Tag: ರಹೀಂ ಖಾನ್

  • ಎಟಿಎಂ ದರೋಡೆ ಕೇಸ್‌ | ಸ್ವಕ್ಷೇತ್ರದಲ್ಲಿ ಕೃತ್ಯ ನಡೆದರೂ ಇಬ್ಬರ ಸಾವು ಎಂದ ಸಚಿವ ರಹೀಂ ಖಾನ್‌

    ಎಟಿಎಂ ದರೋಡೆ ಕೇಸ್‌ | ಸ್ವಕ್ಷೇತ್ರದಲ್ಲಿ ಕೃತ್ಯ ನಡೆದರೂ ಇಬ್ಬರ ಸಾವು ಎಂದ ಸಚಿವ ರಹೀಂ ಖಾನ್‌

    ಬೀದರ್: ಎಟಿಎಂ ದರೋಡೆ,‌ ಸಿಬ್ಬಂದಿ ಸಾವು ಪ್ರಕರಣದ (Bidar Atm Robbery Case)ಬಗ್ಗೆ ಸರಿಯಾಗಿ ಮಾಹಿತಿ ಪಡೆಯದೇ ಗುಂಡೇಟಿಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿ ಸಚಿವ ರಹೀಂ ಖಾನ್ (Rahim Khan)ಎಡವಟ್ಟು ಮಾಡಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡುವಾಗ ಗುಂಡೇಟಿಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸ್ಥಳೀಯರು ಒಂದು ಸಾವು ಎಂದ ಕೂಡಲೇ ಸರಿಪಡಿಸಿಕೊಂಡ ಸಚಿವರು ಒಬ್ಬರು ಮೃತಪಟ್ಟು ಒಬ್ಬರು ಗಂಭೀರ ಎಂದು ಹೇಳುವ ಮೂಲಕ ತೇಪೆ ಹಚ್ಚಿದ್ದಾರೆ.

     

    ಮೊನ್ನೆಯಷ್ಟೇ ಸಚಿವ ರಹೀಂ ಖಾನ್ ವಿರುದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ವಾಗ್ದಾಳಿ ನಡೆಸಿ ಸ್ವಕ್ಷೇತ್ರದ ಬಗ್ಗೆ ಸಚಿವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಗೇಲಿ‌ ಮಾಡಿದ್ದರು. ಈಗ ಸಚಿವರ ಎಡವಟ್ಟಿನ ಹೇಳಿಕ ಜಿಲ್ಲೆಯಲ್ಲಿ ವೈರಲ್‌ ಆಗಿದೆ.

  • ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲ

    ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲ

    ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿದ್ದ ಕೊಳಕು ಬೆಡ್, ಕೊಠಡಿಗಳು ಹಾಗೂ ಅವ್ಯವಸ್ಥೆಯನ್ನು ಕಂಡು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ವೈದ್ಯಕೀಯ ಸಚಿವ ಇ. ತುಕಾರಾಂ ಅವರು ಸಿಟ್ಟಿಗೆದ್ದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ಇಂದು ಬ್ರಿಮ್ಸ್ ಆಸ್ಪತ್ರೆಯನ್ನು ಪರಿಶೀಲಿಸಲು ಮೂವರು ಸಚಿವರು ಹಾಗೂ ಎಂಪಿ ಭೇಟಿ ಕೊಟ್ಟಿದ್ದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವೈದ್ಯಕೀಯ ಸಚಿವ ಇ ತುಕಾರಾಂ, ಕ್ರೀಡಾ ಸಚಿವ ರಹೀಂ ಖಾನ್ ಹಾಗೂ ಸಂಸದ ಭಗವಂತ್ ಖೂಬಾ ಅವರು ಆಸ್ಪತ್ರೆಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೆಂಡಾಮಂಡಲರಾದರು.

    ಆಸ್ಪತ್ರೆಯ ಅವ್ಯವಸ್ಥೆ, ರೋಗಿಗಳಿಗೆ ನೀಡುತ್ತಿರುವ ಕೊಳಕು ಬೆಡ್‍ಗಳು, ಸ್ವಚ್ಛವಿಲ್ಲದ ಕೊಠಡಿಗಳನ್ನು ಕಂಡು ಸಚಿವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಹಾಗೆಯೇ ಆಸ್ಪತ್ರೆಯ ಮುಚ್ಚಿದ ಕೋಣೆಯ ಬೀಗ ತೆಗೆಯಲು ಸಚಿವರು ತಾಕೀತು ಮಾಡಿದ್ದು, ಕೊಣೆಯನ್ನು ಸಿಬ್ಬಂದಿಗಳು ತೆರೆದ ನಂತರ ಅಲ್ಲಿನ ದುಸ್ಥಿತಿ ಕಂಡು ಕೆಂಡಾಮಂಡಲರಾದರು. ಏನಿದು ಬ್ರಿಮ್ಸ್ ಪರಿಸ್ಥಿತಿ ಎಂದು ಪ್ರಶ್ನಿಸಿ ಜಿಲ್ಲಾ ಸರ್ಜನ್ ಡಾ. ರತಿಕಾಂತ್‍ಸ್ವಾಮಿ ಮೇಲೆ ಸಚಿವರು ಗರಂ ಆದರು.

    ಬಳಿಕ ಬೀದರ್ ಬ್ರಿಮ್ಸ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ಶಿವಾನಂದ ಪಾಟೀಲ್ ಅವರಿಗೆ ವ್ಯಕ್ತಿಯೊಬ್ಬ ಹೇಳಿದ ಮಾತು ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಸಚಿವರನ್ನು ಕಂಡ ವ್ಯಕ್ತಿ, ಬ್ರಿಮ್ಸ್ ಗೆ ಬೀಗ ಹಾಕಿಕೊಂಡು ಹೋಗಿ ಎಂದು ಕೀಲಿಕೈ ನೀಡಿದ್ದಾನೆ. ಅಲ್ಲದೆ ಬ್ರಿಮ್ಸ್ ಅವ್ಯವಸ್ಥೆ ನೋಡಿ ಸಾಕಾಗಿದೆ ಎಂದು ಸಚಿವರ ಬಳಿ ದೂರಿದ್ದಾನೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಶಿವಾನಂದ ಪಾಟೀಲ್ ಅವರು, ಇಲ್ಲಾ ಸರಿಪಡಿಸುತ್ತೇವೆ ಎಂದು ವ್ಯಕ್ತಿಯನ್ನು ಸಮಾಧಾನ ಮಾಡಿ, ಮುಜುಗರದಿಂದಲೇ ಕಾರು ಹತ್ತಿ ಹೋದರು.

  • ಸಂಸದ ಖೂಬಾಗೆ ಸೊಕ್ಕು ಜಾಸ್ತಿಯಾಗಿದೆ – ರಹೀಂ ಖಾನ್

    ಸಂಸದ ಖೂಬಾಗೆ ಸೊಕ್ಕು ಜಾಸ್ತಿಯಾಗಿದೆ – ರಹೀಂ ಖಾನ್

    – ಮೋದಿಯಿಂದ ನಾನು ಗೆದ್ದಿಲ್ಲ
    – ಮನ್ಸೂರ್‍ ನನ್ನು ಹಿಡಿದು ತರುತ್ತಾರೆ

    ಬೀದರ್: ಸಂಸದ ಭಗವಂತ್ ಖೂಬಾಗೆ ಸೊಕ್ಕು ಜಾಸ್ತಿಯಾಗಿದೆ. ಅವರಿಗೆ ನಾಲಿಗೆ ಮೇಲೆ ಕಂಟ್ರೋಲ್ ಇಲ್ಲ ಎಂದು ಸಚಿವ ರಹೀಂ ಖಾನ್ ತೀವ್ರ ವಾಗ್ದಾಳಿ ಮಾಡಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರಿಗೆ ಪಾಗಲ್ ಅಂತಿದ್ದಾರೆ. ವೈದ್ಯರಿಗೆ ನಾಯಿ ಅನ್ನುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ ನಾಲಾಯಕ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಇವೆಲ್ಲವನ್ನು ನೋಡಿದರೆ ಅವರಿಗೆ ಸೊಕ್ಕು ಜಾಸ್ತಿಯಾಗಿದೆ ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ದೊಡ್ಡ ಸ್ಥಾನದಲ್ಲಿ ಇರುವವರಿಗೆ ನಾಲಿಗೆ ಮೇಲೆ ಹಿಡಿತ ಇರಬೇಕು. ಅವರಿಗೆ ನಾಲಿಗೆ ಮೇಲೆ ಕಂಟ್ರೋಲ್ ಇಲ್ಲ. ನಾನು ಮೂರು ಸಲ ಶಾಸಕನಾಗಿದ್ದೇನೆ. ಆದರೆ ನಾನು ಪ್ರಧಾನಿ ಮೋದಿ ಅವರ ಹೆಸರಿನ ಮೇಲೆ ಮತ ಕೇಳಿಲ್ಲ. ಮೋದಿ ಗಾಳಿ ಮೇಲೆ ನಾನು ಗೆದ್ದಿಲ್ಲ ಎಂದು ಭಗವಂತ್ ಖೂಬಾ ಅವರ ವಿರುದ್ಧ ಕಿಡಿಕಾರಿದರು.

    ಇದೇ ವೇಳೆ ಐಎಂಎ ವಂಚನೆ ಪ್ರಕರಣ ಕುರಿತು ಮಾತನಾಡಿ, ಐಎಂಎ ವಂಚನೆ ಪ್ರಕರಣದ ಮುಖ್ಯಸ್ಥ ಮನ್ಸೂರ್ ಖಾನ್ ದುಬೈನಲ್ಲಿ ಇದ್ದಾನೆ ಎಂದು ಪಬ್ಲಿಕ್ ಟಿವಿ ಎಕ್ಸ್ ಕ್ಲೂಸೀವ್ ಮಾಹಿತಿ ಬಿತ್ತರಿಸಿದ ಹಿನ್ನೆಲೆಯಲ್ಲಿ ನೂರಕ್ಕೆ ನೂರರಷ್ಟು ಹಿಡಿದುಕೊಂಡು ಬರುತ್ತಾರೆ. ದೊಡ್ಡ ದೊಡ್ಡ ಹಗರಣಗಳನ್ನು ಮಾಡಿದ ಎಲ್ಲರನ್ನು ಹಿಡಿದುಕೊಂಡು ಬಂದಿದ್ದಾರೆ. ಹಾಗೇಯೇ ಇವರನ್ನು ಹಿಡಿದುಕೊಂಡು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.