Tag: ರಾಂಚಿ ಕೋರ್ಟ್

  • ಧೋನಿಗೆ 15 ಕೋಟಿ ರೂ. ದೋಖಾ – ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಮಹಿ

    ಧೋನಿಗೆ 15 ಕೋಟಿ ರೂ. ದೋಖಾ – ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಮಹಿ

    ಮುಂಬೈ: 15 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ (Aarka Sports and Management Limited) ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ (Criminal Case) ದಾಖಲಿಸಿದ್ದಾರೆ.

    ರಾಂಚಿಯಲ್ಲಿ 2017ರ ಕ್ರಿಕೆಟ್ ಅಕಾಡೆಮಿ ಒಪ್ಪಂದಕ್ಕೆ ಸಂಬಂಧಿಸಿ ಆಗಿರುವ ವಂಚನೆ ವಿರುದ್ಧ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿವಾಕರ್ ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್

    ಏನಿದು ಷರತ್ತು? – ಉಲ್ಲಂಘನೆಯಾಗಿದ್ದು ಹೇಗೆ?
    ದಿವಾಕರ್ ಅವರು ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸಲು 2017ರಲ್ಲಿ ಧೋನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಷರತ್ತುಗಳನ್ನ ಪಾಲಿಸಲಿಲ್ಲ. ಅಲ್ಲದೇ ಆರ್ಕಾ ಸ್ಪೋರ್ಟ್ಸ್​​ನ ಶುಲ್ಕ ಮತ್ತು ಷೇರುಗಳನ್ನೂ ಧೋನಿ ಅವರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಮೆಚ್ಚುಗೆ!

    ಒಪ್ಪಂದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಉಲ್ಲಂಘನೆ ಕಾರಣ ಆಗಸ್ಟ್ 15, 2021ರಂದು ಧೋನಿ ಅರ್ಕಾ ಸ್ಪೋರ್ಟ್ಸ್‌ಗೆ ನೋಟಿಸ್ ಕಳುಹಿಸಿದ್ದರು. ಇಂತಹ ನೋಟಿಸ್​​ಗಳನ್ನು ಹಲವು ಬಾರಿ ಕಳುಹಿಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ವಿಧಿ ಅಸೋಸಿಯೇಟ್ಸ್​​ನ ದಯಾನಂದ್ ಸಿಂಗ್ ಮಾಹಿತಿ ನೀಡಿದ್ದಾರೆ. ಮೋಸ ಮಾಡಿರುವ ಮತ್ತು 15 ಕೋಟಿ ರೂ. ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ. ಇದನ್ನೂ ಓದಿ: ಎರಡೇ ದಿನಗಳಿಗೆ 33 ವಿಕೆಟ್‌ ಉಡೀಸ್‌; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ

  • 5 ಕುರಾನ್ ಪ್ರತಿ ಹಂಚು – ವಿದ್ಯಾರ್ಥಿನಿಗೆ ಕೋರ್ಟ್ ಶಿಕ್ಷೆ

    5 ಕುರಾನ್ ಪ್ರತಿ ಹಂಚು – ವಿದ್ಯಾರ್ಥಿನಿಗೆ ಕೋರ್ಟ್ ಶಿಕ್ಷೆ

    ರಾಂಚಿ: 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕತೆ ಕುರಿತು ಪೋಸ್ಟ್ ಹಾಕಿದ್ದಕ್ಕೆ 5 ಕುರಾನ್ ಪ್ರತಿಗಳನ್ನು ಹಂಚುವ ಶಿಕ್ಷೆಯನ್ನು ರಾಂಚಿ ಕೋರ್ಟ್ ವಿಧಿಸಿದೆ.

    ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ಅವರು ವಿದ್ಯಾರ್ಥಿನಿ ರಿಚಾ ಭಾರ್ತಿ ಮುಸ್ಲಿಂ ಧಾರ್ಮಿಕ ಗ್ರಂಥವಾದ ಕುರಾನಿನ 5 ಪ್ರತಿಗಳನ್ನು ಹಂಚುವಂತೆ ಆದೇಶಿಸಿದ್ದಾರೆ. ಒಂದು ಪ್ರತಿಯನ್ನು ಅಂಜುಮನ್ ಇಸ್ಲಾಮಿಯಾ ಸಮಿತಿಗೆ ಹಾಗೂ ಉಳಿದ ನಾಲ್ಕು ಪ್ರತಿಗಳನ್ನು ವಿವಿಧ ಶಾಲಾ, ಕಾಲೇಜುಗಳ ಗ್ರಂಥಾಲಯಗಳಿಗೆ ನೀಡುವಂತೆ ಸೂಚಿಸಿದ್ದಾರೆ.

    ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ ಹಂಚಿಕೊಂಡಿದ್ದಾಳೆ ಎಂದು ಆರೋಪಿಸಿ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಓದುತ್ತಿದ್ದ ರಿಚಾ ಭಾರ್ತಿಯನ್ನು ಶನಿವಾರ ರಾತ್ರಿ ಬಂಧಿಸಲಾಗಿತ್ತು.

    ವಿದ್ಯಾರ್ಥಿನಿಯನ್ನು ಬಂಧಿಸಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ, ಹಲವು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ವಿದ್ಯಾರ್ಥಿನಿಯನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿವೆ. ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದ ಬೆನ್ನಲ್ಲೇ ರಾಂಚಿ ಗ್ರಾಮೀಣ ವಿಭಾಗದ ಎಸ್‍ಪಿ ಅಶುತೋಷ್ ಶೇಖರ್ ಅವರ ನೇತೃತ್ವದ ತಂಡ ಪರಿಸ್ಥಿತಿಯನ್ನು ನಿಯಂತ್ರಿಸಿದೆ.

    ಎರಡೂ ಸಮುದಾಯಗಳು ಪರಸ್ಪರ ಒಪ್ಪಿಗೆ ನೀಡಿದ ನಂತರ ರಿಚಾ ಭಾರ್ತಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ನ್ಯಾಯಾಲಯದ ಆದೇಶವನ್ನು 15 ದಿನಗಳಲ್ಲಿ ಪಾಲಿಸಲಾಗುವುದು ಎಂದು ರೀಚಾ ಭಾರ್ತಿ ಪರ ವಕೀಲ ರಾಮ್ ಪ್ರವೀಶ್ ಭರವಸೆ ನೀಡಿದ್ದಾರೆ.

    ರಾಂಚಿ ನ್ಯಾಯಾಲಯ ನೀಡಿರುವ ವಿಚಿತ್ರ ಶಿಕ್ಷೆಯ ಕುರಿತು ಹಿಂದೂ ಸಂಘಟನೆಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.