Tag: ರಾಕೇಶ್

  • ಭೀಕರ ರಸ್ತೆ ಅಪಘಾತ – ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ಸಾವು

    ಭೀಕರ ರಸ್ತೆ ಅಪಘಾತ – ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ಸಾವು

    ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜ್ಯಸಭಾ ಸಂಸದ ಎನ್‍ಆರ್ ಇಳಂಗೋವನ್ ಅವರ ಪುತ್ರ ರಾಕೇಶ್(22) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಮತ್ತೊರ್ವ ಪ್ರಯಾಣಿಕನೊಂದಿಗೆ ಪುದುಚೇರಿಯಿಂದ ಚೆನ್ನೈಗೆ ರಾಕೇಶ್ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ವಾಹನವು ರಸ್ತೆ ವಿಭಜಕಕ್ಕೆ (ಡಿವೈಡರ್​)  ಡಿಕ್ಕಿ ಹೊಡೆದ ಪರಿಣಾಮ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ ಮತ್ತು ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು

    ಸದ್ಯ ಈ ಘಟನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಗಾಯಾಳು ಪ್ರಯಾಣಿಕನನ್ನು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಮಾಜಿ ಹಿರಿಯ ವಕೀಲರಾದ ಎನ್‍ಆರ್ ಇಳಂಗೋವನ್ ಅವರು 2020ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾದರು. ಇದೇ ಮೊದಲ ಅವರ ಮೊದಲ ಅವಧಿಯಾಗಿದೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು

  • ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ ಪತಿ ರಾಕೇಶ್ ಜೊತೆಗೆ ಹನಿಮೂನ್‍ಗೆ ಹಾರಿದ್ದಾರೆ.

    ಕಳೆದ ವಾರವಷ್ಟೇ ಕುಟುಂಬದವರ ಸಮ್ಮುಖದಲ್ಲಿ ರಾಕೇಶ್ ಜೊತೆಗೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ ಇದೀಗ ಪತಿ ಜೊತೆಗೆ ಮಾಲ್ಡೀವ್ಸ್‌ಗೆ ಹನಿಮೂನ್‍ಗೆ ಹಾರಿದ್ದಾರೆ. ಪತಿ ಜೊತೆಗೆ ಏಕಾಂತವಾಗಿ ಕಾಲ ಕಳೆಯುತ್ತಿರುವ ಅವರು, ಮಾಲ್ಡೀವ್ಸ್‌ನ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ವೀಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮಾಲ್ಡೀವ್ಸ್‌ನ  ಕಡಲ ತೀರದ ದೃಶ್ಯ,  ಏರ್‌ಪೋರ್ಟ್‌, ಮೂನ್ ಲೈಟ್ ಕೆಳಗೆ ಡಿನ್ನರ್ ಮಾಡುತ್ತಿರುವ ದೃಶ್ಯ ಸೇರಿದಂತೆ ಹಲವಾರು ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ನಂತರ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದ ರಾಕೇಶ್ ಜೊತೆಗೆ ಡಿಸೆಂಬರ್ 10-11ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಿಕವಾಗಿ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.  ಇದನ್ನೂ ಓದಿ:  ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.

  • ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕಿರುತೆರೆ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ, ಉದ್ಯಮಿ ರಾಕೇಶ್ ಅವರೊಂದಿಗೆ ಇಂದು ಕುಟುಂಬದವರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಇದೀಗ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದಿರುವ ರಾಕೇಶ್ ಅವರು ಪ್ರಿಯಾಂಕ ಜೊತೆ ಇಂದು ಸಂಪ್ರದಾಯಿಕವಾಗಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

    ರಾಕೇಶ್ ಅವರು ಅಮೆರಿಕಾದ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, 4 ತಿಂಗಳ ಬಳಿಕ ಮತ್ತೆ ವಿದೇಶಕ್ಕೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚಿಂಚೋಳಿ ಅವರ ಮನೆಯಲ್ಲಿ ನಡೆದ ಮೆಹಂದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಈ ಮುನ್ನ ಪ್ರಿಯಾಂಕ ಚಿಂಚೋಳಿ ಅವರು, ರಾಕೇಶ್ ಅವರು ಅಮೆರಿಕದ ಬ್ಯಾಂಕ್ ಒಂದರಲ್ಲಿ ಉಪಾಧ್ಯರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಆತಂಕವಿರುವ ಕಾರಣದಿಂದಾಗಿ ವೀಸಾಗೆ ಸಂಬಂಧಿಸಿದಂತೆ ರಿಜಿಸ್ಟರ್ ಮದುವೆಯ ಪ್ರಮಾಣಪತ್ರದ ಅಗತ್ಯವಿದೆಯಂತೆ. ಹೀಗಾಗಿ ರಿಜಿಸ್ಟರ್ ಮದುವೆಯಾಗಿದ್ದು, ಡಿಸೆಂಬರ್ 10-11ರಂದು ಸಾಂಪ್ರದಾಯಿಕವಾಗಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದೇವೆ ಎಂದು ತಿಳಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.

  • ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು

    ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು

    ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನಿಗೆ ಹೋರಿ ತಿವಿದು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ.

    ಮೃತಪಟ್ಟ ಯುವಕನನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ನಿವಾಸಿ ರಾಕೇಶ್ (25) ಎಂದು ಗುರುತಿಸಲಾಗಿದೆ. ಜಿಲ್ಲೆಯ ಹಲವೆಡೆಗಳಲ್ಲಿ ದೀಪಾವಳಿ ಹಬ್ಬದ ನಂತರ ಹೋರಿ ಬೆದರಿಸುವ ಸ್ಪರ್ಧೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕೋವಿಡ್-19 ಭೀತಿ ಹಾಗೂ ಕಳೆದ ಎರಡು ವರ್ಷದ ಹಿಂದೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಮೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈಗಾಗಿಯೇ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಗೆ ಬ್ರೇಕ್ ಹಾಕಿತ್ತು. ಇದನ್ನೂ ಓದಿ: ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು- 3 ತಿಂಗಳ ಮಗು ಸಾವು

    ಈ ಬಾರಿ ಜಿಲ್ಲೆಯ ಕೆಲವೆಡೆಗಳಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದರೆ, ಇನ್ನು ಕೆಲವೆಡೆಗಳಲ್ಲಿ ಜಿಲ್ಲಾಡಳಿತದ ಗಮನಕ್ಕೆ ಬಾರದೆ ಗ್ರಾಮಸ್ಥರು ಸ್ಪರ್ಧೆ ಆಯೋಜಿಸುತ್ತಿದ್ದಾರೆ. ಶಿಕಾರಿಪುರದ ದೊಡ್ಡಕೇರಿ ಬಡಾವಣೆಯಲ್ಲಿ ಸಹ ಇಂದು ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯಿಂದ ಅಷ್ಟೇ ಅಲ್ಲದೇ ಹೊರ ಜಿಲ್ಲೆಯಿಂದಲೂ ಸಹ ಸ್ಪರ್ಧೆಯಲ್ಲಿ ಹೋರಿಗಳು ಭಾಗವಹಿಸಿದ್ದವು. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಬಂದಿದ್ದ ಯುವಕ ರಾಕೇಶ್‍ನಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಯೊಂದು ಹಿಂಬದಿಯಿಂದ ತಿವಿದಿದೆ. ಹೋರಿ ತಿವಿತಕ್ಕೆ ಒಳಗಾದ ಯುವಕ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಕುರಿತು ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 6.5 ನಿಮಿಷದಲ್ಲಿ ಏರಿದ್ದ ಅಪ್ಪು

     

  • ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ಬೆಂಗಳೂರು: ಸದ್ಯ ಆರೋಗ್ಯ ಸಮಸ್ಯೆ ನಟಿ ರಾಗಿಣಿ ದ್ವಿವೇದಿಯನ್ನು ಕಾಡುತ್ತಿದ್ದು, ಚೇತರಿಕೆ ನಂತರ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಗಿಣಿಗೆ ಬೆನ್ನು ನೋವು ಮತ್ತು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಮನೆಯಲ್ಲಿಯೇ ಅವರು ರೆಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

    ಮೊದಲು ವೈದ್ಯರನ್ನು ಭೇಟಿ ಮಾಡಿ ರಾಗಿಣಿ ಚಿಕಿತ್ಸೆ ಪಡೆಯಬೇಕಿದೆ. ಎರಡು ಮೂರು ದಿನಗಳ ನಂತರ ವಕೀಲರ ಜೊತೆ ಮಾತುಕತೆ ನಡೆಸಬೇಕಾಗಿದೆ. ವಕೀಲರು ಮತ್ತು ವೈದ್ಯರ ಸಲಹೆ ಮೇರೆಗೆ ನಂತರ ರಾಗಿಣಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಸ್ಯಾಂಡಲ್‍ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಸೋಮವಾರ ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

  • ರಾಕೇಶ್ ಜೊತೆಗಿನ ಸ್ನೇಹ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸುಧಾಕರ್

    ರಾಕೇಶ್ ಜೊತೆಗಿನ ಸ್ನೇಹ ಎಂದಿಗೂ ಮರೆಯಲು ಸಾಧ್ಯವಿಲ್ಲ: ಸುಧಾಕರ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ದಿವಂಗತ ರಾಕೇಶ್ ನನ್ನು ಸಚಿವ ಸುಧಾಕರ್ ಇಂದು ನೆನಪು ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ಇಂದು ಮಾಜಿ ಮುಖ್ಯಮಂತ್ರಿ, ವಿಪಕ್ಷನಾಯಕ ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯನವರು ನಮ್ಮನ್ನೆಲ್ಲ ಅಗಲಿ 4 ವರ್ಷಗಳೇ ಕಳೆದವು. ಅವರು ಇದ್ದಾಗ ಅವರ ಜೊತೆಗಿನ ಸ್ನೇಹ ಎಂದೂ ಮರೆಯಲು ಸಾಧ್ಯವಿಲ್ಲ. ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದು ಬರೆದುಕೊಂಡಿದ್ದಾರೆ.

    ವಿದೇಶ ಪ್ರವಾಸದ ಸಂದರ್ಭದಲ್ಲಿ ರಾಕೇಶ್ ಅನಾರೋಗ್ಯಕ್ಕೆ ತುತ್ತಾಗಿದ್ದು. ಹೀಗಾಗಿ ಬೆಲ್ಜಿಯಂನ ಬ್ರಸೆಲ್ಸ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ 2016ರ ಜುಲೈ ತಿಂಗಳಲ್ಲಿ ನಿಧನರಾಗಿದ್ದರು. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಸುಧಾಕರ್ ಗುರುತಿಸಿಕೊಂಡಿದ್ದರು. ಹೀಗಾಗಿ ಸುಧಾಕರ್ ಹಾಗೂ ರಾಕೇಶ್ ಉತ್ತಮ ಸ್ನೇಹಿತರಾಗಿದ್ದರು. ಆದರೆ ಆಪರೇಷನ್ ಕಮಲದ ಸಂದರ್ಭದಲ್ಲಿ ಸುಧಾಕರ್ ಬಿಜೆಪಿ ಪಾಳಯಕ್ಕೆ ಸೇರಿಕೊಂಡಿದ್ದರು.

  • ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಬೆಂಗಳೂರು: ಪತಿಬೇಕು.ಕಾಮ್ ಸಿನಿಮಾದ ನಿರ್ದೇಶಕ ರಾಕೇಶ್ ಮೇಲೆ ಪ್ರಕರಣವೊಂದು ದಾಖಲಾಗಿ ಸುದ್ದಿಯಾಗಿತ್ತು. ಸಹ ನಿರ್ಮಾಪಕರಿಗೆ ರಾಕೇಶ್ ವಂಚನೆ ಮಾಡಿದ್ದಾರೆ ಅಂತ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ಈ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

    ವಿಜಯನಗರದ ಮನೆಯಿಂದ ಅಕ್ಟೋಬರ್ 21ರಂದು ರಾಕೇಶ್ ಅವರನ್ನು ಎಳೆದೊಯ್ದ ನೆಲಮಂಗಲ ಪೊಲೀಸ್ ಕೇಶವ್ ಅಂಡ್ ಟೀಂ ಸೆಟ್ಲ್ ಮೆಂಟ್ ಮಾಡಿಕೊಳ್ಳುವಂತೆ ಧಮ್ಕಿ ಹಾಕಿದ್ದರಂತೆ. ಈ ಹಿಂದೆಯೇ ಚಂದ್ರಾ ಲೇಔಟ್‍ನಲ್ಲಿ ಹಣಕಾಸು ವಿಚಾರವಾಗಿ ನಿರ್ಮಾಪಕ ಮಂಜುನಾಥ್‍ಗೆ ರಾಕೇಶ್ 10 ಲಕ್ಷ ರೂ. ಕೊಟ್ಟಿದ್ದು, ಯಾವುದೇ ಹಣ ಕೊಡಬೇಕಾಗಿಲ್ಲ ಅಂದಿದ್ದರು. ಚಂದ್ರಾ ಲೇಔಟ್ ಕೇಸ್‍ನಲ್ಲಿ ಬೇಲ್ ಪಡೆದಿದ್ದ ಮಂಜುನಾಥ್, ನೆಲಮಂಗಲದಲ್ಲಿ ದೂರು ದಾಖಲಿಸಿದ್ದರು.

    ರಾಕೇಶ್ ಅವರನ್ನ ಕರೆದೊಯ್ದಿದ್ದ ನೆಲಮಂಗಲ ಪೊಲೀಸರು ಮನೆಯವರಿಗೆ ಯಾವುದೇ ವಿಚಾರ ತಿಳಿಸಿರಲಿಲ್ಲ. ಕೊನೆಗೆ ರಾಕೇಶ್ ಸಂಬಂಧಿಕರು ಚಂದ್ರಾ ಲೇಔಟ್ ಠಾಣೆಯ ಪೊಲೀಸರ ಮೊರೆ ಹೋಗಿದ್ದರು. ಆಗ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ನೆಲಮಂಗಲ ಪೊಲೀಸರಿಗೆ ಕರೆ ಮಾಡಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಇದರಿಂದಾಗಿ ನೆಲಮಂಗಲ ಪೊಲೀಸರು ರಾಕೇಶ್ ಅವರಿಂದ ಚೆಕ್‍ಗೆ ಸೈನ್ ಮಾಡಿಸಿಕೊಂಡು ಬಿಟ್ಟು ಕಳಿಸಿದ್ದರು. ಇದೀಗ ಅಕ್ರಮವಾಗಿ ಕೂಡಿಟ್ಟು, ರೌಡಿ ಶೀಟ್ ಓಪನ್ ಮಾಡುದಾಗಿ ಬೆದರಿಸಿದ್ದ ಎಸ್.ಐ.ಮಂಜುನಾಥ್ ಹಾಗೂ ಪೇದೆ ಕೇಶವ್ ಮೇಲೆ ನಿರ್ದೇಶಕ ರಾಕೇಶ್, ಎಸ್‍ಪಿ, ಐಜಿ, ಡಿಜಿ, ಐಜಿಪಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

  • ನಿಖಿಲ್ ರೆಬೆಲ್ ಸ್ಟಾರ್ ಫ್ಯಾನ್ ಅಲ್ವಾ?

    ನಿಖಿಲ್ ರೆಬೆಲ್ ಸ್ಟಾರ್ ಫ್ಯಾನ್ ಅಲ್ವಾ?

    ಬೆಂಗಳೂರು: ತರ್ಲೆ ನನ್ ಮಕ್ಳು ಮತ್ತು ಪತಿಬೇಕು ಡಾಟ್ ಕಾಮ್ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ನಿರ್ದೇಶಕ ರಾಕೇಶ್. ಸದ್ಯ ರಾಕೇಶ್ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಸಿನಿಮಾವನ್ನು ಆರಂಭಿಸುವ ಸಿದ್ದತೆಯಲ್ಲಿದ್ದಾರೆ. ಸದ್ಯ ಮಂಡ್ಯ ಲೋಕಸಭಾ ಚುನಾವಣೆ ಇಂಡಿಯಾದ ಲೆವೆಲ್ಲಿನಲ್ಲಿ ಟಾಕ್ ಕ್ರಿಯೇಟ್ ಮಾಡಿರುವ ಹೊತ್ತಿನಲ್ಲೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಾಕೇಶ್ ಬಿಡುಗಡೆ ಮಾಡಿದ್ದಾರೆ.

    ಒಂದು ಕಡೆ ಮಂಡ್ಯ, ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಮುಖ್ಯವಾಗಿ ಕೇಳಿಬರುತ್ತಿರೋ ಹೆಸರುಗಳು. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕನ್ನಡಚಿತ್ರರಂಗದ ಎಲ್ಲಾ ಹೀರೋಗಳ ಮುಖಗಳನ್ನೂ ನಮೂದಿಸಲಾಗಿದೆ. ಈ ಲಿಸ್ಟಿನಲ್ಲಿ ಎಲ್ಲಿ ಹುಡುಕಿದರೂ ನಿಖಿಲ್ ಕುಮಾರಸ್ವಾಮಿಯವರ ಫೇಸು ಕಾಣಸಿಗುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾಡಿರೋದಾ ಅಥವಾ ಬೈ ಮಿಸ್ಟೇಕ್ ಮಿಸ್ ಆಗಿಬಿಟ್ಟಿದೆಯಾ ಗೊತ್ತಿಲ್ಲ. ಕೆಲವೇ ನಿಮಿಷಗಳ ಹಿಂದೆ ಬಿಡುಗಡೆಯಾಗಿರುವ ಈ ಪೋಸ್ಟರ್ ಸದ್ಯ ಟಾಕ್ ಆಫ್ ದಿ ಟೌನ್ ಎನ್ನುವಂತೆ ಬಗೆಬಗೆಯ ಚರ್ಚೆಗೆ ಕಾರಣವಾಗಿದೆ.

    ಇದರ ಹಿನ್ನೆಲೆ, ಉದ್ದೇಶಗಳೇನು ಅನ್ನೋದನ್ನು ಸ್ವತಃ ನಿರ್ದೇಶಕ ರಾಕೇಶ್ ಬಹಿರಂಗಗೊಳಿಸೋ ತನಕ ಇದು ಮತ್ತಷ್ಟು ಮಸಾಲೆ ಮಾತುಗಳೊಂದಿಗೆ ಬೆರೆತು ಗಾಳಿಸುದ್ದಿಗಳಿಗೆ ಆಹಾರವಾಗೋದಂತೂ ನಿಜ.

    ಅಂದಹಾಗೆ ಇಷ್ಟರಲ್ಲಿಯೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಸಿನಿಮಾ ಮಂಡ್ಯದಲ್ಲೇ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ಚುನಾವಣೆಗೂ ಮುನ್ನ ಶುರುವಾಗುವ ಈ ಸಿನಿಮಾದಲ್ಲಿ ನಾಯಕ ಯಾರು ಅನ್ನೋದು ಸದ್ಯದ ತನಕ ಟಾಪ್ ಸೀಕ್ರೇಟ್ ಆಗಿಯೇ ಉಳಿದಿದೆ. ಅದು ಅಂಬರೀಶ್ ಅವರ ಆಪ್ತ ನಟನೇ ಈ ಚಿತ್ರದ ಹೀರೋ ಅನ್ನೋದಷ್ಟೇ ಈತನಕದ ಮಾಹಿತಿಯಾಗಿದ್ದು, ರೆಬೆಲ್ ಸ್ಟಾರ್ ಫ್ಯಾನ್ ಆಗಿ ಯಾರು ನಟಿಸುತ್ತಾರೆ ಅನ್ನೋ ವಿಚಾರ ಮಂಡ್ಯದ ಸಮಾರಂಭದಲ್ಲಿಯೇ ಬಹಿರಂಗಗೊಳ್ಳಲಿದೆಯಂತೆ!

  • ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

    ಫ್ಯಾನ್ ಆಫ್ ರೆಬೆಲ್ ಸ್ಟಾರ್ ಶುರುವಾಗೋದು ಯಾವಾಗ?

    ಬೆಂಗಳೂರು: ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ನಿರ್ದೇಶಕ ರಾಕೇಶ್ ಹೊಸಾ ಚಿತ್ರಕ್ಕೆ ತಯಾರಿ ನಡೆಸಿರೋದು ಆ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಅನ್ನೋ ಶೀರ್ಷಿಕೆ ಇಟ್ಟಿದ್ದಾರೆ ಅನ್ನೋ ವಿಚಾರ ಈಗಾಗಲೇ ಜಾಹೀರಾಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಹೆಸರೇ ಹೇಳುವಂತೆ ಮಂಡ್ಯದ ಗಂಡು ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಈ ಸಿನಿಮಾದ್ದು. ಈ ಸಿನಿಮಾದಲ್ಲಿ ಯಾರು ಹೀರೋ ಆಗಿ ನಟಿಸುತ್ತಾರೆ ಎಂಬುದನ್ನು ಈ ಕ್ಷಣಕ್ಕೂ ಗೌಪ್ಯವಾಗಿ ಇಡಲಾಗಿದೆ.

    ಒಂದು ಮೂಲದ ಪ್ರಕಾರ ಈ ಚಿತ್ರದ ಹೀರೋ ಅಂಬರೀಶ್ ಅವರ ಪರಮಾಪ್ತರಲ್ಲೊಬ್ಬರು ಅನ್ನೋ ಮಾತೂ ಕೇಳಿಬರುತ್ತಿದೆ. ಅವರು ಯಾರೆಂಬ ವಿಚಾರವನ್ನು ರಾಕೇಶ್ ಇಷ್ಟರಲ್ಲೇ ಜಾಹೀರು ಮಾಡಲಿದ್ದಾರಂತೆ. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಆಪ್ತ ವಲಯದಲ್ಲಿದ್ದ ಆ ಹೀರೋ ಯಾರೆಂಬ ಬಗ್ಗೆ ಈಗಾಗಲೇ ಜನ ಅಂದಾಜು ಊಹಿಸಲು ಶುರು ಮಾಡಿದ್ದಾರೆ. ಆದರೆ ಅವರ್ಯಾರೆಂದು ಕಂಡು ಹಿಡಿಯೋದು ಅಷ್ಟು ಸಲೀಸಿನ ವಿಚಾರವಲ್ಲ. ಯಾಕೆಂದರೆ ಅಂಬಿ ಬಳಗ ತುಂಬಾ ದೊಡ್ಡದು! ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದಲ್ಲಿ ಅಂಬಿ ಬದುಕಿನ ಕಥೆ ಇದೆಯಾ? ಅದು ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರವಾ ಅನ್ನೋದೂ ಕೂಡಾ ಹೀರೋ ಯಾರೆಂಬಷ್ಟೇ ನಿಗೂಢ. ಆದರೆ ಇದು ಮಂಡ್ಯಾ ಸೀಮೆಯ ಹಳ್ಳಿ ವಾತಾವರಣದಲ್ಲಿ ನಡೆಯೋ ಪಕ್ಕಾ ಗ್ರಾಮೀಣ ಸೊಗಡಿನ ಕಥೆ ಹೊಂದಿರೋ ಚಿತ್ರ ಅನ್ನೋದಂತೂ ಸತ್ಯ.

    ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯದ ಮೈದಾನದಲ್ಲಿ ಅಂತಿಮ ದರ್ಶನಕ್ಕಿಟ್ಟಿದ್ದ ಜಾಗದಲ್ಲೇ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಚಿತ್ರದ ಆರಂಭಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಅನ್ನೋ ಮಾತು ಕೇಳಿಬರುತ್ತಿತ್ತು. ಅದು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಮಂಡ್ಯದ ಯಾವುದಾದರೂ ಪ್ರಮುಖ ಸ್ಥಳದಲ್ಲಿ ನಡೆಯೋದು ಖಚಿತ. ಅದು ಎಲೆಕ್ಷನ್ ಮುಗಿದ ನಂತರವಾ ಅಥವಾ ಅದಕ್ಕೆ ಮುಂಚೆಯೇ ಶುರುವಾಗುತ್ತದಾ ಅನ್ನುವುದರ ಮಾಹಿತಿಯಷ್ಟೇ ಹೊರಬೀಳಬೇಕು.

  • ಫ್ಯಾನ್ ಆಫ್ ರೆಬೆಲ್ ಸ್ಟಾರ್ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆ!

    ಫ್ಯಾನ್ ಆಫ್ ರೆಬೆಲ್ ಸ್ಟಾರ್ ಯಾರೆಂಬ ಮಿಲಿಯನ್ ಡಾಲರ್ ಪ್ರಶ್ನೆ!

    ಬೆಂಗಳೂರು:  ಪತಿಬೇಕು ಡಾಟ್ ಕಾಮ್ ಮೂಲಕ ಬೇರೆಯದ್ದೇ ಫ್ಲೇವರಿನ ಚಿತ್ರವೊಂದನ್ನು ಕೊಟ್ಟವರು ನಿರ್ದೇಶಕ ರಾಕೇಶ್. ಈ ಕಾರಣದಿಂದಲೇ ಅವರು ಮುಂದೆ ಯಾವ ಚಿತ್ರ ಮಾಡುತ್ತಾರೆಂಬ ಬಗ್ಗೆ ಕುತೂಹಲವಿತ್ತು. ಇದೀಗ ಹೊಸಾ ಚಿತ್ರಕ್ಕಾಗಿ ರಾಕೇಶ್ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ.

    ಈ ಚಿತ್ರಕ್ಕೆ ವಿಶೇಷವಾದ ಶೀರ್ಷಿಕೆಯೂ ಪಕ್ಕಾ ಆಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ಕ್ಯಾಚೀ ಟೈಟಲ್ ರಿಜಿಸ್ಟರ್ ಕೂಡಾ ಆಗಿದೆ. ಆದರೆ ಈ ಸಿನಿಮಾದ ಹೀರೋ ಯಾರೆಂಬ ವಿಚಾರದಲ್ಲಿ ಮಾತ್ರ ನಿರ್ದೇಶಕ ರಾಕೇಶ್ ಮಹಾ ಕುತೂಹಲವೊಂದನ್ನು ಹುಟ್ಟು ಹಾಕಿ ಬಿಟ್ಟಿದ್ದಾರೆ!

    ಈ ಚಿತ್ರದಲ್ಲಿ ಹೀರೋ ಆಗಲಿರುವವರು ಅಂಬರೀಶ್ ಅವರ ಆಪ್ತ ವಲಯದಲ್ಲಿದ್ದವರಂತೆ. ಅಂಬಿಗೂ ಕೂಡಾ ಅವರಂದ್ರೆ ತುಂಬಾ ಇಷ್ಟವಿತ್ತು. ಸದ್ಯ ರಾಕೇಶ್ ಅವರು ಬಿಟ್ಟುಕೊಟ್ಟಿರೋದು ಇದೊಂದು ಹಿಂಟ್ ಮಾತ್ರ. ಇದೀಗ ಇದರ ಸುತ್ತಲೇ ನಾನಾ ದಿಕ್ಕಿನ ಚರ್ಚೆ ನಡೆಯುತ್ತಿದೆ. ಅಂಬರೀಶ್ ಆಪ್ತ ವಲಯದಲ್ಲಿದ್ದವರ ಚಿತ್ರಾವಳಿಗಳನ್ನ ಹಲವರು ರಿವೈಂಡ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಏನೇ ತಿಪ್ಪರಲಾಗ ಹೊಡೆದರೂ ಈ ಹೀರೋನನ್ನು ಕಂಡು ಹಿಡಿಯೋದು ಅಷ್ಟು ಸಲೀಸಿನ ಸಂಗತಿಯಲ್ಲ.

    ಅಂದಹಾಗೆ ಈ ಚಿತ್ರವನ್ನ ಅಂಬಿ ಅಭಿಮಾನಿಗಳೇ ಸೇರಿಕೊಂಡು ನಿರ್ಮಾಣ ಮಾಡುತ್ತಿರೋದು ವಿಶೇಷ. ಅಂಬರೀಶ್ ಮೇಲೆ ಅಗಾಧ ಅಭಿಮಾನ ಹೊಂದಿದ್ದ ಉದ್ಯಮಿಯೊಬ್ಬರು ಈ ಸಿನಿಮಾಗೆ ಸಾಥ್ ನೀಡುತ್ತಿದ್ದಾರಂತೆ. ಕಡೇಯದಾಗಿ ಅಂಬಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಿಡಲಾಗಿದ್ದ ಮಂಡ್ಯದ ಮೈದಾನದಲ್ಲಿಯೇ ಈ ಚಿತ್ರಕ್ಕೆ ಆರಂಭ ಸಿಗಲಿದೆಯಂತೆ. ಇದೊಂದು ಅಪ್ಪಟ ಮಂಡ್ಯ ಸೀಮೆಯ ಹಳ್ಳಿಗಾಡಿನ ಕಥೆ. ಇದರ ಹೀರೋ ಯಾರೆಂಬುದೂ ಸೇರಿದಂತೆ ಉಳಿಕೆ ವಿವರಗಳು ಹಂತ ಹಂತವಾಗಿ ಹೊರ ಬೀಳಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv