Tag: ರಾಕ್ ಲೈನ್ ವೆಂಕಟೇಶ್

  • ಶಿವರಾಜ್ ಕುಮಾರ್, ಪ್ರಭುದೇವ್ ಕಾಂಬಿನೇಷನ್ ಚಿತ್ರಕ್ಕೆ ಇಂದು ಮುಹೂರ್ತ

    ಶಿವರಾಜ್ ಕುಮಾರ್, ಪ್ರಭುದೇವ್ ಕಾಂಬಿನೇಷನ್ ಚಿತ್ರಕ್ಕೆ ಇಂದು ಮುಹೂರ್ತ

    ದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ತೆರೆ ಹಂಚಿಕೊಳ್ಳುತ್ತಿದ್ದು, ಈ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನಡೆಯಿತು. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ಹೊಸ ಬಗೆಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರಂತೆ ನಿರ್ದೇಶಕರು. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಸದ್ಯಕ್ಕೆ ಪ್ರೊಡಕ್ಷನ್ ನಂ 27 ಎಂದು ಹೆಸರಿಡಲಾಗಿದೆ.

    ಮಹೂರ್ತ ಸಮಾರಂಭಕ್ಕೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು. ರಾಕ್ ಲೈನ್ ಸ್ಟುಡಿಯೋದಲ್ಲಿರುವ ದೇವಸ್ಥಾನದಲ್ಲೇ ಸಿನಿಮಾದ ಮುಹೂರ್ತ ನಡೆಯಿತು. ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆ ಪ್ರಭುದೇವ ನಡೆಸುತ್ತಿದ್ದರೂ, ಇಂದು ಅವರು ಮುಹೂರ್ತಕ್ಕೆ ಹಾಜರಾಗಿರಲಿಲ್ಲ. ಬೇರೊಂದು ಕಾರ್ಯದಲ್ಲಿ ಅವರು ಬ್ಯುಸಿ ಆಗಿರುವುದರಿಂದ ವಿಡಿಯೋ ಸಂದೇಶವೊಂದನ್ನು ಅವರು ಕಳುಹಿಸಿದ್ದರು. ಇದನ್ನೂ ಓದಿ:ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

    ಸಿನಿಮಾ ಮಹೂರ್ತಕ್ಕೆ ಹಾಜರಾಗಲು ಆಗುತ್ತಿಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ. ನಾನೇನಾದರೂ ತಪ್ಪು ಮಾಡಿದರೆ ಎಕ್ಸ್‍ ಕ್ಯೂಸ್ ಮಾಡಿಕೊಳ್ಳಿ. ನಾನು ಪ್ರಬುದ್ಧ ನಟನಲ್ಲ. ನಾನು ಅಷ್ಟು ಮೆಚ್ಯುರ್ ಆಗಿರೋನಲ್ಲ ಎಂದು ಪ್ರಭುದೇವ್ ವಿಡಿಯೋದಲ್ಲಿ ಹೇಳಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆ ಆಗಿತ್ತು. ಅದೀಗ ನೆರವೇರುತ್ತಿದೆ ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

    Live Tv

  • ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಅಖಾಡಕ್ಕೆ ರಾಕ್ ಲೈನ್ ವೆಂಕಟೇಶ್ : ಉಲ್ಟಾ ಆದ ಲೆಕ್ಕಾಚಾರ

    ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಅಖಾಡಕ್ಕೆ ರಾಕ್ ಲೈನ್ ವೆಂಕಟೇಶ್ : ಉಲ್ಟಾ ಆದ ಲೆಕ್ಕಾಚಾರ

    ಮೇ 28ರಂದು ನಡೆಯಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ರಂಗೇರಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಿರ್ಮಾಪಕರಾದ ಭಾ.ಮಾ ಹರೀಶ್ ಮತ್ತು ಸಾ.ರಾ. ಗೋವಿಂದ್ ನಡುವೆ ಪೈಪೋಟಿ ನಡೆದಿತ್ತು. ಅಚ್ಚರಿ ಎನ್ನುವಂತೆ ಮೇ 18 ರಂದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕುತೂಹಲ ಮೂಡಿಸಿದ್ದರು. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಅಧ್ಯಕ್ಷ ಸ್ಥಾನಕ್ಕೆ ರಾಕ್ ಲೈನ್ ವೆಂಕಟೇಶ್ ಸ್ಪರ್ಧೆ ಮಾಡಲಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ. ಅಲ್ಲದೇ, ಇದೊಂದು ಅನಿರೀಕ್ಷಿತ ಬೆಳವಣಿಗೆ ಆದ ಕಾರಣಕ್ಕಾಗಿ ಕೆಲ ಗಂಟೆಗಳ ಕಾಲ, ವಾಣಿಜ್ಯ ಮಂಡಳಿಯಲ್ಲಿ ಏನಾಗುತ್ತಿದೆ ಎನ್ನುವುದೇ ಗೊಂದಲವಾಗಿತ್ತು. ಅಲ್ಲದೇ, ನೇರವಾಗಿ ರಾಕ್ ಲೈನ್ ವೆಂಕಟೇಶ್ ಅವರು ಅಧ್ಯಕ್ಷ ಖುರ್ಚಿಯ ಮೇಲೆಯೇ ಕಣ್ಣು ಇಟ್ಟಿದ್ದಾರೆ ಎನ್ನುವ ಕಾರಣಕ್ಕಾಗಿ ಇತರ ಸ್ಪರ್ಧೆಗಳಲ್ಲಿ ಆತಂಕ ಮೂಡಿತ್ತು. ಆನಂತರ ಅದೆಲ್ಲವೂ ತಿಳಿ ಆಯಿತು.  ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ರಾಕ್ ಲೈನ್ ವೆಂಕಟೇಶ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರದರ್ಶಕರ ವಲಯದಿಂದ ಕಾರ್ಯಕಾರಿ ಮಂಡಳಿಗೆ ಆಯ್ಕೆ ಬಯಸಿ, ನಾಮಪತ್ರ ಸಲ್ಲಿಸಿದ್ದರು. ಅವರು ಪ್ರದರ್ಶಕರ ವಲಯದಿಂದ ಅವಿರೋಧವಾಗಿ ಆಯ್ಕೆಯಾದ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನದ ನಾಮ ಪತ್ರವನ್ನು ವಾಪಸ್ಸು ಪಡೆದಿದ್ದಾರಂತೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಸಾ.ರಾ. ಗೋವಿಂದು ಮತ್ತು ಭಾ.ಮಾ ಹರೀಶ್ ನಡುವೆ ತೀವ್ರ ಪೈಪೋಟಿ ಎದುರಾಗಿದೆ.

  • ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ದೇ ಮೊದಲ ಬಾರಿಗೆ ಇಬ್ಬರೂ ಡಾನ್ಸಿಂಗ್ ಸ್ಟಾರ್ಸ್ ಒಂದಾಗುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಸದ್ಯದಲ್ಲೇ ಮೂಡಿ ಬರಲಿರುವ ಹೊಸ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸುತ್ತಿದ್ದು, ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇರದೇ ಇದ್ದರೂ, ಯೋಗರಾಜ್ ಭಟ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾಗೆ ಚಾಲನೆ ಸಿಗಲಿದೆ ಎಂದು ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್ ಮನೆಯಲ್ಲಿ ಎಲ್ಲರೂ ಭೇಟಿಯಾದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ

    ಸದ್ಯ ಯೋಗರಾಜ್ ಭಟ್ ಗರಡಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅ‍ಲ್ಲದೇ ಇವರ ನಿರ್ದೇಶನದ ಗಾಳಿಪಟ 2 ಸಿನಿಮಾ ರಿಲೀಸ್ ಆಗಬೇಕಿದೆ. ಶಿವರಾಜ್ ಕುಮಾರ್ ಕೂಡ ತಮ್ಮದೇ ನಿರ್ಮಾಣದ ವೇದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಕೆಲಸಗಳ ಮುಂದಿನ ತಿಂಗಳು ಮಧ್ಯಕ್ಕೆ ಒಂದು ಹಂತಕ್ಕೆ ಬರುವುದರಿಂದ ಜೂನ್ ನಲ್ಲಿ ಹೊಸ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಂತಿಂಥ ಹೆಣ್ಣು ಇವಳಲ್ಲಾ ಎಂದು ಪತ್ನಿಯನ್ನು ಹೊಗಳಿದ ನವರಸ ನಾಯಕ ಜಗ್ಗೇಶ್

    ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ಸಿನಿಮಾ ಇದಾಗಿದ್ದರಿಂದ ಹೊಸ ರೀತಿಯ ಕಥೆಗಳನ್ನೇ ಯೋಗರಾಜ್ ಭಟ್ ಬರೆದಿದ್ದಾರಂತೆ. ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ನೃತ್ಯಕ್ಕೂ ಪ್ರಾಧಾನ್ಯತೆ ನೀಡಲಾಗಿದೆಯಂತೆ.

  • ಸಂಗೀತ ದಂತಕಥೆ ಎಂ.ಎಸ್.ಸುಬ್ಬಲಕ್ಷ್ಮೀ ಬಯೋಪಿಕ್ : ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ

    ಸಂಗೀತ ದಂತಕಥೆ ಎಂ.ಎಸ್.ಸುಬ್ಬಲಕ್ಷ್ಮೀ ಬಯೋಪಿಕ್ : ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕ

    ಈ ಹಿಂದೆ ಬಾಲಿವುಡ್ ನ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಸಂಗೀತ ದಂತಕಥೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಜೀವನವನ್ನು ಆಧರಿಸಿದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ವಿಷಯವನ್ನು ಸ್ವತಃ ವಿದ್ಯಾ ಬಾಲನ್ ಅವರು ಖಚಿತ ಪಡಿಸಿದ್ದರು. ಈಗ ಕನ್ನಡ ಸಿನಿಮಾ ರಂಗದಿಂದ ಮತ್ತೊಂದು ಹೊಸ ಸುದ್ದಿ ಬಂದಿದೆ. ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಎಂ.ಎಸ್.ಸುಬ್ಬಲಕ್ಷ್ಮೀ ಬಯೋಪಿಕ್ ಅನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ವಿದ್ಯಾ ಬಾಲನ್ ನಟಿಸಬೇಕಿದ್ದ ಸಿನಿಮಾ ಮತ್ತು ರಾಕ್ ಲೈನ್ ವೆಂಕಟೇಶ್ ಮಾಡುತ್ತಿರುವ ಈ ಸಿನಿಮಾ ಒಂದೇನಾ? ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆದರೆ, ಎಲ್ಲವೂ ಒಂದು ಹಂತದಲ್ಲಿ ಬರುವವರೆಗೂ ಈ ಸಿನಿಮಾದ ಬಗ್ಗೆ ಏನೂ ಹೇಳಲಾರೆ ಎಂದಿದ್ದಾರೆ ರಾಕ್ ಲೈನ್ ವೆಂಕಟೇಶ್. ಆದರೆ, ಎಂ.ಎಸ್.ಸುಬ್ಬಲಕ್ಷ್ಮೀ ಅವರ ಕುರಿತಾಗಿ ಸಿನಿಮಾ ಮಾಡುತ್ತಿರುವ ಕುರಿತು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಸದ್ಯ ಸ್ಕ್ರಿಪ್ಟ್ ಹಂತದಲ್ಲೇ ಸಿನಿಮಾ ಇರುವುದರಿಂದ ಯಾವುದೇ ಮಾಹಿತಿ ಕೊಡಲಾರೆ ಅಂದಿದ್ದಾರಂತೆ ರಾಕ್ ಲೈನ್ ವೆಂಕಟೇಶ್. ‘ಕಥೆ ಓಕೆ ಆಗಿದೆ. ಚಿತ್ರಕಥೆ ರೆಡಿಯಾಗುತ್ತಿದೆ. ಸೂಕ್ತ ಕಲಾವಿದರ ಆಯ್ಕೆಯಾಗಬೇಕು. ಇದೆಲ್ಲವೂ ಆದ ನಂತರ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅದಕ್ಕೆ ತಕ್ಕಂತೇ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ. ಹಲವು ಭಾಷೆಗಳಲ್ಲೂ ಈ ಸಿನಿಮಾ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಸಿನಿಮಾ ಸ್ಕ್ರಿಪ್ಟ್ ಹಂತದಲ್ಲಿ ಇರುವುದರಿಂದ ವಿದ್ಯಾ ಬಾಲನ್ ಮಾಡಬೇಕಿದ್ದ ಸಿನಿಮಾ ಇದೆನಾ? ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

  • ಡಾ.ರಾಜ್ ಸಿನಿಮಾದ ಸಾಂಗ್ ಶಿವಣ್ಣನ ಸಿನಿಮಾಗೆ ಟೈಟಲ್

    ಡಾ.ರಾಜ್ ಸಿನಿಮಾದ ಸಾಂಗ್ ಶಿವಣ್ಣನ ಸಿನಿಮಾಗೆ ಟೈಟಲ್

    ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರಭುದೇವ್ ಒಟ್ಟಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯನ್ನು ನಿನ್ನೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ನಲ್ಲಿ ಓದಿದ್ದೀರಿ. ಈ ಸುದ್ದಿಯ ಮುಂದುವರೆದ ಅಪ್ ಡೇಟ್ ಅಂದರೆ, ಈ ಚಿತ್ರಕ್ಕೆ ವಿಭಿನ್ನವಾಗಿರುವ ಟೈಟಲ್ ಇಡಲಾಗಿದೆ. ಅದೂ ಡಾ.ರಾಜ್ ಕುಮಾರ್ ನಟನೆಯ ಸಿನಿಮಾದ ಸಾಲು ಎನ್ನುವುದು ವಿಶೇಷ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಣ್ಣಾವ್ರ ನಟನೆಯ ‘ಸತ್ಯ ಹರಿಶ್ಚಂದ್ರ’ ಸಿನಿಮಾ ಇನ್ನೂ ನೂರು ವರ್ಷಕ್ಕೂ ಅದು ಎವರ್ ಗ್ರೀನ್ ಸಿನಿಮಾಗಳ ಸಾಲಿನಲ್ಲಿ ಇರಲಿದೆ. ಈ ಚಿತ್ರದ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ ಹಾಡು ಫೇಮಸ್. ಈ ಹೊತ್ತಿಗೂ ಆರ್ಕೆಸ್ಟ್ರಾಗಳಲ್ಲಿ ಈ ಹಾಡು ಹೇಳಿಯೇ ಮುಕ್ತಾಯ ಮಾಡುತ್ತಾರೆ. ಈ ಹಾಡಿನ ಒಂದು ಸಾಲನ್ನು ಚಿತ್ರದ ಟೈಟಲ್ ಆಗಿ ಬಳಕೆಯಾಗುತ್ತಿದ್ದೆ. ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರಕ್ಕೆ ‘ಕುಲದಲ್ಲಿ ಕೀಳಾವುದೋ’ ಎಂದು ಟೈಟಲ್ ಇಡಲಾಗಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಈ ಸಿನಿಮಾದ ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆಷ್ಟೇ ಪ್ರಭುದೇವ್ ನಟನೆಯ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರ ಮಾಡಿದ್ದರು. ಇದೀಗ ಪುನೀತ್ ಅವರ ಸಹೋದರ ಶಿವರಾಜ್ ಕುಮಾರ್ ಜತೆ ಪ್ರಭದೇವ ನಟಿಸಲಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅದ್ಧೂರಿಯ ತಾರಾಗಣವೇ ಸಿನಿಮಾದಲ್ಲಿ ಇರಲಿದೆಯಂತೆ. ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಭಾರೀ ಬಜೆಟ್ ನಲ್ಲಿಯೇ ತಯಾರು ಆಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಬಿಡುಗಡೆಗೆ ರೆಡಿಯಾಗಿದೆ. ಗರಡಿ ಅರ್ಧಕರ್ಧ ಶೂಟಿಂಗ್ ಮುಗಿಸಿದೆ. ಈ ಎರಡೂ ಚಿತ್ರಗಳು ತೆರೆಗೆ ಬಂದ ಮೇಲೆ ಹೊಸ ಸಿನಿಮಾದ ಕೆಲಸ ಶುರುವಾಗಲಿದೆಯಂತೆ. ಈಗಾಗಲೇ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಯೋಗರಾಜ್ ಭಟ್ ಅವರು ಕಥೆ ಬರೆದಿದ್ದು. ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ಮಾಡಲಿದ್ದಾರಂತೆ ಭಟ್.

  • ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್

    ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್

    – ನನ್ನಂತಹ ಸಾವಿರಾರು ಜನ ಕೂಡ ಸಂಸದೆ ಜೊತೆಗಿದ್ದಾರೆ
    – ರವೀಂದ್ರ ಶ್ರೀಕಂಠಯ್ಯ ವಿರುದ್ಧ ವಾಗ್ದಾಳಿ
    – ಕುಮಾರಸ್ವಾಮಿ ಸಿನಿಮಾದಿಂದ ಪರಿಚಯ, ರಾಜಕೀಯದಿಂದಲ್ಲ

    ಬೆಂಗಳೂರು: ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್

    ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಕೆ.ಆರ್.ಎಸ್ ಜಲಾಶಯ ಕುರಿತು ಮಾತಿನ ಸಮರ ಇಂದು ಕೂಡ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ರಾಕ್ ಲೈನ್ ಪ್ರತಿಕ್ರಿಯಿಸಿದರು. ಅಂಬರೀಶ್ ಮುಂದೆ ಕೈ ಕಟ್ಟಿ ಮಾತಾಡುತ್ತಿದ್ರು. ಅವತ್ತು ಅಂಬಿ ಮುಂದೆ 000.5 ವಾಲ್ಯೂಮ್‍ನಲ್ಲಿ ಅಂದು ಮಾತಾಡ್ತಿದ್ದರು. ಇವತ್ತು ಯಾವ್ ಟೋನ್‍ನಲ್ಲಿ ಮಾತಾಡ್ತಿದ್ದೀರಾ. ಇದೆಲ್ಲ ಬೇಡ. ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಅಂತ ಹೇಳುತ್ತಿರಾ? ನಿಮ್ಮ ವಕ್ತಾರರ ಕೈಯಲ್ಲಿ ಅಂಬರೀಶ್ ಬಗ್ಗೆ ಮಾತಾಡ್ತೀರಾ? ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆ ಕುಮಾರಸ್ವಾಮಿ ಕಾಯಿಸಿದ್ದರು. ದೊಡ್ಡಣ್ಣನ ಕೊಟ್ಟ ಮನವಿ ಪತ್ರವನ್ನ ಮುಖದ ಮೇಲೆ ಬಿಸಾಕಿದ್ರಿ. ಇವನು ಏನ್ ಮಾಡಿದ್ದಾನೇ..ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅವಮಾನ ಮಾಡಿದ್ರಿ. ಅಂಬರೀಶ್ ರಿಂದ ಏನೇನು ಲಾಭ ಪಡೆದಿದ್ದೀರಾ ನೆನಪು ಮಾಡಿಕೊಳ್ಳಿ. ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ? ಅಂದು ನಿಖಿಲ್ ನಿಲ್ತಾರೆ ಅಂತ ನೀವು ಬಂದು ಕೇಳಿದ್ರೆ ಸುಮಲತಾ ಅವರೇ ನಿಂತು ನಿಖಿಲ್ ಪರ ಕೆಲಸ ಮಾಡೋರು. ಸುಮಲತಾಗೆ ಚುನಾವಣೆಗೆ ನಿಲ್ಲಲು ಇಷ್ಟ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುಮಲತಾ ಅಡ್ಡ ಮಲಗಿಸಿದ್ರೆ ಅಂತ ಕುಮಾರಸ್ವಾಮಿ ಮಾತಾಡಿದ್ರು. ಅಮೇಲೆ ಕಾವಲು ಕಾಯಬೇಕು ಅಂದೆ ಅಂತ ಹೇಳಿದ್ರಿ. ಚುನಾವಣೆ ಸಮಯದಲ್ಲಿ ಫೈಸ್ಟಾರ್ ಹೋಟೇಲ್ ನಲ್ಲಿ ಕುಳಿತು ನೀವು ಏನ್ ಮಾಡಿದ್ರಿ ಎಲ್ಲರಿಗೂ ಗೊತ್ತು. ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ವಾರ್ನಿಂಗ್ ಮಾಡಿದ್ದಾರೆ.

    ಅವನ ಹಣೆ ಬರಹದಲ್ಲಿ ಇದ್ದ ಹಾಗೆ ಆಗುತ್ತದೆ. ಅಂಬಿ ಅಭಿಮಾನಿಗಳು ಅವರ ಕುಟುಂಬ ಕಾಯುತ್ತಾರೆ. ಸುಮಲತಾ ಮಂಡ್ಯದ ಸೊಸೆಯಾಗಿ, ಮನೆ ಮಗಳಾಗಿ ಮಂಡ್ಯದ ಜನರಿಗಾಗಿ ಡ್ಯಾಮ್ ಬೇಕಾದ್ರು ಕಾಯುತ್ತಾರೆ. ಹೀಗೆ ಕುಮಾರಸ್ವಾಮಿ ಹಿಂದೆ ಇದ್ದವರು ಈಗ ಎಲ್ಲಿ ಇದ್ದಾರೆ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಂಬರೀಶ್ ಬಗ್ಗೆ ಯಾರು ಮಾತಾಡಬೇಡಿ. ರವೀಂದ್ರ ಶ್ರೀಕಂಠಯ್ಯ ಅವರೆ ಬೇಡ. ನಾನು ಸ್ನೇಹಿತನಾಗಿ ಹೇಳುತ್ತಿದ್ದೇನೆ ಎಂದು ಎಚ್ಚರಿಸಿದ್ದಾರೆ.

    ಅಕ್ರಮ ಗಣಿಗಾರಿಕೆ ಮಾಡ್ತಿರೋರು ನೀವು. ಇದು ಸಾಬೀತಾದರೆ ಯಾರು ನಿಮ್ಮ ಜೊತೆ ಇರೊಲ್ಲ. ಇದು ನೆನಪು ಇರಲಿ. ಅಕ್ರಮ ಗಣಿಗಾರಿಕೆ ಜಾಗದಲ್ಲಿ ನಾನು ಹೋಗಿದ್ದೆ. ಅಲ್ಲಿ ಗಲಾಟೆ ಮಾಡಿಸ್ತೀರಾ. ರೋಡ್ ಕ್ಲೋಸ್ ಮಾಡಿಸ್ತೀರಾ. ಏನ್ ಸಾಧನೆ ಮಾಡ್ತಿದ್ದೀರಾ. ಮುಂದೆ ನಿಮ್ಮ ಮನೆ ಹೆಣ್ಣು ಬಗ್ಗೆ ಯಾರಾದ್ರು ಮಾತಾಡಿದ್ರೆ ನೀವು ಮುಂದೆ ಮಾತಾಡೋಕೆ ಆಗೊಲ್ಲ. ಶ್ರೀಕಂಠಯ್ಯ ನೀವು ಎಲ್ಲಿ ಇದ್ರಿ. ಎಸ್‍ಎಂ ಕೃಷ್ಣ ಮಾರ್ಗದರ್ಶನದಲ್ಲಿ ಬಂದವರು. ಅದನ್ನು ಮುಂದುವರಿಸಿ. ಅದನ್ನ ಬಿಟ್ಟು ನಟೋರಿಯಸ್, ಮೀರ್ ಸಾಧಿಕ್ ಅನ್ನೋದು ಯಾಕೆ? ಮುಂದೆ ಬರುವ ಚುನಾವಣೆಯಲ್ಲಿ ಜನ ಎಲ್ಲಾ ತೋರಿಸ್ತೀರಾ ಎಸ್‍ಎಂ ಕೃಷ್ಣ ಮಾರ್ಗದಲ್ಲಿ ಇದ್ದರೆ ನೀವು ಮಂತ್ರಿ ಆಗ್ತೀರಾ. ಇಲ್ಲ ಅಂದ್ರೆ ಶಾಸಕನು ಆಗೊಲ್ಲ. ಶಾಸಕ ಪುಟ್ಟರಾಜ್ ಕಾಂಗ್ರೆಸ್‍ಗೆ ಹೋಗ್ತಿದ್ದಾರೆ ಅಂತ ರವೀಂದ್ರ ಶ್ರೀಕಂಠಯ್ಯ ರನ್ನ ವಜ್ರಮುನಿ ತರಹ ಮಾತಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸುಮಲತಾ ಅಧಿಕೃತ ಕೆಲಸ ಮಧು ನೋಡ್ತಾರೆ. ದೆಹಲಿಗೆ ಹೋದಾಗ ನಾನು, ದೊಡ್ಡಣ್ಣ, ಮಧು ಯಾರಾದ್ರು ಹೋಗ್ತೀವಿ ಸುಮಲತಾ ಟ್ರ್ಯಾಪ್ ಮಾಡೋಕೆ ಯಾರ್ ಯಾರ್‍ನ್ನ ಕಳಿಸಿದ್ರು ಅಂತ ನಮಗೆ ಗೊತ್ತಿದೆ. ಒಂದು ಸಂಸ್ಥೆಯಿಂದ ಒಬ್ಬ ವ್ಯಕ್ತಿಯನ್ನ ಸುಮಲತಾ ಆಫೀಸ್‍ಗೆ ಕಳಿಸ್ತಾರೆ. ಸುಮಲತಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್ ಮಾಡಿದ್ದರು. ಆದ್ರೆ ಸಂಸದರು ನಾವು ಮೀಟ್ ಆಗೊಲ್ಲ ಅಂದ್ರು. ನಂತರ ದೊಡ್ಡ ಸಂಸ್ಥೆ ಮಾತಾಡದೇ ಸರಿ ಹೋಗೊಲ್ಲ ಅಂತ ಮಧು ಮಾತಾಡಿದ್ರು. ಅವನು ಎಲ್ಲಾ ರೆಕಾರ್ಡ್ ಮಾಡುತ್ತಿದ್ದ. ಅವತ್ತು ನಾನು ವಿಡಿಯೋ, ಆಡಿಯೋ ಮಾಡಿದ್ದೇನೆ. ಇವರು ಯಾಕೆ ಆಡಿಯೋ ಬಿಡ್ತಿಲ್ಲ ಅಂದ್ರೆ ಕುಮಾರಸ್ವಾಮಿ ಹೆಸರು ಅದರಲ್ಲಿ ಇದೆ ಅದಕ್ಕೆ ಬಿಡ್ತಿಲ್ಲ ಎಂದು ತಿಳಿಸಿದರು.

    ಅಕ್ರಮ ಗಣಿಗಾರಿಕೆ ಮೆಟೀರಿಯಲ್ ಬೇಡ ಅಂತ ನಾನೇ ಹೇಳಿದೆ. ಇದನ್ನ ಹೇಳೋಕೆ ಯಾಕೆ ಭಯ ಅವರಿಗೆ. ಇದು ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂಠಯ್ಯ ಮಾಡಿರೋ ಪ್ಲ್ಯಾನ್. ಕುಮಾರಸ್ವಾಮಿ ಕಡೆಯಿಂದ ಬಂದವರು ಅವರು. ನಾನ್ಯಾಕೆ ಬಿಡುಗಡೆ ಮಾಡಲಿ. ಅವರು ಏನ್ ಮಾಡ್ತಾರೋ ಮಾಡಲಿ. ನಾನು ಅದಕ್ಕೆ ಕೌಂಟರ್ ಕೊಡ್ತೀನಿ ಎಂದಿದ್ದಾರೆ.

    ಕುಮಾರಸ್ವಾಮಿ ಅವರು ರಾಜಕೀಯದಿಂದ ನನಗೆ ಪರಿಚಯ ಅಲ್ಲ. ಸಿನಿಮಾದಿಂದ ಪರಿಚಯ. ಕುಮಾರಸ್ವಾಮಿ ಬೆಳೆದಿರೋದು ಸಂತೋಷ. ಚಿಕ್ಕ ಚಿತ್ರ ಮಂದಿರ ಇಟ್ಟುಕೊಂಡು ಬೆಳೆದಿದ್ದಾರೆ. ಅವರ ಚಾನಲ್ ಓಪನ್ ಮಾಡೋವಾಗ ಅವರ ಜೊತೆ ನಾನು ಇದ್ದೆ. ನಾನು ಯಾವುದೇ ಕೆಲಸಕ್ಕೆ ಅವ್ರಿಗೆ ಕೇಳಿಲ್ಲ. ರಾಜಕೀಯ ವಿಚಾರ ದಲ್ಲಿ ನಾನು ಏನು ಮಾತಾಡೊಲ್ಲ. ಅಂಬರೀಶ್ ಅಂದ್ರೆ ನಮಗೆ ಪ್ರಾಣ ಎಂದಿದ್ದಾರೆ.

  • ಇಂಗದ ಅಸಮಾಧಾನದ ಬೇಗುದಿ – ಎಂಬಿ ಪಾಟೀಲ್ ಮನೆಗೆ ಅಂಬಿ, ರಾಕ್‍ಲೈನ್ ಭೇಟಿ

    ಇಂಗದ ಅಸಮಾಧಾನದ ಬೇಗುದಿ – ಎಂಬಿ ಪಾಟೀಲ್ ಮನೆಗೆ ಅಂಬಿ, ರಾಕ್‍ಲೈನ್ ಭೇಟಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ರಚನೆಯಿಂದ ಕಾಂಗ್ರೆಸ್ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದಿರುವ ಅತೃಪ್ತಿ, ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಯಾರು ಎಷ್ಟೇ ಪ್ರಯತ್ನ ಪಟ್ರು ಮಂತ್ರಿಗಿರಿ ಕಳೆದುಕೊಂಡವರ ಅಸಮಾಧಾನ ಕಡಿಮೆಯಾಗ್ತಿಲ್ಲ. ಅದ್ರಲ್ಲೂ ಮಾಜಿ ಸಚಿವ ಎಂ.ಬಿ ಪಾಟೀಲ್ ಫುಲ್ ಗರಂ ಆಗಿದ್ದಾರೆ.

    ಗುರುವಾರ ರಾತ್ರಿ ರೆಬಲ್ ಸ್ಟಾರ್ ಅಂಬರೀಶ್, ರಾಕ್‍ಲೈನ್ ವೆಂಕಟೇಶ್, ಜಮೀರ್ ಅಹಮದ್, ಕೃಷ್ಣ ಭೈರೇಗೌಡ, ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಜಿ ಶಾಸಕ ರಾಜು ಅಲಗೂರು, ಹಗರಿ ಬೊಮ್ಮನಹಳ್ಳಿ ಶಾಸಕ ಭೀಮನಾಯಕ್, ಸುಧಾಕರ್, ಜಾರಕಿಹೊಳಿ ಮತ್ತಿತರರು ಸದಾಶಿವನಗರದಲ್ಲಿರುವ ಎಂ ಬಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಸಮಾಧಾನ ಹೇಳಿದ್ದಾರೆ.  ಇದನ್ನೂ ಓದಿ: ಪಕ್ಷಕ್ಕಾಗಿ ಶ್ರಮಿಸಿದ್ದ ನನ್ನನ್ನು ಕಡೆಗಣಿಸಿದ್ದು ಎಷ್ಟು ಸರಿ ಸಿದ್ದರಾಮಯ್ಯ ಎದುರು ಎಂ.ಬಿ. ಪಾಟೀಲ್ ಕಣ್ಣೀರು!

    ಎಂಬಿ ಪಾಟೀಲ್ ಭೇಟಿ ಬಳಿಕ ಕೃಷ್ಣ ಭೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ವರಿಷ್ಠರ ತೀರ್ಮಾನದಿಂದ ಎಂಬಿ ಪಾಟೀಲ್ ಗೆ ಅಸಮಾಧಾನ ಆಗಿರುವುದು ನಿಜ. ಈ ಬಗ್ಗೆ ನಮ್ಮ ವರಿಷ್ಠರಿಗೆ ಮನವರಿಕೆ ಮಾಡಿಕೊಡ್ತೀವಿ. ಕೇವಲ ಎಂಬಿ ಪಾಟೀಲ್ ಗೆ ಮಂತ್ರಿ ಸ್ಥಾನ ಅಲ್ಲ, ಅವರಿಗೆ ಕಾಂಗ್ರೆಸ್ ನಲ್ಲಿ ಉತ್ತಮ ಭವಿಷ್ಯವಿದೆ. ಸದ್ಯ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಅವರು ನಮ್ಮ ಮಾತು ಕೇಳ್ತಾರೆಂಬ ನಂಬಿಕೆ ಇದೆ. ಅವರು ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಅಂತ ಹೇಳಿದ್ರು.

  • ದಿಢೀರನೆ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು ಮರಳಿದ ಸೂಪರ್ ಸ್ಟಾರ್ ರಜನಿಕಾಂತ್

    ದಿಢೀರನೆ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು ಮರಳಿದ ಸೂಪರ್ ಸ್ಟಾರ್ ರಜನಿಕಾಂತ್

    ರಾಯಚೂರು: ಸೂಪರ್ ಸ್ಟಾರ್ ರಜನಿಕಾಂತ್ ದಿಢೀರನೆ ಮಂತ್ರಾಲಯದಲ್ಲಿ ಪ್ರತ್ಯಕ್ಷವಾಗಿ ರಾಯರ ದರ್ಶನ ಪಡೆದು ಮರಳಿದ್ದಾರೆ.

    ಸಿಬ್ಬಂದಿಗಳಿಗೂ ಪೂರ್ವ ಮಾಹಿತಿಯಿಲ್ಲದೆ ಮಠಕ್ಕೆ ಬೆಳಗಿನ ಜಾವ 6.30 ಕ್ಕೆ ಆಗಮಿಸಿದ ರಜನಿ ಮೂಲರಾಮದೇವರ ದರ್ಶನ, ರಾಯರ ವೃಂದಾವನ ದರ್ಶನ ಮಾಡಿ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ರಿಂದ ಆಶೀರ್ವಚನ ಪಡೆದು 7.30 ಕ್ಕೆ ಮಠದಿಂದ ತೆರಳಿದ್ದಾರೆ.

    ಮಠದ ಸಿಬ್ಬಂದಿ ರಜನಿ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಮಠದೊಳಗೆ ಬಂದ ಮೇಲೆ ನಟ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ರಿಂದ ಮಠದ ಮ್ಯಾನೇಜರ್ ರನ್ನ ಸಂಪರ್ಕ ಮಾಡಿರುವ ರಜಿನಿಕಾಂತ್ ಕೆಲವೇ ನಿಮಿಷಗಳ ಕಾಲ ಮಠದಲ್ಲಿದ್ದು ಬಳಿಕ ಅಲ್ಲಿಂದ ತೆರಳಿದ್ದಾರೆ.