Tag: ರಹೀಂ ಉಚ್ಚಿಲ್

  • ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

    ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

    ಮಂಗಳೂರು: ನೂತನ ಬ್ಯಾರಿ ಭವನಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ಸ್ಟಾಂಡ್ ಬಳಿ ಅಂದಾಜು 3 ಕೋಟಿ ಮೌಲ್ಯದ 0.25 ಎಕ್ರೆ ಜಮೀನು ಸರಕಾರದಿಂದ ಅಧಿಕೃತವಾಗಿ ಬ್ಯಾರಿ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದು ಜನಪ್ರತಿನಿಧಿಗಳು ಹಾಗೂ ಬ್ಯಾರಿ ಭಾಷಿಕ ಸಮುದಾಯದ ಪ್ರಮುಖರನ್ನು ಕರೆದು ಶೀಘ್ರದಲ್ಲಿಯೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈಗಾಗಲೇ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಬ್ಯಾರಿ ಭವನಕ್ಕೆ ನೀರುಮಾರ್ಗದ ಬೈತುರ್ಲಿ ಗ್ರಾಮದಲ್ಲಿ 0.25 ಎಕರೆ ಜಾಗವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಖರೀದಿ ಮಾಡಲಾಗಿದ್ದು, ಇಲ್ಲಿ ಬ್ಯಾರಿ ಭವನಕ್ಕೆ ನೀಲನಕ್ಷೆ ತಯಾರಾಗಿತ್ತು. ಈ ನಿವೇಶನದ ಆಸುಪಾಸಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ತೀರಾ ವಿರಳವಾಗಿದ್ದು, ಭವನ ನಿರ್ಮಾಣಕ್ಕೆ ಉಪಯುಕ್ತವಾದ ನಿವೇಶನ ಅಲ್ಲ ಎಂದು ಮನಗಂಡ ಪ್ರಸಕ್ತ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಕ್ಷಣ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಗಾಗಲೇ ತುಳು, ಕೊಂಕಣಿ ಸೇರಿದಂತೆ ಇತರ ಅಕಾಡೆಮಿಗಳಿಗೆ ಸರಕಾರದಿಂದ ಉಚಿತವಾಗಿ ಜಮೀನು ನೀಡಿದಂತೆ ಬ್ಯಾರಿ ಅಕಾಡೆಮಿಗೂ ನೀಡಬೇಕೆಂದು ಮನವಿ ಮಾಡಿದ್ದರು.

    ಅದರಂತೆ ಇದೀಗ ಅತೀ ಹೆಚ್ಚು ಬ್ಯಾರಿ ಭಾಷಿಕರನ್ನು ಒಳಗೊಂಡ ತೊಕ್ಕೊಟ್ಟು ಪರಿಸರದಲ್ಲಿಯೇ ನಿವೇಶವನವನ್ನು ಉಚಿತವಾಗಿ ಒದಗಿಸುವ ಮೂಲಕ ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂಬ ನೀತಿಯಂತೆ ನಡೆದುಕೊಂಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳು ಸೇರಿದಂತೆ ಕರ್ನಾಟಕ ಸರಕಾರಕ್ಕೆ ರಹೀಂ ಉಚ್ಚಿಲ್ ಅಭಿನಂದನೆ ಹಾಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ಈಗಾಗಲೇ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗುವುದು ಹಾಗೂ ಅಕಾಡೆಮಿಯಿಂದ ಮೂಡಾಕ್ಕೆ ಪಾವತಿಯಾದ ಮೊತ್ತವನ್ನು ಮೂಡಾದಿಂದ ಮರಳಿ ಪಡೆದು ಅಕಾಡೆಮಿಯ ವಿವಿಧ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಈಗಾಗಲೇ ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿಯವರ ಸಹಕಾರದ ಪರಿಣಾಮ ಮುಖ್ಯಮಂತ್ರಿಗಳು ಬ್ಯಾರಿ ಭವನಕ್ಕೆ ಈಗಾಗಲೇ 6 ಕೋಟಿಯನ್ನು ಮಂಜೂರು ಮಾಡಿ 3 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.  ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ಸುಮಾರು 6 ರಿಂದ 12 ತಿಂಗಳ ಒಳಗಾಗಿ ಬ್ಯಾರಿ ಭವನ ಅಕಾಡೆಮಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

    ಈ ಬ್ಯಾರಿ ಭವನ ವಿಶಾಲವಾದ ಸಭಾಂಗಣ, ಮಿನಿಹಾಲ್, ಅಕಾಡೆಮಿಯ ಕಛೇರಿ, ಸಾರ್ವಜನಿಕ ಗ್ರಂಥಾಲಯ, ವಸ್ತು ಸಂಗ್ರಹಾಲಯವನ್ನು ಹೊಂದಿರುತ್ತದೆ. ಈ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವುದರಿಂದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

  • ಬಿಜೆಪಿ ಮುಖಂಡನ ಜೊತೆಗಿನ ಫೋಟೋ ಶೂಟ್ ಕ್ರೇಜಿಗೆ ಗನ್ ಮ್ಯಾನ್ ಕೆಲಸವೇ ಹೋಯ್ತು!

    ಬಿಜೆಪಿ ಮುಖಂಡನ ಜೊತೆಗಿನ ಫೋಟೋ ಶೂಟ್ ಕ್ರೇಜಿಗೆ ಗನ್ ಮ್ಯಾನ್ ಕೆಲಸವೇ ಹೋಯ್ತು!

    ಮಂಗಳೂರು: ಬಿಜೆಪಿ ಮುಖಂಡನ ಫೋಟೋ ಶೂಟ್ ಕ್ರೇಜ್ ಗೆ ಗನ್ ಮ್ಯಾನ್ ಕೆಲಸ ಕಳೆದುಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.

    ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಕಳೆದ ತಿಂಗಳು ದುಬೈ ಪ್ರವಾಸ ನಡೆಸಿದ್ದರು. ಈ ವೇಳೆ ಗನ್ ಮ್ಯಾನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಭದ್ರತೆ ನಿಯಮಕ್ಕೆ ಅನುಗುಣವಾಗಿ ಅಂಗರಕ್ಷಕರು ವಿಐಪಿಗಳ ಜೊತೆ ಫೋಟೋ ತೆಗೆಸಿಕೊಳ್ಳುವಂತಿಲ್ಲ. ಹೀಗಿದ್ದರೂ ಗನ್ ಮ್ಯಾನ್ ಮಲ್ಲಿಕಾರ್ಜುನ್, ರಹೀಂ ಉಚ್ಚಿಲ್ ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು.

    ಇದನ್ನು ರಹೀಂ ಉಚ್ಚಿಲ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಗನ್ ಮ್ಯಾನ್ ಕೆಲಸ ಕಳೆದುಕೊಳ್ಳಲು ಕಾರಣವಾಗಿದೆ. ಇನ್ನು ರಹೀಂ ಉಚ್ಚಿಲ್ ವಿದೇಶ ಪ್ರವಾಸ ಹೋದಾಗ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಆಯುಧವನ್ನು ಶಶಸ್ತ್ರ ಮೀಸಲು ಪಡೆಗೆ ಒಪ್ಪಿಸಿ ರಜೆ ಪಡೆದಿದ್ದು, ತಾನು ಮೈಸೂರಿನಲ್ಲಿ ಇರೋದಾಗಿ ಮೇಲಾಧಿಕಾರಿಗಳ ಬಳಿ ಹೇಳಿದ್ದರು. ಆದರೆ ಅವರು ಹೇಳಿದ ಸುಳ್ಳಿಗೆ ರಹೀಂ ಉಚ್ಚಿಲ್ ಫೇಸ್ ಬುಕ್ ನಲ್ಲಿ ಹಾಕಿದ ಫೋಟೋ ಸಾಕ್ಷಿಯಾಗಿತ್ತು. ಆದ್ದರಿಂದ ಮಲ್ಲಿಕಾರ್ಜುನರನ್ನು ಮೇಲಾಧಿಕಾರಿಗಳು ಕೆಲಸದಿಂದ ಅಮಾನತುಗೊಳಿಸಿದ್ದಾರೆ.

    ರಹೀಂ ಉಚ್ಚಿಲ್ ಮೇಲೆ ಈ ಹಿಂದೆ ಕೊಲೆಯತ್ನ ನಡೆದಿದ್ದು, ಅದೃಷ್ಟವಶಾತ್ ಬದುಕುಳಿದಿದ್ದರು. ಬಳಿಕ ಮಂಗಳೂರು ಪೆÇಲೀಸ್ ಕಮಿಷನರೇಟ್ ವತಿಯಿಂದ ರಹೀಂ ಉಚ್ಚಿಲ ಗೆ ಗನ್ ಮ್ಯಾನ್ ಒದಗಿಸಲಾಗಿತ್ತು.

  • ದುಬೈನಲ್ಲಿರೋ ಮಂಗ್ಳೂರು ಮೂಲದ ವ್ಯಕ್ತಿ ವಿರುದ್ಧ ರಹೀಂ ಉಚ್ಚಿಲ್ ದೂರು

    ದುಬೈನಲ್ಲಿರೋ ಮಂಗ್ಳೂರು ಮೂಲದ ವ್ಯಕ್ತಿ ವಿರುದ್ಧ ರಹೀಂ ಉಚ್ಚಿಲ್ ದೂರು

    ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗಲಭೆ ತಣ್ಣಗಾಗುವ ಮೊದಲೇ ಫೇಸ್‍ಬುಕ್ ಪೋಸ್ಟ್ ಒಂದು ವೈರಲ್ ಆಗಿ ವಿವಾದದ ಹೊಗೆ ಎಬ್ಬಿಸಿದೆ.

    ಬಿಜೆಪಿಯ ಅಲ್ಪ ಸಂಖ್ಯಾಂತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಅವರ ಫೇಸ್‍ಬುಕ್ ಪೋಸ್ಟ್ ಬಳಸಿ ಅವಹೇಳನ ಮಾಡಲಾಗಿದೆ. ದುಬೈನಲ್ಲಿರೋ ಮಂಗಳೂರು ಮೂಲದ ವಿಲಿಯಂ ಪಿಂಟೋ ಈ ಪೋಸ್ಟ್ ಮಾಡಿದ್ದು, ರಹೀಂ ಉಚ್ಚಿಲ್ ಅವರು ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟ ಫೋಟೋ ಹಾಕಿದ್ದಾನೆ.

     

    ಜೊತೆಗೆ ಸಿದ್ಧಾರೂಢ ಮಠಕ್ಕೆ ಹೊಸದಾಗಿ ಪ್ರಧಾನ ಅರ್ಚಕರ ನೇಮಕ ಆಗಿದೆ ಎಂದು ಪೋಸ್ಟ್ ಮಾಡಿದ್ದಾನೆ. ಹೀಗಾಗಿ ವಿಲಿಯಂ ಪಿಂಟೊ ವಿರುದ್ಧ ರಹೀಂ ಉಚ್ಚಿಲ್ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.