Tag: ರಾಕುಲ್ ಪ್ರೀತ್ ಸಿಂಗ್

  • ಡ್ರಗ್ಸ್ ಕೇಸ್: ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ

    ಡ್ರಗ್ಸ್ ಕೇಸ್: ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ

    ಟಿ ರಾಕುಲ್ ಪ್ರೀತ್  ಸಿಂಗ್‌ (Rakul Preet Singh) ಅವರು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಡ್ರಗ್ಸ್ (Drugs) ವಿಚಾರವಾಗಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ (Money Laundering) ವಿಚಾರಣೆಗೆ ಹಾಜರಾಗುವಂತೆ ನಟಿ ರಾಕುಲ್‌ಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಮತ್ತೆ ನಟಿಗೆ ಸಂಕಷ್ಟ ಎದುರಾಗಿದೆ.

    ಟಾಲಿವುಡ್ (Tollywood) ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (Enforcement Directorate) ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಈ ಹಿಂದೆ ಸೆ. 3, 2021ರಂದು ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.

    ಅವರ ಜೊತೆಗೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಪೈಲಟ್ ರೋಹಿತ್ ರೆಡ್ಡಿ (Pilot Rohith Reddy) ಅವರನ್ನೂ ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆಗೆ ಕರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಡಿ ಮಾದಕವಸ್ತು ಕಳ್ಳಸಾಗಣೆ ಮತ್ತು ಸೇವನೆಯ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಹಲವಾರು ತೆಲುಗು ಕಲಾವಿದರನ್ನು ಪ್ರಶ್ನಿಸಲಾಗಿದೆ. ಇದೀಗ ಮತ್ತೆ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ (Notice) ನೀಡಲಾಗಿದೆ.‌ ಇದನ್ನೂ ಓದಿ: ದೀಪಿಕಾ ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿಯ ಪರ ನಿಂತ ನಟಿ ರಮ್ಯಾ

    2017ರಲ್ಲಿ ಡ್ರಗ್ಸ್ ಪ್ರಕರಣ ಇಡೀ ಟಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ತನಿಖೆ ಇನ್ನೂ ಕೂಡ ನಡೆಯುತ್ತಿದೆ. ತೆಲುಗಿನ ಸ್ಟಾರ್ಸ್ ರವಿತೇಜ (Ravi Teja), ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ತನಿಶ್, ನಂದು, ತರುಣ್ ಮತ್ತು ಬಾಹುಬಲಿ ನಟ ರಾಣಾ ದಗ್ಗುಬಾಟಿ (Rana Daggubati) ಸೇರಿದಂತೆ ಇನ್ನೂ ಅನೇಕರಿಗೆ ಈ ಹಿಂದೆಯೇ ಇಡಿ ಸಮನ್ಸ್ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದ ಶೂಟಿಂಗ್ ಶುರು

    ಕಮಲ್ ಹಾಸನ್ ನಟನೆಯ `ಇಂಡಿಯನ್ 2′ ಚಿತ್ರದ ಶೂಟಿಂಗ್ ಶುರು

    ಸ್. ಶಂಕರ್ ನಿರ್ದೇಶನದ `ಇಂಡಿಯನ್ 2′ (Indian 2) ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರೀಕರಣಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Hassan) ಹಾಜರ್ ಆಗಿದ್ದಾರೆ. ಸದ್ಯ ಈ ಫೋಟೋ ಮತ್ತು ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    `ವಿಕ್ರಮ್’ ಚಿತ್ರದ ಸಕ್ಸಸ್ ನಂತರ `ಇಂಡಿಯನ್ 2′ ಚಿತ್ರವನ್ನ ಕಮಲ್ ಹಾಸನ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಚಿತ್ರದ ಶೂಟಿಂಗ್‌ಗೆ ನಟ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡುವ ಮೂಲಕ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಎಸ್.ಶಂಕರ್ ನಿರ್ದೇಶನದ `ಇಂಡಿಯನ್ 2′ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್‌ನಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಕಮಲ್‌ಗೆ ನಾಯಕಿಯರಾಗಿ ಕಾಜಲ್ ಅಗರ್‌ವಾಲ್, ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ.

    ಬಹುನಿರೀಕ್ಷಿತ `ಇಂಡಿಯನ್ 2′ ಚಿತ್ರದ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ವಿಕ್ರಮ್‌ ಅವತಾರ ನೋಡಿದ ಅಭಿಮಾನಿಗಳು, ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್ ನಟನೆ ನೋಡಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

    ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

    ಬಹುಮುಖ ಪ್ರತಿಭೆ ಶ್ರದ್ಧಾ, ಸೋಷಿಯಲ್ ಮೀಡಿಯಾದಲ್ಲಿ ಪಟ ಪಟ ಮಾತಿನ ಮೂಲಕ `ಅಯ್ಯೋ ಶ್ರದ್ಧಾ’ (Aiyyo Shraddha) ಆಗಿ ಖ್ಯಾತಿಯಾಗಿದ್ದಾರೆ. ಮಂಗಳೂರು ಬ್ಯೂಟಿ ಶ್ರದ್ಧಾ ಪ್ರತಿಭೆ ಇದೀಗ ಬಿಟೌನ್‌ವೆರೆಗೂ ಮುಟ್ಟಿದೆ. ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ಕನ್ನಡತಿ ಶ್ರದ್ಧಾಗೆ ನಟಿಸಲು ಚಾನ್ಸ್ ಸಿಕ್ಕಿದೆ.

    ಮಂಗಳೂರು ಚೆಲುವೆ ಶ್ರದ್ಧಾ ಇದೀಗ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ನಾವು ನಿತ್ಯ ನೋಡುವ ವಿಚಾರವನ್ನೇ ನಮ್ಮ ಕಣ್ಣಿಗೆ ಕಟ್ಟುವಂತೆ ವಿಡಿಯೋ ಮೂಲಕ ತೋರಿಸೋ ಶ್ರದ್ಧಾ ಅವರ ಪ್ರತಿಭೆಗೆ ಕನ್ನಡಿಗರು ಮಾತ್ರವಲ್ಲ, ಹೊರ ರಾಜ್ಯದ ಮಂದಿಯೂ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶ್ರದ್ಧಾ ಬಿಟೌನ್‌ನಲ್ಲಿ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಇದನ್ನೂ ಓದಿ: ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ಬಾಲಿವುಡ್ ನಟ ಆಯುಷ್ಮಾನ್ ಖುರಾನ(Ayushman khurran) ಜೊತೆ `ಡಾಕ್ಟರ್ ಜಿ’ (Doctor G) ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ. ಆಯುಷ್ಮಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಜತೆ ಶ್ರದ್ಧಾ ಕೂಡ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಪಾತ್ರಕ್ಕೆ ಕನ್ನಡದ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Shraddha (@aiyyoshraddha)

    ಅನುಭೂತಿ ನಿರ್ದೇಶನದ ʻಡಾಕ್ಟರ್‌ ಜಿʼ ಚಿತ್ರದಲ್ಲಿ  ಕನ್ನಡದ ನಟಿರೊಬ್ಬರು ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿರೋದು ಅಯ್ಯೋ ಶ್ರದ್ಧಾ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಅವರ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ಮಾಧ್ಯಮಗಳಿಂದ ತೇಜೋವಧೆ – ದೆಹಲಿ ಹೈಕೋರ್ಟ್‌ ಮೊರೆ ಹೋದ ರಾಕುಲ್‌

    ನವದೆಹಲಿ: ಬಾಲಿವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ತನ್ನ ಹೆಸರು ಪ್ರಕಟಣೆಗೆ ತಡೆ ನೀಡಬೇಕೆಂದು ಕೋರಿ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಮಾಧ್ಯಮಗಳು ರಿಯಾ ಚಕ್ರವರ್ತಿ ಹೇಳಿಕೆಯನ್ನು ಆಧಾರಿಸಿ ಡ್ರಗ್ಸ್‌ ಪ್ರಕರಣದಲ್ಲಿ ತನ್ನ ಕಕ್ಷಿದಾರರ  ಹೆಸರನ್ನು ಪ್ರಕಟಿಸುತ್ತಿವೆ. ಈ ರೀತಿ ಸುದ್ದಿ ಪ್ರಸಾರ ಮಾಡುತ್ತಿರುವುದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಲಯ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಕುಲ್‌ ಪರ ವಕೀಲರು ಮನವಿ ಮಾಡಿದ್ದಾರೆ.

    ನ್ಯಾ.ನವೀನ್‌ ಚಾವ್ಲಾ ಅವರಿದ್ದ ಏಕಸದಸ್ಯ ಪೀಠದಲ್ಲಿ ಇಂದು ರಾಕುಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ರಾಕುಲ್‌ ಪರ ವಕೀಲರು, ಡ್ರಗ್ಸ್‌ ಪ್ರಕರಣದಲ್ಲಿ ರಾಕುಲ್‌ಗೆ ಸಂಬಂಧವಿದೆ ಎಂದು ದುರುದ್ದೇಶಪೂರ್ವಕವಾಗಿ ಸುದ್ದಿ ಪ್ರಸಾರವಾಗಿದೆ. ಯಾವುದೋ ಫೋಟೋ, ವಿಡಿಯೋಗಳಿಗೆ ಡ್ರಗ್ಸ್‌ ಪ್ರಕರಣವನ್ನು ಜೋಡಿಸಿ ತೇಜೋವಧೆ ಮಾಡಲಾಗುತ್ತಿದೆ. ಇದು ಸಂವಿಧಾನ ಪರಿಚ್ಛೇದ 21ರ ಅಡಿ ಬರುವ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.

    ವಿಚಾರಣೆ ನಡೆಸಿದ ಕೋರ್ಟ್‌ ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಸುದ್ದಿ ಪ್ರಸಾರ ಸಂಘಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್‌ 15ಕ್ಕೆ ಮುಂದೂಡಿದೆ.

    ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಈಕೆಯ ವಿಚಾರಣೆಯ ಸಂದರ್ಭದಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌, ಸಾರಾ ಆಲಿಖಾನ್‌ ಸಹ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾಳೆ ಎಂಬುದನ್ನು ಎನ್‌ಸಿಬಿ ಮೂಲಗಳನ್ನು ಆಧಾರಿಸಿ ಟೈಮ್ಸ್‌ ನೌ ವರದಿ ಮಾಡಿತ್ತು. ಒಟ್ಟು 25 ಕಲಾವಿದರ ಹೆಸರನ್ನು ರಿಯಾ ಹೇಳಿದ್ದಾಳೆ ಎನ್ನಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎನ್‌ಸಿಬಿ ನಿರ್ದೇಶಕ ಕೆಪಿಎಸ್‌ ಮಲ್ಹೋತ್ರಾ, ಹಲವು ಹೆಸರುಗಳು ಬಂದಿದೆ. ಆದರೆ ತನಿಖೆಯ ಸಂದರ್ಭದಲ್ಲಿ ಹೆಸರುಗಳನ್ನು ಹೇಳುವುದಿಲ್ಲ ಎಂದು ತಿಳಿಸಿದ್ದರು.

  • ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದ ರಾಕುಲ್ ಪ್ರೀತ್ – ವೈರಲ್ ವಿಡಿಯೋದ ಅಸಲಿಯತ್ತೇ ಬೇರೆ

    ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದ ರಾಕುಲ್ ಪ್ರೀತ್ – ವೈರಲ್ ವಿಡಿಯೋದ ಅಸಲಿಯತ್ತೇ ಬೇರೆ

    ಮುಂಬೈ: ಲಾಕ್‍ಡೌನ್‍ನಲ್ಲಿ ಎಣ್ಣೆ ಸಿಗದೆ ಮದ್ಯಪ್ರಿಯರು ಪರದಾಡಿದ್ದರು. ಆದರೆ ಈಗ ಮದ್ಯದಂಗಡಿ ತೆರೆದಿರುವ ಹಿನ್ನೆಲೆ ಕ್ಯೂನಲ್ಲಿ ನಿಂತು ಮದ್ಯಪ್ರಿಯರು ಎಣ್ಣೆ ಖರೀದಿಸುವಲ್ಲಿ ಬ್ಯೂಸಿ ಆಗಿದ್ದಾರೆ. ಮದ್ಯ ಖರೀದಿಗೆ ಪುರುಷರು, ಮಹಿಳೆಯರು, ಯುವಕ-ಯುವತಿಯರು ಕ್ಯೂನಲ್ಲಿನಿಂತ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ರಸ್ತೆ ಬದಿಯ ವೈನ್ ಸ್ಟೋರ್ ನಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಮದ್ಯ ಖರೀದಿಸಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಕೂಡ ವೈರಲ್ ಆಗಿದೆ.

    ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಾಕುಲ್ ವೈನ್ ಸ್ಟೋರ್‍ಗೆ ಹೋಗಿ, ಮದ್ಯ ಖರೀದಿಸಿಕೊಂಡು ಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿದೆ. ರಾಕುಲ್ ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಬರುತ್ತಿದ್ದಾರೆ ಎಂಬ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆದರೆ ಆ ವಿಡಿಯೋ ಅಸಲಿಯತ್ತೆ ಬೇರೆಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    https://www.instagram.com/p/B_ysdMlHBxE/?utm_source=ig_embed

    ರಾಕುಲ್ ಯಾವುದೇ ಮದ್ಯದಂಗಡಿಗೆ ಹೋಗಿರಲಿಲ್ಲ. ಬದಲಿಗೆ ಅವರು ಮೆಡಿಕಲ್ ಶಾಪ್‍ಗೆ ತೆರಳಿ ಔಷಧಿ ತೆಗೆದುಕೊಂಡು ಬರುತ್ತಿದ್ದರು. ಈ ವೇಳೆ ಅವರು ಕೈಯಲ್ಲಿ ಸಿರಪ್ ಬಾಟಲ್ ಹಿಡಿದುಕೊಂಡು ಬರುತ್ತಿದ್ದರು ಎನ್ನಲಾಗಿದ್ದು, ಈ ವಿಡಿಯೋವನ್ನು ಕೆಲವರು ಸೆರೆಹಿಡಿದಿದ್ದರು. ಆದರೆ ಬಳಿಕ ರಾಕುಲ್ ಮದ್ಯವನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಡಿಯೋವನ್ನು ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

    ಆದರೆ ಈ ವಿಡಿಯೋವನ್ನು ನೋಡಿದ ರಾಕುಲ್ ಅಭಿಮಾನಿಗಳು ಸಿಟ್ಟಿಗೆದಿದ್ದು, ಸುಳ್ಳು ಸುದ್ದಿಗಳನ್ನು ಹರಡುವ ಮೊದಲು ಖಚಿತಪಡಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿ ಕಿಡಿಕಾಡಿದ್ದಾರೆ. ಇನ್ನೂ ಕೆಲವರು ರಾಕುಲ್ ಫಿಟ್‍ನೆಸ್‍ಗೆ ಹೆಚ್ಚು ಒತ್ತು ನೀಡುತ್ತಾರೆ, ಅವರು ಹೀಗೆಲ್ಲ ಮದ್ಯ ಸೇವನೆ ಮಾಡಲ್ಲ ಎಂದು ನಟಿ ಪರ ನಿಂತಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ರಾಕುಲ್ ಅವರೇನಾ? ಇಲ್ಲ ಬೇರೆಯವರ ಎಂಬ ಅನುಮಾನಗಳೂ ಇವೆ. ಅದೇನೇ ಇರಲಿ ಅಭಿಮಾನಿಗಳು ಮಾತ್ರ ನೀವೆಷ್ಟೇ ಟ್ರೋಲ್ ಮಾಡಿ, ಆದರೆ ರಾಕುಲ್ ಮಾತ್ರ ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿಲ್ಲ ಎಂದು ನಟಿ ಪರ ನಿಂತಿದ್ದಾರೆ.

    ಸದ್ಯ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ರಾಕುಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಲೈವ್ ಬರುವ ಮೂಲಕ, ಫಿಟ್ನೆಟ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಖುಷಿ ಪಡಿಸುತ್ತಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ರಾಕುಲ್ ಪ್ರೀತ್ ಸಿಂಗ್

    ಲಾಕ್‍ಡೌನ್‍ನಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ರಾಕುಲ್ ಪ್ರೀತ್ ಸಿಂಗ್

    ಮುಂಬೈ: ಸದ್ಯ ಅನೇಕ ನಟ-ನಟಿಯರಲು ಫ್ಯಾಮಿಲಿ ಜೊತೆ ತಮ್ಮ ಲಾಕ್‍ಡೌನ್ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಏನೇನು ಮಾಡುತ್ತಿದ್ದೇವೆ ಎಂದು ಕೂಡ ಫೋಟೋ, ವಿಡಿಯೋ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ. ಈಗ ನಟಿ ರಾಕುಲ್ ಪ್ರೀತ್ ಸಿಂಗ್ ಮನೆಯಲ್ಲಿ ಇದ್ದುಕೊಂಡು ಸಹೋದರನ ಜೊತೆಗೆ ಬಾಲ್ಯದ ಆಟವನ್ನು ಆಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

    ರಾಕುಲ್ ತಮ್ಮ ಸಹೋದರ ಅಮನ್ ಪ್ರೀತ್ ಜೊತೆ ಮನೆಯಲ್ಲಿ ಆಟವಾಡುತ್ತಿರುವ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕಬಡ್ಡಿ ಆಡುತ್ತಾ, ಅಮನ್ ಕಾಲೆಳೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ ಲಾಕ್‍ಡೌನ್ ಅವಧಿಯಲ್ಲಿ ತಮ್ಮ ಬಾಲ್ಯದ ನೆನೆಪನ್ನು ಮೆಲುಕು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    https://www.instagram.com/p/B_rVVBhh9FD/

    ರಾಕುಲ್‍ಗೆ ಅಮನ್ ಪ್ರೀತ್ ಎಂದರೆ ತುಂಬಾ ಇಷ್ಟ. ಇತ್ತೀಚೆಗೆ ನಾನಿನ್ನು ಸಿಂಗಲ್ ಆಗಿ ಇದ್ದೇನೆ. ಅದಕ್ಕೆ ಕಾರಣ ನನ್ನ ಸಹೋದರ ಅಮನ್ ಪ್ರೀತ್ ಸಿಂಗ್, ನಾನು ಶಾಲೆಯಲ್ಲಿ ಯಾವುದಾದರು ಹುಡುಗರೊಂದಿಗೆ ಮಾತನಾಡಲು ಶುರು ಮಾಡಿದರೆ ಅಥವಾ ಹುಡುಗರ ಜೊತೆಗಿದ್ದರೆ ಅದನ್ನು ನೋಡಿ ಅಮನ್ ಮನೆಯಲ್ಲಿ ಹೇಳುತ್ತಿದ್ದ. ಹೀಗಾಗಿ ನಾನು ಏನೇ ಮಾಡಿದರು ಅಮನ್‍ಗೆ ಗೊತ್ತಾಗುತ್ತದೆ. ಆತನಿಂದಾಗಿ ನಾನು ಯಾರು ಜೊತೆಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದರು.

    ಸದ್ಯ ರಾಕುಲ್ ಅವರು ಕಮಲ್ ಹಾಸನ್ ಅಭಿನಯಿಸುತ್ತಿರುವ ಇಂಡಿಯನ್-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಂದ್ರಶೇಖರ್ ಎಳತಿ ನಿರ್ದೇಶನ ಸಿನಿಮಾದಲ್ಲಿ ನಟ ನಿತಿನ್‍ಗೆ ನಾಯಕಿಯಾಗಿ ಸಾಥ್ ನೀಡಲಿದ್ದಾರೆ. ಇತ್ತ ಶಿವಕಾರ್ತಿಕೇಯನ್ ಸಿನಿಮಾದಲ್ಲೂ ರಾಕುಲ್ ಬ್ಯುಸಿಯಾಗಿದ್ದಾರೆ.

    ಸದ್ಯ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ರಾಕುಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಲೈವ್ ಬರುವ ಮೂಲಕ, ಫಿಟ್ನೆಟ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಖುಷಿ ಪಡಿಸುತ್ತಿದ್ದಾರೆ. ರಾಕುಲ್ ತಮಿಳು, ತೆಲಗು, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಅಭಿಮನಿಗಳ ಮನ ಗೆದಿದ್ದಾರೆ.