Tag: ರಾಕ್ ಲೈನ್ ವೆಂಕಟೇಶ್

  • ದರ್ಶನ್ ಗಾಗಿ ಪೂಜೆ ಮಾಡ್ತಿಲ್ಲ: ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ

    ದರ್ಶನ್ ಗಾಗಿ ಪೂಜೆ ಮಾಡ್ತಿಲ್ಲ: ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ

    ಸಿನಿಮಾ ರಂಗದ ಕಲಾವಿದರ ಸಂಘದಲ್ಲಿ ಇದೇ 13 ಮತ್ತು 14ರಂದು ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜೆಯಲ್ಲಿ ಇಡೀ ಸಿನಿಮಾ ರಂಗ ಭಾಗಿಯಾಗಲಿದೆ ಎಂದು ಹೇಳಲಾಗಿತ್ತು. ಸ್ಟಾರ್ ನಟರೂ ಸೇರಿದಂತೆ ಎಲ್ಲ ಕಲಾವಿದರನ್ನು ಪೂಜೆಗೆ ಆಹ್ವಾನ ಕೂಡ ಮಾಡಲಾಗಿತ್ತು. ಇದೇ ವೇಳೆ ಈ ಪೂಜೆಯು ಜೈಲಿಗೆ ಹೋಗಿರೋ ದರ್ಶನ್ (Darshan) ಗಾಗಿ ಅನ್ನೋ ಸುದ್ದಿಯೂ ಹರಿದಾಡುತ್ತಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.

    ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ಮತ್ತು ನಟ ದೊಡ್ಡಣ್ಣ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಪೂಜೆಯ ಕುರಿತಂತೆ ಮಾತನಾಡಿದರು. ದರ್ಶನ್ ಕುರಿತಂತೆ ಸ್ಪಷ್ಟನೆ ಕೂಡ ನೀಡಿದರು. ರಾಕ್ ಲೈನ್ ವೆಂಕಟೇಶ್ ಮಾತನಾಡಿ, ‘ ಚಿತ್ರರಂಗದ ಒಳಿತಿಗಾಗಿ ಈ ಪೂಜೆ. ದರ್ಶನ್ ಅವ್ರಿಗಾಗಿ ಪೂಜೆ ಮಾಡ್ಬೇಕು ಅಂದ್ರೆ ನಾನು 100 ದೇವಸ್ಥಾನದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಯಾಕೆ ಮಾಡ್ಬೇಕಿತ್ತು. ದರ್ಶನ್ ಮನೇಲಿ ಮಾಡಿಸ್ತಿದ್ದೆ. ಇಲ್ಲಾಂದ್ರೆ ನನ್ನ ಮನೇಲಿ ಪೂಜೆ ಮಾಡಿಸ್ತಿದ್ದೆ. ದರ್ಶನ್ ಸ್ನೇಹಿತ ಆಗಿ ಫೀಲ್ ಮಾಡ್ತೀನಿ. ಅಯ್ಯೋ ಯಾಕೆ ಹೀಗೆ ಮಾಡಿದ್ರು ಅಂತಾ ಅನ್ಕೊತಿವಿ. ದಯವಿಟ್ಟು ದರ್ಶನ್ ವಿಚಾರಕ್ಕೆ ಪೂಜೆ ಮಾಡ್ತಿದಿವಿ ಅಂತಾ ಅನ್ಕೊಂಡ್ರೆ.. ಖಂಡಿತಾ ಅಲ್’ ಅಂದರು.

    ಮುಂದುವರೆದು ಮಾತನಾಡಿದ ರಾಕ್ ಲೈನ್ ‘ಚಿತ್ರೋದ್ಯಮದ ಏಳ್ಗೆಗೆ ಹೋಮ ಮಾಡ್ತಿರೋದು ಕಲಾವಿದರ ಸಂಘ. 13 ಮತ್ತು 14ನೇ ತಾರೀಖು ಅಂಬರೀಶ್ ಭವನದಲ್ಲಿ ಪೂಜೆ ನಡೆಯಲಿದೆ. ಕೊವಿಡ್ ಆದ್ಮೇಲೆ ಮಾಡ್ಬೇಕು ಅಂತಾ ಅನ್ಕೊಂಡಿದ್ವಿ. ಕಾರಣಾಂತರಗಳಿಂದ ಮಾಡೋಕೆ ಆಗ್ಲಿಲ್ಲ. ಈ ತಿಂಗಳು 14ಕ್ಕೆ ಒಳ್ಳೆ ದಿನ. ಇಡೀ ಚಿತ್ರರಂಗದ ಉಳಿವಿಗಾಗಿ ಈ ಹೋಮ ಹಾಗೂ ಪೂಜೆ ಮಾಡೋಕೆ ಹಮ್ಮಿಕೊಂಡಿದ್ದೇವೆ. ಇಡೀ ಚಿತ್ರರಂಗ ಭಾಗಿ ಆಗ್ಬೇಕು ಅನ್ನೋದು ನಮ್ಮ ಉದ್ದೇಶ.  ಥಿಯೇಟರ್ ಸಮಸ್ಯೆ, ಚಿತ್ರಮಂದಿರ ಮುಚ್ಚುತ್ತಿವೆ. ಇವತ್ತಿನ ಚಿತ್ರರಂಗದ ಸ್ಥಿತಿಗತಿಗೆ ಸೊಲುಷನ್ ಬೇಕಿತ್ತು ಹಾಗಾಗಿ ಪೂಜೆ’ ಎಂದಿದ್ದಾರೆ.

    ‘ಬೇರೆ ಭಾಷೆಯ ಸೂಪರ್ ಡೂಪರ್ ಹಿಟ್ ಸಿನಿಮಾನ ಕನ್ನಡಕ್ಕೆ ಡಬ್ ಮಾಡಿ ಇಲ್ಲಿ ರಿಲೀಸ್ ಮಾಡ್ತಿದಾರೆ ನಮ್ಮ ಪ್ರೇಕ್ಷಕರು ನೋಡ್ತಿದಾರೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಈ ಧ್ವನಿ ಇದೆ.  ದಿನನಿತ್ಯ ಊಟ ಹಾಕ್ತಿರೋರು ನಿರ್ಮಾಪಕರು ಎರಡು ವರ್ಷಕ್ಕೆ ಒಂದು ಚಿತ್ರ ಮಾಡ್ತಿದ್ದೀವಿ ಈಗ. ಹೊಸದಾಗಿ ಸಿನಿಮಾ ಮಾಡೋಕೆ ಬರ್ತಿರೋ ನಿರ್ಮಾಪಕರು ಚಿತ್ರರಂಗಕ್ಕೆ ಅನ್ನ ಹಾಕ್ತಿದ್ದಾರೆ. ಅಂತವ್ರ ಉಳಿವಿಗಾಗಿ ಹೋರಾಟ ಮಾಡ್ಬೇಕು’ ಎಂದರು ರಾಕ್ ಲೈನ್ ವೆಂಕಟೇಶ್.

  • ‘ಕಾಟೇರ’ ಬರಹಗಾರರಿಗೆ ಕಾರು ಉಡುಗೊರೆ ನೀಡಿದ ರಾಕ್ ಲೈನ್ ವೆಂಕಟೇಶ್

    ‘ಕಾಟೇರ’ ಬರಹಗಾರರಿಗೆ ಕಾರು ಉಡುಗೊರೆ ನೀಡಿದ ರಾಕ್ ಲೈನ್ ವೆಂಕಟೇಶ್

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿತ್ತು. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿತ್ತು. ಚಿತ್ರ ಶತದಿನೋತ್ಸವ ಕಂಡ ಬೆನ್ನಲ್ಲೇ ಬರಹಗಾರರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ಕಾರುಗಳನ್ನು (Car Gift) ಉಡುಗೊರೆಯಾಗಿ ನೀಡಿದ್ದಾರೆ.

    ಈ ಹಿಂದೆ ‘ಕಾಟೇರ’ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತ್ತು. ಈ ಸಂಭ್ರಮದಲ್ಲಿ ದರ್ಶನ್ ಕಾಣಿಸಿದೇ ಇದ್ದರೂ, ನೂರು ದಿನ ಖುಷಿಯನ್ನು ಅಭಿಮಾನಿಗಳಿಗಾಗಿ ಚಿತ್ರತಂಡ ಹಂಚಿಕೊಂಡಿತ್ತು. ನೂರು ದಿನಗಳನ್ನು (Hundred Days) ಪೂರೈಸಿದ ಬೆನ್ನಲ್ಲೇ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿತ್ತು.

    ಕಾಟೇರ (Kaatera) ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ, ಒಟಿಟಿಯಲ್ಲೂ (OTT) ಸ್ಟ್ರೀಮಿಂಗ್ ಆಗುತ್ತಿದೆ. ಒಟಿಟಿಯಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿರುವುದಕ್ಕೆ ಹುಬ್ಬಳ್ಳಿಯ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದರು. ಆಳೆತ್ತರದ ಕಟೌಟ್ ಹಾಕಿ ಕಾಟೇರನನ್ನು ಸ್ವಾಗತಿಸಿದ್ದರು.

    ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ  ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ Zee5 ವಹಿವಾಟು ಮುಗಿಸಿತ್ತು.

     

    Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು  ಸಿನಿಮಾ ಪ್ರೀಮಿಯರ್ ಆಗಿದೆ.

  • ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ನ್ನಡದ ಹೆಸರಾಂತ ನಟ ದರ್ಶನ್ (Darshan) ಅವರನ್ನು ಟಾರ್ಗೆಟ್ (Target) ಮಾಡಲಾಗ್ತಿದೆಯಾ? ಇಂಥದ್ದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕಾಟೇರ (Katera) ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೊಕೆ ಆಗದೇ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh) ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರೋದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ.

    ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಒಂಥರಾ ಇಡೀ ಸಿನಿಮಾ ಟೀಂಗೆ ತೊಂದರೆ ತಂದೊಡ್ಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ‌ ನಟ ದರ್ಶನ್ ಸೇರಿ 8 ಸ್ಟಾರ್ ಗಳಿಗೆ ನೊಟೀಸ್ ನೀಡಿದ್ದ ಪೊಲೀಸರ ಮುಂದೆ ಎಂಟೂ ಸ್ಟಾರ್ ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ರು.

    ಜನವರಿ ಮೂರನೇ ತಾರೀಖಿನ ರಾತ್ರಿ ಜೆಟ್ಲಾಗ್ ಪಬ್ ನಲ್ಲಿ ನಲ್ಲಿ ಕಾಟೇರ ಸಿನಿಮಾ‌ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸ್ಟಾರ್ಸ್ ಗಳು  ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ ವಿಷ್ಯ ಹೊರಗೆ ಬಂದಿತ್ತು. ಮರುದಿನ ದಾಳಿ ಮಾಡಿದ್ದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾರ್ಟಿಯಲ್ಲಿದ್ದ ನಟ ದರ್ಶನ್ ಸೇರಿ ಎಂಟು ಸ್ಟಾರ್ ಗಳಿಗೆ ನೊಟೀಸ್ ನೀಡಿದ್ರು.

    ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಅಭಿಶೇಕ್ ಅಂಬರೀಶ್, ನಿರ್ದೇಶಕ‌ ತರುಣ್ ಸುದೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಎಂಟೂ ಜನ ನಿನ್ನೆ ಸಂಜೆ ನಾಲ್ಕು ಗಂಟೆಗೆ ಸುಬ್ರಮಣ್ಯ ನಗರ ಠಾಣೆಗೆ ಹಾಜರಾಗಿದ್ರು. ಸುಮಾರು ಒಂದುಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರ ಬಂದ್ಮೇಲೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ದರ್ಶನ್ ನ ಟಾರ್ಗೆಟ್ ಮಾಡಲಾಗಿದೆ ಅಂದ್ರು. ಯಾರು ಮಾಡ್ತಿದ್ದಾರೆ ಅಂತಾನು ಗೊತ್ತು. ಸಿನಿಮಾ ಸಕ್ಸೆಸ್ ಸಹಿಸಿಕೊಳ್ಳಲಾಗದೆ ಈ ರೀತಿ ಮಾಡ್ತಿದ್ದಾರೆ. ಊಟಕ್ಕೆ ಬಂದವರಿಗೆ ನೋಟಿಸ್ ಕೊಟ್ಟಿದ್ದು ಇದೇ ಮೊದಲು. ಬರೀ ಊಟಕ್ಕೆ ಹೋಗಿದ್ವೆ ಹೊರತು ತಡರಾತ್ರಿ ಪಾರ್ಟಿ ಮಾಡಿಲ್ಲ ಅಂತಾ ಆರೋಪ ತಳ್ಳಿ ಹಾಕಿದ್ರು.

     

    ಸ್ಟಾರ್ ನಟರ ಪರ ವಕೀಲ ನಾರಾಯಣಸ್ವಾಮಿ ಮಾತಾಡಿ ಪೊಲೀಸರ ವಿರುದ್ಧ ಅಸಮಧಾನ ತೋರಿದ್ರು. ದರ್ಶನ್ ರನ್ನ ಟಾರ್ಗೆಟ್ ಮಾಡಲಾಗಿದೆ. ಇವ್ರೆಲ್ಲಾ ಊಟಕ್ಕೆ ಹೋಗಿದ್ದು. ಗ್ರಾಹಕರಿಗೆ ನೊಟೀಸ್ ಕೊಡೋಹಾಗಿಲ್ಲ. ಇದು ಕಾನೂನು ವಿರುದ್ಧದ ನೊಟೀಸ್ ಅಂತಾ ಅಸಮಧಾನ ಹೊರ ಹಾಕಿದ್ರು. ಲಾಯರ್ ಮತ್ತು ರಾಕ್ ಲೈನ್ ವೆಂಕಟೇಶ್ ಆಡಿದ ಮಾತುಗಳು ಇದೀಗ ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ.

  • ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

    ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

    ಡರಾತ್ರಿ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರೊಂದಿಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh), ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಟ ದರ್ಶನ್ (Darshan) ಅವರಿಗೆ ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ. ನಾವು ತಡರಾತ್ರಿ ಪಾರ್ಟಿ ಮಾಡಲಿಲ್ಲ. ಊಟಕ್ಕೆ ಕುಳಿತಿದ್ದೆವು. ಅಡುಗೆ ಮಾಡೋದು ತಡವಾಗಿದ್ದರಿಂದ ತಡರಾತ್ರಿ ಆಗಿದೆ ಎಂದರು.

    ತಡರಾತ್ರಿ ಎಷ್ಟೋ ಬಾರ್ ಗಳು ಓಪನ್ ಇರುತ್ತವೆ. ಆದರೆ, ಈವರೆಗೂ ಯಾವುದೇ ಗ್ರಾಹಕನಿಗೆ ಈ ರೀತಿ ನೋಟಿಸ್ ಕೊಟ್ಟಿಲ್ಲ. ಸಾಮಾನ್ಯ ಜನರಿಗೂ, ಸೆಲೆಬ್ರಿಟಿಗಳಿಗೂ ಒಂದೇ ಕಾನೂನು. ನಮಗೆ ಅವತ್ತು ಯಾವ ಪೊಲೀಸರೂ ಕೇಳಿಲ್ಲ. ಯಾರಿಗೂ ತೊಂದರೆ ಆಗುವಂತೆ ನಡೆದುಕೊಂಡಿಲ್ಲವೆಂದು ಇದೇ ಸಂದರ್ಭದಲ್ಲಿ ರಾಕ್ ಲೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

    ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಮುಗಿಯುತ್ತಿದ್ದಂತೆಯೇ ಅಂದೇ ದರ್ಶನ್ ಅಂಡ್ ಟೀಮ್ ಸಕ್ಸಸ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಚಿಕ್ಕಣ್ಣ, ಡಾಲಿ ಧನಂಜಯ್ಯ,  ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯ ನಗರ ಪೊಲೀಸ್ (Police) ವಿಚಾರಣೆಗೆ ಹಾಜರಾಗುವಂತೆ ನಟರಿಗೆ ಮತ್ತು ನಿರ್ಮಾಪಕರಿಗೆ ನೋಟಿಸ್ ನೀಡಿದ್ದರು. ನೋಟಿಸ್ ವಿಚಾರವಾಗಿ ಇಂದು ಎಲ್ಲ ನಟರೂ ವಿಚಾರಣೆಗೆ ಹಾಜರಿದ್ದರು.

  • ‘ರಾಜ ವೀರಮದಕರಿ ನಾಯಕ’ ಚಿತ್ರ ನಿಲ್ಲಲು ಕಾರಣ ಯಾರು?: ದರ್ಶನ್ ಸ್ಫೋಟಕ ಹೇಳಿಕೆ

    ‘ರಾಜ ವೀರಮದಕರಿ ನಾಯಕ’ ಚಿತ್ರ ನಿಲ್ಲಲು ಕಾರಣ ಯಾರು?: ದರ್ಶನ್ ಸ್ಫೋಟಕ ಹೇಳಿಕೆ

    ಅಂದುಕೊಂಡಂತೆ ಆಗಿದ್ದರೆ ಕಾಟೇರ ಸಿನಿಮಾಗೂ ಮೊದಲು ‘ರಾಜ ವೀರಮದಕರಿ ನಾಯಕ’ (Veera Madakari Nayak) ಸಿನಿಮಾ ರೆಡಿ ಆಗಬೇಕಿತ್ತು. ಚಿತ್ರಕ್ಕೆ ಸರಳವಾಗಿ ಮುಹೂರ್ತ ಮಾಡಿ, ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಮಾಡಲಾಗಿತ್ತು. ದರ್ಶನ್ (Darshan) ಅವರಿಗಾಗಿಯೇ ರಾಜೇಂದ್ರ ಸಿಂಗ್ ಬಾಬು  (Rajendra Singh Babu)ಸ್ಕ್ರಿಪ್ಟ್ ಬರೆದು, ನಿರ್ದೇಶನಕ್ಕೆ ಮುಂದಾಗಿದ್ದರು. ರಾಕ್ ಲೈನ್ ವೆಂಕಟೇಶ್ (Rock Line Venkatesh) ಈ ಸಿನಿಮಾದ ನಿರ್ಮಾಪಕರು. ಆದರೆ, ದಿಢೀರ್ ಅಂತ ಸಿನಿಮಾ ನಿಂತಿತು. ಈ ಕುರಿತಂತೆ ದರ್ಶನ್ ಮಾತನಾಡಿದ್ದಾರೆ.

    ತಮ್ಮದೇ ಅಭಿಮಾನಿಗಳ ಸಂಘದ ಡಿ ಕಂಪೆನಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ದರ್ಶನ್, ವೀರ ಮದಕರಿ ನಾಯಕ ಸಿನಿಮಾ ನಿಲ್ಲಲ್ಲು ಕಾರಣ ಯಾರು? ಯಾಕೆ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಯಿತು ಎನ್ನುವ ಕುರಿತು ಬಹಿರಂಗ ಪಡಿಸಿದ್ದಾರೆ. ಹತ್ತು ದಿನಗಳ ಕಾಲ ಶೂಟಿಂಗ್ ಮಾಡಲಾದ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ದರ್ಶನ್ ಆಡಿದ ಮಾತು ಅವರ ಪ್ರಮಾಣಿಕತೆಗೆ ಸಾಕ್ಷಿಯಾಗಿದೆ.

    ಸಿನಿಮಾ ಯಾಕೋ ಹಿಡಿತಕ್ಕೆ ಸಿಗಲಿಲ್ಲ. ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಆಗಿತ್ತು. ವೀರ ಮದಕರಿ ನಾಯಕ ಒಂದು ಜನಾಂಗದ ದೇವರು. ಅವರಿಗೆ ಅಪಚಾರ ಮಾಡಬಾರದು. ಹಾಗಾಗಿ ನಾನೇ ಸಿನಿಮಾ ನಿಲ್ಲಿಸುವಂತೆ ಹೇಳಿದೆ. ಹೇಗೇಗೋ ಸಿನಿಮಾ ಮಾಡಿ ಬೈಯಿಸಿಕೊಳ್ಳೋಕ್ಕಿಂತ ಹಿಡಿತಕ್ಕೆ ಸಿಕ್ಕಾಗ ಮಾಡೋಣ ಅಂತ ಹೇಳಿದೆ ಎಂದಿದ್ದಾರೆ ದರ್ಶನ್. ಈ ಮೂಲಕ ಸಿನಿಮಾ ನಿಲ್ಲಲು ನಾನೇ ಕಾರಣವೆಂದು ಒಪ್ಪಿಕೊಂಡಿದ್ದಾರೆ.

    ವೀರ ಮದಕರಿ ನಾಯಕ ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದು ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಈ ಸುದ್ದಿ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಈ ಸಿನಿಮಾವನ್ನು ಸುದೀಪ್ ಮಾಡಬೇಕು ಎಂದು ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಮಾತನಾಡಿದ್ದರು. ಆದರೆ, ದರ್ಶನ್ ಅವರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಸಿನಿಮಾ ಆಗಲೇ ಇಲ್ಲ.

  • ಬಿಡುಗಡೆಗೂ ಮುನ್ನ ‘ಕಾಟೇರ’ ದಾಖಲೆ: 72 ಗಂಟೆಯಲ್ಲಿ 50 ಸಾವಿರ ಟಿಕೆಟ್ ಮಾರಾಟ

    ಬಿಡುಗಡೆಗೂ ಮುನ್ನ ‘ಕಾಟೇರ’ ದಾಖಲೆ: 72 ಗಂಟೆಯಲ್ಲಿ 50 ಸಾವಿರ ಟಿಕೆಟ್ ಮಾರಾಟ

    ರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾದ ಬಿಡುಗಡೆಗೆ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ಡಿ.29ರಂದು ರಾಜ್ಯದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಬುಕ್ ಮೈ ಶೋನಲ್ಲಿ ಮುಂಗಡ ಟಿಕೆಟ್ ಅನ್ನು ಖರೀದಿಸಬಹುದಾಗಿದೆ. ಟಿಕೆಟ್ ಬುಕ್ಕಿಂಗ್ ಶುರುವಾಗಿ ಕೇವಲ 72 ಗಂಟೆಗಳಲ್ಲಿ ಬರೋಬ್ಬರಿ 50 ಸಾವಿರ ಟಿಕೆಟ್ ಸೇಲ್ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿ 48 ಗಂಟೆಗಳಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಒಂದು ಕಡೆ ಕಲೆಕ್ಷನ್ ನಿಂದಾಗಿ ಸಿನಿಮಾ ಸುದ್ದಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಆಯ್ಕೆ ಮಾಡಿಕೊಂಡ ಕಥೆಯ ಕಾರಣದಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ್ ಸಿನಿಮಾ ಕುರಿತಾದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯು ನೈಜ ಘಟನೆಯನ್ನು ಆಧರಿಸಿದ್ದು, ಅದು ಇಂದಿರಾ ಗಾಂಧಿ (Indira Gandhi) ಕಾಲದ ಕಥೆಯಾಗಿದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

    ಅದು 1974ರ ಕಾಲ. ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾಗ ನಡೆದಿರುವ ಘಟನೆ. ಆವಾಗ ಬಾವಿಯೊಂದರಲ್ಲಿ ತುಂಬಾ ಜನರ ಮೂಳೆಗಳು ಸಿಕ್ಕಿದ್ದವು. ಆ ಮೂಳೆಗಳು ಯಾರವು ಅಂತ ಯಾರಿಗೂ ಗೊತ್ತಿಲ್ಲ. ಆ ಕಹಿ ಘಟನೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ ಎಂದಿದ್ದಾರೆ ದರ್ಶನ್.

     

    ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ತರುಣ್ ಸುದೀರ್ ನಿರ್ದೇಶನದ ಕಾಟೇರ ಚಿತ್ರ ಇದೇ ತಿಂಗಳು 29ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ನಟ ದರ್ಶನರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರೀ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಸಾಂಗ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್‌ ಮಾಡಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಾಣಿಜ್ಯ ನಗರಿಯಲ್ಲಿ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.

  • ‘ಕಾಟೇರ’ ಇಂದಿರಾ ಗಾಂಧಿ ಕಾಲದ ನೈಜ ಕಥೆ : ನಟ ದರ್ಶನ್

    ‘ಕಾಟೇರ’ ಇಂದಿರಾ ಗಾಂಧಿ ಕಾಲದ ನೈಜ ಕಥೆ : ನಟ ದರ್ಶನ್

    ರ್ಶನ್ (Darshan) ನಟನೆಯ ಕಾಟೇರ (Katera) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅದ್ಭುತ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಸಿನಿಮಾ ಕುರಿತಾದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕಥೆಯು ನೈಜ ಘಟನೆಯನ್ನು ಆಧರಿಸಿದ್ದು, ಅದು ಇಂದಿರಾ ಗಾಂಧಿ (Indira Gandhi) ಕಾಲದ ಕಥೆಯಾಗಿದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

    ಅದು 1974ರ ಕಾಲ. ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾಗ ನಡೆದಿರುವ ಘಟನೆ. ಆವಾಗ ಬಾವಿಯೊಂದರಲ್ಲಿ ತುಂಬಾ ಜನರ ಮೂಳೆಗಳು ಸಿಕ್ಕಿದ್ದವು. ಆ ಮೂಳೆಗಳು ಯಾರವು ಅಂತ ಯಾರಿಗೂ ಗೊತ್ತಿಲ್ಲ. ಆ ಕಹಿ ಘಟನೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ ಎಂದಿದ್ದಾರೆ ದರ್ಶನ್.

    ಹುಬ್ಬಳ್ಳಿಯಲ್ಲಿ ಟ್ರೈಲರ್ ರಿಲೀಸ್

    ಇದೇ ಡಿಸೆಂಬರ್‌ 29 ರಂದು ತೆರೆಗೆ ಬರಲು ಸಜ್ಜಾಗಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಮಾಲಾಶ್ರೀ ಪುತ್ರಿ ಆರಾಧನಾ ಜೊತೆಯಾಗಿ ನಟಿಸಿರುವ ʻಕಾಟೇರʼ ಚಿತ್ರದ ಟ್ರೈಲರ್‌ ಶನಿವಾರ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರೈಲರ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ ಸಾಥ್ ನೀಡಿದರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಚಿತ್ರ ತಂಡಕ್ಕೆ ಆಲ್ ದ ಬೆಸ್ಟ್ ಹೇಳಿದರು.

    ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ತರುಣ್ ಸುದೀರ್ ನಿರ್ದೇಶನದ ಕಾಟೇರ ಚಿತ್ರ ಇದೇ ತಿಂಗಳು 29ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ನಟ ದರ್ಶನರ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರ ಭಾರೀ ಹೈಪ್ ಕ್ರಿಯೆಟ್ ಮಾಡಿದೆ. ಬಹಳ ದಿನಗಳ ಬಳಿಕ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಸಾಂಗ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್‌ ಮಾಡಿದೆ. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಾಣಿಜ್ಯ ನಗರಿಯಲ್ಲಿ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆಗೊಳಿಸಲಾಗಿದೆ.

     

    ಅದ್ಧೂರಿ ಸಮಾರಂಭಕ್ಕೆ ಉತ್ತರ ಕರ್ನಾಟಕದ ಮೂಲೆಮೂಲೆಗಳಿಂದ ದರ್ಶನ್‌ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಮೈದಾನದಲ್ಲೆಡೆ ಡಿ ಬಾಸ್ ಘೋಷಣೆ ಮೊಳಗಿತು. ಇನ್ನೂ ನಾಡ ಬಾವುಟದ ಜೊತೆಗೆ ದರ್ಶ ಭಾವಚಿತ್ರದ ಪಟವೂ ರಾರಾಜಿಸಿದವು.

  • ‘ಕಾಟೇರ’ ಚಿತ್ರಕ್ಕೆ 100 ದಿನಗಳ ಶೂಟಿಂಗ್: ದರ್ಶನ್ ಭಾಗವಹಿಸಿದ ದಿನಗಳೆಷ್ಟು?

    ‘ಕಾಟೇರ’ ಚಿತ್ರಕ್ಕೆ 100 ದಿನಗಳ ಶೂಟಿಂಗ್: ದರ್ಶನ್ ಭಾಗವಹಿಸಿದ ದಿನಗಳೆಷ್ಟು?

    ನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ನಿರ್ಮಾಣದ, ತರುಣ್ ಸುಧೀರ್ (Tarun Sudhir) ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಾಯಕರಾಗಿ ನಟಿಸುತ್ತಿರುವ ‘ಕಾಟೇರ’ (Katera) ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.  ನಮ್ಮ ಸಂಸ್ಥೆಯ ನಿರ್ಮಾಣದ ಕಾಟೇರ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಈ ಸ್ಥಳದಲ್ಲಿ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ.  ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ತರುಣ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು.

    ದರ್ಶನ್ ಅವರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ಆರಾಧನಾ ಅಭಿನಯಿಸುತ್ತಿದ್ದಾರೆ. ಜನಪ್ರಿಯ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ  ಧನ್ಯವಾದ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

    ಗುರು ಶಿಷ್ಯರು ಚಿತ್ರದ ನಂತರ ನಾನು ಹಾಗೂ ಜಡೇಶ್ ಅವರು ಸೇರಿ ಈ ಚಿತ್ರದ ಕಥೆ ಬರೆದಿದ್ದೆವು. ದರ್ಶನ್ ಅವರಿಗಾಗಿಯೇ ಬರೆದ ಕಥೆಯಿದು ಎಂದು ಮಾತು ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್,  ಆನಂತರ ದರ್ಶನ್ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಈ ಕಥೆ ಹೇಳಿ ಎಂದರು. ರಾಕ್ ಲೈನ್ ಸರ್ ಕಥೆ ಮೆಚ್ಚಿಕೊಂಡು ಚಿತ್ರವನ್ನು ಪ್ರಾರಂಭಿಸಿದರು. ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಈ ಚಿತ್ರದ ನಾಯಕಿ ಎಂದು ನಿರ್ಮಾಪಕರು, ದರ್ಶನ್ ಅವರು ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದೆವು. ಆರಾಧನಾ ಅದ್ಭುತ ನಟಿ. ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಮುಗಿಸಿದ್ದಾರೆ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು , ಕನಕಪುರ ರಸ್ತೆಯಲ್ಲಿ ಅದ್ದೂರಿ ಹಳ್ಳಿ ಸೆಟ್ ಹಾಕಲಾಗಿದೆ‌. ನೂರು ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದರು.

    ನೂರು ದಿನಗಳ ಚಿತ್ರೀಕರಣದಲ್ಲಿ ನಾನು, ಎಪ್ಪತ್ತೊಂದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌. ತರುಣ್ ಹಾಗೂ ಜಡೇಶ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ.   ಈ ಚಿತ್ರದಲ್ಲಿ ಮಾಲಾಶ್ರೀ ಅವರ ಮಗಳು ಆರಾಧನಾ  ನಾಯಕಿಯಾಗಿ ನಟಿಸಿದ್ದಾರೆ. ಎಂತಹ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಅಭಿನಯಿಸುವ ಕಲಾವಿದೆ ಅವರು. ಹಿರಿಯ ನಟರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಸುಧಾಕರ್ ಅವರ ಛಾಯಾಗ್ರಹಣ ಅದ್ಭುತವಾಗಿದ್ದು, ಈ ಚಿತ್ರದ ಛಾಯಾಗ್ರಹಣಕ್ಕಾಗಿ ಅವರಿಗೆ ಪ್ರಶಸ್ತಿ ಬರಬಹುದು ಎಂಬುದು ನನ್ನ ಅನಿಸಿಕೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು‌.

    ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ ರಾಕ್ ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಾಯಕಿ ಆರಾಧನಾ. ಹಿರಿಯ ನಟರಾದ ಅವಿನಾಶ್, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಛಾಯಾಗ್ರಾಹಕ ಸುಧಾಕರ್, ತರುಣ್ ಸುಧೀರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ಜಡೇಶ್, ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಹಿರಿಯ ನಟಿ ಮಾಲಾಶ್ರೀ ಚಿತ್ರತಂಡಕ್ಕೆ ಶುಭ ಕೋರಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಕ್ತಾಯ ಹಂತದಲ್ಲಿ ‘ಕರಟಕ ದಮನಕ’: ಶಿವಣ್ಣ-ಪ್ರಭುದೇವ ನಟನೆಯ ಚಿತ್ರ

    ಮುಕ್ತಾಯ ಹಂತದಲ್ಲಿ ‘ಕರಟಕ ದಮನಕ’: ಶಿವಣ್ಣ-ಪ್ರಭುದೇವ ನಟನೆಯ ಚಿತ್ರ

    ರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shivaraj Kumar) , ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅಭಿನಯದ, ರಾಕ್ ಲೈನ್ ವೆಂಕಟೇಶ್ (Rock Line Venkatesh) ನಿರ್ಮಾಣದ ಹಾಗೂ ಯೋಗರಾಜ್ ಭಟ್ (Yogaraj Bhatt) ನಿರ್ದೇಶನದ ‘ಕರಟಕ ದಮನಕ’ (Karataka Damanaka) ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಇಂದಿಗೆ ಈ ಚಿತ್ರ ಪ್ರಾರಂಭವಾಗಿ ಒಂದು ವರ್ಷಗಳಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ ಕರಟಕ ದಮನಕ ಎನ್ನುವುದು ಉಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ಮಾಡಿದ್ದಾರೆ. ಅವರಿಬ್ಬರ ಎನರ್ಜಿ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ ಏಳು ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾನು ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಸಹ ನಟಿಸಿದ್ದೇವೆ. ಶೇಕಡಾ ತೊಂಬತ್ತು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡಿನ ಚಿತ್ರೀಕರಣ ಬಾಕಿ ಇದೆ ಎಂದರು.

    ನಮ್ಮ ಸಂಸ್ಥೆಯಿಂದ ಶಿವರಾಜಕುಮಾರ್ ಅವರ ಚಿತ್ರ ಬಂದು ಬಹಳ ವರ್ಷಗಳಾಗಿತ್ತು. ಪ್ರಭುದೇವ ಅವರ ಚಿತ್ರ ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಈ ಇಬ್ಬರು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಯೋಗರಾಜ್ ಭಟ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಹರಿಕೃಷ್ಣ ಸುಮಧುರ ಹಾಡುಗಳನ್ನು ನೀಡುತ್ತಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು. ಇದನ್ನೂ ಓದಿ:ಸುದೀಪ್ ಹುಟ್ಟುಹಬ್ಬ: ಮನೆಗೆ ಬರಬೇಡಿ, ಅಭಿಮಾನಿಗಳ ಭೇಟಿಗೆ ಸ್ಥಳ ಫಿಕ್ಸ್

    ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬವಿದಂತೆ. ಇನ್ನು ಯೋಗರಾಜ್ ಭಟ್ ಅವರ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಸಂತೋಷ. ಗೆಳೆಯ ಪ್ರಭುದೇವ ಹಾಗೂ ನಾನು ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಈ ಚಿತ್ರದಲ್ಲೂ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ ಎಂದು ಶಿವರಾಜಕುಮಾರ್ ತಿಳಿಸಿದರು.

    ಶಿವರಾಜಕುಮಾರ್ ಅವರ ಎನರ್ಜಿ ನೋಡಿದರೆ ಖುಷಿಯಾಗುತ್ತದೆ. ಅವರ ಜೊತೆ ನಟಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ. ಯೋಗರಾಜ್ ಭಟ್ ಅವರ ನಿರ್ದೇಶನ ಹಾಗೂ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಪ್ರಭುದೇವ.  ನಾಯಕಿಯರಾದ ನಿಶ್ವಿಕಾ ನಾಯ್ಡು, ಪ್ರಿಯ ಆನಂದ್, ಹಿರಿಯ ಕಲಾವಿದರಾದ  ಮುಖ್ಯ ಮಂತ್ರಿ ಚಂದ್ರು, ತನಿಕೆಲ್ಲ ಭರಣಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ‌ಛಾಯಾಗ್ರಹಣದ ಬಗ್ಗೆ ಸಂತೋಷ್ ರೈ ಪಾತಾಜೆ ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣ್ಣಿನ ಕಥೆ ಹೇಳುವ ‘ಕಾಟೇರ’: ಚಿತ್ರತಂಡದಿಂದ ಹೊಸ ಅಪ್ ಡೇಟ್

    ಮಣ್ಣಿನ ಕಥೆ ಹೇಳುವ ‘ಕಾಟೇರ’: ಚಿತ್ರತಂಡದಿಂದ ಹೊಸ ಅಪ್ ಡೇಟ್

    ಹೊಸ ಹೊಸ ಪ್ರಯೋಗಾತ್ಮಕ ಚಿತ್ರಗಳಿಂದ ವಿಶ್ವದಾದ್ಯಂತ ಬೆರಗು ಮೂಡಿಸಿರುವ ಸ್ಯಾಂಡಲ್‌ವುಡ್‌ ನಿಂದ ಮತ್ತೊಂದು ಹೊಸ ಪ್ರಯೋಗವೇ ಕಾಟೇರ (Katera). 70-80 ರ ದಶಕದ ಕಲ್ಪನೆ. 1973ರಲ್ಲಿ ಬಂದ ಅದೊಂದು ಕಾಯಿದೆಯ ಪರಿಣಾಮಗಳು. ಹಿಂದೇನಾಗಿತ್ತು, ಮುಂದೇನಾಯ್ತು ಅನ್ನೋದ್ರ ಸೂಕ್ಷ್ಮ ಕಥೆಯೇ ಕಾಟೇರ.

    ಇದರ ಸೃಷ್ಟಿಕರ್ತರು ತರುಣ್ ಸುಧೀರ್ (Tarun Sudhir). ರಾಕ್‌ಲೈನ್ ವೆಂಕಟೇಶ್ (Rock Line Venkatesh) ಅದ್ಧೂರಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ. ದರ್ಶನ್ (Darshan) ಅಭಿನಯದ 56ನೇ ಸಿನಿಮಾ ಕೂಡ ಇದಾಗಿದೆ. ದರ್ಶನ್ ಕಾಟೇರನಾಗಿ ಬರುತ್ತಿದ್ದಾರೆ. ಒಂದೇ ಒಂದು ಲುಕ್‌ನಲ್ಲೇ ಮಾಸ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಿಂದಿನ 55 ಸಿನಿಮಾಗಳಲ್ಲಿ ದರ್ಶನ್ ಕಾಣಿಸ್ಕೊಂಡಿದ್ದೇ ಬೇರೆ. ಇದುವೇ ಬೇರೆ. ಔಟ್ ಆ್ಯಂಡ್ ಔಟ್ ಹಳ್ಳಿ ಬ್ಯಾಕ್‌ಡ್ರಾಪ್.

    ಕಂಪ್ಲೀಟ್ ಮಾಸ್ ಎಲಿಮೆಂಟ್ಸ್ ಒಳಗೊಂಡಿರೋ ಕಾಟೇರ ಚಿತ್ರ ಶೇಕಡಾ 90ರಷ್ಟು ಶೂಟಿಂಗ್ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ-ಒಂದಷ್ಟು ಫೈಟ್ ಸೀನ್ ಬಾಕಿ ಇದೆ. ಇದೇ ವರ್ಷ ಸಿನಿಮಾವನ್ನ ತೆರೆಗೆ ತರುವ ಪ್ಲ್ಯಾನ್ ತಂಡದ್ದು. ಇದನ್ನೂ ಓದಿ:Singham 3: ಅಜಯ್ ದೇವಗನ್ ಸಹೋದರಿಯಾಗಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ

    40 ವರ್ಷದ ಹಿಂದಿನ ಕಥೆಯಾಗಿರೋದ್ರಿಂದ ಇಡೀ ಚಿತ್ರವನ್ನ ಕನಕಪುರದ ಬಳಿ ದೊಡ್ಡ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಮೈಸೂರು ಹಾಗೂ ಹೈದ್ರಾಬಾದ್‌ನಲ್ಲಿ ಸೆಟ್ ಹಾಕಿ ಆ್ಯಕ್ಷನ್ ಹಾಗೂ ಟಾಕಿ ದೃಶ್ಯಗಳನ್ನ ಸೆರೆ ಹಿಡಿಯಲಾಗಿದೆ. `ರಾಬರ್ಟ್’ ಚಿತ್ರದ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ತರುಣ್ ಸುಧೀರ್-ದರ್ಶನ್ ಕಾಂಬೋ ಸಿನಿಮಾ ಇದಾಗಿರೋದ್ರಿಂದ ನಿರೀಕ್ಷೆಯಂತೂ ದುಪ್ಪಟ್ಟು.

    ದರ್ಶನ್ ಜೊತೆ ನಾಯಕಿಯಾಗಿ ಮಾಲಾಶ್ರೀ ಮಗಳು ರಾಧನಾ ರಾಮ್ (Radhana Ram) ಚೊಚ್ಚಲ ಎಂಟ್ರಿ ಚಿತ್ರ ಇದಾಗಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗ್ತಿರೋ ಬಿಗ್ ಬಜೆಟ್ ಚಿತ್ರ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸ ಕಥೆ, ನಯಾ ನೋಟ. ಒಟ್ನಲ್ಲಿ ಸೆಟ್ಟೇರಿದಾಗಿಂದಲೂ ನಿರೀಕ್ಷೆ ಹುಟ್ಟಿಸಿದ `ಕಾಟೇರ’ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸುವ ಹಂತದಲ್ಲಿದೆ. ಸಮಯ ಕೂಡಿ ಬಂದರೆ ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]