧಾನವಾಗಿ ನಡೆಯುತ್ತಾರೆ. ವೀಡಿಯೊಗಳಲ್ಲಿ ಯಾವಾಗಲೂ ತನ್ನ ಬಬ್ಲಿ ಸ್ಟೈಲ್‌ನಿಂದ ಜನರನ್ನು ನಗಿಸುವ ರಾಖಿಯ ಸ್ಥಿತಿಯನ್ನು ಕಂಡು ಅಭಿಮಾನಿಗಳು ಕೂಡ ಬೇಜಾರಾಗಿದ್ದಾರೆ. ಇದನ್ನೂ ಓದಿ: ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಮೌನ ಮುರಿದ ಫಹಾದ್ ಫಾಸಿಲ್

     

    ರಾಖಿಯ ಈ ವೀಡಿಯೊವನ್ನು ಹಂಚಿಕೊಂಡ ರಿತೇಶ್, ನನಗೆ ತುಂಬಾ ಸಂತೋಷವಾಗಿದೆ. ರಾಖಿ ಜೀ ಶೀಘ್ರದಲ್ಲೇ ನಮ್ಮ ನಡುವೆ ಇರುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಅವರು ಇಂದು ನಡೆಯುವುದನ್ನು ನೋಡಲು ಸಂತೋಷವಾಗಿದೆ. ದೇವರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ರಾಖಿ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದಾರೆ.

  • ನಟಿ ರಾಖಿಗೆ ಗರ್ಭಾಶಯ ತೊಂದರೆ: ನಾಳೆ ಶಸ್ತ್ರ ಚಿಕಿತ್ಸೆ

    ನಟಿ ರಾಖಿಗೆ ಗರ್ಭಾಶಯ ತೊಂದರೆ: ನಾಳೆ ಶಸ್ತ್ರ ಚಿಕಿತ್ಸೆ

    ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ (Rakhi Sawant) ಮೊನ್ನೆಯಷ್ಟೇ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರೂ, ನಾನಾ ರೀತಿಯಲ್ಲಿ ರಾಖಿ ಬಗ್ಗೆ ಕಾಮೆಂಟ್‍ಗಳು ಕೇಳಿ ಬಂದಿದ್ದವು. ಅದು ಡ್ರಾಮಾ ಎಂದು ಹೇಳಲಾಗಿತ್ತು. ಆದರೆ, ರಾಖಿ ಗರ್ಭಾಶಯ ತೊಂದರೆಯಿಂದ ಬಳಲುತ್ತಿದ್ದಾರಂತೆ. ನಾಳೆ ಶಸ್ತ್ರ ಚಿಕಿತ್ಸೆಗೆ (Surgery) ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.

    ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆಕೆ ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

    ರಾಖಿ ಸಾವಂತ್ ಅವರ ಈ ಫೋಟೋಗಳನ್ನು ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲದೇ ಮಲಗಿದ್ದಾರಾ ಅಥವಾ ಗಾಢ ನಿದ್ರೆಯಲ್ಲಿದ್ದಾರೋ ಎಂಬುದು ತಿಳಿದಿರಲಿಲ್ಲ. ಫೋಟೋದಲ್ಲಿ ನರ್ಸ್ ಬಿಪಿ ಪರೀಕ್ಷಿಸುತ್ತಿರುವುದನ್ನು ಕಾಣಬಹುದಾಗಿತ್ತು. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿತ್ತು.

     

    ಈ ಕುರಿತಂತೆ ಆದಿಲ್ ಮಾತನಾಡಿದ್ದು, ಬಂಧನ ಭೀತಿಯಲ್ಲಿರುವ ರಾಖಿ ಡ್ರಾಮಾ ಮಾಡುತ್ತಿದ್ದಾಳೆ. ಜೈಲಿಗೆ ಹೋಗೋದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಮಲಗಿದ್ದಾಳೆ ಎಂದು ಆರೋಪ ಮಾಡಿದ್ದರು.

  • ಆಸ್ಪತ್ರೆಯಲ್ಲಿ ಮಲಗಿ ಡ್ರಾಮಾ ಮಾಡ್ತಿದ್ದಾಳೆ ರಾಖಿ : ಆದಿಲ್ ಕಿಡಿ

    ಆಸ್ಪತ್ರೆಯಲ್ಲಿ ಮಲಗಿ ಡ್ರಾಮಾ ಮಾಡ್ತಿದ್ದಾಳೆ ರಾಖಿ : ಆದಿಲ್ ಕಿಡಿ

    ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ (Rakhi Sawant) ಸೋಷಿಯಲ್ ಮೀಡಿಯಾದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ತನ್ನ ಸ್ಟೈಲ್ ಮತ್ತು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ರಾಖಿ ಸಾವಂತ್ ಇದೀಗ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಈ ಕುರಿತಂತೆ ಮಾಜಿ ಬಾಯ್ ಫ್ರೆಂಡ್ ಆದಿಲ್ (Adil Khan) ಪ್ರತಿಕ್ರಿಯೆ ನೀಡಿದ್ದಾರೆ.

    ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆ ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ರಾಖಿ ಸಾವಂತ್ ಅವರ ಈ ಫೋಟೋಗಳನ್ನು ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲದೇ ಮಲಗಿದ್ದಾರಾ ಅಥವಾ ಗಾಢ ನಿದ್ರೆಯಲ್ಲಿದ್ದಾರೋ ಎಂಬುದು ತಿಳಿದಿಲ್ಲ. ಫೋಟೋದಲ್ಲಿ ನರ್ಸ್ ಬಿಪಿ ಪರೀಕ್ಷಿಸುತ್ತಿರುವುದನ್ನು ಕಾಣಬಹುದು. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿದೆ. ಆದರೆ ನಟಿಗೆ ಏನಾಗಿದೆ ಎಂಬ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

     

    ಈ ಕುರಿತಂತೆ ಆದಿಲ್ ಮಾತನಾಡಿದ್ದು, ಬಂಧನ ಭೀತಿಯಲ್ಲಿರುವ ರಾಖಿ ಡ್ರಾಮಾ ಮಾಡುತ್ತಿದ್ದಾಳೆ. ಜೈಲಿಗೆ ಹೋಗೋದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಮಲಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

  • ಬಾಲಿವುಡ್‌ ಡ್ರಾಮಾ ಕ್ವೀನ್‌ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

    ಬಾಲಿವುಡ್‌ ಡ್ರಾಮಾ ಕ್ವೀನ್‌ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

    ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ (Rakhi Sawant) ಸೋಷಿಯಲ್ ಮೀಡಿಯಾದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ತನ್ನ ಸ್ಟೈಲ್ ಮತ್ತು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ರಾಖಿ ಸಾವಂತ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಟಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಖಿ ಸಾವಂತ್ ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆ ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಸಲ್ಮಾನ್ ಮನೆ ಮುಂದೆ ಫೈರಿಂಗ್: 6ನೇ ಆರೋಪಿ ಬಂಧನ

    ರಾಖಿ ಸಾವಂತ್ ಅವರ ಈ ಫೋಟೋಗಳನ್ನು ನೋಡಿದರೆ ಆಕೆಗೆ ಪ್ರಜ್ಞೆ ಇಲ್ಲದೇ ಮಲಗಿದ್ದಾರಾ ಅಥವಾ ಗಾಢ ನಿದ್ರೆಯಲ್ಲಿದ್ದಾರೋ ಎಂಬುದು ತಿಳಿದಿಲ್ಲ. ಫೋಟೋದಲ್ಲಿ ನರ್ಸ್ ಬಿಪಿ ಪರೀಕ್ಷಿಸುತ್ತಿರುವುದನ್ನು ಕಾಣಬಹುದು. ಹಿಂಭಾಗದಲ್ಲಿ ದೊಡ್ಡ ಇಸಿಜಿ ಯಂತ್ರವನ್ನೂ ಅಳವಡಿಸಲಾಗಿದೆ. ಸದ್ಯ ಆಕೆಗೆ ಗಂಭೀರ ಹೃದಯ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ನಟಿಗೆ ಏನಾಗಿದೆ ಎಂಬ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

    ರಾಖಿ ಸಾವಂತ್ ಈ ಹಿಂದೆಯೂ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ಹೊಟ್ಟೆಯಲ್ಲಿ ಗಡ್ಡೆ ಇತ್ತು ಅದಕ್ಕಾಗಿ ಆಪರೇಷನ್ ಮಾಡಲಾಗಿದೆ ಎಂದು ಹೇಳಿದ್ದರು.

  • ಮಾಜಿಪತಿ ಜೊತೆ ಬೀದಿಯಲ್ಲಿ ಕಾಣಿಸಿಕೊಂಡ ನಟಿ ರಾಖಿ ಸಾವಂತ್

    ಮಾಜಿಪತಿ ಜೊತೆ ಬೀದಿಯಲ್ಲಿ ಕಾಣಿಸಿಕೊಂಡ ನಟಿ ರಾಖಿ ಸಾವಂತ್

    ರಿತೇಶ್ (Ritish) ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ಅವರಿಂದ ಡಿವೋರ್ಸ್ ಪಡೆದಿದ್ದರು ರಾಖಿ ಸಾವಂತ್. ಆನಂತರವೇ ಅವರು ಮೈಸೂರಿನ ಹುಡುಗ ಆದಿಲ್ ಜೊತೆ ನಿಕಾ ಮಾಡಿಕೊಂಡಿದ್ದರು. ಆದಿಲ್ ಮೇಲೂ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸಿದ್ದರು. ಆದಿಲ್ ನಿಂದ ದೂರವಾದ ನಂತರ ಮತ್ತೆ ಹಳೆ ಗಂಡನ ಪಾದವೇ ಗತಿ ಎನ್ನುವಂತೆ ರಿತೇಶ್ ಜೊತೆ ಸೇರಿದ್ದಾರೆ ರಾಖಿ.

    ಕ್ಯಾಮೆರಾ ಕಣ್ಣಿಗೆ ಮಾಜಿಪತಿಯ ಜೊತೆ ಕಾಣಿಸಿಕೊಂಡಿರುವ ರಾಖಿ, ಈ ಇಬ್ಬರೂ ಸೇರಿ ಆದಿಲ್ ಮೇಲೆ ಆರೋಪ ಮಾಡಿದ್ದಾರೆ. ಕೋರ್ಟ್ ವಿಷಯದಲ್ಲಿ ಆದಿಲ್ ಸುಳ್ಳು ಹೇಳುತ್ತಿದ್ದಾನೆ. ನಾನು ಜೈಲಿಗೆ ಹೋಗಲಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ. ನಾನು ಅದನ್ನು ಕೇಳಿ ಮಜಾ ಮಾಡುತ್ತಿದ್ದೇನೆ ಎಂದಿದ್ದಾರೆ ರಾಖಿ.

    ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಾಲಿವುಡ್ ನಟಿ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ರಾಖಿ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಈಗಾಗಲೇ  ತಿರಸ್ಕರಿಸಿದೆ. ಹಾಗಾಗಿ ರಾಖಿ ಇದೀಗ ಸುಪ್ರೀಂ ಕೋರ್ಟ್ (Supreme Court)  ಮೆಟ್ಟಿಲು ಏರಿದ್ದರು.

    ತಮ್ಮ ಖಾಸಗಿ ವಿಡಿಯೋಗಳನ್ನು ರಾಖಿ ಸಾವಂತ ಇತರರಿಗೆ ಹಂಚುತ್ತಿದ್ದಾರೆ. ಇದರಿಂದ ಮಾನನಷ್ಟವಾಗುತ್ತಿದೆ ಎಂದು ರಾಖಿ ಮಾಜಿ ಗೆಳೆಯ ಆದಿಲ್ (Adil Khan) ದೂರು ನೀಡಿದ್ದರು. ಜೊತೆಗೆ ಗಂಭೀರ ಆರೋಪವನ್ನೂ ಅವರು ಮಾಡಿದ್ದರು. ಈ ನಡುವೆ ಆದಿಲ್ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ (Somi Khan) ಜೊತೆ ಮದುವೆ (Marriage) ಆಗಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿದ್ದರು.

     

    ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್‌ಗೆ (Rakhi Sawant) ಕೈ ಕೊಟ್ಟು ಸೀಕ್ರೆಟ್ ಆಗಿ ಆದಿಲ್ ಖಾನ್ 2ನೇ ಮದುವೆಯಾಗಿದ್ದಾರೆ. ‘ಬಿಗ್ ಬಾಸ್ ಹಿಂದಿ 12’ರ (Bigg Boss Hindi 12) ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ.