Tag: ರಾಕ್ ಸ್ಪೇಸ್

  • ಬೆಳಗಾವಿಯಲ್ಲಿ ಹೂಡಿಕೆಗೆ ಅಮೆರಿಕದ ರಾಕ್ ಸ್ಪೇಸ್ ಕಂಪನಿ ಆಸಕ್ತಿ – ಸಚಿವರರೊಂದಿಗೆ ಮಾತುಕತೆ

    ಬೆಳಗಾವಿಯಲ್ಲಿ ಹೂಡಿಕೆಗೆ ಅಮೆರಿಕದ ರಾಕ್ ಸ್ಪೇಸ್ ಕಂಪನಿ ಆಸಕ್ತಿ – ಸಚಿವರರೊಂದಿಗೆ ಮಾತುಕತೆ

    ಬೆಳಗಾವಿ: ಅಮೆರಿಕದ ರಾಕ್ ಸ್ಪೇಸ್ ಕಂಪನಿಯು (America Rock Space Company) ಬೆಳಗಾವಿಯಲ್ಲಿ (Belagavi) ತನ್ನ ಕ್ಲೌಡ್ ತಂತ್ರಜ್ಞಾನದ ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಐಟಿ-ಬಿಟಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ Dr. (Ashwathnarayan) ಅವರೊಂದಿಗೆ ಪೂರ್ವಭಾವಿ ಮಾತುಕತೆ ನಡೆಸಿದೆ.

    ಇಲ್ಲಿನ ಸುವರ್ಣಸೌಧದ ವಿಧಾನಪರಿಷತ್ ಮೊಗಸಾಲೆಯಲ್ಲಿ ನಡೆದ ಮಾತುಕತೆಯಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಮುಂತಾದ ಪ್ರಮುಖ ಅಂಶಗಳನ್ನು ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಕಂಪನಿಯ ಪರವಾಗಿ ಅದರ ಸಿಇಒ ಅಮರ್ ಮಲೆತೀರ ಇದ್ದರು. ಇದನ್ನೂ ಓದಿ: ಕೊರಿಯರ್ ಶಾಪ್‍ನಲ್ಲಿ ಮಿಕ್ಸಿ ಸ್ಫೋಟ ಕೇಸ್- ಬಾಂಬ್ ನಿಷ್ಕ್ರಿಯದಳ, ತಜ್ಞರಿಂದ ಪರಿಶೀಲನೆ

    ಈ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ಕರ್ನಾಟಕವು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಅತ್ಯುತ್ತಮ ಕಾರ್ಯ ಪರಿಸರ ಹೊಂದಿದೆ. ಜೊತೆಗೆ ಸರ್ಕಾರದ ನೀತಿಗಳು ಸಂಶೋಧನೆ ಮತ್ತು ಅಭಿವೃದ್ಧಿ, ಹಾಗೂ ಉತ್ಪಾದನೆಗೆ ಪೂರಕವಾಗಿವೆ. ಇದರ ಜೊತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ವ್ಯವಸ್ಥೆ ಇದೆ. ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯಲ್ಲಿ ನೆಲೆಯೂರಿದರೆ ಅಪಾರ ಬಂಡವಾಳ ಹರಿದು ಬರಲಿದ್ದು, ಸ್ಥಳೀಯ ಪ್ರತಿಭಾವಂತರಿಗೆ ಉದ್ಯೋಗದ ಅವಕಾಶಗಳ ಬಾಗಿಲು ತೆರೆಯಲಿದೆ. ಇದರಿಂದ ಅನಗತ್ಯ ವಲಸೆ ತಪ್ಪಿ, ಪ್ರಾದೇಶಿಕ ಅಸಮತೋಲನ ನಿವಾರಣೆಯೂ ಆಗಲಿದೆ ಎಂದು ಅವರು ನುಡಿದರು. ಬೆಂಗಳೂರಿನ ಆಚೆಗೂ ಉದ್ಯಮಗಳು ಬರಬೇಕು ಎನ್ನುವುದು ಸರ್ಕಾರದ ನೀತಿಯಾಗಿದೆ. ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯನ್ನು ಆಯ್ದುಕೊಂಡಿರುವುದು ಸ್ವಾಗತಾರ್ಹ ಎಂದರು. ಇದನ್ನೂ ಓದಿ: ನನಗೆ ನಿದ್ದೆಯಿಲ್ಲ, ಆರೋಗ್ಯದಲ್ಲಿ ಸಮಸ್ಯೆ ಇದೆ: ಹೆಚ್‌ಡಿಕೆ

    ಚರ್ಚೆಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]