Tag: ರಾಕಿಭಾಯ್

  • ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ವಿಶ್ವದ ಮೂಲೆ ಮೂಲೆಯಲ್ಲೂ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಾಕ್ಸ್ ಆಫೀಸ್ ಮಾಡುತ್ತಿದೆ. ಅಷ್ಟರ ಮಟ್ಟಿಗೆ ರಾಕಿಭಾಯ್ ಚಿತ್ರ ನೋಡಿ ಅಭಿಮಾನಿಗಳು ಫ್ಲಾಟ್ ಆಗಿದ್ದಾರೆ. `ಕೆಜಿಎಫ್ 2′ ಬಂದಮೇಲೆ ರಾಕಿಭಾಯ್ ಡೈಲಾಗ್ ಅಷ್ಟೇ ಟ್ರೆಂಡ್ ಆಗಿಲ್ಲ. ರಣಧೀರನ ಸ್ಟೈಲ್‌ ಕೂಡ ಟ್ರೆಂಡ್ ಸೃಷ್ಟಿಸಿದೆ.

    ʻಕೆಜಿಎಫ್ʼ ಚಾಪ್ಟರ್ 1 ಮತ್ತು ಚಾಪ್ಟರ್ 2 ನೋಡಿರೋ ರಾಕಿಭಾಯ್ ಫ್ಯಾನ್ಸ್, ಸಿನಿಮಾ ನೋಡಿ ಮಾತ್ರ ಇಷ್ಟಪಟ್ಟಿಲ್ಲ. ರಾಕಿಭಾಯ್ ಸ್ಟೈಲ್ ಉಘೇ ಉಘೇ ಅಂದಿದ್ದಾರೆ. ಇಡೀ ಸಿನಿಮಾದಲ್ಲಿನ ಯಶ್ ಲುಕ್ ಹಿಂದೆಯಿರೋ ರೂವಾರಿ ಅಂದ್ರೆ ಸೆಲೆಬ್ರೆಟಿ ಡಿಸೈನರ್ ಸಾನಿಯಾ ಸರ್ದಾರಿಯಾ ಕಾರಣ. `ಕೆಜಿಎಫ್’ ಚಿತ್ರ ಗೆಲ್ಲೋದರ ಜೊತೆಗೆ ರಾಕಿಭಾಯ್ ಸ್ಟೈಲ್ ಕೂಡ ಗೆದ್ದಿದೆ ಅಂದ್ರೆ ಸಾನಿಯಾ ಸರ್ದಾರಿಯಾ ಅವರ ಕಾರ್ಯವೈಖರಿ ಕೂಡ ಗೆದ್ದಿದೆ.

    ಚಿತ್ರದಲ್ಲಿನ ಯಶ್ ಗಡ್ಡದಿಂದ ಹಿಡಿದು ಸೂಟ್, ವಾಚ್, ಬೂಟ್ಸ್ ಪ್ರತಿಯೊಂದನ್ನು ಪಾತ್ರದ ತಕ್ಕಂತೆ ಸಾನಿಯಾ ನಿಗಾ ವಹಿಸಿದ್ದಾರೆ. ರಾಕಿಭಾಯ್ ಪಾತ್ರಕ್ಕೆ ಸಾನಿಯಾ ಅವರ ಬಳಿಯೇ ಕಸ್ಟ್ಮೈಸ್ ಮಾಡಿಸಿದ್ದಾರೆ. ರಾಕಿಭಾಯ್ ಸ್ಟೈಲ್‌ಗೆ ರೆಟ್ರೋ ಲುಕ್ ಕೊಟ್ಟು ಡಿಫರೆಂಟ್ ಆಗಿ ಸಾನಿಯಾ ಆನ್‌ಸ್ಕ್ರೀನ್‌ನಲ್ಲಿ ಯಶ್‌ನ ತೋರಿಸಿದ್ರು. ಇದೀಗ ಯಶ್ ಲುಕ್, ಅಗ್ರಸ್ಥಾನದಲ್ಲಿದೆ. ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಯಶ್ ಲುಕ್ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಇದನ್ನೂ ಓದಿ:ಮನಾಲಿಗೆ ಹೊರಟ ರಣ್‌ಬೀರ್ ಕಪೂರ್ ಆದರೆ ಹನಿಮೂನ್‌ಗಾಗಿ ಅಲ್ಲ!

    `ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸೌಂಡ್ ಮಾಡುವುದರ ಜತೆಗೆ ರಾಕಿಭಾಯ್ ಸ್ಟೈಲ್‌ಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಪ್ರಚಾರದ ವೇಳೆಯೂ ರಾಕಿಭಾಯ್ ಧರಿಸಿದ್ದ ಡ್ರೇಸ್ ಲುಕ್ ಗಮನ ಸೆಳೆದಿತ್ತು. ಹೀಗೆ ಸಾಕಷ್ಟು ಸಿನಿಮಾಗಳಿಗೆ ಸೆಲೆಬ್ರೆಟಿ ಡಿಸೈನರ್‌ ಆಗಿ ಸಾನಿಯಾ ಗುರುತಿಸಿಕೊಂಡಿದ್ದಾರೆ. ಇನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೆಜಿಎಫ್ ತಂಡ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ರಾಕಿಭಾಯ್ ಮೇನಿಯಾ ಕೂಡ ಜೋರಾಗಿದೆ.

  • ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್, ಕೆಜಿಎಫ್ 1 ಬಂದಿದ್ದೇ ಬಂದಿದ್ದು, ರಾಕಿಭಾಯ್‌ನ ಅಂದಿನಿಂದ ಇಂದಿನವರೆಗೂ ಆರಾಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ರಣಧೀರನ ಫೀವರ್ ಜೋರಾಗಿದೆ. `ಕೆಜಿಎಫ್ 2′ ಚಿತ್ರಕ್ಕಾಗಿ ಕಾಯ್ತಿದ್ದ ಅಮೆರಿಕಾ ಅಭಿಮಾನಿಗಳು ಚಿತ್ರ ನೋಡಿ ದಿಲ್ ಖುಷ್ ಆಗಿದ್ದಾರೆ. ಕೆಜಿಎಫ್ ಕಂಟೆಂಟ್ ನೋಡಿ ಸಂಭ್ರಮಿಸಿದ್ದಾರೆ.

    `ಕೆಜಿಎಫ್ 2′ ಕನ್ನಡ ಚಿತ್ರರಂಗದ ಪ್ರೈಡ್, ಕರ್ನಾಟಕದ ಗಡಿ ದಾಟಿ ದೇಶದ ಮೂಲೆ ಮೂಲೆನಲ್ಲೂ ಸೌಂಡ್ ಮಾಡ್ತಿರೋ ಸಿನಿಮಾಗೆ ಅಮೆರಿಕಾದ ಅಭಿಮಾನಿಗಳು ಫಿದಾ ಆಗಿದ್ದಾರೆ. `ಕೆಜಿಎಫ್ 2′ ಫಸ್ಟ್ ಡೇ ಫಸ್ಟ್ ಶೋ ನೋಡಿ, ಸಂಭ್ರಮಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಸಿನಿಮಾ ನೋಡಿ ಕೇಕ್‌ ಕಟ್‌ ಮಾಡಿ, ಕುಪ್ಪಳಿಸ್ತಿರೋ ಫೋಟೋ, ವಿಡಿಯೋ ಸದ್ಯ ಭಾರೀ ವೈರಲ್ ಆಗ್ತಿದೆ.‌

    ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ಕೆಜಿಎಫ್ ಅಮೆರಿಕಾ ಪ್ರೇಕ್ಷಕರ ಮನಗೆದ್ದಿದೆ. ದೇಶದ ಎಲ್ಲಾ ಕಡೆ ರಾಕಿಭಾಯ್ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಬಾಕ್ಸ್ಆಫೀಸ್‌ನಲ್ಲಿ ತೂಫಾನ್ ಎಬ್ಬಿಸುತ್ತಿದೆ. ರಾಕಿಭಾಯ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ಹೀಗೆ ಪ್ರತಿಯೊಬ್ಬರ ಪಾತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ

    ಸದ್ಯ ರಾಕಿಭಾಯ್ ಚಿತ್ರ ನೋಡಿ ಜೈಕಾರ ಹಾಕ್ತಿದ್ದಾರೆ. `ಕೆಜಿಎಫ್ 2′ ಚಿತ್ರ ತಮ್ಮದೇ ಸಿನಿಮಾ ಅನ್ನೋವಷ್ಟರ ಮಟ್ಟಿಗೆ ಸ್ವಾಗತಿಸುತ್ತಿದ್ದಾರೆ. `ಕೆಜಿಎಫ್ 2′ ನೋಡಿ ಥ್ರಿಲ್ ಆಗಿರೋ ಫ್ಯಾನ್ಸ್ ಪಾರ್ಟ್ 3 ಬರುತ್ತಾ ಅಂತಾ ಕಾಯ್ತಿದ್ದಾರೆ.

  • ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ರಾಕಿಭಾಯ್ ದರ್ಶನಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ದಿನದಿಂದ ದಿನಕ್ಕೆ ರಾಕಿಂಗ್ ಸ್ಟಾರ್ ಅಭಿಮಾನಿಗಳಲ್ಲಿ `ಕೆಜಿಎಫ್ 2′ ಫೀವರ್ ಹೆಚ್ಚಾಗ್ತಿದೆ. ಏಪ್ರಿಲ್ 14ಕ್ಕೆ ರಿಲೀಸ್ ಆಗ್ತಿರೋ `ಕೆಜಿಎಫ್ 2′ ಚಿತ್ರ ನೋಡಲು ಸ್ಪೆಷಲ್ ಶೋ ಡಿಮ್ಯಾಂಡ್ ಹೆಚ್ಚಾಗ್ತಿದೆ.

    ಹೊಂಬಾಳೆ ಬ್ಯಾನರ್‌ನ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ `ಕೆಜಿಎಫ್ 2′ ಸಿನಿಮಾ ನೋಡಲು ವಿಶ್ವದೆಲ್ಲೆಡೆ ಅಭಿಮಾನಿಗಳು ಕಾಯ್ತಿದ್ದಾರೆ. ಇನ್ನು ರಾಕಿಭಾಯ್‌ನ ಸ್ವಾಗತ ಕೋರಲು ಅಭಿಮಾನಿಗಳು ಈಗಾಗಲೇ ಯೋಜನೆ ಹಾಕಿಕೊಂಡಿದ್ದಾರೆ. ರಿಲೀಸ್ ದಿನ ಮಧ್ಯರಾತ್ರಿ 1 ಗಂಟೆಗೆ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಶುರುವಾಗಲಿದೆ. ಇದನ್ನು ಓದಿ:ʼ2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ನಿಧನ

    `ಕೆಜಿಎಫ್ 2′ ನೋಡಲು ಯಶ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿನಿಅಭಿಮಾನಿಗಳಿಗಾಗಿ ಬೆಂಗಳೂರುಗೌಡನ ಪಾಳ್ಯದ ಶ್ರೀನಿವಾಸ ಮಂದಿರದಲ್ಲಿ `ಕೆಜಿಎಫ್ 2′ ಫ್ಯಾನ್ಸ್ ಶೋ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 14ರಂದು ಮಧ್ಯರಾತ್ರಿ 1 ಗಂಟೆಯಿಂದ ನಿರಂತರ 8 ಶೋಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.

    ಇನ್ನು ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆ ಮುರಿದು `ಕೆಜಿಎಫ್ 2′ ನಿರಂತರ 8 ಶೋ ಪ್ರದರ್ಶನವಾಗಲಿದೆ. `ಕೆಜಿಎಫ್ 2′ ಟೀಮ್ ಮಾತ್ರವಲ್ಲ, ಯಶ್ ಅಭಿಮಾನಿಗಳು ದಾಖಲೆಯ ಮೇಲೆ ದಾಖಲೆ ಮಾಡುತ್ತಿದ್ದಾರೆ. ರಾಕಿಭಾಯ್ ಚಿತ್ರ ಬಾಕ್ಸ್ಆಫೀಸ್‌ನಲ್ಲಿ ಲೂಟಿ ಮಾಡೋದು ಗ್ಯಾರೆಂಟಿ ಅಂತಿದೆ ಗಾಂಧಿನಗರ.

  • ಇನ್ನು ಕರ್ನಾಟಕದಲ್ಲಿಯೇ ಶೂಟಿಂಗ್ ನಡೆಸ್ತಾರೆ ರಾಕಿಭಾಯ್!

    ಇನ್ನು ಕರ್ನಾಟಕದಲ್ಲಿಯೇ ಶೂಟಿಂಗ್ ನಡೆಸ್ತಾರೆ ರಾಕಿಭಾಯ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಇತ್ತೀಚೆಗಷ್ಟೇ ಹೈದರಾಬಾದಿಗೆ ಶಿಫ್ಟ್ ಆಗಿತ್ತು. ಅಲ್ಲಿನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಹೈವೋಲ್ಟೋಜ್ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ಪ್ಲ್ಯಾನು ಮಾಡಿಕೊಂಡಿತ್ತು. ಅದರ ಪ್ರಕಾರವಾಗಿಯೇ ಸರಾಗವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡವೀಗ ಬೆಂಗಳೂರಿಗೆ ವಾಪಾಸ್ಸಾಗಿದೆ. ಇದರ ಮುಖ್ಯ ಭಾಗವಾಗಿರೋ ಫೈಟ್ ಸೀನುಗಳಲ್ಲಿ ನಟಿಸಿ ಆಯಾಸಗೊಂಡಿರೋ ಯಶ್ ಸಣ್ಣದಾಗಿ ರಿಲ್ಯಾಕ್ಸ್ ತೆಗೆದುಕೊಂಡು ಇನ್ನುಮುಂದೆ ಕರ್ನಾಟಕದಲ್ಲಿಯೇ ಚಿತ್ರೀಕರಣ ಮುಂದುವರೆಯಲಿದೆಯಂತೆ.

    ಹೈದರಾಬಾದಿನಲ್ಲಿ ನಡೆಯಲಿರುವ ಚಿತ್ರೀಕರಣ ಯಶ್ ಅಭಿಮಾನಿಗಳೆಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಯಾಕೆಂದರೆ, ಅಲ್ಲಿ ನಡೆಯಲಿದ್ದದ್ದು ಅಧೀರ ಮತ್ತು ರಾಕಿ ಭಾಯ್ ನಡುವಿನ ರಣ ಕದನದ ಚಿತ್ರೀಕರಣ. ಅಧೀರ ಎಂಬ ಪಾತ್ರವನ್ನು ಸಂಜಯ್ ದತ್ ನಿರ್ವಹಿಸುತ್ತಿರೋದೇ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅದೆಲ್ಲವೂ ಈಗ ಸುಸೂತ್ರವಾಗಿ ಚಿತ್ರೀಕರಣ ನಡೆದಿದೆ. ಅದೇ ಖುಷಿಯಲ್ಲಿ ಚಿತ್ರತಂಡ ಬೆಂಗಳೂರಿನತ್ತ ಮರಳಿದೆ.

    ಅಧೀರ ಮತ್ತು ರಾಕಿಭಾಯ್ ಫೈಟ್ ಸೀನುಗಳ ಚಿತ್ರೀಕರಣ ನಡೆಯಲಿದೆ ಎಂಬ ಸುದ್ದಿ ಹಬ್ಬಿಕೊಂಡಿತ್ತಲ್ಲಾ? ಆ ಕ್ಷಣದಿಂದಲೇ ಯಶ್ ಅಭಿಮಾನಿಗಳಲ್ಲಿ ಒಂದು ಆಸೆ ಚಿಗುರೊಡೆದುಕೊಂಡಿತ್ತು. ಕುತೂಹಲ ಹುಟ್ಟಿಸಲಿಕ್ಕಾದರೂ ಈ ಸೀನುಗಳ ಒಂದೆರಡು ಫೋಟೋಗಳಾದರೂ ನೋಡಲು ಸಿಗಬಹುದೇನೋ ಎಂಬ ಆಸೆ ಅವರಲ್ಲಿತ್ತು. ಆದರೆ ಚಿತ್ರತಂಡ ಮಾತ್ರ ಈ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾಗಿಯೇ ನಡೆದುಕೊಂಡಿದೆ. ಇಡೀ ಚಿತ್ರೀಕರಣದ ಬಗ್ಗೆ ಯಾವ ಸುಳಿವೂ ಸಿಗದಂತೆ ಜಾಗ್ರತೆ ವಹಿಸಿದೆ. ಇನ್ನು ಮುಂದೆ ಇದರ ಚಿತ್ರೀಕರಣ ಕರ್ನಾಟಕದಲ್ಲಿಯೇ ಮುಂದುವರೆಯಲಿದೆಯಂತೆ.