Tag: ರಾಕುಲ್ ಪ್ರೀತ್ ಸಿಂಗ್

  • Ramayana: ಯಶ್ ಸಿನಿಮಾದಲ್ಲಿ ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್

    Ramayana: ಯಶ್ ಸಿನಿಮಾದಲ್ಲಿ ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್

    ನ್ನಡದ ‘ಗಿಲ್ಲಿ’ (Gilli Film) ನಟಿ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಇದೀಗ ಯಶ್ (Yash) ನಿರ್ಮಾಣದ‌ ರಾಮಾಯಣ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಶೂರ್ಪನಕಿಯಾಗಿ ‘ರಾಮಾಯಣ’ ಚಿತ್ರಕ್ಕೆ ರಕುಲ್ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ; ಮ್ಯೂಸಿಕ್‌ ಡೈರೆಕ್ಟರ್ ಜಿ.ವಿ ಪ್ರಕಾಶ್

    ನ್ಯಾಷನಲ್ ಸ್ಟಾರ್ ಯಶ್ ಸಹ ನಿರ್ಮಾಪಕನಾಗಿ ಕೈಜೋಡಿಸಿರುವ ‘ರಾಮಾಯಣ’ ಸಿನಿಮಾತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಲಂಕಾಧೀಶ ರಾವಣನ ಸಹೋದರಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ.

    ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಬಣ್ಣದ ಹಚ್ಚಿದ ನಟಿ ರಕುಲ್ ತೆಲುಗು ಸಿನಿಮಾಗಳ ನಂತರ ಬಾಲಿವುಡ್‌ನಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಇದೀಗ ರಾಮಾಯಣ ಸಿನಿಮಾದ ಆಫರ್ ಸಿಕ್ಕಾಗ ಸೂಕ್ತ ಅವಕಾಶ ಎನಿಸಿ ನಟಿ ಓಕೆ ಎಂದಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ರಕುಲ್ ಭಾಗಿಯಾಗಲಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕವೂ ನಟಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

  • ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್

    ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್

    ನ್ನಡದ ‘ಗಿಲ್ಲಿ’ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಹುಕಾಲದ ಗೆಳೆಯ ಜಾಕಿ ಭಗ್ನಾನಿ (Jackky Bhagnani) ಜೊತೆ ಹೊಸ ಬಾಳಿಗೆ (Wedding) ಕಾಲಿಟ್ಟಿದ್ದಾರೆ. ಗೋವಾದಲ್ಲಿ ರಾಕುಲ್ ದಂಪತಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಾಕುಲ್‌ ಶೇರ್‌ ಮಾಡಿದ್ದಾರೆ. ಕ್ರೀಮ್‌- ಗೋಲ್ಡನ್‌ ಉಡುಗೆಯಲ್ಲಿ ರಾಕುಲ್‌ ದಂಪತಿ ಮಿಂಚಿದ್ದಾರೆ. ನವಜೋಡಿಗೆ ಫ್ಯಾನ್ಸ್‌ ಶುಭಹಾರೈಸುತ್ತಿದ್ದಾರೆ.

    ಎರಡು ಸಂಪ್ರದಾಯದಂತೆ ವಿವಾಹ ನಡೆದಿದೆ. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಾಕುಲ್‌- ಜಾಕಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯ ಶಾಸ್ತ್ರವೆಲ್ಲ ಫೆ.19ರಿಂದಲೇ ಆರಂಭವಾಗಿತ್ತು. ಫೆ.21ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ರಾಕುಲ್- ಜಾಕಿ ಜೋಡಿ ಮದುವೆಯಾಗಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

    ರಾಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಧನುಷ್ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದ ಟೈಟಲ್ ಫಿಕ್ಸ್

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಾಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಾಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೇಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ನ್ನಡದ ‘ಗಿಲ್ಲಿ’ (Gilli Kannada Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಇದೀಗ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ (Jackky Bhagnani) ಜೊತೆ ಇದೇ ಫೆ.21ರಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ವಿಶೇಷವಾಗಿ ರಾಕುಲ್ ಮದುವೆಯಲ್ಲಿ ಕರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ರಾಜ್ ಕುಂದ್ರಾ ದಂಪತಿ ಹೆಜ್ಜೆ ಹಾಕಲಿದ್ದಾರೆ.

    ರಾಕುಲ್ ಮತ್ತು ಜಾಕಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಲು ಇಡೀ ಬಾಲಿವುಡ್ ರಂಗ ಕಾಯುತ್ತಿದೆ. ನಿರ್ಮಾಪಕ ಜಾಕಿ ತಂದೆ ವಶು ಭಗ್ನಾನಿ ಜೊತೆ ರಾಜ್ ಕುಂದ್ರಾಗೆ ಉತ್ತಮ ಬಾಂಧವ್ಯವಿದೆ. ಹಲವು ವರ್ಷಗಳಿಂದ ಪರಿಚಯ ಇರುವ ಕಾರಣ, ಜಾಕಿ ಮದುವೆಯಲ್ಲಿ ರಾಜ್ (Raj Kundra) ಮತ್ತು ಶಿಲ್ಪಾ ಶೆಟ್ಟಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ.

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು. ಇದನ್ನೂ ಓದಿ:ವಿದ್ಯಾರ್ಥಿನಿಯರ ವಿಚಿತ್ರ ಬೇಡಿಕೆ- ವಿಜಯ್ ದೇವರಕೊಂಡ ಪ್ರತಿಕ್ರಿಯೆ

    ಈ ಸಮಯದಲ್ಲಿ ರಾಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್‌ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ಗೆಳೆಯನ ಜೊತೆಯೆ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ರಾಕುಲ್ ಮದುವೆಯಲ್ಲಿ ವರುಣ್ ಧವನ್, ಇಶಾ ಡಿಯೋಲ್, ಆದಿತ್ಯಾ ರಾಯ್ ಕಪೂರ್- ಅನನ್ಯಾ ಪಾಂಡೆ, ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ದಂಪತಿ, ಶಾರುಖ್ ಖಾನ್ ಫ್ಯಾಮಿಲಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಜೊತೆ ಮೃಣಾಲ್ ಠಾಕೂರ್ ರೊಮ್ಯಾನ್ಸ್

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಾಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೆಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ‌Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

    ‌Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

    ಬಾಲಿವುಡ್‌ನಲ್ಲಿ ಸದ್ಯ ಸಂಚಲನ ಸೃಷ್ಟಿಸುತ್ತಿರುವ ಸಿನಿಮಾ ಅಂದರೆ ರಾಮಾಯಣ. ನಿತೇಶ್ ತಿವಾರಿ ಅವರು ಅಧಿಕೃತ ಘೋಷಣೆ ಮಾಡುವ ಮುನ್ನವೇ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಜಾನ್ವಿ ಕಪೂರ್ ನಟಿಸಿದ್ರೆ ಶೂರ್ಪನಖಿ ಪಾತ್ರಕ್ಕೆ ಕನ್ನಡದ ‘ಗಿಲ್ಲಿ’ (Gilli Kannada Film) ನಟಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ್ದ ಅಧಿಕಾರಿ ಎತ್ತಂಗಡಿ

    ಆದಿಪುರುಷ್ ಸಿನಿಮಾ ನಂತರ ‘ರಾಮಾಯಣ’ (Ramayana) ಕಾವ್ಯ ಆಧರಿಸಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ರಾಮಾಯಣ ಸಿನಿಮಾ ದಿನಕ್ಕೊಂದು ಅಪ್‌ಡೇಟ್ ಹೊರಬೀಳುತ್ತಿದೆ. ಹೀಗಿರುವಾಗ ಬಾಲಿವುಡ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಈಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.

    ರಾಮಾಯಣದಲ್ಲಿ ಇಡೀ ಕಥೆಗೆ ತಿರುವುದು ರಾವಣನ ಸಹೋದರಿ ಶೂರ್ಪನಖಿ. ಹಾಗಾಗಿ ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಈಗ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಇಡೀ ಕಥೆಯಲ್ಲಿ ಶೂರ್ಪನಖಿ ಪಾತ್ರ ಚಿಕ್ಕದು. ಆದರೆ ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಸದ್ಯ ಈ ಪಾತ್ರಕ್ಕಾಗಿ ರಾಕುಲ್ ಪ್ರೀತ್ ಸಿಂಗ್ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

    3 ಭಾಗಗಳಾಗಿ ‘ರಾಮಾಯಣ’ ಚಿತ್ರವನ್ನು ತೆರೆಗೆ ತರುತ್ತಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ಪಾರ್ಟ್-1 ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಕೈಕೆಯಿ ಪಾತ್ರಕ್ಕೆ ಲಾರಾ ದತ್ತಾ, ವಿಭಿಷಣ ಪಾತ್ರಕ್ಕೆ ವಿಜಯ್ ಸೇತುಪತಿ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಲಾಗಿತ್ತು. ಇದೀಗ ಶೂರ್ಪನಖಿ ಪಾತ್ರಕ್ಕಾಗಿ ಈಗಾಗಲೇ ಕನ್ನಡದ ‘ಗಿಲ್ಲಿ’ ನಟಿ ಲುಕ್ ಟೆಸ್ಟ್ ಸಹ ನಡೆದಿದೆ ಎನ್ನಲಾಗ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ.

    ದೆಹಲಿ ಬೆಡಗಿ ರಾಕುಲ್ ಮೊದಲು ನಟಿಸಿದ್ದು, ಕನ್ನಡದ ‘ಗಿಲ್ಲಿ’ ಸಿನಿಮಾದಲ್ಲಿ ಎಂಬುದು ವಿಶೇಷ. ಖ್ಯಾತ ನಟ ಜಗ್ಗೇಶ್ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ರಾಕುಲ್ ಸಿನಿಮಾ ಜರ್ನಿ ಶುರು ಮಾಡಿದ್ದರು. ಇದೀಗ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ರಾಕುಲ್ ನೆಲೆ ಗಿಟ್ಟಿಸಿಕೊಂಡಿದ್ದಾರೆ.

  • ಎದೆಯ ಗೀಟು ಕಾಣುವಂತೆ ಕ್ಯಾಮೆರಾಗೆ ಪೋಸ್‌ ಕೊಟ್ಟ ‘ಗಿಲ್ಲಿ’ ನಟಿ

    ಎದೆಯ ಗೀಟು ಕಾಣುವಂತೆ ಕ್ಯಾಮೆರಾಗೆ ಪೋಸ್‌ ಕೊಟ್ಟ ‘ಗಿಲ್ಲಿ’ ನಟಿ

    ನ್ನಡದ ‘ಗಿಲ್ಲಿ’ (Gilli Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಈಗ ಸೌತ್- ಬಾಲಿವುಡ್‌ನಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿ ಹೈಲೆಟ್ ಆಗಿದ್ದಾರೆ. ಸದ್ಯ ಎದೆಯ ಗೀಟು ಕಾಣುವಂತೆ ಬೋಲ್ಡ್ ಆಗಿ ರಾಕುಲ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನಯಾ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಪ್ಪು ಬಣ್ಣ ಧಿರಿಸಿನಲ್ಲಿ ರಾಕುಲ್ ಪ್ರೀತ್ ಸಿಂಗ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಗೀಟು ಕಾಣುವಂತೆ ಪೋಸ್ ಕೊಟ್ಟಿರೋ ನಟಿಯೇ ಮೈ ತುಂಬಾ ಬಟ್ಟೆ ಹಾಕಿ ಅಂತೆಲ್ಲಾ ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿದೆ. ಇದನ್ನೂ ಓದಿ:ವಿನಯ್‌ ವಿರುದ್ಧ ಧ್ವನಿ ಎತ್ತದ ನಮ್ರತಾಗೆ ಕಿಚ್ಚನ ಖಡಕ್‌ ಕ್ಲಾಸ್‌

    ಇನ್ನೂ ಸಿನಿಮಾಗಳ ಆಫರ್ ಇದ್ರೂ ಚಿತ್ರದ ಸಕ್ಸಸ್‌ಗಾಗಿ ಒಂದೊಳ್ಳೆಯ ಬ್ರೇಕ್‌ಗಾಗಿ ರಾಕುಲ್ ಕಾಯ್ತಿದ್ದಾರೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ನಲ್ಲಿ ರಾಕುಲ್ ನಟಿಸಿದ್ದಾರೆ. ಚಿತ್ರದ ಮೊದಲ ಗ್ಲಿಂಪ್ಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯ್ತು.

    ಕಮಲ್ ಹಾಸನ್, ಕಾಜಲ್, ರಾಕುಲ್ ಸೇರಿದಂತೆ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೇಯಿದೆ. ಎಸ್. ಶಂಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.

  • ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ನ್ನಡದ ‘ಗಿಲ್ಲಿ’ ಸಿನಿಮಾ (Gilli Film) ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸೌತ್ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಹಾರಿದ್ದರು. ಸತತ 7 ಸಿನಿಮಾಗಳ ಸೋಲಿನ ನಂತರ ಈಗ ಮತ್ತೆ ದಕ್ಷಿಣ ಸಿನಿಮಾಗಳತ್ತ ರಾಕುಲ್ ಮುಖ ಮಾಡಿದ್ದಾರೆ. ತಮಿಳಿನ ನಟ ಶಿವಕಾರ್ತಿಕೇಯನ್‌ಗೆ ‘ಗಿಲ್ಲಿ’ ಬ್ಯೂಟಿ ಹೀರೋಯಿನ್ ಆಗಿದ್ದಾರೆ.

    ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯಿರುವಾಗಲೇ ಇಲ್ಲಿನ ಸಿನಿಮಾ ಬೇಡ ಅಂತಾ ಕಡೆಗಣಿಸಿ ಬಾಲಿವುಡ್ ಚಿತ್ರಗಳಿಗೆ ರಾಕುಲ್ ಮಣೆ ಹಾಕಿದ್ದರು. 2014ರಿಂದಲೇ ಹಿಂದಿ ಸಿನಿಮಾರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದರು. ಬಳಿಕ ಅಟ್ಯಾಕ್, ರನ್‌ವೇ 34, ಕಟ್‌ಪುತ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ಐ ಲವ್ ಯೂ, ಛತ್ರಿವಾಲಿ ಸಿನಿಮಾಗಳು ಮಕಾಡೆ ಮಲಗಿವೆ. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

    ಬಾಲಿವುಡ್‌ನ 7 ಸಿನಿಮಾಗಳು ಸೋತ ಮೇಲೆ ಈಗ ಸೌತ್ ಸಿನಿಮಾಗಳಿಗೆ ನಟಿ ಮಣೆ ಹಾಕಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ನಟನೆಯ ‘ಅಲಾಯನ್’ (Ayalaan) ಸಿನಿಮಾಗೆ ರಾಕುಲ್ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ (Indian 2) ಹೀರೋಯಿನ್ ಆಗಿ ಸಾಥ್ ನೀಡಿದ್ದಾರೆ. 7 ಸಿನಿಮಾ ಸೋತ ಮೇಲೆ ಬುದ್ಧಿ ಬಂತಾ ಎಂದು ನೆಟ್ಟಿಗರು ರಾಕುಲ್ ಕಾಲೆಳೆದಿದ್ದಾರೆ.

    ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಾಕುಲ್, ಪಾಕೆಟ್ ಮನಿಗಾಗಿ ‘ಗಿಲ್ಲಿ’ ಸಿನಿಮಾ ಮಾಡಿದೆ ಎಂದು ಮಾತನಾಡಿದ್ದರು. ಅಂದು ಅವರ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ನ್ನಡದ ‘ಗಿಲ್ಲಿ’ (Gilli Kannada Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rakul Singh (@rakulpreet)

    ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ (Gururaj) ನಟನೆಯ ‘ಗಿಲ್ಲಿ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ರಾಕುಲ್ ಸಿನಿಪಯಣ ಶುರು ಮಾಡಿದರು. ಇದೀಗ ಸೌತ್-ಬಾಲಿವುಡ್ ರಂಗದಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚ್ತಿದ್ದಾರೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?

     

    View this post on Instagram

     

    A post shared by Rakul Singh (@rakulpreet)

    ಸದ್ಯ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೆಲ ದಿನಗಳಿಂದ ನಟಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಬಿಕಿನಿಯ ಹಸಿ ಬಿಸಿ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಈಗ ಮತ್ತೆ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ರೆಡ್ ಕಲರ್ ಬಿಕಿನಿ (Bikini) ಧರಿಸಿ ಬೀಚ್ ಬಳಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಫೋಟೋಗಳು ಎಲ್ಲೆಡೆ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rakul Singh (@rakulpreet)

    ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ರಾಕುಲ್ ಡೇಟ್ ಮಾಡ್ತಿದ್ದಾರೆ. ಸದ್ಯ ಸ್ಟಾರ್‌ಗಳ ಮದುವೆ ಸೀಸನ್ ನಡೆಯುತ್ತಿರುವ ಕಾರಣ, ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ನ್ನಡದ `ಗಿಲ್ಲಿ’ (Gilli Kannada Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಈಗ ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಮಿಂಚ್ತಿದ್ದಾರೆ. ಇದೀಗ ತಮ್ಮ ಸತತ ಸಿನಿಮಾಗಳ ಸೋಲಿನ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:`ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ

    ರಾಕುಲ್ (Actress Rakul)  ನಟನೆಯ ಅಟ್ಯಾಕ್, ರನ್‌ವೇ 34, ಕಟ್‌ಪುಟ್ಲಿ, ಡಾಕ್ಟರ್ ಜೀ, ಥ್ಯಾಂಕ್ ಗಾಡ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ತಮ್ಮ ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಇತ್ತೀಚೆಗಷ್ಟೆ ಸಂದರ್ಶನದಲ್ಲಿ ಮಾತನಾಡಿದ ರಾಕುಲ್ ಪ್ರೀತ್ ಸಿಂಗ್ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಬಾಕ್ಸಾಫೀಸ್ ಸಂಖ್ಯೆ ಎಷ್ಟು ಪ್ರಮುಖವಾಗುತ್ತದೆ ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಕುಲ್, ಜನರ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಹಣವಿಲ್ಲದ ಕಾರಣ ಜನರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

    ಪ್ರೇಕ್ಷಕರ ಪ್ರೀತಿಯೇ ಮುಖ್ಯ ಎಂದಿರುವ ರಾಕುಲ್ ಬಾಕ್ಸಾಫೀಸ್ ಸಂಖ್ಯೆ ಅಥವಾ ಜಡ್ಜಮೆಂಟ್ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸೌತ್ ಸಿನಿಮಾಗಳ ಬಾಲಿವುಡ್‌ನಲ್ಲಿ ಸಕ್ಸಸ್ ಕಾಣುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾದೇಶಿಕ ಮತ್ತು ಬಾಲಿವುಡ್ ಸಿನಿಮಾಗಳು ಎಲ್ಲವೂ ಭಾರತದ ಸಿನಿಮಾಗಳಾಗಿದೆ. ಚಿತ್ರವು ಉತ್ತಮವಾಗಿದ್ದರೆ ಅದು ಭಾಷೆಯ ಹೊರತಾಗಿ ತನ್ನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ ಎಂದು ರಾಕುಲ್ ಮಾತನಾಡಿದ್ದಾರೆ.

    ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Producer Jackky Bhagnani) ಜೊತೆ ರಾಕುಲ್‌ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಚಿತ್ರರಂಗದ ನಟ-ನಟಿಯರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶುಭ ವೇಳೆಯಲ್ಲಿ ಜಾಕಿ-ರಾಕುಲ್‌ ಜೋಡಿ ಕೂಡ ಮದುವೆಯ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಕಮಲ್ ಹಾಸನ್ `ಇಂಡಿಯನ್ 2’ಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ

    ಕಮಲ್ ಹಾಸನ್ `ಇಂಡಿಯನ್ 2’ಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ

    `ವಿಕ್ರಮ್’ (Vikram) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಕಮಲ್ ಹಾಸನ್ (Kamal Haasan) ಇದೀಗ `ಇಂಡಿಯನ್ 2′ (Indian 2) ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಕಮಲ್ ಹಾಸನ್‌ಗೆ ರಾಕುಲ್ ಪ್ರೀತ್‌ ಸಿಂಗ್‌ (Rakul Preet Singh) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ತಮಿಳಿನ `ವಿಕ್ರಮ್’ ಚಿತ್ರ ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಚಿತ್ರದ ಸಕ್ಸಸ್ ನಂತರ ಕಮಲ್ ಹಾಸನ್, ತಮ್ಮ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಎಸ್. ಶಂಕರ್ ನಿರ್ದೇಶನದ ಇಂಡಿಯನ್ 2ನಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಇನ್ನೂ ಈ ಸಿನಿಮಾಗೆ ನಾಯಕಿ ಯಾರು ಎಂಬುದರ ಬಗ್ಗೆ ಸಖತ್ ಚರ್ಚೆಯಾಗಿತ್ತು.ಅದಕ್ಕೀಗ ಉತ್ತರ ಸಿಕ್ಕಿದೆ. ನಟ ಕಮಲ್‌ಗೆ ನಾಯಕಿಯಾಗಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ತಮ್ಮ ಪಾತ್ರದ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ.

    `ಇಂಡಿಯನ್ 2’ನಲ್ಲಿ ನಟಿಸಲು ಕಾಯುತ್ತಿದ್ದೇನೆ. ನಾನು ತುಂಬಾ ಲಕ್ಕಿ ಕಮಲ್ ಹಾಸನ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಮಾತನಾಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

    ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

    ಬಾಲಿವುಡ್ (Bollywood) ರಾಕುಲ್ ಪ್ರೀತ್ ಸಿಂಗ್ (Rakul Preet Singh) ತಮ್ಮ ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ (Jackky Bhagnani) ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ನಟಿಯ ಸ್ಪೆಷಲ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ರಾಕುಲ್ ಪ್ರೀತ್ ಸಿಂಗ್ ಡ್ರಗ್ಸ್ (Drugs) ವಿಚಾರವಾಗಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ಸ್ಪೆಷಲ್ ಆಗಿ ಶುಭಹಾರೈಸಿದ್ದಾರೆ. ಈ ಮೂಲಕ ಇಬ್ಬರ ಡೇಟಿಂಗ್ ವಿಷ್ಯಕ್ಕೆ ಅಂತ್ಯ ಬಿದ್ದಿದೆ. ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಕ್ರಿಸ್‌ಮಸ್ ಹಬ್ಬದ ಜೊತೆ ಜಾಕಿ ಬರ್ತ್‌ಡೇಗೆ ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

    ಸಾಂತಾ ನನಗೆ ಜೀವನಕ್ಕೆ ಉತ್ತಮವಾದ ಉಡುಗೊರೆಯನ್ನು ಕೊಟ್ಟಿದ್ದಾರೆ. ಹ್ಯಾಪಿ ಬರ್ತ್‌ಡೇ ಮೈ ಲವ್, ನನ್ನ ಜೀವನವನ್ನು ತುಂಬಾ ಸಂತೋಷದಿಂದ ಮತ್ತು ಶಾಂತಿಯಿಂದ ತುಂಬಿದ್ದಕ್ಕಾಗಿ ಧನ್ಯವಾದಗಳು. ನೀವು ಬಯಸುವ ಎಲ್ಲವನ್ನೂ ಜಯಿಸಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನಗುತ್ತೀರಿ ಎಂದು ಪ್ರಿಯಕರ ಜಾಕಿ ಭಗ್ನಾನಿ ನಟಿ ರಾಕುಲ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

     

    View this post on Instagram

     

    A post shared by rakul preet (@rakulxmagix)

    ಇನ್ನೂ ನಟ, ನಿರ್ಮಾಪಕ ಜಾಕಿ ಹುಟ್ಟುಹಬ್ಬಕ್ಕೆ ಅನೇಕ ಸೆಲೆಬ್ರೆಟಿಗಳು ಸಾಕ್ಷಿಯಾಗಿದ್ದಾರೆ. ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]