Tag: ರಾಂಧವ

  • ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ನಟಿಸಿರೋ ರಾಂಧವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎರಡು ತಲೆಮಾರುಗಳ ರೋಚಕ ಕಥೆ ಹೊಂದಿರೋ ಈ ಚಿತ್ರದಲ್ಲಿ ಭುವನ್ ಮಹಾ ಪರಾಕ್ರಮಿ ರಾಜನಾಗಿಯೂ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಭಿನ್ನಾತಿಭಿನ್ನವಾದ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರೋ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ನೀಡಲು ರಾಂಧವ ಚಿತ್ರ ತಂಡ ತಯಾರಾಗಿದೆ.

    ನಿರ್ದೇಶಕ ಸುನೀಲ್ ಆಚಾರ್ಯ ನಾಳೆ ಸಂಜೆ ಆರು ಘಂಟೆಗೆ ರಾಂಧವನ ಅಚ್ಚರಿದಾಯಕ ವೀಡಿಯೋ ಒಂದನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ತೀರ್ಮಾನಿಸಿದ್ದಾರೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಮಾಡಿದ್ದೇನೆಂಬುದರ ವಿವರ ಆ ವೀಡಿಯೋದಲ್ಲಿ ಜಾಹೀರಾಗಲಿದೆಯಂತೆ. ಕನ್ನಡತನವನ್ನು ಅವಹೇಳನ ಮಾಡಿದ ತಮಿಳನಿಗೆ ರಾಜ ರಾಂಧವ ಮಾಡಿದ್ದೇನೆಂಬ ಕುತೂಹಲ ನಾಳೆ ಸಂಜೆ ಆರು ಘಂಟೆಗೆ ತಣಿಯಲಿದೆ.

    ಈ ವೀಡಿಯೋ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಮೂಲಕವೇ ರಾಂಧವನಾಗಿ ಭುವನ್ ಅಬ್ಬರಿಸಿರೋ ರೀತಿ ಮತ್ತು ಇಡೀ ಕಥೆಯ ಸ್ಪೆಷಾಲಿಟಿಯೂ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆಯಂತೆ. ಅಷ್ಟಕ್ಕೂ ಈ ಚಿತ್ರದ ಹಿಂದೆ ಅಖಂಡ ಎರಡು ವರ್ಷಗಳ ಕಾಲದ ಅಗಾಧ ಪರಿಶ್ರಮವಿದೆ. ಇದಕ್ಕಾಗಿ ನಿರ್ದೇಶಕ ಸುನೀಲ್ ಆಚಾರ್ಯ ಸೇರಿದಂತೆ ಇಡೀ ಚಿತ್ರ ತಂಡ ನಿರಂತರವಾಗಿ ಶ್ರಮ ವಹಿಸಿದೆ.

    ಇನ್ನು ಭುವನ್ ಅವರಂತೂ ಈ ಚಿತ್ರಕ್ಕಾಗಿ ಎರಡು ವರ್ಷಗಳನ್ನೂ ಪಣವಾಗಿಟ್ಟಿದ್ದಾರೆ. ಇದರಲ್ಲಿನ ಪಾತ್ರ ಪಳಗಿದ ನಟರಿಗೂ ಕಷ್ಟವಾಗುವಂಥಾದ್ದು. ಇಲ್ಲಿ ಅವರಿಗೆ ಒಂದಷ್ಟು ಶೇಡಿನ ಪಾತ್ರಗಳಿವೆ. ಅದನ್ನು ಭುವನ್ ಯಾವ ರೀತಿಯಲ್ಲಿ ನಿರ್ವಹಿಸಿದ್ದಾರೆಂಬುದಕ್ಕೆ ನಾಳೆ ಹೊರ ಬರೋ ವೀಡಿಯೋದಲ್ಲಿ ಸಾಕ್ಷಿಗಳು ಸಿಗಲಿವೆ.

    https://www.youtube.com/watch?v=eRpnWE0j_mQ

  • ಟ್ವಿಟ್ಟರ್ ನಲ್ಲಿ ರಾಂಧವ ಹವಾ!

    ಟ್ವಿಟ್ಟರ್ ನಲ್ಲಿ ರಾಂಧವ ಹವಾ!

    ಬೆಂಗಳೂರು: ಸುನಿಲ್ ಆಚಾರ್ಯ ಚೊಚ್ಚಲ ನಿರ್ದೇಶನದ ರಾಂಧವ ಚಿತ್ರ ಆರಂಭದಿಂದ ಇಲ್ಲಿಯವರೆಗೂ ಪ್ರತೀ ಹಂತದಲ್ಲಿಯೂ ಸುದ್ದಿಗೆ ಗ್ರಾಸವಾಗುತ್ತಾ ಬಂದಿದೆ. ಈ ಮೂಲಕವೇ ಪ್ರೇಕ್ಷಕರ ಗಮನವನ್ನೂ ತನ್ನತ್ತಲೇ ಕೇಂದ್ರೀಕರಿಸಿಕೊಂಡಿರೋ ಈ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಈ ಹೊತ್ತಿನಲ್ಲಿಯೇ ಸಾಮಾಜಿಕ ಜಾಲತಾಣಗಳ ತುಂಬಾ ರಾಂಧವನ ಸದ್ದು ಜೋರಾಗಿದೆ. ಟ್ವಿಟರ್ ನಲ್ಲಿಯಂತೂ ಈ ಸಿನಿಮಾ ಸೃಷ್ಟಿಸಿರೋ ಹವಾ ನಿರ್ಣಾಯಕವಾಗಿದೆ.

    ಇದೇ ತಿಂಗಳ ಹದಿನೇಳರಂದು ರಾಂಧವನ ಟೈಟಲ್ ಸಾಂಗ್ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರ ಬೀಳುತ್ತಲೇ ಈ ಚಿತ್ರ ಮತ್ತೆ ಸುದ್ದಿ ಕೇಂದ್ರ ತಲುಪಿಕೊಂಡಿದೆ. ಟ್ವಿಟರ್ ನಲ್ಲಂತೂ ಟ್ರೆಂಡಿಂಗ್‍ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ತನ್ನಿಂದ ತಾನೇ ಹವಾ ಸೃಷ್ಟಿಯಾಗುತ್ತಿರೋದನ್ನು ಕಂಡು ಚಿತ್ರತಂಡವೂ ಖುಷಿಗೊಂಡಿದೆ.

    ಇದು ರಾಂಧವ ಚಿತ್ರದ ಸಂಗೀತ ನಿರ್ದೇಶಕ ಶಶಾಂಕ್ ಅವರ ಪಾಲಿಗೂ ಮಹತ್ವದ ವಿಚಾರ. ಯಾಕೆಂದರೆ ಈಗಾಗಲೇ ಬಹು ಬೇಡಿಕೆಯ ಗಾಯಕರಾಗಿ ನೆಲೆ ಕಂಡುಕೊಂಡಿರುವ ಅವರು ಈ ಸಿನಿಮಾ ಮೂಲಕವೇ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಗೀತವನ್ನು ತಪಸ್ಸಿನಂತೆ ಸ್ವೀಕರಿಸಿರೋ ಶಶಾಂಕ್ ಪಾಲಿಗೆ ಈಗ ಸಿಗುತ್ತಿರೋ ಆರಂಭಿಕ ಉತ್ತೇಜನ ಹೊಸಾ ಹುರುಪು ತುಂಬಿದೆ.

    ಇನ್ನುಳಿದಂತೆ ಸುನಿಲ್ ಅವರ ಪಾಲಿಗೂ ನಿರ್ದೇಶಕರಾಗಿ ಇದು ಮೊದಲ ಹೆಜ್ಜೆ. ಒಂದೊಳ್ಳೆ ಕಥೆಯನ್ನು ವರ್ಷಾಂತರಗಳ ಕಾಲ ಜತನದಿಂದ ರಚಿಸಿದ್ದ ಸುನಿಲ್ ಅದನ್ನೇ ದೃಶ್ಯವಾಗಿಸಿದ್ದಾರೆ. ಎರಡು ವರ್ಷಗಳ ಸುದೀರ್ಘಾವಧಿ ತೆಗೆದುಕೊಂಡು ಇಡೀ ಚಿತ್ರವನ್ನು ಅಂದುಕೊಂಡಂತೆಯೇ ಅಚ್ಚುಕಟ್ಟಾಗಿ ಮಾಡಿ ಮುಗಿಸಿರೋ ತೃಪ್ತಿಯೂ ಅವರಲ್ಲಿದೆ. ಇದೀಗ ಟೈಟಲ್ ಟ್ರ್ಯಾಕಿನ ಮೂಲಕ ಮತ್ತೆ ರಾಂಧವನ ಆರ್ಭಟ ಆರಂಭವಾಗಿದೆ.

    https://www.youtube.com/watch?v=eRpnWE0j_mQ

  • ಜೂನ್ ಹದಿನೇಳಂದು ಬಿಡುಗಡೆಯಾಗಲಿದೆ ‘ರಾಂಧವ’ ಟೈಟಲ್ ಸಾಂಗ್!

    ಜೂನ್ ಹದಿನೇಳಂದು ಬಿಡುಗಡೆಯಾಗಲಿದೆ ‘ರಾಂಧವ’ ಟೈಟಲ್ ಸಾಂಗ್!

    ಬೆಂಗಳೂರು: ಬಿಗ್ ಬಾಸ್ ಶೋ ಸ್ಪರ್ಧಿಯಾಗಿದ್ದ ಭುವನ್ ಪೊನ್ನಣ್ಣ ನಟಿಸಿರೋ ಬಹು ನಿರೀಕ್ಷಿತ ಚಿತ್ರ ರಾಂಧವ. ಸುನಿಲ್ ಆಚಾರ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್ ಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಗೀಗ ಮುಹೂರ್ತ ನಿಗದಿಯಾಗಿದೆ. ಇದೇ ಜೂನ್ ಹದಿನೇಳರಂದು ರಾಂಧವನ ವಿಶಿಷ್ಟವಾದ ಟೈಟಲ್ ಸಾಂಗ್ ಎಲ್ಲರನ್ನು ತಲುಪಿಕೊಳ್ಳಲಿದೆ.

    ಈಗ ಬಿಡುಗಡೆಯಾಗಿರೋ ಎರಡೆರಡು ಟ್ರೈಲರ್ ಮೂಲಕವೇ ಈ ಚಿತ್ರ ವಿಶಿಷ್ಟವಾದ ಕಥೆಯನ್ನೊಳಗೊಂಡಿದೆ ಎಂಬ ವಿಚಾರವನ್ನು ಜಾಹೀರು ಮಾಡಿದೆ. ಭುವನ್ ಪೊನ್ನಣ್ಣ ಕಾಣಿಸಿಕೊಂಡಿರೋ ಗೆಟಪ್ಪುಗಳೇ ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಅದನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿಯೇ ಜೂನ್ ಹದಿನೇಳರ ಸೋಮವಾರ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಬಿಡುಗಡೆಯಾಗಲಿದೆ.

    https://www.youtube.com/watch?v=eRpnWE0j_mQ

    ಸುನಿಲ್ ಆಚಾರ್ಯ ಆರಂಭದಲ್ಲಿ ಕಾದಂಬರಿಯೊಂದನ್ನು ಪುಸ್ತಕವಾಗಿಸಿ ಆ ನಂತರದಲ್ಲಿ ಆ ರೋಚಕ ಕಥೆಯನ್ನು ಸಿನಿಮಾ ಆಗಿ ಕಟ್ಟಿ ಕೊಟ್ಟಿದ್ದಾರೆ. ಇದೇನು ಮಾಮೂಲಿ ಶೈಲಿಯ ಚಿತ್ರವಲ್ಲ. ಭುವನ್ ಪೊನ್ನಣ್ಣ ಮೊದಲ ಹೆಜ್ಜೆಯಲ್ಲಿಯೇ ಸವಾಲಿನ ಪಾತ್ರವನ್ನು ಆರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ನಾನಾ ಶೇಡುಗಳಿವೆಯಂತೆ. ಅದಕ್ಕಾಗಿ ಅವರು ವರ್ಷಗಟ್ಟಲೆ ತಯಾರಿಯನ್ನೂ ನಡೆಸಿದ್ದಾರೆ.

    ಇಂಥಾ ಸಕಾರಾತ್ಮಕ ಸಂಗತಿಗಳಿಂದಲೇ ಸುದ್ದಿ ಕೇಂದ್ರದಲ್ಲಿರುವ ರಾಂಧವ ಹಾಡಿನ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾನೆ. ಈ ಚಿತ್ರಕ್ಕೆ ಯುವ ಗಾಯಕ ಶಶಾಂಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಕನ್ನಡ ಮಾತ್ರವಲ್ಲದೇ ಬಾಲಿವುಡ್ ಮಟ್ಟದಲ್ಲಿಯೂ ಹೆಸರು ಮಾಡಿರೋ ಶಶಾಂಕ್ ಈ ಮೂಲಕ ಸಂಗೀತ ನಿರ್ದೇಶಕರಾಗಿಯೂ ಹೊಮ್ಮಿದ್ದಾರೆ. ಈ ಚಿತ್ರವನ್ನು ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

  • ಎರಡನೇ ಟ್ರೈಲರ್ ಮೂಲಕ ಮೆರೆದ `ರಾಂಧವ’!

    ಎರಡನೇ ಟ್ರೈಲರ್ ಮೂಲಕ ಮೆರೆದ `ರಾಂಧವ’!

    ಬೆಂಗಳೂರು: ಸುನೀಲ್ ಎಸ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಎಲ್ಲರ ಗಮನವನ್ನೂ ತನ್ನತ್ತ ಸೆಳೆದುಕೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಇದು ಪ್ರೇಕ್ಷಕರ ಗಮನದ ಕೇಂದ್ರಕ್ಕೆ ತಲುಪಿಕೊಂಡಿತ್ತು. ಇದೀಗ ಹೊಸ ವರ್ಷದ ಕೊಡುಗೆಯಂತೆ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ.

    ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಭುವನ್ ನಟನೆಯ ಚಿತ್ರ ರಾಂಧವ. ಇದೀಗ ಎರಡನೇ ಟ್ರೈಲರ್ ಮೂಲಕ ಹೊಸ ವರ್ಷಾರಂಭದಲ್ಲಿಯೇ ರಾಂಧವ ಮೆರೆದಿದ್ದಾನೆ. ಅದರ ಸೊಗಸು ಕಂಡು ಪ್ರೇಕ್ಷಕರು ಕೂಡಾ ಬೆರಗಾಗಿದ್ದಾರೆ. ಈ ಟ್ರೈಲರ್ ಇಡೀ ಚಿತ್ರದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತಲೇ ಅದನ್ನು ನಿರೀಕ್ಷೆಯಾಗಿ ರೂಪಾಂತರಗೊಳಿಸುವಲ್ಲಿಯೂ ಸಫಲವಾಗಿದೆ.

    ರಾಂಧವ ಮಾಮೂಲಿ ಕಥಾ ಹಂದರದ ಸಿನಿಮಾ ಖಂಡಿತಾ ಅಲ್ಲ ಎಂಬುದನ್ನು ಈ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ಸಾಬೀತು ಪಡಿಸಿತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಒಟ್ಟಾರೆ ಚಿತ್ರದ ಅದ್ಧೂರಿತನದ ಸುಳಿವನ್ನೂ ತೆರೆದಿಟ್ಟಿದೆ. ಈ ಮೂಲಕ ನಾಯಕ ಭುವನ್ ಬರ್ತ್ ಡೇ ಗಿಫ್ಟ್ ಎಂಬಂತೆ ಬಿಡುಗಡೆಯಾಗಿರೋ ಟ್ರೈಲರ್ ಪ್ರೇಕ್ಷಕರ ಪಾಲಿನ ನ್ಯೂ ಇಯರ್ ಗಿಫ್ಟಾಗಿಯೂ ಮಾರ್ಪಾಡಾಗಿದೆ.

    ಇದು ನಿರ್ದೇಶಕ ಸುನೀಲ್ ಎಸ್ ಆಚಾರ್ಯ ಅವರ ಕನಸಿಗೆ ಸಿಕ್ಕ ಆರಂಭಿಕ ಗೆಲುವು. ಟ್ರೈಲರ್ ಮೂಲಕವೇ ಹುಟ್ಟಿಕೊಂಡಿರೋ ಕ್ರೇಜ್ ನೋಡಿದರೆ ಸಂಭಾವ್ಯ ಗೆಲುವಿನ ಸುಳಿವೂ ನಿಚ್ಚಳವಾಗಿಯೇ ಕಾಣಲಾರಂಭಿಸಿದೆ.

    https://www.youtube.com/watch?v=eRpnWE0j_mQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭುವನ್ ಬರ್ತ್ ಡೇಗೆ ರಾಂಧವ ಟ್ರೇಲರ್ ಕೊಡುಗೆ!

    ಭುವನ್ ಬರ್ತ್ ಡೇಗೆ ರಾಂಧವ ಟ್ರೇಲರ್ ಕೊಡುಗೆ!

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಭುವನ್ ನಾಯಕನಾಗಿ ನಟಿಸಿರೋ ಚಿತ್ರ ರಾಂಧವ. ಸನತ್ ಕುಮಾರ್ ನಿರ್ಮಾಣ ಮಾಡಿರುವ ಈ ಸಿನಿಮಾ ಮೂಲಕ ಸುನೀಲ್ ಆಚಾರ್ಯ ನಿರ್ದೇಶಕರಾಗಿಯೂ ಪಾದಾರ್ಪಣೆ ಮಾಡಿದ್ದಾರೆ. ರಾಂಧವ ಭುವನ್‍ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಅದಕ್ಕೆ ಭರ್ಜರಿ ಗಿಫ್ಟೊಂದನ್ನು ನೀಡಲು ಈ ಸಿನಿಮಾ ತಂಡ ನಾಳೆ ಮುಹೂರ್ತ ನಿಗದಿ ಮಾಡಿದೆ.

    ನಾಳೆ ಭುವನ್ ಬರ್ತ್ ಡೇ ಗಿಫ್ಟ್ ಎಂಬಂತೆ ರಾಂಧವ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಇದರೊಂದಿಗೇ ಭುವನ್ ಅವರ ಹೊಸಾ ಲುಕ್ಕು ಕೂಡಾ ಅನಾವರಣಗೊಳ್ಳಲಿದೆ.

    https://www.instagram.com/p/BsAmSWWgdws/

    ಭುವನ್ ಪಾಲಿಗೆ ಈ ಬರ್ತ್ ಡೇ ನಿಜಕ್ಕೂ ವಿಶೇಷ. ಯಾಕೆಂದರೆ ಅವರ ಬಹುಕಾಲದ ಆಸೆ ಈ ವರ್ಷ ಈಡೇರಿಕೊಂಡಿದೆ. ಬಿಗ್ ಬಾಸ್ ಶೋನಿಂದ ಬರುತ್ತಲೇ ಅವರ ಮುಂದೆ ಚಿತ್ರರಂಗದ ಅವಕಾಶದ ಬಾಗಿಲು ತಂತಾನೇ ತೆರೆದುಕೊಂಡಿತ್ತು. ಆದರೆ ಭುವನ್ ಗೆ ನಟಿಸಿದರೆ ಭಿನ್ನವಾದ ಕಥೆ ಹೊಂದಿರೋ ಚಿತ್ರದಲ್ಲಿಯೇ ನಟಿಸಬೇಕೆಂಬ ಅಚಲ ನಿರ್ಧಾರವಿತ್ತು. ಯಾರು ಹೇಳಿದ ಕಥೆಯೂ ಅದಕ್ಕೆ ಹತ್ತಿರಾಗದ ಕಸಿವಿಸಿಯಲ್ಲಿದ್ದ ಭುವನ್‍ಗೆ ರಾಂಧವ ಕಥೆ ಹೇಳಿದವರು ಸುನೀಲ್ ಆಚಾರ್ಯ.

    ಒಂದೇ ಗುಕ್ಕಿನಲ್ಲಿ ಕಥೆ ಕೇಳಿ ಮರುಕ್ಷಣವೇ ಒಪ್ಪಿಕೊಂಡ ಭುವನ್ ಈ ಚಿತ್ರಕ್ಕಾಗಿ ತುಂಬಾ ರಿಸ್ಕ್ ತೆಗೆದುಕೊಂಡಿದ್ದಾರೆ. ಎರಡು ವರ್ಷಗಳನ್ನು ರಾಂಧವಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಈ ಹುಟ್ಟುಹಬ್ಬದ ಹೊಸ್ತಿಲಲ್ಲಿ ಅದೆಲ್ಲವೂ ಫಲ ನೀಡುವ ಕ್ಷಣಗಳೂ ಹತ್ತಿರಾಗಿರೋದರಿಂದ ಭುವನ್ ಖುಷಿಗೊಂಡಿದ್ದಾರೆ. ಆ ಖುಷಿಯನ್ನ ಇಮ್ಮಡಿಸಲು ನಾಳೆ ಟ್ರೇಲರ್ ಬಿಡುಗಡೆಯಾಗಲಿದೆ.

    https://www.instagram.com/p/BsAmWOEA50q/